Tag: Tata Nexon

  • ಟಾಟಾ ಕಾರುಗಳ ಬೆಲೆ ಭಾರೀ ಕಡಿತ

    ಟಾಟಾ ಕಾರುಗಳ ಬೆಲೆ ಭಾರೀ ಕಡಿತ

    ಟಾಟಾ ಮೋಟಾರ್ಸ್ (Tata Motors) ಕಂಪನಿಯು ಪೆಟ್ರೋಲ್, ಡೀಸೆಲ್ ಮತ್ತು CNG ಕಾರುಗಳು ಮತ್ತು SUVಗಳ ಬೆಲೆಯನ್ನು ಬೆಲೆಯನ್ನು 1.80 ಲಕ್ಷ ರೂ.ವರೆಗೆ ಕಡಿತಗೊಳಿಸಿದೆ. ಟಿಯಾಗೋ, ಟಿಗೋರ್, ನೆಕ್ಸಾನ್, ಆಲ್ಟ್ರೋಜ್, ಹ್ಯಾರಿಯರ್ ಮತ್ತು ಸಫಾರಿ (Tiago, Tigor, Nexon, Altroz, Harrier, Safari) ಕಾರುಗಳ ಬೆಲೆಯನ್ನು ಕಂಪನಿ ಕಡಿತಗೊಳಿಸಿದೆ. ಅಕ್ಟೋಬರ್ 31ರವರೆಗೆ ಮಾತ್ರ ಈ ಕೊಡುಗೆ ಇರುತ್ತದೆ.

    ಯಾವ ಯಾವ ಕಾರಿನ ಬೆಲೆ ಎಷ್ಟು ಕಡಿತ..?

    ಟಾಟಾ ಕಂಪನಿಯು ಕಾರುಗಳ ಮಾದರಿ ಮತ್ತು ಅವುಗಳ ಆವೃತ್ತಿಗೆ ಅನುಗುಣವಾಗಿ ಬೆಲೆ ಕಡಿತ ಮಾಡಿದೆ.

    ಸಫಾರಿ: ಬೆಲೆ ಕಡಿತ 1.80 ಲಕ್ಷ
    ಬೆಲೆ ಕಡಿತದ ನಂತರ ಸಫಾರಿ ಕಾರಿನ ಬೆಲೆ 15.49 ಲಕ್ಷದಿಂದ – 25.09 ಲಕ್ಷದವರೆಗೆ ಇದೆ.

    ಹ್ಯಾರಿಯರ್: ಬೆಲೆ ಕಡಿತ 1.60 ಲಕ್ಷ
    ಬೆಲೆ ಕಡಿತದ ನಂತರ ಹ್ಯಾರಿಯರ್ ಕಾರಿನ ಬೆಲೆ 14.99 ಲಕ್ಷದಿಂದ – 23.99 ಲಕ್ಷದವರೆಗೆ ಇದೆ.

    ನೆಕ್ಸಾನ್: ಬೆಲೆ ಕಡಿತ 80 ಸಾವಿರ
    ಬೆಲೆ ಕಡಿತದ ನಂತರ ನೆಕ್ಸಾನ್ ಕಾರಿನ ಬೆಲೆ 7.99 ಲಕ್ಷದಿಂದ – 15.29 ಲಕ್ಷದವರೆಗೆ ಇದೆ.

    ಟಿಯಾಗೋ: ಬೆಲೆ ಕಡಿತ 65 ಸಾವಿರ
    ಬೆಲೆ ಕಡಿತದ ನಂತರ ಟಿಯಾಗೋ ಕಾರಿನ ಬೆಲೆ 4.99 ಲಕ್ಷದಿಂದ – 8.74 ಲಕ್ಷದವರೆಗೆ ಇದೆ.

    ಆಲ್ಟ್ರೋಜ್: ಬೆಲೆ ಕಡಿತ 45 ಸಾವಿರ
    ಬೆಲೆ ಕಡಿತದ ನಂತರ ಆಲ್ಟ್ರೋಜ್ ಕಾರಿನ ಬೆಲೆ 6.49 ಲಕ್ಷದಿಂದ – 11.15 ಲಕ್ಷದವರೆಗೆ ಇದೆ.

    ಟಿಗೋರ್: ಬೆಲೆ ಕಡಿತ 30 ಸಾವಿರ
    ಬೆಲೆ ಕಡಿತದ ನಂತರ ಟಿಯಾಗೋ ಕಾರಿನ ಬೆಲೆ 5.99 ಲಕ್ಷದಿಂದ – 9.39 ಲಕ್ಷದವರೆಗೆ ಇದೆ.

    ಪಂಚ್ ಕಾರಿನ ಬೆಲೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ.

    ಬೆಲೆ ಕಡಿತ ಮಾಡಿರುವ ಟಾಟಾ ಮೋಟಾರ್ಸ್ ಈ ತಿಂಗಳು ಅಥವಾ ಮುಂದಿನ ತಿಂಗಳು ತನ್ನ ಕಾರುಗಳ ಮೇಲೆ ಬೇರೆ ಯಾವುದೇ ರಿಯಾಯಿತಿಗಳನ್ನು ನೀಡುವುದಿಲ್ಲ. ನೀವು ನಿಮ್ಮ ಹಳೆಯ ಕಾರನ್ನು ಹೊಸ ಕಾರಿಗೆ ವಿನಿಮಯ ಮಾಡಿಕೊಂಡರೆ ಕಂಪನಿಯು ಹೆಚ್ಚುವರಿಯಾಗಿ ರೂ 45,000 ದವರೆಗೆ ವಿನಿಮಯ ಪ್ರಯೋಜನವನ್ನು ನೀಡುತ್ತಿದೆ.

    ಬೆಲೆ ಕಡಿತದ ಪ್ರಯೋಜನವನ್ನು ಪಡೆದು ಈ ಹಬ್ಬದ ಋತುವಿನಲ್ಲಿ ಒಂದು ಕಾರನ್ನು ಕೊಳ್ಳಿರಿ.

  • ನೈಸ್ ರಸ್ತೆ ಅಪಘಾತ – ಗಾಯಗೊಂಡಿದ್ದ ಇನ್ನೊಂದು ಮಗು ಆಸ್ಪತ್ರೆಯಲ್ಲಿ ಸಾವು

    ನೈಸ್ ರಸ್ತೆ ಅಪಘಾತ – ಗಾಯಗೊಂಡಿದ್ದ ಇನ್ನೊಂದು ಮಗು ಆಸ್ಪತ್ರೆಯಲ್ಲಿ ಸಾವು

    ಬೆಂಗಳೂರು: ನೈಸ್ ರಸ್ತೆಯಲ್ಲಿ (Nice Road) ನಡೆದ ಕಾರು (Car) ಮತ್ತು ಲಾರಿ (Lorry) ಭೀಕರ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಾಯಿ ಹಾಗೂ ಮಗು ಕಾರಿನಲ್ಲೇ ಸಜೀವ ದಹನವಾಗಿದ್ದಾರೆ. ಘಟನೆಯಿಂದ ಗಂಭೀರ ಗಾಯಗೊಂಡಿದ್ದ ತಂದೆ ಹಾಗೂ ಇನ್ನೊಂದು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೇ ಮಗು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದೆ.

    ಬೆಂಗಳೂರು ಹೊರವಲಯದ ನೈಸ್ ರಸ್ತೆಯಲ್ಲಿ ಕಾರು ಲಾರಿಗೆ ಡಿಕ್ಕಿಯಾಗಿ ರಸ್ತೆ ಪಕ್ಕದ ಡಿವೈಡರ್‌ಗೆ ಡಿಕ್ಕಿಯಾಗಿತ್ತು. ಪರಿಣಾಮ, ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ತಾಯಿ ಸಿಂಧು (31), ಮಗಳು ಕುಷಾವಿ (2) ಕಾರಿನಲ್ಲೇ ಸಜೀವ ದಹನವಾಗಿದ್ದರು. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ತಂದೆ ಮಹೇಂದ್ರನ್ ಮತ್ತು ಇನ್ನೊಂದು ಮಗು ಪ್ರಣವಿಯನ್ನು (6) ಉತ್ತರ ಹಳ್ಳಿಯ ಸಂತೋಷ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಿಸದೇ ಮಗು ಪ್ರಣವಿ ಕೂಡಾ ಸಾವನ್ನಪ್ಪಿದ್ದಾಳೆ. ತಂದೆ ಮಹೇಂದ್ರನ್‌ಗೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ಕಾರು, ಲಾರಿ ನಡುವೆ ಭೀಕರ ಅಪಘಾತ – ತಾಯಿ, ಮಗು ಸ್ಥಳದಲ್ಲೇ ಸಾವು

    ಅಪಘಾತವಾದ (Accident) ವೇಳೆ ಕಾರಿನಲ್ಲಿದ್ದ ಪತಿ ಮಹೇಂದ್ರನ್ ಒಂದು ಮಗುವನ್ನು ಕಾರಿನಿಂದ ಹೊರಗೆ ಎಳೆದುಕೊಂಡಿದ್ದಾರೆ. ಆದರೆ ಪತ್ನಿ ಸಿಂಧು ಹಾಗೂ ಮತ್ತೊಂದು ಮಗುವಿನ ರಕ್ಷಣೆ ಸಾಧ್ಯವಾಗದೇ ಇಬ್ಬರೂ ಬೆಂಕಿಗೆ ಆಹುತಿಯಾಗಿದ್ದಾರೆ. ನಿದ್ರೆ ಮಂಪರಿನಲ್ಲಿ ಅಪಘಾತ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಸ್ಥಳದಲ್ಲಿ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಇರುವುದೊಂದೇ ಸನಾತನ ಧರ್ಮ, ಉಳಿದೆಲ್ಲವೂ ಪಂಥಗಳು: ಯೋಗಿ

    ಕಾರು ಮೈಸೂರು ರಸ್ತೆ ಕಡೆಯಿಂದ ಕನಕಪುರದ ಕಡೆಗೆ ಹೋಗುತ್ತಿದ್ದು, ಸೋಂಪುರ ಜಂಕ್ಷನ್ ಬಳಿ ಕಂಟ್ರೋಲ್ ತಪ್ಪಿ ಡಿವೈಡರ್ ದಾಟಿ ಎದುರು ರಸ್ತೆಗೆ ಹೋಗಿ ಪಲ್ಟಿಯಾಗಿದೆ. ಈ ವೇಳೆ ಕನಕಪುರ ರಸ್ತೆ ಕಡೆಯಿಂದ ಮೈಸೂರು ರಸ್ತೆ ಕಡೆಗೆ ಎದುರು ರಸ್ತೆಯಲ್ಲಿ ಬರುತ್ತಿದ್ದ ಲಾರಿ ಚಾಲಕ ಕಾರು ರಸ್ತೆಗೆ ಬಂದಿದ್ದನ್ನು ನೋಡಿ ಗಾಬರಿಗೊಂಡು ಲಾರಿಯನ್ನು ಎಡಕ್ಕೆ ತೆಗೆದುಕೊಂಡ ಪರಿಣಾಮ ಲಾರಿ ಪಲ್ಟಿ ಹೊಡೆದಿದೆ. ಲಾರಿ ಕೂಡ ಸಂಪೂರ್ಣ ಜಖಂ ಆಗಿದೆ. ಸುಟ್ಟು ಕರಕಲಾದ ಕಾರನ್ನು ತಲಘಟ್ಟಪುರ ಸಂಚಾರಿ ಪೊಲೀಸ್ ಠಾಣೆಗೆ ಪೊಲೀಸರು ಶಿಫ್ಟ್ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ನಡುರಸ್ತೆಯಲ್ಲಿ ಹೊತ್ತಿ ಉರಿದ ಬೃಹತ್ ಗಾತ್ರದ ಕ್ರೇನ್

    ಲಾರಿ ಪಲ್ಟಿಯಾದ ಪರಿಣಾಮ ಲಾರಿ ಚಾಲಕ ಭಾರತಿ ರಾಜನ್‌ಗೂ ಗಾಯಗಳಾಗಿವೆ. ಸ್ಥಳಕ್ಕೆ ದಕ್ಷಿಣ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಗಳವಾರ ಬೆಳಗಿನ ಜಾವ ಈ ಘಟನೆ ನಡೆದಿದೆ. ಮಹೇಂದ್ರನ್ ಟಾಟ ನೆಕ್ಸಾನ್ ಕಾರು ಚಾಲನೆ ಮಾಡುತ್ತಿದ್ದರು. ಮೈಸೂರು ರೋಡ್‌ನಿಂದ ಕನಕಪುರದ ಕಡೆಗೆ ಹೋಗುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿ ಎದುರು ರಸ್ತೆಗೆ ಬಂದು ಕಾರು ಪಲ್ಟಿಯಾಗಿದೆ. ಘಟನೆಯಲ್ಲಿ ಮೊದಲು ಇಬ್ಬರು, ಈಗ ಒಬ್ಬರು ಸಾವನ್ನಪ್ಪಿದ್ದಾರೆ. ಓವರ್ ಸ್ಪೀಡ್ ಆಗಿ ಬಂದಿರೋದೇ ಅಪಘಾತಕ್ಕೆ ಕಾರಣ ಎನ್ನುವುದು ಗೊತ್ತಾಗುತ್ತಿದೆ ಎಂದು ತಿಳಿಸಿದ್ದಾರೆ.  ಇದನ್ನೂ ಓದಿ: ಶಿವಮೊಗ್ಗದಲ್ಲಿ ಸೆಕ್ಷನ್ 144 ಜಾರಿ – ವರ್ತಕರು, ಬಿಜೆಪಿ ಮುಖಂಡರು ವಿರೋಧ

    ಕಾರಿನಲ್ಲಿದ್ದವರು ರಾಮಮೂರ್ತಿ ನಗರದ ಮನೆಗೆ ಹೋಗುತ್ತಿದ್ದರು. ಸರ್ಜಾಪುರದ ಕಡೆಯಿಂದ ರಾಮಮೂರ್ತಿಗೆ ಬಾಡಿಗೆ ತೆಗೆದುಕೊಂಡು ಹೋಗುತ್ತಿದ್ದರು. ಸೋಮವಾರ ತುಮಕೂರು ರಸ್ತೆಯ ಐಕಿಯಾ ಫರ್ನಿಚರ್‌ಗೆ ಹೋಗಿದ್ದ ಫ್ಯಾಮಿಲಿ ರಾತ್ರಿ ಊಟ ಮಾಡಿಕೊಂಡು ನೈಟ್‌ಔಟ್ ಹೊರಟಿದ್ದರು. ತುಮಕೂರು ರಸ್ತೆಯಿಂದ ಸರ್ಜಾಪುರ ರಸ್ತೆ ಮೂಲಕ ರಾಮಮೂರ್ತಿ ನಗರಕ್ಕೆ ಹೊರಟಿದ್ದರು. ಅತಿಯಾದ ವೇಗ ಅಥವಾ ಕಾರಿನಲ್ಲಿದ್ದ ನೀರಿನ ಬಾಟಲ್ ಬ್ರೇಕ್ ಹತ್ತಿರ ಸಿಲುಕಿಕೊಂಡು ಘಟನೆ ನಡೆದಿರುವ ಶಂಕೆ ಇದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಗಲಭೆಗೆ ಟ್ವಿಸ್ಟ್ – ರಾಗಿಗುಡ್ಡದ ಗಲಾಟೆ ಪೂರ್ವನಿಯೋಜಿತ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೇಶದಲ್ಲೇ ಫಸ್ಟ್‌ ಟಾಟಾ ನೆಕ್ಸನ್‌ ಇವಿ ಕಾರಿಗೆ ಬೆಂಕಿ – ಕೇಂದ್ರದ ಮೂರು ಸಂಸ್ಥೆಗಳಿಂದ ತನಿಖೆ

    ದೇಶದಲ್ಲೇ ಫಸ್ಟ್‌ ಟಾಟಾ ನೆಕ್ಸನ್‌ ಇವಿ ಕಾರಿಗೆ ಬೆಂಕಿ – ಕೇಂದ್ರದ ಮೂರು ಸಂಸ್ಥೆಗಳಿಂದ ತನಿಖೆ

    ಮುಂಬೈ: ದೇಶದಲ್ಲಿ ಎಸ್‌ಯುವಿ ಪೈಕಿ ಅತೀ ಹೆಚ್ಚು ಬೇಡಿಕೆ ಇರುವ ಟಾಟಾ ನೆಕ್ಸನ್‌ ಎಲೆಕ್ಟ್ರಿಕ್‌ ಕಾರು ಬೆಂಕಿ ತಗುಲಿ ಹೊತ್ತಿ ಉರಿದಿದೆ. ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಬೆನ್ನಲ್ಲೇ ಕೇಂದ್ರ ಸರ್ಕಾರ ತನಿಖೆಗೆ ಆದೇಶಿಸಿದೆ.

    ಬುಧವಾರ ತಡರಾತ್ರಿ ಮುಂಬೈನಲ್ಲಿ 2 ತಿಂಗಳ ಹಿಂದೆ ಖರೀದಿಸಿದ್ದ ನೆಕ್ಸನ್‌ ಕಾರು ಹೊತ್ತಿ ಉರಿದಿದೆ. ದೇಶದಲ್ಲಿ ಮೊದಲ ಬಾರಿಗೆ ಇವಿ ಕಾರಿಗೆ ಬೆಂಕಿ ತಗುಲಿದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ ಕೇಂದ್ರ ಸರ್ಕಾರ ತನಿಖೆ ನಡೆಸುವುದಾಗಿ ಹೇಳಿದೆ. ಟಾಟಾ ಮೋಟಾರ್ಸ್‌ ಸಹ ತನಿಖೆ ನಡೆಸುವುದಾಗಿ ತಿಳಿಸಿದೆ.

    ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಅಗ್ನಿ ಸ್ಫೋಟಕ ಮತ್ತು ಪರಿಸರ ಸುರಕ್ಷತೆ ಕೇಂದ್ರ (CFEES), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಮತ್ತು ವಿಶಾಖಪಟ್ಟಣದಲ್ಲಿರುವ ನೌಕಾ ವಿಜ್ಞಾನ ಮತ್ತು ತಾಂತ್ರಿಕ ಪ್ರಯೋಗಾಲಯ (NSTL)ಕ್ಕೆ ಈ ಘಟನೆಗೆ ಕಾರಣವನ್ನು ಪತ್ತೆಹಚ್ಚಿ ಪರಿಹಾರ ಕ್ರಮವನ್ನು ಸೂಚಿಸುವಂತೆ ಆದೇಶಿಸಿದೆ.

    “ಬೆಂಕಿ ಅವಘಢಕ್ಕೆ ಕಾರಣ ಏನೆಂಬುದನ್ನು ಪತ್ತೆ ಮಾಡಲು ವಿಸ್ತೃತ ತನಿಖೆ ಆರಂಭಿಸಲಾಗಿದೆ. ತನಿಖೆಯ ಬಳಿಕ ಈ ಬಗ್ಗೆ ವಿವರವಾಗಿ ಮಾಹಿತಿಯನ್ನು ನೀಡುತ್ತೇವೆ. ನಮ್ಮ ವಾಹನಗಳು ಹಾಗೂ ಅವುಗಳ ಬಳಕೆದಾರರ ಸುರಕ್ಷತೆಯನ್ನು ಖಚಿತ ಪಡಿಸಲು ನಾವು ಬದ್ಧರಾಗಿದ್ದೇವೆ” ಎಂದು ಟಾಟಾ ಮೋಟಾರ್ಸ್‌ ಪ್ರಕಟಣೆಯಲ್ಲಿ ತಿಳಿಸಿದೆ.

    ನಾವು 30,000 ಕ್ಕೂ ಅಧಿಕ ಎಲೆಕ್ಟ್ರಿಕ್‌ ಕಾರನ್ನು ಮಾರಾಟ ಮಾಡಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 100 ಮಿಲಿಯನ್‌ ಕಿಲೋಮೀಟರ್‌ಗೂ ಅಧಿಕ ದೂರವನ್ನು ಈ ಕಾರುಗಳು ಕ್ರಮಿಸಿವೆ. ಆದರೆ ಬೆಂಕಿ ಹತ್ತಿಕೊಂಡ ಮೊದಲ ಪ್ರಕರಣ ಇದು ಎಂದು ಕಂಪನಿ ತಿಳಿಸಿದೆ.

    ವಿಡಿಯೋದಲ್ಲಿ ಲಭಿಸಿದ ಮಾಹಿತಿ ಪ್ರಕಾರ, ಕಚೇರಿಯಲ್ಲಿ ಅಳವಡಿಸಲಾಗಿದ್ದ ಸಾಮಾನ್ಯ ಸ್ಲೋ ಚಾರ್ಜರ್‌ನಲ್ಲಿ ಮಾಲೀಕ ಕಾರನ್ನು ಚಾರ್ಜ್‌ ಮಾಡಿ ಮನೆ ಕಡೆ ತೆರಳಿದ್ದಾರೆ. 5 ಕಿ.ಮೀ ಕ್ರಮಿಸುವಾಗ ಕಾರಿನಿಂದ ವಿಚಿತ್ರವಾದ ಶಬ್ಧ ಕೇಳಿದೆ. ಈ ಸಂದರ್ಭದಲ್ಲಿ ಕಾರಿನ ಡಿಸ್ಪ್ಲೆಯಲ್ಲಿ ಅಪಾಯದ ಮುನ್ಸೂಚನೆ ಪ್ರಕಟವಾಗಿದೆ.

    “ಕಾರಿನಿಂದ ಇಳಿಯಿರಿ” ಎಂಬ ಅಲರ್ಟ್‌ ಸಂದೇಶ ಬಂದ ಕೂಡಲೇ ಮಾಲೀಕ ಇಳಿದಿದ್ದಾರೆ. ಕೆಲ ಕ್ಷಣದಲ್ಲೇ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿ ಬೆಂಕಿ ನಂದಿಸಿದೆ.

    https://twitter.com/K10711988/status/1539663478205870080

    ಭಾರತದ ಎಲೆಕ್ಟ್ರಿಕ್‌ ಕಾರುಗಳ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸನ್‌ ಬಹಳ ಬೇಡಿಕೆಯಿದೆ. ತಿಂಗಳಿಗೆ ಕನಿಷ್ಠ 2500 – 3000 ಸಾವಿರ ಕಾರುಗಳು ಮಾರಾಟವಾಗುತ್ತಿವೆ. ಇಲ್ಲಿಯವರೆಗೆ ಸುಮಾರು 30,000 ಕ್ಕೂ ಅಧಿಕ ಟಾಟಾ ನೆಕ್ಸನ್‌ ಇವಿ ಕಾರುಗಳು ಮಾರಾಟವಾಗಿದ್ದು ಈ ಸೆಗ್ಮೆಂಟ್‌ನಲ್ಲಿ ಅತೀ ಹೆಚ್ಚು ಮಾರಾಟವಾಗುವ ಕಾರು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

    Live Tv