Tag: Tarun Sudhir

  • ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

    ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

    ರುಣ್ ಸುಧೀರ್ (Tarun Sudhir) ನಿರ್ಮಾಣದ ‘ಏಳುಮಲೆ’ ಸಿನಿಮಾ ತನ್ನ ಕಂಟೆಂಟ್ ಮೂಲಕ ಸುದ್ದಿ ಮಾಡುತ್ತಿದೆ. ಹಾಡುಗಳು ಹಾಗೂ ಟೈಟಲ್ ಟೀಸರ್ ಮೂಲಕ ಪ್ರೇಕ್ಷಕ ವಲಯದಲ್ಲಿ ನಿರೀಕ್ಷೆ ಹೆಚ್ಚಿಸಿದ್ದು, ಇದೀಗ ಈ ಚಿತ್ರದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಪುನೀತ್ ರಂಗಸ್ವಾಮಿ ಆಕ್ಷನ್ ಕಟ್ ಹೇಳಿರುವ ಏಳುಮಲೆ ಸಿನಿಮಾ ಸೆಪ್ಟೆಂಬರ್ 5ರಂದು ತೆರೆಗೆ ಬರ್ತಿದೆ. ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.ಇದನ್ನೂ ಓದಿ: ದರ್ಶನ ಪರ ಅಖಾಡಕ್ಕಿಳಿದ ಪತ್ನಿ ವಿಜಯಲಕ್ಷ್ಮಿ – ಅಭಿಮಾನಿಗಳಿಗೆ ಕೊಟ್ಟ ಸಂದೇಶ ಏನು?

    ಕರ್ನಾಟಕ-ತಮಿಳುನಾಡು ನಡುವಿನ ಗಡಿಭಾಗದ ಪ್ರೇಮಕಥೆಯಾಗಿರುವ `ಏಳುಮಲೆ’ ಸಿನಿಮಾದಲ್ಲಿ ನಟಿ ರಕ್ಷಿತಾ ಸೋದರ ರಾಣಾ ಕನ್ನಡದ ಹುಡ್ಗ ಹರೀಶ್ ಆಗಿ ನಟಿಸುತ್ತಿದ್ದಾರೆ. ರಿಯಾಲಿಟಿ ಶೋ ಮೂಲಕ ಮನೆ ಮಾತಾಗಿರುವ ಮೈಸೂರಿನ ಹುಡುಗಿ ಪ್ರಿಯಾ ಆಚಾರ್ ತಮಿಳು ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಾಣಾ, ಪ್ರಿಯಾಂಕಾ ಆಚಾರ್ ಜೊತೆಗೆ ಜಗಪತಿ ಬಾಬು, ನಾಗಾಭರಣ, ಕಿಶೋರ್ ಕುಮಾರ್, ಸರ್ದಾರ್ ಸತ್ಯ, ಜಗಪ್ಪ ತಾರಾಬಳಗದಲ್ಲಿದ್ದಾರೆ.

    ಚೌಕ ಮತ್ತು ಕಾಟೇರ ಚಿತ್ರಗಳ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಅವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅಟ್ಲಾಂಟಾ ನಾಗೇಂದ್ರ ಅವರು ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದಾರೆ. ಈ ಚಿತ್ರವು ನೈಜ ಘಟನೆಯನ್ನು ಆಧರಿಸಿದೆ. ಭಾವನಾತ್ಮಕವಾದ ಕಥೆಯನ್ನು ಒಳಗೊಂಡಿರಲಿದೆ. ಚಾಮರಾಜನಗರ, ಸೇಲಂ, ಈರೋಡ್ ಸೇರಿದಂತೆ ಕರ್ನಾಟಕ-ತಮಿಳುನಾಡು ಗಡಿ ಭಾಗದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.ಇದನ್ನೂ ಓದಿ: ಮತ್ತೆ `ಕುಂಟು’ನೆಪ – ದರ್ಶನ್ ಬೆನ್ನುನೋವಿಗೆ ಜೈಲಿನ ಆಸ್ಪತ್ರೆಯಲ್ಲೇ ಚಿಕಿತ್ಸೆ!

  • ರೋಸ್ ಆಚರಣೆಯಲ್ಲಿ ಮಿಂಚಿದ ನಟಿ ಸೋನಲ್

    ರೋಸ್ ಆಚರಣೆಯಲ್ಲಿ ಮಿಂಚಿದ ನಟಿ ಸೋನಲ್

    ಟಿ ಸೋನಲ್ (Sonal) ಮಾಂಥೆರೋ ನಿರ್ದೇಶಕ ತರುಣ್ ಸುಧೀರ್ (Tarun Sudhir)  ಜೊತೆ ಆಗಸ್ಟ್ ೧೦ ರಂದು ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ರು. ಇದೀಗ ಸೋನಲ್ ತರುಣ್ ಜೋಡಿಗೆ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರವೂ ಒಂದಾಗುತ್ತಿದ್ದಾರೆ. ಸೋನಲ್ ಹುಟ್ಟೂರು ಮಂಗಳೂರಿನಲ್ಲಿ ಸಪ್ಟೆಂಬರ್ 1 ರಂದು ಚರ್ಚ್ನಲ್ಲಿ ವಿವಾಹ ನಡೆಯಲಿಒದೆ. ಬಳಿಕ ಪ್ರತಿಷ್ಟಿತ ಕನ್ವೆಂಷನ್ ಹಾಲ್‌ನಲ್ಲಿ ಆರತಕ್ಷತೆ ನಡೆಸಲು ತಯಾರಿ ನಡೆದಿದೆ.

    ಕ್ರಿಶ್ಚಿಯನ್ ಸಂಪ್ರದಾಯದ ಹಲವೆಡೆ ಮಧುಮಗಳಿಗೆ ರೋಸ್ ಸೆಲೆಬ್ರೇಷನ್ (Rose Celebration) ಮಾಡುವ ಪದ್ಧತಿ ಇದೆ. ಅದರ ಪ್ರಕಾರ ಸೋನಲ್‌ಗೆ ರೋಸ್ ಸೆಲೆಬ್ರೇಷನ್ ಕಾರ್ಯಕ್ರಮವನ್ನೂ ಮಾಡಲಾಗಿದೆ. ತಾಯಿ-ಬಂಧುಗಳು ಹಾಗೂ ಗೆಳತಿಯರ ಜೊತೆ ನವವಧು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆ ಪೂರ್ವ ಕಾರ್ಯಗಳಲ್ಲಿ ಪಾಲ್ಗೊಂಡ್ರು. ಹಳದಿ ಬಣ್ಣದ ಪಾರ್ಟಿವೇರ್ ಉಡುಗೆಯಲ್ಲಿ ಸೋನಲ್ ನಳನಳಿಸಿದ್ದಾರೆ.

    ಅಂತರ್‌ಧರ್ಮೀಯ ಮದುವೆಯಾದ ತರುಣ್ ಸೋನಲ್ ಎರಡೂ ಕಡೆಯ ಸಂಪ್ರದಾಯವನ್ನ ಪಾಲಿಸುವ ಸಲುವಾಗಿ ಹಿಂದೂ ಹಾಗೂ ಕ್ರಿಶ್ಚಿಯನ್ ಧರ್ಮದ ಸಂಪ್ರದಾಯದ ರೀತಿ ಮದುವೆಯಗುತ್ತಿದ್ದಾರೆ. ಮಂಗಳೂರಿನಲ್ಲಿ ನಡೆಯುವ ವಿವಾಹ ಕಾರ್ಯಕ್ರಮವನ್ನ ಖಾಸಗಿಯಾಗಿ ನೆರವೇರಿಸಲು ಪ್ಲ್ಯಾನ್ ಮಾಡಿಕೊಂಡಿರುವ ತರುಣ್ ಸೋನಲ್ ಜೋಡಿ ಅಲ್ಲಿನ ಜನರಿಗಷ್ಟೇ ಆಹ್ವಾನ ನೀಡಿದೆ.

  • Tharun Sonal Wedding: ಗಮನ ಸೆಳೆದ ಸೋನಲ್ ಲುಕ್‍, ಮೈಸೂರು ಪೇಟ ತೊಟ್ಟ ತರುಣ್

    Tharun Sonal Wedding: ಗಮನ ಸೆಳೆದ ಸೋನಲ್ ಲುಕ್‍, ಮೈಸೂರು ಪೇಟ ತೊಟ್ಟ ತರುಣ್

    ಇಂದು ಹೊಸ ಜೀವನಕ್ಕೆ ಕಾಲಿಟ್ಟ ತರುಣ್ ಸುಧೀರ್ (Tarun Sudhir) ಮತ್ತು ಸೋನಲ್‍(Sonal)  ಲುಕ್‍ ಎಲ್ಲರ ಗಮನ ಸೆಳೆಯಿತು. ಗೋಲ್ಡನ್ ಸೀರೆಯಲ್ಲಿ ಸೋನಲ್ ಗೊಂಬೆಯಂತೆ ಕಂಡರೆ, ಮೈಸೂರು ಪೇಟ ತೊಟ್ಟು ತರುಣ್ ಸಖತ್ತಾಗಿಯೇ ಪೋಸ್ ಕೊಟ್ಟರು.  ಸೋನಲ್‍ ಧರಿಸಿದ್ದ ಜ್ಯುವೆಲರಿ ಕೂಡ ಎಲ್ಲರ ಗಮನ ಸೆಳೆದವು.

    ಗೋಲ್ಡನ್ ಕಲರ್ ಕುರ್ತಾ ಮತ್ತು ಅದೇ ಬಣ್ಣ ಪಂಚೆ ತೊಟ್ಟಿದ್ದ ತರುಣ್‍, ತಲೆ ಮೇಲಿನ ಮೈಸೂರು ಪೇಟೆ ಮಾತ್ರ ಅವರಿಗೆ ಮತ್ತಷ್ಟು ಕಳೆ ತಂದಿತ್ತು. ಈ ಜೋಡಿಯ ಮದುವೆ (marriage) ಎರಡು ಥೀಮ್‍ ನಲ್ಲಿ ನಡೆದಿದೆ.  ಆರತಕ್ಷತೆಯು ಸಿನಿಮಾ ಪ್ರಶಸ್ತಿ ಪ್ರದಾನ ಸಮಾಂಭದ ಥೀಮ್‍ ನಲ್ಲಿ ನಡೆದಿದ್ದರೆ, ಮದುವೆ ಸಂಪ್ರದಾಯಿಕ ಶೈಲಿಯಲ್ಲಿತ್ತು.

    ಇಂದು ಬೆಳಗ್ಗೆ 10.50ಕ್ಕೆ ಬೆಂಗಳೂರಿನ ಪೂರ್ಣಿಮಾ ಪಾಲೇಸ್‍ ನಲ್ಲಿ ನಡೆದ ಮದುವೆಯ ಸಮಾರಂಭದಲ್ಲಿ ಚಿತ್ರರಂಗದ ಅನೇಕ ಗಣ್ಯರ ಮತ್ತು ಕುಟುಂಬದ ಸದಸ್ಯರು ಹಾಜರಿದ್ದರು. ತಾಳಿ ಕಟ್ಟೋ ವೇಳೆ ನಟಿ ಸೋನಲ್ ಭಾವುಕರಾಗಿದ್ದರು.

    ನಟರಾದ ಶಿವರಾಜ್ ಕುಮಾರ್, ಗಣೇಶ್, ಶರಣ್, ಜಗಪತಿ ಬಾಬು, ನೆನಪಿರಲಿ ಪ್ರೇಮ್, ಅವಿನಾಶ, ಗಾಯಕ ವಿಜಯ ಪ್ರಕಾಶ್, ನಟಿಯರಾದ ತಾರಾ , ಗಿರಿಜಾ ಲೋಕೇಶ್,  ಶ್ರುತಿ, ಮೇಘನಾ ರಾಜ್‍, ಮೇಘಾ ಶೆಟ್ಟಿ, ರಚಿತಾ ರಾಮ್, ಸುಧಾರಾಣಿ, ನಿಶ್ವಿಕಾ ನಾಯ್ಡು, ಪದ್ಮರಾಜ್ ರಾವ್ ಸಂಗೀತ ನಿರ್ದೇಶಕರಾದ ಹಂಸಲೇಖ, ಹರಿಕೃಷ್ಣ, ಸಾಧು ಕೋಕಿಲಾ ಸೇರಿದಂತೆ ಸಾಕಷ್ಟು ತಾರಾಯರು ಈ ಮದುವೆಗೆ ಸಾಕ್ಷಿಯಾಗಿದ್ದರು

  • Album | Tharun Sonal Wedding: ತರುಣ್-ಸೋನಲ್ ಮದುವೆಯಲ್ಲಿ ತಾರಾ ಕಲರವ

    Album | Tharun Sonal Wedding: ತರುಣ್-ಸೋನಲ್ ಮದುವೆಯಲ್ಲಿ ತಾರಾ ಕಲರವ

    ತ್ತೊಂದು ಸ್ಟಾರ್ ಜೋಡಿಗೆ ಸಾಕ್ಷಿಯಾಗಿತ್ತು ಸ್ಯಾಂಡಲ್‍ವುಡ್. ತರುಣ್ (Tarun Sudhir) ಮತ್ತು ಸೋನಲ್‍ (Sonal) ಆಪ್ತರು ಹಾಗೂ ಬಹುತೇಕ ಸ್ಟಾರ್ ನಟರು ಈ ಮದುವೆಗೆ (Marriage) ಬಂದು ನೂತನ ದಂಪತಿಗೆ ಶುಭ ಹಾರೈಸಿದರು. ಜೊತೆಗೆ ಪರಭಾಷಾ ಕೆಲ ನಟ ನಟಿಯರು ಕೂಡ ಆಗಮಿಸಿದ್ದರು. ತಾರಾ ಕಲರವವೇ ಅಲ್ಲಿ ನೆರದಿತ್ತು.

    ನಟರಾದ ಶಿವರಾಜ್ ಕುಮಾರ್, ಗಣೇಶ್, ಶರಣ್, ಜಗಪತಿ ಬಾಬು, ನೆನಪಿರಲಿ ಪ್ರೇಮ್, ಅವಿನಾಶ, ಗಾಯಕ ವಿಜಯ ಪ್ರಕಾಶ್, ನಟಿಯರಾದ ತಾರಾ , ಗಿರಿಜಾ ಲೋಕೇಶ್,  ಶ್ರುತಿ, ಮೇಘನಾ ರಾಜ್‍, ಮೇಘಾ ಶೆಟ್ಟಿ, ರಚಿತಾ ರಾಮ್, ಸುಧಾರಾಣಿ, ನಿಶ್ವಿಕಾ ನಾಯ್ಡು, ಪದ್ಮರಾಜ್ ರಾವ್ ಸಂಗೀತ ನಿರ್ದೇಶಕರಾದ ಹಂಸಲೇಖ, ಹರಿಕೃಷ್ಣ, ಸಾಧು ಕೋಕಿಲಾ ಸೇರಿದಂತೆ ಸಾಕಷ್ಟು ತಾರಾಯರು ಈ ಮದುವೆಗೆ ಸಾಕ್ಷಿಯಾಗಿದ್ದರು.

    ಹೊಸ ಜೀವನ ಶುರು ಮಾಡ್ತಿದ್ದೀವಿ ತುಂಬಾ ಖುಷಿ ಇದೆ: ಸೋನಲ್ 

    ಗುರು ಹಿರಿಯರ ಸಮ್ಮುಖದಲ್ಲಿ ಇಂದು ನಟಿ ಸೋನಲ್ ಮತ್ತು ನಿರ್ದೇಶಕ ತರುಣ್ ಸುಧೀರ್‍ ಸಪ್ತಪದಿ ತುಳಿದಿದ್ದಾರೆ. ಈ ಮದುವೆಗೆ ಅನೇಕ ಗಣ್ಯರು ಸಾಕ್ಷಿಯಾಗಿದ್ದರು. ಸ್ಯಾಂಡಲ್‍ ವುಡ್ ನಟ ನಟಿಯರು, ತಂತ್ರಜ್ಞರು ಮತ್ತು ಪರ ಭಾಷಾ ನಟರೂ ಆಗಮಿಸಿದ್ದರು. ಜೊತೆಗೆ ರಾಜಕಾರಣಗಳು ಕೂಡ ಮದುವೆಗೆ ಸಾಕ್ಷಿಯಾಗಿದ್ದು ವಿಶೇಷ. ಹಾಗಾಗಿ ಸಹಜವಾಗಿಯೇ ಹೊಸ ದಂಪತಿಗೆ ಸಂಭ್ರಮವಾಗಿದೆ.

    ಮದುವೆ ಕುರಿತಂತೆ ನಟಿ ಸೋನಲ್ ಮಾತನಾಡುತ್ತಾ, ‘ಹೊಸ ಜೀವನ ಶುರು ಮಾಡ್ತಿದ್ದೀವಿ ತುಂಬಾ ಖುಷಿ ಇದೆ. ದರ್ಶನ್ ಸರ್ ನಮ್ ಜೀವನದಲ್ಲಿ ಇಂಪಾರ್ಟೆಂಟ್ ರೋಲ್ ಪ್ಲೇ ಮಾಡಿದ್ದಾರೆ. ಅವರನ್ನು ಯಾವತ್ತೂ ಮರೆಯಲ್ಲ. ನನ್ನ ಹುಟ್ಟು ಹಬ್ಬದ ದಿನದಂದೇ ನಾನು ಹೊಸ ಜೀವನಕ್ಕೆ ಕಾಲಿಡ್ತಾ ಇರೋದು ಅತ್ಯಂತ ಸಂಭ್ರಮ ತಂದಿದೆ’ ಅಂದಿದ್ದಾರೆ.

    ತರುಣ್ ಸುಧೀರ್ ಹೇಳಿದ್ದೇನು?..

    ನಿರ್ದೇಶಕ ತರುಣ್ ಸುಧೀರ್ ಮತ್ತು ಸೋನಲ್‍ ಮದುವೆ ಆಗೋಕೆ ಕಾರಣವೇ ನಟ ದರ್ಶನ್. ಅಂದುಕೊಂಡಂತೆ ಆಗಿದ್ದರೆ ದರ್ಶನ್ ಮುಂದೆ ನಿಂತು ಈ ಜೋಡಿಯ ಮದುವೆ ಮಾಡಬೇಕಿತ್ತು. ಇವರ ಮದುವೆ ನಿಶ್ಚಿಯ ಮಾಡಿ ಕೊಲೆ ಕೇಸ್‍್ ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿಕೊಂಡರು ದರ್ಶನ್. ಈ ಮದುವೆಗೆ ದರ್ಶನ್ ಬರ್ತಾರೆ ಅನ್ನೋ ಮಾತು ಸುಳ್ಳಾಯಿತು ಹಾಗಾಗಿ ಅವರ ಅನುಪಸ್ಥಿತಿ ಬೇಸರ ತರಿಸಿದೆ ಎಂದಿದ್ದಾರೆ ತರುಣ್ ಸುಧೀರ್.

    ಮದುವೆಯ ಈ ಸಂಭ್ರಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ತರುಣ್, `ಹೊಸ ಜೀವನ ಹೊಸ ಹುರುಪಿದೆ. ಇಷ್ಟು ದಿನ ಕಾದಿದ್ದಕ್ಕೂ ಬೇಸ್ಟ್ ಕೊಟ್ಟಿದಾರೆ ದೇವ್ರು. ತುಂಬಾ ಜನ ಬಂದು ವಿಶ್ ಮಾಡಿದ್ರು ಎಲ್ಲರೂ ತಮ್ಮನ ಥರ ಕುಟುಂಬದ ಥರ ಬಂದು ಹಾರೈಸಿದ್ರು ಎಂದಿದ್ದಾರೆ.

    ದರ್ಶನ್ ಅನುಪಸ್ಥಿತಿ ಬಗ್ಗೆಯೂ ಮಾತನಾಡಿದ ತರುಣ್, `ಲಗ್ನ ಪತ್ರಿಕೆ ಬರೆಸುವ ಮುಂಚೆ ಡೇಟ್ ಕನ್ಪರ್ಮ್ ಆಗಿತ್ತು. ಡೇಟ್ ಚೇಂಜ್ ಮಾಡ್ಬೇಡ ಮದ್ವೆ ಮಾಡ್ಕೊ ಅಂದ್ರು ದರ್ಶನ್. ಆಗಸ್ಟ್ 11 ಡೇಟ್ ಕೊಟ್ಟಿದ್ವಿ. ಅವರು ಹೇಳಿದಂತೆ ಮದುವೆ ಆಗ್ತಿದ್ದೇವೆ. ದರ್ಶನ್ ಅವ್ರ ಅನುಪಸ್ಥಿತಿ ಬೇಸರ ಅನ್ನಿಸ್ತಿದೆ’ ಎಂದು ದರ್ಶನ್ ಬಗ್ಗೆ ಮಾತಾಡ್ತಾ ಭಾವುಕರಾದ ತರುಣ್ ಸುಧೀರ್.

    ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮದುವೆ ಇಂದು ಬೆಳಗ್ಗೆ 10.50ಕ್ಕೆ ಬೆಂಗಳೂರಿನ ಪೂರ್ಣಿಮಾ ಪಾಲೇಸ್‍ ನಲ್ಲಿ ನಡೆಯಿತು. ಚಿತ್ರರಂಗದ ಅನೇಕ ಗಣ್ಯರ ಮತ್ತು ಕುಟುಂಬದ ಸಮ್ಮುಖದಲ್ಲಿ ಈ ಜೋಡಿ ಹೊಸ ಜೀವನಕ್ಕೆ ಕಾಲಿಟಿತು. ತಾಳಿ ಕಟ್ಟೋ ವೇಳೆ ನಟಿ ಸೋನಲ್ ಭಾವುಕರಾಗಿದ್ದರು.

  • Tharun Sonal Wedding- ಬರ್ತ್ ಡೇ ದಿನಾನೇ ಮದುವೆ ನನಗೆ ತುಂಬಾ ಸ್ಪೆಷಲ್: ನಟಿ ಸೋನಲ್

    Tharun Sonal Wedding- ಬರ್ತ್ ಡೇ ದಿನಾನೇ ಮದುವೆ ನನಗೆ ತುಂಬಾ ಸ್ಪೆಷಲ್: ನಟಿ ಸೋನಲ್

    ಗುರು ಹಿರಿಯರ ಸಮ್ಮುಖದಲ್ಲಿ ಇಂದು ನಟಿ ಸೋನಲ್ (Sonal) ಮತ್ತು ನಿರ್ದೇಶಕ ತರುಣ್ ಸುಧೀರ್‍ (Tarun Sudhir) ಸಪ್ತಪದಿ ತುಳಿದಿದ್ದಾರೆ. ಈ ಮದುವೆಗೆ (marriage) ಅನೇಕ ಗಣ್ಯರು ಸಾಕ್ಷಿಯಾಗಿದ್ದರು. ಸ್ಯಾಂಡಲ್‍ ವುಡ್ ನಟ ನಟಿಯರು, ತಂತ್ರಜ್ಞರು ಮತ್ತು ಪರ ಭಾಷಾ ನಟರೂ ಆಗಮಿಸಿದ್ದರು. ಜೊತೆಗೆ ರಾಜಕಾರಣಗಳು ಕೂಡ ಮದುವೆಗೆ ಸಾಕ್ಷಿಯಾಗಿದ್ದು ವಿಶೇಷ. ಹಾಗಾಗಿ ಸಹಜವಾಗಿಯೇ ಹೊಸ ದಂಪತಿಗೆ ಸಂಭ್ರಮವಾಗಿದೆ.

    ಮದುವೆ ಕುರಿತಂತೆ ನಟಿ ಸೋನಲ್ ಮಾತನಾಡುತ್ತಾ, ‘ಹೊಸ ಜೀವನ ಶುರು ಮಾಡ್ತಿದ್ದೀವಿ ತುಂಬಾ ಖುಷಿ ಇದೆ. ದರ್ಶನ್ ಸರ್ ನಮ್ ಜೀವನದಲ್ಲಿ ಇಂಪಾರ್ಟೆಂಟ್ ರೋಲ್ ಪ್ಲೇ ಮಾಡಿದ್ದಾರೆ. ಅವರನ್ನು ಯಾವತ್ತೂ ಮರೆಯಲ್ಲ. ನನ್ನ ಹುಟ್ಟು ಹಬ್ಬದ ದಿನದಂದೇ ನಾನು ಹೊಸ ಜೀವನಕ್ಕೆ ಕಾಲಿಡ್ತಾ ಇರೋದು ಅತ್ಯಂತ ಸಂಭ್ರಮ ತಂದಿದೆ’ ಅಂದಿದ್ದಾರೆ.

    ತರುಣ್ ಸುಧೀರ್ ಹೇಳಿದ್ದೇನು?..

    ನಿರ್ದೇಶಕ ತರುಣ್ ಸುಧೀರ್ ಮತ್ತು ಸೋನಲ್‍ ಮದುವೆ ಆಗೋಕೆ ಕಾರಣವೇ ನಟ ದರ್ಶನ್. ಅಂದುಕೊಂಡಂತೆ ಆಗಿದ್ದರೆ ದರ್ಶನ್ ಮುಂದೆ ನಿಂತು ಈ ಜೋಡಿಯ ಮದುವೆ ಮಾಡಬೇಕಿತ್ತು. ಇವರ ಮದುವೆ ನಿಶ್ಚಿಯ ಮಾಡಿ ಕೊಲೆ ಕೇಸ್‍್ ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿಕೊಂಡರು ದರ್ಶನ್. ಈ ಮದುವೆಗೆ ದರ್ಶನ್ ಬರ್ತಾರೆ ಅನ್ನೋ ಮಾತು ಸುಳ್ಳಾಯಿತು ಹಾಗಾಗಿ ಅವರ ಅನುಪಸ್ಥಿತಿ ಬೇಸರ ತರಿಸಿದೆ ಎಂದಿದ್ದಾರೆ ತರುಣ್ ಸುಧೀರ್.

    ಮದುವೆಯ ಈ ಸಂಭ್ರಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ತರುಣ್, `ಹೊಸ ಜೀವನ ಹೊಸ ಹುರುಪಿದೆ. ಇಷ್ಟು ದಿನ ಕಾದಿದ್ದಕ್ಕೂ ಬೇಸ್ಟ್ ಕೊಟ್ಟಿದಾರೆ ದೇವ್ರು. ತುಂಬಾ ಜನ ಬಂದು ವಿಶ್ ಮಾಡಿದ್ರು ಎಲ್ಲರೂ ತಮ್ಮನ ಥರ ಕುಟುಂಬದ ಥರ ಬಂದು ಹಾರೈಸಿದ್ರು ಎಂದಿದ್ದಾರೆ.

    ದರ್ಶನ್ ಅನುಪಸ್ಥಿತಿ ಬಗ್ಗೆಯೂ ಮಾತನಾಡಿದ ತರುಣ್, `ಲಗ್ನ ಪತ್ರಿಕೆ ಬರೆಸುವ ಮುಂಚೆ ಡೇಟ್ ಕನ್ಪರ್ಮ್ ಆಗಿತ್ತು. ಡೇಟ್ ಚೇಂಜ್ ಮಾಡ್ಬೇಡ ಮದ್ವೆ ಮಾಡ್ಕೊ ಅಂದ್ರು ದರ್ಶನ್. ಆಗಸ್ಟ್ 11 ಡೇಟ್ ಕೊಟ್ಟಿದ್ವಿ. ಅವರು ಹೇಳಿದಂತೆ ಮದುವೆ ಆಗ್ತಿದ್ದೇವೆ. ದರ್ಶನ್ ಅವ್ರ ಅನುಪಸ್ಥಿತಿ ಬೇಸರ ಅನ್ನಿಸ್ತಿದೆ’ ಎಂದು ದರ್ಶನ್ ಬಗ್ಗೆ ಮಾತಾಡ್ತಾ ಭಾವುಕರಾದ ತರುಣ್ ಸುಧೀರ್.

    ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮದುವೆ ಇಂದು ಬೆಳಗ್ಗೆ 10.50ಕ್ಕೆ ಬೆಂಗಳೂರಿನ ಪೂರ್ಣಿಮಾ ಪಾಲೇಸ್‍ ನಲ್ಲಿ ನಡೆಯಿತು. ಚಿತ್ರರಂಗದ ಅನೇಕ ಗಣ್ಯರ ಮತ್ತು ಕುಟುಂಬದ ಸಮ್ಮುಖದಲ್ಲಿ ಈ ಜೋಡಿ ಹೊಸ ಜೀವನಕ್ಕೆ ಕಾಲಿಟಿತು. ತಾಳಿ ಕಟ್ಟೋ ವೇಳೆ ನಟಿ ಸೋನಲ್ ಭಾವುಕರಾಗಿದ್ದರು.

  • Tharun Sonal Wedding:  ದರ್ಶನ್ ಅನುಪಸ್ಥಿತಿ ಬೇಸರವಾಗ್ತಿದೆ- ತರುಣ್ ಸುಧೀರ್

    Tharun Sonal Wedding: ದರ್ಶನ್ ಅನುಪಸ್ಥಿತಿ ಬೇಸರವಾಗ್ತಿದೆ- ತರುಣ್ ಸುಧೀರ್

    ನಿರ್ದೇಶಕ ತರುಣ್ ಸುಧೀರ್ (Tarun Sudhir) ಮತ್ತು ಸೋನಲ್‍ (Sonal) ಮದುವೆ (Marriage) ಆಗೋಕೆ ಕಾರಣವೇ ನಟ ದರ್ಶನ್. ಅಂದುಕೊಂಡಂತೆ ಆಗಿದ್ದರೆ ದರ್ಶನ್ ಮುಂದೆ ನಿಂತು ಈ ಜೋಡಿಯ ಮದುವೆ ಮಾಡಬೇಕಿತ್ತು. ಇವರ ಮದುವೆ ನಿಶ್ಚಿಯ ಮಾಡಿ ಕೊಲೆ ಕೇಸ್‍ ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿಕೊಂಡರು ದರ್ಶನ್. ಈ ಮದುವೆಗೆ ದರ್ಶನ್ (Darshan) ಬರ್ತಾರೆ ಅನ್ನೋ ಮಾತು ಸುಳ್ಳಾಯಿತು ಹಾಗಾಗಿ ಅವರ ಅನುಪಸ್ಥಿತಿ ಬೇಸರ ತರಿಸಿದೆ ಎಂದಿದ್ದಾರೆ ತರುಣ್ ಸುಧೀರ್.

    ಮದುವೆಯ ಈ ಸಂಭ್ರಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ತರುಣ್, `ಹೊಸ ಜೀವನ ಹೊಸ ಹುರುಪಿದೆ. ಇಷ್ಟು ದಿನ ಕಾದಿದ್ದಕ್ಕೂ ಬೇಸ್ಟ್ ಕೊಟ್ಟಿದಾರೆ ದೇವ್ರು. ತುಂಬಾ ಜನ ಬಂದು ವಿಶ್ ಮಾಡಿದ್ರು ಎಲ್ಲರೂ ತಮ್ಮನ ಥರ ಕುಟುಂಬದ ಥರ ಬಂದು ಹಾರೈಸಿದ್ರು ಎಂದಿದ್ದಾರೆ.

    ದರ್ಶನ್ ಅನುಪಸ್ಥಿತಿ ಬಗ್ಗೆಯೂ ಮಾತನಾಡಿದ ತರುಣ್, `ಲಗ್ನ ಪತ್ರಿಕೆ ಬರೆಸುವ ಮುಂಚೆ ಡೇಟ್ ಕನ್ಪರ್ಮ್ ಆಗಿತ್ತು. ಡೇಟ್ ಚೇಂಜ್ ಮಾಡ್ಬೇಡ ಮದ್ವೆ ಮಾಡ್ಕೊ ಅಂದ್ರು ದರ್ಶನ್. ಆಗಸ್ಟ್ 11 ಡೇಟ್ ಕೊಟ್ಟಿದ್ವಿ. ಅವರು ಹೇಳಿದಂತೆ ಮದುವೆ ಆಗ್ತಿದ್ದೇವೆ. ದರ್ಶನ್ ಅವ್ರ ಅನುಪಸ್ಥಿತಿ ಬೇಸರ ಅನ್ನಿಸ್ತಿದೆ’ ಎಂದು ದರ್ಶನ್ ಬಗ್ಗೆ ಮಾತಾಡ್ತಾ ಭಾವುಕರಾದ ತರುಣ್ ಸುಧೀರ್.

    ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮದುವೆ ಇಂದು ಬೆಳಗ್ಗೆ 10.50ಕ್ಕೆ ಬೆಂಗಳೂರಿನ ಪೂರ್ಣಿಮಾ ಪಾಲೇಸ್‍ ನಲ್ಲಿ ನಡೆಯಿತು. ಚಿತ್ರರಂಗದ ಅನೇಕ ಗಣ್ಯರ ಮತ್ತು ಕುಟುಂಬದ ಸಮ್ಮುಖದಲ್ಲಿ ಈ ಜೋಡಿ ಹೊಸ ಜೀವನಕ್ಕೆ ಕಾಲಿಟಿತು. ತಾಳಿ ಕಟ್ಟೋ ವೇಳೆ ನಟಿ ಸೋನಲ್ ಭಾವುಕರಾಗಿದ್ದರು.

    ತರುಣ್ -ಸೋನಲ್ ಮದುವೆಗೆ ಅದ್ದೂರಿ ಧಾರೆ ಮಂಟಪ ಸೆಟ್ ಹಾಕಲಾಗಿದೆ. ದಕ್ಷಿಣ ಭಾರತ ಶೈಲಿಯಲ್ಲಿ ಕಲ್ಯಾಣ ಮಂಟಪದ ಅಲಂಕಾರ ಮಾಡಲಾಗಿದೆ.  ಪ್ರವೇಶ ದ್ವಾರದಲ್ಲಿ ಮಹಾದ್ವಾರದ ಮಾದರಿ ಅಲಂಕಾರ ಮಾಡಲಾಗಿತ್ತು.  ವಿಷ್ಣುವಿನ ದಶಾವತಾರಗಳ ಮಧ್ಯೆ ಕಮಲ ಮಂಟಪದ ಸಿದ್ದತೆ ಮಾಡಿದ್ದು ವಿಶೇಷವಾಗಿತ್ತು.

  • ಸೋನಲ್-ತರುಣ್ ಮದುವೆ ಸಂಭ್ರಮ: ಬ್ಯಾಚುಲರೇಟ್ ಪಾರ್ಟಿಯ ಗುಂಗಲಿ ನಟಿ

    ಸೋನಲ್-ತರುಣ್ ಮದುವೆ ಸಂಭ್ರಮ: ಬ್ಯಾಚುಲರೇಟ್ ಪಾರ್ಟಿಯ ಗುಂಗಲಿ ನಟಿ

    ಕಾಟೇರ ಚಿತ್ರ ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮದುವೆ ಕಾರ್ಯಕ್ರಮಗಳು ಶುರುವಾಗಿವೆ. ಮದುವೆಗೂ ಮುನ್ನ ಫ್ಯಾಮಿಲಿ ಜೊತೆ ಸೋನಲ್ ಪಾರ್ಟಿ ಮಾಡಿದ್ದಾರೆ. ಕುಟುಂಬದ ಜೊತೆ ಬ್ಯಾಚುಲರೇಟ್ ಪಾರ್ಟಿಯಲ್ಲಿ ಸೋನಲ್ ಕುಣಿದು ಕುಪ್ಪಳಿಸಿದ್ದಾರೆ.  ಮಗಳಿಗಾಗಿ ಸರ್ಪ್ರೈಸ್ ಪಾರ್ಟಿ ಕೊಟ್ಟ ಸಂಭ್ರಮಕ್ಕೆ ಕಾರಣರಾಗಿದ್ದಾರೆ ಸೋನಲ್ ತಾಯಿ ಮತ್ತು ತಂಗಿ.

    ಗಸ್ಟ್ 10 ಮತ್ತು 11ನೇ ತಾರೀಖು ಬೆಂಗಳೂರಿನಲ್ಲಿ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ  ಕಾಟೇರ ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ (Tarun Sudhir) ಮತ್ತು ನಟಿ ಸೋನಲ್‍ (Sonal). 10ನೇ ತಾರೀಖು ಆರತಕ್ಷತೆ ಕಾರ್ಯಕ್ರಮವಿದ್ದರೆ 11ನೇ ತಾರೀಖು ಈ ಜೋಡಿ ಸಪ್ತಪದಿ ತುಳಿಯಲಿದೆ. ಮದುವೆ (Marriage) ಕುರಿತಾಗಿ ಮಾಧ್ಯಮಗಳ ಜೊತೆ ಅನೇಕ ವಿಷಯಗಳನ್ನು ಹಂಚಿಕೊಂಡಿದೆ ಈ ಜೋಡಿ.

    ಲವ್‍ ಸ್ಟೋರಿಗೆ ದರ್ಶನ್ ಕಾರಣ

    ಈ ಜೋಡಿಯ ಲವ್ ಸ್ಟೋರಿಗೆ ದರ್ಶನ್ ಕಾರಣವಂತೆ. ಈ ಕುರಿತಂತೆ ಮಾತನಾಡಿದ್ದಾರೆ ತರುಣ್. ‘ರಾಬರ್ಟ್‌ ಸೆಟ್ ನಲ್ಲಿ ದರ್ಶನ್ ಸರ್ ತಮಾಷೆಯಾಗಿ ರೇಗಿಸ್ತಿದ್ರು. ಸೋನಾಲ್ ಮದುವೆ ಮಾಡಿಕೊಳ್ತಿಯಾ ಅಂತ ರೇಗಿಸ್ತಿದ್ರು.  ಸೋನಾಲ್ ಯಾವ ಸೆಟ್ ಗೆ ಹೋದ್ರೂ ಮದ್ವೆ ಬಗ್ಗೆ ಕೇಳ್ತಿದ್ರಂತೆ. ಸೋನಾಲ್ ಫೋನ್ ಮಾಡಿ ಅವತ್ತು ರೂಮರ್ಸ್ ಬಗ್ಗೆ ಹೇಳಿದ್ರು. 2023 ಜನವರಿಯಲ್ಲಿ ಮತ್ತಷ್ಟು ಕ್ಲೋಸ್ ಆಗ್ತಾ ಹೋದ್ವಿ. ಅವ್ರ ಪ್ರೂಚರ್, ಫ್ಯಾಮಿಲಿ ಬಗ್ಗೆ ನೋಡ್ತಾ ಬಂದ್ವಿ. ಕಾಟೇರ ರಿಲೀಸ್ ಆಗೋವರೆಗೂ ಮದುವೆಗೆ ಟೈಂ ಕೇಳಿದ್ದೆ. ಕಾಟೇರ ಸಿನಿಮಾ ರೆಸ್ಪಾನ್ಸ್ ಮೇಲೆ ನನ್ ಮದ್ವೆಗೆ ಡಿಸೈಡ್ ಮಾಡಿದ್ದು. ದರ್ಶನ್ ಸರ್ ಕೂಡಾ ಸೋನಲ್ ಮನೇಲಿ ಮಾತಾಡಿದ್ರು. ಫೈನಲಿ ಈಗ ಫ್ಯಾಮಿಲಿಯಲ್ಲಿ ಮಾತುಕತೆ ಮಾಡಿ ಮದುವೆಗೆ ನಿರ್ಧಾರ ಮಾಡಿದ್ವಿ’ ಅಂತಾರೆ.

    ತಮಾಷೆನೇ ನಿಜಾ ಆಯ್ತು..

    ಲವ್ ಮತ್ತು ಮದುವೆ ಕುರಿತಂತೆ ಮಾತಾಡಿದ ಸೋನಲ್ ಮಂಥೆರೋ ‘ನಾವು ಟಚ್ ಅಲ್ಲಿ ಇರ್ತಿರಲಿಲ್ಲ. ರಾಬರ್ಟ್ ಸಿನಿಮಾ ಟೈಮ್ ನಲ್ಲಿ  ದರ್ಶನ್ ಸರ್ ತಮಾಷೆ ಮಾಡ್ತಿದ್ರು. ರೀಸೆಂಟ್ ಆಗಿ ಎಲ್ರು ಹೇಳೋದನ್ನ ಒಮ್ಮೆ ಥಿಂಕ್ ಮಾಡೋಣ ಅಂತ ಟ್ರೈ ಮಾಡಿದ್ವಿ. ನಾವು ನಮ್ಮ ಲವ್ ನ ಸೀಕ್ರೆಟ್ ಆಗಿ ಇಡೋದು ನನ್ನ ಡಿಸಿಷನ್ ಆಗಿತ್ತು. ಮದ್ವೆ ಆದ್ಮೇಲೂ ಸಿನಿಮಾ ನಿಲ್ಲಸಲ್ಲ ಮಾಡ್ತೀನಿ. ದರ್ಶನ್ ಸರ್ ನ ತರುಣ್ ಮೀಟ್ ಆಗಿದ್ದಾರೆ. ನನಗೆ ಅಲ್ಲಿ‌ಹೋಗೋಕೆ ಅವ್ರನ್ನ ಆತರ ನೋಡೋಕೆ ಇಷ್ಟ ಇಲ್ಲ. ಅವ್ರು ಅಷ್ಟರಲ್ಲಿ ಬರ್ತಾರೆ ಅನ್ನಿಸುತ್ತೆ ನೋಡೋಣ’ ಅಂತಾರೆ.

    ದರ್ಶನ್ ಸರ್ ನ ಮಿಸ್ ಮಾಡ್ಕೋತೀವಿ ಅಂತಾರೆ ತರುಣ್ ಮತ್ತು ಸೋನಲ್.  ದರ್ಶನ್ ಸರ್ ಎಲ್ಲಿದ್ರೂ ಅವ್ರ ವಿಶಸ್ ಇರುತ್ತೆ.  ದರ್ಶನ್ ಸರ್ ಆಶೀರ್ವಾದ ಯಾವಾಗ್ಲೂ ಇರುತ್ತೆ. ನಮ್ ತಂದೆಯಷ್ಟೇ ದರ್ಶನ್ ಸರ್ ನ ಗೌರವಿಸ್ತೀನಿ. ಬಾಬಿಗೆ (ವಿಜಯಲಕ್ಷ್ಮಿ) ಇನ್ವಿಟೇಷನ್ ಕೊಟ್ಟಿದ್ದೀನಿ. ಅವ್ರು ಬರ್ತೀನಿ ಅಂದಿದಾರೆ. ಬೆಂಗಳೂರಿನಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಆಗ್ತೀವಿ. ಬೆಂಗಳೂರಿನಲ್ಲಿ ಮದುವೆ ನಂತರ ಮಂಗಳೂರಿನಲ್ಲೂ ಒಂದು ಫಂಕ್ಷನ್ ಮಾಡ್ತಾರಂತೆ ತರುಣ್ ಮತ್ತು ಸೋನಲ್.

  • ತರುಣ್ –ಸೋನಲ್ ಮದುವೆ:  ಲವ್‍ ಸ್ಟೋರಿಗೆ ದರ್ಶನ್ ಕಾರಣ

    ತರುಣ್ –ಸೋನಲ್ ಮದುವೆ: ಲವ್‍ ಸ್ಟೋರಿಗೆ ದರ್ಶನ್ ಕಾರಣ

  • ನಾನು ಗೆದ್ದೆತ್ತಿನ ಬಾಲ ಹಿಡಿಯಲ್ಲ, ‘ಕಾಟೇರ 2’ ಬರಲ್ಲ: ದರ್ಶನ್ ಮಾತು

    ನಾನು ಗೆದ್ದೆತ್ತಿನ ಬಾಲ ಹಿಡಿಯಲ್ಲ, ‘ಕಾಟೇರ 2’ ಬರಲ್ಲ: ದರ್ಶನ್ ಮಾತು

    ಒಂದು ಸಿನಿಮಾ ಗೆದ್ದಾಕ್ಷಣ ಅದರ ಸಿಕ್ವೇಲ್ಮಾ (Sequel) ಡೋಕೆ ಹೊರಡೋದು ಸಾಮಾನ್ಯ ಸಂಗತಿಯಾಗಿದೆ. ಎಷ್ಟೋ ಸಿನಿಮಾಗಳು ಮೊದಲ ಚಿತ್ರ ಗೆದ್ದ ನಂತರವೇ ಭಾಗ 2 ಚಿತ್ರವನ್ನು ಮಾಡಿದ್ದೂ ಇದೆ. ಆದರೆ, ನಾನು ಆ ರೀತಿ ಮಾಡುವುದಿಲ್ಲ ಎಂದು ಹೇಳುವ ಮೂಲಕ ನಟ ದರ್ಶನ್ (Darshan) ಅಚ್ಚರಿ ಮೂಡಿಸಿದ್ದಾರೆ.

    ಕಾಟೇರ ಸಿನಿಮಾ ಸೂಪರ್ ಹಿಟ್ ಆಗಿದೆ. ಶತದಿನೋತ್ಸವ ಕೂಡ ಆಚರಿಸಿಕೊಂಡಿದೆ. ಹಾಗಾಗಿ ಕಾಟೇರ 2 (Kaatera 2) ಸಿನಿಮಾ ಬರತ್ತಾ ಎನ್ನುವ ಕೆಟ್ಟ ಕುತೂಹಲ ಅವರ ಅಭಿಮಾನಿಗಳಲ್ಲಿ ಇತ್ತು. ಅದಕ್ಕೆ ದರ್ಶನ್ ಸ್ಪಷ್ಟನೆ ನೀಡಿದ್ದಾರೆ. ನಾನು ಗೆದ್ದಿತ್ತಿನ ಬಾಲ ಹಿಡಿಯೋದಿಲ್ಲ. ಹಾಗಾಗಿ ಕಾಟೇರ 2 ಬರಲ್ಲ ಅಂದಿದ್ದಾರೆ.

    ಕಾಟೇರ ಸಿನಿಮಾ ಕನ್ನಡದ ನೆಲದ ಸಿನಿಮಾ. 1970ರ ಕಾಲಘಟ್ಟದ ಕಥೆಯನ್ನು ಚೆಂದವಾಗಿ ತೆರೆಮೇಲೆ ತಂದಿದ್ದರು ನಿರ್ದೇಶಕ ತರುಣ್ ಸುಧೀರ್. ಮಾಲಾಶ್ರೀ ಪುತ್ರಿ ಆರಾಧನಾ ರಾಮ್ಗೂ ಕಾಟೇರ ದೊಡ್ಡ ಹಿಟ್ ನೀಡಿತ್ತು. ಕಥೆ ಬರೆದ ಜಡೇಶ್ ಕುಮಾರ್ ಹಂಪಿ, ಡೈಲಾಗ್ ಬರೆದ ಮಾಸ್ತಿಗೂ ಕಾಟೇರ ಸಿನಿಮಾ ಮರೆಯಲಾಗದ ಯಶಸ್ಸು ನೀಡಿತ್ತು. ಚಿತ್ರ ಶತದಿನೋತ್ಸವ ಕಂಡ ಬೆನ್ನಲ್ಲೇ ಬರಹಗಾರರಿಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಈ ಹಿಂದೆ ‘ಕಾಟೇರ’ ಸಿನಿಮಾ ನೂರು ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ನಿರ್ದೇಶಕ ತರುಣ್ ಸುಧೀರ್ ಮತ್ತು ತಂಡ ಕೇಕ್ ಕತ್ತರಿಸಿ ಸಂಭ್ರಮಿಸಿತ್ತು. ಈ ಸಂಭ್ರಮದಲ್ಲಿ ದರ್ಶನ್ ಕಾಣಿಸಿದೇ ಇದ್ದರೂ, ನೂರು ದಿನ ಖುಷಿಯನ್ನು ಅಭಿಮಾನಿಗಳಿಗಾಗಿ ಚಿತ್ರತಂಡ ಹಂಚಿಕೊಂಡಿತ್ತು. ನೂರು ದಿನಗಳನ್ನು (Hundred Days) ಪೂರೈಸಿದ ಬೆನ್ನಲ್ಲೇ ಕಾಟೇರ ಸಿನಿಮಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಂಡಿತ್ತು.

    ಕಾಟೇರ (Kaatera) ಸಿನಿಮಾ ಥಿಯೇಟರ್ ನಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದರೂ, ಒಟಿಟಿಯಲ್ಲೂ (OTT) ಸ್ಟ್ರೀಮಿಂಗ್ ಆಗುತ್ತಿದೆ. ಒಟಿಟಿಯಲ್ಲಿ ಕಾಟೇರ ಪ್ರದರ್ಶನ ಕಾಣುತ್ತಿರುವುದಕ್ಕೆ ಹುಬ್ಬಳ್ಳಿಯ ಅಭಿಮಾನಿಗಳು ವಿಶೇಷ ರೀತಿಯಲ್ಲಿ ಬರಮಾಡಿಕೊಂಡಿದ್ದರು. ಆಳೆತ್ತರದ ಕಟೌಟ್ ಹಾಕಿ ಕಾಟೇರನನ್ನು ಸ್ವಾಗತಿಸಿದ್ದರು.

  • ಕಾಟೇರ ಶತದಿನೋತ್ಸವ: ಕೇಕ್ ಕಟ್ ಮಾಡಿ ಸಂಭ್ರಮಿಸಿದ ಟೀಮ್

    ಕಾಟೇರ ಶತದಿನೋತ್ಸವ: ಕೇಕ್ ಕಟ್ ಮಾಡಿ ಸಂಭ್ರಮಿಸಿದ ಟೀಮ್

    ರ್ಶನ್ (Darshan) ನಟನೆಯ ‘ಕಾಟೇರ’ ಸಿನಿಮಾ ನೂರು ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ನಿರ್ದೇಶಕ ತರುಣ್ ಸುಧೀರ್ ಮತ್ತು ತಂಡ ಕೇಕ್ ಕತ್ತರಿಸಿ ಸಂಭ್ರಮಿಸಿದೆ. ಈ ಸಂಭ್ರಮದಲ್ಲಿ ದರ್ಶನ್ ಕಾಣಿಸಿದೇ ಇದ್ದರೂ, ನೂರು ದಿನ ಖುಷಿಯನ್ನು ಅಭಿಮಾನಿಗಳಿಗಾಗಿ ಚಿತ್ರತಂಡ ಹಂಚಿಕೊಂಡಿದೆ. ನೂರು ದಿನಗಳನ್ನು (Hundred Days) ಪೂರೈಸಿದ ಬೆನ್ನಲ್ಲೇ ಕಾಟೇರ ಸಿನಿಮಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಂಡಿದೆ. ಯುಗಾದಿಗೂ ಎರಡು ದಿನ ಮುನ್ನ ಏಪ್ರಿಲ್ 7ಕ್ಕೆ ಸಂಜೆ 7ಕ್ಕೆ ಚಿತ್ರ ಪ್ರಸಾರವಾಗಿದೆ.

    ಕಾಟೇರ (Kaatera) ಸಿನಿಮಾ ಥಿಯೇಟರ್ ನಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದರೂ, ಒಟಿಟಿಯಲ್ಲೂ (OTT) ಸ್ಟ್ರೀಮಿಂಗ್ ಆಗುತ್ತಿತ್ತು. ಒಟಿಟಿಯಲ್ಲಿ ಕಾಟೇರ ಪ್ರದರ್ಶನ ಕಾಣುತ್ತಿರುವುದಕ್ಕೆ ಹುಬ್ಬಳ್ಳಿಯ ಅಭಿಮಾನಿಗಳು ವಿಶೇಷ ರೀತಿಯಲ್ಲಿ ಬರಮಾಡಿಕೊಂಡಿದ್ದರು. ಆಳೆತ್ತರದ ಕಟೌಟ್ ಹಾಕಿ ಕಾಟೇರನನ್ನು ಸ್ವಾಗತಿಸಿದ್ದರು.

    ದರ್ಶನ್ ಸಿನಿಕರಿಯರ್ ನಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದ್ದ ಕಾಟೇರ ಬಾಕ್ಸಾಫೀಸ್ ನಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು. ಪ್ಯಾನ್ ಇಂಡಿಯಾ ಚಿತ್ರಗಳ ಅಬ್ಬರದ ನಡುವೆಯೂ  ನಮ್ಮ ನೆಲದ ಕಥೆಗೆ ಪ್ರೇಕ್ಷಕ ಜೈಕಾರ ಹಾಕಿದ್ದರು. ರಾಕ್ಲೈನ್ ವೆಂಕಟೇಶ್ ನಿರ್ಮಿಸಿರುವ ಈ ಸಿನಿಮಾವನ್ನು ಒಟಿಟಿಗೆ Zee5 ವಹಿವಾಟು ಮುಗಿಸಿತ್ತು.

    Zee5 ತಾನು ಖರೀದಿಸಿದ ಹೊಸ ಸಿನಿಮಾಗಳನ್ನು ಪ್ರತಿ ಶುಕ್ರವಾರ ಬಿಡುಗಡೆ ಮಾಡುತ್ತೆ. ಅಲ್ಲದೆ ನಿರ್ಮಾಪಕರು ಹಾಗೂ ಓಟಿಟಿ ಸಂಸ್ಥೆಯೊಂದಿಗೆ ಸಿನಿಮಾ ಬಿಡುಗಡೆಯಾದ 30 ರಿಂದ 40 ದಿನಗಳ ಅಂತರದಲ್ಲಿ ಓಟಿಟಿಯಲ್ಲಿ ಪ್ರೀಮಿಯರ್ ಮಾಡುವ ಬಗ್ಗೆ ಸಹಜವಾಗಿ ಒಪ್ಪಂದ ಆಗುತ್ತೆ. ‘ಕಾಟೇರ’ ಬಿಡುಗಡೆಯಾದ 40 ದಿನಗಳ ಬಳಿಕ ಓಟಿಟಿಯಲ್ಲಿ ರಿಲೀಸ್ ಮಾಡುವ ಮಾತುಕತೆ ನಡೆದಿದ್ದು, ಅದರಂತೆಯೇ ಫೆಬ್ರವರಿ 9ರಂದು  ಸಿನಿಮಾ ಪ್ರೀಮಿಯರ್ ಆಗಿದೆ.

    ಕಾಟೇರ ಸಿನಿಮಾ ಕನ್ನಡದ ನೆಲದ ಸಿನಿಮಾ. 1970ರ ಕಾಲಘಟ್ಟದ ಕಥೆಯನ್ನು ಚೆಂದವಾಗಿ ತೆರೆಮೇಲೆ ತಂದಿದ್ದರು ನಿರ್ದೇಶಕ ತರುಣ್ ಸುಧೀರ್. ಮಾಲಾಶ್ರೀ ಪುತ್ರಿ ಆರಾಧನಾ ರಾಮ್ಗೂ ಕಾಟೇರ ದೊಡ್ಡ ಹಿಟ್ ನೀಡಿದೆ. ಕಥೆ ಬರೆದ ಜಡೇಶ್ ಕುಮಾರ್ ಹಂಪಿ, ಡೈಲಾಗ್ ಬರೆದ ಮಾಸ್ತಿಗೂ ಕಾಟೇರ ಸಿನಿಮಾ ಮರೆಯಲಾಗದ ಯಶಸ್ಸು ನೀಡಿದೆ.