Tag: Tanzania

  • ತಾಂಜಾನಿಯಾದಲ್ಲಿ ಭಾರೀ ಮಳೆ, ಪ್ರವಾಹ – 155 ಮಂದಿ ಸಾವು

    ತಾಂಜಾನಿಯಾದಲ್ಲಿ ಭಾರೀ ಮಳೆ, ಪ್ರವಾಹ – 155 ಮಂದಿ ಸಾವು

    ಡೋಡೋಮಾ: ತಾಂಜಾನಿಯಾದಲ್ಲಿ (Tanzania) ಕಳೆದ ವಾರದಿಂದ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಮತ್ತು ಭೂಕುಸಿತದಿಂದ ಜನತೆ ಕಂಗೆಟ್ಟಿದ್ದಾರೆ. ದೇಶದಲ್ಲಿ ಇದುವರೆಗೂ 155 ಜನರು ಸಾವಿಗೀಡಾಗಿದ್ದು, 236 ಮಂದಿ ಗಾಯಗೊಂಡಿದ್ದಾರೆ.

    ಪೂರ್ವ ಆಫ್ರಿಕಾದಾದ್ಯಂತ (East Africa) ತೀವ್ರವಾದ ಮಳೆ ಮುಂದುವರಿದಿದೆ. ಎಲ್ ನಿನೋ ಹವಾಮಾನದ ಮಾದರಿಯು ಭಾರೀ ಮಳೆಗೆ ಕಾರಣವಾಗಿದೆ. ಇದರಿಂದಾಗಿ ಪ್ರವಾಹ ಹೆಚ್ಚಾಗಿದೆ. ರಸ್ತೆಗಳು, ಸೇತುವೆಗಳು ಮತ್ತು ರೈಲು ಮಾರ್ಗಗಳು ನಾಶವಾಗಿವೆ ಎಂದು ಪ್ರಧಾನಿ ಕಾಸಿಮ್ ಮಜಲಿವಾ ತಿಳಿಸಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ ವಿರುದ್ಧ ಪ್ರತಿಭಟನೆ – ಅಮೆರಿಕದಲ್ಲಿ ಭಾರತ ಮೂಲದ ವಿದ್ಯಾರ್ಥಿನಿ ಬಂಧನ

    ಪ್ರವಾಹದಿಂದ 51,000 ಮನೆಗಳಿಗೆ ಹಾನಿಯಾಗಿದೆ. 2 ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಶಾಲೆಗಳನ್ನು ಮುಚ್ಚಲಾಗಿದೆ. ಜನರ ರಕ್ಷಣೆಗೆ ತುರ್ತು ಸೇವೆ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ತಗ್ಗು ಪ್ರದೇಶಗಳಲ್ಲಿ ವಾಸಿಸುವವರಿಗೆ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಮನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವವರಿಗೆ ಸೂಕ್ತ ನೆರವು ಒದಗಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ ಮೇಲೆ ದಾಳಿ ಕೇಸ್‌ – ಖಲಿಸ್ತಾನಿ ಪರ ಆರೋಪಿ ಬಂಧನ

    ಪ್ರಸ್ತುತ ಮಳೆಗಾಲದಲ್ಲಿ ಪೂರ್ವ ಆಫ್ರಿಕಾದ ಪ್ರದೇಶವು ವಾಡಿಕೆಗಿಂತ ಹೆಚ್ಚಿನ ಮಳೆಯಿಂದ ಜರ್ಜರಿತವಾಗಿದೆ. ನೆರೆಯ ಬುರುಂಡಿ ಮತ್ತು ಕೀನ್ಯಾದಲ್ಲಿ ಸಹ ಪ್ರವಾಹ ವರದಿಯಾಗಿದೆ.

  • ಭಾರತದ ಹೊರಗೆ ಮೊದಲ ಐಐಟಿ ಸ್ಥಾಪನೆ: MEA

    ಭಾರತದ ಹೊರಗೆ ಮೊದಲ ಐಐಟಿ ಸ್ಥಾಪನೆ: MEA

    ನವದೆಹಲಿ: ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ಕ್ಯಾಂಪಸ್‌ ಮೊದಲ ಬಾರಿಗೆ ಭಾರತದ ಹೊರಗಿನ ದೇಶ ತಾಂಜಾನಿಯಾದ ಜಂಜಿಬಾರ್‌ನಲ್ಲಿ ಸ್ಥಾಪನೆಯಾಗಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಗುರುವಾರ ತಿಳಿಸಿದೆ.

    ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಅವರು ತಾಂಜಾನಿಯಾ ಪ್ರವಾಸದಲ್ಲಿದ್ದಾರೆ. ತಾಂಜಾನಿಯಾದ ಜಾಂಜಿಬಾರ್‌ನಲ್ಲಿ ಐಐಟಿ ಮದ್ರಾಸ್ ಕ್ಯಾಂಪಸ್ ಸ್ಥಾಪನೆಗೆ ತಿಳುವಳಿಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಒಪ್ಪಂದಕ್ಕೆ ಜಾಂಜಿಬಾರ್ ಅಧ್ಯಕ್ಷ ಹುಸೇನ್ ಅಲಿ ಮ್ವಿನಿ ಮತ್ತು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಸಮ್ಮುಖದಲ್ಲಿ ಇಲಾಖೆಗಳು ಸಹಿ ಹಾಕಿವೆ. ಇದನ್ನೂ ಓದಿ: ಮಣಿಪುರ ಹಿಂಸಾಚಾರ – ಇಂಟರ್ನೆಟ್ ಸೇವೆ ನಿಷೇಧ ಜು.10 ರವರೆಗೆ ವಿಸ್ತರಣೆ

    ಭಾರತದ ಹೊರಗೆ ಜಾಂಜಿಬಾರ್‌ನಲ್ಲಿ ಮೊದಲ ಐಐಟಿ ಕ್ಯಾಂಪಸ್ ಸ್ಥಾಪನೆಯಾಗಲಿದೆ. ಭಾರತದ ಶಿಕ್ಷಣ ಸಚಿವಾಲಯ, ಐಐಟಿ ಮದ್ರಾಸ್ ಮತ್ತು ಜಾಂಜಿಬಾರ್‌ನ ಶಿಕ್ಷಣ ಮತ್ತು ವೃತ್ತಿಪರ ತರಬೇತಿ ಸಚಿವಾಲಯದ ನಡುವೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಎಂಇಎ ಮಾಹಿತಿ ನೀಡಿದೆ.

    ಈ ಕ್ಯಾಂಪಸ್ ಭಾರತ ಮತ್ತು ತಾಂಜಾನಿಯಾ ನಡುವಿನ ದೀರ್ಘಕಾಲದ ಸ್ನೇಹವನ್ನು ಪ್ರತಿಬಿಂಬಿಸುತ್ತದೆ. ಆಫ್ರಿಕಾ ಮತ್ತು ಗ್ಲೋಬಲ್ ಸೌತ್‌ನಾದ್ಯಂತ ಜನರ ಸಂಬಂಧಗಳನ್ನು ಬೆಸೆಯಲು ಭಾರತವು ತನ್ನ ಗಮನ ಕೇಂದ್ರೀಕರಿಸಿದೆ ಎಂದು ತಿಳಿಸಿದೆ. ಇದನ್ನೂ ಓದಿ: NCP vs NCP – ಬಲಾಬಲ ಪ್ರದರ್ಶನದಲ್ಲಿ ಅಜಿತ್‌ ʼಪವರ್‌ʼಫುಲ್‌!

    ರಾಷ್ಟ್ರೀಯ ಶಿಕ್ಷಣ ನೀತಿ 2020 (NEP) ಉನ್ನತ ಕಾರ್ಯಕ್ಷಮತೆ ಹೊಂದಿರುವ ಭಾರತೀಯ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳನ್ನು ಇತರ ದೇಶಗಳಲ್ಲಿ ಸ್ಥಾಪಿಸಲು ಪ್ರೋತ್ಸಾಹಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದೆ.

    ತಾಂಜಾನಿಯಾ ಮತ್ತು ಭಾರತದ ನಡುವಿನ ಕಾರ್ಯತಂತ್ರದ ಸಹಭಾಗಿತ್ವವನ್ನು ಗುರುತಿಸಿ, ಜಾಂಜಿಬಾರ್-ಟಾಂಜಾನಿಯಾದಲ್ಲಿ ಐಐಟಿ ಮದ್ರಾಸ್‌ನ ಕ್ಯಾಂಪಸ್ ಸ್ಥಾಪನೆಗೆ ಸಂಬಂಧಿಸಿದಂತೆ ದಾಖಲೆಗೆ ಸಹಿ ಮಾಡುವ ಮೂಲಕ ಶೈಕ್ಷಣಿಕ ಪಾಲುದಾರಿಕೆಯ ಸಂಬಂಧವನ್ನು ಔಪಚಾರಿಕಗೊಳಿಸಲಾಗಿದೆ. 2023ರ ಅಕ್ಟೋಬರ್‌ನಿಂದ ಕಾರ್ಯ ಆರಂಭವಾಗಲಿದೆ ಎಂದು ಹೇಳಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 42 ಜನರನ್ನು ಹೊತ್ತಿದ್ದ ವಿಮಾನ ಸರೋವರದಲ್ಲಿ ಪತನ

    42 ಜನರನ್ನು ಹೊತ್ತಿದ್ದ ವಿಮಾನ ಸರೋವರದಲ್ಲಿ ಪತನ

    ಡೊಡೊಮಾ: ಹವಾಮಾನ ವೈಪರಿತ್ಯದಿಂದಾಗಿ 42 ಜನರನ್ನು ಹೊತ್ತ ವಿಮಾನವೊಂದು (Plane) ಸರೋವರದಲ್ಲಿ (Lake) ಪತನವಾಗಿರುವ (Crash) ಘಟನೆ ಭಾನುವಾರ ಬೆಳಗ್ಗೆ ಪೂರ್ವ ಆಫ್ರಿಕಾದ ತಾಂಜಾನಿಯಾದಲ್ಲಿ (Tanzania) ನಡೆದಿದೆ.

    ತಾಂಜಾನಿಯಾದ ಬುಕೋಬಾದಲ್ಲಿನ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ವಿಮಾನ ಹವಾಮಾನ ವೈಪರಿತ್ಯದಿಂದಾಗಿ ಕೇವಲ 100 ಮೀ. ದೂರದಲ್ಲಿದ್ದ ವಿಕ್ಟೋರಿಯಾ ಸರೋವರಕ್ಕೆ (Lake Victoria) ಅಪ್ಪಳಿಸಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಆನ್‍ಲೈನ್ ಎಡವಟ್ಟು- ಟಿಇಟಿ ಪರೀಕ್ಷೆಗೆ ಬಂದ ವಿದ್ಯಾರ್ಥಿ ಪರೀಕ್ಷೆಯಿಂದ ವಂಚಿತ

    39 ಪ್ರಯಾಣಿಕರು, ಇಬ್ಬರು ಪೈಲಟ್‌ಗಳು ಮತ್ತು ಇಬ್ಬರು ಕ್ಯಾಬಿನ್ ಸಿಬ್ಬಂದಿ ಸೇರಿದಂತೆ ಒಟ್ಟು 43 ಜನರನ್ನು ಹೊತ್ತಿದ್ದ ವಿಮಾನ ದಾರ್ ಎಸ್ ಸಲಾಮ್‌ನಿಂದ ಹೊರಟಿತ್ತು. 26 ಜನರನ್ನು ಈಗಾಗಲೇ ರಕ್ಷಿಸಲಾಗಿದ್ದು, ಉಳಿದವರ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಟಗರು ಗುದ್ದಿ ಕೊಟ್ಟಿಗೆಯಲ್ಲಿ ಲಾಕ್ ಆದ ಚಿರತೆ – ಕೆಆರ್‌ಎಸ್‌ನ ಬೃಂದಾವನದಲ್ಲಿ ಅಂತ್ಯವಾಗದ ಆತಂಕ

    Live Tv
    [brid partner=56869869 player=32851 video=960834 autoplay=true]

  • ಪ್ರಧಾನಿ ನರೇಂದ್ರ ಮೋದಿ ನೆಚ್ಚಿನ ಸೆನ್ಸೇಷನ್ ಕಲಾವಿದ ಕಿಲಿ ಪೌಲ್ ಮೇಲೆ ಮಾರಣಾಂತಿಕ ಹಲ್ಲೆ

    ಪ್ರಧಾನಿ ನರೇಂದ್ರ ಮೋದಿ ನೆಚ್ಚಿನ ಸೆನ್ಸೇಷನ್ ಕಲಾವಿದ ಕಿಲಿ ಪೌಲ್ ಮೇಲೆ ಮಾರಣಾಂತಿಕ ಹಲ್ಲೆ

    ಸೋಷಿಯಲ್ ಮೀಡಿಯಾಗಳು ಮೂಲಕ, ಅದರಲ್ಲೂ ಲಿಪ್ ಸಿಂಕ್ ಕಲಾವಿದನಾಗಿದ್ದ ಕಿಲಿ ಪೌಲ್ ಮೇಲೆ ಮಾರಣಾಂತಿಕ ದಾಳಿ ನಡೆದಿದೆ. ಆಫ್ರಿಕಾದ ತಾಂಜೇನಿಯಾದ ಕಂಟೆಂಟ್ ಕ್ರಿಯೇಟರ್ ಆಗಿರುವ ಕಿಲಿ ಪೌಲ್, ಹೆಚ್ಚೆಚ್ಚು ರೀಲ್ಸ್ ಮತ್ತು ಲಿಪ್ ಸಿಂಕ್ ಹಾಡುಗಳ ಮೂಲಕ ಫೇಮಸ್ ಆಗಿದ್ದವರು. ಕನ್ನಡದ ಕೆಜಿಎಫ್ 2 ಸಿನಿಮಾದ ಹಾಡಿಗೂ ಅವರು ಲಿಪ್ ಸಿಂಕ್ ಮಾಡಿದ್ದರು. ಕಚ್ಚಾ ಬಾದಾಮ್ ಸೇರಿದಂತೆ ಹಲವು ಗೀತೆಗಳಿಗೆ ತುಟಿಚಲನೆ ಕೂಡಿಸಿ ಫೇಮಸ್ ಆದವರು. ಇದನ್ನೂ ಓದಿ : ಪುನೀತ್‌ಗೆ ಅವಮಾನ: ತಿರುಪತಿ ತಿರುಮಲ ದೇವಸ್ಥಾನಕ್ಕೆ ಅಭಿಮಾನಿಗಳು ಮುತ್ತಿಗೆ

    ತಮ್ಮ ಮೇಲಿನ ದಾಳಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಕಿಲಿ ಪೌಲ್, ‘ಐದು ಜನ ದುಷ್ಕರ್ಮಿಗಳು ಏಕಾಏಕಿ ನನ್ನ ಮೇಲೆ ದಾಳಿ ಮಾಡಿದ್ದಾರೆ. ಕೈಗೆ ಪೆಟ್ಟಾಗಿದೆ. ದೇಹದ ವಿವಿಧ ಭಾಗಗಳಿಗೂ ಏಟಾಗಿದೆ. ಹಾಗಾಗಿ ನನಗಾಗಿ ಪ್ರಾರ್ಥಿಸಿ ಎಂದು ಅವರು ಕೇಳಿಕೊಂಡಿದ್ದಾರೆ. ಅಲ್ಲದೇ ಅವರು ಬಚಾವ್ ಆಗಿದ್ದು ಹೇಗೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್

    ಕಿಲಿ ಪೌಲ್ ಮತ್ತು ಅವರ ಸಹೋದರಿ ನೀಮಾ ಪೌಲ್ ಇಬ್ಬರೂ ಭಾರತದ ಅದೆಷ್ಟೋ ಹಾಡುಗಳಿಗೆ ಲಿಪ್ ಸಿಂಕ್ ಮಾಡಿದ್ದಾರೆ. ಭಾರತೀಯ ನಾನಾ ಭಾಷೆಗಳ ಹಾಡಿಗೆ ಅವರು ಸಂಭ್ರಮಿಸಿದ್ದಾರೆ. ಈ ಜೋಡಿಯ ಬಹುತೇಕ ಹಾಡುಗಳು ಫೇಮಸ್ ಕೂಡ ಆಗಿವೆ. ಅದರಲ್ಲೂ ಇನ್ಸ್ಟಾದಲ್ಲಿ ಅವರು ಮಿಲಿಯನ್ ಗಟ್ಟಲೇ ಫಾಲೋವರ್ಸ್ ಹೊಂದಿದ್ದಾರೆ. ಇದನ್ನೂ ಓದಿ : ವಾಮನ ತೆಕ್ಕೆಗೆ ತುಳುನಾಡ ಬೆಡಗಿ ರಚನಾ ರೈ

    ಇವರ ಜನಪ್ರಿಯತೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಮಾತನಾಡಿದ್ದರು. ಮನ್ ಕಿ ಬಾತ್ ನಲ್ಲಿ ಮಾತನಾಡಿದ್ದ ಪ್ರಧಾನಿಗಳು ಕನ್ನಡದ ಹಾಡಿಗೂ ಲಿಪ್ ಸಿಂಕ್ ಮಾಡುವಂತೆ ಕೇಳಿದ್ದರು. ಪ್ರಧಾನಿ ಮನವಿ ಮೇರೆಗೆ ಭಾರತೀಯ ಭಾಷೆಯ ಅನೇಕ ಗೀತೆಗಳನ್ನು ಹಾಡಿದ್ದರು.

    ತಮ್ಮ ಮೇಲಿನ ಹಲ್ಲೆಯ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಷ್ಟೇ ಅಲ್ಲ, ವಿಡಿಯೋ ಸಮೇತ ಶೇರ್ ಮಾಡಿದ್ದಾರೆ. ಅವರ ಬೆರಳಿಗೆ ಮತ್ತು ಇತರ ಕಡೆ ಗಾಯಗಳಾಗಿವೆ. ಅವರೇ ಹೇಳುವಂತೆ ಚಾಕುವಿನಿಂದ ಮತ್ತು ದೊಣ್ಣೆಯಿಂದಲೂ ಹಲ್ಲೆ ಮಾಡಲಾಗಿದೆಯಂತೆ. ಕೈಗೆ ಐದು ಹೊಲಿಗೆ ಹಾಕಲಾಗಿದೆ ಎಂದು ಬರೆದುಕೊಂಡಿದ್ದಾರೆ.