– ನಿನ್ನ ಬಾಡಿ ಪಾರ್ಟ್ಸ್ ನಂಗಿಷ್ಟ ಎಂದವನಿಗೆ ತಾಪ್ಸಿ ತಿರುಗೇಟು
ಮುಂಬೈ: ದಕ್ಷಿಣ ಭಾರತ ಚಿತ್ರರಂಗವಲ್ಲದೇ, ಬಾಲಿವುಡ್ ಕ್ಷೇತ್ರದಲ್ಲೂ ಖ್ಯಾತಿ ಪಡೆದಿರುವ ಬಹುಭಾಷಾ ನಟಿ ತಾಪ್ಸಿ ಪನ್ನು ತಮ್ಮನ್ನು ಟ್ರೋಲ್ ಮಾಡಲು ಯತ್ನಿಸಿದ ವ್ಯಕ್ತಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿ ತಿರುಗೇಟು ನೀಡಿದ್ದಾರೆ. ತಿರುಗೇಟು ನೀಡುವ ವೇಳೆ ಅವರು ಬಳಸಿದ ಪದದ ಅರ್ಥ ತಿಳಿಯಲು ಜನ ಗೂಗಲ್ ಮೊರೆ ಹೋಗಿದ್ದಾರೆ.

ಸದಾ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕದಲ್ಲಿರುವ ತಾಪ್ಸಿ ಅವರಿಗೆ, ‘ನಿನ್ನ ಬಾಡಿ ಪಾರ್ಟ್ಸ್ ನಂಗಿಷ್ಟ’ ಎಂದು ವ್ಯಕ್ತಿಯೊಬ್ಬ ಟ್ವೀಟ್ ಮಾಡಿದ್ದ. ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ್ದ ತಾಪ್ಸಿ ‘ವಾವ್ ಐ ಲೈಕ್ ದೆಮ್ ಟೂ, ನಿಮ್ಮ ಇಷ್ಟದ ಭಾಗ ಯಾವುದು? ನನಗೆ cerebrum ಇಷ್ಟ’ ಎಂದು ರೀ ಟ್ವೀಟ್ ಮಾಡಿದ್ದರು.
ಇತ್ತ ತಾಪ್ಸಿ ಅವರ ಖಡಕ್ ಉತ್ತರವನ್ನು ಕಂಡು ಹಲವು ಮಂದಿ ಶಾಕ್ ಆಗಿದ್ದರೆ, ಮತ್ತು ಕೆಲವರು ಸೆರೆಬ್ರಮ್ ಎಂಬ ಪದದ ಅರ್ಥ ತಿಳಿಯದೇ ಗೂಗಲ್ ಮಾಡಿದ್ದಾರೆ. ಸೋಮವಾರ ಭಾರತೀಯರು ಗೂಗಲ್‍ನಲ್ಲಿ ಹೆಚ್ಚು ಹುಡುಕಾಟ ನಡೆಸಿದ ಪದಗಳ ಪಟ್ಟಿಯಲ್ಲಿ ಸೆರೆಬ್ರಮ್ ಕೂಡ ಸ್ಥಾನ ಪಡೆದಿದೆ.
ಗೂಗಲ್ ಸರ್ಚ್ ನಲ್ಲಿ ಸೆರೆಬ್ರಮ್ ಪದದ ಹುಡುಕಾಟ ನಡೆಸಿದ ವೇಳೆ ಉಂಟಾಗಿರುವ ಬದಲಾವಣೆಯ ಫೋಟೋವನ್ನು ಟ್ವೀಟ್ ಮಾಡಿರುವ ರಾಹುಲ್ ಎಂಬವರು ಹೆಚ್ಚಿನ ಜನರು ಈ ಪದದ ಅರ್ಥ ತಿಳಿಯಲು ಪ್ರಯತ್ನಿಸಿದ್ದಾರೆ ಎಂದು ತಿಳಿಸಿ ಟ್ವೀಟ್ ಮಾಡಿದ್ದಾರೆ.
ಅಂದಹಾಗೆ ‘ಸೆರೆಬ್ರಮ್’ ಮೆದುಳಿನಲ್ಲಿ ಅತ್ಯಂತ ಪ್ರಮುಖ ಭಾಗವಾಗಿದ್ದು, ಇದನ್ನು ಕನ್ನಡದಲ್ಲಿ ಮುಮ್ಮಿದುಳು, ಪ್ರಧಾನ ಮೆದುಳು ಎಂದು ಕರೆಯುತ್ತಾರೆ. ತಮ್ಮನ್ನು ಟ್ರೋಲ್ ಮಾಡಲು ಯತ್ನಿಸಿದ ವ್ಯಕ್ತಿಗೆ ತಾಪ್ಸಿ ಸೂಕ್ತವಾಗಿಯೇ ಉತ್ತರಿಸಿ ತಿರುಗೇಟು ನೀಡಿದ್ದು, ತಾಪ್ಸಿ ಅವರ ಬುದ್ಧಿವಂತಿಕೆ ಉತ್ತರ ಕಂಡು ಟ್ವೀಟಿಗರು ಮೆಚ್ಚಿಕೊಂಡಿದ್ದಾರೆ.
ಈ ಹಿಂದೆಯೂ ತಾಪ್ಸಿ ಹಲವು ಬಾರಿ ತಮ್ಮ ಖಡಕ್ ಟ್ವೀಟ್‍ಗಳಿಂದ ಎದುರಾಳಿಗಳಿಗೆ ತಿರುಗೇಟು ನೀಡಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಟ್ರೋಲ್ ಮಾಡಿದವರನ್ನು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೇ ‘ತಾಪ್ಸಿ ಬಾಲಿವುಡ್ ಕಂಡ ಅತ್ಯಂತ ಕೆಟ್ಟ ನಟಿ. ಆಕೆ ಎರಡು ಮೂರು ಚಿತ್ರಗಳ ನಂತರ ಬಾಲಿವುಡ್ ನಲ್ಲಿ ಉಳಿಯುವುದಿಲ್ಲ’ ಟ್ರೋಲ್ ಮಾಡಿದ್ದ ವ್ಯಕ್ತಿಗೆ ತಿರುಗೇಟು ನೀಡಿದ್ದ ತಾಪ್ಸಿ, ನಾನು ಈಗಾಗಲೇ ಮೂರು ಚಿತ್ರಗಳಲ್ಲಿ ನಟಿಸಿದ್ದು, ಇನ್ನು ಮೂರು ಚಿತ್ರಗಳಿಗೆ ಸಹಿ ಹಾಕಿದ್ದಾಗಿ ಹೇಳಿದ್ದರು.
https://twitter.com/akshit4u/status/1075035119734280192
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv