Tag: tarak

  • ಜ್ಯೂ.ಎನ್‌ಟಿಆರ್ ಚಿತ್ರಕ್ಕೆ ‌’ಡ್ರ್ಯಾಗನ್’ ಟೈಟಲ್ ಇಟ್ಟ ಪ್ರಶಾಂತ್ ನೀಲ್

    ಜ್ಯೂ.ಎನ್‌ಟಿಆರ್ ಚಿತ್ರಕ್ಕೆ ‌’ಡ್ರ್ಯಾಗನ್’ ಟೈಟಲ್ ಇಟ್ಟ ಪ್ರಶಾಂತ್ ನೀಲ್

    ಟಾಲಿವುಡ್ ನಟ ಜ್ಯೂ.ಎನ್‌ಟಿಆರ್- ಪ್ರಶಾಂತ್ ನೀಲ್ (Prashanth Neel) ಕಾಂಬಿನೇಷನ್ ಸಿನಿಮಾದ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾತರದಿಂದ ಎದುರು ನೋಡ್ತಿದ್ದಾರೆ. ಹೀಗಿರುವಾಗ ಜ್ಯೂ.ಎನ್‌ಟಿಆರ್ ಚಿತ್ರದ ಬಗ್ಗೆ ಹೊಸ ವಿಚಾರವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಚಿತ್ರದ ಟೈಟಲ್ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ.

    ಜ್ಯೂ.ಎನ್‌ಟಿಆರ್ ಚಿತ್ರಕ್ಕೆ ‌’ಡ್ರ್ಯಾಗನ್’ (Dragon) ಎಂದು ಪ್ರಶಾಂತ್ ನೀಲ್ ಜಬರ್‌ದಸ್ತ್ ಆಗಿರುವ ಟೈಟಲ್ ಇಟ್ಟಿದ್ದಾರೆ. ಈ ಹಿಂದೆ ರಿಲೀಸ್ ಆಗಿರುವ ತಾರಕ್ ಪೋಸ್ಟರ್‌ಗೂ ಇದೀಗ ಇಟ್ಟಿರುವ ‘ಡ್ರ್ಯಾಗನ್’ ಟೈಟಲ್‌ಗೂ ಹೊಂದುವಂತಿದೆ. ಆದರೆ ಚಿತ್ರತಂಡದಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

    ಸದ್ಯ ಜ್ಯೂ.ಎನ್‌ಟಿಆರ್ ಅವರು ವಾರ್ 2, ದೇವರ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಎರಡು ಪ್ರಾಜೆಕ್ಟ್‌ಗಳ ನಂತರ ಪ್ರಶಾಂತ್ ನೀಲ್ ಜೊತೆಗಿನ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ ಜ್ಯೂ.ಎನ್‌ಟಿಆರ್ ಎನ್ನಲಾಗಿದೆ.

    ಜ್ಯೂ.ಎನ್‌ಟಿಆರ್ ಇದೇ ಮೇ 20ರಂದು ತಮ್ಮ 1ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ತಿದ್ದಾರೆ. ಈ ವೇಳೆ, ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾದ ಶೂಟಿಂಗ್ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ.

  • ದುರಂತದಿಂದ ಪಾರಾದ ಜ್ಯೂ.ಎನ್‌ಟಿಆರ್- ಜಪಾನ್‌ನಿಂದ ಮರಳಿದ ನಟ

    ದುರಂತದಿಂದ ಪಾರಾದ ಜ್ಯೂ.ಎನ್‌ಟಿಆರ್- ಜಪಾನ್‌ನಿಂದ ಮರಳಿದ ನಟ

    ಟಾಲಿವುಡ್ ಸೂಪರ್ ಸ್ಟಾರ್ ಜ್ಯೂ.ಎನ್‌ಟಿಆರ್ (Jr.ntr) ಅವರು ಫ್ಯಾನ್ಸ್‌ಗೆ ಶುಭ ಸುದ್ದಿ ಸಿಕ್ಕಿದೆ. ಕ್ರಿಸ್‌ಮಸ್ ಸಂದರ್ಭದಲ್ಲಿ ಜಪಾನ್‌ಗೆ ತೆರಳಿದ್ದರು ತಾರಕ್. ಈ ವೇಳೆ, ಜಪಾನ್‌ನಲ್ಲಿ ಭೂಕಂಪವಾಗಿತ್ತು. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿತ್ತು. ಆದರೆ ಇದೀಗ ಜ್ಯೂ.ಎನ್‌ಟಿಆರ್ ಜಪಾನ್‌ನಿಂದ ಸೇಫ್ ಆಗಿ ಮರಳಿದ್ದಾರೆ. ಮನೆಗೆ ಬರುತ್ತಿದ್ದಂತೆ ಫ್ಯಾನ್ಸ್‌ಗೆ ಈ ವಿಚಾರ ತಿಳಿಸಿದ್ದಾರೆ.

    ನಾವು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದೇವೆ. ಜಪಾನ್‌ನಲ್ಲಿ (Japan) ಭೂಕಂಪ ಆಗಿದ್ದು ಶಾಕಿಂಗ್ ಆಗಿದೆ. ನಾನು ಒಂದು ವಾರ ಅಲ್ಲಿಯೇ ಕಳೆದಿದ್ದೇನೆ. ಭೂಕಂಪದಿಂದ ಹಾನಿಗೆ ಒಳಗಾದವರ ಬಗ್ಗೆ ದುಃಖ ಇದೆ. ಅಲ್ಲಿನ ಜನ ಬೇಗ ಚೇತರಿಸಿಕೊಳ್ಳಲಿ. ದೃಢವಾಗಿರಿ ಜಪಾನ್ ಎಂದು ಜ್ಯೂ.ಎನ್‌ಟಿಆರ್ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಕ್ಯಾಪ್ಟನ್‌ ಮಾತು ಕೇಳದ ಮೈಕಲ್‌- ವೀಕೆಂಡ್‌ನಲ್ಲಿದ್ಯಾ ಮಾರಿಹಬ್ಬ?

    ತಾರಕ್ ಕ್ರಿಸ್‌ಮಸ್ ಸಂದರ್ಭದಲ್ಲಿ ಜಪಾನ್‌ಗೆ ತೆರಳಿದ್ದರು. ಇದೇ ವೇಳೆ, ಜಪಾನ್‌ನಲ್ಲಿ ಭೂಕಂಪ ಕೂಡ ಸಂಭವಿಸಿತ್ತು. ಹಾಗಾಗಿ ಅಲ್ಲಿಯೇ ಲಾಕ್ ಆಗಿದ್ದರು ತಾರಕ್. ಆದರೆ ಈಗ ಸುರಕ್ಷಿತವಾಗಿ ಮರಳುವ ಮೂಲಕ ಆತಂಕಕ್ಕೆ ಒಳಗಾಗಿದ್ದ ಫ್ಯಾನ್ಸ್‌ಗೆ ಗುಡ್‌ನ್ಯೂಸ್ ನೀಡಿದ್ದಾರೆ.

    ‘ದೇವರ’ (Devara) ಸಿನಿಮಾದಲ್ಲಿ ಪ್ರಸ್ತುತ ತಾರಕ್ ಬ್ಯುಸಿಯಾಗಿದ್ದಾರೆ. ಅವರ ಮುಂದೆ ಸೈಫ್ ಅಲಿ ಖಾನ್ ವಿಲನ್ ಆಗಿ ಅಬ್ಬರಿಸಲಿದ್ದಾರೆ. ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ (Janhvi Kapoor) ನಾಯಕಿಯಾಗಿ ನಟಿಸುತ್ತಿದ್ದಾರೆ.

  • ಪ್ರಶಾಂತ್ ನೀಲ್- ಜ್ಯೂ.ಎನ್‌ಟಿಆರ್ ಸಿನಿಮಾಗೆ ಹೀರೋಯಿನ್‌ ಫಿಕ್ಸ್‌

    ಪ್ರಶಾಂತ್ ನೀಲ್- ಜ್ಯೂ.ಎನ್‌ಟಿಆರ್ ಸಿನಿಮಾಗೆ ಹೀರೋಯಿನ್‌ ಫಿಕ್ಸ್‌

    ‘ಆರ್‌ಆರ್‌ಆರ್’ (RRR) ಸೂಪರ್ ಸಕ್ಸಸ್ ನಂತರ ಜ್ಯೂ.ಎನ್‌ಟಿಆರ್, ಕೊರಟಾಲ ಶಿವ (Kortala Shiva) ನಿರ್ದೇಶನದ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಪ್ರಶಾಂತ್ ನೀಲ್ (Prashanth Neel) ಜೊತೆಗಿನ ತಾರಕ್ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. ಜ್ಯೂ.ಎನ್‌ಟಿಆರ್ (Jr.ntr) ಮಂದಿನ 31ನೇ ಚಿತ್ರಕ್ಕೆ ನಾಯಕಿ ಫೈನಲ್ ಆಗಿದ್ದಾರೆ. ಬಾಲಿವುಡ್ ಬ್ಯೂಟಿ ಜೊತೆ ತಾರಕ್ ರೊಮ್ಯಾನ್ಸ್ ಮಾಡಲಿದ್ದಾರೆ.

    ಕೊರಟಾಲ ಶಿವ ನಿರ್ದೇಶನದ ಎನ್‌ಟಿಆರ್ 30 ಚಿತ್ರದಲ್ಲಿ ಜ್ಯೂ.ಎನ್‌ಟಿಆರ್ ಶೂಟಿಂಗ್ ಬ್ಯುಸಿಯಾಗಿದ್ದಾರೆ. ಜಾನ್ವಿ ಕಪೂರ್, ಸೈಫ್ ಅಲಿ ಖಾನ್, ಕನ್ನಡದ ನಟಿ ಚೈತ್ರಾ ರೈ ಸೇರಿದಂತೆ ಹಲವರು ಶೂಟಿಂಗ್ ಭಾಗಿಯಾಗಿದ್ದಾರೆ.

    ಕೆಜಿಎಫ್ 2 (KGF2) ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್, ಸಲಾರ್‌ನಲ್ಲಿ (Salaar) ಬ್ಯುಸಿಯಾಗಿದ್ದಾರೆ. ಎನ್‌ಟಿಆರ್ 30 ಬಳಿಕ ತಾರಕ್, ಪ್ರಶಾಂತ್ ನೀಲ್ ಜೊತೆ ಕೈಜೋಡಿಸಲಿದ್ದಾರೆ. ಸಲಾರ್ ಬಳಿಕ ಜ್ಯೂ.ಎನ್‌ಟಿರ್ 31ನೇ ಚಿತ್ರಕ್ಕೆ ನೀಲ್ ನಿರ್ದೇಶನ ಮಾಡಲಿದ್ದಾರೆ. ತಾರಕ್ ಜೊತೆ ರೊಮ್ಯಾನ್ಸ್ ಮಾಡಲು ಬಾಲಿವುಡ್ ನಟಿ ಶ್ರದ್ಧಾ ಕಪೂರ್ (Shradha Kapoor) ಫೈನಲ್ ಆಗಿದ್ದಾರೆ. ಇದನ್ನೂ ಓದಿ:ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟ ಕ್ರಿಕೆಟಿಗ ಶುಭಮನ್‌ ಗಿಲ್

    ಮೊದಲ ಬಾರಿಗೆ ಜ್ಯೂ.ಎನ್‌ಟಿಆರ್- ಶ್ರದ್ಧಾ ಕಪೂರ್ ಜೊತೆಯಾಗಿ ನಟಿಸಲಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶದ ಭಿನ್ನ ಕಥೆಯಲ್ಲಿ ಶ್ರದ್ಧಾ- ತಾರಕ್ ಕಮಾಲ್ ಮಾಡಲಿದ್ದಾರೆ. ಈ ಜೋಡಿಯನ್ನ ನೋಡಲು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  • ಬಿಕಿನಿ ಫೋಟೋ ಕೇಳ್ಬೇಡಿ ಎಂದು ಮನವಿ ಮಾಡಿದ ನಟಿ ಶಾನ್ವಿ

    ಬಿಕಿನಿ ಫೋಟೋ ಕೇಳ್ಬೇಡಿ ಎಂದು ಮನವಿ ಮಾಡಿದ ನಟಿ ಶಾನ್ವಿ

    ‘ಚಂದ್ರಲೇಖ’, ‘ಮಾಸ್ಟರ್ ಪೀಸ್’ (Master Piece Film) ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ (Sandalwood) ಮಿಂಚಿದ ಹಾಟ್ ಬೆಡಗಿ ಶಾನ್ವಿ ಶ್ರೀವಾಸ್ತವ (Shanvi Srivastava) ಇದೀಗ ವಿದೇಶಕ್ಕೆ ಹಾರಿದ್ದಾರೆ. ಬಿಕಿನಿ ಧರಿಸಿ ಮತ್ತೆ ಹಾಟ್ ಅವತಾರ ತಾಳಿದ್ದಾರೆ.

    ಕನ್ನಡ, ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಛಾಪೂ ಮೂಡಿಸುತ್ತಿರುವ ನಟಿ ಶಾನ್ವಿ ಶ್ರೀವಾಸ್ತವ ಅವರು ಕನ್ನಡದ ಬ್ಯಾಂಗ್, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದನ್ನೂ ಓದಿ:ಮತ್ತೆ ಕಿರುತೆರೆಯತ್ತ ದೀಪಿಕಾ ದಾಸ್

    ಶಾನ್ವಿ ಬೇಸಿಗೆ ರಜೆ ಎಂಜಾಯ್ ಮಾಡ್ತಿದ್ದಾರೆ. ವಿದೇಶದಲ್ಲಿರುವ ಮಾಸ್ಟರ್ ಪೀಸ್ ಬೆಡಗಿ ಸದ್ಯ ಬಿಕಿನಿ ಫೋಟೋವೊಂದನ್ನ ಶೇರ್ ಮಾಡಿದ್ದಾರೆ. ಬ್ಯಾಕ್ ಸೈಡ್ ಫೋಟೋ ಶೇರ್ ಮಾಡಿ, ಬಿಕಿನಿ (Bikini) ಹಾಕಿದ್ದೀನಿ ಅಂತಾ ಬಿಕಿನಿ ಫೋಟೋ ಕೇಳ್ಬೇಡಿ ಎಂದು ಡೈಲಾಗ್ ಹೊಡೆದಿದ್ದಾರೆ.

     

    View this post on Instagram

     

    A post shared by Shanvi Srivastava (@shanvisri)

    ಸದ್ಯ ಶಾನ್ವಿ ಬಿಕಿನಿ ಲುಕ್‌ನಲ್ಲಿರುವ ಫೋಟೋ ನೋಡಿಯೇ ಬೋಲ್ಡ್ ಆಗಿರುವ ಪಡ್ಡೆಹುಡುಗರು, ಮತ್ತಷ್ಟು ಬಿಕಿನಿ ಫೋಟೋ ಶೇರ್ ಮಾಡಿ ಎಂದು ಮನವಿ ಮಾಡ್ತಿದ್ದಾರೆ.

  • ಜ್ಯೂ.ಎನ್‌ಟಿಆರ್‌ಗೆ ಜೋಡಿಯಾದ ಆಲಿಯಾ ಭಟ್

    ಜ್ಯೂ.ಎನ್‌ಟಿಆರ್‌ಗೆ ಜೋಡಿಯಾದ ಆಲಿಯಾ ಭಟ್

    ಆರ್‌ಆರ್‌ಆರ್ ಸೂಪರ್ ಸಕ್ಸಸ್ ಬೆನ್ನಲ್ಲೇ ಜ್ಯೂ.ಎನ್‌ಟಿಆರ್ (Junior Ntr) ಕೊರಟಾಲ ಶಿವ (Kortala Shiva) ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ಬಾಲಿವುಡ್ (Bollywood) ಚಿತ್ರಕ್ಕೆ ಜ್ಯೂ.ಎನ್‌ಟಿಆರ್- ಆಲಿಯಾ ಭಟ್ (Alia Bhatt) ಜೋಡಿಯಾಗಿ ಬರುತ್ತಿದ್ದಾರೆ ಎಂಬ ಸಿಹಿಸುದ್ದಿ ಸಿಕ್ಕಿದೆ. ಇದನ್ನೂ ಓದಿ:ಖುಷ್ಬೂ ಮೊದಲ ಸಂಬಂಧದ ಬಗ್ಗೆ ಶಾಕಿಂಗ್‌ ಹೇಳಿಕೆ ನೀಡಿದ ತೆಲುಗು ನಟಿ

    ತಾರಕ್- ಜ್ವಾನಿ ಕಪೂರ್ ಜೋಡಿಯಾಗಿ ನಟಿಸುತ್ತಿರುವ ‘ಎನ್‌ಟಿಆರ್ 30’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. RRR ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ತಾರಕ್ ಸದ್ಯ ಹೃತಿಕ್ ರೋಷನ್ (Hrithik Roshan) ಜೊತೆ ತೆರೆ ಹಂಚಿಕೊಳ್ಳಲು ಓಕೆ ಎಂದಿದ್ದಾರೆ.

    ವಾರ್ ಪಾರ್ಟ್ 1 ಗಲ್ಲಾಪೆಟ್ಟಿಗೆಯಲ್ಲಿ ಸಕ್ಸಸ್ ಕಂಡಿತ್ತು. ಈಗ ‘ವಾರ್ 2’ ಸಿನಿಮಾ ಮಾಡಲು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ‘ವಾರ್ 2’ಗಾಗಿ (War 2) ಹೃತಿಕ್ ರೋಷನ್- ಜ್ಯೂ.ಎನ್‌ಟಿಆರ್ ಒಟ್ಟಿಗೆ ನಟಿಸುತ್ತಿದ್ದಾರೆ. ತಾರಕ್ ಜೋಡಿಯಾಲಿ ಬಾಲಿವುಡ್ ರಾಧೆ ಆಲಿಯಾ ಭಟ್ ಕಾಣಿಸಿಕೊಳ್ತಿದ್ದಾರೆ ಎಂಬ ಬಿಟೌನ್ ಗಲ್ಲಿಯಲ್ಲಿ ಹರಿದಾಡುತ್ತಿದೆ.

    RRR ಸಿನಿಮಾದಲ್ಲಿ ತಾರಕ್- ರಾಮ್ ಚರಣ್ (Ram Charan) ಜೊತೆ ಆಲಿಯಾ ಭಟ್ ನಟಿಸಿದ್ದರು. ಈ ಚಿತ್ರ ಸೂಪರ್ ಡೂಪರ್ ಸಕ್ಸಸ್ ಕಂಡಿತ್ತು. ರಾಮ್ ಚರಣ್‌ಗೆ ನಾಯಕಿಯಾಗಿ ಆಲಿಯಾ ಮಿಂಚಿದ್ದರು. ಈಗ ತಾರಕ್‌ಗೆ ಆಲಿಯಾ ನಾಯಕಿಯಾಗಲಿದ್ದಾರೆ.

  • NTR 30: ಜ್ಯೂ.ಎನ್‌ಟಿಆರ್‌ – ಜಾನ್ವಿ ಕಪೂರ್ ಚಿತ್ರಕ್ಕೆ ಅಧಿಕೃತ ಚಾಲನೆ

    NTR 30: ಜ್ಯೂ.ಎನ್‌ಟಿಆರ್‌ – ಜಾನ್ವಿ ಕಪೂರ್ ಚಿತ್ರಕ್ಕೆ ಅಧಿಕೃತ ಚಾಲನೆ

    ಜ್ಯೂ.ಎನ್‌ಟಿಆರ್ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. RRR ಚಿತ್ರದ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದ ತಾರಕ್ ಇದೀಗ ತಮ್ಮ ಮುಂದಿನ ಚಿತ್ರದ ಅದ್ದೂರಿಯಾಗಿ ಚಾಲನೆ ನೀಡಿದ್ದಾರೆ. ಜ್ಯೂ.ಎನ್‌ಟಿಆರ್ (Jr.Ntr) ಸಿನಿಮಾ ಕಾರ್ಯಕ್ರಮಕ್ಕೆ ರಾಜಮೌಳಿ (Rajamouli)  ಕೂಡ ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಹೊಸ ಫೋಟೋಶೂಟ್‌ನಲ್ಲಿ ಮಹಾಲಕ್ಷ್ಮಿಯಂತೆ ಕಂಗೊಳಿಸಿದ ನಟಿ ಅಮೂಲ್ಯ

     

    View this post on Instagram

     

    A post shared by Yuvasudha Arts (@yuvasudhaarts)

    `ಆರ್‌ಆರ್‌ಆರ್’ ಚಿತ್ರದ ಸಕ್ಸಸ್ ಅನ್ನ 1 ವರ್ಷದಿಂದ ಎಂಜಾಯ್ ಮಾಡ್ತಿದ್ದಾರೆ. ಇತ್ತೀಚಿಗೆ ಗೋಲ್ಡನ್ ಗ್ಲೋಬ್, ಆಸ್ಕರ್ ಅವಾರ್ಡ್ ಚಿತ್ರತಂಡ ಗೆದ್ದಿರೋದು ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ. ಅಂತೂ ಇಂತೂ ಅಭಿಮಾನಿಗಳು ಕಾಯುತ್ತಿದ್ದ NTR 30 ಸಿನಿಮಾಗೆ ಚಾಲನೆ ಸಿಕ್ಕಿದೆ.

     

    View this post on Instagram

     

    A post shared by Yuvasudha Arts (@yuvasudhaarts)

    ತಾರಕ್ ನಟನೆಯ NTR 30 ಸಿನಿಮಾಗೆ ಗುರುವಾರದಂದು ಚಾಲನೆ ಸಿಕ್ಕಿದೆ. ಹೈದರಾಬಾದ್‌ನಲ್ಲಿ ಸಿನಿಮಾ ಪೂಜೆ ಕಾರ್ಯಕ್ರಮ ಜರುಗಿದೆ. ರಾಜಮೌಳಿ ಅವರು ಸಿನಿಮಾ ಚಾಲನೆ ನೀಡುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

     

    View this post on Instagram

     

    A post shared by Yuvasudha Arts (@yuvasudhaarts)

    ಕೊರಟಾಲ ಶಿವ ನಿರ್ದೇಶನದ ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್‌ಗೆ ನಾಯಕಿಯಾಗಿ ಜಾನ್ವಿ ಕಪೂರ್ (Janhvi Kapoor) ಕಾಣಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ತಾರಕ್ ಜೊತೆ ಜಾನ್ವಿ, ರಾಜಮೌಳಿ, ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದೆ. ಈ ಸಿನಿಮಾದ ನಂತರ ಪ್ರಶಾಂತ್‌ ನೀಲ್‌ ಜೊತೆಗೆ ತಾರಕ್‌ ಹೊಸ ಸಿನಿಮಾ ಶುರುವಾಗಲಿದೆ.

  • ಹುಟ್ಟುಹಬ್ಬದ ದಿನವೇ ಸಿಹಿಸುದ್ದಿ ಹಂಚಿಕೊಂಡ ಜಾನ್ವಿ ಕಪೂರ್

    ಹುಟ್ಟುಹಬ್ಬದ ದಿನವೇ ಸಿಹಿಸುದ್ದಿ ಹಂಚಿಕೊಂಡ ಜಾನ್ವಿ ಕಪೂರ್

    ಬಾಲಿವುಡ್ (Bollywood) ನಟಿ ಜಾನ್ವಿ ಕಪೂರ್ (Janhavi Kapoor) ತಮ್ಮ ಹುಟ್ಟುಹಬ್ಬದ ದಿನವೇ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ತಾಯಿ ಶ್ರೀದೇವಿ ಅವರ ಹಾದಿಯಲ್ಲೇ ಯುವ ನಟಿ ಜಾನ್ವಿ ಹೆಜ್ಜೆ ಇಡ್ತಿದ್ದಾರೆ. ಟಾಲಿವುಡ್‌ನತ್ತ ಜಾನ್ವಿ ಮುಖ ಮಾಡಿದ್ದಾರೆ.

    `ಧಡಕ್’ ಚಿತ್ರದ ಮೂಲಕ ಬಾಲಿವುಡ್‌ಗೆ ನಾಯಕಿಯಾಗಿ ಪಾದಾರ್ಪಣೆ ಮಾಡಿದ ನಟಿ ಜಾನ್ವಿ ಕಪೂರ್, ಗುಡ್ ಲಕ್ ಜೆರ‍್ರಿ, ಮಿಲಿ, ಸೇರಿದಂತೆ ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ತಾಯಿ ಶ್ರೀದೇವಿ ಅವರು ಯಶಸ್ಸು ಗಳಿಸಿದಂತೆ ಜಾನ್ವಿ ಆ ಸಕ್ಸಸ್ ಸಿಗಲಿಲ್ಲ. ಆದರೂ ಛಲ ಬಿಡದೇ ನಟಿ ಹೆಜ್ಜೆ ಇಡುತ್ತಿದ್ದಾರೆ. ಇದನ್ನೂ ಓದಿ: ಮುರುಗದಾಸ್ ನಿರ್ದೇಶನದ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ

    ಸಾಕಷ್ಟು ಸಮಯದಿಂದ ಜಾನ್ವಿ ಟಾಲಿವುಡ್‌ಗೆ ಬರುತ್ತಾರೆ. ಜ್ಯೂ.ಎನ್‌ಟಿಆರ್‌ಗೆ (Jr.ntr) ನಾಯಕಿಯಾಗುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ಚಿತ್ರತಂಡದಿಂದ ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ. ಇದೀಗ ಜಾನ್ವಿ ತಮ್ಮ ತೆಲುಗಿನ ಮೊದಲ ಸಿನಿಮಾ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಪ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

     

    View this post on Instagram

     

    A post shared by Janhvi Kapoor (@janhvikapoor)

    ತೆಲುಗಿನ ಸೂಪರ್ ಸ್ಟಾರ್ ತಾರಕ್‌ಗೆ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಲಿದ್ದಾರೆ. ಕೊರಟಾಲ ಶಿವ ನಿರ್ದೇಶನದ NTR 30 ಸಿನಿಮಾದಲ್ಲಿ ನಾಯಕಿಯಾಗಿ ಜಾನ್ವಿ ಕಾಣಿಸಿಕೊಳ್ತಿದ್ದಾರೆ. ತನ್ನ ಹುಟ್ಟುಹಬ್ಬದ ದಿನವೇ ಸಿನಿಮಾದ ಸ್ಪೆಷಲ್ ಪೋಸ್ಟರ್‌ನ ನಟಿ ಶೇರ್ ಮಾಡಿದ್ದಾರೆ. ಸೀರೆ ಧರಿಸಿ ಬೋಲ್ಡ್ ಆಗಿ ಪೋಸ್ ಕೊಡುತ್ತಿರುವ ಜಾನ್ವಿ ಲುಕ್ ಇದೀಗ ಅಭಿಮಾನಿಗಳ ಸೆಳೆಯುತ್ತಿದೆ. ತಾರಕ್- ಜಾನ್ವಿ ಜೋಡಿಯನ್ನ ತೆರೆಯ ಮೇಲೆ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಇನ್ನೂ 26ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟಿ ಜಾನ್ವಿಗೆ ಸೆಲೆಬ್ರಿಟಿ ಸ್ನೇಹಿತರಿಂದ, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

  • Oscars 2023: ಪ್ರತಿಷ್ಠಿತ ಆಸ್ಕರ್ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ `ನಾಟು ನಾಟು’ ಸಾಂಗ್

    Oscars 2023: ಪ್ರತಿಷ್ಠಿತ ಆಸ್ಕರ್ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ `ನಾಟು ನಾಟು’ ಸಾಂಗ್

    ಖ್ಯಾತ ನಿರ್ದೇಶಕ ರಾಜಮೌಳಿ (Director Rajamouli) ನಿರ್ದೇಶನದ `RRR’ ಸಿನಿಮಾದ ಕೀರ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಚಿತ್ರದ `ನಾಟು ನಾಟು’ ಸಾಂಗ್‌ಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಾಚಿಕೊಂಡ ಬೆನ್ನಲ್ಲೇ ಇದೀಗ ಪ್ರತಿಷ್ಠಿತ ಆಸ್ಕರ್ ವೇದಿಕೆಯಲ್ಲಿ `ನಾಟು ನಾಟು’ (Naatu Naatu Song) ಹಾಡು ಪ್ರದರ್ಶನಗೊಳ್ಳುವುದರ ಬಗ್ಗೆ ಸಿಹಿಸುದ್ದಿ ಸಿಕ್ಕಿದೆ.

    ಆಸ್ಕರ್ (Oscars 2023) ಅಂಗಳಕ್ಕೆ ಹೋಗೋದು ಪ್ರತೀ ಫಿಲಂ ಮೇಕರ್‌ನ ಬಹುದೊಡ್ಡ ಕನಸು. ಆಸ್ಕರ್ ವೇದಿಕೆಯಲ್ಲಿ ಜಗತ್ತಿನ ವಿವಿಧ ಭಾಷೆಗಳ ವಿವಿಧ ದೇಶಗಳ ನಾನಾ ಮೈ ಬಣ್ಣದ ನಟ- ನಟಿಯರ ಮೇಳವೇ ನಡೆಯುತ್ತೆ. ಆದರೆ ಈ ಬಾರಿ ಆಸ್ಕರ್‌ನಲ್ಲಿ ಪ್ರಸಿದ್ಧ `ಆರ್‌ಆರ್‌ಆರ್’ ಸಿನಿಮಾದ್ದೇ ಸಮಾಚಾರ. ಈ ಚಿತ್ರ ಬಂದು ವರ್ಷ ಕಳೆದರೂ `ಆರ್‌ಆರ್‌ಆರ್’ ಚಿತ್ರದ `ನಾಟು ನಾಟು’ ಹಾಡು ಇಡೀ ಜಗತ್ತನ್ನೇ ಕುಣಿಸುತ್ತಿದೆ. ಹಾಗಾಗಿ ಮಾ.12ಕ್ಕೆ ಲಾಸ್ ಎಂಜಲೀಸ್‌ನಲ್ಲಿ 95ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಆ ವೇದಿಕೆ ಮೇಲೆ `ನಾಟು ನಾಟು’ ಲೈವ್ ಪರ್ಫಾರ್ಮೆನ್ಸ್‌ಗೆ ಅವಕಾಶ ಸಿಕ್ಕಿದೆ. ಈ ಹಿಂದೆಯೇ ಈ ಬಗ್ಗೆ ಸುಳಿವು ಸಿಕ್ಕಿತ್ತು. ಇದೀಗ ಅಧಿಕೃತವಾಗಿ ಈ ವಿಚಾರವನ್ನು ಅಕಾಡೆಮಿ ಸ್ಪಷ್ಟಪಡಿಸಿದೆ.

    ಚಂದ್ರಬೋಸ್ ಸಾಹಿತ್ಯ ಬರೆದಿರುವ `ನಾಟು ನಾಟು’ ಹಾಡನ್ನು ಗಾಯಕರಾದ ರಾಹುಲ್ ಸಿಪ್ಲಿಗಿಂಜ್ ಹಾಗೂ ಕಾಲ ಭೈರವ ಹಾಡಿದ್ದರು. ಇದೀಗ ಇವರಿಬ್ಬರಿಗೆ ಆಸ್ಕರ್ ವೇದಿಕೆಯ ಮೂಲಕ ಮತ್ತೊಮ್ಮೆ ಹಾಡಿನ ಲೈವ್ ಪರ್ಫಾರ್ಮೆನ್ಸ್ ನೀಡುವ ಅವಕಾಶ ದಕ್ಕಿದೆ. ಇದನ್ನು ಟ್ವೀಟ್ ಮಾಡಿ ಅಕಾಡೆಮಿ ಖಚಿತ ಪಡಿಸಿದೆ. ಜೇಮ್ಸ್ ಕ್ಯಾಮರೂನ್‌ನಂತ ಹಾಲಿವುಡ್ ಫಿಲ್ಮ್ ಮೇಕರ್ಸ್ ‘RRR’ ಸಿನಿಮಾ ನೋಡಿ ಮೆಚ್ಚಿ ಹೊಗಳಿದ್ದಾರೆ. ಈ ವಾರ ಸಿನಿಮಾ ಅಮೆರಿಕಾದಲ್ಲಿ ಮತ್ತೆ ರಿಲೀಸ್ ಆಗುತ್ತಿದೆ. ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ ಕೀರವಾಣಿ (M.M Keeravani) ಈ ಹಾಡಿಗೆ ಸಂಗೀತ ನಿರ್ದೇಶನ ಮಾಡಿದವರು. ಅವರು ಆಸ್ಕರ್ ವೇದಿಕೆಯಲ್ಲಿ ಭಾಗಿ ಆಗುವುದು ಅನುಮಾನ ಎನ್ನಲಾಗ್ತಿದೆ. ಇತ್ತೀಚೆಗೆ ಆರೋಗ್ಯ ಕಾರಣಗಳಿಂದ ವೇದಿಕೆಯಲ್ಲಿ ಪರ್ಫಾರ್ಮೆನ್ಸ್ ಕಷ್ಟ ಎಂದು ಕೀರವಾಣಿ ಹೇಳಿದ್ದರು. ಅವರ ಬರುವಿಕೆಯ ಬಗ್ಗೆ ನಿರೀಕ್ಷೆಯಿದೆ. ಇದನ್ನೂ ಓದಿ ಸ್ವೀಟ್‌ ಹಾರ್ಟ್‌ಗೆ ವಿಶ್‌ ಮಾಡಿದ ರಿಷಬ್ ಶೆಟ್ಟಿ

    ಚಿತ್ರದ ನಾಟು ನಾಟು ಸಾಂಗ್ ಅನ್ನ ಉಕ್ರೇನ್‌ನಲ್ಲಿ ಶೂಟ್ ಮಾಡಲಾಗಿತ್ತು. ಪ್ರೇಮ್ ರಕ್ಷಿತ್ ಕೊರಿಯೋಗ್ರಾಫಿಯಲ್ಲಿ ತಾರಕ್- ಚರಣ್ ಜಬರ್‌ದಸ್ತ್ ಆಗಿ ಹೆಜ್ಜೆ ಹಾಕಿದ್ದರು. ಈ ಸಿನಿಮಾ ಗೆಲುವಿಗೆ ರಾಜಮೌಳಿ ಅವರ ನಿರ್ದೇಶನವಷ್ಟೇ ಸಾಥ್ ನೀಡಿರುವುದಲ್ಲ. ಚಿತ್ರಕಥೆಯ ಜೊತೆ ತಾರಕ್ ಮತ್ತು ರಾಮ್ ಚರಣ್ ಅಭಿನಯ ಕೂಡ ಗೆಲುವಿಗೆ ಕಾರಣವಾಗಿದೆ.

  • ಸ್ಯಾಂಡಲ್‌ವುಡ್‌ಗೆ ಜ್ಯೂ.ಎನ್‌ಟಿಆರ್ ಎಂಟ್ರಿ: ಇಲ್ಲಿದೆ ಮಾಹಿತಿ

    ಸ್ಯಾಂಡಲ್‌ವುಡ್‌ಗೆ ಜ್ಯೂ.ಎನ್‌ಟಿಆರ್ ಎಂಟ್ರಿ: ಇಲ್ಲಿದೆ ಮಾಹಿತಿ

    ಟಾಲಿವುಡ್‌ನ(Tollywood) ಸೂಪರ್ ಸ್ಟಾರ್ ಜ್ಯೂ.ಎನ್‌ಟಿಆರ್(Jr.ntr) `ಆರ್‌ಆರ್‌ಆರ್’ ಚಿತ್ರದ ಸಕ್ಸಸ್ ನಂತರ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಟಿಟೌನ್ ಗಲ್ಲಿಯಿಂದ ಬ್ರೇಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಪ್ರಶಾಂತ್ ನೀಲ್(Prashanth Neel) ನಿರ್ದೇಶನದ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೂ ಎಂಟ್ರಿ ಕೊಡಲಿದ್ದಾರೆ ಜ್ಯೂ.ಎನ್‌ಟಿಆರ್.

    ಜ್ಯೂ.ಎನ್‌ಟಿಆರ್ ಅವರಿಗೆ ಕರ್ನಾಟಕದಲ್ಲೂ(Karnataka) ಅಪಾರ ಅಭಿಮಾನಿಗಳಿದ್ದಾರೆ. ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ವೇಳೆ ಜ್ಯೂ.ಎನ್‌ಟಿಆರ್ ಕನ್ನಡದಲ್ಲಿಯೇ ಮಾತನಾಡಿದ್ದಾರೆ. ತೆಲಗು ನಟನ(Telagu Actor) ಕನ್ನಡ ಪ್ರೀತಿ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ತನ್ನ ತಾಯಿ ಕೂಡ ಕುಂದಾಪುರದವರಾಗಿದ್ದು, ಅವರಿಂದಲೇ ಕನ್ನಡ ಕಲಿತಿದ್ದಾರೆ. ಈಗ ಕನ್ನಡ ಸಿನಿಪ್ರೇಕ್ಷಕರಿಗೆ ತಾರಕ್(Tarak) ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ತಾರಕ್ ರೆಡಿಯಾಗಿದ್ದಾರೆ. ಇದನ್ನೂ ಓದಿ:ನನ್ನ ಮಗನ ಕಾರು ಅಪಘಾತಕ್ಕೆ ‘ಬುಧ ಭಕ್ತಿ’ ಕಾರಣ ಎಂದ ಜಗ್ಗೇಶ್

    ತಾರಕ್ ನಟನೆಯ 31ನೇ ಸಿನಿಮಾಗೆ ಕನ್ನಡದ ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ ಡೈರೆಕ್ಷನ್ ಮಾಡ್ತಿದ್ದಾರೆ. ಬಹುಭಾಷೆಯಲ್ಲಿ ಡಬ್ ಬರಲಿರುವ ಈ ಸಿನಿಮಾ, ತೆಲುಗು ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ಡೈರೆಕ್ಟ್ ಆಗಿ ಚಿತ್ರೀಕರಣವಾಗುತ್ತಿದೆ. ತಮ್ಮ ಪಾತ್ರಕ್ಕೆ ಕನ್ನಡದಲ್ಲಿ ತಾರಕ್ ಅವರೇ ಧ್ವನಿ ನೀಡಲಿದ್ದಾರೆ. ಈಗಾಗಲೇ `ಆರ್‌ಆರ್‌ಆರ್’ ಸಿನಿಮಾಗೂ ಕನ್ನಡದಲ್ಲೇ ತಾರಕ್ ವಾಯ್ಸ್ ನೀಡಿದ್ದರು.

    ಈಗ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಜ್ಯೂ.ಎನ್‌ಟಿಆರ್ ಎಂಟ್ರಿ ಕೊಡ್ತಿದ್ದಾರೆ. ಈ ಮೂಲಕ ಕನ್ನಡ ಸಿನಿರಸಿಕರಿಗೆ ತಾರಕ್ ಸಿಹಿ ಸುದ್ದಿ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜ್ಯೂ.ಎನ್‌ಟಿಆರ್ ಮನೆಯಲ್ಲಿನ ಅಪ್ಪು ಫೋಟೋ ವೈರಲ್

    ಜ್ಯೂ.ಎನ್‌ಟಿಆರ್ ಮನೆಯಲ್ಲಿನ ಅಪ್ಪು ಫೋಟೋ ವೈರಲ್

    ಪ್ಪು ಸ್ನೇಹಜೀವಿ ಆಗಿದ್ದರು, ಕನ್ನಡ ಚಿತ್ರರಂಗ ಮಾತ್ರವಲ್ಲದೇ ಪರಭಾಷೆಯ ಅನೇಕ ಸ್ಟಾರ್‌ ಕಲಾವಿದರ ಜೊತೆ ಒಂದೊಳ್ಳೆ ಬಾಂಧವ್ಯವಿತ್ತು. ಇನ್ನೂ ತೆಲುಗು ಸ್ಟಾರ್ ತಾರಕ್ ಜೊತೆ ಹೆಚ್ಚಿನ ಆಪ್ತತೆ ಇತ್ತು. `ಚಕ್ರವ್ಯೂಹ’ ಸಿನಿಮಾದಲ್ಲಿ ಅಪ್ಪುಗಾಗಿ ಗೆಳೆಯ ಗೆಳೆಯ ಹಾಡಿಗೆ ಜ್ಯೂ.ಎನ್‌ಟಿಆರ್(Jr.Ntr) ಧ್ವನಿ ನೀಡಿದ್ದರು. ಇನ್ನೂ ತಾರಕ್ ಮನದಲ್ಲಿ ಮಾತ್ರವಲ್ಲ, ನಟನ ಮನೆಯಲ್ಲೂ ಪುನೀತ್ (Puneeth Rajkumar)ಫೋಟೋ ರಾರಾಜಿಸುತ್ತಿದೆ. ಈ ಕುರಿತ ಫೋಟೋ ಕೂಡ ಸಖತ್ ವೈರಲ್ ಆಗುತ್ತಿದೆ.

    ಪುನೀತ್ ಒಬ್ಬರು ಅಜಾತಶತ್ರು, ಪ್ರತಿಯೊಬ್ಬರ ಜೊತೆಗೂ ಒಂದೊಳ್ಳೆಯ ಬಾಂಧವ್ಯವನ್ನ ಹೊಂದಿದ್ದರು. ಟಾಲಿವುಡ್ ನಟ ತಾರಕ್ ಮತ್ತು ಅಪ್ಪು ಸಾಕಷ್ಟು ವರ್ಷಗಳಿಂದ ಸ್ನೇಹಿತರು. ಇನ್ನೂ ತಾರಕ್ ಮನದಲ್ಲಿ ಮಾತ್ರವಲ್ಲ, ತಮ್ಮ ಮನೆಯಲ್ಲಿಯೂ ಪುನೀತ್ ರಾಜ್‌ಕುಮಾರ್ ಅವರ ಫೋಟೋವನ್ನು ಇಟ್ಟುಕೊಂಡಿದ್ದಾರೆ. ಈ ಫೋಟೋ ಸಹಿತ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ತಾರಕ್ ಪ್ರೀತಿ ಕಂಡು, ಅಪ್ಪು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಜೂ. ಎನ್‌ಟಿಆರ್ ಅವರ ತಾತ ಸೀನಿಯರ್ ಎನ್‌ಟಿಆರ್ ಅವರ ಅಳೆತ್ತರದ ಫೋಟೋ ಪಕ್ಕದಲ್ಲಿ ಅಪ್ಪು ಫೋಟೋವನ್ನು ಕೂಡ ಹಾಕಲಾಗಿದೆ. ಸದ್ಯ ಅಪ್ಪು ಅಭಿಮಾನಿಗಳು ಇದನ್ನು ಕಂಡು ಗೆಳೆತನ ಅಂದ್ರೆ ಇದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ವಿರಹ ಮುಂದುವರೆಯಲಿ ಎಂದು ದಿವ್ಯಾ ಉರುಡುಗ ಕಾಲೆಳೆದ ಕಿಚ್ಚ

    ನವೆಂಬರ್ 1ರಂದು ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ(Karnataka Ratna Award) ಮಾಡಲಾಗುವುದು. ಅದಕ್ಕಾಗಿ ಸಕಲ ಸಿದ್ಧತೆ ನಡೆದಿದೆ. ವಿಧಾನಸೌಧದಲ್ಲಿ ಈ ಸಮಾರಂಭ ನಡೆಯಲಿದೆ. ಕನ್ನಡ ರಾಜ್ಯೋತ್ಸವದ ದಿನವೇ ಅಪ್ಪುಗೆ ಈ ಗೌರವ ಸಲ್ಲಿಕೆ ಆಗುತ್ತಿದೆ. ಈ ಸಮಾರಂಭಕ್ಕೆ ಸಾಕ್ಷಿಯಾಗಲು ನಟ ಜೂನಿಯರ್ ಎನ್‌ಟಿಆರ್ ಹಾಗೂ ರಜನಿಕಾಂತ್ ಅವರು ಆಗಮಿಸುವುದು ಖಚಿತ ಆಗಿದೆ. ಕರ್ನಾಟಕ ಸರ್ಕಾರದಿಂದ ಅವರಿಗೆ ಆಹ್ವಾನ ನೀಡಲಾಗಿದೆ. ಆಹ್ವಾನ ಸ್ವೀಕರಿಸಿರುವ ಅವರು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬರುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]