ಚಿಕ್ಕಮಗಳೂರು: ತರೀಕೆರೆ (Tarikere) ತಾಲೂಕಿನ ಲಕ್ಕವಳ್ಳಿ (Lakkavalli) ಬಳಿ ದೇವರ ದರ್ಶನಕ್ಕೆ ತೆರಳಿದ್ದ ದಂಪತಿ ಭದ್ರಾ ಜಲಾಶಯದ (Bhadra Dam) ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ.
ಮೃತರನ್ನ ವಿಠಲ (48) ಹಾಗೂ ಗಂಗಮ್ಮ (40) ಎಂದು ಗುರುತಿಸಲಾಗಿದೆ. ಮೃತ ದಂಪತಿ ಮೂಲತಃ ಶಿವಮೊಗ್ಗದ ಭದ್ರಾವತಿ (Bhadravathi) ತಾಲೂಕಿನ ಶಂಕರಪುರ ನಿವಾಸಿಗಳು. ದಂಪತಿ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದ ಜಗದಾಂಭಾ ದೇವಸ್ಥಾನಕ್ಕೆ ಬಂದಿದ್ದರು. ದೇವಸ್ಥಾನದಲ್ಲಿ ಪೂಜೆ ಮುಗಿಸಿ ಬಂದವರು ಭದ್ರಾ ಜಲಾಶಯದ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರೋ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹಾಡಹಗಲೇ ಪ್ರಿಯಕರನಿಂದ ವಿದ್ಯಾರ್ಥಿನಿಯ ಬರ್ಬರ ಕೊಲೆ
ಅವರು ಆತ್ಮಹತ್ಯೆಗೆ ಶರಣಾಗಿದ್ದಾರೋ ಅಥವಾ ಭದ್ರಾ ಜಲಾಶಯದ ಬಳಿ ಗಂಗೆ ಪೂಜೆ ಮಾಡುವಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೋ ಗೊತ್ತಾಗಿಲ್ಲ. ಆದರೆ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇಬ್ಬರು ನಾಲೆ ಬಳಿ ಹೋಗಿದ್ದನ್ನ ಸ್ಥಳಿಯರು ನೋಡಿದ್ದಾರೆ. ಹಾಗಾಗಿ, ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಬೆಳಗ್ಗೆಯಿಂದಲೂ ಕೂಡ ಲಕ್ಕವಳ್ಳಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಸ್ಥಳಿಯರು ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ. ಗಂಗಮ್ಮ ಮೃತದೇಹ ಪತ್ತೆಯಾಗಿದ್ದು, ವಿಠಲ ಅವರ ಮೃತದೇಹ ಪತ್ತೆಯಾಗಿಲ್ಲ.
ಚಿಕ್ಕಮಗಳೂರು: ಚೀಟಿ ಹಣದ (Money) ವಿಚಾರವಾಗಿ ಯುವಕನನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತರೀಕೆರೆ (Tarikere) ತಾಲೂಕಿನ ಅಮೃತಾಪುರ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ಯುವಕನನ್ನು ಸಂಜುನಾಯ್ಕ (27) ಎಂದು ಗುರುತಿಸಲಾಗಿದೆ. ರುದ್ರೇಶ್ ನಾಯ್ಕ (30) ಹತ್ಯೆಗೈದ ಆರೋಪಿಯಾಗಿದ್ದಾನೆ. ಅಮೃತಾಪುರ ಗ್ರಾಮದ ಸೇವಾಲಾಲ್ ಸಂಘದ ಚೀಟಿ ವ್ಯವಹಾರದಲ್ಲಿ ಇಬ್ಬರ ನಡುವೆ ಗಲಾಟೆಯಾಗಿದೆ. ಗಲಾಟೆ ವೇಳೆ ರುದ್ರೇಶ್, ಸಂಜುನಾಯ್ಕನ ತಲೆ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡು ರಕ್ತಸ್ರಾವದಿಂದ ಯುವಕ ಸಾವಿಗೀಡಾಗಿದ್ದಾನೆ. ಇದನ್ನೂ ಓದಿ: ಅಥಣಿ| ಅಪ್ರಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನ – ಕಾಮುಕ ಜೈಲುಪಾಲು
ಹತ್ಯೆಯಾದ ಸಂಜುನಾಯ್ಕ ಸರಿಯಾಗಿ ಚೀಟಿ ಕಟ್ಟದೇ ಚೀಟಿ ಸದಸ್ಯರ ಜೊತೆ ಗಲಾಟೆ ಮಾಡುತ್ತಿದ್ದ. ಇದರಿಂದ ಗ್ರಾಮಸ್ಥರು ಅವನನ್ನು ಚೀಟಿಯಿಂದ ತೆಗೆದು ಹಾಕಿದ್ದರು. ಚೀಟಿ ದಿನ ವ್ಯವಹಾರ ನಡೆಯುವ ಜಾಗಕ್ಕೆ ಬಂದ ಸಂಜುನನ್ನ ಸದಸ್ಯರು ವಾಪಸ್ ಕಳಿಸಿದ್ದರು. ಮನೆಗೆ ಹೋಗಿದ್ದ ಸಂಜು ಮನೆಯಿಂದ ಸದಸ್ಯರಿಗೆ ಕರೆ ಮಾಡಿ ಜಗಳ ಮಾಡುತ್ತಿದ್ದ. ಮತ್ತೆ ಸದಸ್ಯರ ಬಳಿ ಬಂದು ನೇರವಾಗಿ ಗಲಾಟೆಗೆ ಮುಂದಾದಾಗ ರುದ್ರೇಶ್ ನಾಯ್ಕ ದೊಣ್ಣೆಯಿಂದ ತಲೆಗೆ ಹೊಡೆದಿದ್ದಾನೆ. ಅಲ್ಲದೇ ಜಗಳ ಬಿಡಿಸಲು ಯತ್ನಿಸಿದ ಅವಿನಾಶ್ ಎಂಬುವನಿಗೂ ರುದ್ರೇಶ್ ನಾಯ್ಕ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದಾನೆ.
ಚಿಕ್ಕಮಗಳೂರು: ಡಿಸೆಂಬರ್ 19ರಂದು ಬೆಳಗಾವಿಯ ಸುವರ್ಣಸೌಧದಲ್ಲಿ ಸಿ.ಟಿ.ರವಿ (CT Ravi) ಮೇಲಿನ ಹಲ್ಲೆ ಯತ್ನ ಹಾಗೂ ಬಂಧನವನ್ನು ಖಂಡಿಸಿ ಚಿಕ್ಕಮಗಳೂರಿನಲ್ಲಿ (Chikkamagaluru) ಪ್ರತಿಭಟನೆ ನಡಸಿದ್ದ 30ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಪೊಲೀಸರು (Police) ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಡಿ.19ರಂದು ರಾಷ್ಟ್ರೀಯ ಹೆದ್ದಾರಿ 173 ತಡೆದು ಪ್ರತಿಭಟನೆ ನಡೆಸಿದ್ದರು. 20 ರಂದು ಚಿಕ್ಕಮಗಳೂರು (Chikkamagaluru) ನಗರ ಬಂದ್‍ಗೆ ಕರೆ ನೀಡಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ನಗರದಲ್ಲಿ ಅಲ್ಲಲ್ಲೇ ಬೈಕ್-ಟಯರ್‌ಗಳಿಗೆ ಬೆಂಕಿ ಹಾಕಲಾಗಿತ್ತು, ಗಲಾಟೆ ಕೂಡ ನಡೆದಿತ್ತು. ಅಂದು ಪೊಲೀಸರು ಸುಮಾರು 100ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆದು ಚಿಕ್ಕಮಗಳೂರು ನಗರದಿಂದ ಸುಮಾರು 80 ಕಿ.ಮೀ. ದೂರದ ಕಡೂರು ತಾಲೂಕಿನ ಸಿಂಗಟಗೆರೆ ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿ ಬಿಡುಗಡೆ ಮಾಡಿದ್ದರು.
ಇಂದು ತರೀಕೆರೆ ಪೊಲೀಸರು (Tarikere Police) 30ಕ್ಕೂ ಹೆಚ್ಚು ಜನರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. 100 ರಲ್ಲಿ ಹೆಸರು ತಿಳಿದ 30ಕ್ಕೂ ಹೆಚ್ಚು ಜನರಿಗೆ ನೋಟಿಸ್ ನೀಡಿ ಜನವರಿ 4 ರಂದು ತರೀಕೆರೆ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ:ʼಇಂಡಿಯಾʼಗೆ ಬನ್ನಿ, ಬಾಗಿಲು ಸದಾ ತೆರೆದಿದೆ: ನಿತೀಶ್‌ಗೆ ಲಾಲೂ ಆಫರ್
ಬಿಜೆಪಿ ಕಾರ್ಯಕರ್ತರು ಪೊಲೀಸರ ನೋಟಿಸ್ ವಿರುದ್ಧ ಕಿಡಿಕಾರಿದ್ದು ಅಸಮಾಧಾನ ಹೊರಹಾಕಿದ್ದಾರೆ. ಪ್ರತಿಭಟನೆ ನಡೆಸಿ ವಶಕ್ಕೆ ಪಡೆದು ಪ್ರಕರಣ ದಾಖಲಾಗಿದ್ದು ಎಲ್ಲಾ ಚಿಕ್ಕಮಗಳೂರು ನಗರ ಠಾಣೆಯಲ್ಲಿ. ಆದರೆ ವಿಚಾರಣೆ ತರೀಕೆರೆಯಲ್ಲೇ ಯಾಕೆ? ತನಿಖಾಧಿಕಾರಿ ತರೀಕೆರೆಯವರೇ ಯಾಕೆ ಎಂದು ಬಿಜೆಪಿ ಕಾರ್ಯಕರ್ತರು ಪ್ರಶ್ನಿಸಿ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. ಸರ್ಕಾರ ಹಾಗೂ ಪೊಲೀಸರು ಹೋರಾಟಗಾರರನ್ನ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಮಾಜಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ, ವೆಂಕಟೇಶ್, ಕೇಶವ, ಸಚಿನ್, ಅಂಕಿತ ಸೇರಿ ಹಲವರ ಮೇಲೆ ಕೇಸ್ ದಾಖಲಾಗಿತ್ತು. ಇದೀಗ, ಪೊಲೀಸರು 30 ಜನರಿಗೆ ನೋಟೀಸ್ ನೀಡಿ ಜನವರಿ 4ಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದಾರೆ.
ಚಿಕ್ಕಮಗಳೂರು: ಗಣಪತಿ ತರಲು ಹೋಗುತ್ತಿದ್ದಾಗ ಆಟೋ ಪಲ್ಟಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತರೀಕೆರೆ (Tarikere) ತಾಲೂಕಿನ ಭೈರಾಪುರ ಗೇಟ್ ಬಳಿ ನಡೆದಿದೆ.
ಲಿಂಗನಹಳ್ಳಿ ಪಟ್ಟಣದ 9 ಜನ ಯುವಕರು ಬೆಳಗ್ಗೆ ಏಳು ಗಂಟೆಗೆ ಗಣಪತಿ ತರಲೆಂದು 15 ಕಿ.ಮೀ. ದೂರದ ತರೀಕೆರೆ ಪಟ್ಟಣಕ್ಕೆ ಟಾಟಾ ಏಸ್ ಲಾಗೇಜ್ ಆಟೋದಲ್ಲಿ ಹೋಗುತ್ತಿದ್ದರು. ಭೈರಾಪುರ ಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ.
ಟಾಟಾ ಏಸ್ ಬಿದ್ದ ರಭಸಕ್ಕೆ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತಿಬ್ಬರು ಯುವಕರ ತಲೆಗೆ ಗಂಭೀರ ಗಾಯವಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ (Mcgann) ಆಸ್ಪತ್ರೆಗೆ ರವಾನಿಸಲಾಗಿದೆ. ಆಟೋದಲ್ಲಿದ್ದ ಇನ್ನಿತರ ಮೂರು ಯುವಕರಿಗೂ ಗಂಭೀರ ಗಾಯಗಳಾಗಿವೆ. ಅವರನ್ನು ತರೀಕೆರೆ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.ಇದನ್ನೂ ಓದಿ: ಕೀನ್ಯಾ ಶಾಲೆಯಲ್ಲಿ ಅಗ್ನಿ ಅವಘಡ – 17 ಮಕ್ಕಳು ದಾರುಣ ಸಾವು
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಇಬ್ಬರು ಯುವಕರ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರವಾದ ರಕ್ತಸ್ರಾವವಾಗಿದೆ. ಅಪಘಾತವಾಗುತ್ತಿದ್ದಂತೆ ಸ್ಥಳೀಯರು ಯುವಕರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಲಿಂಗದಹಳ್ಳಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಲಿಂಗದಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಿಕ್ಕಮಗಳೂರು: ತರೀಕೆರೆಯ (Tarikere) ಹೆಬ್ಬೆ ಜಲಪಾತದ (Hebbe Falls) ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕಾಲು ಜಾರಿ ಬಿದ್ದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತನನ್ನು ಹೈದರಾಬಾದ್ (Hyderabad) ಮೂಲದ ಶ್ರವಣ್ (25) ಎಂದು ಗುರುತಿಸಲಾಗಿದೆ. ಮೃತ ಶ್ರವಣ್ ತನ್ನ ಸ್ನೇಹಿತನ ಜೊತೆ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ದತ್ತಪೀಠ, ಗಾಳಿಕೆರೆ, ಕಲ್ಲತ್ತಿಗಿರಿ, ಕೆಮ್ಮಣ್ಣುಗುಂಡಿಗೆ ಪ್ರವಾಸಕ್ಕೆ ಬಂದಿದ್ದ. ಇಬ್ಬರೂ ಸೋಮವಾರ ಹೆಬ್ಬೆ ಜಲಪಾತಕ್ಕೆ ಭೇಟಿ ನೀಡಿದ್ದರು. ಈ ವೇಳೆ ಬಂಡೆ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಕಾಲು ಜಾರಿ ನೀರಿನೊಳಕ್ಕೆ ಬಿದ್ದಿದ್ದಾನೆ. ಕೂಡಲೇ ಆತನ ಸ್ನೇಹಿತ ಹಾಗೂ ಇತರೆ ಪ್ರವಾಸಿಗರು ಆತನನ್ನ ಮೇಲಕ್ಕೆತ್ತಿದ್ದಾರೆ. ನಂತರ ಚಿಕಿತ್ಸೆಗಾಗಿ ತರಿಕೆರೆ ಆಸ್ಪತ್ರೆಗೆ ಕರೆತರಲಾಗಿತ್ತು. ಆದ್ರೆ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದರಿಂದ ಆಸ್ಪತ್ರೆ ಆವರಣದಲ್ಲೇ ಯುವಕ ಸಾವನ್ನಪಿದ್ದಾನೆ. ಇದನ್ನೂ ಓದಿ: ಐವರು ಕೇಂದ್ರ ಸಚಿವರು ರಾಜ್ಯದ ಸಮಸ್ಯೆಗಳನ್ನು ಬಗೆಹರಿಸುವ ವಿಶ್ವಾಸವಿದೆ: ಪರಮೇಶ್ವರ್
ಹೆಬ್ಬೆ ಜಲಪಾತ ಕಾಡಿನೊಳಗಿದ್ದು, ಕೆಮ್ಮಣ್ಣುಗುಂಡಿಯಿಂದ ಸುಮಾರು 7 ಕಿ.ಮೀ ಕಾಫಿ ತೋಟದ ಒಳಗೆ ಜೀಪ್‍ನಲ್ಲೇ ಹೋಗಬೇಕು. ಹೆಬ್ಬೆ ಜಲಪಾತ ತರೀಕೆರೆಯಿಂದ ಸುಮಾರು 35-40 ಕಿಮೀ ಮೀಟರ್ ದೂರದಲ್ಲಿದೆ. ಅಲ್ಲಿಂದ ಶ್ರವಣ್‍ನನ್ನು ಆಸ್ಪತ್ರೆಗೆ ಕರೆತರುವುದು ಬಹಳ ತಡವಾಗಿದೆ ಎಂದು ತಿಳಿದುಬಂದಿದೆ.
ಚಿಕ್ಕಮಗಳೂರು: ಆಕಸ್ಮಿಕವಾಗಿ ಬೆಂಕಿ ತಗಲಿ ಪಟಾಕಿಗಳು (Firecrackers) ಸಿಡಿದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ತರಿಕೆರೆಯ (Tarikere) ಸುಣ್ಣದ ಹಳ್ಳಿಯಲ್ಲಿ ನಡೆದಿದೆ. ಯುವಕ ಕುರ್ಚಿ ಅಡಿಯಲ್ಲಿ ಪಟಾಕಿ ಚೀಲ ಇಟ್ಟುಕೊಂಡು ಕುಳಿತಿದ್ದ. ಈ ವೇಳೆ ಆಕಸ್ಮಿಕವಾಗಿ ಕಿಡಿ ತಾಕಿದ್ದು ಪಟಾಕಿಗಳು ಸಿಡಿದಿವೆ.
ಮೃತ ಯುವಕನನ್ನು ಪ್ರದೀಪ್ (30) ಎಂದು ಗುರುತಿಸಲಾಗಿದೆ. ಯುವಕ ಪಟಾಕಿಗಳು ಸಿಡಿದ ಪರಿಣಾಮ 5 ಅಡಿ ಎತ್ತರಕ್ಕೆ ಹಾರಿ ಬಿದ್ದಿದ್ದಾನೆ. ಈ ವೇಳೆ ದೇಹದ ಸೂಕ್ಷ್ಮ ಭಾಗಗಳಿಗೆ ತೀವ್ರ ಪೆಟ್ಟಾಗಿದೆ. ಇದರಿಂದ ಯುವಕ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಘಟನೆಯಲ್ಲಿ ಮತ್ತೋರ್ವ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಅಲ್ಲದೇ ಮೂವರು ಮಕ್ಕಳಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಬ್ಯಾಡಗಿಯಲ್ಲಿ ಖಾಸಗಿ ಬಸ್ ಪಲ್ಟಿ – ಪ್ರಯಾಣಿಕರಿಗೆ ಗಾಯ
ಚಿಕ್ಕಮಗಳೂರು: ಸರ್ಕಾರಿ ಬಸ್ ಮತ್ತು ಕಾರು (Car) ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ 9 ಮಂದಿ ಗಂಭೀರ ಗಾಯಗೊಂಡ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ತರೀಕೆರೆ (Tarikere) ತಾಲೂಕಿನ ಬೆಲೇನಹಳ್ಳಿ ಗ್ರಾಮದ ಬಳಿ ನಡೆದಿದೆ.
ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಾರಿನಲ್ಲಿದ್ದ 9 ಜನರು ಭದ್ರಾವತಿ (Bhadravathi) ಮೂಲದವರು ಎಂದು ತಿಳಿದುಬಂದಿದೆ. ಕೆಎಸ್‌ಆರ್‌ಟಿಸಿ (KSRTC) ಬಸ್ ಶಿವಮೊಗ್ಗದಿಂದ ತರೀಕೆರೆಗೆ ತೆರಳುತ್ತಿದ್ದು, ಕಾರು ತರೀಕೆರೆಯಿಂದ ಭದ್ರಾವತಿಗೆ ತೆರಳುತ್ತಿತ್ತು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಭೀಕರ ಅಪಘಾತ ಉಂಟಾಗಿದೆ. ಇದನ್ನೂ ಓದಿ: ರಕ್ತಚಂದನ ಸಾಗಿಸ್ತಿದ್ದ ಕಾರು ಭೀಕರ ಅಪಘಾತಕ್ಕೆ ಜಖಂ – ಪವಾಡವೆಂಬಂತೆ ಪಾರಾದ ಕಳ್ಳರು
ನೂತನ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಅವರ ಅಭಿನಂದನಾ ಸಮಾರಂಭದಲ್ಲಿ ಆರ್ಕೆಸ್ಟ್ರಾದಲ್ಲಿ (Arkestra) ಹಾಡು ಬದಲಿಸುವ ವಿಚಾರದಲ್ಲಿ ವರುಣ್ ಹಾಗೂ ಕಾಬಾಬ್ ಮೂರ್ತಿ ನಡುವೆ ಗಲಾಟೆ ನಡೆದಿದೆ. ಇದರಿಂದ ಸಿಟ್ಟಿಗೆದ್ದ ಆರೋಪಿ ಕಾರ್ಯಕ್ರಮ ಮುಗಿಯುವ ತನಕ ಸುಮ್ಮನಿದ್ದ. ಬಳಿಕ ಕಾರ್ಯಕ್ರಮ ಮುಗಿಯುತ್ತಿದ್ದಂತೆ ವರುಣ್‍ಗೆ ಚಾಕುವಿನಿಂದ ಇರಿದಿದ್ದಾನೆ. ಅಲ್ಲದೆ ಮಂಜು ಹಾಗೂ ಸಂಜು ಎಂಬುವವರಿಗೂ ಆರೋಪಿ ಚಾಕುವಿನಿಂದ ಇರಿದಿದ್ದು, ಇಬ್ಬರಿಗೂ ಗಾಯಗಳಾಗಿವೆ.
ಕೂಡಲೇ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯಲಾಯಿತು. ಆದರೆ ಮಾರ್ಗ ಮಧ್ಯದಲ್ಲೇ ವರುಣ್ ಮೃತಪಟ್ಟಿದ್ದಾರೆ. ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎಸ್‍ಪಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ನಾವು ಸೇಫ್ ಆಗಿದ್ದೇವೆ; ಸುರಕ್ಷಿತವಾಗಿ ಸುಮೇದ್ ಸಿಖರ್ಜಿ ತಲುಪಿದ 110 ಕನ್ನಡಿಗರು
ಚಿಕ್ಕಮಗಳೂರು: ಅರೆ ಮಲೆನಾಡು ಪ್ರದೇಶದ ತರೀಕೆರೆ (Tarikere) ವಿಧಾನಸಭಾ ಕ್ಷೇತ್ರದ ಚುನಾವಣೆ (Election) ವಿಷಯದಲ್ಲಿ ಜಾತಿ ಪ್ರಮುಖ ಪಾತ್ರ ವಹಿಸುತ್ತದೆ. ಲಿಂಗಾಯುತ ಸಮುದಾಯದ ಜನರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಕುರುಬ, ಎಸ್ಸಿ ಹಾಗೂ ಎಸ್ಟಿ ಮತಗಳೇ ನಿರ್ಣಾಯಕವಾಗಿದೆ. ಒಂದು ಕಾಲದಲ್ಲಿ ಈ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಈಗ ಕಳೆದ ಎರಡು ದಶಕಗಳಿಂದ ಬಿಜೆಪಿಯ ತೆಕ್ಕೆಯಲ್ಲಿದೆ.
1985ರಲ್ಲಿ ಜನತಾ ಪಕ್ಷದಿಂದ ನೀಲಕಂಠಪ್ಪ ಶಾಸಕರಾಗಿ ಪ್ರಥಮ ಭಾರಿ ಆಯ್ಕೆಯಾಗಿದ್ದರು. ನಂತರ ಕಾಂಗ್ರೆಸ್ (Congress) ಪಕ್ಷದಿಂದ ಮತ್ತೆ ಶಾಸಕರಾಗಿ 2 ಬಾರಿ ಗೆದ್ದಿದ್ದರು. ಹೆಚ್.ಆರ್ ರಾಜು ಕಾಂಗ್ರೆಸ್‍ನಿಂದ 2 ಬಾರಿ ಗೆದ್ದಿದ್ದರು. 1994ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಎಸ್.ಎಂ ನಾಗರಾಜ್ ಆಯ್ಕೆಯಾಗಿದ್ದರು. 2004ರಲ್ಲಿ ಕಾಂಗ್ರೆಸ್ಸಿನಿಂದ ಟಿ.ಹೆಚ್ ಶಿವಶಂಕರಪ್ಪ ಶಾಸಕರಾಗಿ ಆಯ್ಕೆಯಾಗಿದ್ದರು. 2008ರಲ್ಲಿ ಬಿಜೆಪಿ (BJP) ಅಭ್ಯರ್ಥಿ ಡಿ.ಎಸ್ ಸುರೇಶ್ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಯಡಿಯೂರಪ್ಪನವರ ಕೆಜೆಪಿ ಉಗಮದಿಂದ ಅಚ್ಚರಿ ಎಂಬಂತೆ ಜಿ.ಎಚ್ ಶ್ರೀನಿವಾಸ್ ಮೊದಲ ಬಾರಿಗೆ ಗೆದ್ದಿದ್ದರು. 2018ರಲ್ಲಿ ಮತ್ತೆ ಡಿ.ಎಸ್ ಸುರೇಶ್ ಗೆಲವು ಸಾಧಿಸಿದ್ದರು. ಆದರೆ ಈ ಬಾರಿ ತಾಲೂಕಿನ ಸಂಪೂರ್ಣ ರಾಜಕೀಯ ಚಿತ್ರಣವೇ ಬದಲಾಗಿದೆ. ಕಳೆದ ಮೂರು ಚುನಾವಣೆಯಲ್ಲಿ ಮೂರು ಪಕ್ಷದಿಂದಲೂ ಕೊನೆ ಕ್ಷಣದಲ್ಲಿ ಟಿಕೆಟ್ ತಪ್ಪಿದ್ದ ಗೋಪಿಕೃಷ್ಣ ಈ ಬಾರಿ ಪಕ್ಷೇತರವಾಗಿ ಕಣಕ್ಕಿಳಿದಿದ್ದಾರೆ. ಇದನ್ನೂ ಓದಿ: ನಾನು ತಟಸ್ಥ, ಆದ್ರೆ ಪಕ್ಷ ವಿರೋಧಿ ಕೆಲಸ ಮಾಡಲ್ಲ : ಶಾಸಕ ಸುಕುಮಾರ ಶೆಟ್ಟಿ
ತರೀಕೆರೆಯಲ್ಲಿ ನಿರ್ಣಾಯಕ ಪಾತ್ರವಹಿಸಿರುವ ಕುರುಬರು 30 ಸಾವಿರದಷ್ಟು ಜನಸಂಖ್ಯೆ ಇದೆ. ಆದರೆ ಕುರುಬ ಸಮುದಾಯ ಸಂಘದ ಹಣವನ್ನ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪದಿಂದ ಶ್ರೀನಿವಾಸ್ ಬಿಟ್ಟು ಬೇರೆ ಯಾರಿಗಾದರೂ ಟಿಕೆಟ್ ಕೊಡಿ ಎಂದು ಕುರುಬ ಸಮುದಾಯದ ಪ್ರಮುಖರು ಲಾಬಿ ಮಾಡಿದ್ದರು. ಕುರುಬ ಸಮುದಾಯ ಹಾಗೂ ನೊಣಬ ಲಿಂಗಾಯುತ ಸಮುದಾಯ ಗೋಪಿಕೃಷ್ಣ ಪರ ಬ್ಯಾಟಿಂಗ್ ಮಾಡಿದ್ದರು. ಗೋಪಿಕೃಷ್ಣ ಅವರನ್ನು ಬೇಕಾದಂತೆ ಬಳಸಿಕೊಂಡ ಕಾಂಗ್ರೆಸ್ ಪ್ರಮುಖ ಸಮುದಾಯಗಳ ಪ್ರಮುಖರ ವಿರೋಧದ ನಡುವೆಯೂ ಶ್ರೀನಿವಾಸ್ ಅವರಿಗೆ ಟಿಕೆಟ್ ಕೊಟ್ಟಿದೆ. ಕಳೆದ ಬಾರಿ ನೊಣಬ ಸಮುದಾಯದ ಮಾಜಿ ಶಾಸಕ ಎಸ್.ಎಂ ನಾಗರಾಜ್ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದರು. ಆಗ ಟಿಕೆಟ್ ಸಿಗದೇ ಮಾಜಿ ಶಾಸಕ ಹಾಗೂ ಈ ಬಾರಿಯ ಕಾಂಗ್ರೆಸ್ ಅಭ್ಯರ್ಥಿ ಜಿ.ಎಚ್ ಶ್ರೀನಿವಾಸ್ ಪಕ್ಷೇತರವಾಗಿ ನಿಂತು ಸೋತಿದ್ದರು. ಅಲ್ಲದೆ ಕಾಂಗ್ರೆಸ್ ಪಕ್ಷವನ್ನೂ ಸೋಲಿಸಿದ್ದರು. ಇದು ನೊಣಬ ಸಮುದಾಯದ ಮುಖಂಡರ ಕಣ್ಣನ್ನ ಕೆಂಪಾಗಿಸಿತ್ತು.
ಈ ಕಾರಣಕ್ಕೆ ಈ ಬಾರಿ, ಜಿ.ಎಚ್ ಶ್ರೀನಿವಾಸ್ (G.H Srinivas) ವಿರೋಧಿ ಗುಂಪು ಪಕ್ಷೇತರ ಅಭ್ಯರ್ಥಿ ಗೋಪಿಕೃಷ್ಣ (Gopikrishna) ಪರ ಇದೆ. ಆದರೆ, ಅವರಿಗೆ ಜಾತಿ ಬೆಂಬಲ ಇಲ್ಲ. ಮಡಿವಾಳರ ಮತಗಳು ತರೀಕೆರೆಯಲ್ಲಿ ಹೆಚ್ಚೆಂದರೆ 3000 ಇದೆ. ಆದರೆ, ಕಳೆದ 15 ವರ್ಷದಿಂದ ಕ್ಷೇತ್ರದಲ್ಲಿ ಕೋಟ್ಯಂತರ ರೂ. ಸೇವೆ ನೀಡಿದ್ದಾರೆ. ಇದರಿಂದಾಗಿ ಅವರ ಪರ ಮತದಾರರ ಒಲವಿದೆ. ಕಾಂಗ್ರೆಸ್ ಪಕ್ಷೇತರ ಅಭ್ಯರ್ಥಿಗಳ ಜಗಳದಲ್ಲಿ ಬಿಜೆಪಿಗೆ ಇದು ಪ್ಲಸ್ ಪಾಯಿಂಟ್ ಆದರೂ ಆಶ್ಚರ್ಯವಿಲ್ಲ. ಆದರೆ, ತರೀಕೆರೆಯಲ್ಲಿ 1952ನೇ ಇಸವಿಯಿಂದ ಈವರೆಗೆ ಯಾರೂ ಸರಣಿಯಾಗಿ 2ನೇ ಸಲ ಗೆದ್ದಿಲ್ಲ. ಎಲ್ಲರೂ ಒಂದು ಸಲ ಬಿಟ್ಟು ಮತ್ತೊಮ್ಮೆ ಗೆದ್ದವರೇ ಆಗಿದ್ದಾರೆ. ಆದರೆ, ಈ ಬಾರಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಜನ ಯಾರಿಗೆ ಮಣೆ ಹಾಕುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮೋದಿ ಬೃಹತ್ ರೋಡ್ ಶೋ – ರೇಷ್ಮೆಯ ಮೈಸೂರು ಪೇಟಾದಲ್ಲಿ ಕಂಗೊಳಿಸುತ್ತಿರುವ ಪಿಎಂ
ಯಾವ್ಯಾವ ಜಾತಿಯಲ್ಲಿ ಎಷ್ಟೆಷ್ಟು ಮತ?
ಲಿಂಗಾಯತ : 41,950
ಎಸ್.ಎಸ್ಟಿ : 45,910
ಕುರುಬ : 27,715
ಮುಸ್ಲಿಂ : 15,807
ಉಪ್ಪಾರ : 10,579
ಒಕ್ಕಲಿಗ : 8,150
ಕ್ರಿಶ್ಚಿಯನ್ : 5,150
ಬ್ರಾಹ್ಮಣರು : 1,961
ತಮಿಳ್ ಗೌಂಡರ್ : 6,595
ಇತರೆ : 23,109
ಚಿಕ್ಕಮಗಳೂರು: ಗೋಪಿಕೃಷ್ಣಗೆ (Gopikrishna) ತರೀಕೆರೆಯ (Tarikere) ಕಾಂಗ್ರೆಸ್ (Congress) ಟಿಕೆಟ್ ತಪ್ಪಿದ್ದು, ಮನನೊಂದ ದಂಪತಿ ನೂರಾರು ಅಭಿಮಾನಿಗಳ ಮಧ್ಯೆಯೇ ಕಣ್ಣೀರಿಟ್ಟಿದ್ದಾರೆ.
ತರೀಕೆರೆಯಲ್ಲಿ ಆರಂಭದಿಂದಲೂ ಕಾಂಗ್ರೆಸ್ ಟಿಕೆಟ್‍ಗಾಗಿ ತೀವ್ರ ಪೈಪೋಟಿ ನಡೆದಿತ್ತು. ಟಿಕೆಟ್‍ಗಾಗಿ 14 ಜನ ಹೋರಾಡುತ್ತಿದ್ದರು. ಅಂತಿಮವಾಗಿ ಗೋಪಿಕೃಷ್ಣ ಹಾಗೂ ಮಾಜಿ ಶಾಸಕ ಜಿ.ಎಚ್ ಶ್ರೀನಿವಾಸ್ ಮಧ್ಯೆ ತೀವ್ರ ಪೈಪೋಟಿ ನಡೆದಿತ್ತು. ಇದನ್ನೂ ಓದಿ: ಜಗದೀಶ್ ಶೆಟ್ಟರ್‌ಗೆ ಬಿಜೆಪಿ ನೀಡಿತ್ತು 2 ಬಿಗ್ ಆಫರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಗೋಪಿಕೃಷ್ಣಗೆ ಟಿಕೆಟ್ ನೀಡುತ್ತೇವೆ ಎಂದು ಹೇಳಿದ್ದರು. ರಾಜ್ಯದಲ್ಲಿ ಮಡಿವಾಳದ ಸಮುದಾಯದವರಿಗೆ ಎಲ್ಲೂ ಟಿಕೆಟ್ ನೀಡಿಲ್ಲ. ಅವರಿಗೆ ಟಿಕೆಟ್ ಕೊಟ್ಟೆ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಕೊನೆ ಘಳಿಗೆಯಲ್ಲಿ ಅವರಿಗೆ ಕೈ ಟಿಕೆಟ್ ತಪ್ಪಿದ್ದು, ದಂಪತಿ ನೂರಾರು ಅಭಿಮಾನಿಗಳ ಮಧ್ಯೆ ಕಣ್ಣೀರಿಟ್ಟಿದ್ದಾರೆ.
ಗೋಪಿಕೃಷ್ಣಗೆ ಟಿಕೆಟ್ ಮಿಸ್ ಆಗುತ್ತಿದ್ದಂತೆ ಅಭಿಮಾನಿಗಳು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಸಿಟ್ಟಿಗೆದ್ದ ಅಭಿಮಾನಿಗಳು ಆಟೋಗೆ ಬೆಂಕಿ ಹಚ್ಚಿದ್ದಾರೆ. ಸಿದ್ದರಾಮಯ್ಯನವರ (Siddaramaiah) ಅಹಿಂದ (Ahinda) ಹೆಸರಿಗೆ ಮಾತ್ರ. ಅವರಿಗೆ ಅಹಿಂದ ಪದದ ಅರ್ಥವೇ ಗೊತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸದ್ಯ ಟಿಕೆಟ್ ಸಿಕ್ಕಿರುವ ಮಾಜಿ ಶಾಸಕ ಶ್ರೀನಿವಾಸ್ ಗೆಲುವಿನ ಹಾದಿಯೂ ಸುಲಭವಾಗಿಲ್ಲ. ತರೀಕೆರೆಯಲ್ಲಿ ನಿರ್ಣಾಯಕ ಪಾತ್ರವಿರುವ ಕುರುಬ ಸಮುದಾಯ ಶ್ರೀನಿವಾಸ್‍ಗೆ ವಿರೋಧವಿದೆ. ಶ್ರೀನಿವಾಸ್ ಕುರುಬ ಸಂಘದ ಹಣವನ್ನ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ. ಇದೇ ಕಾರಣದಿಂದ ಕುರುಬ (Kuruba) ಸಮುದಾಯ ಅವರ ವಿರುದ್ಧ ತಿರುಗಿದೆ. ಅವರಿಗೆ ಟಿಕೆಟ್ ಕೈತಪ್ಪಿಸಬೇಕೆಂದು ಕುರುಬ ಸಮುದಾಯದ ಪ್ರಮುಖ ನಾಯಕರು ಸಹ ಹೋರಾಡಿದ್ದರು. ಶ್ರೀನಿವಾಸ್‍ಗೆ ಟಿಕೆಟ್ ನೀಡಿದರೆ ಕುರುಬ ಸಮುದಾಯದಿಂದ ಏಳೆಂಟು ಅಭ್ಯರ್ಥಿಗಳು ಚುನಾವಣೆಗೆ ನಿಲ್ಲುತ್ತೇವೆಂದು ಎಚ್ಚರಿಕೆ ಕೂಡ ನೀಡಿದ್ದರು. ಆದರೂ ಟಿಕೆಟ್ ಅವರಿಗೆ ಸಿಕ್ಕಿರುವುದು ಸಮುದಾಯದವನ್ನ ಸಿಟ್ಟಾಗಿಸಿದೆ.
ಶ್ರೀನಿವಾಸ್ ವಿರುದ್ಧ ಇರುವ ಕುರುಬ ಸಮುದಾಯದ ನಾಯಕರು ಗೋಪಿಕೃಷ್ಣ ಜೊತೆಗೆ ನಿಂತಿದ್ದಾರೆ. ಗೋಪಿಕೃಷ್ಣ, ಅಭಿಮಾನಿಗಳು ಹಾಗೂ ಎಲ್ಲಾ ಸಮುದಾಯದ ಮುಖಂಡರ ಜೊತೆ ಸಭೆ ಬಳಿಕ ಮುಂದಿನ ರಾಜಕೀಯದ ನಡೆ ನಿರ್ಧರಿಸುತ್ತೇನೆ ಎಂದಿದ್ದಾರೆ. ಈ ಮೂಲಕ ಅವರು ಪಕ್ಷೇತರವಾಗಿ ನಿಲ್ಲುವ ಸೂಚನೆ ನೀಡಿದ್ದಾರೆ. ಗೋಪಿಕೃಷ್ಣ ಸ್ವಂತಂತ್ರವಾಗಿ ಸ್ಪರ್ಧಿಸಿದರೆ ಶ್ರೀನಿವಾಸ್ ಗೆಲುವಿಗೆ ಕಷ್ಟವಾಗುವ ಸೂಚನೆ ಕೂಡ ಇದೆ. ಈ ಇಬ್ಬರ ನಡುವಿನ ತಿಕ್ಕಾಟ ಮೂರನೇಯವನಿಗೆ ಲಾಭ ಎಂಬಂತೆ ನಮಗೆ ಲಾಭವಾಗಬಹುದು ಎಂದು ಬಿಜೆಪಿಗರು ಅಂದಾಜಿಸಿದ್ದಾರೆ. ಇದನ್ನೂ ಓದಿ: 40% ಕಮಿಷನ್ ಕಡಿಮೆ ಮಾಡಿದ್ರೆ ಇಂದಿರಾ ಕ್ಯಾಂಟೀನ್ ಉಳಿಯುತ್ತಿತ್ತು – ಸಿದ್ದರಾಮಯ್ಯ ಟಾಂಗ್