Tag: Tarak Ponnappa

  • ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ: ಹೊಸ ಅಧ್ಯಾಯ ಶುರು

    ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ: ಹೊಸ ಅಧ್ಯಾಯ ಶುರು

    ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ (Udho Udho Shri Renuka Yellamma) ಹೊಸ ಅಧ್ಯಾಯ ಶುರುಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ವೀಕ್ಷಕರಿಗೆ ಪುರಾಣ, ಆಧ್ಯಾತ್ಮ ಮತ್ತು ಮೌಲ್ಯಾಧಾರಿತ ಕಥೆಗಳನ್ನು ನೀಡುತ್ತಾ ಬಂದಿದೆ. ಪ್ರಸ್ತುತ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ” ಧಾರಾವಾಹಿ ಪ್ರೇಕ್ಷಕರ ಮನಗೆದ್ದು ಯಶಸ್ಸಿನಿಂದ ಸಾಗುತ್ತಿದೆ. ಇನ್ಮುಂದೆ ವಿಷ್ಣುವಿನ ಮಹಾವತಾರ ಪರಶುರಾಮನ ಕಥೆಯನ್ನು ಹೇಳಲು ಸಜ್ಜಾಗಿದೆ ಸ್ಟಾರ್ ಸುವರ್ಣ.

    ಅಪ್ಪಟ ಕನ್ನಡ ಮಣ್ಣಿನ ಪೌರಾಣಿಕ ಕಥಾವಸ್ತುವನ್ನಿಟ್ಟುಕೊಂಡು ಶುರುವಾದ ಈ ಧಾರಾವಾಹಿ (Kannada Serial) ಆರಂಭದಿಂದಲೂ ಕಿರುತೆರೆಯಲ್ಲಿ ಹೊಸ ಸಂಚಲನ ಮೂಡಿಸುತ್ತಿದೆ. ರೇಣುಕೆ ಹಾಗೂ ಯಲ್ಲಮ್ಮನ ಪಾತ್ರಕ್ಕೆ ಜೀವ ತುಂಬಿದವರು ಅದ್ಭುತವಾಗಿ ನಟಿಸಿ ಅಭಿಮಾನಿಗಳ ಮನಗೆದ್ದು ಮನೆಮಾತಾಗಿದ್ದರು. ಆದ್ರೆ ಇನ್ಮುಂದೆ ಈ ಕಥೆಯು “ಪರಶುರಾಮನ ಅಧ್ಯಾಯ”ವನ್ನು ಹೇಳಲು ತಯಾರಾಗಿದೆ. ಕನ್ನಡ ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ವಿಷ್ಣುವಿನ ಮಹಾವತಾರ ಪರಶುರಾಮನ ಕಥೆಯನ್ನು ಹೇಳುತ್ತಿರುವ ಹೆಗ್ಗಳಿಕೆ ಸ್ಟಾರ್ ಸುವರ್ಣ ವಾಹಿನಿಗೆ ಸಲ್ಲುತ್ತದೆ.

    ಬಾಲ್ಯದಿಂದಲೂ ಕಷ್ಟಗಳನ್ನೇ ಎದುರಿಸುತ್ತಾ ಬಂದಿರುವ ರೇಣುಕಾ-ಯಲ್ಲಮ್ಮರ ಬಾಳಿನಲ್ಲಿ 10 ವರ್ಷಗಳ ಬಳಿಕ ಏನೆಲ್ಲಾ ಆಗಲಿದೆ? ಪರಶುರಾಮನ ಜನನ, ಬಾಲ್ಯ, ವಿದ್ಯಾಭ್ಯಾಸ ಹೇಗೆಲ್ಲ ಸಾಗಲಿದೆ? ಕಾರಾಗೃಹದಿಂದ ಹೊರ ಬಂದಿರೋ ಯಲ್ಲಮ್ಮನ ಜೀವನದ ದಿಕ್ಕು ಯಾವೆಲ್ಲ ಸವಾಲಿನಿಂದ ಕೂಡಿರಲಿದೆ? ಮೊದಲಿನಂತೆ ರೇಣುಕಾ ಯಲ್ಲಮ್ಮರ ಸ್ನೇಹ ಮುಂದುವರಿಯಲಿದೆಯಾ? ಎಂಬುದೇ ಈ ಧಾರಾವಾಹಿಯ ಮುಂದಿನ ರೋಚಕ ಕಥಾಹಂದರ.

    ಈಗಾಗಲೇ ಹೊಸ ಅಧ್ಯಾಯದ ಚಿತ್ರೀಕರಣ ಶುರುವಾಗಿದ್ದು, ರೇಣುಕೆಯಾಗಿ ವರ್ಷ, ಯಲ್ಲಮ್ಮನ ಪಾತ್ರದಲ್ಲಿ ಮಾನಸ ಅಭಿನಯಿಸುತ್ತಿದ್ದಾರೆ. ಅಮೋಘ ವಿನ್ಯಾಸದ ಸೆಟ್ ಮತ್ತು ಗ್ರಾಫಿಕ್ಸ್‌ನಿಂದ ಪ್ರಸಾರವಾಗುತ್ತಿರುವ ಧಾರಾವಾಹಿಯ ಪ್ರೋಮೋಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ವಿಷ್ಣುವಿನ ಮಹಾವತಾರ ಪರಶುರಾಮನ ಅಧ್ಯಾಯದ ಜೊತೆ, ಹೊಸ ಉತ್ಸಾಹದೊಂದಿಗೆ ಬರ್ತಿದ್ದಾರೆ ರೇಣುಕಾ-ಯಲ್ಲಮ್ಮ.”ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ – ಪರಶುರಾಮ ಅಧ್ಯಾಯ” ಇದೇ ಸೋಮವಾರದಿಂದ ರಾತ್ರಿ 9 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

  • ಅಲ್ಲು ಅರ್ಜುನ್‌ ಅರೆಸ್ಟ್: ಈ ಘಟನೆಯಲ್ಲಿ ನಟನಾಗಿ ಅವರ ಪಾತ್ರವಿಲ್ಲ ಎಂದ ತಾರಕ್ ಪೊನ್ನಪ್ಪ

    ಅಲ್ಲು ಅರ್ಜುನ್‌ ಅರೆಸ್ಟ್: ಈ ಘಟನೆಯಲ್ಲಿ ನಟನಾಗಿ ಅವರ ಪಾತ್ರವಿಲ್ಲ ಎಂದ ತಾರಕ್ ಪೊನ್ನಪ್ಪ

    ‘ಪುಷ್ಪ 2′ (Pushpa 2) ಪ್ರೀಮಿಯರ್ ಶೋ ವೇಳೆ ಕಾಲ್ತುಳಿತ ಸಂಭವಿಸಿ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿಂತೆ ತೆಲುಗಿನ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ಹೈದರಾಬಾದ್‌ನ ಚಿಕ್ಕಡಪಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ವಿಚಾರಕ್ಕೆ ‘ಪುಷ್ಪ 2’ ಖಳನಟ ತಾರಕ್ ಪೊನ್ನಪ್ಪ (Tarak Ponnappa) ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆಯಲ್ಲಿ ನಟನಾಗಿ ಅವರ ಪಾತ್ರವಿಲ್ಲ ಎಂದು ಪಬ್ಲಿಕ್ ಟಿವಿಗೆ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ.

    ಇದು ಬಹಳ ಬೇಸರದ ವಿಚಾರ. ಆ ಘಟನೆ ಏನು ನಡೆಯಿತು ಅದನ್ನು ನಾವು ನಿರೀಕ್ಷೆ ಮಾಡಿದರಲಿಲ್ಲ. ಅಲ್ಲು ಅರ್ಜುನ್ ಅರೆಸ್ಟ್ ಆಗಿದ್ದಾರೆ ಅಂದರೆ ಅದು ಬೇಜಾರಿನ ವಿಷಯ. ಒಬ್ಬ ನಟ ಅದರ ಬಗ್ಗೆ ಏನು ಮಾಡೋಕೆ ಆಗಲ್ಲ. ‘ಪುಷ್ಪ 2’ ಸಿನಿಮಾಗೆ ಅರ್ಜುನ್ ಸರ್ ಫೇಸ್ ಆಫ್ ದಿ ಸಿನಿಮಾ. ಅವರನ್ನು ನೋಡಿ ಸಿನಿಮಾ ಬರುತ್ತಿದ್ದಾರೆ ಅಂದಾಗ ಏನೋ ಒಳ ಸಂಚು ಇರಬಹುದು. ಅದಕ್ಕೆ ಅರೆಸ್ಟ್ ಮಾಡಿರಬಹುದು ಅನಿಸುತ್ತದೆ. ಆದಷ್ಟು ಬೇಗ ಈ ಎಲ್ಲಾ ತೊಂದರೆಗಳಿಂದ ಅವರು ಹೊರಗಡೆ ಬರುತ್ತಾರೆ ಎಂದುಕೊಳ್ಳುತ್ತಿದ್ದೀನಿ ಎಂದು ತಾರಕ್ ಪೊನ್ನಪ್ಪ ಮಾತನಾಡಿದ್ದಾರೆ.

    ಅಂದಹಾಗೆ, 1000ಕ್ಕೂ ಅಧಿಕ ಕೋಟಿ ಗಳಿಸಿರುವ ‘ಪುಷ್ಪ 2’ ಸಿನಿಮಾದಲ್ಲಿ ಅಲ್ಲು ಅರ್ಜುನ್ ಮುಂದೆ ತಾರಕ್ ವಿಲನ್ ಆಗಿ ಅಬ್ಬರಿಸಿದ್ದಾರೆ.

  • ‘ಪುಷ್ಪ 2’ ಸಕ್ಸಸ್ ಬಳಿಕ ಬಿಗ್ ಚಾನ್ಸ್- ಪ್ರಭಾಸ್ ಸಿನಿಮಾದಲ್ಲಿ ತಾರಕ್ ಪೊನ್ನಪ್ಪ

    ‘ಪುಷ್ಪ 2’ ಸಕ್ಸಸ್ ಬಳಿಕ ಬಿಗ್ ಚಾನ್ಸ್- ಪ್ರಭಾಸ್ ಸಿನಿಮಾದಲ್ಲಿ ತಾರಕ್ ಪೊನ್ನಪ್ಪ

    ನ್ನಡದ ನಟ ತಾರಕ್ ಪೊನ್ನಪ್ಪ (Tarak Ponnappa) ‘ಪುಷ್ಪ 2’ (Pushpa 2) ಚಿತ್ರದ ಸಕ್ಸಸ್ ಬಳಿಕ ಸಾಲು ಸಾಲು ಸಿನಿಮಾ ಆಫರ್ಸ್ ಅರಸಿ ಬರುತ್ತಿದೆ. ಅಲ್ಲು ಅರ್ಜುನ್ ಮುಂದೆ ತಾರಕ್ ತೊಡೆ ತಟ್ಟಿ ಗೆದ್ದು ಬೀಗಿದ್ದಾರೆ. ವಿಲನ್ ಆಗಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಇದರ ನಡುವೆ ಪ್ರಭಾಸ್ ಜೊತೆ ತೆರೆ ಹಂಚಿಕೊಳ್ಳುವ ಆಫರ್ ಅವರಿಗೆ ಸಿಕ್ಕಿದೆ. ಇದನ್ನೂ ಓದಿ:1000 ಕೋಟಿ ದಾಟಿದ ‘ಪುಷ್ಪ 2’- ಗಲ್ಲಾಪೆಟ್ಟಿಗೆಯಲ್ಲಿ ಅಲ್ಲು ಅರ್ಜುನ್ ಸಿನಿಮಾ ರಣಕೇಕೆ

    1000 ಕೋಟಿ ರೂ. ಕಲೆಕ್ಷನ್ ಮಾಡಿ ಗೆದ್ದಿರುವ ‘ಪುಷ್ಪ 2’ ಸಿನಿಮಾದಲ್ಲಿ ಕನ್ನಡ ಪ್ರತಿಭೆ ಅಬ್ಬರ ಜೋರಾಗಿದೆ. ರಶ್ಮಿಕಾ, ಶ್ರೀಲೀಲಾ ಜೊತೆ ತಾರಕ್ ಪೊನ್ನಪ್ಪ ಕೂಡ ಶೈನ್ ಆಗಿದ್ದಾರೆ. ಈ ಬೆನ್ಲಲ್ಲೇ ಅವರಿಗೆ ಡಾರ್ಲಿಂಗ್ ಪ್ರಭಾಸ್ (Prabhas) ಜೊತೆ ನಟಿಸುವ ಚಾನ್ಸ್ ಸಿಕ್ಕಿದೆ. ‘ಫೌಜಿ’ ಎಂಬ ಚಿತ್ರದಲ್ಲಿ ಕನ್ನಡದ ನಟ ಕೂಡ ಸಾಥ್ ನೀಡಲಿದ್ದಾರೆ.

    ಈಗಾಗಲೇ ವಿಲನ್ ಪಾತ್ರಗಳಲ್ಲಿ ಗೆದ್ದಿರುವ ನಟ ಪ್ರಭಾಸ್ ಸಿನಿಮಾದಲ್ಲಿ ಪಾಸಿಟಿವ್ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಜೊತೆಗೆ ಈ ಪಾತ್ರ ವಿಭಿನ್ನವಾಗಿದ್ದು, ನಟನೆಗೆ ಸ್ಕೋಪ್ ಇರುವ ಪಾತ್ರ ಇದಾಗಿದೆ. ಈ ಚಿತ್ರವನ್ನು ‘ಸೀತಾ ರಾಮಂ’ ಡೈರೆಕ್ಟರ್ ಹನು ರಾಘವಪುಡಿ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯದಲ್ಲೇ ತಾರಕ್ ಭಾಗದ ಚಿತ್ರೀಕರಣ ಶುರುವಾಗಲಿದೆ.

    ಅಂದಹಾಗೆ, ಕೆಜಿಎಫ್, ಗಿಲ್ಕಿ, ಜ್ಯೂ.ಎನ್‌ಟಿಆಎರ್ ಜೊತೆ ‘ದೇವರ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ತಾರಕ್ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ಆ್ಯಕ್ಟೀವ್ ಆಗಿದ್ದಾರೆ.

  • Pushpa 2: ಅಲ್ಲು ಅರ್ಜುನ್ ಸಿನಿಮಾದಲ್ಲಿ ಕನ್ನಡ ಕಲಾವಿದರ ದಂಡು

    Pushpa 2: ಅಲ್ಲು ಅರ್ಜುನ್ ಸಿನಿಮಾದಲ್ಲಿ ಕನ್ನಡ ಕಲಾವಿದರ ದಂಡು

    ಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ 2’ (Pushpa 2) ಸಿನಿಮಾ ಡಿ.5ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಿದೆ. ಬಿಡುಗಡೆಯ ಬಳಿಕ ಪುಷ್ಪರಾಜ್ ಫೀವರ್ ಶುರುವಾಗಿದೆ. ಕೆಲ ಮಂದಿ ಸಿನಿಮಾವನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸಿದರೆ, ಇನ್ನೂ ಕೆಲವರು ಸಿನಿಮಾ ಒಂದು ರೇಂಜಿಗಿದೆ ಎಂದು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇದರೆಲ್ಲದರ ನಡುವೆ ‘ಪುಷ್ಪ 2’ ಸಿನಿಮಾದಲ್ಲಿ ಕನ್ನಡ ಕಲಾವಿದರ ದಂಡು ಹೈಲೆಟ್ ಆಗಿದೆ.

    ಕನ್ನಡದ ‘ಕಿರಿಕ್ ಪಾರ್ಟಿ’ (Kirik Party) ನಟಿ ರಶ್ಮಿಕಾ ಮಂದಣ್ಣ (Rashmika Mandanna) ನ್ಯಾಷನಲ್ ಕ್ರಶ್ ಆಗಿ ಪರಭಾಷೆಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ಶ್ರೀವಲ್ಲಿ ಪಾತ್ರಕ್ಕೆ ಕೊಡಗಿನ ಬೆಡಗಿ ಜೀವ ತುಂಬಿದ್ದಾರೆ. ರಶ್ಮಿಕಾ ನಟನೆಯ ಜೊತೆ ಫೀಲಿಂಗ್ಸ್ ಡ್ಯಾನ್ಸ್‌ಗೆ ಅನೇಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

    ಕನ್ನಡಿಗ ತಾರಕ್ ಪೊನ್ನಪ್ಪ (Tarak Ponnappa) ಅವರು ಅಲ್ಲು ಅರ್ಜುನ್ ಮುಂದೆ ತೊಡೆ ತಟ್ಟಿದ್ದಾರೆ. ಅಲ್ಲು ಅರ್ಜುನ್ ಮತ್ತು ತಾರಕ್ ನಡುವಿನ ಆ್ಯಕ್ಷನ್ ಸೀಕ್ವೆನ್ಸ್ ಸಿನಿಮಾದಲ್ಲಿ ರೋಚಕವಾಗಿದೆ. ತಾರಕ್ ನಟನೆ ಮತ್ತು ಅವರ ಲುಕ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಪರಭಾಷೆಗಳಲ್ಲಿ ಅವರಿಗೆ ಬೇಡಿಕೆ ಹೆಚ್ಚಾಗಿದೆ.

    ಇನ್ನೂ ಕನ್ನಡದ ‘ಕಿಸ್’ ಬೆಡಗಿ ಶ್ರೀಲೀಲಾ (Sreeleela) ಅವರು ‘ಕಿಸ್ಸಿಕ್’ ಐಟಂ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಮಾದಕ ಲುಕ್ ಮತ್ತು ಡ್ಯಾನ್ಸ್‌ನಿಂದ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಶ್ರೀಲೀಲಾ ಕೂಡ ತೆಲುಗಿನ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ.

    ಡಾಲಿ ಧನಂಜಯ (Daali Dhananjay) ಅವರು ಜಾಲಿ ರೆಡ್ಡಿ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರಕ್ಕೂ ಸುಕುಮಾರ್ ಪ್ರಾಮುಖ್ಯತೆ ನೀಡಿದ್ದಾರೆ. ಎರಡನೇ ಭಾಗದಲ್ಲೂ ಡಾಲಿ ಎಂಟ್ರಿ ಕೊಟ್ಟಿದ್ದಾರೆ. ಆದರೆ ಪಾರ್ಟ್ 3ನಲ್ಲಿ ಅವರ ಪಾತ್ರ ಹೇಗೆಲ್ಲಾ ತಿರುವು ಪಡೆಯಲಿದೆ ಎಂಬುದನ್ನು ಕಾದುನೋಡಬೇಕಿದೆ.

    ನಂದ ಗೋಪಾಲ್ (Nanda Gopal) ಕೂಡ ‘ಪುಷ್ಪ 2’ನಲ್ಲಿ ನಟಿಸಿದ್ದಾರೆ. ಅವರ ಪಾತ್ರ ಚಿಕ್ಕದಾಗಿದೆ. ತೆರೆಯ ಮೇಲೆ ಹೆಚ್ಚು ಕಾಣಿಸಿಕೊಳ್ಳದೇ ಇದ್ದರೂ ಕನ್ನಡದ ನಟ ಕಾಣಿಸಿಕೊಂಡಿದ್ದಾರೆ ಎಂಬುದು ವಿಶೇಷ.

  • ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಸೀರಿಯಲ್‌ಗೆ ತಾರಕ್ ಪೊನ್ನಪ್ಪ ಗುಡ್ ಬೈ

    ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಸೀರಿಯಲ್‌ಗೆ ತಾರಕ್ ಪೊನ್ನಪ್ಪ ಗುಡ್ ಬೈ

    ನಪ್ರಿಯ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಸೀರಿಯಲ್‌ಗೆ ತಾರಕ್ ಪೊನ್ನಪ್ಪ (Tarak Ponnappa) ವಿದಾಯ ಹೇಳಿದ್ದಾರೆ. ಕಾರಣಾಂತರಗಳಿಂದ ಈ ಧಾರಾವಾಹಿಗೆ ತಾರಕ್ ಗುಡ್ ಬೈ ಹೇಳಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

    ಈ ಧಾರಾವಾಹಿ ಶುರುವಾದಾಗಿನಿಂದಲೂ ತಾರಕ್ ಪೊನ್ನಪ್ಪ ಅವರು ರೇಣು ಮಹಾರಾಜನ ಪಾತ್ರವನ್ನು ನಿರ್ವಹಿಸಿದ್ದರು. ಅವರ ಘನತೆ ಗಾಂಭೀರ್ಯ ಅದ್ಭುತ ನಟನೆಗೆ ಜನರು ಖುಷಿಪಟ್ಟಿದ್ದರು. ಆದರೆ ಈಗ ಬೇರೆ ಕೆಲಸಗಳ, ಕಮಿಟ್‌ಮೆಂಟ್‌ನಿಂದ ತಾರಕ್ ಸೀರಿಯಲ್‌ನಿಂದ ಹೊರಬಂದಿದ್ದಾರೆ. ಇದನ್ನೂ ಓದಿ:Max: ಸಿನಿಮಾ ಸೆಟ್‌ನಲ್ಲಿ ಸುದೀಪ್‌ರನ್ನು ಭೇಟಿಯಾದ ಕಾರ್ತಿಕ್ ಮಹೇಶ್

    ಅಜರಾಮರ, ಬೃಹಸ್ಪತಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಜಿಎಫ್ (KGF) ಸಿನಿಮಾದಲ್ಲಿ ಯಶ್ ಮುಂದೆ ಗ್ಯಾಂಗ್‌ಸ್ಟರ್ ಆಗಿ ತಾರಕ್ ನಟಿಸಿದ್ದರು. ‘ರಾಜ ರಾಣಿ’ ಸೀರಿಯಲ್ ಮೂಲಕ ಕಿರುತೆರೆಗೆ ನಟ ಪಾದಾರ್ಪಣೆ ಮಾಡಿದ್ದರು.

  • ‘ಅಮೃತ ಅಪಾರ್ಟ್‌ಮೆಂಟ್ಸ್’ನಲ್ಲಿ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗಿಳಿದ ಖಳನಟ ತಾರಕ್ ಪೊನ್ನಪ್ಪ

    ‘ಅಮೃತ ಅಪಾರ್ಟ್‌ಮೆಂಟ್ಸ್’ನಲ್ಲಿ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗಿಳಿದ ಖಳನಟ ತಾರಕ್ ಪೊನ್ನಪ್ಪ

    ಸ್ಯಾಂಡಲ್‌ವುಡ್‌ನಲ್ಲಿ ಬಿಡುಗಡೆಯಾಗಲು ಸಜ್ಜಾಗಿರುವ ಸಾಲು ಸಾಲು ಸಿನಿಮಾಗಳಲ್ಲಿ ಭರವಸೆ ಹುಟ್ಟಿಸಿರುವ ಸಿನಿಮಾಗಳಲ್ಲೊಂದು ಅಮೃತ ಅಪಾರ್ಟ್‌ಮೆಂಟ್ಸ್ ಸಿನಿಮಾ. ಗುರುರಾಜ ಕುಲಕರ್ಣಿ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಈ ಸಿನಿಮಾ ನವೆಂಬರ್ 26ಕ್ಕೆ ರಾಜ್ಯಾದ್ಯಂತ ತೆರೆ ಕಾಣಲು ರೆಡಿಯಾಗಿದೆ. ಸಾಕಷ್ಟು ಭರವಸೆ ಹುಟ್ಟು ಹಾಕಿರುವ ಈ ಸಿನಿಮಾ ಮೂಲಕ ಖ್ಯಾತ ಖಳನಟ ತಾರಕ್ ಪೊನ್ನಪ್ಪ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

    ಕೆಜಿಎಫ್, ಯುವರತ್ನ ಸಿನಿಮಾ ನೋಡಿದವರಿಗೆ ಕಿರುತೆರೆ ಅಭಿಮಾನಿಗಳಿಗೆ ತಾರಕ್ ಪೊನ್ನಪ್ಪ ಚಿರಪರಿಚಿತ. ತೆರೆ ಮೇಲೆ ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದ ಪ್ರತಿಭಾವಂತ ನಟ ನಾಯಕ ನಟನಾಗಿ ತೆರೆ ಮೇಲೆ ಮಿಂಚಲು ಸಕಲ ಸಜ್ಜಾಗಿದ್ದಾರೆ. ಖಳನಟನಾಗಿ ಎಷ್ಟೇ ಸಿನಿಮಾದಲ್ಲಿ ಅಭಿನಯಿಸಿದ್ರು, ಅನುಭವವಿದ್ರೂ ನಾಯಕ ನಟನಾಗಿ ಇದೊಂದು ಅಗ್ನಿ ಪರೀಕ್ಷೆ ಎಂದು ಸಖತ್ ಎಕ್ಸೈಟ್ ಆಗಿದ್ದಾರೆ ಮಡಿಕೇರಿಯ ಕುವರ. ಇದನ್ನೂ ಓದಿ: ತಾಯಿಯಾಗ್ತಿದ್ದಾರಾ ಪ್ರಿಯಾಂಕಾ ಚೋಪ್ರಾ?

    ಫ್ಯಾಮಿಲಿ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಒಳಗೊಂಡ ಈ ಸಿನಿಮಾದಲ್ಲಿ ಮುದ್ದಾದ ಪ್ರೀತಿ ಕಥೆಯಿದೆ. ಅದರ ನಾಯಕ ಇವರೇ. ಗುರುರಾಜ ಕುಲಕರ್ಣಿ ಮಾಡಿಕೊಂಡ ಕಥೆ ಬಹಳ ಇಷ್ಟವಾಯ್ತು. ನಟನೆ ಅಂದ್ರೆ ಪ್ರತಿ ಪಾತ್ರದಲ್ಲೂ ಸವಾಲನ್ನು ಸ್ವೀಕರಿಸೋದು, ತೆರೆ ಮೇಲೆ ಚೆಂದವಾಗಿ ಕಟ್ಟಿಕೊಡೋದು. ಅದಕ್ಕೊಂದು ಅವಕಾಶ ಮಾಡಿಕೊಟ್ಟಂತಿತ್ತು ಈ ಸಿನಿಮಾ ಕಥೆ. ರಫ್ ಅಂಡ್ ಟಫ್ ಪಾತ್ರ ಮಾಡುತ್ತಿದ್ದವನಿಗೆ ಸಾಫ್ಟ್ ರೋಲ್ ಮಾಡೋದು ಕೊಂಚ ಕಷ್ಟ ಆದ್ರೆ ನಿರ್ದೇಶಕರ ಸಹಕಾರದಿಂದ ಅದೆಲ್ಲ ಬಹಳ ಸುಲಭವಾಯ್ತು. ಖಂಡಿತ ಈ ಸಿನಿಮಾದಲ್ಲಿ ನನ್ನನ್ನು ಜನ ಇಷ್ಟ ಪಡುತ್ತಾರೆ ಎಂಬ ಭರವಸೆ ಇದೆ ಎನ್ನುತ್ತಾರೆ ತಾರಕ್ ಪೊನ್ನಪ್ಪ.

    ಆಕ್ಸಿಡೆಂಟ್, ಲಾಸ್ಟ್ ಬಸ್ ಸಿನಿಮಾಗಳಿಗೆ ನಿರ್ಮಾಪಕರಾಗಿದ್ದ ಗುರುರಾಜ ಕುಲಕರ್ಣಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮೊದಲ ಸಿನಿಮಾ. ಇದೇ ಮೊದಲ ಬಾರಿಗೆ ಚಿತ್ರಕ್ಕೆ ಕಥೆ ಬರೆದು ಆಕ್ಷನ್ ಕಟ್ ಹೇಳ್ತಿರುವ ಇವರು ನಿರ್ಮಾಣದ ಜವಾಬ್ದಾರಿಯನ್ನು  ನಿಭಾಯಿಸಿದ್ದಾರೆ. ನಿರ್ಮಾಪಕನಾಗಿದ್ದವರು ನಿರ್ದೇಶಕನಾಗಿ ತಮ್ಮನ್ನು ಸವಾಲಿಗೆ ಒಡ್ಡಿಕೊಂಡಿರುವ ಇವರಿಗೆ ತಾವು ಮಾಡಿಕೊಂಡ ಕಥೆ ಮೇಲೆ ಅಪಾರ ಭರವಸೆ ಇದೆ. ಇದನ್ನೂ ಓದಿ: ಇಳಕಲ್ ಸೀರೆಯುಟ್ಟು ಹಾಟ್ ಪೋಸ್ ಕೊಟ್ಟ ರಾಗಿಣಿ

    ಚಿತ್ರದಲ್ಲಿ ನಾಯಕಿಯಾಗಿ ಊರ್ವಶಿ ಗೋವರ್ಧನ್ ನಟಿಸಿದ್ದು, ರಂಗಭೂಮಿ ಕಲಾವಿದೆಯಾಗಿರುವ ಇವರಿಗೆ ಕನ್ನಡದಲ್ಲಿ ಇದು ಮೊದಲ ಸಿನಿಮಾ. ಖ್ಯಾತ ಪೋಷಕ ನಟ ಬಾಲಾಜಿ ಮನೋಹರ್ ಈ ಚಿತ್ರದಲ್ಲಿ ಆಟೋ ಡ್ರೈವರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪಕ್ಕಾ ಅಂಬರೀಶ್ ಅಭಿಮಾನಿಯಾಗಿ, ಬೆಂಗಳೂರಿನ ಆಟೋ ಡ್ರೈವರ್ ಹಾವಭಾವವನ್ನು ಮೈಗೂಡಿಸಿಕೊಂಡು ಚಿತ್ರದಲ್ಲಿ ಮಿಂಚಿದ್ದಾರೆ. ರಂಗಭೂಮಿ ಕಲಾವಿದೆ, ನೃತ್ಯಗಾರ್ತಿ ಮಾನಸ ಜೋಶಿ ಈ ಸಿನಿಮಾದಲ್ಲಿ ಎಸಿಪಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಎಸಿಪಿ ರತ್ನಪ್ರಭಾ ಪಾತ್ರದಲ್ಲಿ ಖಡಕ್ ಆಫೀಸರ್ ಆಗಿ ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. ಉಳಿದಂತೆ ಸಂಪತ್ ಮೈತ್ರೇಯ, ಸೀತಾ ಕೋಟೆ, ಮಾಲತೇಶ್, ಸಿತಾರಾ, ಜಗದೀಶ್ ಬಾಲಾ, ರಾಜು ನೀನಾಸಂ, ಅರುಣ್ ಮೂರ್ತಿ, ಶಂಕರ್ ಶೆಟ್ಟಿ ರಂಗಸ್ವಾಮಿ ಮುಂತಾದವರ ತಾರಾಗಣ ಈ ಚಿತ್ರದಲ್ಲಿದೆ. ಅರ್ಜುನ್ ಅಜಿತ್ ಛಾಯಾಗ್ರಹಣ, ಕೆಂಪರಾಜ್ ಅರಸ್ ಸಂಕಲನ ಮತ್ತು ಎಸ್ ಡಿ ಅರವಿಂದ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಜಿ9 ಕಮ್ಯುನಿಕೇಶನ್ ಮೀಡಿಯಾ ಅಂಡ್ ಎಂಟಟೈನ್ಮೆಂಟ್ ಬ್ಯಾನರ್ ನಡಿ ನಿರ್ಮಾಣವಾದ ಈ ಚಿತ್ರ ನವೆಂಬರ್ 26ಕ್ಕೆ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

  • `ಮೋಕ್ಷ’ ಟ್ರೇಲರ್ ಬಿಡುಗಡೆ ಮಾಡಿದ ಅಭಿನಯ ಚಕ್ರವರ್ತಿ ಸುದೀಪ್

    `ಮೋಕ್ಷ’ ಟ್ರೇಲರ್ ಬಿಡುಗಡೆ ಮಾಡಿದ ಅಭಿನಯ ಚಕ್ರವರ್ತಿ ಸುದೀಪ್

    ಬೆಂಗಳೂರು: ಹೊಸಬರ ವಿನೂತನ ಪ್ರಯತ್ನ ಇರುವ `ಮೋಕ್ಷ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ `ಮೋಕ್ಷ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

    ಚಿತ್ರದ ಟ್ರೇಲರ್ ಇಂಟ್ರಸ್ಟಿಂಗ್ ಆಗಿ ಮೂಡಿ ಬಂದಿದ್ದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಕಳೆದ ವರ್ಷ ಟೀಸರ್ ಬಿಡುಗಡೆ ಮಾಡಿ ಚಿತ್ರದ ಬಗ್ಗೆ ಗಮನ ಸೆಳೆದಿದ್ದ `ಮೋಕ್ಷ’ ಚಿತ್ರತಂಡ ಇದೀಗ ಕುತೂಹಲ ಭರಿತ ಟ್ರೇಲರ್ ಮೂಲಕ ಎಲ್ಲರ ಚಿತ್ತ ಸೆಳೆದಿದೆ. ಸೈಕಲಾಜಿಕಲ್ ಸಸ್ಪೆನ್ಸ್, ಥ್ರಿಲ್ಲರ್ ಕಥಾನಕ ಹೊಂದಿರುವ ಈ ಸಿನಿಮಾವನ್ನು ಸಮರ್ಥ್ ನಾಯಕ್ ನಿರ್ದೇಶನ ಮಾಡಿದ್ದಾರೆ. ಐಟಿ ಕ್ಷೇತ್ರದ ಸಮರ್ಥ್ ನಾಯಕ್ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದ್ದು ತಾವೇ ಕಥೆ ಬರೆದು ನಿರ್ದೇಶನ ಮಾಡಿದ್ದು, ತಾಂತ್ರಿಕವಾಗಿಯೂ ಚೆಂದವಾಗಿ ಮೂಡಿ ಬಂದಿರುವ `ಮೋಕ್ಷ’ ಸಿನಿಮಾ ಏಪ್ರಿಲ್ 16ರಂದು ಬಿಡುಗಡೆಯಾಗುತ್ತಿದೆ.

    ಕಥೆಯೇ ಹೀರೋ ಆಗಿರೋ ಸಿನಿಮಾದಲ್ಲಿ ಮೋಹನ್ ಧನರಾಜ್, ಆರಾಧ್ಯ ಲಕ್ಷ್ಮಣ್ ನಾಯಕ ಹಾಗೂ ನಾಯಕಿಯಾಗಿ ಅಭಿನಯಿಸಿದ್ದಾರೆ. ಮಾಸ್ಕ್ಮ್ಯಾನ್ ಚಿತ್ರದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದಾನೆ. ರೋಚಕ ತಿರುವುಗಳನ್ನು ಒಳಗೊಂಡಿರುವ ಈ ಚಿತ್ರಕ್ಕೆ ಕಿಶನ್ ಮೋಹನ್, ಸಚಿನ್ ಬಾಲು ಸಂಗೀತ ನಿರ್ದೇಶನವಿದೆ. ಗುರು ಪ್ರಶಾಂತ್ ರಾಜ್, ಜೋಮ್ ಜೋಸೆಫ್, ಕಿರಣ್ ಹಂಪಾಪುರ ಮೂವರು ಕ್ಯಾಮೆರಾಮ್ಯಾನಗಳು ಛಾಯಾಗ್ರಾಹಕರಾಗಿ ದುಡಿದಿದ್ದಾರೆ. ಹಾಸನ, ಕಾರವಾರ, ಗೋಕಾಕ್, ಗೋವಾ, ಸೇರಿದಂತೆ ಹಲವು ಭಾಗಗಳಲ್ಲಿ `ಮೋಕ್ಷ’ ಸಿನಿಮಾ ಸೆರೆ ಹಿಡಿಯಲಾಗಿದೆ. ಚಿತ್ರದಲ್ಲಿ ತಾರಕ್ ಪೊನ್ನಪ್ಪ ತನಿಖಾಧಿಕಾರಿ ಪಾತ್ರದಲ್ಲಿ ನಟಿಸಿದ್ದು, ಭೂಮಿ, ಪ್ರಶಾಂತ್ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಎಸ್‍ಜಿಎನ್ ಎಂಟಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು ಏಪ್ರಿಲ್ 16ರಂದು ಸುಂದರ ಬದುಕಿನ ಶಾಂತಿ ಕದಡಿದ ಸೈಕೋ ಕಥೆ `ಮೋಕ್ಷ’ ಚಿತ್ರಮಂದಿರಕ್ಕೆ ಬರಲಿದೆ.