Tag: Tata Motors

  • ಟಾಟಾ ಮೋಟಾರ್ಸ್ ಷೇರು ಮೌಲ್ಯ 40% ಕುಸಿತವಾದ್ರೂ ಆತಂಕ ಪಡೋ ಅಗತ್ಯವಿಲ್ಲ: ನಿಜವಾಗಿ ಆಗಿದ್ದೇನು?

    ಟಾಟಾ ಮೋಟಾರ್ಸ್ ಷೇರು ಮೌಲ್ಯ 40% ಕುಸಿತವಾದ್ರೂ ಆತಂಕ ಪಡೋ ಅಗತ್ಯವಿಲ್ಲ: ನಿಜವಾಗಿ ಆಗಿದ್ದೇನು?

    – ಎರಡು ಕಂಪನಿಗಳಾಗಿ ಟಾಟಾ ಮೋಟಾರ್ಸ್‌ ವಿಭಜನೆ

    ಮುಂಬೈ: ಟಾಟಾ ಮೋಟಾರ್ಸ್ (Tata Motors) ತನ್ನ ಪ್ರಯಾಣಿಕ ಮತ್ತು ವಾಣಿಜ್ಯ ವಾಹನ ವಿಭಾಗಗಳನ್ನು ಪ್ರತ್ಯೇಕಿಸಿದೆ. ಮಂಗಳವಾರ ಅಧಿಕೃತವಾಗಿ ವಿಭಜನೆಯಾದ ಬೆನ್ನಲ್ಲೇ ಟಾಟಾ ಮೋಟಾರ್ಸ್‌ ಷೇರಿನ ಮೌಲ್ಯ ಶೇ. 40 ರಷ್ಟು ಇಳಿಕೆಯಾಗಿದೆ.

    ಇನ್ನು ಮುಂದೆ  ಪ್ರಯಾಣಿಕ ವಾಹನ ವಿಭಾಗ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ (TMPV) ಆಗಿ ಬದಲಾದರೆ ವಾಣಿಜ್ಯ ವಿಭಾಗ ಟಾಟಾ ಮೋಟಾರ್ಸ್‌ ಕಮರ್ಷಿಯಲ್ ವೆಹಿಕಲ್ಸ್ (TMLCV) ಆಗಿ ಕಾರ್ಯನಿರ್ವಹಿಸಲಿದೆ.

    ಇಂದಿನಿಂದ ಮಾತೃ ಕಂಪನಿಯು ವಾಣಿಜ್ಯ ವಾಹನಗಳ ವಿಭಾಗವನ್ನು ಪ್ರತಿಬಿಂಬಿಸದೇ ವ್ಯಾಪಾರ ಮಾಡಲಿದೆ. TMPV ಪ್ರಯಾಣಿಕ ವಾಹನಗಳು, ವಿದ್ಯುತ್ ವಾಹನಗಳು ಮತ್ತು ಜಾಗ್ವಾರ್ ಲ್ಯಾಂಡ್ ರೋವರ್ (JLR) ವಾಹನಗಳ ಕಾರ್ಯಾಚರಣೆ ನೋಡಿಕೊಳ್ಳಲಿದೆ.  ಇದನ್ನೂ ಓದಿ:  ಮುಂದಿನ 4-6 ತಿಂಗಳಿನಲ್ಲಿ ಪೆಟ್ರೋಲ್‌ ಕಾರು ದರದಲ್ಲಿ ಇವಿ ಸಿಗುತ್ತೆ: ಗಡ್ಕರಿ

     

    ತಾತ್ಕಾಲಿಕ ಕುಸಿತ
    ಷೇರಿನ ಮೌಲ್ಯ ನಿಜವಾಗಿ ಕುಸಿದಿಲ್ಲ. ವ್ಯವಹಾರ ವಿಭಜನೆಯಿಂದಾದ ಮೌಲ್ಯದ ಹೊಂದಾಣಿಕೆಯಿಂದ ಆಗಿರುವ ಕುಸಿತ ಇದಾಗಿದೆ. ಸೋಮವಾರ ಷೇರು ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್‌ ಒಂದು ಷೇರು 660.75 ರೂ.ನಲ್ಲಿ ದಿನದ ವ್ಯವಹಾರ ಮಗಿಸಿತ್ತು. ಇಂದು ಸುಮಾರು ಶೇ. 40.22 ರಷ್ಟು(265.75 ರೂ.) ಕುಸಿತಗೊಂಡು ದಿನದ ಕೊನೆಯಲ್ಲಿ 395 ರೂ. ನಲ್ಲಿ ವ್ಯವಹಾರ ಮುಗಿಸಿದೆ.

    ಟಾಟಾ ಮೋಟಾರ್ಸ್‌ ಕಂಪನಿಯು ಅಕ್ಟೋಬರ್ 14 ಅನ್ನು ವಿಭಜನೆಯ ದಿನಾಂಕವನ್ನಾಗಿ ನಿಗದಿಪಡಿಸಿತ್ತು. ಇದರ ಅನ್ವಯ ಈ ದಿನಾಂಕದಂದು ಟಾಟಾ ಮೋಟಾರ್ಸ್ ಷೇರುಗಳನ್ನು ಹೊಂದಿದ್ದ ಷೇರುದಾರರು ವಿಭಜನೆಯ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ. ಅರ್ಹ ಷೇರುದಾರರು ತಾವು ಹೊಂದಿರುವ ಪ್ರತಿ ಟಾಟಾ ಮೋಟಾರ್ಸ್ ಷೇರಿಗೆ ಬದಲಾಗಿ ಹೊಸದಾಗಿ ರಚನೆಯಾದ ವಾಣಿಜ್ಯ ವಾಹನ ಕಂಪನಿಯಾದ TMLCV ಒಂದು ಷೇರನ್ನು ಹೆಚ್ಚುವರಿಯಾಗಿ ಪಡೆಯಲಿದ್ದಾರೆ. ಇದನ್ನೂ ಓದಿ:  ಕಾರುಗಳ ಬೆಲೆ ಭಾರೀ ಇಳಿಕೆ- ಯಾವ ಕಾರುಗಳ ಬೆಲೆ ಎಷ್ಟು ಇಳಿಕೆ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

    TMLCV ಕಂಪನಿಯ ಷೇರುಗಳನ್ನು 30–45 ದಿನಗಳಲ್ಲಿ ಡಿಮ್ಯಾಟ್ ಖಾತೆಗಳಿಗೆ ಜಮೆಯಾಗಲಿದೆ. ಸೆಬಿಯ ಎಲ್ಲಾ ಅನುಮೋದನೆಗಳು ಪೂರ್ಣಗೊಂಡ ನಂತರ ಹೊಸ ಕಂಪನಿ ರಾಷ್ಟ್ರೀಯ ಷೇರುಪೇಟೆ(NSE) ಮತ್ತು ಬಾಂಬೆ ಷೇರುಪೇಟೆಯಲ್ಲಿ(BSE) ಪ್ರತ್ಯೇಕವಾಗಿ ಪಟ್ಟಿಯಾಗಲಿದೆ.

  • ಮಾರುತಿಯ 40 ವರ್ಷದ ಓಟಕ್ಕೆ ಟಾಟಾ ಬ್ರೇಕ್‌ – ಪಂಚ್‌ ದೇಶದ ನಂ.1 ಕಾರು!

    ಮಾರುತಿಯ 40 ವರ್ಷದ ಓಟಕ್ಕೆ ಟಾಟಾ ಬ್ರೇಕ್‌ – ಪಂಚ್‌ ದೇಶದ ನಂ.1 ಕಾರು!

    – ಟಾಪ್‌ 5ರ ಒಳಗಡೆ ಮೂರು ಮಾರುತಿ ಕಾರುಗಳಿಗೆ ಸ್ಥಾನ
    – 2024 ರಲ್ಲಿ ಒಟ್ಟು 42.86 ಲಕ್ಷ ಕಾರುಗಳು ಮಾರಾಟ

    ನವದೆಹಲಿ: ಉತ್ಪನ್ನದಲ್ಲಿ ಹೊಸತನ ಇದ್ದಲ್ಲಿ ಮಾರುಕಟ್ಟೆಯಲ್ಲಿ ಯಶಸ್ವಿಯಾಗುತ್ತದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಕಳೆದ 40 ವರ್ಷಗಳಿಂದ ಭಾರತದ ಮಾರುಕಟ್ಟೆಯಲ್ಲಿ (India Car Market) ನಂಬರ್‌ ಒನ್‌ ಸ್ಥಾನದಲ್ಲಿದ್ದ ಮಾರುತಿ ಸುಜುಕಿ (Maruti Suzuki) ಕಂಪನಿಯನ್ನು ದೇಶೀಯ ಕಂಪನಿ ಟಾಟಾ ಮೋಟಾರ್ಸ್‌ (Tata Motors) ಹಿಂದಿಕ್ಕಿದೆ.

    ಹೌದು. ಇಲ್ಲಿಯವರೆಗೆ ದೇಶದಲ್ಲಿ ವರ್ಷವೊಂದರಲ್ಲಿ ಅತಿ ಹೆಚ್ಚು ಮಾರುತಿ ಕಂಪನಿಯ ಕಾರುಗಳೇ ಮಾರಾಟವಾಗುತ್ತಿದ್ದವು. ಆದರೆ 2024 ರಲ್ಲಿ ಟಾಟಾ ಕಂಪನಿಯ ಪಂಚ್‌ (Tata Punch) ಅತಿ ಹೆಚ್ಚು ಮಾರಾಟವಾಗುವ ಮೂಲಕ ಮಾರುತಿಯ ದಾಖಲೆಯನ್ನು ಬ್ರೇಕ್‌ ಮಾಡಿದೆ.

    ವ್ಯಾಗನ್‌ ಆರ್‌

    ಅಟೋ ಕಾರು ಪ್ರೋ ವರದಿಯ ಪ್ರಕಾರ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಟಾಟಾ ಪಂಚ್, ಮಾರುತಿ ಸುಜುಕಿಯ ವ್ಯಾಗನ್ ಆರ್ (Wagon R) ಮತ್ತು ಸ್ವಿಫ್ಟ್ (Swift) ಅನ್ನು ಹಿಂದಿಕ್ಕಿದೆ. ವ್ಯಾಗನ್ ಆರ್‌ 1,90,855 ಮಾರಾಟವಾದರೆ ಟಾಟಾ ಪಂಚ್‌ 2,02,030 ಮಾರಾಟವಾಗುವ ಮೂಲಕ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

    ಯಾವ ಕಾರು ಎಷ್ಟು ಮಾರಾಟ
    1. ಟಾಟಾ ಪಂಚ್‌ (SUV) – 2,02,030
    2. ವ್ಯಾಗನ್‌ ಆರ್‌(Hatchback) – 1,90,855
    3. ಮಾರುತಿ ಎರ್ಟಿಗಾ(MUV) – 1,90,091
    4. ಮಾರುತಿ ಬ್ರೀಜಾ (SUV) – 1,88, 160
    5. ಹುಂಡೈ ಕ್ರೇಟಾ (SUV) – 1,86,919

    ಮಾರುತಿ ಕಂಪನಿಯ ಕಾರು ಮೊದಲ ಸ್ಥಾನ ಪಡೆಯದೇ ಇದ್ದರೂ ಟಾಪ್‌-5 ರಲ್ಲಿ ಮೂರು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಇಲ್ಲಿಯವರೆಗೆ ಭಾರತದ ಗ್ರಾಹಕರು ಬೆಲೆ ಕಡಿಮೆ ಜೊತೆಗೆ ಹೆಚ್ಚು ಮೈಲೇಜ್‌ ನೀಡುವ ಕಾರುಗಳನ್ನೇ ಹೆಚ್ಚು ಇಷ್ಟ ಪಡುತ್ತಿದ್ದರು. ಆದರೆ ಈಗ ಸುರಕ್ಷತೆಯ ಜೊತೆ ಮೈಲೇಜ್‌ ನೀಡುವ ಕಾರುಗಳತ್ತ ಗಮನ ನೀಡುತ್ತಿದ್ದು ಕ್ಯಾಂಪಕ್ಟ್‌ ಎಸ್‌ಯುವಿ, ಎಸ್‌ಯುವಿ ಕಾರಿನತ್ತ ವಾಲುತ್ತಿರುವುದು ಸ್ಪಷ್ಟವಾಗಿದೆ.

    ಮಾರುತಿ ಎರ್ಟಿಗಾ
    ಮಾರುತಿ ಎರ್ಟಿಗಾ

    2024 ರಲ್ಲಿ ಒಟ್ಟು 42.86 ಲಕ್ಷ ಕಾರುಗಳು ಮಾರಾಟವಾಗಿದ್ದು ಮಾರುತಿ ಕಾರುಗಳ ಮಾರುಕಟ್ಟೆ 41%ಕ್ಕೆ ಕುಸಿದಿದೆ. ವಿಶೇಷವಾಗಿ 10 ಲಕ್ಷ ರೂ. ಒಳಗಿನ ಮಾರುಕಟ್ಟೆಯಲ್ಲಿ ಪ್ರಬಲ ಸ್ಪರ್ಧೆ ಇರುವುದರಿಂದ ಮಾರುತಿ ಕಾರುಗಳ ಮಾರುಕಟ್ಟೆ ಕುಸಿತವಾಗಿದೆ. ಇದನ್ನೂ ಓದಿ: ಮುಂದಿನ 5 ವರ್ಷದಲ್ಲಿ ಆಟೋಮೊಬೈಲ್ ಉದ್ಯಮದಲ್ಲಿ ವಿಶ್ವದಲ್ಲೇ ಭಾರತ ನಂಬರ್‌ 1: ಗಡ್ಕರಿ ಭವಿಷ್ಯ

    2018 ರಲ್ಲಿ ಭಾರತದಲ್ಲಿ ಒಟ್ಟು 33.49 ಲಕ್ಷ ಕಾರುಗಳು ಮಾರಾಟವಾಗಿತ್ತು. ಈ ಸಂದರ್ಭದಲ್ಲಿ ಟಾಪ್‌-5 ಒಳಗಡೆ ಎಲ್ಲಾ ಮಾರುತಿ ಕಂಪನಿಯ ಕಾರುಗಳೇ ಸ್ಥಾನ ಪಡೆದಿದ್ದವು.

    ಅಂಬಾಸಿಡರ್‌

    ಯಾವ ಕಂಪನಿಯ ಕಾರುಗಳಿಗೆ ಮೊದಲ ಸ್ಥಾನ?
    1957 – 1984 : ಅಂಬಾಸಿಡರ್‌( ಹಿಂದೂಸ್ಥಾನ್‌ ಮೋಟಾರ್ಸ್‌)
    1985-2004 – ಮಾರುತಿ 800
    2005-2017 – ಮಾರುತಿ ಅಲ್ಟೋ ಇದನ್ನೂ ಓದಿ: ಕಾರು ಮಾರಾಟ ಭಾರೀ ಕುಸಿತ – 7.90 ಲಕ್ಷ ವಾಹನಗಳು ಸಿದ್ದವಾಗಿದ್ದರೂ ಖರೀದಿಸುತ್ತಿಲ್ಲ ಜನ

    ಮಾರುತಿ 800

    ಯಾವ ವರ್ಷ ಯಾವ ಕಾರು ಹೆಚ್ಚು ಮಾರಾಟ?
    2018 – ಮಾರುತಿ ಡಿಸೈರ್‌ – 2,64,612
    2019 – ಮಾರುತಿ ಅಲ್ಟೋ – 2,08,087
    2020 – ಮಾರುತಿ ಸ್ವಿಫ್ಟ್‌ – 1,60,765
    2021 – ಮಾರುತಿ ವ್ಯಾಗನ್‌ ಆರ್‌ – 1,83,851
    2022 – ಮಾರುತಿ ವ್ಯಾಗನ್‌ ಆರ್‌ – 2,17,317
    2023 – ಮಾರುತಿ ಸ್ವಿಫ್ಟ್‌ – 2,03,469
    2024 – ಟಾಟಾ ಪಂಚ್‌ – 2,02,030

    ಅಲ್ಟೋ

    2021 ರಲ್ಲಿ ಬಿಡುಗಡೆಯಾದ ಪಂಚ್‌ 190 mm ಗ್ರೌಂಡ್ ಕ್ಲಿಯರೆನ್ಸ್, ಡ್ಯುಯಲ್ ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್ ಮೌಂಟ್‌ಗಳು, EBD ಜೊತೆಗೆ ABS, ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಹೊಂದಿದೆ. 5 ಸ್ಟಾರ್‌ ಸೇಫ್ಟಿ ರೇಟಿಂಗ್‌ ಹೊಂದಿರುವುದರಿಂದ ಪಂಚ್‌ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿದೆ.

    ಗ್ಲೋಬಲ್ NCAP ನಿಂದ ಮಕ್ಕಳ ಸುರಕ್ಷತೆಗಾಗಿ 4 ಸ್ಟಾರ್‌ ಪಡೆದುಕೊಂಡಿದೆ. ಭಾರತ್ NCAP ಮಾನದಂಡಗಳ ಅಡಿಯಲ್ಲಿ ಪರೀಕ್ಷೆಗೊಳಪಡಿಸಿದ ಎಲ್ಲಾ ಟಾಟಾ ವಾಹನಗಳಲ್ಲಿ ಪಂಚ್ ಇವಿ ಅತ್ಯಧಿಕ ಸುರಕ್ಷತಾ ರೇಟಿಂಗ್‌ ಪಡೆದಿದೆ.

     

  • ನ್ಯಾನೋ ಕಾರು ತಯಾರಿಸಿದ್ದು ಯಾಕೆ? ಪಶ್ಚಿಮ ಬಂಗಾಳದಿಂದ ಗುಜರಾತ್‌ಗೆ ಘಟಕ ಶಿಫ್ಟ್‌ ಆಗಿದ್ದು ಯಾಕೆ?

    ನ್ಯಾನೋ ಕಾರು ತಯಾರಿಸಿದ್ದು ಯಾಕೆ? ಪಶ್ಚಿಮ ಬಂಗಾಳದಿಂದ ಗುಜರಾತ್‌ಗೆ ಘಟಕ ಶಿಫ್ಟ್‌ ಆಗಿದ್ದು ಯಾಕೆ?

    ತನ್‌ ಟಾಟಾ (Ratan Tata) ಅವರಿಗೆ ನ್ಯಾನೋ ಕಾರನ್ನು (Nano Car) ತಯಾರಿಸುವ ಕಲ್ಪನೆ ಹೊಳೆದಿದ್ದೆ ರೋಚಕ. ಮುಂಬೈನಲ್ಲಿ ಭಾರೀ ಮಳೆಗೆ 4 ಮಂದಿ ಬೈಕಿನಲ್ಲಿ ತೆರಳುತ್ತಿದ್ದರು. ಈ ದೃಶ್ಯವನ್ನು ನೋಡಿದ ರತನ್‌ ಟಾಟಾ ಅವರ ಮನಸ್ಸು ಮಿಡಿಯಿತು.

    ತಂದೆ, ತಾಯಿ ಮಧ್ಯೆ ಕುಳಿತಿದ್ದ ಮಕ್ಕಳು ಬೈಕಿನಿಂದ ರಸ್ತೆಗೆ ಬೀಳುವನ್ನು ಕೇಳಿದ್ದ ರತನ್‌ ಟಾಟಾ ಸಾಮಾನ್ಯ ವರ್ಗದವರಿಗೆ ಕಡಿಮೆ ದರದಲ್ಲಿ ಕಾರು ನಿರ್ಮಿಸಿಕೊಡಬೇಕೆಂದು ಪಣ ತೊಟ್ಟರು. ಈ ಕಲ್ಪನೆಯನ್ನು ಸಾಕಾರಗೊಳಿಸಲು ನ್ಯಾನೋ ಕಾರನ್ನು ಉತ್ಪಾದನೆ ಮಾಡಲು ರತನ್‌ ಟಾಟಾ ಮುಂದಾದರು.

    ಜನವರಿ 10, 2008 ರಂದು ನ್ಯಾನೋ ಕಾರನ್ನು ಬಿಡುಗಡೆ ಮಾಡಲಾಯಿತು. ಈ ಕಾರಿಗೆ 1 ಲಕ್ಷ ರೂ. ದರ ನಿಗದಿ ಪಡಿಸಿದ್ದರಿಂದ ವಿಶ್ವದ ಅಗ್ಗದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಈ ಮೂಲಕ ರತನ್‌ ಟಾಟಾ ಅವರು ಬಡವರು, ಸಾಮಾನ್ಯ ವರ್ಗದವರು ಕಾರು ಖರೀದಿಸಬೇಕೆಂಬ ಕನಸನ್ನು ನನಸು ಮಾಡುವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: ರತನ್ ಟಾಟಾಗೆ ಭಾರತ ರತ್ನ ನೀಡುವಂತೆ ಕೇಂದ್ರಕ್ಕೆ ಮಹಾರಾಷ್ಟ್ರ ಸರ್ಕಾರದ ಶಿಫಾರಸು

    ರತನ್‌ ಟಾಟಾ ಅವರು ವಿಶ್ವದ ಅಗ್ಗದ ನ್ಯಾನೋ ಕಾರನ್ನು ಪಶ್ಚಿಮ ಬಂಗಾಳದಲ್ಲಿ (Wet Bengal) ನಿರ್ಮಾಣ ಮಾಡುವ ಕನಸು ಕಂಡಿದ್ದರು. ಆದರೆ ಕಾರು ನಿರ್ಮಾಣದ ವೇಳೆ ಟಾಟಾ ಕಂಪನಿ ಬಹಳ ಸಂಕಷ್ಟ ಎದುರಾಗಿತ್ತು. 2006 ರಲ್ಲಿ ಕಮ್ಯೂನಿಸ್ಟ್‌ ಪಕ್ಷ ಪಶ್ಚಿಮ ಬಂಗಾಳದಲ್ಲಿ ಮತ್ತೆ ಅಧಿಕಾರಕ್ಕೆ ಬಂದಿತು. ಮುಖ್ಯಮಂತ್ರಿಯಾಗಿದ್ದ ಬುದ್ಧದೇವ್ ಭಟ್ಟಾಚಾರ್ಯ ಅವರು ವಿಶ್ವದ ಅತ್ಯಂತ ಅಗ್ಗದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನ್ಯಾನೋ ಉತ್ಪಾದನಾ ಘಟಕ ಸ್ಥಾಪಿಸಲು ಹೂಗ್ಲಿ ಬದಿಯಲ್ಲಿರುವ ಸಿಂಗೂರಿನಲ್ಲಿ ಟಾಟಾಗೆ ಸುಮಾರು 1,000 ಎಕರೆ ಜಾಗ ನೀಡುವುದಾಗಿ ಘೋಷಿಸಿದ್ದರು.

    ಸರ್ಕಾರ ಜಾಗ ನೀಡಲು ಮುಂದಾಗುತ್ತಿದ್ದಂತೆ ಭಾರೀ ಹೋರಾಟ ಆರಂಭವಾಯಿತು. ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ ಎಂದು ಆರೋಪಿಸಿ ರೈತರು ಪ್ರತಿಭಟನೆ ಆರಂಭಿಸಿದರು. ಪ್ರತಿಭಟನೆ ನಡೆದರೂ ಸ್ವಾಧಿನ ಪ್ರಕ್ರಿಯೆ ಪೂರ್ಣಗೊಂಡು ಕಾರು ನಿರ್ಮಾಣದ ಫ್ಯಾಕ್ಟರಿ ಕೆಲಸ ಆರಂಭವಾಯಿತು. ಇದನ್ನೂ ಓದಿ: ಮಧ್ಯಮ ವರ್ಗದ ಭಾರತೀಯರ ಕನಸು ನನಸು ಮಾಡಿದ್ದ ರತನ್‌ – ಮೊದಲ ದೇಶೀ ಕಾರು ಮಾರುಕಟ್ಟೆಗೆ ಬಂದಿದ್ದು ಯಾವಾಗ?

    ಫ್ಯಾಕ್ಟರಿ ಕೆಲಸ ಆರಂಭವಾಗುತ್ತಿದ್ದಾಗ 2007 ರಲ್ಲಿ ಮಮತಾ ಬ್ಯಾನರ್ಜಿ (Mamata Banerjee) ಪ್ರತಿಭಟನೆಯ ನೇತೃತ್ವ ವಹಿಸಿದರು. ಪೊಲೀಸರು ಮತ್ತು ಟಿಎಂಸಿ ಕಾರ್ಯಕರ್ತರ ಮಧ್ಯೆ ಸಂಘರ್ಷ ನಡೆಯಿತು. ಘಟಕದ ವಿರುದ್ಧ ಮಮತಾ 26 ದಿನಗಳ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಈ ಪ್ರತಿಭಟನೆಗೆ ಹಲವು ಪರಿಸರ ಸಂಘಟನೆಗಳು ಸಾಥ್‌ ನೀಡಿದವು.

    ಪ್ರತಿಭಟನೆ ತೀವ್ರ ವಿವಾದವಾಗುತ್ತಿದ್ದಂತೆ ಸರ್ಕಾರ, ರಾಜ್ಯಪಾಲರು ನಡೆಸಿದ ಮಾತುಕತೆ ವಿಫಲವಾಯಿತು. ಉದ್ವಿಗ್ನ ಪರಿಸ್ಥಿತಿ ಹೆಚ್ಚಾಗುತ್ತಿದ್ದಂತೆ ಅಂದಿನ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ (Narendra Modi) ಅವರು ರತನ್‌ ಟಾಟಾ ಅವರಿಗೆ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದರು. ರತನ್‌ ಟಾಟಾ ಅವರು ಮೋದಿಯ ಆಫರ್‌ ಒಪ್ಪಿದರು. ಅಂತಿಮವಾಗಿ ಅಕ್ಟೋಬರ್‌ 03, 2008 ರಂದು ಘಟಕವನ್ನು ಅಹಮದಾಬಾದ್‌ನಲ್ಲಿರುವ ಸನಂದಕ್ಕೆ ಸ್ಥಳಾಂತರ ಮಾಡುವುದಾಗಿ ಟಾಟಾ ಮೋಟಾರ್ಸ್‌ ಘೋಷಿಸಿತು.

    ಉತ್ಪಾದನಾ ಘಟಕವನ್ನು ಬಂದ್‌ ಮಾಡಿದ ನಂತರ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ರಾಜಕೀಯವಾಗಿ ಶಕ್ತಿಯುತವಾದರು. ಅಂತಿಮವಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ ಆರ್ಥಿಕವಾಗಿ ಪಶ್ಚಿಮ ಬಂಗಾಳ ನಷ್ಟ ಅನುಭವಿಸಿತು. ನಂತರದ ವರ್ಷಗಳಲ್ಲಿ ಬೇರೆ ರಾಜ್ಯಗಳು ಕಂಪನಿಗಳನ್ನು ಆಕರ್ಷಿಸಿದರೆ ಪಶ್ಚಿಮ ಬಂಗಾಳ ಹೂಡಿಕೆದಾರರನ್ನು ಸೆಳೆಯುವಲ್ಲಿ ವಿಫಲವಾಯಿತು. ಇದನ್ನೂ ಓದಿ: ಬೆಂಗಳೂರಿನಲ್ಲಿ ಎಫ್‌16 ಯುದ್ಧ ವಿಮಾನ ಹಾರಿಸಿದ್ದ ರತನ್‌ ಟಾಟಾ

    ಕಾನೂನು ಸಮರದಲ್ಲಿ ಗೆದ್ದ ಟಾಟಾ ಮೋಟಾರ್ಸ್‌
    ಸಿಂಗೂರಿನಲ್ಲಿ ಟಾಟಾ ಫ್ಯಾಕ್ಟರಿ ಸ್ಥಾಪನೆಗೆ ಜಾಗ ನೀಡಿ ಹೂಡಿಕೆ ಮಾಡಿ ನಷ್ಟ ಉಂಟು ಮಾಡಿದ್ದಕ್ಕೆ ಟಾಟಾ ಕಂಪನಿ ಪಶ್ಚಿಮ ಬಂಗಾಳ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (WBIDC) ವಿರುದ್ಧ ಕೇಸ್‌ ದಾಖಲಿಸಿತ್ತು. ದಶಕಗಳಿಂದ ನಡೆದಿದ್ದ ಕಾನೂನು ಸಮರವನ್ನು ಟಾಟಾ ಮೋಟಾರ್ಸ್‌ ಗೆದ್ದುಕೊಂಡಿತ್ತು. ಟಾಟಾ ಮೋಟಾರ್ಸ್‌ಗೆ ನಷ್ಟ ಉಂಟು ಮಾಡಿದ್ದಕ್ಕೆ WBIDCಗೆ 766 ಕೋಟಿ ರೂ. ಪಾವತಿಸುವಂತೆ ಮಧ್ಯಸ್ಥಿಕೆ ನ್ಯಾಯಾಲಯ ಆದೇಶಿಸಿತ್ತು. ಇದನ್ನೂ ಓದಿ: ನ್ಯಾನೋ ಕೇಸ್‌, ಮಮತಾಗೆ ತೀವ್ರ ಮುಖಭಂಗ – ಕೊನೆಗೂ ಗೆದ್ದ ಟಾಟಾ ಮೋಟಾರ್ಸ್‌

     

  • Tamil nadu | ಟಾಟಾ ಮೋಟಾರ್ಸ್ ಉತ್ಪಾದನಾ ಘಟಕಕ್ಕೆ ಶಂಕುಸ್ಥಾಪನೆ – 9,000 ಕೋಟಿ ಹೂಡಿಕೆ

    Tamil nadu | ಟಾಟಾ ಮೋಟಾರ್ಸ್ ಉತ್ಪಾದನಾ ಘಟಕಕ್ಕೆ ಶಂಕುಸ್ಥಾಪನೆ – 9,000 ಕೋಟಿ ಹೂಡಿಕೆ

    ಚೆನ್ನೈ: ರಾಜ್ಯದ ಸಿಪ್‌ಕಾಟ್‌ನಲ್ಲಿರುವ (SIPCOT) ಪಣಪಕ್ಕಂನ (Panapakkam) ಟಾಟಾ ಮೋಟಾರ್ಸ್ (TATA Motors) ಉತ್ಪಾದನಾ ಘಟಕಕ್ಕೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ (CM MK Stalin) ಶನಿವಾರ ಶಂಕು ಸ್ಥಾಪನೆ ನೇರವೇರಿಸಿದರು.

    ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದ ಅವರು, ಇಂದು ಟಾಟಾ ಮೋಟಾರ್ಸ್‌ನ ಉತ್ಪಾದನಾ ಘಟಕಕ್ಕೆ ಶಂಕು ಸ್ಥಾಪನೆ ನೇರವೇರಿಸಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ. ಇದು ರಾಜ್ಯದಲ್ಲಿ ಕಂಪನಿಗಳಿಗೆ ಮಾತ್ರವಲ್ಲದೇ ಜಾಗತಿಕವಾಗಿ ಇದು ಸ್ಪರ್ಧಿಸಲಿದೆ. ಜೊತೆಗೆ ಟಾಟಾ ಮೋಟಾರ್ಸ್ ತಮಿಳುನಾಡಿನಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದರು.ಇದನ್ನೂ ಓದಿ: ಬೈರೂತ್ ದಾಳಿಯಲ್ಲಿ ಹಿಜ್ಬುಲ್ಲಾ‌ ಮುಖ್ಯಸ್ಥನ ಪುತ್ರಿಯೂ ಸಾವು; ನಸ್ರಲ್ಲಾ ಬಳಿಕ ಮತ್ತೊಬ್ಬ ಟಾಪ್‌ ಲೀಡರ್‌ ಟಾರ್ಗೆಟ್‌!

    ರಾಣಿಪೇಟ್‌ನ್ನು ಟಾಟಾ ಮೋಟಾರ್ಸ್ ಉತ್ಪಾದನಾ ಘಟಕದ ಹೂಡಿಕೆಯ ಸ್ಥಳವನ್ನಾಗಿ ಆಯ್ಕೆ ಮಾಡಿದಕ್ಕೆ ಧನ್ಯವಾದಗಳು. ಇದು ಉದ್ಯೋಗ ಸೃಷ್ಟಿಯಲ್ಲಿ ಹಾಗೂ ಆರ್ಥಿಕ ಬೆಳವಣಿಗೆಯಲ್ಲಿ ಗಂಭೀರವಾಗಿ ಧನಾತ್ಮಕ ಪರಿಣಾಮ ಬೀಳಲಿದೆ ಎಂದು ತಿಳಿಸಿದರು.

    ಈ ಉತ್ಪಾದನಾ ಘಟಕಕ್ಕಾಗಿ 9,000 ಕೋಟಿ ರೂ. ಹೂಡಿಕೆ ಮಾಡಲಾಗಿದ್ದು, ಇದರಿಂದ 5,000 ಉದ್ಯೋಗ ಸೃಷ್ಟಿಯಾಗಲಿದೆ ಎಂಬ ನಿರೀಕ್ಷೆಯಿದೆ. ಜೊತೆಗೆ ಇದು ಈ ಪ್ರದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆಯಾಗಿ ಪರಿಣಮಿಸಲಿದೆ ಎಂದು ಹೇಳಿದರು.

    ಟಾಟಾ ಮೋಟಾರ್ಸ್ನ ಉತ್ಪಾದನಾ ಘಟಕದ ನಿರ್ಮಾಣ ಪೂರ್ಣಗೊಂಡ ನಂತರ ಈ ಸ್ಥಾವರ ಉದ್ಘಾಟನೆಗಾಗಿ ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ (N Chandrashekaran) ಅವರನ್ನು ವೈಯಕ್ತಿಕವಾಗಿ ಆಹ್ವಾನಿಸಲು ಅವಕಾಶ ಕೋರುತ್ತೇನೆ. ಇದು ರಾಜ್ಯ ಹಾಗೂ ಭಾರತದ ಅತಿದೊಡ್ಡ ಕೈಗಾರಿಕಾ ಸಂಸ್ಥೆಗಳ ನಡುವಿನ ಮಹತ್ವವನ್ನು ಸೂಚಿಸುತ್ತದೆ ಎಂದರು.ಇದನ್ನೂ ಓದಿ: BBK 11: ದೊಡ್ಮನೆಯ 4ನೇ ಸ್ಪರ್ಧಿಯಾಗಿ ಗೋಲ್ಡ್‌ ಸುರೇಶ್‌

    ಶೀಘ್ರದಲ್ಲೇ ಯೋಜನೆ ಪೂರ್ಣಗೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇನೆ ಹಾಗೂ ಉದ್ಘಾಟನೆಗೆ ಚಂದ್ರಶೇಖರನ್ ಅವರನ್ನು ಖುದ್ದಾಗಿ ಆಹ್ವಾನಿಸಲು ಬಯಸುತ್ತೇನೆ ಎಂದು ತಿಳಿಸಿದರು.

  • ಟಾಟಾ ನೆಕ್ಸಾನ್ EV ಬೆಲೆ 3 ಲಕ್ಷ ರೂಪಾಯಿ ಕಡಿತ

    ಟಾಟಾ ನೆಕ್ಸಾನ್ EV ಬೆಲೆ 3 ಲಕ್ಷ ರೂಪಾಯಿ ಕಡಿತ

    ಟಾಟಾ ಮೋಟಾರ್ಸ್ (Tata Motors) ಕಂಪನಿಯು ‘ಫೆಸ್ಟಿವಲ್ ಆಫ್ ಕಾರ‍್ಸ್‌’ (Festival of Cars) ಅಭಿಯಾನದ ಅಂಗವಾಗಿ ತನ್ನ ಎಲೆಕ್ಟ್ರಿಕ್ ಕಾರುಗಳ (Electric Cars) ಬೆಲೆಯನ್ನು 3 ಲಕ್ಷದವರೆಗೆ ಕಡಿತ ಮಾಡಿದೆ. ಈ ಅಭಿಯಾನ ಅಕ್ಟೊಬರ್ 31ರವರೆಗೆ ಚಾಲ್ತಿಯಲ್ಲಿ ಇರುತ್ತದೆ.

    ಯಾವ ಯಾವ ಕಾರಿನ ಬೆಲೆ ಎಷ್ಟು ಕಡಿತ..?
    ಟಾಟಾ ಕಂಪನಿಯು ಕಾರುಗಳ ಮಾದರಿ ಮತ್ತು ಅವುಗಳ ಆವೃತ್ತಿಗೆ ಅನುಗುಣವಾಗಿ ಬೆಲೆ ಕಡಿತ ಮಾಡಿದೆ.

    ನೆಕ್ಸಾನ್ ಇವಿ: ಬೆಲೆ ಕಡಿತ 3 ಲಕ್ಷ
    ಬೆಲೆ ಕಡಿತದ ನಂತರ ನೆಕ್ಸಾನ್ ಇವಿ ಕಾರಿನ ಬೆಲೆ 12,49,900 – 16,99,900 ರೂಪಾಯಿವರೆಗೆ ಇದೆ.

    ಪಂಚ್ ಇವಿ: ಬೆಲೆ ಕಡಿತ 1.20 ಲಕ್ಷ
    ಬೆಲೆ ಕಡಿತದ ನಂತರ ಪಂಚ್ ಇವಿ ಕಾರಿನ ಬೆಲೆ 9,99,000 – 14,28,999 ರೂಪಾಯಿವರೆಗೆ ಇದೆ.

    ಟಿಯಾಗೋ ಇವಿ: ಬೆಲೆ ಕಡಿತ 80 ಸಾವಿರ
    ಬೆಲೆ ಕಡಿತದ ನಂತರ ಟಿಯಾಗೋ ಇವಿ ಕಾರಿನ ಬೆಲೆ 7,99,000 – 11,49,000 ರೂಪಾಯಿವರೆಗೆ ಇದೆ.

    ಬೆಲೆ ಕಡಿತದ ಜೊತೆ ಗ್ರಾಹಕರು ದೇಶದಾದ್ಯಂತ 5,500 ಟಾಟಾ ಪವರ್ ಚಾರ್ಜಿಂಗ್ ಪಾಯಿಂಟ್‌ಗಳಲ್ಲಿ 6-ತಿಂಗಳ ಉಚಿತ ಚಾರ್ಜಿಂಗ್ ಸೌಲಭ್ಯವನ್ನು ಆನಂದಿಸಬಹುದು. ಈ ವಿಶೇಷವಾದ ಹಬ್ಬದ ಕೊಡುಗೆಯು 31ನೇ ಅಕ್ಟೋಬರ್ 2024 ರವರೆಗೆ ಮಾತ್ರ ಲಭ್ಯವಿರುವುದರಿಂದ ಗ್ರಾಹಕರು ತಮ್ಮ ನೆಚ್ಚಿನ EV ಕಾರನ್ನು ಉತ್ತಮ ಬೆಲೆಯಲ್ಲಿ ಖರೀದಿಸಲು ಇದು ಸೂಕ್ತ ಸಮಯವಾಗಿದೆ.

  • ಟಾಟಾ ಕಾರುಗಳ ಬೆಲೆ ಭಾರೀ ಕಡಿತ

    ಟಾಟಾ ಕಾರುಗಳ ಬೆಲೆ ಭಾರೀ ಕಡಿತ

    ಟಾಟಾ ಮೋಟಾರ್ಸ್ (Tata Motors) ಕಂಪನಿಯು ಪೆಟ್ರೋಲ್, ಡೀಸೆಲ್ ಮತ್ತು CNG ಕಾರುಗಳು ಮತ್ತು SUVಗಳ ಬೆಲೆಯನ್ನು ಬೆಲೆಯನ್ನು 1.80 ಲಕ್ಷ ರೂ.ವರೆಗೆ ಕಡಿತಗೊಳಿಸಿದೆ. ಟಿಯಾಗೋ, ಟಿಗೋರ್, ನೆಕ್ಸಾನ್, ಆಲ್ಟ್ರೋಜ್, ಹ್ಯಾರಿಯರ್ ಮತ್ತು ಸಫಾರಿ (Tiago, Tigor, Nexon, Altroz, Harrier, Safari) ಕಾರುಗಳ ಬೆಲೆಯನ್ನು ಕಂಪನಿ ಕಡಿತಗೊಳಿಸಿದೆ. ಅಕ್ಟೋಬರ್ 31ರವರೆಗೆ ಮಾತ್ರ ಈ ಕೊಡುಗೆ ಇರುತ್ತದೆ.

    ಯಾವ ಯಾವ ಕಾರಿನ ಬೆಲೆ ಎಷ್ಟು ಕಡಿತ..?

    ಟಾಟಾ ಕಂಪನಿಯು ಕಾರುಗಳ ಮಾದರಿ ಮತ್ತು ಅವುಗಳ ಆವೃತ್ತಿಗೆ ಅನುಗುಣವಾಗಿ ಬೆಲೆ ಕಡಿತ ಮಾಡಿದೆ.

    ಸಫಾರಿ: ಬೆಲೆ ಕಡಿತ 1.80 ಲಕ್ಷ
    ಬೆಲೆ ಕಡಿತದ ನಂತರ ಸಫಾರಿ ಕಾರಿನ ಬೆಲೆ 15.49 ಲಕ್ಷದಿಂದ – 25.09 ಲಕ್ಷದವರೆಗೆ ಇದೆ.

    ಹ್ಯಾರಿಯರ್: ಬೆಲೆ ಕಡಿತ 1.60 ಲಕ್ಷ
    ಬೆಲೆ ಕಡಿತದ ನಂತರ ಹ್ಯಾರಿಯರ್ ಕಾರಿನ ಬೆಲೆ 14.99 ಲಕ್ಷದಿಂದ – 23.99 ಲಕ್ಷದವರೆಗೆ ಇದೆ.

    ನೆಕ್ಸಾನ್: ಬೆಲೆ ಕಡಿತ 80 ಸಾವಿರ
    ಬೆಲೆ ಕಡಿತದ ನಂತರ ನೆಕ್ಸಾನ್ ಕಾರಿನ ಬೆಲೆ 7.99 ಲಕ್ಷದಿಂದ – 15.29 ಲಕ್ಷದವರೆಗೆ ಇದೆ.

    ಟಿಯಾಗೋ: ಬೆಲೆ ಕಡಿತ 65 ಸಾವಿರ
    ಬೆಲೆ ಕಡಿತದ ನಂತರ ಟಿಯಾಗೋ ಕಾರಿನ ಬೆಲೆ 4.99 ಲಕ್ಷದಿಂದ – 8.74 ಲಕ್ಷದವರೆಗೆ ಇದೆ.

    ಆಲ್ಟ್ರೋಜ್: ಬೆಲೆ ಕಡಿತ 45 ಸಾವಿರ
    ಬೆಲೆ ಕಡಿತದ ನಂತರ ಆಲ್ಟ್ರೋಜ್ ಕಾರಿನ ಬೆಲೆ 6.49 ಲಕ್ಷದಿಂದ – 11.15 ಲಕ್ಷದವರೆಗೆ ಇದೆ.

    ಟಿಗೋರ್: ಬೆಲೆ ಕಡಿತ 30 ಸಾವಿರ
    ಬೆಲೆ ಕಡಿತದ ನಂತರ ಟಿಯಾಗೋ ಕಾರಿನ ಬೆಲೆ 5.99 ಲಕ್ಷದಿಂದ – 9.39 ಲಕ್ಷದವರೆಗೆ ಇದೆ.

    ಪಂಚ್ ಕಾರಿನ ಬೆಲೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ.

    ಬೆಲೆ ಕಡಿತ ಮಾಡಿರುವ ಟಾಟಾ ಮೋಟಾರ್ಸ್ ಈ ತಿಂಗಳು ಅಥವಾ ಮುಂದಿನ ತಿಂಗಳು ತನ್ನ ಕಾರುಗಳ ಮೇಲೆ ಬೇರೆ ಯಾವುದೇ ರಿಯಾಯಿತಿಗಳನ್ನು ನೀಡುವುದಿಲ್ಲ. ನೀವು ನಿಮ್ಮ ಹಳೆಯ ಕಾರನ್ನು ಹೊಸ ಕಾರಿಗೆ ವಿನಿಮಯ ಮಾಡಿಕೊಂಡರೆ ಕಂಪನಿಯು ಹೆಚ್ಚುವರಿಯಾಗಿ ರೂ 45,000 ದವರೆಗೆ ವಿನಿಮಯ ಪ್ರಯೋಜನವನ್ನು ನೀಡುತ್ತಿದೆ.

    ಬೆಲೆ ಕಡಿತದ ಪ್ರಯೋಜನವನ್ನು ಪಡೆದು ಈ ಹಬ್ಬದ ಋತುವಿನಲ್ಲಿ ಒಂದು ಕಾರನ್ನು ಕೊಳ್ಳಿರಿ.

  • 9.99 ಲಕ್ಷಕ್ಕೆ ಟಾಟಾ ಕರ್ವ್ ಬಿಡುಗಡೆ

    9.99 ಲಕ್ಷಕ್ಕೆ ಟಾಟಾ ಕರ್ವ್ ಬಿಡುಗಡೆ

    ಟಾಟಾ ಮೋಟಾರ್ಸ್ ಕಂಪನಿಯು ಟಾಟಾ ಕರ್ವ್ (Tata Curvv) – ಎಸ್‌ಯುವಿ ಕೂಪ್‌ನ ಪೆಟ್ರೋಲ್ ಮತ್ತು ಡಿಸೇಲ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಟಾಟಾ ಕರ್ವ್ ಬೆಲೆ 9.99 – 17.69 ಲಕ್ಷದವರೆಗೆ ಇದೆ (ಎಕ್ಸ್ ಷೋರೂಮ್). ಈ ಬೆಲೆಯು ಅಕ್ಟೊಬರ್ 31ರವರೆಗೆ ಬುಕಿಂಗ್‌ ಮಾಡುವ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ. ಸೆಪ್ಟೆಂಬರ್ 12ರಿಂದ ಕಾರಿನ ಡೆಲಿವರಿ ಶುರುವಾಗಲಿದೆ.

    ಹೊಸ ATLAS ಪ್ಲಾಟ್‌ಫಾರ್ಮ್ ಆಧರಿಸಿದ Curvv ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಹೊಸ ಹೈಪರಿಯನ್ ಗ್ಯಾಸೋಲಿನ್ ಡೈರೆಕ್ಟ್ ಇಂಜೆಕ್ಷನ್ ಎಂಜಿನ್ 125hp ಪವರ್ ಮತ್ತು 225Nm ಟಾರ್ಕ್ ಉತ್ಪಾದಿಸುತ್ತದೆ. 1.5ಲೀ ಕ್ರಯೋಜೆಟ್ ಡೀಸೆಲ್ ಎಂಜಿನ್ 118hp ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಮತ್ತು 1.2 ಲೀ ರೆವೊಟ್ರಾನ್ ಪೆಟ್ರೋಲ್ ಎಂಜಿನ್ 120hp ಪವರ್ ಮತ್ತು 170Nm ಟಾರ್ಕ್ ಉತ್ಪಾದಿಸುತ್ತದೆ. ಮಲ್ಟಿ-ಡ್ರೈವ್ ಮೋಡ್‌ಗಳು, ಪ್ಯಾಡಲ್ ಶಿಫ್ಟರ್‌ಗಳು, ಸ್ಮಾರ್ಟ್ ಇ-ಶಿಫ್ಟರ್ ಮತ್ತು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಜೊತೆಗೆ 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅನ್ನು ಕರ್ವ್ ಒಳಗೊಂಡಿದೆ. ಈ ಸೆಗ್ಮೆಂಟ್ ಕಾರುಗಳಲ್ಲಿ ಇದೇ ಮೊದಲ ಬಾರಿಗೆ ಡೀಸೆಲ್‌ ಎಂಜಿನ್‌ನಲ್ಲಿ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ನೀಡಲಾಗಿದೆ. ಇದನ್ನೂ ಓದಿ: ಕೀಬೋರ್ಡ್‌ನಲ್ಲಿ ಡಾಲರ್ ಬದಲು ರುಪಿ ಚಿಹ್ನೆ ಯಾಕಿಲ್ಲ – ಓಲಾ ಸಿಇಒ ಪ್ರಶ್ನೆ

    ಟಾಟಾ ಕರ್ವ್ ಕಾರಿನ ಒಳಾಂಗಣ ವಿನ್ಯಾಸ ನೆಕ್ಸಾನ್ ಕಾರನ್ನು ಹೋಲುವಂತಿದೆ. 31.24 ಸೆಂಮೀ (12.3) ಹರ್ಮನ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 26.03 ಸೆಂಮೀನ (10.25) ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಮತ್ತು iRA ಕನೆಕ್ಟೆಡ್ ಕಾರ್ ತಂತ್ರಜ್ಞಾನವು ಈ ಅತ್ಯಾಧುನಿಕ ಕಾರಿನಲ್ಲಿದೆ. ಸ್ಟೇರಿಂಗ್ ವೀಲ್ ಅನ್ನು ಹ್ಯಾರಿಯರ್ ಕಾರಿನಿಂದ ಎರವಲು ಪಡೆಯಲಾಗಿದೆ.

    ಭಾರತದ ಅತ್ಯಂತ ಸುರಕ್ಷಿತ ಕಾರ್ ತಯಾರಿಸುವ ಕಂಪನಿ ಎಂಬ ಹೆಗ್ಗಳಿಕೆ ಪಡೆದಿರುವ ಟಾಟಾ ಮೋಟಾರ್ಸ್‌, ಕರ್ವ್ ಕಾರಿನಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್, ಟ್ರಾಫಿಕ್ ಸೈನ್ ರೆಕಗ್ನಿಷನ್ ಸಿಸ್ಟಮ್ ಮತ್ತು 360-ಡಿಗ್ರಿ ಸರೌಂಡ್ ವ್ಯೂ ಸಿಸ್ಟಮ್ ಸೇರಿದಂತೆ 20ಕ್ಕೂ ಹೆಚ್ಚು ಕಾರ್ಯನಿರ್ವಹಣೆಯನ್ನು ಲೆವಲ್ 2 ADAS ಮಾಡಲಿದೆ. ಈ ಎಸ್‌ಯುವಿ ಕೂಪ್ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಮತ್ತು ಆಟೋ ಹೋಲ್ಡ್‌ ಜೊತೆಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಸಹ ಒಳಗೊಂಡಿದೆ. ಇದನ್ನೂ ಓದಿ: iPhone Pro, Pro Max | ದುಬಾರಿ ಫೋನ್‌ಗಳು ಫಸ್ಟ್‌ ಟೈಂ ಭಾರತದಲ್ಲೇ ತಯಾರು – ಬೆಲೆ ಎಷ್ಟು ಕಡಿಮೆಯಾಗಬಹುದು?

    ಕನೆಕ್ಟೆಡ್ ಟೈಲ್-ಲ್ಯಾಂಪ್‌ಗಳು, ಅಲಾಯ್ ವೀಲ್ಸ್, ಮೂಡ್ ಲೈಟಿಂಗ್‌ ಜೊತೆಗೆ ವಾಯ್ಸ್ ಅಸಿಸ್ಟೆಡ್ ಪ್ಯಾನಾರಮಿಕ್ ಸನ್‌ರೂಫ್, ಫ್ಲಶ್ ಡೋರ್ ಹ್ಯಾಂಡಲ್‌ ಮತ್ತಿತರ ವಿಶೇಷತೆಗಳನ್ನು ಕರ್ವ್ ಹೊಂದಿದೆ. ಟಾಟಾ ಕರ್ವ್ ಕಾರು ಗೆಶ್ಚರ್ ಕಂಟ್ರೋಲ್‌ ಹೊಂದಿರುವ ಟೈಲ್‌ಗೇಟ್‌ ಹೊಂದಿದ್ದು, ಇದ್ದು ಈ ವಿಭಾಗದ ಕಾರುಗಲ್ಲಿ ಇದೆ ಮೊದಲು. ನೀವು ನಿಮ್ಮ ಕಾಲನ್ನು ಹಿಂಬದಿಯ ಬಂಪರ್ ಕೆಳಗೆ ಅಲುಗಾಡಿಸಿದರೆ ಸಾಕು ಟೈಲ್‌ಗೇಟ್‌ ಓಪನ್ ಆಗತ್ತದೆ. 500ಲೀ ಬೂಟ್ ಸ್ಪೇಸ್‌, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, 6-ವೇ ಅಡ್ಜಸ್ಟಬಲ್ ಡ್ರೈವರ್ ಸೀಟ್ ಮತ್ತು ರಿಕ್ಲೈನ್ ಮಾಡಬಹುದಾದ ಹಿಂಬದಿಯ ಆಸನಗಳು ಕಾರಿನಲ್ಲಿವೆ.

    Curvv ಹೊಸ ಸಿಟ್ರೊಯೆನ್ ಬಸಾಲ್ಟ್ ಕೂಪ್-SUV ಜೊತೆ ನೇರವಾಗಿ ಸೆಣಸಲಿದೆ. ಮಧ್ಯಮ ಗಾತ್ರದ SUVಗಳಾದ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರೈಡರ್, ಹೋಂಡಾ ಎಲಿವೇಟ್, ಫೋಕ್ಸ್‌ವ್ಯಾಗನ್ ಟೈಗೂನ್, ಎಂಜಿ ಆಸ್ಟರ್ ಮತ್ತು ಸ್ಕೋಡಾ ಕುಶಾಕ್‌ ಕಾರುಗಳಿಗೆ ಸೆಡ್ಡು ಹೊಡೆಯುವ ಸಾಮರ್ಥ್ಯ ಕರ್ವ್ ಕಾರಿಗೆ ಇದೆ. ಇದನ್ನೂ ಓದಿ: ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಿಗೆ ನೆರವಾಗುವ ಸ್ಕೈಡೆಕ್ ಪ್ಲಾಟ್ ಫಾರ್ಮ್ ಪರಿಚಯಿಸಿದ ಆಸ್ಟರಿಯಾ

  • ನ್ಯಾನೋ ಕೇಸ್‌, ಮಮತಾಗೆ ತೀವ್ರ ಮುಖಭಂಗ – ಕೊನೆಗೂ ಗೆದ್ದ ಟಾಟಾ ಮೋಟಾರ್ಸ್‌

    ನ್ಯಾನೋ ಕೇಸ್‌, ಮಮತಾಗೆ ತೀವ್ರ ಮುಖಭಂಗ – ಕೊನೆಗೂ ಗೆದ್ದ ಟಾಟಾ ಮೋಟಾರ್ಸ್‌

    ನವದೆಹಲಿ: ಭಾರತದ ಪ್ರತಿಷ್ಠಿತ ಅಟೋಮೊಬೈಲ್‌ ಕಂಪನಿ ಟಾಟಾ ಮೋಟಾರ್ಸ್‌ (Tata Motors) ಕೊನೆಗೂ ಪಶ್ಚಿಮ ಬಂಗಾಳ (West Bengal) ಸರ್ಕಾರದ ವಿರುದ್ಧದ ದಾವೆಯನ್ನು ಗೆದ್ದುಕೊಂಡಿದೆ.

    ಸಿಂಗೂರಿನಲ್ಲಿ (Singur) ಟಾಟಾ ಫ್ಯಾಕ್ಟರಿ ಸ್ಥಾಪನೆ ಮಾಡಲು ಹೂಡಿಕೆ ಮಾಡಿ ನಷ್ಟ ಉಂಟು ಮಾಡಿದ್ದಕ್ಕೆ ಟಾಟಾ ಕಂಪನಿ ಪಶ್ಚಿಮ ಬಂಗಾಳ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (WBIDC) ವಿರುದ್ಧ ಕೇಸ್‌ ದಾಖಲಿಸಿತ್ತು.

    ದಶಕಗಳಿಂದ ನಡೆಯುತ್ತಿರುವ ಕಾನೂನು ಸಮರವನ್ನು ಟಾಟಾ ಮೋಟಾರ್ಸ್‌ ಗೆದ್ದುಕೊಂಡಿದೆ. ಟಾಟಾ ಮೋಟಾರ್ಸ್‌ಗೆ ನಷ್ಟ ಉಂಟು ಮಾಡಿದ್ದಕ್ಕೆ WBIDCಗೆ 766 ಕೋಟಿ ರೂ. ಪಾವತಿಸುವಂತೆ ಮಧ್ಯಸ್ಥಿಕೆ ನ್ಯಾಯಾಲಯ ಆದೇಶಿಸಿದೆ. ಟಾಟಾ ಮೋಟಾರ್ಸ್‌ ಮುಂಬೈ ಷೇರು ಮಾರುಕಟ್ಟೆಗೆ ಈ ಪ್ರಕರಣದ  ಮಾಹಿತಿಗಳನ್ನು ಸಲ್ಲಿಸಿದ ನಂತರ ಈ ವಿಚಾರ ಬೆಳಕಿಗೆ ಬಂದಿದೆ.   ಇದನ್ನೂ ಓದಿ: ಅಭಿವೃದ್ಧಿ Vs ಅನುದಾನ: ಸತ್ಯದ ಘೋರಿ ಕಟ್ಟಿ ಸುಳ್ಳಿನ ವಿಜೃಂಭಣೆ ಮಾಡ್ಬೇಡಿ- ಸಿದ್ದರಾಮಯ್ಯ ಸೇಡಿನ ಆರೋಪಕ್ಕೆ ಕೇಂದ್ರ ತಿರುಗೇಟು

    ಏನಿದು ಪ್ರಕರಣ?
    2006ರಲ್ಲಿ ಎಡ ಸರ್ಕಾರ 1 ಸಾವಿರ ಎಕ್ರೆ ಜಾಗವನ್ನು ಹೂಗ್ಲಿ ಬದಿಯಲ್ಲಿರುವ ಸಿಂಗೂರಿನಲ್ಲಿ ಸ್ವಾಧೀನ ಪಡಿಸಿ ನಂತರ ಆ ಭೂಮಿಯನ್ನು ಟಾಟಾ ಕಂಪನಿಗೆ ಹಸ್ತಾಂತರಿಸಿತ್ತು. ಟಾಟಾ ಕಂಪನಿ ಈ ಜಾಗದಲ್ಲಿ ನ್ಯಾನೋ ಕಾರು (Nano Car) ಉತ್ಪಾದನಾ ಘಟಕ ತೆರೆಯಲು ಮುಂದಾಗಿತ್ತು.

    ಟಾಟಾ ಕಂಪನಿಗೆ ಭೂಮಿ ನೀಡಿದ್ದಕ್ಕೆ ಅಂದಿನ ವಿರೋಧ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ (Mamata Banerjee) ಬಲವಾಗಿ ವಿರೋಧಿಸಿದ್ದರು. ರಾಜಕೀಯ ಹೈಡ್ರಾಮಾದ ಬಳಿಕ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಟಾಟಾ ಕಂಪನಿಯನ್ನು ರಾಜ್ಯಕ್ಕೆ ಬರುವಂತೆ ಆಹ್ವಾನಿಸಿದ್ದರು. ಈ ಆಹ್ವಾನವನ್ನು ಒಪ್ಪಿ ಟಾಟಾ ಕಂಪನಿ ಗುಜರಾತಿನ ಸನಂದ್‌ಗೆ ಶಿಫ್ಟ್‌ ಆಗಿತ್ತು. ಈ ಪ್ರಕರಣದಲ್ಲಿ ಪಶ್ಚಿಮ ಬಂಗಾಳದಲ್ಲಿ  ಹೂಡಿಕೆ ಮಾಡಿ ಆದ ನಷ್ಟವನ್ನು ಭರಿಸಿ ಕೊಡುವಂತೆ ಟಾಟಾ ಮೋಟಾರ್ಸ್‌ ಮಧ್ಯಸ್ಥಿಕೆ ನ್ಯಾಯಾಲಯದ ಮೊರೆ ಹೋಗಿತ್ತು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗ್ರಾಹಕರಿಗೆ ಶಾಕ್‌ ಕೊಟ್ಟ Maruti Suzuki – ಏಪ್ರಿಲ್‌ನಿಂದ ಬೆಲೆ ಮತ್ತಷ್ಟು ದುಬಾರಿ!

    ಗ್ರಾಹಕರಿಗೆ ಶಾಕ್‌ ಕೊಟ್ಟ Maruti Suzuki – ಏಪ್ರಿಲ್‌ನಿಂದ ಬೆಲೆ ಮತ್ತಷ್ಟು ದುಬಾರಿ!

    ಮುಂಬೈ: ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಇಂಡಿಯಾ (Maruti Suzuki India) ಮುಂಬರುವ ದಿನಗಳಲ್ಲಿ ತನ್ನ ಉತ್ಪನ್ನಗಳ ಮೇಲಿನ ಬೆಲೆ ಹೆಚ್ಚಿಸಲು ನಿರ್ಧರಿಸಿದೆ. ಏಪ್ರಿಲ್‌ 1 ರಿಂದಲೇ ಎಲ್ಲಾ ವಾಹನಗಳ ಮೇಲಿನ ಬೆಲೆಯನ್ನು ಹೆಚ್ಚಿಸಲಾಗುತ್ತದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ಗುರುವಾರ ತಿಳಿಸಿದೆ.

    ಕಳೆದ ಎರಡು ದಿನಗಳ ಹಿಂದೆಯಷ್ಟೇ ಪ್ರತಿಷ್ಠಿತ ಟಾಟಾ ಮೋಟರ್ಸ್‌ (TaTa Motors) ಏಪ್ರಿಲ್‌ 1 ರಿಂದ ವಾಣಿಜ್ಯ ವಾಹನಗಳ ಮೇಲಿನ ಬೆಲೆ ಶೇ.5 ರಷ್ಟು ಹೆಚ್ಚಿಸುವ ನಿರ್ಧಾರ ಪ್ರಕಟಿಸಿತ್ತು. ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್‌ ಕಂಪನಿಯೂ ಏಪ್ರಿಲ್‌ 1 ರಿಂದ ತನ್ನ ಬೈಕ್‌ಗಳು ಮತ್ತು ಸ್ಕೂಟರ್‌ಗಳ ಬೆಲೆ ಶೇ.2 ರಷ್ಟು ಹೆಚ್ಚಿಸುವುದಾಗಿ ತಿಳಿಸಿತ್ತು. ಈ ಬೆನ್ನಲ್ಲೇ ಮಾರುತಿ ಸುಜುಕಿ ಕಾರು ತಯಾರಕ ಕಂಪನಿ ಬೆಲೆ ಹೆಚ್ಚಿಸುವ ನಿರ್ಧಾರ ಪ್ರಕಟಿಸಿದೆ. ಇದನ್ನೂ ಓದಿ: ಗ್ಲಾಮರಸ್‌ ಲುಕ್‌ನ ಕವಾಸಕಿ Versys 1000 ಭಾರತದಲ್ಲಿ ಬಿಡುಗಡೆ – ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ?

    ಸರ್ಕಾರದ ನೀತಿಗಳು, ಹಣದುಬ್ಬರ ಹಾಗೂ ಉತ್ಪಾದನಾ ವೆಚ್ಚ ಹೆಚ್ಚಳದಿಂದಾಗಿ ಆರ್ಥಿಕತೆ ಸರಿದೂಗಿಸಲು ಕಾರುಗಳ ಬೆಲೆ ಏರಿಸುವುದು ಅನಿವಾರ್ಯ. ಏಪ್ರಿಲ್‌ನಿಂದ ಬೆಲೆ ಏರಿಕೆ ಅನ್ವಯವಾಗಲಿದೆ ಎಂದು ಮಾರುತಿ ಸುಜುಕಿ ಇಂಡಿಯಾ ತಿಳಿಸಿದೆ. ಇದನ್ನೂ ಓದಿ: ವಾಣಿಜ್ಯ ವಾಹನಗಳ ಖರೀದಿದಾರರಿಗೆ Tata Motors ಶಾಕ್‌ – ಏಪ್ರಿಲ್‌ 1ರಿಂದ ಬೆಲೆ ಏರಿಕೆ

    ಮಾರುತಿ ಸುಜುಕಿ ನಿರಂತರವಾಗಿ ಉತ್ಪಾದನಾ ವೆಚ್ಚ ಕಡಿಮೆ ಮಾಡಲು ಮತ್ತು ಭಾಗಶಃ ಸರಿದೂಗಿಸಲು ಪ್ರಯತ್ನಿಸುತ್ತಿದೆ. ಇದರ ಹೊರತಾಗಿಯೂ ವಾಹನಗಳ ಬೆಲೆ ಹೆಚ್ಚಿಸುವುದು ಅಗತ್ಯವಾಗಿದೆ ಎಂದು ಹೇಳಿದೆ. ಆದರೆ ನಿಖರ ಬೆಲೆಯ ಬಗ್ಗೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ.

  • ವಾಣಿಜ್ಯ ವಾಹನಗಳ ಖರೀದಿದಾರರಿಗೆ Tata Motors ಶಾಕ್‌ – ಏಪ್ರಿಲ್‌ 1ರಿಂದ ಬೆಲೆ ಏರಿಕೆ

    ವಾಣಿಜ್ಯ ವಾಹನಗಳ ಖರೀದಿದಾರರಿಗೆ Tata Motors ಶಾಕ್‌ – ಏಪ್ರಿಲ್‌ 1ರಿಂದ ಬೆಲೆ ಏರಿಕೆ

    ಮುಂಬೈ: ದೇಶದ ಅತಿದೊಡ್ಡ ವಾಣಿಜ್ಯ ವಾಹನಗಳ ತಯಾರಕ ಸಂಸ್ಥೆಯಾದ ಟಾಟಾ ಮೋಟರ್ಸ್‌ (Tata Motors) ತನ್ನ ವಾಣಿಜ್ಯ ವಾಹನಗಳ (Commercial Vehicle) ಮೇಲಿನ ಬೆಲೆಯನ್ನು ಶೇ.5ರಷ್ಟು ಹೆಚ್ಚಿಸಲಿದೆ. ಏಪ್ರಿಲ್‌ 1ರಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಕಂಪನಿ ತಿಳಿಸಿದೆ.

    BS6ನ 2ನೇ ಹಂತದ ನಿಯಮಗಳ ಪಾಲನೆಯು ಜಾರಿಗೆ ಬರುತ್ತಿರುವ ಹೊತ್ತಿನಲ್ಲಿ ಬೆಲೆ ಏರಿಕೆ ತೀರ್ಮಾನ ಹೊರಬಿದ್ದಿದೆ. ಬೆಲೆ ಏರಿಕೆಯಲ್ಲಿ ಮಾದರಿಯಿಂದ ಮಾದರಿಗೆ ವ್ಯತ್ಯಾಸ ಇರಲಿದೆ. ಈ ಮಾನದಂಡಗಳನ್ನು ಪೂರೈಸಲು ಟಾಟಾ ಮೋಟರ್ಸ್ ತನ್ನ ಸಂಪೂರ್ಣ ವಾಹನ ಪೋರ್ಟ್‌ಫೋಲಿಯೊವನ್ನು ಪರಿವರ್ತಿಸುವುದರಿಂದ ಗ್ರಾಹಕರಿಗೆ ಲಾಭದಾಯಕವಾಗಲಿದೆ. ಇದನ್ನೂ ಓದಿ: ಗ್ಲಾಮರಸ್‌ ಲುಕ್‌ನ ಕವಾಸಕಿ Versys 1000 ಭಾರತದಲ್ಲಿ ಬಿಡುಗಡೆ – ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ?

    ಈ ಬದಲಾವಣೆಯಿಂದ ಟಾಟಾ ಮೋಟರ್ಸ್‌ ಗ್ರಾಹಕರು ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ. ಕೆಡಿಮೆ ವೆಚ್ಚದಲ್ಲಿ ಸ್ವಚ್ಛತೆ, ಪರಿಸರ ಸ್ನೇಹಿ ಹಾಗೂ ತಾಂತ್ರಿಕವಾಗಿಯೂ ಉನ್ನತ ಕೊಡುಗೆಗಳನ್ನ ನಿರೀಕ್ಷಿಸಬಹುದು ಎಂದು ಕಂಪನಿ ತಿಳಿಸಿದೆ.  ಇದನ್ನೂ ಓದಿ: ಅತ್ಯಾಕರ್ಷಕ ಹೋಂಡಾ H’ness CB350, CB350RS ಬೈಕ್‌ ಭಾರತದಲ್ಲಿ ಬಿಡುಗಡೆ