Tag: Tattoo

  • ಎದೆ ಮೇಲೆ ಯೋಗಿ ಟ್ಯಾಟೂ ಹಾಕಿಸಿಕೊಂಡ ಮುಸ್ಲಿಂ ಫ್ಯಾನ್

    ಎದೆ ಮೇಲೆ ಯೋಗಿ ಟ್ಯಾಟೂ ಹಾಕಿಸಿಕೊಂಡ ಮುಸ್ಲಿಂ ಫ್ಯಾನ್

    ಲಕ್ನೋ: ಮುಸ್ಲಿಂ ಯುವಕನೊಬ್ಬ ತನ್ನ ಎದೆಯ ಮೇಲೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಚಿತ್ರವನ್ನು ಟ್ಯಾಟೂ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ.

    ಯಮೀನ್ ಸಿದ್ದಿಕಿ(23) ಮುಸ್ಲಿಂ ಯುವಕ. ಸಿದ್ದಿಕಿ ಫರೂಕಾಬಾದ್ ಮತ್ತು ಮೈನ್‍ಪುರಿ ಜಿಲ್ಲೆಗಳ ಗಡಿಯಲ್ಲಿರುವ ಹಳ್ಳಿಯ ನಿವಾಸಿಯಾಗಿದ್ದಾರೆ. ಇಲ್ಲಿ ಪಾದರಕ್ಷೆಗಳ ವ್ಯಾಪಾರಿಯಾಗಿದ್ದಾರೆ. ಯೋಗಿ ಆದಿತ್ಯನಾಥ್ ತನ್ನ ರೋಲ್ ಮಾಡೆಲ್ ಹೇಳಿರುವ ಆತ ಯೋಗಿ ಆದಿತ್ಯನಾಥ್ ಅವರ ಜನ್ಮದಿನದ ಪ್ರಯುಕ್ತ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

    ಈ ಬಗ್ಗೆ ಮಾತನಾಡಿದ ಸಿದ್ದಿಕಿ, ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಅವರಿಗೆ ಟ್ಯಾಟೂ ತೋರಿಸಬೇಕೆಂಬುದು ಆಸೆ ಆಗಿದೆ. ಅವರ ಬಗ್ಗೆ ನನಗೆ ಅಪಾರ ಪ್ರೀತಿ ಮತ್ತು ಗೌರವವಿದೆ. ಅವರು ಅಧಿಕಾರಕ್ಕೆ ಬಂದಾಗಿನಿಂದ ಉತ್ತರ ಪ್ರದೇಶವನ್ನು ಬದಲಾಯಿಸಿದ್ದಾರೆ. ಯಾವುದೇ ತಾರತಮ್ಯವಿಲ್ಲದೇ ಹಿಂದೂ ಮತ್ತು ಮುಸ್ಲಿಮರು ಎಲ್ಲಾ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: 1.5 ವರ್ಷದಲ್ಲಿ 10 ಲಕ್ಷ ಮಂದಿಗೆ ಉದ್ಯೋಗ ನೀಡಲು ಮುಂದಾದ ಮೋದಿ ಸರ್ಕಾರ

    ಇದೇ ವೇಳೆ ಜ್ಞಾನವಾಪಿ ಮಸೀದಿ ಮತ್ತು ಮಥುರಾ ಈದ್ಗಾದಂತಹ ವಿವಾದಾತ್ಮಕ ವಿಷಯಗಳ ಬಗ್ಗೆ ಮಾತನಾಡಲು ನಿರಾಕರಿಸಿದ ಅವರು ನ್ಯಾಯಾಲಯ ನಿರ್ಧರಿಸುತ್ತದೆ ಎಂದಿದ್ದಾರೆ. ಇದನ್ನೂ ಓದಿ: ತಾಳಿ ಕಟ್ಟಿದ ಗಂಡನನ್ನೇ ಕೊಂದ್ಲು – ಅಪಘಾತ ಅಂತ ಬಿಂಬಿಸಲು ಹೋಗಿ ಸಿಕ್ಕಿ ಬಿದ್ಲು

  • ಎರಡೇ ದಿನದಲ್ಲಿ ಸಿಕ್ಸ್ ಪ್ಯಾಕ್ – ವೀಡಿಯೋ ನೋಡಿ ಶಾಕ್ ಆದ ನೆಟ್ಟಿಗರು

    ಎರಡೇ ದಿನದಲ್ಲಿ ಸಿಕ್ಸ್ ಪ್ಯಾಕ್ – ವೀಡಿಯೋ ನೋಡಿ ಶಾಕ್ ಆದ ನೆಟ್ಟಿಗರು

    ಲ್ಲ ಹುಡುಗರಿಗೂ ಸಿಕ್ಸ್ ಪ್ಯಾಕ್ ಮಾಡಬೇಕು, ಬಾಡಿ ಬಿಲ್ಡ್ ಮಾಡಬೇಕು ಎಂಬ ಕನಸು ಇರುತ್ತೆ. ಅದಕ್ಕಾಗಿ ತುಂಬಾ ತಿಂಗಳು ಕಷ್ಟ ಪಡಬೇಕು. ಆದರೆ ಇಲ್ಲೊಬ್ಬ ವ್ಯಕ್ತ ಕೇವಲ ಎರಡೇ ದಿನಗಳಲ್ಲಿ ಸಿಕ್ಸ್ ಪಡೆದು ನೆಟ್ಟಿಗರಿಗೆ ಅಚ್ಚರಿ ಉಂಟು ಮಾಡಿದ್ದಾನೆ. ಏನಿದು ಎರಡೇ ದಿನಗಳಲ್ಲಿ ಸಿಕ್ಸ್ ಪ್ಯಾಕ್ ಪಡೆಯುವುದಕ್ಕೆ ಸಾಧ್ಯನಾ ಎಂದು ಎಲ್ಲರೂ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ವೀಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.

    ಇಲ್ಲೊಬ್ಬ ವ್ಯಕ್ತಿಗೆ ಯಾವುದೇ ರೀತಿಯ ವರ್ಕೌಟ್ ಮಾಡದೆ ಸರಳವಾಗಿ ಸಿಕ್ಸ್ ಪಡೆಯಬೇಕು ಎಂಬ ಕನಸಿತ್ತು. ಮೊದಲ ದಿನ ವರ್ಕೌಟ್ ಮಾಡಿದ್ರೂ ಅಪ್ಸ್ ಮೇಲೆ ಯಾವುದೇ ರೀತಿಯ ಪರಿಣಾಮವನ್ನು ಬೀರಿಲ್ಲ. ಈ ಹಿನ್ನೆಲೆ ಯೋಚಿಸಿದ ಆತ, ಟ್ಯಾಟೂ ಹಾಕುವವರ ಬಳಿ ಹೋಗಿದ್ದಾನೆ. ಅವರಿಗೆ ಸಿಕ್ಸ್ ಪ್ಯಾಕ್ ಟ್ಯಾಟೂ ಹಾಕುವಂತೆ ಕೇಳಿಕೊಂಡಿದ್ದಾನೆ. ಈ ಹಿನ್ನೆಲೆ ಅವರು ಸಹ ಸಿಕ್ಸ್ ಪ್ಯಾಕ್ ರೀತಿಯಲ್ಲಿಯೇ ಟ್ಯಾಟೂ ಹಾಕಿದ್ದಾರೆ. ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳಲು ಟವರ್ ಹತ್ತಿದ್ದ ಮಹಿಳೆ ಪ್ರಾಣ ಉಳಿಸಿದ ಕಣಜಗಳು 

     

    View this post on Instagram

     

    A post shared by Dean Gunther (@dean.gunther)

    ಈ ವೀಡಿಯೋವನ್ನು ಗುಂಥರ್ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ನನ್ನ ಬಳಿ ಬಂದ ಒಬ್ಬ ವ್ಯಕ್ತಿಗೆ ಸಿಕ್ಸ್ ಪ್ಯಾಕ್ ಬೇಕಿತ್ತು. ಅದಕ್ಕೆ ಈ ಟ್ಯಾಟೂ. ನಿಮ್ಮ ಬಳಿ ಮಂತ್ರದಂಡ ಇದ್ದಾಗ ಯಾರಿಗೆ ಜಿಮ್ ಬೇಕು. 2 ದಿನಗಳಲ್ಲಿ 6 ಪ್ಯಾಕ್! ಆನಂದಿಸಿ! ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

     

    View this post on Instagram

     

    A post shared by Dean Gunther (@dean.gunther)

    ಈ ಟ್ಯಾಟೂ ಹಾಕಲು ಇವರು ಸುಮಾರು 2 ದಿನ ತೆಗೆದುಕೊಂಡಿದ್ದಾರೆ. ಆದರೂ ಗುಂಥರ್, ಏನೇ ಆದರೂ ಜಿಮ್ ಬಿಡಬೇಡಿ ಎಂದು ಹೇಳಿದ್ದಾರೆ. ಈ ವೀಡಿಯೋ ಮತ್ತು ಫೋಟೋ ನೋಡಿದ ನೆಟ್ಟಿಗರು, ವ್ಹಾವ್ ಸೂಪರ್ ವರ್ಕ್, ಇದು ಅದ್ಭುತವಾಗಿ ಕಾಣುತ್ತಿದೆ. ಇದು ನಿಮ್ಮ ಕ್ಲೈಂಟ್‍ಗೆ ವಿಶ್ವಾಸವನ್ನು ನೀಡಿದೆ. ಈ ಅದ್ಭುತ ಕೆಲಸವನ್ನು ಮುಂದುವರಿಸಿ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಧರೆಗುರುಳಿದ ಪಾರಂಪರಿಕ ವೃಕ್ಷ ದೊಡ್ಡಾಲದ ಮರ! 

    ಟ್ಯಾಟೂವನ್ನು ಉತ್ತಮವಾಗಿ ಹಾಕಿದ್ದೀರಾ. ನಿಮ್ಮ ಈ ಕಲ್ಪನೆ ಚೆನ್ನಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

     

  • ಅಭಿಮಾನಿ ಕೈಯಲ್ಲಿದ್ದ ಟ್ಯಾಟೂಗೆ ರಾಮ್ ಚರಣ್ ಬೌಲ್ಡ್

    ಅಭಿಮಾನಿ ಕೈಯಲ್ಲಿದ್ದ ಟ್ಯಾಟೂಗೆ ರಾಮ್ ಚರಣ್ ಬೌಲ್ಡ್

    ಮುಂಬೈ: ಟಾಲಿವುಡ್ ಸ್ಟಾರ್ ರಾಮ್ ಚರಣ್ ಅಭಿಮಾನಿಯೊಬ್ಬರು ‘RRR’ ಸಿನಿಮಾದಲ್ಲಿ ಅವರ ಅವತಾರವನ್ನು ಟ್ಯಾಟೂ ಹಾಕಿಸಿಕೊಂಡಿದ್ದು, ಅದನ್ನು ನೋಡಿ ರಾಮ್ ಅವರು ಫಿದಾ ಆಗಿದ್ದಾರೆ.

    ರಾಮ್ ಚರಣ್ ದಕ್ಷಿಣ ಭಾರತದ ಪ್ರಮುಖ ಸೂಪರ್‌ಸ್ಟಾರ್ ಚಿರಂಜೀವಿಯವರ ಮಗನಾಗಿದ್ದು, ಟಾಲಿವುಡ್‍ನಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ತಂದೆಯಂತೆ ಸೂಪರ್ ಸ್ಟಾರ್ ಗರಿಯನ್ನು ತಮ್ಮ ಮೂಡಿಗೆ ಏರಿಸಿಕೊಂಡಿದ್ದಾರೆ. ಪ್ರಸ್ತುತ ಅವರು ಎಸ್‍ಎಸ್ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಸಿನಿಮಾದಲ್ಲಿ ನಟಿಸಿದ್ದು, ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದನ್ನೂ ಓದಿ: ನಾಯಿ ಹುಟ್ಟುಹಬ್ಬ ಆಚರಿಸಲು 11 ಲಕ್ಷ ರೂ. ಖರ್ಚು ಮಾಡಿದ ಮಹಿಳೆ

    ಮುಂಬೈನಲ್ಲಿ ಪ್ರಚಾರದ ವೇಳೆ ಅಭಿಮಾನಿಯೊಬ್ಬರು ರಾಮ್ ಚರಣ್ ಅವರ ಬಳಿ ಫೋಟೋಗಾಗಿ ಬಂದಿದ್ದು, ಅವರು ಹಾಕಿಸಿಕೊಂಡಿದ್ದ ಟ್ಯಾಟೂವನ್ನು ತೋರಿಸಿದ್ದಾರೆ. ಈ ಟ್ಯಾಟೂ ನೋಡಿದ ರಾಮ್ ಸಂತೋಷ ವ್ಯಕ್ತಪಡಿಸಿದ್ದಾರೆ.

    ‘RRR’ ಸಿನಿಮಾದಲ್ಲಿ ಜೂನಿಯರ್ ಎನ್‍ಟಿಆರ್, ಆಲಿಯಾ ಭಟ್ ಮತ್ತು ಅಜಯ್ ದೇವಗನ್‍ರಂತಹ ದೊಡ್ಡ ತಾರಾ ಬಳಗವಿದ್ದು, ಅಭಿಮಾನಿಗಳಲ್ಲಿ ಈ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿಸಿದೆ. ಈ ಸಿನಿಮಾ ಇದೇ ತಿಂಗಳು 7 ರಂದು ತೆರೆಗೆ ಬರಬೇಕಿತ್ತು. ಆದರೆ ಕೋವಿಡ್-19 ಪ್ರಕರಣಗಳು ಹೆಚ್ಚಾದ ಕಾರಣ ಬಿಡುಗಡೆಯನ್ನು ಮುಂದೂಡಲಾಗಿದೆ. ಇದನ್ನೂ ಓದಿ: ‘RRR’ ಸಿನಿಮಾ ಬಿಡುಗಡೆಯಾಗಬಾರದು: ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿ

    ಪ್ರಿಯಾಂಕಾ ಚೋಪ್ರಾ ಅವರ ಜೊತೆ ರಾಮ್ ಚರಣ್ ‘ಜಂಜೀರ್’ ಚಿತ್ರದ ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದ್ದರು. ರಾಮ್ ಅವರ ನಟನೆ ನೋಡಿದ ಬಾಲಿವುಡ್ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಮೂಲಕ ಬಾಲಿವುಡ್ ನಲ್ಲಿಯೂ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ.

  • ಪುನೀತ್ ನೆನಪಿಗಾಗಿ ಎದೆ ಮೇಲೆ ಹಚ್ಚೆ ಹಾಕಿಸಿಕೊಂಡ ಅಭಿಮಾನಿ

    ಪುನೀತ್ ನೆನಪಿಗಾಗಿ ಎದೆ ಮೇಲೆ ಹಚ್ಚೆ ಹಾಕಿಸಿಕೊಂಡ ಅಭಿಮಾನಿ

    ಹುಬ್ಬಳ್ಳಿ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಪುಣ್ಯಸ್ಮರಣೆ ಹಿನ್ನೆಲೆ ಅವರ ಅಭಿಮಾನಿಯೊಬ್ಬರು ಎದೆ ಮೇಲೆ ಪುನೀತ್ ಭಾವಚಿತ್ರದ ಟ್ಯಾಟೋ ಹಾಕಿಸಿಕೊಳ್ಳುವ ಮೂಲಕ ಅಭಿಮಾನ ಮೆರೆದಿದ್ದಾರೆ.

    ದೊಡ್ಮನೆ ಹುಡುಗ ನಟ ಪುನೀತ್ ರಾಜ್‍ಕುಮಾರ್ ಅಗಲಿ ಇಂದಿಗೆ 12 ದಿನ ಕಳೆದಿದೆ. ಪುನೀತ್ ಇಲ್ಲ ಎಂಬ ಸತ್ಯವನ್ನು ಜನ ಈಗಲೂ ಸಹ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೆಚ್ಚಿನ ನಟ ಅಪ್ಪು ನಿಧನ ಬಳಿಕ ಅನೇಕ ಮಂದಿ ತಮ್ಮ ಕಣ್ಣುಗಳನ್ನು ದಾನ ಮಾಡಲು ಮುಂದಾಗಿದ್ದಾರೆ. ಇನ್ನೂ ಕೆಲವರು ಪುನೀತ್ ಸವಿನೆನಪಿನಲ್ಲಿ ಅನ್ನಸಂತರ್ಪಣೆ ಮಾಡಿದ್ದರೆ, ವೃದ್ಧೆಯೊಬ್ಬರು ಪುನೀತ್‍ಗಾಗಿ ಮಂಡಕ್ಕಿಯಲ್ಲಿ ಹಾರ ಮಾಡಿಕೊಂಡು ಪುನೀತ್ ಸಮಾಧಿ ಬಳಿ ಆಗಮಿಸಿದ್ದರು. ಹೀಗೆ ನಾನಾ ರೀತಿಯಲ್ಲಿ ಅಭಿಮಾನಿಗಳು ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.  ಇದನ್ನೂ ಓದಿ: ಅನ್ನ ಸಂತರ್ಪಣೆ ವೇಳೆ ಪುನೀತ್ ನೆನೆದು ಕಣ್ಣೀರಿಟ್ಟ ಅಶ್ವಿನಿ

    ಇಂದಿಗ ರಾಘವೇಂದ್ರ ವದ್ದಿ ಎಂಬ ಅಭಿಮಾನಿ ಎದೆಯ ಮೇಲೆ ಪುನೀತ್ ರಾಜ್‍ಕುಮಾರ್ ಅವರ ಭಾವಚಿತ್ರ ಹಾಗೂ ಜೈ ರಾಜವಂಶ ಎನ್ನುವ ಟ್ಯಾಟೋವನ್ನು ಎದೆಯ ಮೇಲೆ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ. ಇದನ್ನೂ ಓದಿ: ಖುದ್ದು ರಕ್ತದಾನ ಮಾಡಿ ಮಾದರಿಯಾದ ನಟ ಶಿವರಾಜ್ ಕುಮಾರ್

    ಪುನೀತ್ ರಾಜ್‍ಕುಮಾರ್ ಅವರ ಚಿತ್ರಕ್ಕೆ ಮಾತ್ರವಲ್ಲದೇ ರಾಜವಂಶದ ಯಾವುದೇ ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಕೂಡ ಅದ್ದೂರಿಯಾಗಿ ಸ್ವಾಗತಿಸುವ ರಾಘವೇಂದ್ರ ಅವರು, ಪುನೀತ್ ಅಗಲಿಕೆಯಿಂದ ಅವರ ನೆನಪು ಸದಾ ಹಸಿರಾಗಿರಲಿ ಎಂದು ಈ ನಿರ್ಧಾರ ಕೈಗೊಂಡಿದ್ದಾರೆ.

  • ಬೆನ್ನ ಮೇಲಿನ ಟ್ಯಾಟೂ ರಿವೀಲ್ ಮಾಡಿ ಪತಿಗೆ ಸಂಜನಾ ಧನ್ಯವಾದ

    ಬೆನ್ನ ಮೇಲಿನ ಟ್ಯಾಟೂ ರಿವೀಲ್ ಮಾಡಿ ಪತಿಗೆ ಸಂಜನಾ ಧನ್ಯವಾದ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಸಂಜನಾ ಗಲ್ರಾನಿ 15 ವರ್ಷಗಳ ನಂತರ ಟ್ಯಾಟೂವನ್ನು ಸೋಶಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ.

    ಗಂಡ-ಹೆಂಡತಿ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟು, ಖ್ಯಾತಿ ಪಡೆದ ನಟಿ ಸಂಜನಾ ಗಲ್ರಾನಿ ನಂತರ ಹಲವು ಚಿತ್ರರಂಗಗಳಲ್ಲಿ ಬ್ಯುಸಿಯಾಗಿದ್ದರು. ಇತ್ತೀಚೆಗೆ ಕೆಲವು ತಿಂಗಳ ಹಿಂದೆ ನಟಿ ಸಂಜನಾ ಗಲ್ರಾನಿ ವೈದ್ಯ ಆಜೀಜ್ ಎಂಬವರನ್ನು ವಿವಾಹವಾಗಿದ್ದಾರೆ ಎಂಬ ವಿಚಾರ ಬಹಿರಂಗಗೊಂಡಿತು.

    ಸದ್ಯ ಇದೀಗ ಸಂಜನಾ ಗಲ್ರಾನಿಯವರು ಬೆನ್ನ ಮೇಲೆ ಹಾಕಿಸಿಕೊಂಡಿರುವ ತಮ್ಮ ಪತಿಯ ಹೆಸರಿನ ಟ್ಯಾಟೂವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಸಂಜನಾ ಸೀರೆಯುಟ್ಟು, ಮುಡಿಗೆ ಮಲ್ಲಿಗೆ ಹೂ ಮುಡಿದು, ಟ್ರೇಡಿಶನ್ ಲುಕ್‍ನಲ್ಲಿ ಫೋಸ್ ನೀಡಿದ್ದು, ಅವರ ಬೆನ್ನ ಮೇಲೆ ಆಜೀಜ್ ಎಂಬ ಹಚ್ಚೆ ಇರುವುದನ್ನು ಕಾಣಬಹುದಾಗಿದೆ.

    ಫೋಟೋ ಜೊತೆಗೆ ನನ್ನ ಟ್ಯಾಟೂವನ್ನು ಬಹಿರಂಗ ಪಡಿಸುತ್ತಿದ್ದೇನೆ. ನನ್ನ ವೈಯಕ್ತಿಕ ಮತ್ತು ನನ್ನ ಹೃದಯಕ್ಕೆ ಹತ್ತಿರವಾದಂತಹ ಟ್ಯಾಟೂ, ಅನಗತ್ಯ ಗಾಸಿಪ್‍ಗಳಿಂದ ದೂರವಿರುವ ಸಲುವಾಗಿ ನನ್ನ ಜೀವನದ ಪ್ರೀತಿಯನ್ನು ಇಷ್ಟು ದಿನ ಮುಚ್ಚಿಟ್ಟಿದೆ. ಆದರೀಗ ನಾವು ಮದುವೆಯಾಗಿರುವ ವಿಚಾರವನ್ನು ಅಧಿಕೃತವಾಗಿ ಘೋಷಿಸುತ್ತಿದ್ದೇವೆ. ಹಾಗಾಗಿ ಟ್ಯಾಟೂವನ್ನು ತೋರಿಸುತ್ತಿದ್ದೇನೆ ಎಂದಿದ್ದಾರೆ.

    ವೃತ್ತಿ ಜೀವನದಲ್ಲಿ ನಟಿಯರು ಸ್ನೇಹಿತರೊಂದಿಗೆ ಒಂದೆರಡು ಬಾರಿ ಕಾಣಿಸಿಕೊಂಡರೆ ಹಲವಾರು ಗಾಸಿಪ್‍ಗಳನ್ನು ಎದುರಿಸಬೇಕಾಗುತ್ತದೆ. ನಾನು ಹೇಳುತ್ತಿರುವುದು ತಮಾಷೆ ಎನಿಸಬಹುದು, ಆದರೆ ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ನನ್ನ ರಾಕಿ ಬ್ರದರ್ ಅಲ್ಲದೇ ನನ್ನ ಶುಗರ್ ಡ್ಯಾಡಿಯನ್ನು ಕೂಡ ಬಾಯ್ ಫ್ರೆಂಡ್ ಎಂದು ಕರೆದಿರುವುದನ್ನು ನೋಡಿದ್ದೇನೆ. ಓರ್ವ ನಟಿಯೊಂದಿಗೆ ಪಬ್ಲಿಕ್‍ನಲ್ಲಿ ಕಾಣಿಸಿಕೊಳ್ಳುವವರೆಲ್ಲರೂ ಬಾಯ್‍ಫ್ರೆಂಡ್ ಆಗುತ್ತಾರಾ? ಇದು ಮಾನಸಿಕವಾಗಿ ತೊಂದರೆ ಕೊಡುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

    ನಮ್ಮ ಎದುರಾಳಿ ವ್ಯಕ್ತಿ ಸ್ನೇಹಿತ, ಹಿತೈಷಿ, ಓರ್ವ ಪ್ರಸಿದ್ಧ ನಟ, ರಾಜಕಾರಣಿ ಅಥವಾ ಕ್ರಿಕೆಟಿಗನಾಗಿದ್ದು, ಯಾವುದೇ ಸಾಕ್ಷಿಗಳಿಲ್ಲದೇ ಅವರ ಸ್ನೇಹಕ್ಕೆ 1,000 ಕಥೆಗಳನ್ನು ಕಟ್ಟಿ ಹೇಳುತ್ತಾರೆ. ವಾವ್ ನಾವು ಎಂತಹ ಸಮಾಜದಲಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಈ ಎಲ್ಲಾ ಸಮಸ್ಯೆ, ಆರೋಪ ಮತ್ತು ನೆಗೆಟಿವಿಟಿಗಳ ಮಧ್ಯೆ ನಿಜವಾದ ಪ್ರೀತಿ ತನ್ನ ದಾರಿಯನ್ನು ಕಂಡುಕೊಂಡಿದೆ ಮತ್ತು ನಿಜವಾದ ಪ್ರೇಮಿಗಳು ಮಾತ್ರ ಒಬ್ಬರಿಗೊಬ್ಬರು ನಿಲ್ಲುತ್ತಾರೆ. ಸತ್ಯ ಕೊನೆಗೆ ಗೆಲ್ಲುತ್ತದೆ ಎಂದು ತಿಳಿಸಿದ್ದಾರೆ.

    ನನ್ನ ದೇಹದ ಒಂದು ಭಾಗವನ್ನು ನಾನು ಪ್ರೀತಿಸುವ ವ್ಯಕ್ತಿಗೆ ಅರ್ಪಿಸುತ್ತೇನೆ, ಅವರ ಹೆಸರನ್ನು ನನ್ನ ಮೇಲೆ ಬರೆಸಿಕೊಂಡಿದ್ದೇನೆ. ಇಂದಿಗೂ ಮತ್ತು ಎಂದಿಗೂ ಐ ಲವ್ ಯೂ ಅಜೀಜ್.. 15 ವರ್ಷದಿಂದ ನನ್ನ ಜೀವನದ ಸರ್ವ ಶಕ್ತಿಯಾಗಿ, ನಿಜವಾದ ಗೆಳೆಯ, ಲವರ್, ಗಂಡ ಮತ್ತು ತಂದೆ ರೀತಿಯ ಮೆಂಟರ್ ಆಗಿ ಇರುವುದಕ್ಕೆ ಧನ್ಯವಾದ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: 80 ಕೆಜಿ ತೂಕ ಎತ್ತಿದ ನಟಿ ದಿಶಾ ಪಟಾನಿ

  • ಧೋನಿ ಹುಟ್ಟು ಹಬ್ಬಕ್ಕೆ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ

    ಧೋನಿ ಹುಟ್ಟು ಹಬ್ಬಕ್ಕೆ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ

    ರಾಯಚೂರು: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹುಟ್ಟು ಹಬ್ಬವನ್ನು ರಾಯಚೂರಿನ ಅಭಿಮಾನಿಯೊಬ್ಬ ವಿಭಿನ್ನ ರೀತಿಯಲ್ಲಿ ಆಚರಿಸುವ ಮೂಲಕವಗಿ ಸುದ್ದಿಯಗಿದ್ದಾರೆ.

    ಜುಲೈ 7 ಕ್ಕೆ 39 ವರ್ಷ ಪೂರೈಸಿ 40 ಕ್ಕೆ ಕಾಲಿಡುತ್ತಿರುವ ಧೋನಿಗೆ ನೇರವಾಗಿ ಉಡುಗೊರೆ ಕೊಡಲು ಆಗುತ್ತಿಲ್ಲ. ಹೀಗಾಗಿ ಧೋನಿ ಚಿತ್ರವನ್ನ ಕೈಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ವಿಜಯನಗರ ಜಿಲ್ಲೆ ಕೂಡ್ಲಿಗಿಯ ವೆಂಕಟೇಶ್ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಅಪ್ಪಟ ಅಭಿಮಾನಿಯಾಗಿದ್ದಾರೆ. ರಾಯಚೂರಿನ ಸಿಂಧನೂರು ಮೂಲದ ಟ್ಯಾಟೂ ಕಲಾವಿದ ಶಂಕರ್ ಬದಿ ಧೋನಿ ಚಿತ್ರವನ್ನೂ ಟ್ಯಾಟೂ ಹಾಕಿದ್ದಾರೆ.  ಇದನ್ನೂ ಓದಿ:  ಅಪ್ರಾಪ್ತೆ ಜೊತೆ ಪ್ರೀತಿ, ಗರ್ಭಿಣಿಯಾದ ಬಳಿಕ ತಾಳಿ ಕಟ್ಟಿದವಗೆ 10 ವರ್ಷ ಜೈಲು ಶಿಕ್ಷೆ

    ಈ ಹಿಂದೆ ಮೋದಿ, ಉಪೇಂದ್ರ, ಯಶ್ ಸೇರಿದಂತೆ ನಾನಾ ಗಣ್ಯ ವ್ಯಕ್ತಿಗಳ ಸುಂದರ ಟ್ಯಾಟೂಗಳ ಮೂಲಕ ಪ್ರಸಿದ್ಧಿಯಾಗಿರುವ ಶಂಕರ್ ಬದಿಯನ್ನ ಹುಡುಕಿಕೊಂಡು ಬಂದು ಬೆಂಗಳೂರಿನ ಸ್ವಾಗತ್ ಟ್ಯಾಟೂ ಸ್ಟುಡಿಯೋದಲ್ಲಿ ವೆಂಕಟೇಶ್ ಧೋನಿಯ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

    ಧೋನಿ ಹುಟ್ಟು ಹಬ್ಬವನ್ನ ಕೇವಲ ಕೇಕ್ ಕತ್ತರಿಸುವ ಮೂಲಕ ಆಚರಿಸದರೆ ಮುಗಿಯುವುದಿಲ್ಲ. ಹೀಗಾಗಿ ಕೊನೆಯವರೆಗೂ ಧೋನಿ ಜೊತೆಯಲ್ಲಿರಬೇಕು ಅಂತ ಅಭಿಮಾನಿ ವೆಂಕಟೇಶ್ ತಮ್ಮ ಬಲ ಗೈ ಮೇಲೆ ಎಂ.ಎಸ್.ಧೋನಿ ಟ್ಯಾಟೂ ಹಾಕಿಸಿಕೊಂಡೆ. ಧೋನಿ ಕೇವಲ ಉತ್ತಮ ನಾಯಕ ಮಾತ್ರವಲ್ಲ ಉತ್ತಮ ಗೇಮ್ ಫಿನಿಶರ್ ಆಗಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ ವಿಶ್ವಕಪ್ ಗೆದ್ದಿದೆ. ಟೀಂ ಇಂಡಿಯಾ ಟಿ20 ವಲ್ರ್ಡ್ ಕಪ್ ಗೆದ್ದಿದೆ. ಹೀಗಾಗಿ ಧೋನಿ ಮೇಲಿನ ಅಭಿಮಾನಕ್ಕೆ ಟ್ಯಾಟೂ ಹಾಕಿಸಿಕೊಳ್ಳುತ್ತಿರುವುದಾಗಿದೆ ವೆಂಕಟೇಶ್ ಹೇಳಿದ್ದಾರೆ.

  • ಸಲಗ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಗೆ ದುನಿಯಾ ವಿಜಿ ಕರೆ

    ಸಲಗ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಗೆ ದುನಿಯಾ ವಿಜಿ ಕರೆ

    – ನೆಚ್ಚಿನ ನಟನ ಕರೆಯಿಂದ ಅಭಿಮಾನಿಗೆ ಆನಂದಭಾಷ್ಪ

    ಬೆಂಗಳೂರು: ಸಲಗ ಟ್ಯಾಟೂ ಹಾಕಿಸಿಕೊಂಡ ತನ್ನ ಅಭಿಮಾನಿಯ ಜೊತೆ ನಟ ದುನಿಯಾ ವಿಜಯ್ ಅವರು ವೀಡಿಯೋ ಕಾಲ್ ಮಾಡಿ ಮಾತನಾಡಿಸಿದ್ದಾರೆ.

    ಉತ್ತರ ಕರ್ನಾಟಕ ಮೂಲದ ಹನುಮಂತ ಸದ್ಯ ಗೋವಾದ ಕಿರಾಣಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಈತ ದುನಿಯಾ ವಿಜಿಯ ಅಪ್ಪಟ ಅಭಿಮಾನಿಯಾಗಿದ್ದಾನೆ. ವಿಜಯ್ ರಂತೆ ತಂದೆ-ತಾಯಿಯನ್ನ ಆರಾಧಿಸೋಧ್ಯೇಯವನ್ನ ಹೊಂದಿರೋ ಈ ಅಭಿಮಾನಿ, ನೆಚ್ಚಿನ ನಟನ ಸಿನಿಮಾ ಯಶಸ್ವಿಯಾಗಲೆಂದು ಸಲಗ ಟೈಟಲ್ ನ ತನ್ನ ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ.

    ಈ ವಿಷಯ ತಿಳಿದು ಅಭಿಮಾನಿಗೆ ವಿಜಯ್ ವೀಡಿಯೋ ಕಾಲ್ ಮಾಡಿದ್ದಾರೆ. ತನ್ನ ಆರಾಧ್ಯ ದೈವನ ಕರೆಯಿಂದ ಖುಷಿಗೊಂಡ ಹನುಮಂತ ಆನಂದಭಾಷ್ಪ ಸುರಿಸಿದ್ದಾನೆ.

    ಇತ್ತ ಟ್ಯಾಟೂ ಕಂಡು ಭಾವುಕರಾದ ವಿಜಯ್, ಹನುಂತನಿಗೆ ವೀಡಿಯೋ ಕರೆ ಮಾಡಿ, ತಮ್ಮ ಅಭಿಮಾನಕ್ಕೆ ಮೂಕನಾಗಿದ್ದೇನೆ ಅಂತ ಕೃತಜ್ಞತೆ ಸಲ್ಲಿದ್ದಾರೆ. ಜೊತೆಗೆ ತಂದೆ-ತಾಯಿಯನ್ನ ಚೆನ್ನಾಗಿ ನೋಡಿಕೊಳ್ಳಿ, ನಿಮಗೆ ಒಳ್ಳೆಯದಾಗುತ್ತೆ ಅಂತ ಹನುಮಂತನಿಗೆ ಶುಭ ಹಾರೈಸಿದ್ದಾರೆ.

  • ಧಾರವಾಡ ಅಪಘಾತ ಪ್ರಕರಣ- ಶವ ಅದಲು ಬದಲು, ನಾಯಿಮರಿ ಟ್ಯಾಟೂದಿಂದ ಗುರುತು ಪತ್ತೆ

    ಧಾರವಾಡ ಅಪಘಾತ ಪ್ರಕರಣ- ಶವ ಅದಲು ಬದಲು, ನಾಯಿಮರಿ ಟ್ಯಾಟೂದಿಂದ ಗುರುತು ಪತ್ತೆ

    ಹುಬ್ಬಳ್ಳಿ: ಧಾರವಾಡದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸಂಭವಿಸಿದ ಅಪಘಾತದಲ್ಲಿ 11 ಜನ ಸಾವನ್ನಪ್ಪಿದ್ದಾರೆ. ಇದರಲ್ಲಿ ಕೆಲವರ ಶವ ಗುರುತು ಪತ್ತೆ ಸವಾಲಾಗಿದೆ. ಶವ ಅದಲು ಬದಲಾಗಿದ್ದು, ನಾಯಿಮರಿ ಟ್ಯಾಟೂದಿಂದ ಮಹಿಳೆಯೊಬ್ಬರ ಗುರುತು ಪತ್ತೆ ಮಾಡಲಾಗಿದೆ.

    ಕೆಲವರು ಪ್ರೀತಿಗಾಗಿ, ಇನ್ನೂ ಕೆಲವರು ಫ್ಯಾಶನ್ ಗಾಗಿ ದೇಹದಲ್ಲಿ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಆದರೆ ಇದೀಗ ಕೈಗೆ ಹಾಕಿಸಿಕೊಂಡಿದ್ದ ಟ್ಯಾಟೂದಿಂದ ಶವದ ಗುರುತು ಪತ್ತೆ ಮಾಡಲಾಗಿದೆ.

    ಧಾರವಾಡ ತಾಲೂಕಿನ ಇಟಿಗಟ್ಟಿ ಗ್ರಾಮದ ಬಳಿ ಇಂದು ನಡೆದ ಭೀಕರ ಅಪಘಾತದಲ್ಲಿ 11 ಜನ ಮೃತಪಟ್ಟಿದ್ದಾರೆ. ಮೃತರ ಶವ ಪರೀಕ್ಷೆ ನಂತರ ಶವಗಳು ಅದಲು ಬದಲಾಗಿದ್ದವು. ಹೀಗಾಗಿ ದೇಹಗಳನ್ನು ಗುರುತಿಸುವುದು ಕಷ್ಟವಾಗಿತ್ತು. ಬೇರೆಯವರ ಶವವನ್ನ ಇನ್ನೊಬ್ಬರು ತಗೆದುಕೊಂಡು ಹೋಗುವ ವೇಳೆ ಕೈಗೆ ಹಾಕಿಸಿಕೊಂಡ ನಾಯಿಮರಿ ಟ್ಯಾಟೂದಿಂದ ಶವ ಗುರುತಿಸಲಾಗಿದೆ.

    ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಂತರ ಅಸ್ಮಿತಾ ಅವರ ಶವವನ್ನು ಪರಂಜ್ಯೋತಿ ಕುಟುಂಬದವರು ತೆಗೆದುಕೊಂಡು ಹೋಗಿದ್ದರು. ಆದರೆ ಅಸ್ಮಿತಾಳ ಕುಟುಂಬದವರು ಅವಳ ಕೈ ಮೇಲೆ ಟ್ಯಾಟೂ ಇಲ್ಲದಿರುವುದನ್ನು ನೋಡಿ ಇದು ನಮ್ಮ ಅಸ್ಮಿತಾ ಅಲ್ಲ ಎಂದು ಹೇಳಿದ್ದಾರೆ. ಕೂಡಲೇ ಶವವನ್ನ ತೆಗೆದುಕೊಂಡು ಹೋಗುತ್ತಿದ್ದ ಪರಂಜ್ಯೋತಿ ಕಡೆಯವರಿಗೆ ಕರೆ ಮಾಡಿ ವಿಚಾರಿಸಿದಾಗ ಆಕೆಯ ಕೈ ಮೇಲೆ ನಾಯಿಮರಿ ಟ್ಯಾಟೂ ಇರುವುದು ಪತ್ತೆಯಾಗಿದೆ.

    ಮುಗಿಲು ಮುಟ್ಟಿದ ಆಕ್ರಂದನದ ಮಧ್ಯೆ ನಾಯಿಮರಿ ಟ್ಯಾಟೂ ಹಾಕಿಸಿಕೊಂಡ ಅಸ್ಮಿತಾಳ ಶವವನ್ನು ಪರಂಜ್ಯೋತಿ ಕುಟುಂಬದವರಿಂದ ವಾಪಸ್ ಪಡೆದು ಅಂತ್ಯಕ್ರಿಯೆಗೆ ಕೊಂಡೊಯ್ಯಲಾಗಿದೆ. ನಾಯಿಮರಿ ಮೇಲಿದ್ದ ಪ್ರೀತಿಗೆ ಹಾಕಿಸಿಕೊಂಡಿದ್ದ ಟ್ಯಾಟೂ ಕೊನೆಗೆ ಶವ ಪತ್ತೆ ಮಾಡಲು ಸಹಕಾರಿಯಾಗಿದೆ.

  • ನಿಮ್ಮ ಪ್ರೀತಿಯನ್ನ ನೋವಿನ ಮೂಲಕ ತೋರಿಸ್ಬೇಡಿ – ಅಭಿಮಾನಿಗಳಿಗೆ ಸೋನು ಮನವಿ

    ನಿಮ್ಮ ಪ್ರೀತಿಯನ್ನ ನೋವಿನ ಮೂಲಕ ತೋರಿಸ್ಬೇಡಿ – ಅಭಿಮಾನಿಗಳಿಗೆ ಸೋನು ಮನವಿ

    ಮುಂಬೈ: ತನ್ನ ಹೆಸರನ್ನು ಟ್ಯಾಟೂ ಹಾಕಿಕೊಂಡು ಟ್ಟಿಟ್ಟರ್‌ನಲ್ಲಿ ವೀಡಿಯೋ ಹಂಚಿಕೊಂಡ ಅಭಿಮಾನಿ ಪ್ರೀತಿಗೆ, ಟ್ವೀಟ್ ಮಾಡುವ ಮೂಲಕ ಬಾಲಿವುಡ್ ನಟ ಸೋನು ಸೂದ್ ಪ್ರತಿಕ್ರಿಯಿಸಿದ್ದಾರೆ.

    ಸೋನು ಸೂದ್ ಅವರ ಮೇಲಿರುವ ಪ್ರೀತಿ ಮತ್ತು ಅಭಿಮಾನವನ್ನು ವ್ಯಕ್ತಪಡಿಸಲು ಅಭಿಮಾನಿಯೊಬ್ಬ ಒಂದು ಉತ್ತಮ ಗಿಫ್ಟ್ ನ್ನು ನೀಡಿದ್ದಾನೆ. ಅಭಿಮಾನಿ ಪ್ರೀತಿಯ ಉಡುಗೊರೆಯನ್ನು ನೋಡಿದ ಸೋನು, ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವೀಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಸೋನು ಸೂದ್ ಹೆಸರನ್ನು ತನ್ನ ಕೈ ಮೇಲೆ ಹಾಕಿಸಿಕೊಂಡಿರುವ ಟ್ಯಾಟೂವನ್ನು ತೋರಿಸುವ ವೀಡಿಯೋ ಇದಾಗಿದೆ. ಈ ವೀಡಿಯೋದಲ್ಲಿ ಜೊತೆಗೆ ತೆಲುಗು ಭಾಷೆಯಲ್ಲಿ ನಮ್ಮ ಹೃದಯದ ಗುಡಿಯಲ್ಲಿ ಇರುವುದು ನೀನೇ ಎಂದು ಬರೆದು ಪೋಸ್ಟ್ ಹಾಕಿದ್ದಾರೆ.

    ಈ ವೀಡಿಯೋವನ್ನು ಶೇರ್ ಮಾಡಿರುವ ನಟ, ಬ್ರದರ್.. ಈ ರೀತಿ ಟ್ಯಾಟೂ ಹಾಕಿಸಿಕೊಳ್ಳಬೇಡ. ನೀವು ನನ್ನನ್ನು ಪ್ರೀತಿಸುತ್ತೀರಿ ಎಂದು ನನಗೆ ಗೊತ್ತಿದೆ. ಆದರೆ ಆ ಪ್ರೀತಿಯನ್ನು ನೋವಿನ ಮೂಲಕ ಈ ರೀತಿಯಾಗಿ ತೋರಿಸಬೇಡ ಎಂದು ಮನವಿ ಮಾಡಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಸೋನು ಅವರು ಧನ್ಯವಾದವನ್ನು ತಿಳಿಸಿದ್ದಾರೆ.

    ಪ್ರಪಂಚದಾದ್ಯಂತ ಕೊರೊನಾ ಸೋಂಕು ಹರಡಿರುವಾಗ ದೇವರಂತೆ ಬಂದು ಕೈಹಿಡಿದಿದ್ದು ಬಾಲಿವುಡ್ ನಟ ಸೂನು ಸೂದ್. ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುವ ಸೋನು ಅವರು ನಿರ್ಗತಿಕರಿಗೆ ಸಹಾಯವನ್ನು ಮಾಡುವ ಮೂಲಕ ರೀಯಲ್ ಹೀರೋ ಆಗಿ ಮಿಂಚಿದ್ದಾರೆ. ಅಂದಿನಿಂದ ಸೋನು ಅವರ ಅಭಿಮಾನಿಗಳ ಬಳಗ ದೊಡ್ಡ ಪ್ರಮಾಣದಲ್ಲಿಯೇ ಬೆಳೆದುಕೊಂಡಿದೆ.

    ಕೆಲವು ದಿನಗಳ ಹಿಂದೆ ವಿದ್ಯಾರ್ಥಿಗಳಿಗೆ ಆನ್‍ಲೈನ್ ಪಾಠವನ್ನು ಕೇಳಲು ಸ್ಮಾರ್ಟ್ ಫೋನ್ ನೀಡುವ ಮೂಲಕವಾಗಿ ಸುದ್ದಿಯಾಗಿದ್ದರು. ಯಾರೆ ಕಷ್ಟ ಎಂದರೂ ಅಲ್ಲಿ ಮೊದಲು ಕಾಣಿಸಿಕೊಳ್ಳುತ್ತಿರುವುದೇ ಸೋನು ಸೂದ್ ಅವರಾಗಿದ್ದಾರೆ. ಅಭಿಮಾನಿಗಳು ಸೋನು ಅವರ ಸಹಾಯಕ್ಕೆ ಮೆಚ್ಚಿ ಅವರದ್ದೇ ಆಗಿರುವ ರೀತಿಯಲ್ಲಿ ಪ್ರೀತಿಯನ್ನು ತೋರಿಸುತ್ತಿರುತ್ತಾರೆ. ಸೋನು ಸೂದ್ ಅವರ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ಇದೀಗ ಅಭಿಮಾನಿಯೊಬ್ಬ ಟ್ಯಾಟೂ ಹಾಕಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.