Tag: Taralabalu

  • ಮಾಧ್ಯಮಗಳಲ್ಲಿ‌ಬರುವ ವಿಚಾರ‌ ಸತ್ಯವೋ? ಸುಳ್ಳೋ ‌ಅಂತ‌ ತೀರ್ಮಾನಿಸಬೇಕಾಗಿರೋದು ಸಮಾಜ : ಹೆಚ್. ಆರ್.ರಂಗನಾಥ್

    ಮಾಧ್ಯಮಗಳಲ್ಲಿ‌ಬರುವ ವಿಚಾರ‌ ಸತ್ಯವೋ? ಸುಳ್ಳೋ ‌ಅಂತ‌ ತೀರ್ಮಾನಿಸಬೇಕಾಗಿರೋದು ಸಮಾಜ : ಹೆಚ್. ಆರ್.ರಂಗನಾಥ್

    ಚಿತ್ರದುರ್ಗ: ಮಾಧ್ಯಮಗಳಲ್ಲಿ‌ಬರುವ ವಿಚಾರ‌ ಸತ್ಯವೋ, ಸುಳ್ಳೋ ‌ಅಂತ‌ ತೀರ್ಮಾನಿಸಬೇಕಿರುವುದು ಸಮಾಜ ಎಂದು ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್‌.ರಂಗನಾಥ್‌ ಹೇಳಿದ್ದಾರೆ.

    ಭರಮಸಾಗರದಲ್ಲಿ ನಡೆದ ತರಳಬಾಳು ಹುಣ್ಣಿಮೆ ಉತ್ಸವದಲ್ಲಿ ʼಸಮೂಹ ಮಾಧ್ಯಮ ಮತ್ತು ಸಮಾಜʼ ವಿಷಯ ಬಗ್ಗೆ ಮಾತನಾಡಿದರು.

    ಮಾಧ್ಯಮ ಕ್ಷೇತ್ರದಲ್ಲಿ ಇರುವವರು ದೇವರಲ್ಲ. ನಿಮ್ಮಂತಹ ಸಮಾಜದಲ್ಲಿ ಮಾಧ್ಯಮ ಒಂದು ಭಾಗವಾಗಿದೆ. ಮಾಧ್ಯಮದವರು ಕೂಡ ಶ್ರೀಸಾಮಾನ್ಯರಾಗಿದ್ದಾರೆ. ಮಾಧ್ಯಮದವರು ಮಾಡಿದ್ದೆಲ್ಲಾ‌ಸರಿ ಅಂತ ಏನಿಲ್ಲ. ಆದರೆ ಆರಂಭದ ದಿನದಿಂದ‌ ನಾನು ನನ್ನ ನಿಲುವಿನಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ ಎಂದು ಹೇಳಿದರು.

    ಈ ಹಿಂದೆ ಪತ್ರಿಕೆಯಲ್ಲಿ ಬೆಳಿಗ್ಗೆ ಬಂದಿದ್ದೇ‌ ಪರಮಸತ್ಯ ಎನ್ನುವ ಕಾಲವಿತ್ತು. ಕೆಲ ದಿನಗಳ ಕಾಲ ಟಿವಿಗಳಲ್ಲಿ ಬಂದಿದ್ದು ಕೂಡ ಸತ್ಯ ಎನಿಸಿತ್ತು. ಈಗ‌ ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದೆಲ್ಲಾ ಸತ್ಯ ಎನಿಸಿದೆ ಎಂದು‌ ವಿಷಾದ ವ್ಯಕ್ತಪಡಿಸಿದರು.

    ಮಾಧ್ಯಮ ಹುಟ್ಟಿದ್ದು ಸಮಾಜದಿಂದ. ಆದರೆ ಸಮಾಜ ಇಂದು ಸ್ವಾರ್ಥದ ಸಮಾಜವಾಗಿದೆ. ರೈತರು ಮಾತ್ರ ಆ ವಿಚಾರದಲ್ಲಿ ಮುಗ್ದರಾಗಿದ್ದು,ಅವರಿಗೆ ಸ್ವಾರ್ಥದ ಚಿಂತನೆ ಇರುವುದಿಲ್ಲ. ಹೀಗಾಗಿ ರೈತರು ನಿರಂತರವಾಗಿ ಶ್ರಮವಹಿಸುತ್ತಾರೆ ಎಂದರು.  ಇದನ್ನೂ ಓದಿ: ಬೆಂಗಳೂರು – ಬೆಳಗಾವಿ ವಂದೇ ಭಾರತ್ ರೈಲು ಸಂಚಾರ ಶೀಘ್ರ ಆರಂಭ

    ಮೈಕ್ರೋ ‌ಫೈನಾನ್ಸ್‌ನವರು ಸಾಲ‌ಕೊಡುತ್ತಾರೆ ಎಂದು ಶಕ್ತಿ ಮೀರಿ ತೆಗೆದುಕೊಳ್ಳಬಾರದು. ಸಾಲ ತೆಗೆದುಕೊಂಡು ‌ಸಾಯುವ ಚಿಂತನೆ ಮಾಡಬಾರದು. ಸಾಲ‌ ತೆಗೆದುಕೊಂಡು ಸಾಯುವ ಚಿಂತನೆ‌ ಕೈಬಿಡಬೇಕು. ಸಾಲ ತೆಗೆದುಕೊಳ್ಳುವ ಮುನ್ನ ಎಚ್ಚರಿಕೆ ವಹಿಸಬೇಕೆಂದು ಕಿವಿಮಾತು ಹೇಳಿದರು.

    ಹತ್ತು ವರ್ಷ ಕಳೆದ ಬಳಿಕ ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಕೆಲವೊಮ್ಮೆ ‌ಯಾಕೆ ಬರಲಿಲ್ಲ ಅಂತ ಹೇಳಲು ಕಷ್ಟ ಸಾಧ್ಯ. ಈ ವೇದಿಕೆ ಅಂತರರಾಷ್ಟ್ರೀಯ ಗುಣಮಟ್ಟವನ್ನು ಕಾಪಾಡಿಕೊಂಡಿದೆ. ಮೂರು‌ ನಿಮಿಷ ಮಾತನಾಡುವಾಗ ನೂರು ಬಾರಿ ಮೊಬೈಲ್ ನೋಡುವ ದಿನವಿದು. ಈ ರೀತಿ ಶಾಂತಚಿತ್ತದಿಂದ‌ ಕುಳಿತಿರುವುದು ಅಚ್ಚರಿ ಮೂಡಿಸಿದೆ. ಒಳ್ಳೆಯವರು, ಕೆಟ್ಟವರಾಗುವುದನ್ನು ನಾವೇ ತೀರ್ಮಾನಿಸಬೇಕು ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಹೆಚ್‌.ಆರ್‌ ರಂಗನಾಥ್ ಅವರನ್ನು ತರಳಬಾಳು ಪೀಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿನಂದಿಸಿದರು. ಈ ವೇಳೆ ವಾಲ್ಮಿಕಿ ‌ಗುರುಪೀಠದ ಪ್ರಸನ್ನನಂದಪುರಿ ಶ್ರೀ, ಪೂರ್ವ ವಲಯ ಐಜಿಪಿ‌ ರವಿಕಾಂತೇಗೌಡ‌ ಸೇರಿದಂತೆ‌ ಜನಪ್ರತಿನಿಧಿಗಳು,ವಿವಿಧ ಮಾಧ್ಯಮಗಳ ಮುಖ್ಯಸ್ಥರು ಉಪಸ್ಥಿತರಿದ್ದರು.