Tag: Tattoo

  • ತಲಾ ಅಜಿತ್ ಎದೆಯ ಮೇಲೆ ಟ್ಯಾಟೂ; ಏನ್ ಅರ್ಥ ಗೊತ್ತಾ?

    ತಲಾ ಅಜಿತ್ ಎದೆಯ ಮೇಲೆ ಟ್ಯಾಟೂ; ಏನ್ ಅರ್ಥ ಗೊತ್ತಾ?

    ತಾನಾಯ್ತು ತನ್ನ ಸಿನಿಮಾ ಹಾಗೂ ಕುಟುಂಬ ಜೊತೆಗೆ ಕಾರ್‌ ರೇಸ್. ಇದಿಷ್ಟೇ ತಮಿಳು ನಟ ಅಜಿತ್ (Ajith Kumar) ಜೀವನ. ಹೆಚ್ಚಾಗಿ ಹೊರ ಜಗತ್ತಿನಲ್ಲಿ ಕಾಣಿಸ್ಕೊಳ್ಳುವುದೇ ಅಪರೂಪ. ಪ್ರಚಾರ, ಮಾಧ್ಯಮ, ಸೋಶಿಯಲ್ ಮೀಡಿಯಾ ಎಂಗೇಜಿಂಗ್, ಇದೆಲ್ಲದರಿಂದ ದೂರ ಇರ್ತಾರೆ ಅಜಿತ್. ಇದೀಗ ಅಜಿತ್ ಬಗೆಗಿನ ಹೊಸ ವಿಷಯವೊಂದು ಬಯಲಾಗಿದೆ. ಅಜಿತ್ ಎದೆಯ ಮೇಲೆ ದೊಡ್ಡದೊಂದು ಅರ್ಥಗರ್ಭಿತ ಟ್ಯಾಟೂ ಇದೆ. ಅದು ಫ್ಯಾನ್ಸಿ ಬದಲು ಆಧ್ಯಾತ್ಮಿಕತೆಯನ್ನು ಬಿಂಬಿಸುತ್ತೆ.

    ಇತ್ತೀಚೆಗಷ್ಟೇ ಅಜಿತ್ ಕೇರಳದ ಪಲಕ್ಕಾಡ್ ದೇವಸ್ಥಾನವೊಂದಕ್ಕೆ ಭೇಟಿ ಕೊಟ್ಟು ಅಲ್ಲಿ ಪೂಜೆ ಸಲ್ಲಿಸಿದ್ದರು. ಪತ್ನಿ ಶಾಲಿನಿ ಅಜಿತ್ ಕುಮಾರ್ ಪೋಸ್ಟ್ ಮಾಡಿರುವ ಫೋಟೋಗಳಿಂದ ಅಜಿತ್ ಆಧ್ಮಾತ್ಮಿಕ ಪ್ರವಾಸದ ಜೊತೆ ಟ್ಯಾಟೂ ಕೂಡ ದರ್ಶನವಾಗಿದೆ. ಇದನ್ನೂ ಓದಿ: ಸಲ್ಮಾನ್‌ ಖಾನ್‌ ಈಗ ಉಗ್ರ: ಪಾಕ್‌ ಘೋಷಣೆ

    ಅಜಿತ್‌ ಎದೆಯ ಮೇಲೆ ಶಕ್ತಿ ಸ್ವರೂಪಿಣಿ ದೇವಿಯ ದೊಡ್ಡ ಟ್ಯಾಟೂ ಇದೆ. ಅದು ಪಲಕ್ಕಾಡ್‌ನ ಪೆರುವೆಂಬ ಎಂಬ ಸ್ಥಳದಲ್ಲಿರುವ ಊಟುಕೂಲಂಗಾರ ಭಗವತಿ ಶಕ್ತಿ ದೇವತೆಯ ಟ್ಯಾಟೂ ಎನ್ನುವುದೇ ವಿಶೇಷ. ಈ ದೇವಿಯೇ ಅಜಿತ್ ಕುಟುಂಬದ ಕುಲದೇವತೆ ಎನ್ನಲಾಗುತ್ತಿದೆ. ಹೀಗಾಗಿ, ಬಹಳ ವರ್ಷಗಳ ಹಿಂದೆ ಅಜಿತ್ ಹಾಕಿಸಿಕೊಂಡಿರುವ ಟ್ಯಾಟೂ ಇದೀಗ ರಿವೀಲ್ ಆಗಿದೆ. ಹೀಗೆ ಅಜಿತ್ ಬಗೆಗೆ ಇನ್ನೆಷ್ಟು ಮುಚ್ಚಿಟ್ಟ ಸತ್ಯಗಳಿವೆಯೋ ಎನ್ನುತ್ತಾ ಫ್ಯಾನ್ಸ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

  • ಲವ್ ‍ಬ್ರೇಕಪ್ ನಂತರ ಬೆನ್ನ ಮೇಲೆ ಟ್ಯಾಟೋ ಹಾಕಿಸಿಕೊಳ್ಳಲು ಶ್ರುತಿ ನಿರ್ಧಾರ

    ಲವ್ ‍ಬ್ರೇಕಪ್ ನಂತರ ಬೆನ್ನ ಮೇಲೆ ಟ್ಯಾಟೋ ಹಾಕಿಸಿಕೊಳ್ಳಲು ಶ್ರುತಿ ನಿರ್ಧಾರ

    ಟಿ ಶ್ರುತಿ ಹಾಸನ್ ಬ್ರೇಕಪ್ ಮಾಡಿಕೊಂಡ ಸುದ್ದಿ ತಮಿಳು ಸಿನಿಮಾ ರಂಗದಲ್ಲಿ ಗಿರಕಿ ಹೊಡೆಯುತ್ತಿದೆ. ಇದು ನಿಜ ಎಂದು ಅವರು ಆಪ್ತರು ಮಾತಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಶ್ರುತಿ ಬೆನ್ನ ಮೇಲೆ (Tattoo) ಮತ್ತೊಂದು ಟ್ಯಾಟೋ ಹಾಕಿಸಿಕೊಳ್ಳಲು ಮುಂದಾಗಿದ್ದಾರಂತೆ. ಇದು ನೋವು ಮರೆಯಲು ಮಾಡಿರುವ ಪ್ಲ್ಯಾನ್ ಎಂದು ಹೇಳಲಾಗುತ್ತಿದೆ.

    ಶಂತನು ಜೊತೆ ಚೆನ್ನಾಗಿಯೇ ಇದ್ದ ಶ್ರುತಿ ಈಗ ಸಡನ್ನಾಗಿ ಬ್ರೇಕ್ ಅಪ್  ಮಾಡಿಕೊಳ್ಳಲು ಕಾರಣವೇನು ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಮದುವೆ (Marriage) ವಿಚಾರ ಎಂದು ಗೊತ್ತಾಗಿದೆ. ಶಂತನು ಮತ್ತು ಶ್ರುತಿ ಮಧ್ಯೆ ಮದುವೆ ವಿಚಾರದಲ್ಲಿ ಗಲಾಟೆ ಕಾರಣದಿಂದಾಗಿ ಇಬ್ಬರೂ ದೂರವಾಗಿದ್ದಾರೆ ಎನ್ನುವುದು ಸದ್ಯದ ವರ್ತಮಾನ.

    ಮೂರು ವರ್ಷಗಳ ಹಿಂದೆಯಷ್ಟೇ ಶ್ರುತಿ ಅವರು ಮೈಕಲ್ ಕೊರ್ಸಲ್ ಎನ್ನುವವರ ಜೊತೆ ಓಡಾಡುತ್ತಿದ್ದರು. ಅವರೇ ತಮ್ಮ ಬಾಯ್ ಫ್ರೆಂಡ್ ಅಂತಾನೂ ಪರಿಚಯಿಸಿದ್ದರು. ಆನಂತರ ಅವರೊಂದಿಗೆ ಅಂತರ ಬಯಸಿದರು. ನಂತರ ಶಂತನು ಹಜಾರಿಕಾ ಜೊತೆ ಸ್ನೇಹ ಬೆಳೆಸಿದ್ದರು.

    ಶ್ರುತಿ ಹಾಸನ್ ಮತ್ತು ಶಂತನು ಒಂದು ರೀತಿಯಲ್ಲಿ ಸಹ ಜೀವನವನ್ನೇ ನಡೆಸುತ್ತಿದ್ದರು. ಅದನ್ನು ಅವರೂ ಒಪ್ಪಿಕೊಂಡಿದ್ದರು. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ಅವರೊಂದಿಗೂ ಶ್ರುತಿ ಸ್ನೇಹವನ್ನು ಕಡಿದುಕೊಂಡಿದ್ದಾರಂತೆ (Love Break Up). ಅದಕ್ಕೆ ಸಾಕ್ಷಿ ಎನ್ನುವಂತೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಿಂದ ಜೊತೆಗಿರುವ ಫೋಟೋ ಡಿಲಿಟ್ ಮಾಡಿದ್ದಾರೆ. ಮತ್ತು ಸೋಷಿಯಲ್ ಮೀಡಿಯಾ ಖಾತೆಯಿಂದ ಅನ್ ಫ್ರೆಂಡ್ ಮಾಡಿಕೊಂಡಿದ್ದಾರೆ.

    ಈ ಹಿಂದೆ ಶ್ರುತಿ ಹಾಸನ್ (Shruti Haasan) ಶಾಂತನೂ ಹಜಾರಿಕಾ ಜೊತೆ ಡೇಟ್ ಮಾಡ್ತಿರೋ ಬಗ್ಗೆ ರಿವೀಲ್ ಮಾಡಿದ್ದರು. ಇಬ್ಬರೂ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದರು. ಈ ನಡುವೆ ಬಾಯ್‌ಫ್ರೆಂಡ್ (Boyfriend) ಬಗ್ಗೆ ಸ್ವೀಟ್ ಆಗಿ ದೂರು ಹಂಚಿಕೊಂಡಿದ್ದರು. ತನ್ನ ಪಾರ್ಟನರ್ ಅದೆಷ್ಟರ ಮಟ್ಟಿಗೆ ಅನ್‌ರೊಮ್ಯಾಂಟಿಕ್ ಎಂದು ಕಂಪ್ಲೇಟ್‌ವೊಂದನ್ನ ಎಲ್ಲರ ಮುಂದಿಟ್ಟಿದ್ದರು.

     

    ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಶಾಂತನು (Shantanu Hazarika) ಜೊತಗಿನ ಹಲವು ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಲೇ ಇರುತ್ತಾರೆ. ಈಗ ಗೆಳೆಯ ಶಾಂತನು ಅವರನ್ನು ಮೋಸ್ಟ್ ಅನ್‌ರೊಮ್ಯಾಂಟಿಕ್ ವ್ಯಕ್ತಿ ಎಂದು ಕರೆದಿದ್ದಾರೆ. ಶ್ರುತಿ ಹಾಸನ್ ಭಾನುವಾರ (ಜುಲೈ 2)ರಂದು  ಹೂವುಗಳನ್ನು ಆರ್ಡರ್ ಮಾಡಿಕೊಂಡಿದ್ದರು. ಇದನ್ನು ಶಾಂತನು ತೆಗೆದುಕೊಂಡಿದ್ದಾರೆ. ಇದಕ್ಕೆ ಶ್ರುತಿ ಹಾಸನ್ ಕೋಪಗೊಂಡಿದ್ದರು. ನೀನು ಮೋಸ್ಟ್ ಅನ್‌ರೊಮ್ಯಾಂಟಿಕ್ ವ್ಯಕ್ತಿ. ನನಗಾಗಿ ನೀನು ಎಂದಿಗೂ ಹೂವುಗಳನ್ನು ತಂದುಕೊಡಲಿಲ್ಲ. ಅದಕ್ಕಾಗಿಯೇ ನಾನು ಹೂವುಗಳನ್ನು ಆರ್ಡರ್ ಮಾಡಿಕೊಂಡೆ ಎಂದು ಬರೆದುಕೊಂಡಿದ್ದರು. ಆದರೆ, ಈಗ ಇಬ್ಬರೂ ದೂರವಾಗಿದ್ದಾರೆ ಎಂದು ಹೇಳಲಾಗುತ್ತಿದೆ.

  • ಪತಿ ಹೆಸರನ್ನ ಹಣೆ ಮೇಲೆ ಹಚ್ಚೆ ಹಾಕಿಸಿಕೊಂಡ ಬೆಂಗ್ಳೂರು ಮಹಿಳೆ – ಓವರ್ ಆಕ್ಷನ್ ಅಂತಾ ನೆಟ್ಟಿಗರಿಂದ ತರಾಟೆ

    ಪತಿ ಹೆಸರನ್ನ ಹಣೆ ಮೇಲೆ ಹಚ್ಚೆ ಹಾಕಿಸಿಕೊಂಡ ಬೆಂಗ್ಳೂರು ಮಹಿಳೆ – ಓವರ್ ಆಕ್ಷನ್ ಅಂತಾ ನೆಟ್ಟಿಗರಿಂದ ತರಾಟೆ

    ಬೆಂಗಳೂರು: ದಿನವಿಡೀ ಫೋನ್‌ನಲ್ಲಿ ಮಾತಾಡುವುದಷ್ಟೇ ಪ್ರೀತಿಯಲ್ಲ. ಪೊಳ್ಳು ಮಾತಿನ ಮೆಸೇಜ್‌ನಲ್ಲಿಯೇ ಮುಳುಗಿರುವುದೂ ಪ್ರೀತಿಯಲ್ಲ. ಕಾಲ್ ಮಾಡಲಿಲ್ಲ, ಮೆಸೇಜ್‌ಗೆ ಸರಿಯಾಗಿ ರಿಪ್ಲೆ, ಕೊಡಲಿಲ್ಲ ಅಂದಮಾತ್ರಕ್ಕೆ ಪ್ರೀತಿ ಕಡಿಮೆಯಾಯ್ತು ಅಂತಾ ಅರ್ಥವಲ್ಲ. ನೀನು ಚಂದವಳ್ಳಿಯ ತೋಟದಲ್ಲಿ ಅರಳಿರುವ ಹೂವು ಅಂತಾ ಬಣ್ಣದ ಮಾತುಗಳನ್ನಾಡಿದರೆ ಅದು ಎದ್ವಾತದ್ವಾ ಪ್ರೀತಿ ಇದೆ ಅಂತಲ್ಲ. ಈ ಡೈಲಾಗ್‌ಗಳನ್ನ ನಿತ್ಯ ಪ್ರೇಮಿಗಳಿಂದ ಕೇಳುತ್ತಲೇ ಇರುತ್ತೇವೆ.

    ಬೆಂಗಳೂರಿನ ಮಹಿಳೆಯೊಬ್ಬಳು ಒಂದು ಹೆಜ್ಜೆ ಮುಂದೆ ಹೋಗಿ ಪತಿಯ ಹೆಸರನ್ನ ಹಣೆಯ ಮೇಲೆ ಹಚ್ಚೆ ಹಾಕಿಸಿಕೊಂಡು ಪ್ರೀತಿಯನ್ನು ವ್ಯಕ್ತಪಡಿಸಿದ್ದಾಳೆ. ಈ ಫೋಟೋವನ್ನ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, `ಮುಂದಿನ ರೀಲ್‌ನಲ್ಲಿ ಅಂತಿಮ ಪ್ರೀತಿ’ ಎಂದೂ ಬರೆದುಕೊಂಡಿದ್ದಾಳೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ; ಸುರಿಯುತ್ತಿರೋ ಮಳೆಯಲ್ಲೇ ಯುವಕರ ಹುಚ್ಚಾಟ; ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕುಟುಂಬ

    ಟ್ಯಾಟೂ ಪಾರ್ಲರ್ ಕಿಂಗ್ ಮೇಕರ್ ಟ್ಯಾಟೂ ಸ್ಟುಡಿಯೋ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಮಹಿಳೆಯ ಫೋಟೋ ಹಂಚಿಕೊಳ್ಳಲಾಗಿದ್ದು, ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಫೋಟೋದಲ್ಲಿನ ಮಹಿಳೆ ತನ್ನ ಪತಿ ಸತೀಶ್ ಹೆಸರನ್ನ ಹಣೆಯ ಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾಳೆ. 2.68 ಲಕ್ಷಕ್ಕೂ ಅಧಿಕ ಮಂದಿ ಫೋಟೋವನ್ನ ಲೈಕ್ ಮಾಡಿದ್ದಾರೆ.

    ಮಹಿಳೆಯ ಫೋಟೋವನ್ನು ನೋಡಿ ಕೆಲವರು ಇದು ಪಕ್ಕಾ ಟ್ರೂ ಲವ್ ಅಂತಾ ಹೊಗಳಿದರೆ, ಇನ್ನೂ ಕೆಲವರು ಇದು ಓವರ್ ಆಕ್ಷನ್, ನಾನು ನನ್ನ ಲೈಕ್ ಅನ್ನು ಕ್ಯಾನ್ಸಲ್ ಮಾಡ್ತೀನಿ. ಇದು ಮೂರ್ಖತನ, ನಿಜವಾದ ಪ್ರೀತಿಯನ್ನ ಈ ರೀತಿ ಸಾಬೀತು ಮಾಡುವ ಅಗತ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಮಳೆ ಆರ್ಭಟ – ಇಂದಿನ RCB ಮ್ಯಾಚ್ ರದ್ದಾಗುತ್ತಾ?

  • ಬಲವಂತದಿಂದ ಮಕ್ಕಳಿಗೆ ಹಚ್ಚೆ, ಚರ್ಮ ಕಿತ್ತು ಅಳಿಸುವ ಪ್ರಯತ್ನ – ಯುಎಸ್ ದಂಪತಿಗಳು ಅರೆಸ್ಟ್

    ಬಲವಂತದಿಂದ ಮಕ್ಕಳಿಗೆ ಹಚ್ಚೆ, ಚರ್ಮ ಕಿತ್ತು ಅಳಿಸುವ ಪ್ರಯತ್ನ – ಯುಎಸ್ ದಂಪತಿಗಳು ಅರೆಸ್ಟ್

    ವಾಷಿಂಗ್ಟನ್: ಇಬ್ಬರು ಮಕ್ಕಳಿಗೆ ಬಲವಂತದಿಂದ ಹಚ್ಚೆ (Tattoo) ಹಾಕಿಸಿ ನಂತರ ಚರ್ಮವನ್ನು ಕಿತ್ತು ಹಾಕುವ ಮೂಲಕ ಹಚ್ಚೆ ಅಳಿಸಲು ಪ್ರಯತ್ನಿಸಿದ ಆರೋಪದಡಿ ದಂಪತಿಯನ್ನು ಬಂಧಿಸಿದ (Arrest) ಘಟನೆ ಅಮೆರಿಕಾದ (America) ಟೆಕ್ಸಾಸ್‌ನಲ್ಲಿ (Texas) ನಡೆದಿದೆ.

    ಮೇಗನ್ ಮೇ ಫರ್ (27) ಹಾಗೂ ಗನ್ನರ್ ಫರ್ (23) ಬಂಧಿತ ದಂಪತಿ. ದಂಪತಿ ತಮ್ಮ 9 ಮತ್ತು 5 ವರ್ಷದ ಇಬ್ಬರು ಮಕ್ಕಳನ್ನು ಹಗ್ಗದಿಂದ ಕಟ್ಟಿಹಾಕಿ, ಕಿರುಚದಂತೆ ಬಾಯಿಗೆ ಟೇಪ್ ಹಾಕಿ ಬಲವಂತವಾಗಿ ಹಚ್ಚೆ ಹಾಕಿಸಿದ್ದಾರೆ. ಒಂದು ಮಗುವಿಗೆ ಪಾದದ ಮೇಲೆ ಹಚ್ಚೆ ಹಾಕಿಸಿದರೆ ಇನ್ನೊಂದು ಮಗುವಿಗೆ ಭುಜದ ಮೇಲೆ ಹಾಕಲಾಗಿದೆ. ಇದನ್ನೂ ಓದಿ: 1 ಕೆಜಿ ಗಾಂಜಾ ಕಳ್ಳಸಾಗಣೆ ಆರೋಪ – ಭಾರತ ಮೂಲದ ವ್ಯಕ್ತಿಯನ್ನು ಗಲ್ಲಿಗೇರಿಸಿದ ಸಿಂಗಾಪುರ

    ಆ ಮಕ್ಕಳ ನಿಜವಾದ ತಂದೆ ಹಾಗೂ ಮಲತಾಯಿ ಹಚ್ಚೆ ನೋಡಿ ಮಕ್ಕಳ ರಕ್ಷಣಾ ಸೇವೆಗಳಿಗೆ (CPS) ವಿಷಯ ತಿಳಿಸಿದ್ದಾರೆ. ಸಿಪಿಎಸ್ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದ ತಕ್ಷಣ ನಿಜವಾದ ತಾಯಿ ಹಾಗೂ ಆಕೆಯ ಗಂಡ ಎಚ್ಚೆತ್ತುಕೊಂಡು ಬಲವಂತವಾಗಿ ಹಚ್ಚೆಗಳನ್ನು ಅಳಿಸುವ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ಬಂಧನದಿಂದ ತಪ್ಪಿಸಿಕೊಳ್ಳಬಹುದು ಎಂದುಕೊಂಡಿದ್ದರು. ಇದನ್ನೂ ಓದಿ: ಸುಡಾನ್ ಹಿಂಸಾಚಾರ – ವಿಮಾನ ನಿಲ್ದಾಣಗಳ ಸ್ಥಗಿತ; ಪ್ರಜೆಗಳನ್ನು ಕರೆತರಲು ಭೂಮಾರ್ಗ ಹುಡುಕಾಟದಲ್ಲಿ ಭಾರತ


    ಚರ್ಮವನ್ನು ಕಿತ್ತುತೆಗೆದು ಬಳಿಕ ನಿಂಬೆರಸದಿಂದ ಉಜ್ಜುವ ಮೂಲಕ ಹಚ್ಚೆಯನ್ನು ಅಳಿಸಿದ್ದರು ಎನ್ನಲಾಗಿದೆ. ಹಚ್ಚೆ ಹಾಕಿಸಿದ್ದ ನಿರ್ದಿಷ್ಟ ಜಾಗದಲ್ಲಿ ಗಾಯಗಳು ಕಂಡು ಬಂದಿವೆ. ಅಲ್ಲದೇ ಅದೇ ಜಾಗದಿಂದ ಸ್ವಲ್ಪ ಪ್ರಮಾಣದ ಚರ್ಮವನ್ನೂ ಕಿತ್ತು ತೆಗೆದಿರುವುದು ಕಂಡುಬಂದಿದೆ. ಈ ಕುರಿತು ಮಗುವಿಗೆ ಗಾಯ ಹಾಗೂ ಕಾನೂನು ಬಾಹಿರ ಸಂಯಮಗಳ ಆರೋಪದಡಿಯಲ್ಲಿ ದಂಪತಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಪಾಕ್‌ನಲ್ಲಿ ಭೀಕರ ಸ್ಫೋಟ – 12 ಮಂದಿ ಪೊಲೀಸರ ದಾರುಣ ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ

    ಇಬ್ಬರು ಮಕ್ಕಳನ್ನು ಸಿಪಿಎಸ್‌ನಲ್ಲಿ ಇರಿಸಲಾಗಿದ್ದು, ತನಿಖೆ ಮುಂದುವರೆದಿದೆ. ಇದನ್ನೂ ಓದಿ: ವಿಮಾನದಲ್ಲಿ ಬಾಟಲಿ ಹಿಡಿದು ಬಡಿದಾಟ; ಫ್ಲೈಟ್‌ ತುರ್ತು ಭೂಸ್ಪರ್ಶ – ಇಬ್ಬರು ಮಹಿಳೆಯರು ಸೇರಿ ನಾಲ್ವರು ಅರೆಸ್ಟ್

  • ಮಾಜಿಪತಿಯ ಟ್ಯಾಟೂ ತೆಗೆಸುವಂತೆ ಸಮಂತಾಗೆ ಅಭಿಮಾನಿಗಳ ಒತ್ತಾಯ

    ಮಾಜಿಪತಿಯ ಟ್ಯಾಟೂ ತೆಗೆಸುವಂತೆ ಸಮಂತಾಗೆ ಅಭಿಮಾನಿಗಳ ಒತ್ತಾಯ

    ತೆಲುಗಿನ ಖ್ಯಾತ ಸ್ಟಾರ್ ಜೋಡಿ ಸಮಂತಾ ರುತ್ ಪ್ರಭು (Samantha Ruth Prabhu) ಹಾಗೂ ನಾಗ ಚೈತನ್ಯ (Naga Chaitanya) ಸತತ ಹತ್ತು ವರ್ಷಗಳ ಕಾಲ ಸ್ನೇಹಿತರಾಗಿ, ಪ್ರೇಮಿಗಳಾಗಿ ಆನಂತರ ಲವ್ ಮ್ಯಾರೇಜ್ ಆದವರು. ಇವರ ಮದುವೆ ನಂತರ ಈ ಜೋಡಿಯ ಮೇಲೆ ಯಾರ ಕಣ್ಣು ಬೀಳದಿರಲಿ ಎಂದು ಅನೇಕರು ಹಾರೈಸಿದ್ದರು. ಆದರೆ, ಹಾರೈಕೆ ತುಂಬಾ ವರ್ಷಗಳ ಕಾಲ ಉಳಿಯಲಿಲ್ಲ. ಹೊಂದಾಣಿಕೆಯ ಕಾರಣ ನೀಡಿ ಇಬ್ಬರೂ ದೂರವಾದರು.

    ಮದುವೆ ನಂತರ ಸಮಂತಾ ತಮ್ಮ ಪತಿ ನಾಗ ಚೈತನ್ಯ ಅವರ ಸಹಿಯನ್ನು ದೇಹದ ಮೇಲೆ ಟ್ಯಾಟೂ (Tattoo) ಹಾಕಿಸಿಕೊಂಡಿದ್ದರು. ‘ವೈಎಂಸಿ’ ಎಂದು ಬರೆಯಿಸಿದ್ದ ಆ ಟ್ಯಾಟೂದ ವಿಸ್ತ್ರತರೂಪ ‘ಯೇ ಮಾಯಾ ಚೇಸಾವೆ’ ಎಂದು. ಇದು ಈ ಜೋಡಿಯ ಸೂಪರ್ ಹಿಟ್ ಸಿನಿಮಾ.  ಜೊತೆಗೆ ನಾಗ ಚೈತನ್ಯ ಅವರ ಸಹಿಯನ್ನೂ ಹೊಟ್ಟೆಯ ಮೇಲೆ ಹಾಕಿಸಿಕೊಂಡಿದ್ದರು. ಡಿವೋರ್ಸ್ ನಂತರ ಆ ಟ್ಯಾಟೂವನ್ನುಉಳಿಸಿಕೊಂಡಿದ್ದಾರೆ ಸಮಂತಾ. ಇದನ್ನೂ ಓದಿ:ನಯನತಾರಾ ಬಗ್ಗೆ ಕನ್ನಡದ ‘ಗೂಳಿ’ ನಟಿ ಶಾಕಿಂಗ್ ಹೇಳಿಕೆ

    ಇತ್ತೀಚೆಗೆ ಸಮಂತಾ ಸಾಕಷ್ಟು ಫೋಟೋಶೂಟ್ ಗಳಲ್ಲಿ ಭಾಗಿಯಾಗುತ್ತಿದ್ದರು. ಪ್ರತಿ ಫೋಟೋದಲ್ಲೂ ಹಾಟ್ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಹಾಗಾಗಿ ನಾಗಚೈತನ್ಯ ಹಾಕಿರುವ ಟ್ಯಾಟೂ ಸಹಿ ಎದ್ದು ಕಾಣುತ್ತಿದೆ. ಇದನ್ನು ಕಂಡ ಅಭಿಮಾನಿಗಳು ಇನ್ನೂ ಯಾಕೆ ಅದನ್ನು ಇಟ್ಟುಕೊಂಡಿದ್ದೀರಿ? ದೂರವಾದ ನಂತರ ಅದನ್ನು ತೆಗೆಸಿ ಎಂದು ಒತ್ತಡ ಹೇರುತ್ತಿದ್ದಾರೆ. ಯಾವುದೇ ಫೋಟೋದಲ್ಲಿ ಟ್ಯಾಟೂ ಕಾಣಲಿ, ಆ ಫೋಟೋಗಳಿಗೆ ಕಾಮೆಂಟ್ ಹಾಕುವುದನ್ನು ಅಭಿಮಾನಿಗಳು ಮರೆಯುವುದಿಲ್ಲ.

    ಸಮಂತಾ ಮತ್ತು ನಾಗಚೈತನ್ಯ ದೂರವಾದ ನಂತರ ಇಬ್ಬರೂ ಸಾಕಷ್ಟು ನೋವುಗಳನ್ನ ಅನುಭವಿಸಿದ್ದಾರೆ. ಅದರಲ್ಲೂ ಸಮಂತಾ ಡಿಪ್ರೆಷನ್ ಗೆ ಹೋಗಿದ್ದರು. ಮತ್ತೆ ಅದರಿಂದ ಆಚೆ ಬಂದು ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ. ಅದರೂ ನಾಗ ಚೈತನ್ಯ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಸಮಂತಾಗೆ ಆಗಾಗ್ಗೆ ಕಾಮೆಂಟ್ ಮೂಲಕ ಕೆಣಕುತ್ತಲೇ ಇರುತ್ತಾರೆ.

  • Irreplaceble ಟ್ಯಾಟೂ ಹಿಂದಿನ ಕಾರಣ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ

    Irreplaceble ಟ್ಯಾಟೂ ಹಿಂದಿನ ಕಾರಣ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ

    ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ಪ್ರಸ್ತುತ ಎಲ್ಲಾ ಭಾಷೆಯಲ್ಲೂ ಮಿಂಚುತ್ತಿದ್ದಾರೆ. ಸದಾ ಒಂದಲ್ಲಾ ಒಂದು ವಿಷ್ಯವಾಗಿ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಸದ್ಯ ರಶ್ಮಿಕಾ ತಮ್ಮ ಟ್ಯಾಟೂ (Tattoo) ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ತಮ್ಮ Irreplaceble ಟ್ಯಾಟೂ ಕುರಿತು ಅಚ್ಚರಿಯ ವಿಚಾರವೊಂದನ್ನ ನಟಿ ರಿವೀಲ್ ಮಾಡಿದ್ದಾರೆ.

    ರಶ್ಮಿಕಾ ಮಂದಣ್ಣ ಬಣ್ಣದ ಜಗತ್ತಿಗೆ ಕಾಲಿಟ್ಟ ವೇಳೆಯಿಂದ ಸಿನಿಮಾ ಜೊತೆ ವಿವಾದಗಳಿಂದ (Controversy) ಕೂಡ ಸುದ್ದಿಯಾಗುತ್ತಲೇ ಬಂದಿದ್ದಾರೆ. ಈಗ ಸಂದರ್ಶನವೊಂದರಲ್ಲಿ ತನ್ನ ಟ್ಯಾಟೂ ಹಿಂದಿನ ಕಥೆಯನ್ನ ನಟಿ ಬಿಚ್ಚಿಟ್ಟಿದ್ದಾರೆ. ʻIrreplacebleʼ ಎಂಬ ಪದವನ್ನೇ ಹಚ್ಚೆ ಹಾಕಿಸಿಕೊಳ್ಳಲು ಏಕೆ ಆರಿಸಿಕೊಂಡೆ ಎಂಬುದನ್ನ ನಟಿ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ನಂದು- ಜಶ್ವಂತ್ ಬ್ರೇಕಪ್‌ಗೆ ಕಾರಣವಾದ್ರಾ ಸಾನ್ಯ ಅಯ್ಯರ್?

    ನನಗೆ ಟ್ಯಾಟೂ ಹಾಕಿಸಿಕೊಳ್ಳುವ ಐಡಿಯಾ ಇರಲಿಲ್ಲ. ಒಂದು ದಿನ ನಾನು ಕಾಲೇಜಿನಲ್ಲಿದ್ದಾಗ ನನ್ನ ಸ್ನೇಹಿತನೊಬ್ಬ, ಹುಡುಗಿಯರು ಜಾಸ್ತಿ ನೋವು ಅನುಭವಿಸುವುದಿಲ್ಲ. ಅವರು ಸೂಜಿಗೆ ತುಂಬಾ ಹೆದರುತ್ತಾರೆ ಎಂದು ಮಾತನಾಡಿದ್ದ. ಅಂದು ಅವನ ಮಾತನ್ನ ನಾನು ಸೀರಿಯಸ್ ಆಗಿ ತೆಗೆದುಕೊಂಡಿದ್ದೆ, ಅವನ ಮಾತಿಗೆ ರೆಬೆಲ್‌ ಆಗಿದ್ದೆ, ಹಾಗಾಗಿ ಕೈ ಮೇಲೆ ಹಚ್ಚೆ ಹಾಕಿಸಿಕೊಂಡೆ.

    ಆ ದಿನ ಏನು ಹಚ್ಚೆ ಹಾಕಿಸಿಕೊಳ್ಳಬೇಕು ಎಂದು ನನಗೆ ತಿಳಿದಿರಲಿಲ್ಲ. ಕುಳಿತುಕೊಂಡು ಈ ಬಗ್ಗೆ ಯೋಚಿಸಿದೆ. ನಾನು ಯಾವಾಗಲೂ ನಾನು ನಾನಾಗಿಯೇ ಇರಲು ಇಷ್ಟಪಡುತ್ತೇನೆ. ಪ್ರತಿಯೊಬ್ಬ ಮನುಷ್ಯನ ಸ್ಥಾನವನ್ನು ಯಾರು ತುಂಬಲಾರರು ಎಂದು ನಾನು ನಂಬುತ್ತೇನೆ. ಬೇರೆ ಯಾರು ನೀವು ಆಗಿರಲು ಸಾಧ್ಯವಿಲ್ಲ.  ʻIrreplacebleʼ ತುಂಬಲಾಗದ ಎಂದರ್ಥ. ಹಾಗಾಗಿ ಈ ಪದವನ್ನ ನಾನು ಹಚ್ಚೆ ಹಾಕಿಸಿಕೊಂಡೆ ಎಂದು ರಶ್ಮಿಕಾ ಮಾತನಾಡಿದ್ದಾರೆ. ಟ್ಯಾಟೂ ಹಿಂದಿನ ಸೀಕ್ರೆಟ್‌ ಬಗ್ಗೆ ನಟಿ ಮಾತನಾಡಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟ್ಯಾಟೂ ಹಾಕಿಸಿಕೊಂಡವರು 6 ತಿಂಗಳು ರಕ್ತದಾನ ಮಾಡ್ಬೇಡಿ – ವೈದ್ಯರ ಎಚ್ಚರಿಕೆ

    ಟ್ಯಾಟೂ ಹಾಕಿಸಿಕೊಂಡವರು 6 ತಿಂಗಳು ರಕ್ತದಾನ ಮಾಡ್ಬೇಡಿ – ವೈದ್ಯರ ಎಚ್ಚರಿಕೆ

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಟ್ಯಾಟೂ (Tattoo) ಎನ್ನುವುದು ಸಖತ್ ಟ್ರೆಂಡ್ ಆಗಿಬಿಟ್ಟಿದೆ. ಯಾರೇ ನೋಡಿದರೂ ವೆರೈಟಿ ಹಚ್ಚೆ ಹಾಕಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ. ಆದರೆ ಈ ಹಚ್ಚೆ ಹಾಕಿಸಿಕೊಳ್ಳುವಾಗ ಬಹಳಾನೇ ಜಾಗರೂಕರಾಗಿರಬೇಕು, ಹಾಗೇ ಹಚ್ಚೆ ಹಾಕಿಸಿಕೊಂಡವರು 6 ತಿಂಗಳು ರಕ್ತದಾನ (Blood Donation) ಮಾಡಬಾರದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ಹೌದು, ಹಚ್ಚೆ ಹಾಕಿಕೊಳ್ಳುವವರು 6 ತಿಂಗಳು ರಕ್ತದಾನ ಮಾಡಬಾರದಂತೆ, ಯಾಕೆಂದರೆ, ಟ್ಯಾಟೂ ಎನ್ನುವುದು ಬಹುತೇಕ ಎಲ್ಲಾ ವಯಸ್ಸಿನ ಜನರನ್ನೂ ಸೆಳೆದು ಬಿಡುತ್ತದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಅನೇಕ ಜನರು ದೇಹದ ವಿವಿಧ ಭಾಗಗಳಲ್ಲಿ ವಿವಿಧ ವಿನ್ಯಾಸಗಳೊಂದಿಗೆ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಟ್ಯಾಟೂ ಹಾಕಿಸಿಕೊಳ್ಳುವಾಗ ಸ್ವಲ್ಪ ಯಾಮಾರಿದರೂ ಇತರರ ಜೀವಕ್ಕೂ ಕುತ್ತು ಬರಬಹುದು. ಇದನ್ನೂ ಓದಿ: ನಿರೀಕ್ಷೆಗೂ ಮೀರಿ ಯಶಸ್ವಿ: ರಾಜ್ಯದಲ್ಲಿ 10.5 ಲಕ್ಷ ಕೋಟಿ ಹೂಡಿಕೆ

    ಹಚ್ಚೆ ಹಾಕಿಸಿಕೊಳ್ಳುವ ಸೂಜಿ ಬಳಸುವಾಗ ತುಂಬಾನೇ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಹೆಚ್.ಐ.ವಿ, ಹೆಪಟೈಟಿಸ್ ಹಾಗೂ ಅನುವಂಶೀಯ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇರತ್ತದೆ. ಹಾಗಾಗೀ ಹಚ್ಚೆ ಹಾಕಿಸಿಕೊಂಡ 6 ತಿಂಗಳಿನಿಂದ ಒಂದು ವರ್ಷದವರೆಗೆ ರಕ್ತದಾನ ಮಾಡದಿರುವುದು ಉತ್ತಮ ಎಂದು ತಜ್ಞ ವೈದ್ಯರು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್‌ ಹೊಡೆದು ಬೈಕ್‌ ಸವಾರ ಸಾವು – ಅಪಘಾತ ಜಾಗದಲ್ಲಿ ಬಿದ್ದಿತ್ತು ಮದ್ಯದ ಬಾಟಲಿಗಳು

    Live Tv
    [brid partner=56869869 player=32851 video=960834 autoplay=true]

  • ಜನನಾಂಗಕ್ಕೂ ಟ್ಯಾಟೂ – ಜೀವವೇ ಹೋದಂಗೆ ಆಯ್ತು ಅಂದ ನಟಿ

    ಜನನಾಂಗಕ್ಕೂ ಟ್ಯಾಟೂ – ಜೀವವೇ ಹೋದಂಗೆ ಆಯ್ತು ಅಂದ ನಟಿ

    ಲಂಡನ್: ಟ್ಯಾಟೂ ಎಂದರೇ ಇತ್ತೀಚೆಗೆ ಹೆಚ್ಚು ಯುವಕರ ಜೊತೆಗೆ ಹಿರಿಯರು ಹೆಚ್ಚು ಕ್ರೇಜ್ ಮೂಡುತ್ತಿದೆ. ಹಲವರಿಗೆ ಈಗ ಟ್ಯಾಟೂ ಹುಚ್ಚು ಹೆಚ್ಚಾಗಿ ಒಂದು ಇಂಚು ಜಾಗ ಬಿದೇ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದಾರೆ. ತಮ್ಮ ಹೆಸರು, ಪ್ರೀತಿ ಪಾತ್ರರ ಹೆಸರು ಇಲ್ಲವೇ ತಮ್ಮಿಷ್ಟದ ಡಿಸೈನ್‍ಗಳ ಟ್ಯಾಟೂ ಹಾಕಿಸಿಕೊಂಡರೆ, ಇನ್ನು ಕೆಲವರು ದೇವರ ದೊಡ್ಡ ದೊಡ್ಡ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ನಟಿ ಟ್ಯಾಟೂ ಹಾಕಿಸಿಕೊಂಡಿರುವ ಜಾಗವನ್ನು ನೋಡಿದ್ರೆ ಎಲ್ಲರೂ ಹುಬ್ಬೇರಿಸುವುದು ಗ್ಯಾರೆಂಟಿ.

    ಬ್ರಿಟನ್‍ನ 34 ವರ್ಷದ ಹಾಲಿವುಡ್ ನಟಿ ಬೆಕಿ ಹಾಲ್ಟ್ ತನ್ನ ದೇಹದ ಇಂಚಿಂಚೂ ಬಿಡದೇ ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ಈ ಮೂಲಕ ದಾಖಲೆ ಸೃಷ್ಟಿಸಿದ್ದಾಳೆ. ಆಕೆ ಎಷ್ಟರ ಮಟ್ಟಿಗೆ ಟ್ಯಾಟೂ ಪ್ರೇಮಿ ಎಂದರೇ ತನ್ನ ಖಾಸಗಿ ಅಂಗವಾದ ಜನನಾಂಗಕ್ಕೂ ಈಕೆ ಸ್ವಲ್ಪವೂ ಜಾಗ ಬಿಡದೇ ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ಇದನ್ನೂ ಓದಿ: ಬಡ ಹುಡುಗಿಯರ ಶಿಕ್ಷಣಕ್ಕೆ ಲಡಾಖ್‍ನ ವರ್ಜಿನ್ ಶಿಖರ ಏರುತ್ತಿರುವ ಗಟ್ಟಿಗಿತ್ತಿಯರು 

    ಬೆಕಿ ಹಾಲ್ಟ್ಗೆ ಅವರು ದೇಹಪೂರ್ತಿ ಟ್ಯಾಟೂ ಹಾಕಿಸಿಕೊಳ್ಳಲು ಒಂದು ವರ್ಷ ಸಮಯವನ್ನು ತೆಗೆದುಕೊಂಡಿದ್ದಾರೆ ಎಂದು ಅವರೇ ಹೇಳಿಕೊಂಡಿದ್ದಾಳೆ. ಈಕೆ ಇದಕ್ಕಾಗಿ 42 ಸಾವಿರ ಡಾಲರ್(ಸುಮಾರು 33.33 ಲಕ್ಷ ರೂಪಾಯಿ) ಖರ್ಚು ಮಾಡಿದ್ದಾಳೆ.

     

    View this post on Instagram

     

    A post shared by Becky Holt (@becky_holt_bolt)

    ಈ ಬಗ್ಗೆ ಹೇಳಿಕೊಂಡಿರುವ ಬೆಕಿ, ಜನನಾಂಗಕ್ಕೆ ನಾನು ಟ್ಯಾಟೂ ಹಾಕಿಸಿಕೊಳ್ಳುವಾಗ ತುಂಬಾ ಅಂದರೆ ತುಂಬಾ ನೋವಾಯಿತು. ಜೀವವೇ ಹೋದ ಅನುಭವವಾಯಿತು. ಆದರೆ ಜಗತ್ತಿನ ಕೆಲವೇ ಕೆಲವು ಮಹಿಳೆಯರು ಈ ಸಾಹಸ ಮಾಡುತ್ತಾರೆ. ದೇಹದ ಇಂಚಿಂಚೂ ಬಿಡದೇ ಟ್ಯಾಟೂ ಹಾಕಿಸಿಕೊಂಡಿರುವ ನಾನು ಆ ಜಾಗದಲ್ಲಿ ಬಿಟ್ಟರೆ ಅದು ದಾಖಲೆ ಆಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಎಷ್ಟೇ ನೋವಾದರೂ ಸಹಿಸಿಕೊಂಡು ತೀರಾ ಸೂಕ್ಷ್ಮಭಾಗದಲ್ಲಿಯೂ ಟ್ಯಾಟೂ ಹಾಕಿಸಿಕೊಂಡಿದ್ದೇನೆ ಎಂದಿದ್ದಾಳೆ. ಇದನ್ನೂ ಓದಿ:  16 ವರ್ಷದ ಮಗನ ಮುಂದೆಯೇ ತಂದೆಯನ್ನು ಹತ್ಯೆ ಮಾಡಿದ ದುಷ್ಕರ್ಮಿ 

    ಖಾಸಗಿ ಅಂಗದ ಒಳ ಭಾಗದಲ್ಲಿ ಟ್ಯಾಟೂ ಹಾಕಿಸುವಾಗ ಖುದ್ದು ಬೆಕಿ ಅವರೇ ಸುಸ್ತಾಯಿತ್ತು ಎಂದು ಹೇಳಿಕೊಂಡಿದ್ದಾಳೆ. ಆ ಒಂದು ಭಾಗಕ್ಕೆ ಹಚ್ಚೆ ಹಾಕುವಾಗ ಐದು ಬಾರಿ ವಿಶ್ರಾಂತಿ ತೆಗೆದುಕೊಂಡೆ. ಶ್ರಮಪಟ್ಟು ಅಂತೂ ಇಂತೂ ಯಶಸ್ವಿಯಾಗಿ ಟ್ಯಾಟೂ ಹಾಕುವ ಕಾರ್ಯ ಪೂರ್ಣಗೊಂಡಿತು ಎಂದಿದ್ದಾಳೆ.

    ತಾವು ಟ್ಯಾಟೂ ಹಾಕಿಸಿಕೊಂಡಿರುವ ಫೋಟೋಗಳನ್ನು ಇವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ದಾಖಲೆಯನ್ನು ಬರೆದಿದ್ದಾಳೆ.

    Live Tv
    [brid partner=56869869 player=32851 video=960834 autoplay=true]

  • ಅಗ್ಗದ ಬೆಲೆಯಲ್ಲಿ ಟ್ಯಾಟೂ ಹಾಕಿಸಿಕೊಳ್ಳುವಾಗ ಇರಲಿ ಎಚ್ಚರ- ಟ್ಯಾಟೂ ಹಾಕಿಸಿಕೊಂಡ ಇಬ್ಬರಿಗೆ HIV

    ಅಗ್ಗದ ಬೆಲೆಯಲ್ಲಿ ಟ್ಯಾಟೂ ಹಾಕಿಸಿಕೊಳ್ಳುವಾಗ ಇರಲಿ ಎಚ್ಚರ- ಟ್ಯಾಟೂ ಹಾಕಿಸಿಕೊಂಡ ಇಬ್ಬರಿಗೆ HIV

    ಲಕ್ನೋ: ಅಗ್ಗದ ಬೆಲೆಯೆಂದು ಹಚ್ಚೆ ಹಾಕಿಸಿಕೊಂಡಿದ್ದ ಇಬ್ಬರಿಗೆ ಹೆಚ್‍ಐವಿ ಸೋಂಕು ಕಾಣಿಸಿಕೊಂಡ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.

    ಉತ್ತರ ಪ್ರದೇಶದ ವಾರಣಾಸಿಯಲ್ಲಿ ಓರ್ವ ಯುವಕ ಹಾಗೂ ಓರ್ವ ಮಹಿಳೆ ಅಗ್ಗದ ಬೆಲೆಯಲ್ಲಿ ಹಚ್ಚೆ ಹಾಕಿಸಿಕೊಂಡಿದ್ದರು. ಇದಾದ ಬಳಿಕ ಟ್ಯಾಟೂ ಹಾಕಿಸಿಕೊಂಡಿದ್ದವರ ಆರೋಗ್ಯವು ಹದಗೆಡಲು ಪ್ರಾರಂಭಿಸಿದೆ. ಅಸ್ವಸ್ವಸ್ಥರಾದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

    ಪದೇ ಪದೇ ಜ್ವರ ಬರುತ್ತಿದ್ದುದನ್ನು ಗಮನಿಸಿದ್ದ ಅವರಿಗೆ ವೈರಲ್ ಟೈಫಾಯಿಡ್, ಮಲೇರಿಯಾ ಸೇರಿದಂತೆ ಹಲವಾರು ಪರೀಕ್ಷೆಗಳನ್ನು ನಡೆಸಲಾಯಿತಾದರೂ, ಯಾವುದೇ ಪ್ರಯೋಜನವಾಗಲಿಲ್ಲ. ಜ್ವರ ಕಡಿಮೆಯಾಗದಿದ್ದಾಗ, ಹೆಚ್‍ಐವಿ ಪರೀಕ್ಷೆ ಮಾಡಲಾಗಿದ್ದು, ಅದು ಪಾಸಿಟಿವ್ ಬಂದಿದೆ. ಇದನ್ನೂ ಓದಿ: ಜಾಗತಿಕ ಹೂಡಿಕೆದಾರರ ಸಮಾವೇಶ: ಟೋಕಿಯೋ ಕನ್ನಡ ಬಳಗಕ್ಕೆ ನಿರಾಣಿ ಆಹ್ವಾನ

    ಈ ಸಂದರ್ಭದಲ್ಲಿ ಅವರು ಯಾವುದೇ ಹೆಚ್‍ಐವಿ ವ್ಯಕ್ತಿಯನ್ನು ಸಂಪರ್ಕಿಸದೇ ಇರುವುದು ಬಯಲಾಗಿದ್ದು, ಎಲ್ಲರೂ ಕಡಿಮೆ ಬೆಲೆಯಲ್ಲಿ ಸಿಗುವ ಟ್ಯಾಟೂಗಳನ್ನು ಹಾಕಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

    ಈ ಬಗ್ಗೆ ತನಿಖೆ ನಡೆಸಿದಾಗ ಅದಕ್ಕೆ ಟ್ಯಾಟೂ ಪಾರ್ಲರ್‌ನವರು ಹಚ್ಚೆ ಸೂಜಿಗಳು ದುಬಾರಿಯಾಗಿದ್ದು, ಹಣವನ್ನು ಉಳಿಸಲು ಅದೇ ಸೂಜಿಗಳನ್ನು ಬಳಸುತ್ತಿದ್ದಾರೆ. ಇದೇ ರೀತಿ ಹೆಚ್‍ಐವಿ ಸೋಂಕಿತನಿಗೆ ಬಳಸಿದ್ದ ಸೂಜಿಯನ್ನೇ ಎಲ್ಲರಿಗೂ ಬಳಸಿ ಹಚ್ಚೆ ಹಾಕಿದ್ದಾರೆ ಎನ್ನುವ ವಿಷಯವು ಬಯಲಾಗಿದೆ. ಘಟನೆ ಸಂಬಂಧಿಸಿ ಅಗ್ಗದ ಟ್ಯಾಟೂ ಪಾರ್ಲರ್‌ಗಳ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಶಿಕ್ಷಕರ ನೇಮಕಾತಿ ಹಗರಣ – ತೃಣಮೂಲ ನಾಯಕನ ಪತ್ನಿ, ಮಗನಿಗೆ ಅಮಾನುಷವಾಗಿ ಥಳಿತ

    Live Tv
    [brid partner=56869869 player=32851 video=960834 autoplay=true]

  • ಬ್ಲ್ಯಾಕ್ ಏಲಿಯನ್‍ನಂತೆ ಬದಲಾದ ಇವನನ್ನು ನೋಡಿದವರು ಕೆಲಸವನ್ನೆ ಕೊಡುತ್ತಿಲ್ಲ – ಓದಿ ವಿಚಿತ್ರ ಕಥೆ

    ಬ್ಲ್ಯಾಕ್ ಏಲಿಯನ್‍ನಂತೆ ಬದಲಾದ ಇವನನ್ನು ನೋಡಿದವರು ಕೆಲಸವನ್ನೆ ಕೊಡುತ್ತಿಲ್ಲ – ಓದಿ ವಿಚಿತ್ರ ಕಥೆ

    ಪ್ಯಾರಿಸ್: ಕೆಲಸ ಸಿಗಬೇಕೆಂದು ಮನುಷ್ಯರು ಹಲವು ಸರ್ಕಸ್ ಮಾಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನನ್ನು ವಿಚಿತ್ರವಾಗಿ ರೂಪಾಂತರಿಸಿಕೊಂಡಿದ್ದಕ್ಕೆ ಕೆಲಸವೇ ಸಿಗದೇ ಪರದಾಡುತ್ತಿದ್ದಾನೆ.

    ಮೈಮೇಲೆಲ್ಲಾ ಟ್ಯಾಟೂ ಹಾಕಿಸಿಕೊಂಡು ‘ಬ್ಲ್ಯಾಕ್ ಏಲಿಯನ್’ ಆಗಿ ರೂಪಾಂತರವಾಗಿರುವ ಫ್ರೆಂಚ್‍ನ ಆಂಥೋನಿ ಲೋಫ್ರೆಡೊ ಈಗ ಎಲ್ಲಿಯೂ ಕೆಲಸ ಸಿಗುತ್ತಿಲ್ಲ ಎಂದು ಕೊರಗುತ್ತಿದ್ದಾನೆ. ಆಂಥೋನಿ ಲೋಫ್ರೆಡೊ ಹೇಗೆ ಕಾಣುತ್ತಾನೆ ಎಂಬುದರ ಆಧಾರದ ಮೇಲೆ ಜನರು ಅವನನ್ನು ನಿರ್ಣಯಿಸುತ್ತಿರುವುದರಿಂದ ಜೀವನ ನಡೆಸುವುದು ಕಷ್ಟವಾಗುತ್ತಿದೆ ಎಂದು ತನ್ನ ದುಃಖವನ್ನು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ನಲಪಾಡ್ ಮಾಡಿರೋ ಕೃತ್ಯಕ್ಕೂ ನಮಗೂ ಸಂಬಂಧವಿಲ್ಲ: ಅಶೋಕ್ ಪಟ್ಟಣ

    ತನ್ನನ್ನು ‘ಬ್ಲ್ಯಾಕ್ ಏಲಿಯನ್’ ಎಂದು ಕರೆದುಕೊಳ್ಳುವ ಆಂಥೋನಿ ತನ್ನ ಕಣ್ಣುಗುಡ್ಡೆಗಳು ಸೇರಿದಂತೆ ಮೈಮೇಲೆ ಕಪ್ಪು ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಅದರ ಹೊರತಾಗಿ, ಪಾಪ್ ಸ್ಟೈಲ್‍ನಲ್ಲಿ ತನ್ನ ಉಡುಗೆಯನ್ನು ಬದಲಾಯಿಸಿಕೊಂಡಿದ್ದಾನೆ. ಅವನ ಎಡಗೈ ಪಂಜವನ್ನು ಹೋಲುವಂತೆ ಮಾಡಲು ಅವನ ಎರಡು ಬೆರಳುಗಳನ್ನು ಕತ್ತರಿಸಿಕೊಂಡಿದ್ದಾನೆ.

    ಆಂಥೋನಿ 27ನೇ ವಯಸ್ಸಿನಲ್ಲಿ ತನ್ನ ಲುಕ್ ಬದಲಾಯಿಸಲು ಪ್ರಾರಂಭ ಮಾಡಿಕೊಂಡಿದ್ದಾನೆ. ಅದಕ್ಕೆ ಅವನಿಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಬಳಗವೇ ಇದೆ. ಇನ್‌‌ಸ್ಟಾದಲ್ಲಿ 1.2 ಮಿಲಿಯನ್ ಅನುಯಾಯಿಗಳಿದ್ದಾರೆ. ಸೊಶೀಯಲ್ ಮಿಡಿಯಾದಲ್ಲಿ ಭಾರೀ ಅನುಯಾಯಿಗಳನ್ನು ಹೊಂದಿದ್ದರೂ ಸಹ ನಿಜ ಜೀವನದಲ್ಲಿ ಆಂಥೋನಿ ಅವರು ಎಷ್ಟು ವಿಚಿತ್ರವಾಗಿ ಕಾಣುತ್ತಾರೆ ಎಂಬ ಕಾರಣದಿಂದಾಗಿ ಬಹಳಷ್ಟು ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇದನ್ನೂ ಓದಿ: ಪ್ರತಿಭಟನಾ ಶಿಬಿರ ಧ್ವಂಸಗೊಳಿಸಿದ ಶ್ರೀಲಂಕಾ ಭದ್ರತಾ ಪಡೆ 

    ಈ ಕುರಿತು ಆಂಥೋನಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನನ್ನ ಈ ರೂಪದಿಂದ ಯಾರು ನನಗೆ ಕೆಲಸ ಕೊಡುತ್ತಿಲ್ಲ. ನನ್ನ ಈ ರೂಪದಿಂದ ಬಹಳಷ್ಟು ಕೆಟ್ಟ ಸಂಗತಿಗಳು ನಡೆದಿದೆ. ಇದನ್ನು ನೋಡಿ ಕೆಲವರು ಧನಾತ್ಮಕವಾಗಿ ಅಭಿಪ್ರಾಯವನ್ನು ಕೊಡುತ್ತಿದ್ದು, ಇನ್ನೂ ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಾರೆ ಎಂದು ಮನಬಿಚ್ಚಿ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]