Tag: Tata Sumo

  • ಚಿಕ್ಕಬಳ್ಳಾಪುರದಲ್ಲಿ ನಿಂತಿದ್ದ ಟ್ಯಾಂಕರ್‌ಗೆ ಕಾರು ಡಿಕ್ಕಿ – 13 ಮಂದಿ ಬಲಿ

    ಚಿಕ್ಕಬಳ್ಳಾಪುರದಲ್ಲಿ ನಿಂತಿದ್ದ ಟ್ಯಾಂಕರ್‌ಗೆ ಕಾರು ಡಿಕ್ಕಿ – 13 ಮಂದಿ ಬಲಿ

    ಚಿಕ್ಕಬಳ್ಳಾಪುರ: ರಸ್ತೆಯ ಬದಿಯಲ್ಲಿ ನಿಂತಿದ್ದ ಟ್ಯಾಂಕರ್‌ಗೆ ಕಾರು ಡಿಕ್ಕಿಯಾಗಿ 13 ಮಂದಿ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರದ (Chikkaballpura) ಚಿತ್ರಾವತಿ ಬಳಿ ನಡೆದಿದೆ.

    ಆಂಧ್ರಪ್ರದೇಶ ನೋಂದಣಿಯ ಟಾಟಾ ಸುಮೋ (Tata Sumo) ಕಾರು ರಸ್ತೆ ಬದಿಯಲ್ಲಿ ನಿಂತಿದ್ದ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಇಂದು ಬೆಳಗ್ಗೆ 6:30ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ.

    ಈ ದುರ್ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇಂದು ಬೆಳಗ್ಗೆ ಅತಿಯಾದ ಮಂಜು ಇತ್ತು. ಈ ಕಾರಣಕ್ಕೆ ಚಾಲಕನಿಗೆ ರಸ್ತೆಯ ಗುರುತು ಸಿಗದೇ ನಿಂತಿದ್ದ ಟ್ಯಾಂಕರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿರಬಹುದು ಎಂದು ಶಂಕಿಸಲಾಗಿದೆ.

    ಪಬ್ಲಿಕ್ ಟಿವಿಗೆ ಪ್ರತ್ಯಕ್ಷದರ್ಶಿ ಪ್ರತಿಕ್ರಿಯಿಸಿ, ಬೆಳಗ್ಗೆ 6:30ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ಕಾರು ಬಹಳ ವೇಗವಾಗಿ ಸಂಚರಿಸುತಿತ್ತು. ಹೈದರಾಬಾದ್ – ಬೆಂಗಳೂರು ಹೈವೇಯಲ್ಲಿ ರಸ್ತೆಯ ಗುರುತು ಸಿಗದೇ ಈ ಕಾರು ಗುದ್ದಿರಬಹುದು. ಕಾರಿನಲ್ಲಿದ್ದ 14 ಮಂದಿ ಪೈಕಿ 10 ಮಂದಿ ಸ್ಥಳದಲ್ಲೇ ಸಾವನಪ್ಪಿದ್ದರೆ ಇಬ್ಬರು, ಮೂವರು ಮಾತ್ರ ಉಸಿರಾಡುತ್ತಿದ್ದರು ಎಂದು ತಿಳಿಸಿದ್ದಾರೆ ಇದನ್ನೂ ಓದಿ: 8 ಬಾರಿ ಟ್ರ್ಯಾಕ್ಟರ್‌ ಹರಿಸಿ ಸಹೋದರನನ್ನು ಕೊಂದೇ ಬಿಟ್ಟ

    ಮೃತರ ವಿವರ ಪತ್ತೆ:
    ಮೃತರು ಆಂಧ್ರದ ಗೊರೆಂಟ್ಲ ಮೂಲದವರಾಗಿದ್ದು ಬೆಂಗಳೂರಿನ ಹೊಂಗಸಂದ್ರದಲ್ಲಿ ವಾಸವಾಗಿದ್ದರು. ದಸರಾ ಹಬ್ಬಕ್ಕೆ ಗೊರೆಂಟ್ಲ ಗ್ರಾಮಕ್ಕೆ ತೆರಳಿದ್ದ ಇವರು ಹಬ್ಬ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅರುಣಾ, ನವೀನ್ ಕುಮಾರ್, ನಂಜುಂಡಪ್ಪ, ಪದ್ಮಾವತಿ, ಋತ್ವಿಕ್ ಕುಮಾರ್ ಮೃತಪಟ್ಟಿದ್ದಾರೆ. ಉಳಿದ ಹೆಸರು ಲಭ್ಯವಾಗಿಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟಯರ್ ಸ್ಟೋಟವಾಗಿ ಭೀಕರ ಅಪಘಾತ- ಮಗ, ಮಾವ ಸ್ಥಳದಲ್ಲೇ ಸಾವು

    ಟಯರ್ ಸ್ಟೋಟವಾಗಿ ಭೀಕರ ಅಪಘಾತ- ಮಗ, ಮಾವ ಸ್ಥಳದಲ್ಲೇ ಸಾವು

    ನೆಲಮಂಗಲ: ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟಾಟಾ ಸುಮೊ ಕಾರಿನ ಟಯರ್ ಸ್ಫೋಟವಾಗಿ ಕಾರು ಮೂರು ಪಲ್ಟಿಯಾಗಿರುವ ಘಟನೆ ಸಂಭವಿಸಿದೆ.

    ಮಹಮದ್ ಯೂಸುಫ್ (8), ಮಹಮದ್ ಸಾಬ್(65) ಮೃತರಾಗಿದ್ದಾರೆ. ಇವರು ಮೂಲತಃ ಕೊಪ್ಪಳದ ಗಂಗಾವತಿ ಮೂಲದವರಾಗಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಬಳಿ ಈ ಅಪಘಾತ ಸಂಭವಿಸಿದೆ.

    ಬೆಂಗಳೂರಿನ ಭೈರತಿಯಲ್ಲಿ ವಾಸ ಇದ್ದು, ಗಂಗಾವತಿಯಿಂದ ಮಗಳ ಮನೆಗೆ ಬಂದ್ದಿದ ತಂದೆ ಮಹಮದ್ ಸಬ್ ಜೊತೆಗೆ ಎಲ್ಲರು ಸೇರಿ ಜಾವಗಲ್ ದರ್ಗಾ ಕಡೆ ಪಯಣ ಮಾಡುತಿದ್ದ ವೇಳೆ ಅಪಘಾತ ಸಂಭವಿಸಿದೆ. ಇದನ್ನೂ ಓದಿ:  ಪ್ರಧಾನಿ ಮೋದಿಗೆ ನನ್ನ ಮೇಲೆ ಅಸೂಯೆ: ಮಮತಾ ಬ್ಯಾನರ್ಜಿ

    ಕಾರು ಚಾಲಕ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದು, ಕಾರಿನಲ್ಲಿ ನನ್ನ ಕುಟುಂಬದ ಆರು ಮಂದಿ ಇದ್ದರು. ಟಯರ್ ಸ್ಟೋಟಗೊಂಡು ಕಾರು ಮೂರು ಪಲ್ಟಿಯಾಯಿತು. ನನ್ನ ಮಗ ಹಾಗೂ ಮಾವ ಸ್ಥಳದಲ್ಲಿ ಸಾವನಪ್ಪಿದ್ದಾರೆ ಎಂದು ಮೃತ ಮಗುವಿನ ತಂದೆ ಹೇಳಿಕೆ ನೀಡಿದ್ದಾರೆ. ಮೃತರ ಕುಟುಂಬದಲ್ಲಿ ಆಕ್ರಂಧನ ಮುಗಿಲು ಮುಟ್ಟಿದ್ದು, ನೆಲಮಂಗಲ ಸಂಚಾರಿ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಿದ್ಯುತ್ ಕಂಬಕ್ಕೆ ಟಾಟಾ ಸುಮೋ ಡಿಕ್ಕಿ – ಮಹಿಳೆ ಸಾವು, ಮೂವರ ಸ್ಥಿತಿ ಗಂಭೀರ

    ವಿದ್ಯುತ್ ಕಂಬಕ್ಕೆ ಟಾಟಾ ಸುಮೋ ಡಿಕ್ಕಿ – ಮಹಿಳೆ ಸಾವು, ಮೂವರ ಸ್ಥಿತಿ ಗಂಭೀರ

    ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಟಾಟಾ ಸುಮೋ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮಹಿಳೆ ಮೃತಪಟ್ಟು, ಮೂವರ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ವರನಹೊಂಡ ಎಂಬಲ್ಲಿ ನಡೆದಿದೆ.

    ಮೃತಪಟ್ಟ ಮಹಿಳೆಯನ್ನು ನೀಲಮ್ಮ (60) ಎಂದು ಗುರುತಿಸಲಾಗಿದ್ದು, ಗಂಭೀರ ಗಾಯಗೊಂಡ ಮೂವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ತೀರ್ಥಹಳ್ಳಿ ರಸ್ತೆಯ ಜಂಬಳ್ಳಿ ಕಡೆಯಿಂದ ರಿಪ್ಪನ್ ಪೇಟೆಗೆ ಆಗಮಿಸುತ್ತಿದ್ದ ಟಾಟಾ ಸುಮೋದಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು. ಘಟನೆ ಕುರಿತು ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮನೆಗುರುಳಿದ ಮರ- ಪಾರಾದ ಉಡುಪಿ ವೆಂಕಟರಮಣ ಐತಾಳ್ ಅನುಭವ ಭಯಾನಕ

  • ಕ್ವಾಲಿಸ್ ಡಿಕ್ಕಿಯಾದ ರಭಸಕ್ಕೆ ಟಾಟಾಸುಮೋ ಪಲ್ಟಿ- ನಾಲ್ವರ ದಾರುಣ ಸಾವು

    ಕ್ವಾಲಿಸ್ ಡಿಕ್ಕಿಯಾದ ರಭಸಕ್ಕೆ ಟಾಟಾಸುಮೋ ಪಲ್ಟಿ- ನಾಲ್ವರ ದಾರುಣ ಸಾವು

    ಹಾಸನ: ನಗರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ನಾಲ್ವರು ಮೃತಪಟ್ಟು 14 ಮಂದಿ ಗಾಯಗೊಂಡಿದ್ದಾರೆ.

    ಹಾಸನ ನಗರದ ಹೊರವಲಯದ ಕೆಂಚಟ್ಟಳ್ಳಿ ಬಳಿ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ.  ಟಾಟಾಸುಮೋಗೆ ಹಿಂಬದಿಯಿಂದ ಕ್ವಾಲೀಸ್ ಕಾರ್ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕ್ವಾಲಿಸ್ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.

    ಮೃತರನ್ನು ಪ್ರದೀಪ್ ಕುಮಾರ್, ಚಂದ್ರಶೇಖರ್, ನವೀನ್ ಕುಮಾರ್, ಸುನೀಲ್ ಕುಮಾರ್ ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ ಟಾಟಾಸುಮೋ ಪಲ್ಟಿಯಾಗಿದ್ದು, ಅದರಲ್ಲಿದ್ದ 10 ಮಂದಿಯೂ ಗಾಯಗೊಂಡಿದ್ದಾರೆ. ಎಲ್ಲರೂ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಂಚಟ್ಟಳ್ಳಿ ಬಳಿ ಹಮ್ಸ್ ಇದ್ದು, ಟಾಟಾಸುಮೋ ಹಮ್ಸ್ ಬಳಿ ಸ್ಲೋ ಮಾಡಿದಾಗ ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಕ್ವಾಲಿಸ್ ಡಿಕ್ಕಿಯೊಡೆದಿದೆ.

    ಟಾಟಾಸುಮೋದಲ್ಲಿದ್ದ ಎಲ್ಲರೂ ಮಳಬಾಗಿಲು ಮೂಲದವರಾಗಿದ್ದ ಕುಟುಂಬ ಸಮೇತರಾಗಿ ಧರ್ಮಸ್ಥಳಕ್ಕೆ ಹೋಗುತ್ತಿದ್ದರು. ಕ್ವಾಲಿಸ್‍ನಲ್ಲಿದ್ದವರು ಕೆಜಿಎಫ್ ಮೂಲದವರಾಗಿದ್ದು ಉಡುಪಿಗೆ ಮದುವೆಗೆ ಹೋಗುತ್ತಿದ್ದರು. ವಿಷಯ ತಿಳಿದ ತಕ್ಷಣ ಸಂಚಾರಿ ಪೊಲೀಸರು, ಹಾಸನ ಎಸ್‍ಪಿ ಶ್ರೀನಿವಾಸ್‍ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಹಾಸನ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಟೆಂಪೋ ಡಿಕ್ಕಿಯ ರಭಸಕ್ಕೆ ಟಾಟಾ ಸುಮೋ ಅರ್ಧ ಭಾಗ ಛಿದ್ರ- 6 ಮಂದಿ ಸಾವು

    ಟೆಂಪೋ ಡಿಕ್ಕಿಯ ರಭಸಕ್ಕೆ ಟಾಟಾ ಸುಮೋ ಅರ್ಧ ಭಾಗ ಛಿದ್ರ- 6 ಮಂದಿ ಸಾವು

    – ಹತ್ತು ಮಂದಿಗೆ ಗಂಭೀರ ಗಾಯ

    ಮಂಡ್ಯ: ಟೆಂಪೋ ಹಾಗೂ ಟಾಟಾ ಸುಮೋ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 6 ಜನರು ಮೃತಪಟ್ಟ ಘಟನೆ ನಾಗಮಂಗಲ ತಾಲೂಕಿನ ಅಂಚೆಚಿಟ್ಟನಹಳ್ಳಿ ಗ್ರಾಮದ ಬಳಿ ನಡೆದಿದೆ.

    ಮೃತಪಟ್ಟಿರುವ ಆರು ಮಂದಿಯಲ್ಲಿ ಐವರನ್ನು ಬಾಕರ್ ಶರೀಫ್ (50), ಮೆಹಬೂಬ್ ಖಾನ್ (47), ನವ್ ಸಾದ್ (45), ಮಕ್ಸೂದ್ (35), ಪಾಯಿರ್ ಪಾಷಾ ಎಂದು ಗುರುತಿಸಲಾಗಿದೆ. ಈ ಪೈಕಿ ಓರ್ವ ಮೃತರ ಗುರುತು ಪತ್ತೆಯಾಗಿಲ್ಲ. ಆದರೆ ಮೃತರು ನಾಗಮಂಗಲ ತಾಲೂಕಿನವರು ಎಂದು ಮಾಹಿತಿ ಲಭ್ಯವಾಗಿದೆ.

    ಟೆಂಪೋ ನಾಗಮಂಗಲದ ಸ್ಟಾರ್ ಗ್ರೂಪ್ ಕಂಪನಿಗೆ ಸೇರಿದ್ದು, ಚಾಲಕ ವೇಗವಾಗಿ ನಾಗಮಂಗಲದ ಕಡೆಗೆ ಹೋಗುತ್ತಿದ್ದ. ಇದೇ ವೇಳೆ ಆಲ್ಫನೊ ಎಂಬ ಹಣಕಾಸು ಸಂಸ್ಥೆಯ ಸದಸ್ಯರು ಸಂಸ್ಥೆಗೆ ಸೇರಿದ್ದ ಟಾಟಾ ಸುಮೋದಲ್ಲಿ ನಾಗಮಂಗಲ ಕಡೆಯಿಂದ ಬೆಳ್ಳೂರು ಕ್ರಾಸ್ ಕಡೆಗೆ ಪ್ರಯಾಣಿಸುತ್ತಿದ್ದರು. ಆದರೆ ನಾಗಮಂಗಲ ತಾಲೂಕಿನ ಅಂಚೆಚಿಟ್ಟನಹಳ್ಳಿ ಗ್ರಾಮದ ಬಳಿ ಚಾಲಕರ ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಟಾಟಾ ಸುಮೋ ಅರ್ಧ ಭಾಗ ಛಿದ್ರ ಛಿದ್ರವಾಗಿದೆ.

    ಟಾಟಾ ಸುಮೋದ ಮುಂಭಾಗದಲ್ಲಿ ಕುಳಿತಿದ್ದವರು ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯನ್ನು ಕಂಡ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ, ಗಾಯಾಳುಗಳನ್ನು ಆದಿಚುಂಚನಗಿರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಪೈಕಿ ಇಬ್ಬರು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಒಟ್ಟು 10 ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರಲ್ಲಿ 9 ಜನರ ಸ್ಥಿತಿ ಚಿಂತಾಜನಕವಾಗಿದೆ.

    ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಮೃತ ಹಾಗೂ ಗಂಭೀರವಾಗಿ ಗಾಯಗೊಂಡವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬೆಳ್ಳೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಡಿವೈಡರ್‌ಗೆ ಡಿಕ್ಕಿಯಾಗಿ ಟಾಟಾ ಸುಮೋ ಪಲ್ಟಿ- ಇಬ್ಬರು ಸಾವು, ಮೂವರು ಗಂಭೀರ

    ಡಿವೈಡರ್‌ಗೆ ಡಿಕ್ಕಿಯಾಗಿ ಟಾಟಾ ಸುಮೋ ಪಲ್ಟಿ- ಇಬ್ಬರು ಸಾವು, ಮೂವರು ಗಂಭೀರ

    ಬೆಂಗಳೂರು: ಡಿವೈಡರ್‌ಗೆ ಟಾಟಾ ಸುಮೋ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆಯೊಂದು ನೆಲಮಂಗಲ ಸಮೀಪದ ಟಿ. ಬೇಗೂರು ಗ್ರಾಮದ ಬಳಿ ನಡೆದಿದೆ.

    ಧರ್ಮ(27) ಹಾಗೂ ನರಸಿಂಹಮೂರ್ತಿ(42) ಮೃತ ದುರ್ದೈವಿಗಳು. ತುಮಕೂರು ಬೆಂಗಳೂರು ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಪರಿಣಾಮ ಸ್ಥಳದಲ್ಲೇ ಚಾಲಕ ಧರ್ಮ ಹಾಗೂ ನರಸಿಂಹಮೂರ್ತಿ ಮೃತಪಟ್ಟಿದ್ದಾರೆ.

    ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯವಾಗಿದ್ದು. ಗಾಯಾಳುಗಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಪಘಾತದಿಂದ ಕಿಲೋಮೀಟರ್ ದೂರ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ. ನೆಲಮಂಗಲ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಬಗ್ಗೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟಾಟಾ ಸುಮೋ, ಸ್ವಿಫ್ಟ್ ಕಾರ್ ಡಿಕ್ಕಿ- ಸರ್ಕಾರಿ ಮಹಿಳಾ ಅಧಿಕಾರಿ ಗಂಭೀರ

    ಟಾಟಾ ಸುಮೋ, ಸ್ವಿಫ್ಟ್ ಕಾರ್ ಡಿಕ್ಕಿ- ಸರ್ಕಾರಿ ಮಹಿಳಾ ಅಧಿಕಾರಿ ಗಂಭೀರ

    ಚಿಕ್ಕಬಳ್ಳಾಪುರ: ಸರ್ಕಾರಿ ಟಾಟಾ ಸುಮೋ ಹಾಗೂ ಖಾಸಗಿ ಸ್ವಿಫ್ಟ್ ಕಾರಿನ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸರ್ಕಾರಿ ಮಹಿಳಾ ಆಧಿಕಾರಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 7ರ ತೀಲಕುಂಟಹಳ್ಳಿ ಕ್ರಾಸ್ ಬಳಿ ನಡೆದಿದೆ.

    ಅಪಘಾತದಲ್ಲಿ ಗುಡಿಬಂಡೆ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಜಯಲಕ್ಷ್ಮಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಜಯಲಕ್ಷ್ಮಿಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

    ಸ್ವಿಫ್ಟ್ ಕಾರಿನ ಟೈರ್ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಕಾರು, ಟಾಟಾ ಸುಮೋಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದಿಂದಾಗಿ ಟಾಟಾ ಸುಮೋ ಪಲ್ಟಿಯಾಗಿದ್ದು, ಸ್ವಿಫ್ಟ್ ಕಾರು ನಜ್ಜುಗುಜ್ಜಾಗಿದೆ.

    ಈ ಸಂಬಂಧ ಗುಡಿಬಂಡೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಾಲಾ ಬಸ್, ಟಾಟಾ ಸುಮೋ ಮುಖಾಮುಖಿ ಡಿಕ್ಕಿಯಾಗಿ ಜಖಂಗೊಂಡ್ರು ಪ್ರಯಾಣಿಕರೆಲ್ಲರೂ ಪಾರು!

    ಶಾಲಾ ಬಸ್, ಟಾಟಾ ಸುಮೋ ಮುಖಾಮುಖಿ ಡಿಕ್ಕಿಯಾಗಿ ಜಖಂಗೊಂಡ್ರು ಪ್ರಯಾಣಿಕರೆಲ್ಲರೂ ಪಾರು!

    ಬೆಂಗಳೂರು: ಶಾಲಾ ಬಸ್ ಮತ್ತು ಟಾಟಾ ಸುಮೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಭಾರೀ ಅನಾಹುತ ತಪ್ಪಿದ್ದಂತಾಗಿದೆ.

    ಈ ಘಟನೆ ಆನೇಕಲ್ ತಾಲೂಕಿನ ಸರ್ಜಾಪುರ ರಸ್ತೆಯ ವಿ ಕಲ್ಲಹಳ್ಳಿ ಬಳಿ ಇಂದು ಬೆಳಗ್ಗೆ ನಡೆದಿದೆ. ಶಾಲಾ ಬಸ್ ನಲ್ಲಿ ಸುಮಾರು ಹತ್ತು ಜನ ವಿದ್ಯಾರ್ಥಿಗಳು ಇದ್ದರು. ಟಾಟಾ ಸುಮೋದಲ್ಲಿ ನಾಲ್ವರು ಇದ್ದರು ಎನ್ನಲಾಗಿದೆ.

    ಶಾಲಾ ಬಸ್ ಮತ್ತು ಟಾಟಾ ಸುಮೋ ಸರ್ಜಾಪುರ ರಸ್ತೆಯ ವಿ ಕಲ್ಲಹಳ್ಳಿ ಬಳಿ ಬರುತ್ತಿದ್ದಂತೆಯೇ ಎರಡೂ ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದಿದೆ. ಸದ್ಯ ಈ ಘಟನೆಯಿಂದ ಯಾವುದೇ ಪ್ರಾಣಾಪಾಯವಿಲ್ಲ ಸಂಭವಿಸಿಲ್ಲ. ಎಲ್ಲರೂ ಭಾರೀ ಅನಾಹುತದಿಂದ ಪಾರಾಗಿದ್ದಾರೆ.

    ಘಟನೆ ನಡೆದ ಸ್ಥಳಕ್ಕೆ ಸರ್ಜಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಅಪಘಾತದ ರಭಸಕ್ಕೆ ಶಾಲಾ ಬಸ್ ಮತ್ತು ಟಾಟಾ ಸುಮೋ ಎರಡು ವಾಹನಗಳ ಮುಂಭಾಗ ಜಖಂ ಆಗಿವೆ.