Tag: tanveersait

  • ನನಗೆ ಒಳ್ಳೆಯ ಸಾವು ಬರಲಿ ಎಂದಷ್ಟೇ ಪ್ರಾರ್ಥಿಸುತ್ತೇನೆ: ತನ್ವೀರ್ ಸೇಠ್

    ನನಗೆ ಒಳ್ಳೆಯ ಸಾವು ಬರಲಿ ಎಂದಷ್ಟೇ ಪ್ರಾರ್ಥಿಸುತ್ತೇನೆ: ತನ್ವೀರ್ ಸೇಠ್

    ಮೈಸೂರು: ನನಗೆ ಹೆಚ್ಚಿನ ಸೆಕ್ಯುರಿಟಿ ಬೇಕಿಲ್ಲ. ನನ್ನ ಜೊತೆ ನನ್ನ ಕಾರ್ಯಕರ್ತರೇ ಇದ್ದಾರೆ. ಸಾವನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಆದರೆ ನನಗೆ ಒಳ್ಳೆಯ ಸಾವು ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.

    ತಮ್ಮ ಮೇಲಿನ ಕೊಲೆ ಯತ್ನ ಪ್ರಕರಣದ ಬಗ್ಗೆ ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿ, ನನ್ನ ಮೇಲೆ ನಡೆದ ಹಲ್ಲೆ ಪ್ರಕರಣ ಅನಿರೀಕ್ಷಿತ. ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಅದರ ಪ್ರತಿಯನ್ನು ಪಡೆದುಕೊಂಡಿದ್ದೇನೆ. ತನಿಖೆ ಬಗ್ಗೆ ನನಗೆ ಯಾವುದೇ ತಕರಾರು ಇಲ್ಲ. ಪೊಲೀಸರು ತಮ್ಮ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿದವರು ಯಾರು ಎಂಬುದು ಗೊತ್ತಿಲ್ಲ. ಇದೆಲ್ಲವು ಸಾರ್ವಜನಿಕವಾಗಿ ಬಹಿರಂಗವಾಗಬೇಕು. ಇದನ್ನು ಪೊಲೀಸರು ಜನರಿಗೆ ತಿಳಿಸಬೇಕು ಎಂದರು.

    ಪಿಎಫ್‍ಐ, ಎಸ್‍ಡಿಪಿಐ ಬ್ಯಾನ್ ಮಾಡೋ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ತನ್ವೀರ್ ಸೇಠ್, ನನ್ನ ಮೇಲೆ ಯಾರು, ಏತಕ್ಕಾಗಿ ಹಲ್ಲೆ ಮಾಡಿದ್ದಾರೆ ಗೊತ್ತಿಲ್ಲ. ಅದನ್ನ ಗೊತ್ತಿಲ್ಲದೆ ನಾನು ಹೇಳಲು ಸಾಧ್ಯವಿಲ್ಲ. ಸದ್ಯ ಪ್ರಕರಣವನ್ನ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಮುಕ್ತಾಯದ ಬಳಿಕ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ ಎಂದು ತಿಳಿಸಿದರು.

    ನಾನು ಈಗ ಆರೋಗ್ಯವಾಗಿದ್ದೇನೆ. ಧ್ವನಿ ಪೆಟ್ಟಿಗೆ ಮಾತ್ರ ಹಂತಹಂತವಾಗಿ ಸರಿಯಾಗಲಿದೆ. ಧ್ವನಿ ಸರಿಯಾಗಲು ಥೆರಪಿ ಟ್ರೀಟ್‍ಮೆಂಟ್ ನಡೆಯುತ್ತಿದೆ. ಅದನ್ನು ಹೊರತುಪಡಿಸಿ ನಾನು ಫುಲ್ ಆರಾಮವಾಗಿದ್ದೇನೆ. ಮೊದಲಿಗೆ ಹೋಲಿಸಿದರೆ ಇದೀಗ ಫೈನ್ ಮತ್ತು ಧ್ವನಿ ಸುಧಾರಿಸಿದೆ. ಇನ್ಮುಂದೆ ಹಂತ ಹಂತವಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತೇನೆ. ಸಭೆ ಸಮಾರಂಭಗಳಲ್ಲೂ ಭಾಗಿಯಾಗುತ್ತೇನೆ ಎಂದರು.

  • 3 ಬಾರಿ ತನ್ವೀರ್ ಸೇಠ್ ಕೊಲೆಗೆ ಯತ್ನಿಸಿದ್ದ ಆರೋಪಿ

    3 ಬಾರಿ ತನ್ವೀರ್ ಸೇಠ್ ಕೊಲೆಗೆ ಯತ್ನಿಸಿದ್ದ ಆರೋಪಿ

    ಮೈಸೂರು: ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಕೊಲೆಗೆ ಯತ್ನಿಸಿ ಪೊಲೀಸರ ಅತಿಥಿಯಾದ ಆರೋಪಿ ಫರಾನ್ ಪಾಷಾ ಈ ಹಿಂದೆ ಮೂರು ಬಾರಿ ಶಾಸಕರ ಕೊಲೆಗೆ ಯತ್ನಿಸಿ ಫೇಲ್ ಆಗಿದ್ದನು.

    ಮೈಸೂರಿನ ಮಿಲಾದ್ ಪಾರ್ಕ್ ಬಳಿ ಹತ್ಯೆಗೆ ಪ್ಲಾನ್ ಮಾಡಿ ಫೇಲ್ ಆಗಿದ್ದನು. ಮುಸ್ಲಿಮರೇ ಹೆಚ್ಚು ಇರುವ ಸ್ಥಳದಲ್ಲಿ ತನ್ವೀರ್ ಕೊಲೆಗೆ ಸ್ಕೇಚ್ ಹಾಕಲಾಗಿತ್ತು. ಫರಾನ್ ಪಾಷಗೆ ಅಬೀದ್ ಪಾಷಾನಿಂದ ಟ್ರೈನಿಂಗ್ ನೀಡಿರುವ ವಿಚಾರದ ಕುರಿತು ತೀವ್ರ ವಿಚಾರಣೆ ನಡೆಸಿದ ಬಳಿಕ ಆರೋಪಿ ಫರಾನ್ ಸತ್ಯ ಬಾಯಿಬಿಟ್ಟಿದ್ದಾನೆ.

    ನಡೆದಿದ್ದೇನು?
    ಭಾನುವಾರ ರಾತ್ರಿ ಮೈಸೂರಿನ ತನ್ವೀರ್ ಸೇಠ್ ಬನ್ನಿ ಮಂಟಪ ಸಮೀಪದ ಪಾರ್ಟಿ ಹಾಲ್ ಗೆ ತಮ್ಮ ಆತ್ಮೀಯ ಮಗನ ಮದುವೆಯ ಬೀಗರೂಟಕ್ಕೆ ಆಗಮಿಸಿದ್ದರು. ಈ ವೇಳೆ ಯುವಕ ಫರಾನ್ (24) ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದನು. ಆದರೆ ಸ್ಥಳದಿಂದ ಓಡಿ ಹೋಗುತ್ತಿದ್ದಂತೆಯೇ ಫರಾನ್ ಮ್ಯಾಟ್ ಎಡವಿ ಬಿದ್ದಿದ್ದು, ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಇತ್ತ ಹಲ್ಲೆಯಿಂದ ತೀವ್ರ ರಕ್ತಸ್ರಾವವಾಗಿ ಬಳಲುತ್ತಿದ್ದ ಸೇಠ್ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ತನ್ವೀರ್ ಸೇಠ್ ಕೊಲೆಗೆ ಯತ್ನ – ರಾತ್ರೋರಾತ್ರಿಯೇ ಆರೋಪಿ ಕುಟುಂಬ ಪರಾರಿ

    ಕೊಲೆಗೆ ತಂಡ ರಚನೆ:
    ಮೈಸೂರಲ್ಲಿ ಮಹಾ ಮರ್ಡರ್ ಗೆ ಬಿಗ್ ಸ್ಕೆಚ್ ಹಾಕಲಾಗಿದೆ. ರಾಜಕಾರಣಿಗಳು, ಧರ್ಮಗುರುಗಳು, ಗಣ್ಯವ್ಯಕ್ತಿಗಳೇ ಟಾರ್ಗೆಟ್ ಆಗಿದೆ. 30 ತಂಡಗಳು ಸಕ್ರಿಯವಾಗಿ ಕೆಲಸಮಾಡುತ್ತಿವೆ. ಒಂದು ತಂಡದಲ್ಲಿ 15 ಜನರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ಹಂತದಲ್ಲಿ ಪ್ರಮುಖ ವ್ಯಕ್ತಿಗಳ ಚಲನವಲನ ಅದರ ಪರಿಣಾಮಗಳನ್ನ ಸಂಘಟನೆ ಮುಖಂಡರಿಗೆ ಸದಸ್ಯರು ತಿಳಿಸುತ್ತಿದ್ದರು.

    ತನ್ವೀರ್ ಹತ್ಯೆ ಯತ್ನ ಪ್ರಕರಣವೂ ಇದೇ ರೀತಿ ವಾಚ್ ಮಾಡಿಯೇ ಮಾಡಲಾಗಿತ್ತು. ರಾಜಕೀಯವಾಗಿ ಬೇರೆ ರೀತಿ ಮುಗಿಸಲು ಸಾಧ್ಯವಾಗದಿದ್ದಾಗ ಕೊಲೆ ಯತ್ನ ಮಾಡಲಾಗಿದೆ. ರಾಜು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಬೀದ್ ಪಾಷಾ ತನ್ವೀರ್ ಕೊಲೆ ಯತ್ನ ಪ್ರಕರಣದ ಮಾಸ್ಟರ್ ಮೈಂಡ್ ಎಂಬುದು ತನಿಖೆಯಿಂದ ಖಚಿತವಾಗಿದೆ. ಈಗಾಗಲೇ ಪ್ರಕರಣದ 5 ಆರೋಪಿಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಆರೋಪಿಗಳ ಭಾಗಿ ಖಚಿತವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ತನ್ವೀರ್ ಸೇಠ್ ಹತ್ಯೆ ಯತ್ನಕ್ಕೆ ಬಾಲಿವುಡ್ ಸಿನಿಮಾ ಪ್ರೇರಣೆ

  • ಮೈಸೂರಲ್ಲಿ ಮಹಾ ಮರ್ಡರ್‌ಗೆ ಸ್ಕೆಚ್- ರಾಜಕಾರಣಿಗಳು, ಗಣ್ಯವ್ಯಕ್ತಿಗಳೇ ಟಾರ್ಗೆಟ್

    ಮೈಸೂರಲ್ಲಿ ಮಹಾ ಮರ್ಡರ್‌ಗೆ ಸ್ಕೆಚ್- ರಾಜಕಾರಣಿಗಳು, ಗಣ್ಯವ್ಯಕ್ತಿಗಳೇ ಟಾರ್ಗೆಟ್

    ಮೈಸೂರು: ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹತ್ಯೆ ಯತ್ನಿಸಿದ್ದ ಆರೋಪಿಯ ತನಿಖೆಯ ನಂತರ ಆತಂಕಕಾರಿ ಮಾಹಿತಿಯೊಂದು ಬಯಲಾಗಿದೆ.

    ಹೌದು. ಮೈಸೂರಲ್ಲಿ ಮಹಾ ಮರ್ಡರ್‌ ಗೆ ಬಿಗ್ ಸ್ಕೆಚ್ ಹಾಕಲಾಗಿದೆ. ರಾಜಕಾರಣಿಗಳು, ಧರ್ಮಗುರುಗಳು, ಗಣ್ಯವ್ಯಕ್ತಿಗಳೇ ಟಾರ್ಗೆಟ್ ಆಗಿದೆ. ಈಗಾಗಲೇ  30 ತಂಡಗಳು ಸಕ್ರಿಯವಾಗಿ ಕೆಲಸಮಾಡುತ್ತಿವೆ. ಒಂದು ತಂಡದಲ್ಲಿ 15 ಜನರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕಾರಣಿಗಳು, ಧರ್ಮಗುರುಗಳು, ಗಣ್ಯವ್ಯಕ್ತಿಗಳು, ಹಿಂದೂ ಸಂಘಟನೆ ಮುಖಂಡರುಗಳು ಹೀಗೆ ಎಲ್ಲರನ್ನೂ ವಾಚ್ ಮಾಡಲು ಪ್ರತ್ಯೇಕ ತಂಡಗಳ ರಚನೆ ಮಾಡಲಾಗಿದೆ.

    ಪ್ರತಿ ಹಂತದಲ್ಲಿ ಪ್ರಮುಖ ವ್ಯಕ್ತಿಗಳ ಚಲನವಲನ ಅದರ ಪರಿಣಾಮಗಳನ್ನ ಸಂಘಟನೆ ಮುಖಂಡರಿಗೆ ಸದಸ್ಯರು ತಿಳಿಸುತ್ತಿದ್ದರು. ತನ್ವೀರ್ ಹತ್ಯೆ ಯತ್ನ ಪ್ರಕರಣವೂ ಇದೇ ರೀತಿ ವಾಚ್ ಮಾಡಿಯೇ ಮಾಡಲಾಗಿತ್ತು. ರಾಜಕೀಯವಾಗಿ ಬೇರೆ ರೀತಿ ಮುಗಿಸಲು ಸಾಧ್ಯವಾಗದಿದ್ದಾಗ ಕೊಲೆ ಯತ್ನ ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ತನ್ವೀರ್ ಸೇಠ್ ಹತ್ಯೆ ಯತ್ನಕ್ಕೆ ಬಾಲಿವುಡ್ ಸಿನಿಮಾ ಪ್ರೇರಣೆ

    ರಾಜು ಹತ್ಯೆ ಪ್ರಕರಣದ ಪ್ರಮುಖ ಆರೋಪಿಯೇ ತನ್ವೀರ್ ಕೊಲೆ ಯತ್ನ ಪ್ರಕರಣದ ಮಾಸ್ಟರ್ ಮೈಂಡ್ ಎಂಬುದು ತನಿಖೆಯಿಂದ ಖಚಿತವಾಗಿದೆ. ಅಬೀದ್ ಪಾಷಾ, ರಾಜು ಕೊಲೆಯ ಪ್ರಮುಖ ಆರೋಪಿಯಾಗಿದ್ದಾನೆ. ಈಗಾಗಲೇ ಪ್ರಕರಣದ 5 ಆರೋಪಿಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಆರೋಪಿಗಳ ಭಾಗಿ ಖಚಿತವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನೆಯ ದಿನ ಕೃತ್ಯಕ್ಕೆ ಬಳಸಿದ್ದ ಒಂದು ಬೈಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ತನ್ವೀರ್ ಸೇಠ್ ಕೊಲೆಗೆ ಯತ್ನ – ರಾತ್ರೋರಾತ್ರಿಯೇ ಆರೋಪಿ ಕುಟುಂಬ ಪರಾರಿ