Tag: tanvi rao

  • ‘ಲಕ್ಷ್ಮಿ ಬಾರಮ್ಮ’ ನಟಿ ಜೊತೆ ‌’ಬಿಗ್‌ ಬಾಸ್‌’ ಕಿಶನ್ ಡ್ಯಾನ್ಸ್- ಬೆರಗಾದ ಫ್ಯಾನ್ಸ್‌

    ‘ಲಕ್ಷ್ಮಿ ಬಾರಮ್ಮ’ ನಟಿ ಜೊತೆ ‌’ಬಿಗ್‌ ಬಾಸ್‌’ ಕಿಶನ್ ಡ್ಯಾನ್ಸ್- ಬೆರಗಾದ ಫ್ಯಾನ್ಸ್‌

    ‘ಬಿಗ್ ಬಾಸ್’ (Bigg Boss Kannada 7) ಖ್ಯಾತಿಯ ಕಿಶನ್ ಬಿಳಗಲಿ (Kishen Bilagali) ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ನಟಿಯರೊಂದಿಗೆ ಡ್ಯಾನ್ಸ್ ಮಾಡಿರುವ ರೀಲ್ಸ್ ಅನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ನಟಿ ತನ್ವಿ ರಾವ್ (Tanvi Rao) ಜೊತೆ ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ.

    ‘ಲಕ್ಷ್ಮಿ ಬಾರಮ್ಮ’ಖ್ಯಾತಿಯ ಕೀರ್ತಿ ಅಲಿಯಾಸ್ ತನ್ವಿ ಜೊತೆ ಕಿಶನ್ ಅವರು ಸ್ಟೈಲೀಶ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ವಾಸುಕಿ ವೈಭವ ಹಾಡಿರುವ ‘ಭಾವಗಳ ಬೀಸಣಿಗೆ ಬೀಸೋ ಮಾಯಾವಿ ನೀನು’ ಹಾಡಿಗೆ ಇಬ್ಬರೂ ಹೆಜ್ಜೆ ಹಾಕಿದ್ದಾರೆ. ತನ್ವಿ ಭರತನಾಟ್ಯ ಮಾಡುವ ಮೂಲಕ ಹೆಜ್ಜೆ ಹಾಕ್ತಿದ್ರೆ, ಕಿಶನ್ ಸ್ಟೈಲೀಶ್‌ ಆಗಿ ಕುಣಿದಿದ್ದಾರೆ. ಇಬ್ಬರ ನೃತ್ಯಕ್ಕೆ ಫ್ಯಾನ್ಸ್ ಬೆರಗಾಗಿದ್ದಾರೆ. ರೀಲ್ಸ್‌ಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ. ಇದನ್ನೂ ಓದಿ:ವರುಣ್‌ ಧವನ್‌ ಜೊತೆ ಗಂಗಾರತಿ ಮಾಡಿದ ಪೂಜಾ ಹೆಗ್ಡೆ

     

    View this post on Instagram

     

    A post shared by Kishen Bilagali (@kishenbilagali)

    ಈಗಾಗಲೇ ರಾಗಿಣಿ, ರಾಧಿಕಾ ಚೇತನ್, ನಮ್ರತಾ ಗೌಡ, ಚೈತ್ರಾ ಆಚಾರ್, ಅನುಪಮಾ ಗೌಡ, ಶ್ರಾವ್ಯ, ಶ್ರುತಿ ಪ್ರಕಾಶ್ ಜೊತೆ ಕಿಶನ್‌ ಡ್ಯಾನ್ಸ್‌ ಮಾಡಿದ್ದಾರೆ. ಅವರ ರೀಲ್ಸ್‌ಗಳು ಮಿಲಿಯನ್‌ಗಟ್ಟಲೇ ವಿವ್ಸ್‌ ಪಡೆದಿದೆ.

    ಇನ್ನೂ ತನ್ವಿ ರಾವ್ ಪ್ರಸ್ತುತ ‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಲ್ಲಿ ನಾಯಕ ವೈಷ್ಣವ್ ಪ್ರೇಯಸಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತ ಕಿಶನ್ ಅವರು ‘ನಿನಗಾಗಿ’ (Ninagagi Serial) ಸೀರಿಯಲ್‌ನ ವಿಲನ್ ಆಗಿದ್ದಾರೆ.

  • ‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಲ್ಲಿ ಮಹಾ ತಿರುವು- ಕಾವೇರಿ ಅಟ್ಟಹಾಸಕ್ಕೆ ಬ್ರೇಕ್‌ ಹಾಕಲು ಬಂದ ಕೀರ್ತಿ

    ‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಲ್ಲಿ ಮಹಾ ತಿರುವು- ಕಾವೇರಿ ಅಟ್ಟಹಾಸಕ್ಕೆ ಬ್ರೇಕ್‌ ಹಾಕಲು ಬಂದ ಕೀರ್ತಿ

    ಕಿರುತೆರೆಯ ಜನಪ್ರಿಯ ‘ಲಕ್ಷ್ಮಿ ಬಾರಮ್ಮ’ (Lakshmi Baramma) ಸೀರಿಯಲ್ ಇದೀಗ ರೋಚಕ ತಿರುವಿನಲ್ಲಿದೆ. ತನ್ವಿ ರಾವ್ (Tanvi Rao) ಅಲಿಯಾಸ್ ಕೀರ್ತಿ (Keerthi) ಪಾತ್ರಧಾರಿ ಈ ಸೀರಿಯಲ್ ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ. ಕೀರ್ತಿ ಪಾತ್ರ ಸತ್ತಿದೆ ಎಂದು ನಂಬಿದ್ದ ವೀಕ್ಷಕರಿಗೆ ಇದೀಗ ಮತ್ತೆ ಈ ಪಾತ್ರ ರೀ ಎಂಟ್ರಿ ಕೊಟ್ಟಿರೋದು ನೋಡುಗರಲ್ಲಿ ಕುತೂಹಲ ಕೆರಳಿಸಿದೆ. ಕೀರ್ತಿ ಕಮ್‌ಬ್ಯಾಕ್ ಕುರಿತಾದ ಪ್ರೋಮೋ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ:ಸಲ್ಮಾನ್ ಖಾನ್ ಜೊತೆ ಈದ್, ಹೋಳಿ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ರಶ್ಮಿಕಾ

    ‘ಲಕ್ಷ್ಮಿ ಬಾರಮ್ಮ’ ಧಾರಾವಾಹಿಯಲ್ಲಿ ಕೀರ್ತಿ ಬದುಕಿರುವುದು ನಿಜ. ಅವಳು ಕಾವೇರಿ ಮುಂದೆ ಬಂದು ನಿಂತು ಮಾತಾಡುತ್ತಿರುವುದು ಕೂಡ ನಿಜ. ಕೀರ್ತಿ ಸತ್ತಿದ್ದಾಳಾ? ಅಥವಾ ಬದುಕಿದ್ದಾಳಾ? ಅವಳು ಬಂದಿರೋದು ನಿಜವಾ? ಅಥವಾ ಭ್ರಮೆಯಾ? ಎಂದು ತಿಳಿದುಕೊಳ್ಳಲಾಗದೆ ವೀಕ್ಷಕರು ಗೊಂದಲದಲ್ಲಿದ್ದರು. ಆದರೆ ಇದೀಗ ಉತ್ತರ ಸಿಕ್ಕಿದೆ. ನಾಯಕಿ ಲಕ್ಷ್ಮಿ ಪಾತ್ರಧಾರಿ ರಾವಣ ದಹನ ನಾಟಕ ಮಾಡುವ ಸಂದರ್ಭದಲ್ಲಿ ಸ್ವತಃ ಅವಳೇ ಸುಟ್ಟು ಸತ್ತು ಹೋಗಿದ್ದಾಳೆ ಎಂದು ಕಾವೇರಿ ನಂಬಿಕೊಂಡಿದ್ದಾಳೆ. ಎಲ್ಲರಿಗೂ ಹಾಗೇ ನಂಬಿಕೆ ಇದೆ. ಆದರೆ ಆ ಬಗ್ಗೆ ಇನ್ನು ಯಾವುದೇ ಕ್ಲ್ಯಾರಿಟಿ ಸಿಕ್ಕಿಲ್ಲ. ಆದರೆ ಈಗ ನಾಯಕ ವೈಷ್ಣವ್ ಲಕ್ಷ್ಮಿ ಬದುಕಿದ್ದಾಳೆ ಎಂದೇ ಅಂದುಕೊಂಡಿದ್ದಾನೆ.

    ಲಕ್ಷ್ಮಿಗಾಗಿ ಮನೆಯಲ್ಲಿ ಕಾರ್ಯಕ್ರಮ, ಆರತಿ ಎಲ್ಲ ತಯಾರಿ ನಡೆದಿದೆ. ಆದರೆ ಲಕ್ಷ್ಮಿ ಮಾತ್ರ ಮನೆಯಲ್ಲಿಲ್ಲ. ವೈಷ್ಣವ್ ತನ್ನ ಹೆಂಡತಿ ಮಹಾಲಕ್ಷ್ಮಿ ಬರುತ್ತಾಳೆ ಎಂದು ಕಾತರದಿಂದ ಕಾಯುತ್ತಿದ್ದಾನೆ. ಅವಳಿಗಾಗಿ ಸೀರೆಯನ್ನು ಕೂಡ ತಂದಿದ್ದಾನೆ. ಆದರೆ ಲಕ್ಷ್ಮಿ ಮಾತ್ರ ಎಲ್ಲೂ ಇಲ್ಲ. ಕೀರ್ತಿ ಆಗಾಗ ಕಾವೇರಿಗೆ ಕಾಣಿಸಿಕೊಳ್ಳುತ್ತಾ ಇದ್ದವಳು ಈಗ ಎಲ್ಲರಿಗೂ ಕೀರ್ತಿ ಕಾಣಿಸಿಕೊಂಡಿದ್ದಾಳೆ.

    ವೈಷ್ಣವ್ ಮನೆಯ ಎಲ್ಲರೂ ಕೀರ್ತಿಯನ್ನು ನೋಡಿ ಶಾಕ್ ಆಗಿದ್ದಾರೆ. ಸತ್ತು ಹೋದ ಕೀರ್ತಿ ಬದುಕಿ ಬಂದದ್ದು ಹೇಗೆ? ಎಂದು ಎಲ್ಲರಿಗೂ ಆಶ್ಚರ್ಯ ಆಗುತ್ತಿದೆ. ಆದರೆ ಕೀರ್ತಿ ಮಾತ್ರ ತನಗೆ ಏನೂ ಆಗಿಲ್ಲ ಎನ್ನುವ ರೀತಿಯಲ್ಲಿ ಮೈಗೆ ಒಂದೂ ಗಾಯದ ಕಲೆಯೂ ಇಲ್ಲದ ರೀತಿ ಮತ್ತೆ ಮರಳಿ ಬಂದಿದ್ದಾಳೆ. ಇಂದು ಈ ಮನೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಕೀರ್ತಿ ಹೇಳುತ್ತಿದ್ದಾಳೆ. ಖಳನಾಯಕಿ ಕಾವೇರಿ ಅಟ್ಟಹಾಸಕ್ಕೆ ಫುಲ್ ಸ್ಟಾಪ್ ಇಡಲು ಕೀರ್ತಿ ಎಂಟ್ರಿ ಕೊಟ್ಟಾಗಿದೆ. ಕೀರ್ತಿ ಆಗಮನ ಅಕ್ಷರಶಃ ಕಾವೇರಿಗೂ ಬೆಚ್ಚಿ ಬೀಳಿಸಿದೆ. ಇಷ್ಟಕ್ಕೂ ಕೀರ್ತಿ ಅನುಪಸ್ಥಿತಿಗೆ ಕಾರಣವಾಗಿರೋ ಸೂತ್ರಧಾರಿ ಈ ಕಾವೇರಿ. ಹಾಗಾಗಿ ಮುಂದೆ ಈ ಸೀರಿಯಲ್‌ನಲ್ಲಿ ಏನೆಲ್ಲಾ ತಿರುವು ಸಿಗಲಿದೆ ಎಂದು ಕಾದುನೋಡಬೇಕಿದೆ. ‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ ಪ್ರತಿದಿನ ರಾತ್ರಿ 7:30ಕ್ಕೆ ಪ್ರಸಾರವಾಗಲಿದೆ.

  • ‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಿಂದ ಹೊರನಡೆದಿರೋದು ನಿಜಾನಾ? ತನ್ವಿ ರಾವ್‌ ಸ್ಪಷ್ಟನೆ

    ‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಿಂದ ಹೊರನಡೆದಿರೋದು ನಿಜಾನಾ? ತನ್ವಿ ರಾವ್‌ ಸ್ಪಷ್ಟನೆ

    ಕಿರುತೆರೆಯ ಜನಪ್ರಿಯ ‘ಲಕ್ಷ್ಮಿ ಬಾರಮ್ಮ’ (Lakshmi Baramma) ಸೀರಿಯಲ್‌ನಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ಟ್ರಯೋ ಪ್ರೇಮಕಥೆ ಅದ್ಭುತವಾಗಿ ತೆರೆಯ ಮೇಲೆ ಮೋಡಿ ಮಾಡ್ತಿತ್ತು. ಹೀಗಿರುವಾಗ ಕೀರ್ತಿ ಪಾತ್ರಧಾರಿ ತನ್ವಿ ರಾವ್ (Tanvi Rao) ಅವರು ಈ ಸೀರಿಯಲ್‌ನಿಂದ ಹೊರನಡೆದಿದ್ದಾರೆ. ಲಕ್ಷ್ಮಿ ಬಾರಮ್ಮ ಧಾರಾವಾಹಿಗೆ ಗುಡ್ ಬೈ ಹೇಳಿದ್ದಾರೆ ಎನ್ನಲಾಗಿತ್ತು. ಈ ಸುದ್ದಿ ನಿಜಾನಾ? ಈಗ ನಟಿ ತನ್ವಿ ಅವರೇ ಸ್ಪಷ್ಟಪಡಿಸಿದ್ದಾರೆ.

    ವೈಷ್ಣವ್- ಕೀರ್ತಿ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಹೀರೋ ತಾಯಿ ಕಾವೇರಿಗೆ ಈ ಸಂಬಂಧ ಇಷ್ಟವಿರಲಿಲ್ಲ. ತನ್ನ ಮಗನಿಗೆ ಲಕ್ಷ್ಮಿ ಎಂಬ ಮಧ್ಯಮ ಹುಡುಗಿ ಜೊತೆ ಮದುವೆ ಮಾಡಿಸುತ್ತಾರೆ. ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ವೈಷ್ಣವ್‌ಗೋಸ್ಕರ ಕೀರ್ತಿ ಹಂಬಲಿಸುತ್ತಿದ್ದಾಳೆ. ಏನಾದರೂ ಮಾಡಿ ನನ್ನ ವೈಷ್‌ನನ್ನು ಪಡೆದುಕೊಳ್ಳಬೇಕು ಅಂತ ಕೀರ್ತಿ ಪ್ಲ್ಯಾನ್ ಮಾಡುತ್ತಿದ್ದಾಳೆ. ಹೀಗಿರುವಾಗ ಈ ನಡುವೆ ಕೀರ್ತಿ ಪಾತ್ರಕ್ಕೆ ಬಣ್ಣ ಹಚ್ಚಿರುವ ನಟಿ ತನ್ವಿ ರಾವ್ ಅವರು ಈ ಸೀರಿಯಲ್‌ನಿಂದ ಹೊರಬಂದಿದ್ದಾರೆ ಎಂಬ ಸುದ್ದಿಗೆ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಸ್ವೀಟಿ ಫ್ಯಾನ್ಸ್‌ಗೆ ಇದು ಬೇಸರದ ಸಂಗತಿ- ಅನುಷ್ಕಾ ಶೆಟ್ಟಿ ಬಗ್ಗೆ ಏನಿದು ಸುದ್ದಿ?

    ಕೀರ್ತಿ (Keerthi)  ಪಾತ್ರಧಾರಿ ತನ್ವಿ ಧಾರಾವಾಹಿಯಿಂದ ಹೊರ ಬಂದಿರೋದರ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ರಿಯಾಕ್ಟ್ ಮಾಡಿದ್ದಾರೆ. ನಾನು ಲಕ್ಷ್ಮಿ ಬಾರಮ್ಮ ಧಾರಾವಾಹಿಯನ್ನು ಬಿಡಲಿದ್ದೇನೆ ಎಂಬ ವದಂತಿ ಕೇಳ್ಪಟ್ಟೆ. ಇದು ಸತ್ಯವಲ್ಲ. ನನ್ನ ಬಗ್ಗೆ ಹೊಸ ಮಾಹಿತಿ ಇದ್ದರೆ ನನ್ನ ಸಾಮಾಜಿಕ ಜಾಲತಾಣ ಅಕೌಂಟ್‌ನಲ್ಲಿ ತಿಳಿಸುತ್ತೇನೆ ಎಂದು ನಟಿ ತಿಳಿಸಿದ್ದಾರೆ. ಈ ಮೂಲಕ ತಾನು ಕೀರ್ತಿ ಪಾತ್ರವನ್ನು, ಸೀರಿಯಲ್ ಅನ್ನು ಬಿಡುತ್ತಿಲ್ಲ ಈ ವದಂತಿ ಸುಳ್ಳು ಎಂದು ತನ್ವಿ ರಾಮ್ ಸ್ಪಷ್ಟನೆ ನೀಡಿದ್ದಾರೆ. ನಿಮ್ಮೆಲ್ಲರ ಪ್ರೀತಿ, ಕಾಳಜಿಗೆ ಧನ್ಯವಾದಗಳು. ಮುಂದೆಯೂ ಕೂಡ ನಮ್ಮ ಸೀರಿಯಲ್‌ ಅನ್ನ ಹೀಗೆ ಬೆಂಬಲಿಸಿ ಎಂದು ಕೇಳಿಕೊಂಡಿದ್ದಾರೆ.

    ‘ಜಮೀಲ’ ಎಂಬ ತಮಿಳು ಧಾರಾವಾಹಿಯಲ್ಲಿ ತನ್ವಿ ರಾವ್ ನಟಿಸಿದ್ದರು. ತನ್ವಿ ರಾವ್ ಅವರು ಮೊದಲು ಕನ್ನಡದಲ್ಲಿ ‘ಆಕೃತಿ’, ಆ ನಂತರ ‘ರಾಧೆ ಶ್ಯಾಮ’ ಧಾರಾವಾಹಿಯಲ್ಲಿ ನಟಿಸಿದ್ದರು. Gulmohar ಎನ್ನುವ ಸಿನಿಮಾದಲ್ಲಿ ಕೂಡ ತನ್ವಿ ರಾವ್ ಬಣ್ಣ ಹಚ್ಚಿದ್ದರು. ಈ ಚಿತ್ರದಲ್ಲಿ ಶರ್ಮಿಳಾ ಠಾಗೋರ್, ಮನೋಜ್ ಭಾಜ್‌ಪೇಯಿ ಮುಂತಾದವರು ನಟಿಸಿದ್ದರು. ಈ ಹಿಂದೆ ಮಾಧುರಿ ದೀಕ್ಷಿತ್ ಜೊತೆಗೆ ‘ಗುಲಾಬ್ ಗ್ಯಾಂಗ್’ (Gulab Gang) ಸಿನಿಮಾದಲ್ಲಿ ನಟಿಸಿದ್ದರು. ಚಿಕ್ಕ ವಯಸ್ಸಿನಿಂದಲೂ ಮಾಧುರಿ ದೀಕ್ಷಿತ್ (Madhuri Dixit) ಅವರ ಅಭಿಮಾನಿಯಾಗಿದ್ದ ತನ್ವಿ ರಾವ್‌ಗೆ ಈ ಸಿನಿಮಾ ತುಂಬಾನೇ ಸ್ಪೆಷಲ್.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಲಕ್ಷ್ಮಿ ಬಾರಮ್ಮ’ ಕೀರ್ತಿ ಪಾತ್ರಕ್ಕೆ ಗುಡ್ ಬೈ ಹೇಳಿದ ತನ್ವಿ ರಾವ್

    ‘ಲಕ್ಷ್ಮಿ ಬಾರಮ್ಮ’ ಕೀರ್ತಿ ಪಾತ್ರಕ್ಕೆ ಗುಡ್ ಬೈ ಹೇಳಿದ ತನ್ವಿ ರಾವ್

    ಕಿರುತೆರೆಯ ಜನಪ್ರಿಯ ‘ಲಕ್ಷ್ಮಿ ಬಾರಮ್ಮ’ (Lakshmi Baramma) ಸೀರಿಯಲ್‌ನಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ಟ್ರಯೋ ಪ್ರೇಮಕಥೆ ಅದ್ಭುತವಾಗಿ ತೆರೆಯ ಮೇಲೆ ಮೋಡಿ ಮಾಡ್ತಿತ್ತು. ಹೀಗಿರುವಾಗ ಸೀರಿಯಲ್‌ನಲ್ಲಿ ಬಿಗ್ ಟ್ವಿಸ್ಟ್‌ವೊಂದು ಸಿಕ್ಕಿದೆ. ಧಾರಾವಾಹಿಯಿಂದ ತನ್ವಿ ರಾವ್ (Tanvi Rao) ಔಟ್ ಆಗಿದ್ದಾರೆ.

    ವೈಷ್ಣವ್- ಕೀರ್ತಿ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಹೀರೋ ತಾಯಿ ಕಾವೇರಿಗೆ ಈ ಸಂಬಂಧ ಇಷ್ಟವಿರಲಿಲ್ಲ. ತನ್ನ ಮಗನಿಗೆ ಲಕ್ಷ್ಮಿ ಎಂಬ ಮಧ್ಯಮ ಹುಡುಗಿ ಜೊತೆ ಮದುವೆ ಮಾಡಿಸುತ್ತಾರೆ. ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ವೈಷ್ಣವ್‌ಗೋಸ್ಕರ ಕೀರ್ತಿ ಹಂಬಲಿಸುತ್ತಿದ್ದಾಳೆ. ಏನಾದರೂ ಮಾಡಿ ನನ್ನ ವೈಷ್‌ನನ್ನು ಪಡೆದುಕೊಳ್ಳಬೇಕು ಅಂತ ಕೀರ್ತಿ ಪ್ಲ್ಯಾನ್ ಮಾಡುತ್ತಿದ್ದಾಳೆ. ಹೀಗಿರುವಾಗ ಈ ನಡುವೆ ಕೀರ್ತಿ ಪಾತ್ರಕ್ಕೆ ಬಣ್ಣ ಹಚ್ಚಿರುವ ನಟಿ ತನ್ವಿ ರಾವ್ ಅವರು ಈ ಸೀರಿಯಲ್‌ನಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

    ಕೀರ್ತಿ ಪಾತ್ರಧಾರಿ ತನ್ವಿ ಹೊರ ಬಂದಿರೋದರ ಬಗ್ಗೆ ಸೀರಿಯಲ್ ಟೀಮ್ ಆಗಲಿ, ವಾಹಿನಿ ಆಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ. ನಟಿ ತನ್ವಿ ರಾವ್ ಕೂಡ ಈ ಬಗ್ಗೆ ಪ್ರಯಿಕ್ರಿಯೆ ನೀಡಿಲ್ಲ. ‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಿಂದ ತನ್ವಿ ಹೊರಬಂದಿದ್ದಾರೆ ಎಂಬುದು ಸದ್ಯದ ಮಾಹಿತಿ, ಇದು ನಿಜಾನಾ ಮುಂದಿನ ದಿನಗಳವರೆಗೂ ಕಾಯಬೇಕಿದೆ. ಇನ್ನೂ ನಟಿ ಹೊಸ ಸಿನಿಮಾದ ತಯಾರಿಯಲ್ಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಜೊತೆಗಿನ ಸೆಲ್ಫಿ ಶೇರ್‌, ಹಳೆಯ ನೆನಪು ಬಿಚ್ಚಿಟ್ಟ ರಶ್ಮಿಕಾ

    ‘ಜಮೀಲ’ ಎಂಬ ತಮಿಳು ಧಾರಾವಾಹಿಯಲ್ಲಿ ತನ್ವಿ ರಾವ್ ನಟಿಸಿದ್ದರು. ತನ್ವಿ ರಾವ್ ಅವರು ಮೊದಲು ಕನ್ನಡದಲ್ಲಿ ‘ಆಕೃತಿ’, ಆ ನಂತರ ‘ರಾಧೆ ಶ್ಯಾಮ’ ಧಾರಾವಾಹಿಯಲ್ಲಿ ನಟಿಸಿದ್ದರು. Gulmohar ಎನ್ನುವ ಸಿನಿಮಾದಲ್ಲಿ ಕೂಡ ತನ್ವಿ ರಾವ್ ಬಣ್ಣ ಹಚ್ಚಿದ್ದರು. ಈ ಚಿತ್ರದಲ್ಲಿ ಶರ್ಮಿಳಾ ಠಾಗೋರ್, ಮನೋಜ್ ಭಾಜ್‌ಪೇಯಿ ಮುಂತಾದವರು ನಟಿಸಿದ್ದರು. ಈ ಹಿಂದೆ ಮಾಧುರಿ ದೀಕ್ಷಿತ್ ಜೊತೆಗೆ ‘ಗುಲಾಬ್ ಗ್ಯಾಂಗ್’ ಸಿನಿಮಾದಲ್ಲಿ ನಟಿಸಿದ್ದರು. ಚಿಕ್ಕ ವಯಸ್ಸಿನಿಂದಲೂ ಮಾಧುರಿ ದೀಕ್ಷಿತ್ (Madhuri Dixit) ಅವರ ಅಭಿಮಾನಿಯಾಗಿದ್ದ ತನ್ವಿ ರಾವ್‌ಗೆ ಈ ಸಿನಿಮಾ ತುಂಬಾನೇ ಸ್ಪೆಷಲ್.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]