Tag: tarun sudheer

  • ದುಬೈಗೆ ಹಾರಿದ ಮಾಲಾಶ್ರೀ ಪುತ್ರಿ ರಾಧನಾ ರಾಮ್

    ದುಬೈಗೆ ಹಾರಿದ ಮಾಲಾಶ್ರೀ ಪುತ್ರಿ ರಾಧನಾ ರಾಮ್

    ಸ್ಯಾಂಡಲ್‌ವುಡ್ (Sandalwood) ಮಾತ್ರವಲ್ಲದೇ ಪರಭಾಷೆಗಳಲ್ಲೂ ಮಿಂಚಿದ ಕನಸಿನ ರಾಣಿ ಮಾಲಾಶ್ರೀ (Malashree) ಪುತ್ರಿ ರಾಧನಾ ರಾಮ್ (Radhana Ram) ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಈ ಬೆನ್ನಲ್ಲೇ ರಾಧನಾ ದುಬೈಗೆ (Dubai) ಹಾರಿದ್ದಾರೆ.

    ಪಡ್ಡೆಹುಡುಗರ ನಿದ್ದೆಗೆಡಿಸಿದ ನಟಿ ಮಾಲಾಶ್ರೀ ಇತ್ತೀಚೆಗೆ ತಮ್ಮ ಮಗಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಮೂಲಕ ಸಿಹಿ ಸುದ್ದಿ ಕೊಟ್ಟಿದ್ದರು. ತೆರೆಯ ಮೇಲೆ ಮಿಂಚಲು ಅಮ್ಮನಂತೆಯೇ ರಾಧನಾ ಕೂಡ ಭರ್ಜರಿ ತಯಾರಿ ಮಾಡ್ತಿದ್ದಾರೆ. ಈಗಾಗಲೇ ತಮ್ಮ ಮುದ್ದು ಮುದ್ದಾದ ಫೋಟೋಶೂಟ್ ಮೂಲಕ ರಾಧನಾ ಗಮನ ಸೆಳೆದಿದ್ದಾರೆ. ಸದ್ಯ ತಮ್ಮ ಕೆಲಸಕ್ಕೆಲ್ಲಾ ಬ್ರೇಕ್ ಹಾಕಿ ರಾಧನಾ ದುಬೈಗೆ ಹಾರಿದ್ದಾರೆ.

    ದುಬೈನ ಸುಂದರ ತಾಣಗಳಿಗೆ ನಟಿ ಭೇಟಿ ಕೊಟ್ಟಿದ್ದಾರೆ. ಅಮ್ಮ ಮಾಲಾಶ್ರೀ ಅವರ ಜೊತೆ ದುಬೈ ಪ್ರವಾಸದಲ್ಲಿ ರಾಧನಾ ರಾಮ್ ಮಿಂಚಿದ್ದಾರೆ. ಕೂಲಿಂಗ್ ಗ್ಲಾಸ್ ಹಾಕಿ ಸಖತ್ ಹಾಟ್ ಆಗಿ ರಾಧನಾ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ: ಶಿವರಾಜ್ ಕುಮಾರ್ ಹೊಸ ಸಿನಿಮಾದಲ್ಲಿ ಕಿಶೋರ್ ಗೆ ಮಹತ್ವದ ಪಾತ್ರ

    ಇನ್ನೂ ತರುಣ್ ಸುಧೀರ್ (Tarun Sudhir) ನಿರ್ದೇಶನದ (Direction) ಸಿನಿಮಾ ಮೂಲಕ ರಾಧನಾ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ.

     

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿಕ್ಟರಿ-2 `ಕುಟ್ಟು ಕುಟ್ಟು’ ಸಾಂಗ್ ರಿಲೀಸ್

    ವಿಕ್ಟರಿ-2 `ಕುಟ್ಟು ಕುಟ್ಟು’ ಸಾಂಗ್ ರಿಲೀಸ್

    ಬೆಂಗಳೂರು: ವಿಕ್ಟರಿ 2 ಸಿನಿಮಾ ಮೂಲಕ ಅಭಿಮಾನಿಗಳನ್ನು ರಂಜಿಸಲು ಆಗಮಿಸುತ್ತಿರುವ ನಟ ಶರಣ್‍ರ ಸಿನಿಮಾದ ಕುಟ್ಟು ಕುಟ್ಟು ಹಾಡು ಬಿಡುಗಡೆಯಾಗಿದೆ.

    ಟೀಸರ್ ಮೂಲಕವೇ ತೀವ್ರ ಕುತೂಹಲ ಮೂಡಿಸಿದ್ದ ವಿಕ್ಟರಿ-2 ಸಿನಿಮಾದ ಕುಟ್ಟು ಕುಟ್ಟು ಸಾಂಗ್ ಕ್ಯಾಚಿ ಸಾಲುಗಳ ಮೂಲಕ ಕೇಳುಗರನ್ನು ಕುಣಿಯುವಂತೆ ಮಾಡುತ್ತಿರುವ ಹಾಡು ಎಲ್ಲರಿಗೂ ಇಷ್ಟವಾಗುತ್ತಿದೆ. ಹಳ್ಳಿ ಭಾಷೆ ಸೊಗಡಿನ ಹಾಡಿನ ಸಾಲುಗಳ ಅಬ್ಬರ ಜೋರಾಗಿದ್ದು, ಉತ್ತರ ಕರ್ನಾಟಕ ಜವಾರಿ ಹಾಡಿನ ಶೈಲಿ ಸಿನಿಮಾ ಮೇಲಿನ ಭರವಸೆಯನ್ನು ಮತ್ತಷ್ಟು ಹೆಚ್ಚಿಸಿದೆ.

    ವಿಕ್ಟರಿ ಮೂಲಕ ಮತ್ತೊಂದು ಭರ್ಜರಿ ಯಶಸ್ವಿ ಗಳಿಸಿಕೊಳ್ಳುವ ವಿಶ್ವಾಸದಲ್ಲಿರುವ ಶರಣ್ ಅವರು ಹಾಡಿನಲ್ಲಿ ಸಖತ್ ಡಾನ್ಸ್ ಮಾಡಿದ್ದು, ಅಭಿಮಾನಿಗಳ ಮನಗೆದ್ದಿದ್ದಾರೆ. ಅಲ್ಲದೇ ತಮ್ಮ ಡಾನ್ಸ್ ಗೆ ತಾವೇ ಸಾಟಿ ಎಂದು ನಿರೂಪಿಸಿದ್ದು, ಶರಣ್ ಅವರಿಗೆ ಸಾಥ್ ನೀಡಿರುವ ನಾಯಕಿ ಅಪೂರ್ವ ಡಾನ್ಸ್ ಕೂಡ ಅಭಿಮಾನಿಗಳಲ್ಲಿ ಖುಷಿ ತಂದಿದೆ.

    ಹಾಡಿಗೆ ಅರ್ಜುನ್ ಜನ್ಯಾ ಸಂಗೀತಾವಿದ್ದು ಮಾಸ್ ಹಾಡಿನ ಮೂಲಕ ಅಭಿಮಾನಿಗಳಿಂದ ಪ್ರಶಂಸೆಗಳಿಸಿದ್ದಾರೆ. ಚಿತ್ರ ಅಪೂರ್ವ, ಅಸ್ಮಿತಾ ಸೂದ್, ರವಿಶಂಕರ್, ಸಾಧುಕೋಕಿಲಾ, ತಬಲಾ ನಾಣಿ, ನಾಸೀನ್, ಅವಿನಾಶ್, ಮಿತ್ರಾ, ಕಲ್ಯಾಣಿ, ಅರಸು ಮತ್ತು ಸಿದ್ದಿ ಸೇರಿದಂತೆ ದೊಡ್ಡ ತಾರಾಗಣವನ್ನು ಹೊಂದಿದೆ. ದೀರ್ ಕಥೆ ಬರೆದಿದ್ದು, ಅಲೆಮಾರಿ ಸಂತು ನಿರ್ದೇಶನ ಮತ್ತು ತರುಣ್ ಶಿವಪ್ಪ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಇದನ್ನು ಓದಿ: ಪ್ಲೀಸ್ ಟ್ರಸ್ಟ್, ನಾನು ಚೀಪ್ & ಬೆಸ್ಟ್- ಆಸ್ಮಿತಾ ಜೊತೆ ವಿಕ್ಟರಿ ಶರಣ್ ಡ್ಯಾನ್ಸ್

    ಫಸ್ಟ್ ಲುಕ್ ನಲ್ಲಿ ಡಬಲ್ ಶೇಡ್‍ನಲ್ಲಿ ಕಾಣಿಸಿಕೊಂಡಿರುವ ಶರಣ್ ಅವರ ಪಾತ್ರ ಕುರಿತು ಹೆಚ್ಚಿನ ಆಸಕ್ತಿ ಕೆರಳಿಸಿದೆ. ಇತ್ತೀಚೆಗೆ ರ್ಯಾಂಬೊ-2 ಚಿತ್ರದ ಮೂಲಕ ಅಭಿಮಾನಿಗಳ ಮೆಚ್ಚುಗೆ ಪಡೆದಿದ್ದ ಶರಣ್ ಅವರಿಗೆ ವಿಕ್ಟರಿ-2 ಸಿನಿಮಾದಿಂದ ಮತ್ತೊಂದು ಯಶಸ್ಸು ನೀಡಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.  ಇದನ್ನು ಓದಿ: ಎರಡನೇ ವಿಕ್ಟರಿಯಲ್ಲಿ ಡಬಲ್ ಫನ್ ಫಿಕ್ಸ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಕ್ಟರಿ-2 ಚಿತ್ರದ ಟೀಸರ್ ಸೋಮವಾರ ರಿಲೀಸ್

    ವಿಕ್ಟರಿ-2 ಚಿತ್ರದ ಟೀಸರ್ ಸೋಮವಾರ ರಿಲೀಸ್

    -ಟೀಸರ್ ನಲ್ಲಿ ಡಬಲ್ ಫನ್ ಗ್ಯಾರೆಂಟಿ

    ಬೆಂಗಳೂರು: ಸ್ಯಾಂಡಲ್‍ವುಡ್ ಅಧ್ಯಕ್ಷ, ಶರಣ್ ತಮ್ಮ ಎರಡನೇ ವಿಕ್ಟರಿಯಲ್ಲಿ ಅಭಿಮಾನಿಗಳನ್ನು ರಂಜಿಸಲು ಬರಲಿದ್ದಾರೆ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯ. ವಿಕ್ಟರಿ-2 ಚಿತ್ರದ ಟೀಸರ್ ಸೋಮವಾರ ಬಿಡುಗಡೆ ಆಗಲಿದ್ದು, ಚಂದನವನದಲ್ಲಿ ತೀವ್ರ ಕುತೂಹಲವನ್ನು ಹುಟ್ಟಿಸಿದೆ. ಈಗಾಗಲೇ ತನ್ನ ಫಸ್ಟ್ ಲುಕ್ ನಿಂದ ಡಬಲ್ ಫನ್ ನೀಡೋದು ಖಚಿತ ಎಂಬ ಭರವಸೆಯನ್ನು ಚಿತ್ರ ಮೂಡಿಸಿದೆ.

    ವಿಕ್ಟರಿ-2 ಸಿನಿಮಾದಲ್ಲಿ ಶರಣ್ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ವಿಷಯವನ್ನು ಚಿತ್ರತಂಡ ಫಸ್ಟ್ ಲುಕ್ ನಲ್ಲಿಯೇ ರಿವೀಲ್ ಮಾಡಿತ್ತು. ಕ್ಲಾಸ್ ಮತ್ತು ಮಾಸ್ ಎರಡು ವಿಭಿನ್ನ ಪಾತ್ರಗಳಲ್ಲಿ ಶರಣ್ ಕಾಣಿಸಿಕೊಳ್ಳಲಿದ್ದು, ಸೋಮವಾರ ಟೀಸರ್ ನಲ್ಲಿ ಶರಣ್ ನ್ಯೂ ಗೆಟಪ್ ರಿವೀಲ್ ಆಗಲಿದೆ. ಮೊದಲ ವಿಕ್ಟರಿಯಲ್ಲಿ ಜನರನ್ನು ಹಾಸ್ಯದ ಕಚಗುಳಿಯಲ್ಲಿ ತೇಲಿಸಿದ್ದರು. ಹಾಸ್ಯಮಯ ಕಥೆಯನ್ನು ಸಿನಿಮಾ ಒಳಗೊಂಡಿದ್ದು, ಪ್ರೇಕ್ಷಕರಿಗೆ ಡಬಲ್ ಮನರಂಜನೆಯ ಭರವಸೆಯನ್ನು ಮೂಡಿಸಿದೆ.

    ಫಸ್ಟ್ ಲುಕ್‍ನಲ್ಲಿ ಒಟ್ಟು ಎರಡು ಫೋಟೋಗಳನ್ನು ಚಿತ್ರತಂಡ ಬಿಡುಗೊಡೆಗೊಳಿಸಿತ್ತು. ಒಂದರಲ್ಲಿ ವೈಟ್ ಆ್ಯಂಡ್ ವೈಟ್ ಶರ್ಟ್, ಪಂಚೆ ತೊಟ್ಟು ಮಿಂಚಿದರೆ, ಇನ್ನೊಂದರಲ್ಲಿ ಮಾಸ್ ಗೆಟಪ್ ನಲ್ಲಿ ಕಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    ಶರಣ್‍ಗೆ ನಾಯಕಿಯಾಗಿ ಅಪೂರ್ವ, ಅಸ್ಮಿತಾ ಸೂದ್ ಜೊತೆಯಾಗಿದ್ದಾರೆ. ರವಿಶಂಕರ್, ಸಾಧುಕೋಕಿಲಾ, ತಬಲಾ ನಾಣಿ, ನಾಸೀನ್, ಅವಿನಾಶ್, ಮಿತ್ರಾ, ಕಲ್ಯಾಣಿ, ಅರಸು ಮತ್ತು ಸಿದ್ದಿ ಸೇರಿದಂತೆ ದೊಡ್ಡ ತಾರಾಗಣವನ್ನು ಚಿತ್ರ ಹೊಂದಿದೆ. ವಿಕ್ಟರಿಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ. ತರುಣ್ ಸುದೀರ್ ಕಥೆ ಬರೆದಿದ್ದು, ಅಲೆಮಾರಿ ಸಂತು ನಿರ್ದೇಶನ ಮತ್ತು ತರುಣ್ ಶಿವಪ್ಪ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದೆ.

  • ತರುಣ್ ಟಾಕೀಸ್ ನಿರ್ಮಾಣದ ಮೂರನೇ ಚಿತ್ರ ಶುರು!

    ತರುಣ್ ಟಾಕೀಸ್ ನಿರ್ಮಾಣದ ಮೂರನೇ ಚಿತ್ರ ಶುರು!

    ಬೆಂಗಳೂರು: ತರುಣ್ ಟಾಕೀಸ್ ಲಾಂಛನದಲ್ಲಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ನಿರ್ಮಿಸುತ್ತಿರುವ `ಪ್ರೊಡಕ್ಷನ್ ನಂ 3` ನೂತನ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ರಾಜಾಜಿನಗರದ ಮೋದಿ ಆಸ್ಪತ್ರೆ ಬಳಿಯಿರುವ ಗಣೇಶನ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಪ್ರಥಮ ಸನ್ನಿವೇಶಕ್ಕೆ ಮಾನಸ ತರುಣ್ ಆರಂಭ ಫಲಕ ತೋರಿದರು. ನಿದೇರ್ಶಕ ಹರಿ ಸಂತು ಅವರ ತಾಯಿ ಪ್ರೇಮ ಕ್ಯಾಮೆರಾ ಚಾಲನೆ ಮಾಡಿದರು.

    ಅಲೆಮಾರಿ ಸಂತು ಎಂದೆ ಖ್ಯಾತರಾಗಿರುವ, ಇತ್ತೀಚೆಗಷ್ಟೇ `ಕಾಲೇಜ್ ಕುಮಾರ` ಎಂಬ ಯಶಸ್ವಿ ಚಿತ್ರವನ್ನು ನಿರ್ದೇಶಿಸಿದ್ದ ಹರಿ ಸಂತು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆಯನ್ನು ತರುಣ್ ಸುಧೀರ್ ಬರೆದಿದ್ದಾರೆ. ಗುರುಪ್ರಶಾಂತ್ ರೈ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ, ಕೆ.ಎಂ.ಪ್ರಕಾಶ್ ಸಂಕಲನ, ಭೂಷಣ್ ನೃತ್ಯ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ.

    ಈ ಚಿತ್ರಕ್ಕಾಗಿ ಕಲಾ ನಿರ್ದೇಶಕ ಮೋಹನ್ ಬಿ ಕೆರೆ ಅವರು ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಒಂದು ತಿಂಗಳಿನಿಂದ ಬೃಹತ್ ಮನೆ ಸೆಟ್ ನಿರ್ಮಾಣ ಮಾಡುತ್ತಿದ್ದಾರೆ.

    ಶರಣ್, ರವಿಶಂಕರ್, ಸಾಧುಕೋಕಿಲ, ತಬಲನಾಣಿ, ಪ್ರಶಾಂತ್ ಸಿದ್ದಿ, ಅರಸು, ಕಲ್ಯಾಣಿ, ಅರುಣ ಬಾಲರಾಜ್, ಸುಂದರ್, ನಾಜರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.