Tag: Taralabalu mata

  • ನೆರೆಪೀಡಿತ ಗ್ರಾಮದ 1 ಸಾವಿರ ಮಕ್ಕಳನ್ನ ದತ್ತು ಪಡೆದು ಉಚಿತ ಶಿಕ್ಷಣ : ಶಿವಾಚಾರ್ಯ ಸ್ವಾಮೀಜಿ ಭರವಸೆ

    ನೆರೆಪೀಡಿತ ಗ್ರಾಮದ 1 ಸಾವಿರ ಮಕ್ಕಳನ್ನ ದತ್ತು ಪಡೆದು ಉಚಿತ ಶಿಕ್ಷಣ : ಶಿವಾಚಾರ್ಯ ಸ್ವಾಮೀಜಿ ಭರವಸೆ

    – ಜಿಲ್ಲೆಯ 200 ಮಕ್ಕಳಿಗೆ ಮಠದ ವತಿಯಿಂದ ಉಚಿತ ಶಿಕ್ಷಣ

    ಹಾವೇರಿ: ಜಿಲ್ಲೆಯ ಎರಡು ಗ್ರಾಮಗಳ ನೆರೆ ಸಂತ್ರಸ್ತರಿಗೆ ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಪರಿಹಾರ ಸಾಮಾಗ್ರಿಗಳನ್ನ ವಿತರಣೆ ಮಾಡಿದರು. ಇದೇ ವೇಳೆ ನೆರೆಪೀಡಿತ ಗ್ರಾಮದಲ್ಲಿನ 1 ಸಾವಿನ ಮಕ್ಕಳನ್ನು ದತ್ತು ಪಡೆದು, ಉಚಿತ ಶಿಕ್ಷಣ ನೀಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ.

    ಹಾವೇರಿ ತಾಲೂಕು ನಾಗನೂರು ಮತ್ತು ಕೂಡಲ ಗ್ರಾಮದ ನೆರೆ ಸಂತ್ರಸ್ತರಿಗೆ ಮಠದ ವತಿಯಿಂದ ಆಹಾರ ಸಾಮಾಗ್ರಿಗಳು ಮತ್ತು ಬಟ್ಟೆಗಳನ್ನ ಶ್ರೀಗಳು ವಿತರಣೆ ಮಾಡಿದರು. ವರದಾ ನದಿಯ ತೀರದಲ್ಲಿ ಹಲವು ಗ್ರಾಮಗಳು ಜಲಾವೃತಗೊಂಡಿದ್ದು, ಶ್ರೀಮಠವು ನೆರೆ ಸಂತ್ರಸ್ತರಿಗೆ ಬೇಕಾದ ಸೌಲಭ್ಯವನ್ನ ಒದಗಿಸುತ್ತದೆ. ಪ್ರಸ್ತಕ ವರ್ಷವು ನೆರೆಪೀಡಿತ ಗ್ರಾಮದಲ್ಲಿನ ಒಂದು ಸಾವಿರ ಮಕ್ಕಳನ್ನ ದತ್ತು ಪಡೆದು ಉಚಿತ ಶಿಕ್ಷಣವನ್ನ ನೀಡಲಿದ್ದೇವೆ. ಜಿಲ್ಲೆಯ 200 ಮಕ್ಕಳಿಗೆ ಉಚಿತ ಶಿಕ್ಷಣವನ್ನ ಮಠ ನೀಡಲಿದೆ ಎಂದು ಶಿವಾಚಾರ್ಯ ಮಹಾಸ್ವಾಮೀಜಿಗಳು ವಾಗ್ದಾನ ನೀಡಿದರು. ಅಲ್ಲದೆ ಸರ್ಕಾರವು ಸಹ ನೆರೆ ಸಂತ್ರಸ್ತರಿಗೆ ಶೀಘ್ರವೇ ಎಲ್ಲಾ ಸೌಲಭ್ಯವನ್ನ ಒದಗಿಸಬೇಕು ಎಂದು ಮನವಿ ಮಾಡಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತವಾರಿ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿ, ಸರ್ಕಾರ ನೆರೆ ಸಂತ್ರಸ್ತರಿಗೆ ಇನ್ನು ಹೆಚ್ಚಿನ ಮಟ್ಟದಲ್ಲಿ ಪರಿಹಾರವನ್ನ ಕೊಡಿಸುವ ಭರವಸೆ ನೀಡಿದರು. ಶೀಘ್ರದಲ್ಲಿಯೇ ಬೆಳೆ ಹಾನಿಯಾದ ರೈತರಿಗೆ ಪರಿಹಾರವನ್ನ ಸರ್ಕಾರ ಬಿಡುಗಡೆ ಮಾಡುತ್ತದೆ ಎಂದರು. ಹಾಗೆಯೇ ಗ್ರಾಮದಲ್ಲಿ ಪ್ರವಾಹಕ್ಕೆ ಮನೆಗಳು ಬಿದ್ದ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿದರು.

  • ಸಾಣೇಹಳ್ಳಿ ತರಳಬಾಳು ಪಂಡಿತಾರಾಧ್ಯ ಶ್ರೀಗಳ ಕಾರು ಅಪಘಾತ..!

    ಸಾಣೇಹಳ್ಳಿ ತರಳಬಾಳು ಪಂಡಿತಾರಾಧ್ಯ ಶ್ರೀಗಳ ಕಾರು ಅಪಘಾತ..!

    ಚಿತ್ರದುರ್ಗ: ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದಿದ್ದು, ಇಂದು ಜಿಲ್ಲೆಯ ಸಾಸಲು ಗ್ರಾಮದ ಬಳಿ ಅಪಘಾತ ನಡೆದಿದೆ.

    ಹೊಳೆಲ್ಕರೆ ತಾಲೂಕಿನ ಸಾಸಲು ಗ್ರಾಮದ ಬಳಿ ಪಂಡಿತಾರಾಧ್ಯ ಶ್ರೀಗಳ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದು ಅಪಘಾತವಾಗಿದೆ. ಅಪಘಾತದಲ್ಲಿ ಶ್ರೀಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶ್ರೀಗಳು ಪ್ರಯಾಣಿಸುತ್ತಿದ್ದ ಕಾರ್ ಸಂಪೂರ್ಣ ಜಖಂಗೊಂಡಿದ್ದು, ಡಿಕ್ಕಿ ಹೊಡೆದ ಲಾರಿ ಪಲ್ಟಿಯಾಗಿದೆ.

    ಇಂದು ಬೆಳಗ್ಗೆ ಸ್ವಾಮೀಜಿಗಳು ಸಿರಿಗೆರೆಯಿಂದ ಸಾಸಲು ಮಾರ್ಗವಾಗಿ ಭದ್ರಾವತಿಗೆ ತೆರಳುತ್ತಿದ್ದರು. ಈ ವೇಳೆ ಸಾಸಲು ರೈಲ್ವೇ ಮೇಲ್ಸೇತುವೆ ಬಳಿ ಬರುತ್ತಿದ್ದಂತೆ ಎದುರಿನಿಂದ ಬಂದ ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ, ಸದ್ಯ ಘಟನೆ ಸಂಬಂಧ ಚಿಕ್ಕಜಾಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv