Tag: Tata Electronics

  • ಸೆಮಿಕಂಡಕ್ಟರ್ ವಹಿವಾಟು 100 ಶತಕೋಟಿ ಡಾಲರ್ ನತ್ತ: ಟಾಟಾ ಎಲೆಕ್ಟ್ರಾನಿಕ್ಸ್‌ನ ಮೂರ್ತಿ ದಸಾಕ

    ಸೆಮಿಕಂಡಕ್ಟರ್ ವಹಿವಾಟು 100 ಶತಕೋಟಿ ಡಾಲರ್ ನತ್ತ: ಟಾಟಾ ಎಲೆಕ್ಟ್ರಾನಿಕ್ಸ್‌ನ ಮೂರ್ತಿ ದಸಾಕ

    – ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಮೂರ್ತಿ ದಸಾಕ ಭಾಗಿ

    ಬೆಂಗಳೂರು: ಸೆಮಿಕಂಡಕ್ಟರ್ (Semiconductor) ಕ್ಷೇತ್ರದಲ್ಲಿ ಸ್ಥಳೀಯ ಬೇಡಿಕೆ ಹೆಚ್ಚಾಗುತ್ತಿದ್ದು, 5-6 ವರ್ಷಗಳಲ್ಲಿ ದೇಶವು ಈ ಕ್ಷೇತ್ರದಲ್ಲಿ ವಾರ್ಷಿಕವಾಗಿ 100 ಬಿಲಿಯನ್ ಡಾಲರ್ ವಹಿವಾಟು ನಡೆಸುವ ಹಂತ ಮುಟ್ಟಲಿದೆ ಎಂದು ಟಾಟಾ ಎಲೆಕ್ಟ್ರಾನಿಕ್ಸ್‌ನ (Tata Electronics) ಉಪಾಧ್ಯಕ್ಷ ಮೂರ್ತಿ ದಸಾಕ (Murty Dasaka) ಮಂಗಳವಾರ ಹೇಳಿದರು.

    ಇಲ್ಲಿ ಆರಂಭವಾದ 27ನೇ ವರ್ಷದ ಬೆಂಗಳೂರು ತಂತ್ರಜ್ಞಾನ ಸಮಾವೇಶ (Bengaluru Tech Summit)ದಲ್ಲಿ ಏರ್ಪಡಿಸಿದ್ದ ʻಸೆಮಿಕಂಡಕ್ಟರ್ ಉತ್ಪಾದನೆ: ತಾಂತ್ರಿಕ ಮತ್ತು ವಾಣಿಜ್ಯಿಕ ಯಶಸ್ಸಿನ ದಾರಿʼ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಇದನ್ನೂ ಓದಿ: ವಿದ್ಯುತ್‌ ಬಿಲ್ ಬಾಕಿ, ದೆಹಲಿಯ ಹಿಮಾಚಲ ಭವನ ಮುಟ್ಟುಗೋಲು ಹಾಕಲು ಹೈಕೋರ್ಟ್ ಆದೇಶ

    ದೇಶವು 5 ಟ್ರಿಲಿಯನ್ ಡಾಲರ್ (USD) ಮೌಲ್ಯದ ಆರ್ಥಿಕತೆಯ ಗುರಿ ಸಾಧಿಸಬೇಕು ಅಂದ್ರೆ, ಸ್ಥಳೀಯವಾಗಿ ಸೆಮಿಕಂಡಕ್ಟರ್ ಉತ್ಪಾದನೆಗೆ ಒತ್ತು ಕೊಡಬೇಕು. ಇದಕ್ಕೆ ಬೇಕಾದ ಸಮರ್ಪಕ ಕಾರ್ಯ ಪರಿಸರವನ್ನು ನಾವು ಅಭಿವೃದ್ಧಿ ಪಡಿಸಬೇಕು. ಇದರಿಂದ ದೇಶವು ಸುಸ್ಥಿರ ಅಭಿವೃದ್ಧಿಯ ಕನಸನ್ನು ನನಸು ಮಾಡಿಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಬೆಂಗಳೂರಿನ ಸಮಸ್ಯೆಗಳನ್ನ ಪರಿಹರಿಸೋವರೆಗೂ ನಾನು ವಿರಮಿಸೋದಿಲ್ಲ: ಡಿಕೆಶಿ

    ಮಾರುಕಟ್ಟೆ ಮತ್ತು ಜಾಗತಿಕ ರಾಜಕಾರಣ ಎರಡೂ ಈಗ ಭಾರತಕ್ಕೆ ಅನುಕೂಲಕರವಾಗಿದ್ದು, ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಈಗ ನಮ್ಮ ಸಮಯ ಕೂಡಿಬಂದಿದೆ. ಕಳೆದ 15 ವರ್ಷಗಳಲ್ಲಿ ಭಾರತವು ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ತನ್ನ ಶಕ್ತಿ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಗಮನಾರ್ಹವಾಗಿ ಸುಧಾರಿಸಿಕೊಂಡಿದೆ. ಈಗ ಇದನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಬೇಕಾಗಿದೆ ಎಂದು ಅಪ್ಲೈಡ್ ಮೆಟೀರಿಯಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಸೂರಜ್ ರಂಗರಾಜನ್ ಹೇಳಿದರು.

    ಮೈಕ್ರಾನ್ ಟೆಕ್ನಾಲಜಿಯ ಹಿರಿಯ ನಿರ್ದೇಶಕ ಗೋಕುಲಕುಮಾರ್ ಮಾತನಾಡಿ, ಭಾರತವು ಈಗಾಗಲೇ ಸೆಮಿಕಂಡಕ್ಟರ್ ಉತ್ಪಾದನೆಗೆ ಧುಮುಕಿದೆ. ಇನ್ಮುಂದೆ ಇದಕ್ಕೆ ತಕ್ಕ ಉತ್ತೇಜನ ಕೊಡುವುದು ಆಗತ್ಯವಾಗಿದೆ. ಇದು ಸಾಧ್ಯವಾಗಬೇಕು ಎಂದರೆ, ದೇಶದಲ್ಲಿ ಇರುವ ಪ್ರತಿಭೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಮತ್ತು ದಕ್ಷವಾದ ಮೂಲಸೌಕರ್ಯವನ್ನು ಸೃಷ್ಟಿಸಬೇಕು. ಭಾರತಕ್ಕೆ ಇದನ್ನು ಸಾಧಿಸುವ ಶಕ್ತಿ ಇದೆ ಎಂದು ಪ್ರತಿಪಾದಿಸಿದರು. ಇದನ್ನೂ ಓದಿ: ಕರ್ನಾಟಕ ದೇಶದ ತಂತ್ರಜ್ಞಾನ ವಲಯದ ಹೃದಯ ಬಡಿತ: ಡಿಕೆಶಿ

    ಸಿ.ಜಿ.ಸೆಮಿ ಪ್ರೈವೇಟ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಜೆರ್ರಿ ಅರುಕಾನ್ ಆಗ್ನೇಸ್ ಅವರು, ಸೆಮಿಕಂಡಕ್ಟರ್ ಕ್ಷೇತ್ರವು ವಾಣಿಜ್ಯಿಕ ಯಶಸ್ಸನ್ನು ಕಾಣಬೇಕೆಂದರೆ ಗುಣಮಟ್ಟ, ಭದ್ರತೆ ಮತ್ತು ಸರಿಯಾದ ಸಂವಹನಗಳು ನಿರ್ಣಾಯಕವಾಗಿವೆ ಎಂದು ನುಡಿದರು. ಇದನ್ನೂ ಓದಿ: ಗ್ರಾಮೀಣ ಪ್ರದೇಶದಲ್ಲಿ ಟೆಲಿಮೆಡಿಸಿನ್, ಟೆಲಿ-ಐಸಿಯುಗಳತ್ತ ಚಿತ್ತ: ದಿನೇಶ್ ಗುಂಡೂರಾವ್

    ಏಕಗವಾಕ್ಷಿ ವ್ಯವಸ್ಥೆ ಬರಬೇಕು:
    ಗೋಷ್ಠಿಯನ್ನು ನಿರ್ವಹಿಸಿದ ಲ್ಯಾಮ್ ರೀಸರ್ಚ್‌ನ ಉಪಾಧ್ಯಕ್ಷ ರಂಗೇಶ್ ರಾಘವನ್, ʻಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಟ್ಟದಲ್ಲಿ ಒಳ್ಳೆಯ ನೀತಿಗಳಿವೆ. ಆದ್ರೆ ಖಾಸಗಿ ಉದ್ಯಮಿಗಳು ನಿಜಕ್ಕೂ ಏನು ಮಾಡುತ್ತಿದ್ದಾರೆ ಎನ್ನುವ ತಿಳಿವಳಿಕೆ ಸ್ಥಳೀಯ ಮಟ್ಟದಲ್ಲಿ ಹಲವು ಇಲಾಖೆಗಳಿಗೆ ಇರುವುದಿಲ್ಲ. ಏಕಗವಾಕ್ಷಿ ವ್ಯವಸ್ಥೆಯ ಬಗ್ಗೆ ಸಾಕಷ್ಟನ್ನು ಮಾತನಾಡಲಾಗುತ್ತಿದೆ. ಆದರೆ ಒಂದು ಗವಾಕ್ಷಿಯ ಹಿಂದೆ ಇನ್ನೂ 27 ಗವಾಕ್ಷಿಗಳಿವೆ. ಇದು ಉದ್ಯಮಿಗಳು ಎದುರಿಸುತ್ತಿರುವ ವಾಸ್ತವವಾಗಿದೆ. ನಿಜವಾದ ಅರ್ಥದಲ್ಲಿ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ಬಂದರೆ ಮಾತ್ರ ಉದ್ಯಮಿಗಳಿಗೆ ಅನುಕೂಲವಾಗಲಿದೆ ಎಂದರು.

  • ತೈವಾನ್‌ ಕಂಪನಿ ಖರೀದಿ – ಶೀಘ್ರವೇ ಟಾಟಾದಿಂದ ಐಫೋನ್‌ ಉತ್ಪಾದನೆ

    ತೈವಾನ್‌ ಕಂಪನಿ ಖರೀದಿ – ಶೀಘ್ರವೇ ಟಾಟಾದಿಂದ ಐಫೋನ್‌ ಉತ್ಪಾದನೆ

    ಬೆಂಗಳೂರು: ಕಳೆದ ಕೆಲವು ವರ್ಷಗಳಿಂದ ಆಪಲ್ (Apple) ಕಂಪನಿಯ ಐಫೋನ್ (iPhone) ಉತ್ಪಾದನೆ ಭಾರತದಲ್ಲಿ (India) ಹೊಸ ಬದಲಾವಣೆಗಳನ್ನು ತಂದಿದೆ. ಈಗಾಗಲೇ ಐಫೋನ್ 14, ಐಫೋನ್ 13 ಹಾಗೂ ಇತರ ಹೊಸ ಫೋನ್‌ಗಳನ್ನು ಭಾರತದಲ್ಲಿ ತಯಾರಿಸಿದೆ. ಭಾರತದಲ್ಲಿ ಐಫೋನ್ ತಯಾರಿಸುವ ಪ್ರಮುಖ ಕಂಪನಿಗಳಲ್ಲಿ ಫಾಕ್ಸ್ಕಾನ್ (Foxconn) ಹಾಗೂ ವಿಸ್ಟ್ರಾನ್ (Wistron) ಸೇರಿದೆ. ಆದರೆ ಇದೀಗ ಭಾರತದಲ್ಲಿ ಆಪಲ್‌ನ ಐಫೋನ್ ತಯಾರಿಸುವ ಜವಾಬ್ದಾರಿಯನ್ನು ಟಾಟಾ ಎಲೆಕ್ಟ್ರಾನಿಕ್ಸ್ (Tata Electronics) ವಹಿಸಿಕೊಳ್ಳಲು ಸಜ್ಜಾಗುತ್ತಿದೆ.

    ಆಪಲ್ ಕಂಪನಿಗೆ ಐಫೋನ್ ತಯಾರಿಸಿಕೊಡುವ ವಿಸ್ಟ್ರಾನ್ ಭಾರತದಲ್ಲಿ ತನ್ನ ಕಾರ್ಯಗಳನ್ನು ಸ್ಥಗಿತಗೊಳಿಸಲು ಮುಂದಾಗುತ್ತದೆ. ಇದೀಗ ತೈವಾನ್‌ನ ಎಲೆಕ್ಟ್ರಾನಿಕ್ಸ್ ಕಂಪನಿಯನ್ನು ಶೀಘ್ರದಲ್ಲೇ ಟಾಟಾ ಎಲೆಕ್ಟ್ರಾನಿಕ್ಸ್ ಸ್ವಾಧೀನಪಡಿಸಿಕೊಳ್ಳಲಿದ್ದು, ಐಫೋನ್ ತಯಾರಿಕೆಯ ಜವಾಬ್ದಾರಿಯನ್ನೂ ಕೈಗೆತ್ತಿಕೊಳ್ಳಲಿದೆ.

    ಭಾರತದಲ್ಲಿ ವಿಸ್ಟ್ರಾನ್‌ನ ಘಟಕ ಕರ್ನಾಟಕದ ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿದೆ. ಸುಮಾರು 4,000 ರಿಂದ 5,000 ಕೋಟಿ ರೂ. ಮೌಲ್ಯದ ಘಟಕ ಇದಾಗಿದ್ದು, ಆಪಲ್ ಐಫೊನ್ ತಯಾರಿಸುವ ದೇಶದ 3 ಪ್ರಮುಖ ಘಟಕಗಳಲ್ಲಿ ಒಂದಾಗಿದೆ. ಇದನ್ನೂ ಓದಿ: ಉಗ್ರರ ಸಂಪರ್ಕಕ್ಕೆ ಮೊಬೈಲ್ ಆಪ್ ಬಳಕೆ – 14 ಅಪ್ಲಿಕೇಷನ್ ನಿಷೇಧಿಸಿದ ಕೇಂದ್ರ

    ಸುಮಾರು 5 ವರ್ಷಗಳ ಹಿಂದೆ ವಿಸ್ಟ್ರಾನ್ ಐಫೋನ್ ಎಸ್‌ಸಿ 2 ನೊಂದಿಗೆ ಐಫೋನ್ ತಯಾರಿಸಲು ಪ್ರಾರಂಭಿಸಿತ್ತು. ಪ್ರಸ್ತುತ ಕಂಪನಿ ಭಾರತದಲ್ಲಿ ಐಫೋನ್ ಎಸ್‌ಸಿ, ಐಫೋನ್ 12, ಐಫೋನ್ 13 ಹಾಗೂ ಐಫೋನ್ 14 ಅನ್ನು ತಯಾರಿಸುತ್ತಿದೆ.

    ಆಪಲ್ ಭಾರತಕ್ಕೆ 20 ವರ್ಷಗಳ ಹಿಂದೆ ಲಗ್ಗೆಯಿಟ್ಟಿದ್ದು, ಸುದೀರ್ಘ ಇತಿಹಾಸವನ್ನು ಹೊಂದಿದೆ. 2020ರ ಸೆಪ್ಟೆಂಬರ್‌ನಲ್ಲಿ ಆಪಲ್ ದೇಶದಲ್ಲಿ ತನ್ನ ಆನ್‌ಲೈನ್ ಸ್ಟೋರ್ ಅನ್ನು ಪ್ರಾರಂಭಿಸಿತು. ಇತ್ತೀಚೆಗಷ್ಟೇ ಭಾರತದ ಮೊದಲ ಆಪಲ್ ಸ್ಟೋರ್ ಮುಂಬೈ ಹಾಗೂ ದೆಹಲಿಯಲ್ಲಿ ಉದ್ಘಾಟನೆಗೊಂಡಿದೆ. ಇದನ್ನೂ ಓದಿ: ಭಾರತದ ಮೊದಲ ಆ್ಯಪಲ್ ಸ್ಟೋರ್ ಮುಂಬೈನಲ್ಲಿ ಉದ್ಘಾಟನೆ – ಗ್ರಾಹಕರಿಗೆ ಅನುಕೂಲಗಳೇನಿದೆ?

  • ಬೆಂಗ್ಳೂರು ಬಳಿ ಟಾಟಾ ಐಫೋನ್ ಉತ್ಪಾದನಾ ಘಟಕ – 60 ಸಾವಿರ ಮಂದಿಗೆ ಉದ್ಯೋಗ

    ಬೆಂಗ್ಳೂರು ಬಳಿ ಟಾಟಾ ಐಫೋನ್ ಉತ್ಪಾದನಾ ಘಟಕ – 60 ಸಾವಿರ ಮಂದಿಗೆ ಉದ್ಯೋಗ

    ನವದೆಹಲಿ: ಆಪಲ್ ಐಫೋನ್ (Apple iPhone) ಅತಿದೊಡ್ಡ ಉತ್ಪಾದನಾ ಘಟಕ ಬೆಂಗಳೂರಿನ (Bengaluru) ಹೊಸೂರಿನಲ್ಲೇ ಸ್ಥಾಪನೆಯಾಗಲಿದೆ ಎಂದು ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಹೇಳಿದ್ದಾರೆ.

    ಮುಂದಿನ ಎರಡು ವರ್ಷದ ಒಳಗಡೆ ಘಟಕ ಕಾರ್ಯಾರಂಭಿಸಲಿದ್ದು, ಈ ಘಟಕವು 60 ಸಾವಿರ ಜನರಿಗೆ ಉದ್ಯೋಗ (Job) ನೀಡಲಿದೆ. ಅದರಲ್ಲಿ ಮೊದಲ 6 ಸಾವಿರ ಉದ್ಯೋಗಿಗಳು ರಾಂಚಿ ಹಾಗೂ ಹತ್ತಿರದ ಬುಡಕಟ್ಟು ಜನರು ಇರಲಿದ್ದಾರೆ. ಬುಡಕಟ್ಟು ಮಹಿಳೆಯರಿಗೆ ಈಗಾಗಲೇ ಐಫೋನ್ ತಯಾರಿಸಲು ತರಬೇತಿ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ. ಇದನ್ನೂ ಓದಿ: ಕೇಸರಿ ರಾಜಕೀಯ ಬಣ್ಣವಾಗೋದು ಬೇಡ – ಸರ್ಕಾರಕ್ಕೆ ಶ್ರೀನಿವಾಸ್ ಪ್ರಸಾದ್ ಸಲಹೆ

    ಟಾಟಾ ಎಲೆಕ್ಟ್ರಾನಿಕ್ಸ್‌ (Tata Electronics) ಕಂಪನಿಯ ಹೊಸೂರು ಘಟಕದಲ್ಲಿ ಐಫೋನ್ ತಯಾರಿಸಲು ಆಪಲ್ ಕಂಪನಿ ಗುತ್ತಿಗೆ ನೀಡಿದೆ. ಈಗ ಭಾರತದಲ್ಲಿ ಐಫೋನ್‌ಗಳನ್ನು ತೈವಾನ್ ಮೂಲದ ಫಾಕ್ಸ್ಕಾನ್ ಮತ್ತು ಪೆಗಟ್ರಾನ್ ಕಂಪೆನಿ ತಯಾರಿಸುತ್ತದೆ. ಇದನ್ನೂ ಓದಿ: `ಕಾಂತಾರ’ ದೈವದ ಗೆಟಪ್‌ನಲ್ಲಿ ಬಂದ ತಹಶೀಲ್ದಾರ್: ಡಿಸಿ ಶಾಕ್

    ಈಗಾಗಲೇ ಫಾಕ್ಸ್‌ಕಾನ್‌ ಚೆನ್ನೈನಲ್ಲಿ ಘಟಕ ತೆರೆದಿದ್ದರೆ ವಿಸ್ಟ್ರಾನ್ ಕಂಪನಿ ಬೆಂಗಳೂರಿನ ಬಿಡದಿ ಮತ್ತು ಕೋಲಾರದ ನರಸಪುರದಲ್ಲಿ ಘಟಕ ತೆರೆದಿದೆ. 2008ರಲ್ಲಿ ಐಫೋನ್ ಬಿಡುಗಡೆಯಾದಾಗ ಭಾರತದಲ್ಲಿ 50 ಸಾವಿರ ಫೋನುಗಳು ಮಾರಾಟವಾಗಿತ್ತು. 2021ರಲ್ಲಿ 50 ಲಕ್ಷ ಐಫೋನ್ ಮಾರಾಟವಾಗಿದ್ದರೆ 2022ರಲ್ಲಿ 70 ಲಕ್ಷಕ್ಕೂ ಅಧಿಕ ಫೋನ್ ಮಾರಾಟವಾಗಿದೆ. ಮಾರಾಟ ಹೆಚ್ಚಾಗುತ್ತಿದ್ದಂತೆ ಆಪಲ್ ಭಾರತದಲ್ಲೇ ಹೆಚ್ಚು ಐಫೋನ್ ಉತ್ಪಾದನೆಗೆ ಮುಂದಾಗಿದೆ.
    ಇದನ್ನೂ ಓದಿ: ಟಾಟಾ ಕಂಪನಿಯಿಂದ ಮೇಡ್‌ ಇನ್‌ ಇಂಡಿಯಾ ಐಫೋನ್‌ ಉತ್ಪಾದನೆ

    ಕೋವಿಡ್ ಬಳಿಕ ಆಪಲ್ ಕಂಪನಿ ಚೀನಾದ ಹೊರಗಡೆ ಐಫೋನ್ ಉತ್ಪಾದನೆ ಹೆಚ್ಚು ಮಾಡಲು ಮುಂದಾಗಿದೆ. ಕೋವಿಡ್ ನಿಯಮದಿಂದಾಗಿ ಐಫೋನ್ ಉತ್ಪಾದನಾ ಘಟಕಗಳು ಬಂದ್ ಆಗಿದ್ದರಿಂದ ಪೂರೈಕೆಯಲ್ಲಿ ಸಮಸ್ಯೆಯಾಗಿದೆ.

    Live Tv
    [brid partner=56869869 player=32851 video=960834 autoplay=true]