Tag: Tanveer Sait

  • ಚೀನಾ ನ್ಯೂ ಇಯರ್ ಮಾಡಲು ಮುಂದಾಗಿದ್ದು ತಪ್ಪಲ್ಲ- ಡೆಲ್ಲಿ ಪಬ್ಲಿಕ್ ಸ್ಕೂಲ್ ಪರ ಸಚಿವ ತನ್ವೀರ್ ಸೇಠ್ ಬ್ಯಾಟಿಂಗ್

    ಚೀನಾ ನ್ಯೂ ಇಯರ್ ಮಾಡಲು ಮುಂದಾಗಿದ್ದು ತಪ್ಪಲ್ಲ- ಡೆಲ್ಲಿ ಪಬ್ಲಿಕ್ ಸ್ಕೂಲ್ ಪರ ಸಚಿವ ತನ್ವೀರ್ ಸೇಠ್ ಬ್ಯಾಟಿಂಗ್

    ಬೆಂಗಳೂರು: ಚೀನಾ ನ್ಯೂ ಇಯರ್ ಆಚರಣೆಗೆ ಮುಂದಾಗಿದ್ದು ತಪ್ಪಲ್ಲ ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳುವ ಮೂಲಕ ನಗರದ ಡೆಲ್ಲಿ ಪಬ್ಲಿಕ್ ಸ್ಕೂಲ್ ಪರ ಬ್ಯಾಟಿಂಗ್ ಮಾಡಿದ್ದಾರೆ.

    ಡೆಲ್ಲಿ ಪಬ್ಲಿಕ್ ಸ್ಕೂಲ್ ನಲ್ಲಿ ಚೀನಾ ದೇಶದ ನ್ಯೂ ಇಯರ್ ಆಚರಣೆ ಮಾಡುವುದು ತಪ್ಪಲ್ಲ. ಅದು ದೇಶ ವಿರೋಧಿ ನಡೆ ಅಲ್ಲ. ದೇಶಗಳು ಯಾವ ರೀತಿ ನ್ಯೂ ಇಯರ್ ಆಚರಿಸುತ್ತವೆ ಅನ್ನೋದು ತೋರಿಸೊ ಉದ್ದೇಶ ಅಷ್ಟೆ ಅಂತ ಅವರು ಹೇಳಿಕೆ ನೀಡಿದ್ದರು.

    ಆದ್ರೆ ಈ ಬಗ್ಗೆ ಪ್ರತಿಕ್ರಿಯೆ ನಿಡಲು ಸಚಿವರು ಹಿಂದೇಟು ಹಾಕುತ್ತಿದ್ದು, ಇದರಲ್ಲಿ ಶಾಲೆಯದ್ದು ಏನೂ ತಪ್ಪಿಲ್ಲ ಅನ್ನೊ ಶಾಲೆಯ ಹೇಳಿಕೆಯನ್ನ ಪ್ರತಿಕ್ರಿಯೆ ರೂಪದಲ್ಲಿ ಕಳುಹಿಸಿದ್ದಾರೆ.

    ಶುಕ್ರವಾರ ಚೀನಾ ನ್ಯೂ ಇಯರ್ ಸೆಲೆಬ್ರೇಷನ್‍ಗಾಗಿ ಮಕ್ಕಳಿಗೆ ಚೀನಾ ಡ್ರೆಸ್ ಹಾಕಿಕೊಂಡು ಬರಬೇಕು. ಅಷ್ಟೇ ಅಲ್ಲದೇ ಊಟಕ್ಕೆ ನೂಡಲ್ಸ್, ಫ್ರೈಡ್ ರೈಸ್, ಮಂಚೂರಿಯಂತಹ ಚೈನೀಸ್ ಫುಡ್ ತರಬೇಕು ಎಂದು ಆಗಸ್ಟ್ 3ನೇ ತಾರೀಕಿನಂದು ಡೆಲ್ಲಿ ಪಬ್ಲಿಕ್ ಸ್ಕೂಲ್ ಸುತ್ತೋಲೆ ಹೊರಡಿಸಿತ್ತು.

    ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಉತ್ತರ ವಲಯ 4 ಬಿಇಓ ನಾರಾಯಣ, ಡೆಲ್ಲಿ ಪಬ್ಲಿಕ್ ಸ್ಕೂಲ್ ನಲ್ಲಿ ನಾಳಿನ ಚೀನಾ ನ್ಯೂ ಇಯರ್ ಕ್ರಾರ್ಯಕ್ರಮವನ್ನ ರದ್ದು ಮಾಡಿಸ್ತೀವಿ. ಕಾರ್ಯಕ್ರಮ ನಡೆಯುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಇದಕ್ಕೆ ನಮ್ಮ ಅನುಮತಿ ಪಡೆದಿಲ್ಲ. ಮಾಧ್ಯಮಗಳಲ್ಲಿ ನೋಡಿ ವಿಷಯ ಗೊತ್ತಾಗಿದೆ. ಶಾಲೆ ಹೊರಡಿಸಿರುವ ಸುತ್ತೋಲೆ ಗಮನಿಸಿದ್ದೇನೆ. ಕೂಡಲೇ ಕಾರ್ಯಕ್ರಮವನ್ನು ರದ್ದು ಮಾಡಿಸ್ತೀನಿ ಅಂತ ಹೇಳಿದ್ದರು.

  • ವೀರಶೈವ, ಲಿಂಗಾಯತ ಧರ್ಮದ ಪರವಿರೋಧ ಮಾತನಾಡುವುದು ಶೋಭೆಯಲ್ಲ: ತನ್ವೀರ್ ಸೇಠ್

    ವೀರಶೈವ, ಲಿಂಗಾಯತ ಧರ್ಮದ ಪರವಿರೋಧ ಮಾತನಾಡುವುದು ಶೋಭೆಯಲ್ಲ: ತನ್ವೀರ್ ಸೇಠ್

    ರಾಯಚೂರು: ಲಿಂಗಾಯತ ಮತ್ತು ವೀರಶೈವ ಧರ್ಮದ ಬಗ್ಗೆ ಪರವಿರೋಧ ಮಾತನಾಡುವುದು ಯಾರಿಗೂ ಶೋಭೆ ತರುವುದಿಲ್ಲ ಅಂತ ಪ್ರಾಥಮಿಕ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.

    ರಾಯಚೂರಿನಲ್ಲಿ ಮಾತನಾಡಿದ ತನ್ವೀರ್ ಸೇಠ್ ಧರ್ಮಗಳ ವಿಚಾರದಲ್ಲಿ ಸಂವಿಧಾನ ಸ್ಪಷ್ಟವಾಗಿದೆ. ಅದೇ ಸಂವಿಧಾನದಲ್ಲಿ ಇನ್ನೊಂದು ಧರ್ಮವನ್ನ ಗೌರವಿಸಬೇಕು ಅನ್ನೋದು ಇದೆ ಎಂದರು.

    ವೀರಶೈವ ಧರ್ಮಕ್ಕೆ ದೊಡ್ಡ ಇತಿಹಾಸವಿದೆ. ಬಸವಣ್ಣನವರ ತತ್ವ ಸಿದ್ದಾಂತ ನಾಡಿನ ಉದ್ದಕ್ಕೂ ಕೆಲಸ ಮಾಡಬೇಕಾದ್ರೆ ನಮ್ಮ ವರ್ತನೆ ಸಮಾಜದಲ್ಲಿ ಹೇಗಿರಬೇಕು ಅನ್ನೋದನ್ನ ಮೊದಲು ನೋಡಿಕೊಳ್ಳಬೇಕಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಯಾರು ಯಾರ ಕಡೆ ಇದ್ದಾರೆ ಅನ್ನೋದನ್ನ ಹೇಳಲು ಆಗಲ್ಲ. ಧರ್ಮದ ವಿಚಾರದಲ್ಲಿ ಎಲ್ಲರೂ ಒಟ್ಟಾಗಿ ತೀರ್ಮಾನ ತೆಗೆದುಕೊಳ್ಳಬೇಕಿದೆ ಅಂತ ತನ್ವೀರ್ ಸೇಠ್ ತಿಳಿಸಿದರು.

    ಇನ್ನೂ ಗುಜರಾತ್ ಕಾಂಗ್ರೆಸ್ ಶಾಸಕರ ಪ್ರವಾಸದ ಬಗ್ಗೆ ಮಾತನಾಡಿ ಇವತ್ತಿನ ಚುನಾವಣಾ ವ್ಯವಸ್ಥೆ ನಮ್ಮ ಮತದಾರರನ್ನ ನಾವೇ ಕಾಪಾಡಲು ಸಾಧ್ಯವಿಲ್ಲದಷ್ಟು ಹಾಳಾಗಿದೆ. ಬಿಜೆಪಿಯ ಬೆದರಿಕೆ ರಾಜಕಾರಣ ಎಲ್ಲರಿಗೂ ಗೊತ್ತಿರುವುದೇ, ಜನರ ರಕ್ಷಣೆಗಿಂತ ಅಧಿಕಾರ ಪಡೆಯಲು ತಂತ್ರಗಾರಿಕೆ ನಡೆಯುತ್ತಿದೆ. ಚುನಾಯಿತ ಪ್ರತಿನಿಧಿಗಳು ಮಾರಾಟವಾಗುವುದನ್ನ ನೋಡುತ್ತಿದ್ದೇವೆ ಮತ ಚಲಾಯಿಸುವ ಹಕ್ಕು ನಮ್ಮದಾಗಿದ್ರೂ ಬೇರೆ ರೀತಿಯಲ್ಲಿ ಒತ್ತಡ ತರುತ್ತಿರುವುದರಿಂದ ಗುಜರಾತ್ ಶಾಸಕರು ನಮ್ಮ ರಾಜ್ಯಕ್ಕೆ ಪ್ರವಾಸಕ್ಕೆ ಬಂದಿದ್ದಾರೆ ಅವರು ಹೇಳಿದರು.

     

  • ಒಲಿಂಪಿಕ್ಸ್ ನಲ್ಲಿ ಪಿವಿ ಸಿಂಧು ಗೆದ್ದಿದ್ದು ಕಂಚಿನ ಪದಕವಂತೆ!- ರಾಜ್ಯ ಪಠ್ಯಪುಸ್ತಕಗಳಲ್ಲಿ ತಪ್ಪುಗಳ ಸರಮಾಲೆ

    ಒಲಿಂಪಿಕ್ಸ್ ನಲ್ಲಿ ಪಿವಿ ಸಿಂಧು ಗೆದ್ದಿದ್ದು ಕಂಚಿನ ಪದಕವಂತೆ!- ರಾಜ್ಯ ಪಠ್ಯಪುಸ್ತಕಗಳಲ್ಲಿ ತಪ್ಪುಗಳ ಸರಮಾಲೆ

    – 144 ಕೋಟಿ ರೂ. ನೀರಲ್ಲಿ ಹೋಮ

    ಬೆಂಗಳೂರು: ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಜಾಗದಲ್ಲಿ ಸೈನಾ ನೆಹ್ವಾಲ್, ಷಟ್ಲರ್ ಸೈನಾ ನೆಹ್ವಾಲ್ ಜಾಗದಲ್ಲಿ ಸಾನಿಯಾ ಮಿರ್ಜಾ. ಷಟ್ಲರ್ ಪಿ.ವಿ.ಸಿಂಧು ಒಲಿಂಪಿಕ್ಸ್‍ನಲ್ಲಿ ಗೆದ್ದಿದ್ದು ಕಂಚಿನ ಪದಕವಂತೆ. ಇವು ಶಾಲಾ ಪಠ್ಯದಲ್ಲಿ ಕಂಡು ಬಂದ ತಪ್ಪುಗಳು. ಇವು ಸ್ಯಾಂಪಲ್ ಅಷ್ಟೇ. ಹುಡುಕುತ್ತಾ ಹೋದ್ರೆ ನೂರೆಂಟು ತಪ್ಪುಗಳು ಕಂಡುಬರುತ್ತೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮಕ್ಕಳು ಕಲಿಯುತ್ತಿರುವುದು ಇದನ್ನೇ.

    ಹೌದು. ಸರ್ಕಾರ 144 ಕೋಟಿ ರೂ. ಖರ್ಚು ಮಾಡಿ 6 ಕೋಟಿ ಪಠ್ಯಪುಸ್ತಕ ಪ್ರಿಂಟ್ ಮಾಡಿದೆ. ಬರೋಬ್ಬರಿ 2 ವರ್ಷ, 185 ಪರಿಣಿತರು, 45 ಲಕ್ಷ ರೂ. ಖರ್ಚು- ಇಷ್ಟೆಲ್ಲಾ ಟೈಂ ಕೊಟ್ಟು ಇಷ್ಟೆಲ್ಲಾ ಮ್ಯಾನ್ ಪವರ್ ಕೊಟ್ಟು ಇಷ್ಟೆಲ್ಲಾ ಖರ್ಚು ಮಾಡಿಯೂ ಶಾಲಾ ಪಠ್ಯಪುಸ್ತಕದಲ್ಲಿ ತಪ್ಪುಗಳ ಸರಮಾಲೆಯೇ ಇದೆ. ನೂರೆಂಟು ತಪ್ಪುಗಳ ಜೊತೆಗೆ ಕಾಗದದ ಗುಣಮಟ್ಟವೂ ಕಳಪೆಯಾಗಿದೆ.

    ಪಠ್ಯ ಪುಸ್ತಕದಲ್ಲಿ ಇರುವ ಲೋಪದೋಷಗಳು
    1. ಒಲಿಂಪಿಕ್ಸ್ ನಲ್ಲಿ ಪಿ.ವಿ ಸಿಂಧು ಗೆದ್ದಿರೋದು ಬೆಳ್ಳಿ ಪದಕ, ಆದ್ರೆ ಪುಸ್ತಕದಲ್ಲಿ ಕಂಚಿನ ಪದಕ ಅಂತ ತಪ್ಪು ಮಾಹಿತಿ ನೀಡಲಾಗಿದೆ.
    2. ಇಂಗ್ಲಿಷ್ ವಿಷಯದಲ್ಲಿ ಪಠ್ಯಗಳು ಇರೋದೆ 24, ರಾಷ್ಟ್ರಗೀತೆಯ ಬಗ್ಗೆ ಮಾಹಿತಿ ನೀಡಿರೋ ಪಠ್ಯವನ್ನ 25ನೇ ಪಠ್ಯ ಅಂತ ಮುದ್ರಿಸಲಾಗಿದೆ.
    4. ಪಠ್ಯಪುಸ್ತಕದ ಹಾಳೆಯ ಗುಣಮಟ್ಟ ಕಳಪೆ ಮಟ್ಟದ್ದು.
    5. ಕನ್ನಡ ಪಠ್ಯಪುಸ್ತಕದಲ್ಲಿ ಒಂದೇ ಅಧ್ಯಾಯದ ಹೆಸರು ಎರಡು ಬಾರಿ ಮುದ್ರಣವಾಗಿದೆ.
    6. ಗಣಿತ ಪಠ್ಯ ಪುಸ್ತಕದಲ್ಲಿ ಸಮಸ್ಯೆಗಳಿವೆ, ಆದರೆ ಅದಕ್ಕೆ ಉತ್ತರಗಳು ಸರಿ ಇಲ್ಲ.
    7. ಪಠ್ಯ ಪುಸ್ತಕದಲ್ಲಿ ವ್ಯಾಕರಣಗಳು ತಪ್ಪು, ಇಂಗ್ಲಿಷ್‍ನ ಪಠ್ಯದಲ್ಲಿ ಗ್ರಾಮರ್‍ಗಳು ತಪ್ಪಾಗಿದೆ.
    8. ಅಭ್ಯಾಸ ಚಿತ್ರಗಳನ್ನ ಪಠ್ಯದಲ್ಲಿ ಉಲ್ಟಾ ಪಲ್ಟಾ ನೀಡಲಾಗಿದೆ.
    9. ಕೆಲ ಪುಸ್ತಕದಲ್ಲಿ ಪೇಜ್ ಮುದ್ರಣವಾಗಿಲ್ಲ. ಖಾಲಿ ಖಾಲಿ ಹಾಗೇ ಇದೆ.

    ರಾಜ್ಯ ಪಠ್ಯ ಪುಸ್ತಕದಲ್ಲಿ ಲೋಪದೋಷವಾಗಿರುವ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಕಾರ್ಯದರ್ಶಿ ಶಶಿಕುಮಾರ್ ಮಾತನಾಡಿದ್ದು, ಲೋಪದೋಷವಾಗಿರೋ ಪಠ್ಯ ಪುಸ್ತಕವನ್ನ ಕೂಡಲೇ ವಾಪಸ್ ಪಡೆಯಬೇಕು ಎಂದು ಸರ್ಕಾರ ಹಾಗೂ ಶಿಕ್ಷಣ ಇಲಾಖೆಗೆ ಆಗ್ರಹಿಸಿದ್ದಾರೆ. ಪರಿಷ್ಕೃತ ಪಠ್ಯ ಪುಸ್ತಕದಲ್ಲಿ ಮುದ್ರಣ ಲೋಪವಿದ್ದು, ತಪ್ಪು ಮಾಹಿತಿಗಳನ್ನ ನೀಡಲಾಗಿದೆ. ಇದರಿಂದ ಮಕ್ಕಳ ಭವಿಷ್ಯ ಹಾಳಾಗುತ್ತೆ. ಕೂಡಲೇ ಲೋಪವಾಗಿರೋ ಪುಸ್ತಕಗಳನ್ನ ವಾಪಸ್ ಪಡೆದು ಸರಿಯಾದ ಪುಸ್ತಕ ನೀಡಬೇಕು. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ರಾಜೀನಾಮೆಯನ್ನ ಕೂಡಲೇ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

    ಈ ಬಗ್ಗೆ ಪರಿಷತ್ ಸದಸ್ಯ ಅರುಣ್ ಶಹಾಪುರ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಪಠ್ಯ ಪುಸ್ತಕ ಲೋಪದೋಷಕ್ಕೆ ಸಿಎಂ ಸಿದ್ದರಾಮಯ್ಯ ನೇರ ಹೊಣೆ. ಪರಿಷ್ಕರಣ ಸಮಿತಿಯ ಸಭೆಯಲ್ಲಿ ಲೋಪದೋಷಗಳು ಇವೆ ಅಂತ ಸ್ವತಃ ಶಿಕ್ಷಣ ಸಚಿವರು, ಅಧಿಕಾರಿಗಳು ಹೇಳಿದ್ರು. ಹೀಗಿದ್ರೂ ಸಿಎಂ ಸಿದ್ದರಾಮಯ್ಯ ಮುದ್ರಣ ಮಾಡುವಂತೆ ಸೂಚಿಸಿದ್ರು. ಹೀಗಾಗಿ ಇಷ್ಟು ದೊಡ್ಡ ಲೋಪಗಳು ಆಗಿದೆ. ಸರ್ಕಾರ ಮಕ್ಕಳ ಭವಿಷ್ಯದ ಜೊತೆ ಆಟವಾಡುತ್ತಿದೆ. ಈ ಕುರಿತು ಅಧ್ಯಾಯನ ಪೂರ್ವಕವಾಗಿ ಯಾವ ಕ್ರಮ ತೆಗೆದುಕೊಳ್ಳಬೇಕು ಅಂತ ನಿರ್ಧಾರ ಮಾಡ್ತೀವಿ ಅಂದ್ರು.

    ಶಿಕ್ಷಣ ಸಚಿವ ತನ್ವೀರ್ ಸೇಠ್ ಈ ಬಗ್ಗೆ ಸಮರ್ಥನೆ ನೀಡಿದ್ದು, ಪಠ್ಯ ಪುಸ್ತಕದಲ್ಲಿ ದೊಡ್ಡಮಟ್ಟದ ಲೋಪ ಆಗಿಲ್ಲ. ಪ್ರಿಂಟಿಂಗ್ ಮಿಸ್ಟೇಕ್ ಆಗಿರೋದು ಲೋಪ ದೋಷಕ್ಕೆ ಕಾರಣ. ಈಗಾಗಲೇ ಲೋಪ ದೋಷ ಕುರಿತು ವರದಿ ನೀಡಲು ಸೂಚಿಸಿದ್ದೇನೆ. ಕೆಲಸದ ಒತ್ತಡದಿಂದ ಕೆಲ ಪ್ರಮಾಣದ ತಪ್ಪು ಆಗಿರಬಹುದು. ಲೋಪವಾಗಿರುವ ಪಠ್ಯ ಪುಸ್ತಕ ಸರಿ ಮಾಡಿ ಹೊಸ ಪುಸ್ತಕ ನೀಡುತ್ತೇವೆ. ಪಠ್ಯ ಪುಸ್ತಕದಲ್ಲಿ ಆದ ಲೋಪ ದೋಷಗಳು ದೊಡ್ಡ ಮಟ್ಟದಲ್ಲ ಎಂದಿದ್ದಾರೆ.

  • ಅಶ್ಲೀಲ ಫೋಟೋ ವೀಕ್ಷಣೆ  ಪ್ರಕರಣ- ಸಿಐಡಿಯಿಂದ ತನ್ವೀರ್ ಸೇಠ್‍ಗೆ ಕ್ಲೀನ್‍ಚಿಟ್

    ಅಶ್ಲೀಲ ಫೋಟೋ ವೀಕ್ಷಣೆ ಪ್ರಕರಣ- ಸಿಐಡಿಯಿಂದ ತನ್ವೀರ್ ಸೇಠ್‍ಗೆ ಕ್ಲೀನ್‍ಚಿಟ್

    ಬೆಂಗಳೂರು: ಟಿಪ್ಪುಸುಲ್ತಾನ್ ಜಯಂತಿ ಕಾರ್ಯಕ್ರಮದಂದು ಆಶ್ಲೀಲ ವಿಡಿಯೋ ನೋಡಿ ಸಿಕ್ಕಿ ಬಿದ್ದಿದ್ದ ಪ್ರಕರಣದಲ್ಲಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರಿಗೆ ಸಿಐಡಿ ಅಧಿಕಾರಿಗಳು ಕ್ಲೀನ್‍ಚಿಟ್ ನೀಡಿದ್ದಾರೆ.

    ನವೆಂಬರ್ 10 2016 ರಂದು ರಾಯಚೂರಿನಲ್ಲಿ ಸರ್ಕಾರ ಆಯೋಜಿಸಿದ್ದ ಟಿಪ್ಪು ಸುಲ್ತಾನ್ ಜಯಂತಿ ದಿನ ಶಿಕ್ಷಣ ಸಚಿವ ತನ್ವೀರ್ ಸೇಠ್ ಅಶ್ಲೀಲ ಫೋಟೋ ನೋಡಿ ಸುದ್ದಿಯಾಗಿದ್ರು. ಬಳಿಕ ಮುಖ್ಯಮಂತ್ರಿಗಳು ಈ ಪ್ರಕರಣವನ್ನು ಸಿಐಡಿಗೆ ವಹಿಸಿದ್ದರು. ಈಗ ಸಿಐಡಿ ವರದಿ ಕೊಟ್ಟಿದ್ದು ಸಚಿವರಿಗೆ ಕ್ಲೀನ್‍ಚಿಟ್ ನೀಡಿದೆ. ಸಚಿವರ ಸ್ನೇಹಿತ ಅರಸು ಅನ್ನೋರು ಈ ಫೋಟೋ ಕಳಿಸಿದ್ದು, ಕೇವಲ ಸಚಿವರಿಗೆ ಮಾತ್ರವಲ್ಲದೇ ಇತರೆ ವಾಟ್ಸಪ್‍ನ 8 ರಿಂದ 10 ಗ್ರೂಪ್‍ಗಳಿಗೆ ಫೋಟೋವನ್ನು ಕಳುಹಿಸಿದ್ದರು ಎಂದು ಹೇಳಲಾಗಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಚಿವರು, ವಾಟ್ಸಪ್‍ಗೆ ಫೋಟೋ ಬಂದಿರೋದು ನಿಜ. ಆದ್ರೆ ಡೌನ್‍ಲೋಡ್ ಮಾಡಿಲ್ಲ ಅಂತ ಹೇಳಿದ್ದರು. ಮಾತ್ರವಲ್ಲದೇ ತಾವಾಗಿಯೇ ಸರ್ಚ್ ಮಾಡಿ ಅಶ್ಲೀಲ ಫೋಟೋವನ್ನೂ ನೋಡಿಲ್ಲ. ಇದ್ರಲ್ಲಿ ಮಂತ್ರಿಗಳ ತಪ್ಪಿಲ್ಲ. ಅಪರಾಧನೂ ಅಲ್ಲ ಅಂತ ತನಿಖಾಧಿಕಾರಿಗಳು 30 ಪುಟಗಳ ವರದಿಯನ್ನು ಸಿಐಡಿ ಡಿಜಿಪಿ ಕಿಶೋರ್ ಚಂದ್ರರಿಗೆ ಕೊಟ್ಟಿದ್ದರು.