Tag: tatsama tadbhava film

  • ಮೇಘನಾ ರಾಜ್ ಹೊಸ ಚಿತ್ರ ಅನೌನ್ಸ್- ಶ್ರೀನಗರ ಕಿಟ್ಟಿಗೆ ಜೊತೆಯಾದ ನಟಿ

    ಮೇಘನಾ ರಾಜ್ ಹೊಸ ಚಿತ್ರ ಅನೌನ್ಸ್- ಶ್ರೀನಗರ ಕಿಟ್ಟಿಗೆ ಜೊತೆಯಾದ ನಟಿ

    ಸ್ಯಾಂಡಲ್‌ವುಡ್ ನಟಿ ಮೇಘನಾ ರಾಜ್ (Meghanaraj) ಅವರು ಗಣೇಶ ಹಬ್ಬದಂದು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಶ್ರೀನಗರ ಕಿಟ್ಟಿಗೆ (Srinagar Kitty) ನಾಯಕಿಯಾಗುವ ಮೂಲಕ ಮೇಘನಾ ಬಿಗ್ ಅಪ್‌ಡೇಟ್ ನೀಡಿದ್ದಾರೆ.

    ‘ತತ್ಸಮ ತದ್ಭವ’ ಚಿತ್ರ ಇತ್ತೀಚೆಗೆ ರಿಲೀಸ್ ಆಗಿ, ಉತ್ತಮ ಪ್ರಶಂಸೆ ಪಡೆಯಿತು. ಈ ಬೆನ್ನಲ್ಲೇ ಮತ್ತೊಂದು ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ವಿನಯ್ ಪ್ರಿತಮ್, ಗುರು ಹೆಗ್ಡೆ ನಿರ್ದೇಶನದ ‘ಅಮರ್ಥ’ (Amartha) ಎಂಬ ವಿಭಿನ್ನ ಸಿನಿಮಾದಲ್ಲಿ ಲೀಡಿಂಗ್ ಲೇಡಿಯಾಗಿ ನಟಿಸಲಿದ್ದಾರೆ.

     

    View this post on Instagram

     

    A post shared by Meghana Raj Sarja (@megsraj)

    ಮೊದಲ ಬಾರಿಗೆ ಶ್ರೀನಗರ ಕಿಟ್ಟಿಯೊಂದಿಗೆ ಹೀರೋಯಿನ್ ಆಗಿ ಮೇಘನಾ ರಾಜ್ ತೆರೆ ಹಂಚಿಕೊಳ್ತಿದ್ದಾರೆ. ಟೈಟಲ್ ಕೂಡ ಭಿನ್ನವಾಗಿದ್ದು, ಸಿನಿಮಾ ವಿಭಿನ್ನವಾಗಿರಲಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ:ದೊಡ್ಮನೆ ಹೀರೋಗೆ ಮೇಘಾ ಶೆಟ್ಟಿ ಹೀರೋಯಿನ್

    ಗಣೇಶ್ ಹಬ್ಬದಂದು ಹೊಸ ಸಿನಿಮಾದ ಪೋಸ್ಟರ್ ಹಂಚಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಶ್ರೀನಗರ ಕಿಟ್ಟಿ, ಶರ್ಟ್‌-ಪಂಚೆ-ಶಲ್ಯ ಧರಿಸಿ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆ ಮೇಘನಾ ಸೀರೆಯುಟ್ಟು ಕಂಗೊಳಿಸಿದ್ದಾರೆ. ಸದ್ಯ ಈ ಪೋಸ್ಟರ್ ಎಲ್ಲರ ಗಮನ ಸೆಳೆಯುತ್ತಿದೆ. ಸದ್ಯದಲ್ಲೇ ಸಿನಿಮಾದ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೊಸ ಹೇರ್‌ ಸ್ಟೈಲ್‌ ಮಾಡಿಸಿಕೊಂಡ ನಟಿ ಮೇಘನಾ ರಾಜ್

    ಹೊಸ ಹೇರ್‌ ಸ್ಟೈಲ್‌ ಮಾಡಿಸಿಕೊಂಡ ನಟಿ ಮೇಘನಾ ರಾಜ್

    ಸ್ಯಾಂಡಲ್‌ವುಡ್‌ಗೆ ‘ತತ್ಸಮ ತದ್ಭವ’ (Tatsama Tadbhava Film) ಚಿತ್ರದ ಮೂಲಕ ಮೇಘನಾ ರಾಜ್ ಮತ್ತೆ ತೆರೆಯ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಸಿನಿಮಾ ಶೂಟಿಂಗ್ ಪೂರ್ಣಗೊಂಡ ಬೆನ್ನಲ್ಲೇ ಕುಟುಂಬದ ಜೊತೆ ಕೂರ್ಗ್‌ಗೆ ಮೇಘನಾ ರಾಜ್ (Meghana Raj) ತೆರಳಿದ್ದರು. ಇದೀಗ ಹೊಸ ಹೈರ್ ಸ್ಟೈಲ್ ಮಾಡಿಸಿದ್ದಾರೆ. ಇದನ್ನೂ ಓದಿ:ಪ್ರೀತಿಯಿಂದ ಪ್ರಭಾಸ್‌ಗೆ ಅನುಷ್ಕಾ ಶೆಟ್ಟಿ ಏನೆಂದು ಕರೀತಾರೆ ಗೊತ್ತಾ?

    ಫೀಮೇಲ್ ಓರಿಯೆಂಟೆಡ್ ಚಿತ್ರದ ಮೂಲಕ ಮೇಘನಾ ರಾಜ್ ಮತ್ತೆ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಚಿತ್ರದ ಪೋಸ್ಟರ್ ಲುಕ್‌ನಿಂದ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಪುತ್ರ ರಾಯನ್ ಆರೈಕೆಯ ನಡುವೆಯೂ ಮೇಘನಾ ಸಿನಿಮಾ ಮಾಡಿ ಮುಗಿಸಿದ್ದಾರೆ.

    ಸಿನಿಮಾ ಶೂಟಿಂಗ್ ಪೂರ್ಣಗೊಂಡ ಬೆನ್ನಲ್ಲೇ ಕೂರ್ಗ್ (Coorg) ತೆರಳಿ ಕುಟುಂಬದ ಜೊತೆ ಮೇಘನಾ ರಾಜ್ ಮಸ್ತ್ ಆಗಿ ಏಂಜಾಯ್ ಮಾಡಿದ್ದಾರೆ. ಪ್ರವಾಸ ಮುಗಿದ ಬೆನ್ನಲ್ಲೇ ನಟಿ ಕೂದಲಿಗೆ ಕತ್ತರಿ ಹಾಕಿದ್ದಾರೆ. ಹೊಸ ಹೇರ್ ಸ್ಟೈಲಿನಲ್ಲಿ ಮೇಘನಾ ಗಮನ ಸೆಳೆಯುತ್ತಿದ್ದಾರೆ.

    ಮೇಘನಾ ಹೊಸ ಲುಕ್ ನೋಡ್ತಿದ್ದಂತೆ ಹೊಸ ಚಿತ್ರಕ್ಕೆ ಲುಕ್ ಬದಲಾವಣೆ ಮಾಡಿಕೊಂಡ್ರಾ? ಹೊಸ ಸಿನಿಮಾಗಾಗಿ ತಯಾರಿ ಮಾಡ್ತಿದ್ದಾರಾ ಎಂಬ ವಿಚಾರ ಇದೀಗ ಅನೇಕರ ಚರ್ಚೆಗೆ ಗ್ರಾಸವಾಗಿದೆ.

  • ಎಲೆಕ್ಷನ್ ಬಳಿಕ ರಿಲೀಸ್ ಆಗಲಿದೆ ಮೇಘನಾ ರಾಜ್ ಸಿನಿಮಾ

    ಎಲೆಕ್ಷನ್ ಬಳಿಕ ರಿಲೀಸ್ ಆಗಲಿದೆ ಮೇಘನಾ ರಾಜ್ ಸಿನಿಮಾ

    ಮೇಘನಾ ರಾಜ್ (Meghanaraj) ಅವರ ಸಿನಿಮಾಗಾಗಿ ಎದುರು ನೋಡ್ತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ತತ್ಸಮ ತದ್ಭವ’ ಸಿನಿಮಾ ಮೂಲಕ ಮತ್ತೆ ಮೇಘನಾ ರಾಜ್ ಸ್ಯಾಂಡಲ್‌ವುಡ್‌ಗೆ (Sandalwood ಕಂಬ್ಯಾಕ್ ಆಗಿದ್ದಾರೆ. ಸದ್ಯ ಈ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ.

    ಜೀವನದಲ್ಲಿ ಸಾಕಷ್ಟು ಸಂಕಷ್ಟದ ದಿನಗಳನ್ನ ಎದುರಿಸಿದ್ದರು. ಬಳಿಕ ಮಗ ರಾಯನ್ ಪಾಲನೆಯಲ್ಲಿ ಬ್ಯುಸಿಯಾಗಿದ್ದ ನಟಿ ಮತ್ತೆ ಸಿನಿಮಾ ಕಡೆ ಮುಖ ಮಾಡಿದ್ದಾರೆ. ಮಹಿಳಾ ಪ್ರಧಾನ ಚಿತ್ರದ ಮೂಲಕ ಮೇಘನಾ ಬರುತ್ತಿದ್ದಾರೆ.

    ಪನ್ನಗ ಭರಣ, ಸ್ಪೂರ್ತಿ ಅನಿಲ್ ನಿರ್ಮಾಣದ ‘ತತ್ಸಮ ತದ್ಭವ’ (Tatsama Tadbhava Film) ಸಸ್ಪೆನ್ಸ್ ಕ್ರೈಂ ಜಾನರ್ ಚಿತ್ರವಾಗಿದೆ. ಮೇಘನಾ ರಾಜ್ ಅವರು ಡಿಫರೆಂಟ್ ರೋಲ್‌ನಲ್ಲಿ ನಟಿಸಿದ್ದಾರೆ. ಶ್ರುತಿ ಕೃಷ್ಣ ಅವರು ಮನೋವೈದ್ಯ ಪಾತ್ರಕ್ಕೆ ಜೀವತುಂಬಿದ್ದಾರೆ. ಪ್ರಜ್ವಲ್ ದೇವರಾಜ್ ಅವರು ಖಡಕ್ ಪೊಲೀಸ್‌ ಆಧಿಕಾರಿಯಾಗಿ ನಟಿಸಿದ್ದಾರೆ. ಸದ್ಯ ಮೇಘನಾ ಏ.12ರಂದು ಕುಂಬಳಕಾಯಿ ಒಡೆಯುವ ಮೂಲಕ ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಇದನ್ನೂ ಓದಿ:ಪರಿಣಿತಿ ಜೊತೆಗಿನ ಎಂಗೇಜ್ ಮೆಂಟ್ ವಿಚಾರ: ಹೇಳ್ತೀನಿ ಎಂದು ತಪ್ಪಿಸಿಕೊಂಡ ಎಎಪಿ ಮುಖಂಡ

     

    ಚಿತ್ರಕ್ಕೆ ವಿಶಾಲ್ ಅತ್ರೇಯ ನಿರ್ದೇಶನ ಮಾಡಿದ್ದರೆ, ವಾಸುಕಿ ವೈಭವ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಎಲೆಕ್ಷನ್ ಮುಗಿದ ಮೇಲೆ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್‌ನಲ್ಲಿದ್ದಾರೆ ಚಿತ್ರತಂಡ. ಚುನಾವಣೆಯ ಬಳಿಕ ಮೇಘನಾ ನಟನೆಯ ಈ ಚಿತ್ರವನ್ನ ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದಾಗಿದೆ.

  • ಮೇಘನಾ ರಾಜ್ ಸಿನಿಮಾದಲ್ಲಿ ನಟಿ ಶ್ರುತಿ ಕೃಷ್ಣ

    ಮೇಘನಾ ರಾಜ್ ಸಿನಿಮಾದಲ್ಲಿ ನಟಿ ಶ್ರುತಿ ಕೃಷ್ಣ

    ಸ್ಯಾಂಡಲ್‌ವುಡ್‌ಗೆ (Sandalwood) ಕಮ್‌ಬ್ಯಾಕ್ ಆಗಿರುವ ಮೇಘನಾ ರಾಜ್ ಅವರು ಸದ್ಯ `ತತ್ಸಮ ತದ್ಭವ’ ಚಿತ್ರದ ಮೂಲಕ ಸುದ್ದಿಯಲ್ಲಿದ್ದಾರೆ. ದಿನದಿಂದ ದಿನಕ್ಕೆ ಚಿತ್ರದ ತಾರಾಗಣ ಹಿರಿದಾಗುತ್ತಿದೆ. ಮೇಘನಾಗೆ (Meghana Raj) ಸಾಥ್ ನೀಡಲು ಹಿರಿಯ ನಟಿ ಶ್ರುತಿ ಕೃಷ್ಣ ಸುಮನಳಾಗಿ ಈ ಚಿತ್ರದ ಭಾಗವಾಗಿದ್ದಾರೆ.

    ಪತಿ ಚಿರು ಸರ್ಜಾ ನಿಧನದ ಬಳಿಕ ಮಗನ ಆರೈಕೆಯಲ್ಲಿ ಬ್ಯುಸಿಯಾಗಿದ್ದ ಮೇಘನಾ ಈಗ ನಟನೆ ಅಂತಾ ಬ್ಯುಸಿಯಾಗಿದ್ದಾರೆ. ಮಹಿಳಾ ಪ್ರಧಾನ ಚಿತ್ರದ ಮೂಲಕ ಭಿನ್ನ ಕಥೆಯನ್ನ ತೆರೆಯ ಮೇಲೆ ಹೇಳಲು ಸಜ್ಜಾಗಿದ್ದಾರೆ. ಇದನ್ನೂ ಓದಿ: ಜ್ಯೂ.ಎನ್‌ಟಿಆರ್ ತೆಲುಗಿನ ಹೆಮ್ಮೆ ಎಂದ ಐಕಾನ್ ಸ್ಟಾರ್‌ ವಿರುದ್ಧ ಚರಣ್ ಫ್ಯಾನ್ಸ್ ಕಿಡಿ

     

    View this post on Instagram

     

    A post shared by Meghana Raj Sarja (@megsraj)

    ಪನ್ನಗ ಭರಣ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ `ತತ್ಸಮ ತದ್ಭವ’ (Tatsama Tadbhava) ಚಿತ್ರಕ್ಕೆ ವಿಶಾಲ್ ಅಥ್ರೇಯಾ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಶೋಷಣೆಗೆ ಒಳಗಾದ ಯುವತಿಯ ಕಥೆ ಈ ಚಿತ್ರದಲ್ಲಿದೆ.

     

    View this post on Instagram

     

    A post shared by Meghana Raj Sarja (@megsraj)

    ಮೇಘನಾ ರಾಜ್ ಜೊತೆ ಇದೀಗ ಕನ್ನಡದ ಹಿರಿಯ ನಟಿ ಶ್ರುತಿ ಕೃಷ್ಣ, ಗಿರಿಜಾ ಲೋಕೇಶ್, ನಾಗಾಭರಣ ಅವರು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಶ್ರುತಿ ಸುಮನಳಾಗಿ ಕಾಣಿಸಿಕೊಳ್ತಿದ್ದಾರೆ.

  • ಮೇಘನಾ ರಾಜ್ ನಟನೆಯ ಚಿತ್ರದಲ್ಲಿ ಅರವಿಂದ್ ಅಯ್ಯರ್, ಮಹತಿ ಸೇರ್ಪಡೆ

    ಮೇಘನಾ ರಾಜ್ ನಟನೆಯ ಚಿತ್ರದಲ್ಲಿ ಅರವಿಂದ್ ಅಯ್ಯರ್, ಮಹತಿ ಸೇರ್ಪಡೆ

    `ರಾಜಹುಲಿ’ (Rajahuli Actress) ನಟಿ ಮೇಘನಾ ರಾಜ್ (Meghana Raj) ಅವರು ತಮ್ಮ ಸಿನಿಮಾ ಅಪ್‌ಡೇಟ್ ಮೂಲಕ ಈಗಾಗಲೇ ಗುಡ್ ನ್ಯೂಸ್ ನೀಡಿದ್ದಾರೆ. ದಿನ ಕಳೆದಂತೆ ಚಿತ್ರತಂಡ ಹಿರಿದಾಗುತ್ತಿದೆ. ಅನೇಕ ಕಲಾವಿದರು ಸಿನಿಮಾ ತಂಡವನ್ನ ಸೇರಿಕೊಳ್ಳುತ್ತಿದ್ದಾರೆ. ಈಗ `ಕಿರಿಕ್ ಪಾರ್ಟಿ’ ಖ್ಯಾತಿಯ ಅರವಿಂದ್ ಅಯ್ಯರ್ ಮತ್ತು ಕಿರುತೆರೆ ನಟಿ ಮಹತಿ ಭಟ್ ಸೇರಿಕೊಳ್ತಿದ್ದಾರೆ.

    ಸ್ಯಾಂಡಲ್‌ವುಡ್ (Sandalwood) ನಟಿ ಮೇಘನಾ ರಾಜ್ ಅವರು `ತತ್ಸಮ ತದ್ಭವ’ (Tatsama Tadbhava) ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡ್ತಿದ್ದಾರೆ. ಕನ್ನಡ-ಮಲಯಾಳಂನಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಅನೇಕ ಕಲಾವಿದರು ಚಿತ್ರತಂಡವನ್ನ ಸೇರಿಕೊಳ್ತಿದ್ದಾರೆ. ವಿಶಾಲ್ ಅತ್ರೇಯಾ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರುತ್ತಿದೆ.

     

    View this post on Instagram

     

    A post shared by Meghana Raj Sarja (@megsraj)

    `ಕಿರಿಕ್ ಪಾರ್ಟಿ’ (Kirik Party) ಮತ್ತು ಭೀಮಸೇನ ನಳಮಹರಾಜ ಸಿನಿಮಾಗಳ ಮೂಲಕ ಗಮನ ಸೆಳೆದ ಅರವಿಂದ್ ಅವರು ಚಿತ್ರದಲ್ಲಿ ಪ್ರಮುಖ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಮ್ಯಾಥ್ಯೂ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಚಿತ್ರದ ಫಸ್ಟ್ ಲುಕ್ ನೆಟ್ಟಿಗರ ಗಮನ ಸೆಳೆಯುತ್ತಿದೆ.

     

    View this post on Instagram

     

    A post shared by Meghana Raj Sarja (@megsraj)

    ಇನ್ನೂ `ಗಟ್ಟಿಮೇಳ’ ಖ್ಯಾತಿಯ ಅಂಜಲಿ ಅಲಿಯಾಸ್ ಮಹತಿ ವೈಷ್ಣವಿ ಭಟ್ ನಟಿಸಿದ್ದಾರೆ. ಮೇಘನಾ ರಾಜ್ ಜೊತೆ ನಿಧಿ ಎಂಬ ಪಾತ್ರದಲ್ಲಿ ನಟಿಸಿ ಬಂದಿದ್ದಾರೆ. ಸದ್ಯದಲ್ಲೇ ಈ ಚಿತ್ರದ ಮತ್ತಷ್ಟು ಅಪ್‌ಡೇಟ್ ಸಿಗಲಿದೆ.