Tag: Tarakasura

  • ರಗಡ್ ಲುಕ್‌ನಲ್ಲಿ ಮಿಂಚಿದ್ದ ‘ತಾರಕಾಸುರ’ ರವಿಯೀಗ ಕೈಲಾಸದ ಲವರ್ ಬಾಯ್!

    ರಗಡ್ ಲುಕ್‌ನಲ್ಲಿ ಮಿಂಚಿದ್ದ ‘ತಾರಕಾಸುರ’ ರವಿಯೀಗ ಕೈಲಾಸದ ಲವರ್ ಬಾಯ್!

    ರ್ಷಾಂತರಗಳ ಹಿಂದೆ ‘ತಾರಕಾಸುರ’ ಎಂಬ ಚಿತ್ರದ ನಾಯಕನಾಗಿ ಎಂಟ್ರಿ ಕೊಟ್ಟಿದ್ದವರು ರವಿ. ಮೊದಲ ಚಿತ್ರದಲ್ಲಿಯೇ ರವಿ (Ravi)  ಪಾತ್ರವನ್ನು ನಿಭಾಯಿಸಿದ್ದ ರೀತಿಗೆ ಪ್ರೇಕ್ಷಕರೆಲ್ಲ ಫಿದಾ ಆಗಿದ್ದರು. ಈ ಸಂಬಂಧವಾಗಿ ರವಿ ಮೆಚ್ಚುಗೆಯನ್ನೂ ಗಳಿಸಿಕೊಂಡಿದ್ದರು. ಅಂಥಾದ್ದೊಂದು ಸವಾಲಿನ ಪಾತ್ರ ಮಾಡಿ ಸೈ ಅನ್ನಿಸಿಕೊಂಡ ನಂತರ ಅದೇಕೋ ಸುದೀರ್ಘ ಕಾಲಾವಧಿಯವರೆಗೆ ರವಿ ಮರೆಯಾದಂತಿದ್ದರು. ಇದೀಗ ಅವರು ನಾಗ್ ವೆಂಕಟ್ ನಿರ್ದೇಶನದ ‘ಕೈಲಾಸ ಕಾಸಿದ್ರೆ’ (Kailasa Kasidre) ಚಿತ್ರದ ಮೂಲಕ ಹೊಸ ಗೆಟಪ್‌ನಲ್ಲಿ ಮತ್ತೆ ಮರಳಿದ್ದಾರೆ. ಈ ಸಿನಿಮಾದ ವಿಶೇಷತೆಗಳ ಬಗ್ಗೆ ವಿವರಗಳನ್ನು ಹರವುತ್ತಲೇ, ತಾವು ಬ್ರೇಕ್ ತೆಗೆದುಕೊಂಡಿದ್ದರ ಹಿಂದಿನ ಕೆಲ ರಹಸ್ಯ ಸಂಗತಿಗಳನ್ನೂ ಹಂಚಿಕೊಂಡಿದ್ದಾರೆ.

    ಸಾಮಾನ್ಯವಾಗಿ, ಒಂದು ಬಗೆಯ ಸಿನಿಮಾ ಗೆದ್ದರೆ ಆ ನಂತರ ಅಂಥಾದ್ದೇ ಧಾಟಿಯ ಮತ್ತೊಂದಷ್ಟು ಸಿನಿಮಾಗಳು ರೂಪುಗೊಳ್ಳುತ್ತವೆ. ಓರ್ವ ನಾಯಕ ನಟ ಒಂದು ಬಗೆಯ ಪಾತ್ರದ ಮೂಲಕ ಜನರನ್ನು ಸೆಳೆದುಕೊಂಡರೆ, ಆತನಿಗಾಗಿ ಅಂಥಾದ್ದೇ ಶೇಡ್ ಹೊಂದಿರುವ ಪಾತ್ರಗಳು ಅರಸಿ ಬರುತ್ತವೆ. ‘ತಾರಕಾಸುರ’ ಚಿತ್ರದಲ್ಲಿನ ರಾ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ರವಿಯ ಮುಂದೆ ಅಂಥಾದ್ದೇ ಶೇಡಿನ ಅದೆಷ್ಟೋ ಕಥೆಗಳು ಕುಣಿದಾಡಿದ್ದವಂತೆ.

    ಆದರೆ ಸಿನಿಮಾದಿಂದ ಸಿನಿಮಾಕ್ಕೆ ಬೇರೆ ಬೇರೆ ಥರದ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂಬುದು ರವಿ ಅವರ ಇಂಗಿತವಾಗಿತ್ತು. ಬಂದ ಅವಕಾಶಗಳನ್ನೆಲ್ಲ ನಿರಾಕರಿಸಿ, ಹೊಸಾ ಬಗೆಯ ಪಾತ್ರಕ್ಕಾಗಿ ಅರಸುತ್ತಿದ್ದಾಗ ಎದುರುಗೊಂಡಿದ್ದ ಸಿನಿಮಾ ಕೈಲಾಸ ಕಾಸಿದ್ರೆ.

    ‘ತಾರಕಾಸುರ’ ಚಿತ್ರದ ನಂತರದಲ್ಲಿ ಒಂದೇ ಒಂದು ಲವ್ ಸ್ಟೋರಿಯನ್ನೂ ರವಿ ಕೇಳಿಸಿಕೊಂಡಿರಲಿಲ್ಲವಂತೆ. ನಿರ್ದೇಶಕ ನಾಗ್ ವೆಂಕಟ್ ಈ ಕಥೆ ಹೇಳಿದಾಗ, ನಾಯಕನ ಪಾತ್ರದ ಬಗ್ಗೆ ವಿವರಿಸಿದಾಗ ಒಂದೇ ಸಲಕ್ಕೆ ರವಿ ಒಪ್ಪಿಗೆ ಸೂಚಿಸಿದ್ದರಂತೆ. ಇಲ್ಲಿ ಯುವ ಆವೇಗದ ಕಥೆ ಇದೆ. ಇಂಜಿನಿಯರಿಂಗ್ ಮುಗಿಸಿಕೊಂಡು ಕೆಲಸಕ್ಕಾಗಿ ಅರಸುವ ಘಟ್ಟದ ಯುವಕನ ಪಾತ್ರವನ್ನಿಲ್ಲಿ ರವಿ ಆವಾಹಿಸಿಕೊಂಡಿದ್ದಾರೆ. ಈ ಹಂತದಲ್ಲಿ ಆ ಯುವಕ ಪ್ರೀತಿಗಾಗಿ ಏನೇನು ಮಾಡುತ್ತಾನೆ, ಈ ನಡುವೆ ಅಡ್ಡದಾರಿ ಹಿಡಿದಾಗ ಏನೇನಾಗುತ್ತೆ ಎಂಬುದರ ಸುತ್ತ ಈ ಸಿನಿಮಾ ಚಲಿಸುತ್ತದೆಯಂತೆ.

    ಒಟ್ಟಾರೆಯಾಗಿ ಒಂದು ಬದಲಾವಣೆಗಾಗಿ ಹಂಬಲಿಸುತ್ತಿದ್ದ ರವಿ ಇಲ್ಲಿ ಲವರ್ ಬಾಯ್ ಆಗಿ, ನಾನಾ ಶೇಡುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಒಂದಷ್ಟು ಹಾಡುಗಳು ಮತ್ತು ಟ್ರೈಲರ್ ಮೂಲಕ ರವಿ ನಿಭಾಯಿಸಿರುವ ಪಾತ್ರದ ಚಹರೆಗಳು ಜಾಹೀರಾಗಿವೆ. ಈ ಸಿನಿಮಾ ‘ತಾರಕಾಸುರ’ ನಂತರದಲ್ಲಿ ತನಗೆ ಮತ್ತೊಂದು ತೆರನಾದ ಇಮೇಜು ಕಟ್ಟಿಕೊಟ್ಟು, ಮತ್ತೊಂದು ಬ್ರೇಕ್ ನೀಡಲಿದೆ ಎಂಬ ಭರವಸೆಯೂ ರವಿ ಅವರಲ್ಲಿದೆ. ರಾ ಲುಕ್ಕು, ನಾನಾ ಅವತಾರದಿಂದ ಆಚೆ ಬರಬೇಕೆಂಬ ರವಿಯ ಹಂಬಲ ಕೈಲಾಸದ ಮೂಲಕ ಈಡೇರಿದೆ. ಟ್ರಾನ್ಸ್ ಸಾಂಗ್ ಮುಂತಾದ ಒಂದಷ್ಟು ಅಂಶಗಳು ಮತ್ತು ಅದಕ್ಕೆ ಸಿಕ್ಕಿರುವ ಪ್ರೇಕ್ಷಕರ ಬೆಂಬಲ ರವಿ ಪಾಲಿಗೆ ಭರವಸೆಯನ್ನು ಕಟ್ಟಿ ಕೊಟ್ಟಿದೆ.

    ರವಿಗೆ (Ravi) ಜೋಡಿಯಾಗಿ ಸುಕನ್ಯಾ ನಟಿಸಿದ್ದಾರೆ. ಶಿವಾಜಿ ಸುರತ್ಕಲ್ ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿದ್ದ ಸುಕನ್ಯಾ ಈ ಮೂಲಕ ನಾಯಕಿಯಾಗಿದ್ದಾರೆ. ವಾಸಿಕ್ ಅಲ್ಸಾದ್ ನಿರ್ಮಾಣ ಮಾಡಿರುವ ಕೈಲಾಸ ಚಿತ್ರಕ್ಕೆ ಆಶಿಕ್ ಅರುಣ್ ಸಂಗೀತ, ತ್ಯಾಗರಾಜನ್ ಸಂಕಲನ, ಲೇಖಕ್ ಎಂ ಸಾಹಿತ್ಯ, ವಿನೋದ್ ರಾಜೇಂದ್ರನ್ ಛಾಯಾಗ್ರಹಣ, ಧನಂಜಯ ಬಿ ನೃತ್ಯ ನಿರ್ದೇಶನವಿದೆ. ವಾಸಿಕ್ ಅಲ್ಸಾದ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಾಫ್ಟ್‌ವೇರ್ ಜಗತ್ತಿನಿಂದ ಆಗಮಿಸಿರುವ ನಾಗ್ ವೆಂಕಟ್ ಚೊಚ್ಚಲ ನಿರ್ದೇಶನದ ಚಿತ್ರವಿದು. ಅಂದಹಾಗೆ, ಈ ಚಿತ್ರ ಇದೇ ತಿಂಗಳ 8ರಂದು ತೆರೆಗಾಣಲಿದೆ.

  • ಐವತ್ತನೇ ದಿನದಾಚೆಗೆ ಮುನ್ನುಗ್ಗಿದ ತಾರಕಾಸುರ!

    ಐವತ್ತನೇ ದಿನದಾಚೆಗೆ ಮುನ್ನುಗ್ಗಿದ ತಾರಕಾಸುರ!

    ಬೆಂಗಳೂರು: ನಮ್ಮ ನಡುವಿದ್ದೂ ನಾವ್ಯಾರೂ ಗಮನಿಸದ ರೋಚಕ ಕಥಾನಕ ಹೊಂದಿದ್ದ ಚಿತ್ರ ತಾರಕಾಸುರ. ಭರ್ಜರಿಯಾಗಿಯೇ ಓಪನಿಂಗ್ ಪಡೆದುಕೊಂಡು ಪ್ರೇಕ್ಷಕರನ್ನ ಆವರಿಸಿಕೊಂಡಿದ್ದ ಈ ಸಿನಿಮಾ ಈಗ ಐವತ್ತನೇ ದಿನ ಪೂರೈಸಿಕೊಂಡು ಯಶಸ್ಸಿನ ಓಟವನ್ನ ಮುಂದುವರೆಸಿದೆ. ಈ ಮೂಲಕ ಭರಪೂರವಾದ ಗೆಲುವೊಂದನ್ನು ತನ್ನದಾಗಿಸಿಕೊಂಡಿದೆ.

    ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಯಾರೂ ಮುಟ್ಟದ ಕಥಾವಸ್ತು `ತಾರಕಾಸುರ’ ಚಿತ್ರದ್ದು. ಈ ಹಿಂದೆ ಇದೇ ನಿರ್ದೇಶಕ ಬಂಡಿಯಪ್ಪ `ರಥಾವರ’ದಲ್ಲಿ ಮಂಗಳಮುಖಿಯರ ವಿಚಿತ್ರ ಜಗತ್ತನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದರು. ಈ ಬಾರಿ ಬುಡಬುಡಕೆ ಜನಾಂಗದವರ ವಿಚಾರವನ್ನು ಇಂಚಿಂಚಾಗಿ ಬಿಚ್ಚಿಟ್ಟಿದ್ದಾರೆ. ಇತಿಹಾಸವನ್ನು ಹೇಳುತ್ತಲೇ ವಾಸ್ತವದ ಜೊತೆಗೆ ಕಮರ್ಷಿಯಲ್ ಕತೆಯನ್ನು ಬೆರೆಸಿರುವುದು ಬಂಡಿಯಪ್ಪನವರ ಜಾಣ್ಮೆ. ಈ ಚಿತ್ರದ ಹೀರೋ ವೈಭವ್ ಹೊಸಬನಾದರೂ ಸಾಹಸ ದೃಶ್ಯಗಳಲ್ಲಿ ರೋಚಕವಾಗಿ ಅಭಿನಯಿಸಿದ್ದಾರೆ. ನಾಯಕಿ ಮಾನ್ವಿತಾ ಮುದ್ದುಮುದ್ದಾಗಿ ಕಾಣಿಸಿಕೊಂಡಿದ್ದಾರೆ.

    ನರಸಿಂಹಲು ನಿರ್ದೇಶನದ ಈ ಚಿತ್ರದಲ್ಲಿ ಅವರ ಪುತ್ರ ವೈಭವ್ ನಾಯಕನಾಗಿ ಎಂಟ್ರಿ ಕೊಟ್ಟು ಗೆದ್ದಿದ್ದಾರೆ. ಡ್ಯಾನಿ ಸಫಾನಿಯಂಥಾ ರಾಕ್ಷಸ ಪ್ರತಿಭೆಯ ಮುಂದೆ ನಟಿಸಿ, ಥರ ಥರದ ಶೇಡುಗಳನ್ನು ಆವಾಹಿಸಿಕೊಂಡಿರೋ ವೈಭವ್ ಪಾಲಿಗೂ ಇದು ಮಹಾ ಗೆಲುವು. ಪ್ರತಿ ಸೀನುಗಳಲ್ಲಿಯೂ ಅಚ್ಚರಿಗಳನ್ನೇ ತೆರೆದಿಡುವ ಈ ಚಿತ್ರವನ್ನು ಪ್ರೇಕ್ಷಕರು ಒಪ್ಪಿಕೊಂಡು ಅಪ್ಪಿಕೊಂಡಿದ್ದಾರೆ. ಆದ್ದರಿಂದಲೇ ತಾರಕಾಸುರ ಐವತ್ತನೇ ದಿನದಾಚೆಗೂ ಗೆಲುವಿನ ಪಯಣ ಮುಂದುವರೆಸಿದ್ದಾನೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • `ಜೋಗಿ ಪ್ರೇಮ್’ ಅಲ್ಲ `ಟೋಪಿ ಪ್ರೇಮ್’ ಎಂದ್ರು ನಿರ್ಮಾಪಕ ಶ್ರೀನಿವಾಸ್!

    `ಜೋಗಿ ಪ್ರೇಮ್’ ಅಲ್ಲ `ಟೋಪಿ ಪ್ರೇಮ್’ ಎಂದ್ರು ನಿರ್ಮಾಪಕ ಶ್ರೀನಿವಾಸ್!

    ಬೆಂಗಳೂರು: ಜೋಗಿ, ಕರಿಯಾ, ಎಕ್ಸ್ ಕ್ಯೂಸ್ ಮೀ ಅಂತಹ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಪ್ರೇಮ್, ನನ್ನ ಬಳಿ ಸಿನಿಮಾ ಮಾಡುದಾಗಿ ಹೇಳಿ ಮುಂಗಡ ಹಣ ಪಡೆದು ಸಿನಿಮಾ ಮಾಡಿಲ್ಲ ಎಂದು ನಿರ್ಮಾಪಕ ಶ್ರೀನಿವಾಸ್ ಆರೋಪ ಮಾಡಿದ್ದಾರೆ. ಅಲ್ಲದೇ ಅವರು ಜೋಗಿ ಪ್ರೇಮ್ ಅಲ್ಲ ಟ್ರೋಪಿ ಪ್ರೇಮ್ ಎಂದು ಆರೋಪಿಸಿದ್ದಾರೆ.

    ನಗರದಲ್ಲಿ ಇಂದು ನಡೆದ ತಾರಕಾಸುರ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀನಿವಾಸ್, ನಿರ್ದೇಶಕ ಪ್ರೇಮ್ ನನ್ನ ಬಳಿ ಸಿನಿಮಾ ಮಾಡುತ್ತೇನೆ ಎಂದು ಹೇಳಿ 9 ವರ್ಷದ ಇಂದೇ 10 ಲಕ್ಷ ರೂ. ಮುಂಗಡ ಹಣ ಪಡೆದುಕೊಂಡಿದ್ದರು. ಆದರೆ ಇನ್ನು ಹಣ ನೀಡದೆ ಅದೇ ಟೋಪಿ ಹಾಕಿಕೊಂಡು ಓಡಾಡುತ್ತಿದ್ದಾರೆ ಎಂದರು.

    ಜೋಗಿ ಸಿನಿಮಾ ವೇಳೆಯೇ 72 ಲಕ್ಷ ರೂ. ನೀಡಿ ನಾನು ಅವರ ಸಿನಿಮಾದ ತೆಲುಗು ಭಾಷೆಯ ರೈಟ್ಸ್ ಪಡೆದೆ. ಬಳಿಕ ಅವರೊಂದಿಗೆ ಸಿನಿಮಾ ಮಾಡಲು ಹಣ ನೀಡಿದ್ದೆ. ಇತ್ತೀಚಿಗೆ ನನ್ನ ಆರೋಗ್ಯ ಸರಿ ಇಲ್ಲದ ಕಾರಣ ಅವರ ಬಳಿ ಹಣ ಕೇಳಲು ಮನೆಗೆ ತೆರಳಿದ್ದೆ. ಆಗ 2.50 ಲಕ್ಷ ರೂ. ನೀಡಿದರು. ಆದರೆ ಮುಂದಿನ ದಿನಗಳಲ್ಲಿ ಬಾಕಿ ಹಣ ಕೇಳಿದರೆ ನೀಡಿಲ್ಲ. ಅಷ್ಟೇ ಅಲ್ಲದೇ ಹಣ ಕೊಡುತ್ತೇನೆ ಎಂದು ಹೇಳಿಕೊಂಡು ಬರುತ್ತಿದ್ದಾರೆ ಎಂದು ಆರೋಪಿಸಿದರು.

    ಪ್ರೇಮ್ ಅವರಿಗೆ ಹಣ ನೀಡುವ ಮೊದಲು ಅವರ ಎಲ್ಲಾ ಸಿನಿಮಾ ನೋಡಿದ್ದೆ. ಆ ಬಳಿಕ ಅವರಿಂದ ಸಿನಿಮಾ ಕಥೆಯನ್ನು ಕೂಡ ಕೇಳದೆ ಹಣ ನೀಡಿದ್ದೆ. ಆದರೆ ಅವರು ಸಿನಿಮಾ ಕೂಡ ಮಾಡಿಲ್ಲ, ಹಣವನ್ನು ವಾಪಸ್ ನೀಡಲ್ಲ. ಈಗ ಅವರ 50 ಕೋಟಿ ರೂ. ಸಿನಿಮಾ ಬಿಡುಗಡೆಯಾಗಿದೆ. ಸಾಮಾನ್ಯವಾಗಿ ನಾನು ಯಾರ ಬಳಿಯೂ ಹಣ ಕೇಳುವುದಿಲ್ಲ. ಆದರೆ ಪ್ರೇಮ್ ಅವರ ಬಳಿ ನನ್ನಿಂದ ಸಿನಿಮಾ ಮಾಡಿಸಲು ಸಾಧ್ಯವಾಗಲಿಲ್ಲ. ಇಂದು ನಾನು ತೊಂದರೆಯಲ್ಲಿ ಇದ್ದೇನೆ ಹಣ ನೀಡಿ ಎಂದರೂ ಅವರು ನನಗೆ ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ. ಮತ್ತೆ ಪ್ರೇಮ್ ಮನೆ ಬಳಿ ತೆರಳ ಬೇಕಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ತಾರಕಾಸುರ: ಮಂಗಳಮುಖಿಯರ ಕಥೆ ಹೇಳಿದ್ದವರ ಕಡೆಯಿಂದ ಬುಡ್ ಬುಡ್ಕೆ ಸದ್ದು!

    ತಾರಕಾಸುರ: ಮಂಗಳಮುಖಿಯರ ಕಥೆ ಹೇಳಿದ್ದವರ ಕಡೆಯಿಂದ ಬುಡ್ ಬುಡ್ಕೆ ಸದ್ದು!

    ಶ್ರೀಮುರುಳಿ ಅಭಿನಯದ ರಥಾವರ ಚಿತ್ರದಲ್ಲಿ ಮಂಗಳಮುಖಿಯರ ನಿಗೂಢ ಜಗತ್ತಿಗೆ ಕಣ್ಣಾಗಿದ್ದವರು ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ. ರಥಾವರ ಚಿತ್ರ ಅಷ್ಟು ದೊಡ್ಡ ಮಟ್ಟದಲ್ಲಿ ಯಶ ಕಂಡಿದ್ದರ ಹಿಂದೆ ಈ ವಿಶೇಷವಾದ ಕಥೆಯ ಪಾತ್ರವೂ ಪ್ರಮುಖವಾದದ್ದು. ಹಾಗಿರೋವಾಗ ಬಂಡಿಯಪ್ಪ ಅವರೇ ನಿರ್ದೇಶನ ಮಾಡಿರುವ ತಾರಕಾಸುರ ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಿಕೊಳ್ಳದಿರಲು ಸಾಧ್ಯವೇ?

    ತಾರಕಾಸುರ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿತ್ತಲ್ಲಾ? ಅದರ ಮೂಲಕವೇ ಈ ಚಿತ್ರದೆಡೆಗಿನ ಕ್ರೇಜ್ ಮತ್ತಷ್ಟು ಹೆಚ್ಚಿಕೊಂಡಿದೆ. ತುಳಿತಕ್ಕೊಳಗಾಗಿ, ಅವಸಾನದ ಅಂಚಿನಲ್ಲಿರೋ ಬುಡ್ ಬುಡಿಕೆ ಸಮುದಾಯದ ಸೂಕ್ಷ್ಮವಾದ ಕಥಾನಕವನ್ನು ಚಂದ್ರಶೇಖರ್ ಬಂಡಿಯಪ್ಪ ಈ ಚಿತ್ರಕ್ಕಾಗಿ ಆರಿಸಿಕೊಂಡಿರೋ ವಿಚಾರವೂ ಇದೀಗ ಬಯಲಾಗಿದೆ. ನರಸಿಂಹಲು ನಿರ್ಮಾಣ ಮಾಡಿರುವ, ಅವರ ಪುತ್ರ ವೈಭವ್ ನಾಯಕನಾಗಿ ನಟಿಸಿರೋ ಈ ಚಿತ್ರದಲ್ಲಿ ಮಾನ್ವಿತಾ ನಾಯಕಿಯಾಗಿ ನಟಿಸಿದ್ದಾರೆ. ಮೊದಲ ಚಿತ್ರದಲ್ಲಿಯೇ ಮೂರು ಶೇಡುಗಳಲ್ಲಿ ನಟಿಸಿರೋ ವೈಭವ್ ಕೂಡಾ ಎಲ್ಲರ ಗಮನ ಸೆಳೆದಿದ್ದಾರೆ.

    ಈ ಹಿಂದೆ ರಥಾವರ ಚಿತ್ರ ನಿರ್ದೇಶನ ಮಾಡಿದ್ದಾಗ, ಈಗ ತಾರಕಾಸುರ ಚಿತ್ರದ ಮೂಲಕ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ನಿಜಕ್ಕೂ ಬೆರಗು ಮೂಡಿಸಿದ್ದಾರೆ. ನಮ್ಮ ನಡುವಿದ್ದೂ ಗಮನಕ್ಕೆ ಬಾರದ ಇಂಥಾ ಸೂಕ್ಷ್ಮವಾದ ಕಥಾ ಹಂದರವನ್ನು ಅವರು ಹೇಗೆ ಗ್ರಹಿಸುತ್ತಾರೆಂಬ ಅಚ್ಚರಿ ಎಲ್ಲರಲ್ಲಿಯೂ ಇದ್ದೇ ಇದೆ. ಇದೇ ಪ್ರಶ್ನೆಯೊಂದಿಗೆ ಪಬ್ಲಿಕ್ ಟಿವಿ ಅವರನ್ನು ಮುಖಾಮುಖಿಯಾದಾಗ ನಿಜಕ್ಕೂ ರೋಚಕವೆನ್ನಿಸೋ ಹಲವಾರು ವಿಚಾರಗಳನ್ನವರು ಹಂಚಿಕೊಂಡಿದ್ದಾರೆ.

    ಇಂಥಾ ವಿರಳ ಕಥಾನಕಗಳಿಗೆ ಕಣ್ಣಾಗಲು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಚಂದ್ರಶೇಖರ್ ಬಂಡಿಯಪ್ಪ ಬಳಿಯಿರುವ ಉತ್ತರ `ಕುತೂಹಲ’. ರಥಾವರ ಚಿತ್ರದಲ್ಲಿ ಮಂಗಳಮುಖಿಯರ ಜಗತ್ತಿಗೆ ಹಣಕಿ ಹಾಕೋ ಪ್ರಯತ್ನ ಮಾಡುವಂತೆ ಪ್ರೇರೇಪಿಸಿದ್ದೂ ಕೂಡಾ ಆ ಕುತೂಹಲವೇ ಎಂಬುದು ವಿಶೇಷ. ಮಂಡ್ಯ ಸೀಮೆಯ ರೈತಾಪಿ ಬದುಕಿನ ಘಮಲನ್ನೇ ಹೊದ್ದುಕೊಂಡು ಸಿನಿಮಾ ಕನಸನ್ನು ಎದೆಯೊಳಗಿಟ್ಟುಕೊಂಡು ಬೆಂಗಳೂರಿಗೆ ಬಂದಿಳಿದ ಅವರ ಪಾಲಿಗೆ ಈ ನಗರಿಯೇ ಒಂದು ಕೌತುಕ. ನಂತರ ಹೇಗೋ ಮಾಡಿ ನಿರ್ದೇಶಕ ಎಸ್ ನಾರಾಯಣ್ ಅವರ ಬಳಿ ಸೇರಿಕೊಂಡ ನಂತರ ಅವರ ಪಾಲಿಗೆ ಸಿನಿಮಾ ಪಾಠಗಳು ತೆರೆದುಕೊಳ್ಳಲಾರಂಭಿಸಿದ್ದವು. ಆ ಕಾಲಕ್ಕೆ ಬಸವೇಶ್ವರ ನಗರದಲ್ಲಿದ್ದ ಎಸ್ ನಾರಾಯಣ್ ಮನೆಯಲ್ಲಿ ಸಿನಿಮಾ ಕೆಲಸ ಮಾಡುತ್ತಿದ್ದ ಬಂಡಿಯಪ್ಪ ಬಿಡುವಿನ ವೇಳೆಯಲ್ಲಿ ಕಾಲ ಕಳೆಯುತ್ತಿದ್ದದ್ದು ಕುರುಬರಳ್ಳಿಯ ಅಡ್ಡೆಯೊಂದರಲ್ಲಿ.

    ಹಾಗೇ ಒಂದು ದಿನ ಗೆಳೆಯರ ಜೊತೆ ಬೇಕರಿಯೊಂದರ ಮುಂದೆ ಮಾತಾಡುತ್ತಿರುವಾಗ ಹೆಣವೊಂದರ ಅಂತಿಮ ಯಾತ್ರೆ ಹಾದು ಹೋಗಿತ್ತು. ಅದರ ಹಿಂದೆ ಮಂಗಳಮುಖಿಯರ ದಂಡೂ ಹೊರಟಿತ್ತು. ಅದು ವಿರಳ ಸನ್ನಿವೇಶ. ಹಾಗೆ ತೆಗೆದುಕೊಂಡು ಹೋಗುತ್ತಿದ್ದ ಹೆಣದ ಮುಖ ಮುಚ್ಚಲಾಗಿತ್ತು. ಅದ್ಯಾಕೆ ಎಂಬ ಕುತೂಹಲದಿಂದ ಚಂದ್ರಶೇಖರ್ ಮಾತಾಡಿದಾಗ ಗೆಳೆಯರೊಬ್ಬರು `ಮಂಗಳಮುಖಿಯರು ಸತ್ತಾಗ ಹೆಣದ ಮುಖ ಯಾರಿಗೂ ತೋರಿಸಲ್ಲ’ ಅಂತ ಉತ್ತರ ಬಂದಿತ್ತು. ಯಾಕ ತೋರಿಸೋದಿಲ್ಲ ಎಂಬ ಕುತೂಹಲ ಹುಟ್ಟಿಕೊಂಡಿದ್ದೇ ಅವರನ್ನು ಮಂಗಳಮುಖಿಯರ ಜಗತ್ತಿನ ಬೆಂಬೀಳುವಂತೆ ಮಾಡಿತ್ತು.

    ಆ ಬಳಿಕ ಆ ಏರಿಯಾದಲ್ಲಿದ್ದ ಕೆಲ ಮಂಗಳಮುಖಿಯರ ಪರಿಚಯ ಮಾಡಿಕೊಂಡಿದ್ದ ಚಂದ್ರಶೇಖರ್, ಅವರ ಸ್ನೇಹ ಸಂಪಾದಿಸಿ ಒಂದಷ್ಟು ವಿವರ ಕಲೆ ಹಾಕಿದ್ದರು. ಇದಕ್ಕಾಗಿ ಹಿಡಿದದ್ದು ಭರ್ತಿ ಒಂದು ವರ್ಷ. ಹಾಗೆ ಕೆಲ ವಿವರ ಕಲೆ ಹಾಕಿದ ಬಂಡಿಯಪ್ಪ ಆ ಕ್ಷಣವೇ ಕಥೆಯೊಂದನ್ನು ಹೆಣೆದಿದ್ದರು. ಹಾಗೆ ಹುಟ್ಟು ಪಡೆದದ್ದು ರಥಾವರ ಚಿತ್ರ!

    ಚಂದ್ರಶೇಖರ ಬಂಡಿಯಪ್ಪನವರಿಗೆ ಓದೆಂದರೆ ಬದುಕಿನ ಭಾಗ. ಪೂರ್ಣಚಂದ್ರ ತೇಜಸ್ವಿ ಮತ್ತು ಎಸ್ ಎಲ್ ಬೈರಪ್ಪ ಅವರ ಇಷ್ಟದ ಬರಹಗಾರರು. ಏನು ಸಿಕ್ಕರೂ ಓದೋ ಗೀಳು ಹೊಂದಿರೋ ಅವರಿಗೆ ಅದುವೇ ಶಕ್ತಿ. ಹೀಗೆ ಓದಿನ ಗೀಳಿನಿಂದಲೇ ತಾರಕಾಸುರನ ಕಥೆ ಹುಟ್ಟಿಕೊಂಡಿದ್ದೂ ವಿಶೇಷವೇ. ಯಾವುದೋ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನದ ತುಣುಕೊಂದು ಅವರನ್ನು ಬುಡ್ ಬುಡ್ಕೆ ಸಮುದಾಯದ ಬಗ್ಗೆ ಅಧ್ಯಯನ ನಡೆಸಲು ಪ್ರೇರೇಪಿಸಿತ್ತಂತೆ. ಅದರ ಫಲವಾಗಿಯೇ ತಾರಕಾಸುರ ಚಿತ್ರ ಹುಟ್ಟಿಕೊಂಡಿದೆ.

    ಒಂದು ಕಲಾತ್ಮಕ ಚಿತ್ರವಾಗಬಲ್ಲ ಕಥೆಗೆ ಪಕ್ಕಾ ಕಮರ್ಷಿಯಲ್ ಫ್ರೇಮು ಹಾಕೋದರಲ್ಲಿ ಬಂಡಿಯಪ್ಪ ನಿಸ್ಸೀಮರು. ಅದು ರಥಾವರ ಚಿತ್ರದಲ್ಲಿಯೇ ಸಾಬೀತಾಗಿತ್ತು. ತಾರಕಾಸುರ ಚಿತ್ರವನ್ನೂ ಕೂಡಾ ಅವರು ಅಂಥಾದ್ದೇ ಆವೇಗದೊಂದಿಗೆ ರೂಪಿಸಿದ್ದಾರೆ. ಅದು ಟ್ರೈಲರ್ ಮೂಲಕವೇ ಪ್ರೇಕ್ಷಕರಿಗೂ ಅರ್ಥವಾಗಿದೆ. ಈ ಮೂಲಕವೇ ಎಲ್ಲೆಡೆ ತಾರಕಾಸುರನ ಅಬ್ಬರವೂ ಶುರುವಾಗಿದೆ. ರಥಾವರದ ನಂತರ ಈ ಮೂಲಕ ಮತ್ತೊಂದು ಮಹಾ ಗೆಲುವಿನ ನಿರೀಕ್ಷೆ ಚಂದ್ರಶೇಖರ್ ಬಂಡಿಯಪ್ಪನವರಿಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ತಾರಕಾಸುರ ಟ್ರೈಲರ್ ಬಿಡುಗಡೆ

    ತಾರಕಾಸುರ ಟ್ರೈಲರ್ ಬಿಡುಗಡೆ

    ಬೆಂಗಳೂರು: ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ತಾರಕಾಸುರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಹಿಂದೆ ರಥಾವರ ಚಿತ್ರದಲ್ಲಿ ಮಂಗಳಮುಖಿಯರ ನಿಗೂಢ ಜಗತ್ತನ್ನು ಬೆರಗಾಗುವಂತೆ ತೆರೆದಿಟ್ಟಿದ್ದವರು ಬಂಡಿಯಪ್ಪ. ತಾರಕಾಸುರ ಚಿತ್ರ ಎಂಥಾ ಕಥೆ ಹೊಂದಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದ್ದೇ ಇತ್ತು. ಇದೀಗ ಬಿಡುಗಡೆಯಾಗಿರೋ ಟ್ರೈಲರ್ ಅದನ್ನು ಸಣ್ಣದಾಗಿ ತಣಿಸುತ್ತಲೇ ದೊಡ್ಡ ಮಟ್ಟದಲ್ಲಿಯೇ ಕ್ರೇಜ್ ಹುಟ್ಟುಹಾಕುವಂತಿದೆ!

    ಇದು ಪಕ್ಕಾ ಫೋರ್ಸ್ ಹೊಂದಿರೋ ಮಾಸ್ ಟ್ರೈಲರ್. ಚಂದ್ರಶೇಖರ್ ಈ ಹಿಂದೆ ತಾರಕಾಸುರ ಎಂಬುದು ತುಳಿತಕ್ಕೊಳಗಾಗಿ, ಅವಸಾನದಂಚಿನಲ್ಲಿರೋ ಜಾನಪದ ಸಂಸ್ಕøತಿ ಹಾಗೂ ಸಮುದಾಯದ ಕಥೆ ಹೊಂದಿದೆ ಎಂಬ ಸುಳಿವು ನೀಡಿದ್ದರು. ಅದು ಯಾವ ಸಮುದಾಯ ಎಂಬ ಸಣ್ಣ ಹಿಂಟ್ ಕೂಡಾ ಈ ಟ್ರೈಲರಿನಲ್ಲಿ ಕಾಣ ಸಿಗುತ್ತದೆ. ಹಾಲಿವುಡ್‍ನ ಖ್ಯಾತ ನಟ ಡ್ಯಾನಿ ಸಫಾನಿ ಭಯಾನಕ ಶೇಡ್ ಹೊಂದಿರೋ ಪಾತ್ರದಲ್ಲಿ ನಟಿಸಿರೋದೂ ಕೂಡಾ ಪಕ್ಕಾ ಆಗಿದೆ.

    ಬಿಡುಗಡೆಯಾಗಿ ಗಂಟೆ ಕಳೆಯೋದರೊಳಗೇ ಈ ಟ್ರೈಲರ್ ಎಲ್ಲೆಡೆ ಟಾಕ್ ಕ್ರಿಯೇಟ್ ಮಾಡಿದೆ. ಕಲಾತ್ಮಕ ಚಿತ್ರವಾಗಿ ಕಳೆದು ಹೋಗಬಹುದಾದ ಕಥಾ ಎಳೆಯನ್ನೂ ಕೂಡಾ ಕಮರ್ಷಿಯಲ್ಲಾಗಿ ಹೇಳ ಬಲ್ಲ ಛಾತಿ ಹೊಂದಿರುವವರು ಚಂದ್ರಶೇಖರ್ ಬಂಡಿಯಪ್ಪ. ಅವರೊಳಗಿನ ಕುತೂಹಲದ ಕಣ್ಣು ಈ ಟ್ರೈಲರ್ ಮೂಲಕ ಎಲ್ಲರೆದೆಗೂ ಅಚ್ಚರಿಯೊಂದನ್ನು ರವಾನಿಸಿದೆ. ನಿರ್ಮಾಪಕ ಎಂ.ನರಸಿಂಹಲು ಈ ಚಿತ್ರವನ್ನು ರಿಚ್ ಆಗಿಯೇ ನಿರ್ಮಾಣ ಮಾಡಿರೋ ಸ್ಪಷ್ಟ ಸುಳಿವೂ ಸಿಕ್ಕಿದೆ. ಅವರ ಪುತ್ರ ವೈಭವ್ ನಟನೆಯೂ ಗಮನ ಸೆಳೆಯುತ್ತದೆ.

    ಒಟ್ಟಾರೆಯಾಗಿ ಈ ಚಿತ್ರ ಭಿನ್ನ ಕಥಾ ಹಂದರದ ಸುಳಿವು ನೀಡುತ್ತಲೇ ತನ್ನ ಮಾಸ್ ಲುಕ್ಕಿನ ಖದರ್ ಎಂಥಾದ್ದೆಂಬುದನ್ನು ಈ ಟ್ರೈಲರ್ ಮೂಲಕ ಅನಾವರಣಗೊಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾಳೆ ಆರ್ಭಟಿಸಲಿದೆ ತಾರಕಾಸುರ ಟ್ರೈಲರ್

    ನಾಳೆ ಆರ್ಭಟಿಸಲಿದೆ ತಾರಕಾಸುರ ಟ್ರೈಲರ್

    ಬೆಂಗಳೂರು: ಶ್ರೀಮುರಳಿಯವರ ಯಶಸ್ಸಿನ ಓಟ ನಾಗಾಲೋಟ ಪಡೆಯಲು ಕಾರಣವಾಗಿದ್ದ ಚಿತ್ರ ರಥಾವರ. ಈ ಚಿತ್ರದ ಮೂಲಕ ಭಿನ್ನವಾದ ಕಥೆಯೊಂದನ್ನು ಆರಿಸಿಕೊಂಡಿದ್ದವರು ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ. ಪ್ರೇಕ್ಷಕರನ್ನು ಅಚ್ಚರಿಗೀಡುಮಾಡಿದ್ದ ಕಂಟೆಂಟಿನಿಂದಲೇ ಗಮನ ಸೆಳೆದಿದ್ದ ಬಂಡಿಯಪ್ಪ ನಿರ್ದೇಶನ ಮಾಡಿರೋ ತಾರಕಾಸುರ ಚಿತ್ರದ ಬಗ್ಗೆ ಕುತೂಹಲದ ಕಣ್ಣು ನೆಡದಿರುತ್ತಾ?

    ತನ್ನ ರಗಡ್ ಪೋಸ್ಟರ್, ಹಾಲಿವುಡ್‍ನ ದೈತ್ಯ ನಟ ಡ್ಯಾನಿ ಸಫಾನಿಯ ಖಳನ ಪಾತ್ರ ಮತ್ತು ಹಾಡುಗಳ ಮೂಲಕ ಅಲೆಯೆಬ್ಬಿಸಿರೋ ಚಿತ್ರ ತಾರಕಾಸುರ. ಇದೀಗ ಆ ಕುತೂಹಲವನ್ನು ಇಮ್ಮಡಿಗೊಳಿಸಲೆಂದೇ ಟ್ರೈಲರ್ ಒಂದನ್ನು ರಿಲೀಸ್ ಮಾಡಲು ಚಿತ್ರ ತಂಡ ತೀರ್ಮಾನಿಸಿದೆ. ನಾಳೆ ಮಧ್ಯಾಹ್ನ 3.45ಕ್ಕೆ ಒರಾಯನ್ ಮಾಲ್‍ನಲ್ಲಿ ಈ ಟ್ರೈಲರ್ ಬಿಡುಗಡೆಯಾಗಲಿದೆ.

    ಈ ಟ್ರೈಲರ್ ಅನ್ನು ಈಗಾಗಲೇ ನಿರ್ದೇಶಕ ದುನಿಯಾ ಸೂರಿ ನೋಡಿದ್ದಾರೆ. ನಿರ್ದೇಶಕ ಚಂದರ್ರಶೇಖರ್ ಬಂಡಿಯಪ್ಪ ಅವರ ವಿಭಿನ್ನ ಶೈಲಿಯನ್ನು ಮೆಚ್ಚಿಕೊಂಡಿದ್ದಾರೆ. ಮೊದಲ ಚಿತ್ರದಲ್ಲಿಯೇ ಮೂರು ಶೇಡುಗಳಲ್ಲಿ, ಸವಾಲಿನ ಪಾತ್ರದಲ್ಲಿ ನಟಿಸಿರೋ ವೈಭವ್ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಎಂ ನರಸಿಂಹಲು ನಿರ್ಮಾಣದ ಈ ಚಿತ್ರದಲ್ಲಿ ಅವರ ಪುತ್ರ ವೈಭವ್ ನಾಯಕನಾಗಿ ನಟಿಸಿದ್ದಾರೆ. ರಥಾವರ ಚಿತ್ರದಲ್ಲಿ ಚಂದ್ರಶೇಖರ್ ಬಂಡಿಯಪ್ಪ ಮಂಗಳಮುಖಿಯರ ನಿಗೂಢ ಲೋಕವೊಂದನ್ನು ಅನಾವರಣಗೊಳಿಸಿದ್ದರು. ಆ ಮೂಲಕ ಪ್ರೇಕ್ಷಕರು ಬೆರಗಾಗುವಂತೆಯೂ ಮಾಡಿದ್ದರು. ಇದೀಗ ಅಂಥಾದ್ದೇ ಮತ್ತೊಂದು ಬೆರಗಾಗಿಸೋ ಕಥೆಯೊಂದಿಗೇ ಅವರು ತಾರಕಾಸುರನನ್ನು ಅಣಿಗೊಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • #MeToo  ಅಭಿಯಾನದಲ್ಲಿ ಮಾನ್ವಿತಾ ಹುಡುಗರ ಪರ ಬ್ಯಾಟಿಂಗ್

    #MeToo ಅಭಿಯಾನದಲ್ಲಿ ಮಾನ್ವಿತಾ ಹುಡುಗರ ಪರ ಬ್ಯಾಟಿಂಗ್

    ಬೆಂಗಳೂರು: ಬಾಲಿವುಡ್‍ನಿಂದ ಹಿಡಿದು ಸ್ಯಾಂಡಲ್‍ವುಡ್ ವರೆಗೂ `ಮಿ ಟೂ’ದೇ ಸಿಕ್ಕಾ ಪಟ್ಟೆ ಸದ್ದು, ಈಗ ಇದೇ ಟಾಪಿಕ್ ಬಗ್ಗೆ ಚಂದನವನದ ಟಗರು ಪುಟ್ಟಿ ಮಾನ್ವಿತಾ ಖಡಕ್ ಆಗಿ ಮಾತನಾಡಿದ್ದಾರೆ.

    ಕೆಂಡಸಂಪಿಗೆ ಬೆಡಗಿ ಮಾನ್ವಿತಾ ಅವರು ಸಿನಿರಂಗದಲ್ಲಿ ನಡೆಯುತ್ತಿದ್ದ ‘ಮಿ ಟೂ’ ಬಗ್ಗೆ `ತಾರಕಾಸುರ’ ಸಿನಿಮಾದ ಆಡಿಯೋ ಲಾಂಚ್ ನಲ್ಲಿ ಮಾತನಾಡಿದ್ದಾರೆ. ಹುಡುಗ ನೋಡಿದ ತಕ್ಷಣ, ರೇಗಿಸಿದ ತಕ್ಷಣ ಅದನ್ನು ಲೈಂಗಿಕ ಕಿರುಕುಳ ಅಂತ ಹೇಳಬೇಡಿ. ಕೆಲವರು ಸುಮ್ಮನೆ ಪ್ರಚಾರಕ್ಕೋಸರ ಆರೋಪ ಮಾಡಬಾರದು ಎಂದು ಹುಡುಗಿಯರ ಬಳಿ ಮನವಿ ಮಾಡಿಕೊಂಡಿದ್ದಾರೆ.

    ನಾನು ಹೃದಯ ಪೂರ್ವಕವಾಗಿ ಹೇಳುತ್ತೇನೆ. ನೊಂದ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕು. ತಪ್ಪು ಮಾಡಿದ ಗಂಡು ಮಕ್ಕಳಿಗೆ ಶಿಕ್ಷೆ ಆಗಬೇಕು. ಆದರೆ ಗಂಡಸರ ಬಗ್ಗೆ ಯಾರೂ ಸುಮ್ಮಸುಮ್ಮನೆ ಆರೋಪ ಮಾಡಬಾರದು ಎಂದು ಮಾನ್ವಿತಾ ಅವರು ಹೇಳಿದ್ದಾರೆ.

    ಸದ್ಯಕ್ಕೆ ಮಾನ್ವಿತಾ ನಟಿಯಾಗಿ ‘ತಾರಕಾಸುರ’ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಸಂಗೀತ ನಿರ್ದೇಶಕ ಧರ್ಮ ವಿಶ್ ಮತ್ತು ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಕಾಂಬಿನೇಷನ್‍ನ ಮೂಡಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದೆ. ರಥಾವರ ಸಿನಿಮಾದಲ್ಲಿ `ಹುಡುಗಿ ಕಣ್ಣು ಲೋಡೆಡ್ ಗನ್ನು’ ಹಾಡಿನ ಈ ಜೋಡಿ ಮತ್ತೆ ಮೋಡಿ ಮಾಡುವುದಕ್ಕೆ ನಾಲ್ಕು ಹಾಡುಗಳನ್ನ ರೆಡಿ ಮಾಡಿಕೊಂಡಿದೆ.

    ವಿ. ನಾಗೇಂದ್ರ ಪ್ರಸಾದ್, ಬಹುದ್ಧೂರ್ ಚೇತನ್, ನಾಗತಿಹಳ್ಳಿ ಚಂದ್ರ ಶೇಖರ್, ಕವಿರಾಜ್ ತಾರಕಾಸುರನಿಗೆ ಸಾಹಿತ್ಯ ಬರೆದಿದ್ದಾರೆ. ಈಗಾಗಲೇ ಶಿವಣ್ಣ ಹಾಡಿರುವ ಕನ್ನಡ ಕಲಿಯೋ ಸಾಂಗ್ ಯುಟ್ಯೂಬ್‍ನಲ್ಲಿ ಒಳ್ಳೆ ಸೌಂಡ್ ಮಾಡುತ್ತಿದೆ. ಈಗ ಸಾಧು ಕೋಕಿಲಾ ಕಂಠಸಿರಿಯಲ್ಲಿ ಮೂಡಿ ಬಂದಿರುವ ಮತ್ತೊಂದು ಹಾಡು ಸದ್ದು ಮಾಡುವ ಕ್ಲೂ ಕೊಟ್ಟಿದೆ. ಇನ್ನು ನವೀನ್ ಸಜ್ಜು ಮತ್ತು ಕೈಲಾಶ್ ಖೇರ್ ಕೂಡ ಅಷ್ಟೇ ಖಡಕ್ ಆಗಿ ಹಾಡಿದ್ದಾರೆ.

    ಅಳಿವಿನ ಅಂಚಿನಲ್ಲಿರುವ ಒಂದು ಜನಪದ ಕಲೆಗೆ ಸಿನಿಮಾ ಟಚ್ ಕೊಟ್ಟು ಥೇಟರ್ ಗೆ ಎಂಟ್ರಿ ಕೊಡುವುದಕ್ಕೆ ‘ತಾರಕಾಸುರ’ ಸಿನಿಮಾ ರೆಡಿಯಾಗಿದೆ. ಹಾಲಿವುಡ್‍ನ ಡ್ಯಾನಿ ಕೂಡ ಈ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಡುತ್ತಿರುವುದು ಮತ್ತೊಂದು ಸ್ಪೆಷಲ್ ಆಗಿದೆ. ಸದ್ಯದಲ್ಲೇ ಟ್ರೇಲರ್ ಕೂಡ ರಿಲೀಸ್ ಮಾಡುವ ಪ್ಲಾನ್‍ ನಲ್ಲಿ ಚಿತ್ರತಂಡ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv