Tag: Tanveer Sait

  • ಜನಸ್ಪಂದನಾ ಕಾರ್ಯಕ್ರಮದಲ್ಲಿ ತನ್ವೀರ್ ಸೇಠ್ ಬಳಿ ಮೈಕ್ ಕಿತ್ತುಕೊಂಡು ಜಿಟಿಡಿ ಗರಂ!

    ಜನಸ್ಪಂದನಾ ಕಾರ್ಯಕ್ರಮದಲ್ಲಿ ತನ್ವೀರ್ ಸೇಠ್ ಬಳಿ ಮೈಕ್ ಕಿತ್ತುಕೊಂಡು ಜಿಟಿಡಿ ಗರಂ!

    ಮೈಸೂರು: ಅರಮನೆ ನಗರಿಯಲ್ಲಿ ಇಬ್ಬರು ಶಾಸಕರ ನಡುವೆ ಜಟಾಪಟಿ ನಡೆದಿರುವುದು ಬಯಲಾಗಿದೆ.

    ತಾಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಶಾಸಕ ತನ್ವಿರ್ ಸೇಠ್ (Tanveer Sait) ಮತ್ತು ಶಾಸಕ ಜಿ.ಟಿ ದೇವೇಗೌಡ (GT Devegowda) ನಡುವೆ ಕಿತ್ತಾಟ ನಡೆದಿದೆ. ಇದನ್ನೂ ಓದಿ: ಕೇಜ್ರಿವಾಲ್ ಜಾಮೀನು ಅರ್ಜಿ ವಿಚಾರಣೆ- ತೀರ್ಪು ಕಾಯ್ದಿರಿಸಿದ ಕೋರ್ಟ್

    ಜನಸ್ಪಂದನಾ ಕಾರ್ಯಕ್ರಮದಲ್ಲಿ ಶಾಸಕ ತನ್ವಿರ್ ಸೇಠ್ ಪ್ರಸ್ತಾವಿಕ ಭಾಷಣ ಮಾಡುತ್ತಿದ್ದರು. ಈ ವೇಳೆ ಮೈಕ್ ಕಿತ್ತುಕೊಂಡ ಜಿಟಿಡಿ ಜನರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಬಂದಿದ್ದಾರೆ. ನಾವಿಲ್ಲಿ ನಮ್ಮದೇ ಭಾಷಣ ಮಾಡುತ್ತ ಕುಳಿತರೆ ಹೇಗೆ..?. ನಮ್ಮ ಮಾತು ಕೇಳಲಿಕ್ಕೆ ಜನ ಬಂದಿಲ್ಲ. ಜನ ತಮ್ಮ ಸಮಸ್ಯೆ ಹೇಳಿಕೊಳ್ಳಲಿಕ್ಕೆ ಬಂದಿದ್ದಾರೆ. ಜನರ ಸಮಸ್ಯೆ ಕೇಳಿ ಎಂದು ಡಿಸಿ ರಾಜೇಂದ್ರಗೆ ಜಿಟಿಡಿ ಗದರಿದ ಪ್ರಸಂಗ ನಡೆದಿದೆ.

    ಇಬ್ಬರು ಶಾಸಕರ ನಡುವಿನ ಕಿತ್ತಾಟದಿಂದ ಕಾರ್ಯಕ್ರಮದಲ್ಲಿ ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಯಿತು.

  • ಹಮಾರೆ ಬಾರಾಹ್ ಚಿತ್ರ ನಿಷೇಧ ಸ್ವಾಗತ ಮಾಡ್ತೀನಿ: ತನ್ವೀರ್ ಸೇಠ್

    ಹಮಾರೆ ಬಾರಾಹ್ ಚಿತ್ರ ನಿಷೇಧ ಸ್ವಾಗತ ಮಾಡ್ತೀನಿ: ತನ್ವೀರ್ ಸೇಠ್

    ಬೆಂಗಳೂರು: ರಾಜ್ಯದಲ್ಲಿ ಹಮಾರೆ ಬಾರಾಹ್ (Hamare Baarah) ಚಿತ್ರ ನಿಷೇಧ ಮಾಡಿರುವ ಸರ್ಕಾರದ ನಿರ್ಧಾರಕ್ಕೆ ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ, ಮಾಜಿ ಸಚಿವ ತನ್ವೀರ್ ಸೇಠ್ (Tanveer Sait) ಸ್ವಾಗತ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹಮಾರೆ ಬಾರಾಹ್ (Hamare Baarah) ಸಿನಿಮಾ ನಿಷೇಧವನ್ನ ನಾನು ಸ್ವಾಗತಿಸುತ್ತೇನೆ. ಒಂದು ಕೋಮಿನ ಬಗ್ಗೆ ದ್ವೇಷದ ಭಾವನೆ ಬರುವ ರೀತಿ ಮಾಡಿರುವ ಚಿತ್ರ ಅದು. ಈ ಸಿನಿಮಾ ಬಿಡುಗಡೆ ಆಗಬಾರದು ಅಂತ ಸಾಕಷ್ಟು ಪ್ರತಿಭಟನೆ ನಡೆದಿತ್ತು. ಹಲವಾರು ಸಂಘಟನೆಗಳ ಚಿತ್ರ ನಿಷೇಧ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ರು. ಸಂಘಟನೆಗಳ ಮನವಿ ಮೇರಿಗೆ ಸರ್ಕಾರ ನಿಷೇಧಿಸಿದೆ. ಇದನ್ನ ನಾನು ಸ್ವಾಗತಿಸುತ್ತೇನೆ ಎಂದರು.

    ನಾನು ಈ ಸಿನಿಮಾವನ್ನ ನೋಡಿಲ್ಲ‌. ಆದರೆ ಒಂದು ಕೋಮಿನ ಗುರಿಯಾಗಿಸಿ ಧಕ್ಕೆ ಬರುವ ರೀತಿಯಲ್ಲಿ ಚಿತ್ರಿಸಿದ್ದಾರೆ. ಹೀಗಾಗಿ ನಿಷೇಧ ಮಾಡಿದ್ದಾರೆ. ಆ ಚಿತ್ರ ಮುಂದೆ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಅಂತ ತಿಳಿಸಿದರು. ಇದನ್ನೂ ಓದಿ: ಭಾನುವಾರ ಸಂಜೆ 6 ಗಂಟೆಗೆ ಮೋದಿ ಪ್ರಧಾನಿಯಾಗಿ ಪ್ರಮಾಣವಚನ

    ಇನ್ನು ಪಕ್ಷದಲ್ಲಿ ಹಿರಿಯನ್ನ ಕಡೆಗಣಿಸಲಾಗ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ಪಕ್ಷದ ಆಂತರಿಕ ವಿಚಾರ.ಕೆಲವು ವಲಯದಲ್ಲಿ ಅಪಸ್ವರ ಕೇಳ್ತಿದ್ದೇವೆ. ಲೋಕಸಭೆ ಚುನಾವಣೆ ಆದ ಮೇಲೆ ಜವಾಬ್ದಾರಿ ಕೊಟ್ಟ ವಿಚಾರ ಹೀಗೆ ಹಲವು ಚರ್ಚೆ ಆಗುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಅಪಸ್ವರದ ಬಗ್ಗೆ ಮಾಹಿತಿ ಬಂದಿದೆ. ಪಕ್ಷದ ವಿಚಾರ‌ಗಳು ಪಕ್ಷದ ವೇದಿಕೆಯಲ್ಲಿ ಚರ್ಚೆ ಆಗಬೇಕು ಅಂತ ನಾನು ಎಲ್ಲರಿಗೂ ಮನವಿ ಮಾಡ್ತೀನಿ ಎಂದರು.

    ಲೋಕಸಭೆ, ವಿಧಾನ ಪರಿಷತ್ ಟಿಕೆಟ್ ವಿಚಾರ ವರಿಷ್ಠರು ಕೊಡುವ ತೀರ್ಮಾನವನ್ನ ನಾವು ಜಾರಿ ಮಾಡ್ತೀವಿ. ಸಿಎಂ,‌ ಡಿಸಿಎಂ ಅವರು ಇಲ್ಲಿನ ನಾಯಕರ ಸಲಹೆ ‌ಪಡೆದು ಲೋಕಸಭೆ, MLC ಚುನಾವಣೆಗೆ ಪಟ್ಟಿ ಕಳಿಸಿರುತ್ತಾರೆ. ಏನೇ ಅಸಮಾಧಾನ ಇದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಲಿ ಅಂತ ಅಸಮಾಧಾನಿತರಿಗೆ ತಿಳಿಸಿದರು.

     

  • ಸಿಎಂ ತವರಲ್ಲೇ ಇಂದಿರಾ ಕ್ಯಾಂಟಿನ್ ನಡೆಸಲು ನಿರಾಸಕ್ತಿ; ಬಯಲಾಯ್ತು ಕಳ್ಳ ಲೆಕ್ಕ – ʻಪಬ್ಲಿಕ್ʼ ವರದಿಯಿಂದ ಎಚ್ಚೆತ್ತ ಪಾಲಿಕೆ

    ಸಿಎಂ ತವರಲ್ಲೇ ಇಂದಿರಾ ಕ್ಯಾಂಟಿನ್ ನಡೆಸಲು ನಿರಾಸಕ್ತಿ; ಬಯಲಾಯ್ತು ಕಳ್ಳ ಲೆಕ್ಕ – ʻಪಬ್ಲಿಕ್ʼ ವರದಿಯಿಂದ ಎಚ್ಚೆತ್ತ ಪಾಲಿಕೆ

    – ಕ್ಯಾಂಟಿನ್ ಓಪನ್ ಮಾಡದಿದ್ರೂ ಪುಸ್ತಕದಲ್ಲಿದೆ ಊಟ-ತಿಂಡಿ ಲೆಕ್ಕ

    ಮೈಸೂರು: ಸಿಎಂ ಕನಸಿನ ಯೋಜನೆ ಇಂದಿರಾ ಕ್ಯಾಂಟಿನ್‌ಗೆ (Indira Canteen) ಸಿಎಂ ತವರಲ್ಲೇ ಬ್ರೇಕ್ ಬಿದ್ದಿದೆ. ಅದು ಕಾಂಗ್ರೆಸ್ ಶಾಸಕ ತನ್ವಿರ್ ಸೇಠ್ (Tanveer Sait) ಪ್ರತಿನಿಧಿಸಿರುವ ನರಸಿಂಹರಾಜ ಕ್ಷೇತ್ರದಲ್ಲೇ ಕ್ಯಾಂಟೀನ್‌ಗಳಿಗೆ ಬ್ರೇಕ್‌ ಹಾಕಿರುವುದು ಅಚ್ಚರಿಯ ಸಂಗತಿ.

    ಮೈಸೂರಿನ (Mysuru) ನರಸಿಂಹರಾಜ ಕ್ಷೇತ್ರದಲ್ಲಿ ಇಂದಿರಾ ಕ್ಯಾಂಟಿನ್ ಗಳು ನಿಷ್ಕ್ರಿಯಗೊಂಡಿವೆ. ಬನ್ನಿಮಂಟಪದ ಜೋಡಿ ತೆಂಗಿನಮರ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ಮುಚ್ಚಿ ಹೋಗಿದೆ. ಲಕ್ಷಾಂತರ ರೂಪಾಯಿ ವ್ಯಯಿಸಿ ಕ್ಯಾಂಟಿನ್ ನಿರ್ಮಾಣ ಮಾಡಿದ್ರೂ ಜನರಿಗೆ ಪ್ರಯೋಜನವಾಗುತ್ತಿಲ್ಲ. ಕ್ಯಾಂಟೀನ್ ಸುತ್ತಲು ಗಿಡಗಂಟಿಗಳು ಬೆಳೆದುಕೊಂಡಿವೆ. ಕ್ಯಾಂಟೀನ್‌ನ ಕಿಟಕಿ, ಬಾಗಿಲುಗಳು ಮುರಿದ ಸ್ಥಿತಿಯಲ್ಲಿವೆ. ಬಡವರು ವಾಸಿಸುವ ಸ್ಥಳದಲ್ಲೇ ಕ್ಯಾಂಟೀನ್ ನಿರ್ಮಾಣಗೊಂಡಿದ್ದರೂ ಉಪಯೋಗಕ್ಕೆ ಬಾರದಂತಾಗಿದ್ದು, ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

    ʻಪಬ್ಲಿಕ್ ಟಿವಿʼ ಬಿಗ್ ಇಂಪ್ಯಾಕ್ಟ್: ನರಸಿಂಹರಾಜ ಕ್ಷೇತ್ರದಲ್ಲಿ ಇಂದಿರಾ ಕ್ಯಾಂಟೀನ್‌ ಆವರಣದಲ್ಲಿ ಅಶುಚಿತ್ವ ತಾಂಡವವಾಡುತ್ತಿರುವ ಬಗ್ಗೆ ಪಬ್ಲಿಕ್‌ ಟಿವಿ ವರದಿ ಬಿತ್ತರಿಸಿತ್ತು. ವರದಿ ಬಿತ್ತರಿಸಿದ ಕೆಲವೇ ಕ್ಷಣಗಳಲ್ಲಿ ಎಚ್ಚೆತ್ತ ಪಾಲಿಕೆ ಅಧಿಕಾರಿಗೂ (Mysore City Corporation Officers) ಇಂದಿರಾ ಕ್ಯಾಂಟಿನ್ ಹೊರ ಆವರಣ ಮತ್ತು ಒಳ ಆವರಣದ ಸ್ವಚ್ಚತೆ ಮಾಡಿಸಲು ಮುಂದಾಗಿದ್ದಾರೆ. ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳೇ ಈ ಬಗ್ಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಬಯಲಾಯ್ತು ಕಳ್ಳ ಲೆಕ್ಕ: ಮೈಸೂರಿನ ಎನ್.ಆರ್. ಕ್ಷೇತ್ರದ ಜೋಡಿ ತೆಂಗಿನ ಮರ ರಸ್ತೆಯಲ್ಲಿರೋ ಇಂದಿರಾ ಕ್ಯಾಂಟಿನ್ ಮುಚ್ಚಿ 6 ತಿಂಗಳಾಗಿದೆ. ಆದ್ರೆ ಇಂದಿರಾ ಕ್ಯಾಂಟಿನ್‌ನ ಫುಡ್‌ ರಿಜಿಸ್ಟರ್ ಪುಸ್ತಕದಲ್ಲಿ ಮಾತ್ರ ಇಂದಿನವರೆಗೂ ಊಟ-ತಿಂಡಿ ಕೊಟ್ಟಿದ್ದೇವೆ ಎಂಬ ಲೆಕ್ಕ ಬರೆಯಲಾಗಿದೆ. ಅಲ್ಲಿಗೆ ಕಳ್ಳ ಲೆಕ್ಕ ಇದು ಎಂಬುದು ಸ್ಪಷ್ಟವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆಗೆ ಮುಂದಾಗಿದ್ದಾರೆ.

  • ವಿದ್ಯುತ್ ದರ ಏರಿಕೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ; ಸಿಎಂಗೆ ತನ್ವೀರ್ ಸೇಠ್ ಪತ್ರ

    ವಿದ್ಯುತ್ ದರ ಏರಿಕೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ; ಸಿಎಂಗೆ ತನ್ವೀರ್ ಸೇಠ್ ಪತ್ರ

    ಮೈಸೂರು: ವಿದ್ಯುತ್ ದರ ಏರಿಕೆ (Electricity Price Hike) ಮರುಪರಿಶೀಲನೆಗೆ ಒತ್ತಾಯಿಸಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ (Tanveer sait) ಸಿಎಂ ಸಿದ್ದರಾಮಯ್ಯಗೆ (Siddaramaiah) ಪತ್ರ ಬರೆದಿದ್ದಾರೆ.

    ಎರಡು ಪುಟಗಳ ಪತ್ರ ಬರೆದು ವಿದ್ಯುತ್ ದರ ಏರಿಕೆ ಮರುಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪ್ರಚಂಡ ಜಯ ಸಾಧಿಸಿದೆ. ಸರ್ಕಾರ ರಚನೆಯಾದ ದಿನವೇ 5 ಗ್ಯಾರಂಟಿಗಳನ್ನ ಘೋಷಣೆ ಮಾಡಲಾಗಿದೆ. ಅದರಲ್ಲಿ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ (200 Unit Free Electricity) ನೀಡುವುದು ಪ್ರಮುಖವಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಉಚಿತ ವಿದ್ಯುತ್ ಘೋಷಣೆ ಬೆನ್ನಲ್ಲೇ ವ್ಯಾಪಾರಸ್ಥರಿಗೆ ಶಾಕ್ – ದರ ಏರಿಕೆ ಖಂಡಿಸಿ ಅಘೋಷಿತ ಬಂದ್

    ಸೌಲಭ್ಯ ಕೊಟ್ಟು ಕಿತ್ತುಕೊಂಡಂತಾಗಿದೆ:
    ಮುಂದುವರಿದು… ಉಚಿತ ವಿದ್ಯುತ್ ಘೋಷಣೆಗೆ ವ್ಯತಿರಿಕ್ತವೆಂಬಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಮಂಡಳಿಯಿಂದ ರಾಜ್ಯದ ಎಲ್ಲಾ ನಿಗಮಗಳಲ್ಲಿ ವಿದ್ಯುತ್ ದರ ಹೆಚ್ಚಿಸಲಾಗಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಚೇತರಿಸಿಕೊಳ್ಳದ ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರಸ್ತುತ ಸರ್ಕಾರ ಘೋಷಿಸಿರುವ 200 ಯೂನಿಟ್ ಉಚಿತ ಸೌಲಭ್ಯ ಜನ ಸಾಮಾನ್ಯರಿಗೆ ನೀಡಿ ಕಿತ್ತುಕೊಂಡಂತಾಗಿದೆ. ವಿದ್ಯುತ್ ದರ ಏರಿಕೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ. ಹೀಗಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ವಿದ್ಯುತ್ ದರ ಏರಿಕೆ ಆದೇಶವನ್ನ ಮರುಪರಿಶೀಲಿಸಿ, ಜನಸಾಮಾನ್ಯರಿಗೆ ಹೊರೆಯಾಗದಂತೆ ನೋಡಿಕೊಳ್ಳಬೇಕು ಎಂದ ಕೋರಿದ್ದಾರೆ.

  • 12 ಚುನಾವಣೆಗಳಲ್ಲಿ ಒಂದೇ ಕುಟುಂಬದವರ ಆಯ್ಕೆ – ಎನ್.ಆರ್‌. ಕ್ಷೇತ್ರದಲ್ಲಿ ಸೇಠ್ ಫ್ಯಾಮಿಲಿ ಅಧಿಪತ್ಯ!

    12 ಚುನಾವಣೆಗಳಲ್ಲಿ ಒಂದೇ ಕುಟುಂಬದವರ ಆಯ್ಕೆ – ಎನ್.ಆರ್‌. ಕ್ಷೇತ್ರದಲ್ಲಿ ಸೇಠ್ ಫ್ಯಾಮಿಲಿ ಅಧಿಪತ್ಯ!

    ಮೈಸೂರು: ನರಸಿಂಹರಾಜ ಕ್ಷೇತ್ರದಿಂದ (N.R. Constituency) ಇದುವರೆಗೂ ನಡೆದಿರುವ 16 ಚುನಾವಣೆಗಳ ಪೈಕಿ 12 ಚುನಾವಣೆಗಳಲ್ಲಿ ಒಂದೇ ಕುಟುಂಬದವರು ಆಯ್ಕೆಯಾಗುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ.

    ಈ ಕ್ಷೇತ್ರ ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ಅಸ್ತಿತ್ವದಲ್ಲಿದೆ. 1952 ರಿಂದ 1962 ರವರೆಗೆ ಮೈಸೂರು ನಗರ ಉತ್ತರ ಎಂದಾಗಿತ್ತು. 1967 ರಿಂದ ನರಸಿಂಹರಾಜ ಕ್ಷೇತ್ರ ಎಂದು ಹೆಸರಿಸಲಾಯಿತು. 1957 ರಲ್ಲಿ ಪಕ್ಷೇತರ ಅಭ್ಯರ್ಥಿ ಎ.ಮಹಮ್ಮದ್ ಸೇಠ್‌ ಆಯ್ಕೆಯಾಗಿದ್ದರು. ಇವರು ಮಾಜಿ ಸಚಿವ ದಿ.ಅಜೀಜ್ ಸೇಠ್‌ (Azeez Sait) ಅವರ ದೊಡ್ಡಪ್ಪ. ಆದರೆ 1962 ರ ಚುನಾವಣೆಯಲ್ಲಿ ಮೊಹಮ್ಮದ್ ಸೇಠ್ ಅವರು ಪಿಎಸ್ಪಿಯ ಬಿ.ಕೆ. ಪುಟ್ಟಯ್ಯ ಅವರ ಎದುರು ಪರಾಭವಗೊಂಡರು. ಇದನ್ನೂ ಓದಿ: ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ VIP ಅಭ್ಯರ್ಥಿ ಹಾಕಲು ತಯಾರಿ

     ‌

    1967 ರ ಚುನಾವಣೆ ವೇಳೆಗೆ ಅಜೀಜ್ ಸೇ‌ಠ್ ಅಖಾಡ ಪ್ರವೇಶಿಸಿದರು. ಅಜೀಜ್ ಸೇಠ್ 1967 ರಲ್ಲಿ ಎಸ್‌ಎಸ್‌ಪಿ, 1972 ರಲ್ಲಿ ಕಾಂಗ್ರೆಸ್, 1977 ರಲ್ಲಿ ಇಂದಿರಾ ಕಾಂಗ್ರೆಸ್, 1983 ರಲ್ಲಿ ಜನತಾಪಕ್ಷದ ಟಿಕೆಟ್ ಮೇಲೆ ಆಯ್ಕೆಯಾದರು. 1984 ರಲ್ಲಿ ಅವರು ಧಾರವಾಡ ದಕ್ಷಿಣ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರಿಂದ 1985 ರ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. 1989 ರಲ್ಲಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದರು.

    1994 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದರೂ ಸಕಾಲದಲ್ಲಿ ‘ಬಿ’ ಫಾರಂ ಸಲ್ಲಿಸದೇ ಕಾಂಗ್ರೆಸ್ ಬೆಂಬಲಿತ ಪಕ್ಷೇತರರಾಗಿ ಸ್ಪರ್ಧಿಸಿ, ಬಿಜೆಪಿಯ ಇ. ಮಾರುತಿರಾವ್ ಪವಾರ್ ಎದುರು ಅಜೀಜ್‌ ಸೇಠ್‌ ಸೋತರು. 1999 ರಲ್ಲಿ ಮತ್ತೆ ಕಾಂಗ್ರೆಸ್ ಟಿಕೆಟ್ ಮೇಲೆ ಅಜೀಜ್ ಸೇ‌ಠ್‌ ಆಯ್ಕೆಯಾದರು. ಸೇ‌ಠ್ ಅವರ ನಿಧನದಿಂದಾಗಿ 2002 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಅವರ ಪುತ್ರ ತನ್ವಿರ್ ಸೇಠ್‌ (Tanveer Sait) ಕಾಂಗ್ರೆಸ್ ಅಭ್ಯಥಿಯಾಗಿ ಆಯ್ಕೆಯಾದರು. ಇದನ್ನೂ ಓದಿ: ಜಾರಕಿಹೊಳಿ – ಸವದಿ ಬಣ ರಾಜಕೀಯಕ್ಕೆ ಬ್ರೇಕ್‌; ಹೈಕಮಾಂಡ್‌ ಸಂದೇಶ ರವಾನಿಸಿದ ಜೋಶಿ

    2004 ಹಾಗೂ 2008ರ ಸಾರ್ವತ್ರಿಕ ಚುನಾವಣೆಯಲ್ಲಿಯೂ ಅವರು ಕಾಂಗ್ರೆಸ್ ಟಿಕೆಟ್ ಮೇಲೆ ಆಯ್ಕೆಯಾಗಿ ಹ್ಯಾಟ್ರಿಕ್ ಬಾರಿಸಿದರು. 2013 ರಲ್ಲಿ ನಾಲ್ಕನೇ ಬಾರಿ ಗೆದ್ದರು. 2018 ರ ಚುನಾವಣೆಯಲ್ಲೂ ಆಯ್ಕೆಯಾದರು. ಈ ಚುನಾವಣೆಯಲ್ಲೂ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.

  • `ಕೈ’ಗೆ ಶಾಕ್ – ಚುನಾವಣಾ ರಾಜಕೀಯದಿಂದ ಶಾಸಕ ತನ್ವೀರ್ ಸೇಠ್ ನಿವೃತ್ತಿ

    `ಕೈ’ಗೆ ಶಾಕ್ – ಚುನಾವಣಾ ರಾಜಕೀಯದಿಂದ ಶಾಸಕ ತನ್ವೀರ್ ಸೇಠ್ ನಿವೃತ್ತಿ

    ಮೈಸೂರು: 2023ರ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election 2023) ಬಹುಮತ ಪಡೆಯುವ ಹುಮ್ಮಸ್ಸಿನಲ್ಲಿರುವ ರಾಜ್ಯ ಕಾಂಗ್ರೆಸ್‌ಗೆ (Congress) ಮೈಸೂರು ಭಾಗದಿಂದ ಬಿಗ್ ಶಾಕ್ ತಗುಲಿದೆ.

    ಮೈಸೂರಿನ (Mysuru) ಎನ್.ಆರ್ ಕ್ಷೇತ್ರದ ಹಾಲಿ ಶಾಸಕ ತನ್ವೀರ್ ಸೇಠ್ (Tanveer Sait) ಚುನಾವಣಾ ರಾಜಕೀಯದಿಂದ ನಿವೃತ್ತಿ ಬಯಸಿ ಎಐಸಿಸಿಗೆ (AICC ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಸದ್ಯಕ್ಕೆ ಟೋಲ್‌ ಸಂಗ್ರಹ ಇಲ್ಲ

    `ಅನಾರೋಗ್ಯದ ಕಾರಣ ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ನನಗೆ ಈ ಬಾರಿ ಟಿಕೆಟ್ ಬೇಡ. ನಾನು ಇನ್ಮುಂದೆ ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: BJP ಕಾರ್ಯಕರ್ತರು ಮೈ ಮರೆತ್ರೆ ಸಿದ್ದರಾಮಯ್ಯ ನೇತೃತ್ವದ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬರುತ್ತೆ: ಪ್ರತಾಪ್ ಸಿಂಹ

    ನನ್ನ ಮೇಲೆ ಹಲ್ಲೆಯಾದ ಬಳಿಕ ಆರೋಗ್ಯ ತುಂಬಾ ಏರುಪೇರಾಗಿದೆ. ಮೊದಲಿನಂತೆ ನಾನು ಮಾನಸಿಕ ಹಾಗೂ ದೈಹಿಕವಾಗಿಯೂ ಶಕ್ತಿಯುತವಾಗಿಲ್ಲ. ಹಾಗಾಗಿ ನನಗೆ ಟಿಕೆಟ್ ಬೇಡ. ಆದ್ರೆ ಕಾಂಗ್ರೆಸ್‌ನಲ್ಲೇ ಇರುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    2019ರ ನವೆಂಬರ್ 17ರ ರಾತ್ರಿ ವಿವಾಹ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ವೇಳೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಡಿಪಿಐ ಕಾರ್ಯಕರ್ತ ಫರ್ಹಾನ್ ಪಾಷಾ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

  • ಪ್ರತಾಪ್‌ಸಿಂಹನಿಗೆ ಬಸ್‌ನಿಲ್ದಾಣದ ಗುಂಬಜ್‌ಗಳೂ ಮುಸ್ಲಿಮರ ಮಸೀದಿಯೆಂತೆ ಕಾಣ್ತಿದೆ – ಸೇಠ್ ತಿರುಗೇಟು

    ಪ್ರತಾಪ್‌ಸಿಂಹನಿಗೆ ಬಸ್‌ನಿಲ್ದಾಣದ ಗುಂಬಜ್‌ಗಳೂ ಮುಸ್ಲಿಮರ ಮಸೀದಿಯೆಂತೆ ಕಾಣ್ತಿದೆ – ಸೇಠ್ ತಿರುಗೇಟು

    ಮೈಸೂರು: ಸಂಸದ ಪ್ರತಾಪ್‌ಸಿಂಹ (Prtap Simha) ಅವರಿಗೆ ಬಸ್ ನಿಲ್ದಾಣದ (Bus Stand) ಗುಂಬಜ್‌ಗಳೆಲ್ಲವೂ ಮುಸ್ಲಿಮರ ಮಸೀದಿಯಂತೆ (Muslims Mosque) ಕಾಣ್ತಿವೆ. ಅದಕ್ಕೆ ನಾವೇನು ಮಾಡೋಕಾಗುತ್ತದೆ ಎಂದು ಶಾಸಕ ತನ್ವೀರ್ ಸೇಠ್ (Tanveer Sait) ಪ್ರಶ್ನಿಸಿದ್ದಾರೆ.

    ಮೈಸೂರಿನಲ್ಲಿಂದು (Mysuru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಂಬಜ್ ಮಾದರಿಯ ಬಸ್ ನಿಲ್ದಾಣ ಧ್ವಂಸ ಮಾಡೋದು ಖಚಿತ ಎಂಬ ಪ್ರತಾಪ್‌ಸಿಂಹ ಹೇಳಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಗುಂಬಜ್ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಿಸುವಂತಿಲ್ಲ: ಪ್ರತಾಪ್ ಸಿಂಹ

    ಯಾರ ಯಾರ ದೃಷ್ಟಿಯಲ್ಲಿ ಏನು ಕಾಣುತ್ತೊ ಅದೇ ಕಾಣೊದು. ಗೋಪುರಗಳು ಮಸೀದಿ ಮಾದರಿಯಲ್ಲಿ ಇದೆ ಎಂದು ಹೇಳುವಂತಹ ಪ್ರತಾಪ್ ಸಿಂಹ ಪ್ರಜ್ಞೆ ಯಾವ ರೀತಿ ಇದೆ ಎಂಬುದನ್ನ ತಿಳಿದುಕೊಳ್ಳಬೇಕು. ಇದು ಸರ್ಕಾರದ ಆಸ್ತಿ, ಏನೆಲ್ಲಾ ಒಡೆಯುತ್ತಾರೆ ಕಾದು ನೋಡಬೇಕು. ಗೋಪುರದ ರೀತಿ ಕಾಣುವುದೆಲ್ಲಾ ಸಾಬ್ರುದು ಅನ್ನೊದಾದ್ರೆ ನಾವೇನ್ ಮಾಡೊದು. ಆ ಶೆಲ್ಟರ್ ಯಾರು ವಿನ್ಯಾಸ ಮಾಡಿದ್ರು? ಎಂಬುದು ನನಗೆ ಗೊತ್ತಿಲ್ಲ. ಗುಂಬಜ್ ಮಾದರಿಯ ಬಸ್ ನಿಲ್ದಾಣ ಹೊಡೆದು ಹಾಕೋದಾದ್ರೆ. ಅದೆಷ್ಟು ಹೊಡೆದು ಹಾಕ್ತಾರೆ ಹಾಕಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೊಡವರಂತೆ ತಮ್ಮ ಸಮುದಾಯದವರ ನರಮೇಧ ಮಾಡಿದ್ರೆ ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡ್ತಿದ್ರಾ? ಪ್ರತಾಪ ಸಿಂಹ

    `ಟಿಪ್ಪು ನಿಜ ಕನಸುಗಳು’ ಪುಸ್ತಕದ ವಿರುದ್ಧ ಕೇಸ್:
    ಟಿಪ್ಪು ನಿಜ ಕನಸುಗಳು ಪುಸ್ತಕ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಬಿಡುಗಡೆಯಾದ ಪುಸ್ತಕ ನನ್ನ ಕೈ ಸೇರಿದೆ. ವಕೀಲ ರಂಗನಾಥ್ ಅವರ ಮೂಲಕ ಮೊಕದ್ದಮೆ ದಾಖಲಿಸ್ತಿವಿ. ಸಾರ್ವಜನಿಕ ಹಿತಾಸಕ್ತಿ ಅರ್ಜಿ (PLI) ಸಹ ಹಾಕ್ತೀವಿ. ಎಲ್ಲಿ? ಯಾವಾಗ? ಎಂಬುದನ್ನ ವಕೀಲರು ನೋಡಿಕೊಳ್ತಾರೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೆಂಪೇಗೌಡ ಪ್ರತಿಮೆ ನೋಡಿ ತನ್ವೀರ್ ಸೇಠ್‍ಗೆ ಹೊಟ್ಟೆ ಕಿಚ್ಚು: ಮಂಜುನಾಥ್

    ಕೆಂಪೇಗೌಡ ಪ್ರತಿಮೆ ನೋಡಿ ತನ್ವೀರ್ ಸೇಠ್‍ಗೆ ಹೊಟ್ಟೆ ಕಿಚ್ಚು: ಮಂಜುನಾಥ್

    ಮಂಡ್ಯ: ಕೆಂಪೇಗೌಡ ಅವರ ಪ್ರತಿಮೆಯನ್ನು ನೋಡಿ ತನ್ವಿರ್ ಸೇಠ್‍ಗೆ (Tanveer Sait) ಹೊಟ್ಟೆ ಕಿಚ್ಚು ಬಂದಿದೆ, ಅದಕ್ಕಾಗಿಯೇ ಟಿಪ್ಪು ಪ್ರತಿಮೆ ಮಾಡುತ್ತೆವೆ ಎಂದು ಹೇಳಿದ್ದಾರೆ, ಅವರು ಒಕ್ಕಲಿಗ ವಿರೋಧಿ ಎಂದು ತನ್ವೀರ್ ಸೇಠ್ ವಿರುದ್ಧ ಭಜರಂಗಸೇನೆಯ (Bajrang Sena) ರಾಜ್ಯಾಧ್ಯಕ್ಷ ಮಂಜುನಾಥ್ (Manjunath) ಕಿಡಿಕಾರಿದರು.

    ದೇವನಹಳ್ಳಿಯಲ್ಲಿ ಲೋಕಾರ್ಪಣೆಗೊಂಡ ಕೆಂಪೇಗೌಡ ಅವರ 108 ಅಡಿಯ ಪ್ರತಿಮೆ ನೋಡಿ ತನ್ವೀರ್ ಸೇಠ್‍ಗೆ ಹೊಟ್ಟೆ ಕಿಚ್ಚು ಬಂದಿದೆ. ಹೊಟ್ಟೆ ಕಿಚ್ಚಿಗಾಗಿ 100 ಅಡಿ ಟಿಪ್ಪು ಸುಲ್ತಾನ್ ಪ್ರತಿಮೆ ಮಾಡ್ತೀವಿ ಎಂದಿದ್ದಾರೆ. ತನ್ವೀರ್ ಸೇಠ್ ಮುಸಲ್ಮಾನರಾ ಎನ್ನುವುದೇ ಅನುಮಾನವಾಗಿದೆ. ಇಸ್ಲಾಂನ್ನು ತನ್ವೀರ್ ಸೇಠ್ ಸರಿಯಾಗಿ ಅಧ್ಯಯನ ಮಾಡಿಲ್ಲ. ಇಸ್ಲಾಂನಲ್ಲಿ ಮೂರ್ತಿ ಪೂಜಾ ಮಾಡುವುದಕ್ಕೆ ಅವಕಾಶವಿಲ್ಲ. ಇವರು ಟಿಪ್ಪು ಜಯಂತಿ ಮಾಡುವುದೇ ತಪ್ಪು ಎಂದರು.

    ಟಿಪ್ಪು ಸುಲ್ತಾನ್ (Tipu Sultan) ಮತಾಂಧ. ಹಿಂದೂ ವಿರೋಧಿ ಹಾಗೂ ಕನ್ನಡ ವಿರೋಧಿ. ದಕ್ಷಿಣ ಕರ್ನಾಟಕದ ಈಗಿನ ಮುಸ್ಲಿಮರು ಹಿಂದೆ ಹಿಂದೂಗಳು ಆಗಿದ್ದರು. ಟಿಪ್ಪು ಸುಲ್ತಾನ್‍ನ ಕ್ರೌರ್ಯಕ್ಕೆ ಸಿಲುಕಿ ಈಗಿನ ಮುಸ್ಲಿಮರ ಪೂರ್ವಜರು ಮತಾಂತರವಾಗಿದ್ದರು. ಶ್ರೀರಂಗಪಟ್ಟಣದಲ್ಲಿ ಅಲ್ಲ ಕರ್ನಾಟಕದಲ್ಲಿ ಟಿಪ್ಪು ಪ್ರತಿಮೆ ಮಾಡಲು ಒಂದು ಇಂಚು ಜಾಗ ಕೊಡಲ್ಲ. ಅಂತಹ ಪ್ರಯತ್ನಕ್ಕೆ ಮುಂದಾದರೆ ಹಿಂದೂ ಕಾರ್ಯಕರ್ತರು ಸುಮ್ಮನೆ ಇರಲ್ಲ. ಟಿಪ್ಪು ಪ್ರತಿಮೆ ನಿರ್ಮಾಣ ಆದ್ರೆ ನಾವೇ ಒಡೆದು ಹಾಕುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಪ್ರೇಮ ವಿವಾಹವಾಗಿದ್ದಕ್ಕೆ ದಲಿತರಿಂದಲೇ ದಲಿತ ಕುಟುಂಬಕ್ಕೆ ಬಹಿಷ್ಕಾರ!

    ತನ್ವೀರ್ ಸೇಠ್ ಟಿಪ್ಪು ಸುಲ್ತಾನ್ ಪ್ರತಿಮೆ ವಿಚಾರ ಎತ್ತಿರುವುದು ಚುನಾವಣೆಯ ಗಿಮಿಕ್‍ಗಾಗಿ. ನರಸಿಂಹರಾಜ ಕ್ಷೇತ್ರದಲ್ಲಿ ಎಸ್‍ಟಿಪಿಐ ಜೊತೆ ಮುಸ್ಲಿಮರು ಹೋಗ್ತಾ ಇದ್ದಾರೆ. ಅವರನ್ನು ಓಲೈಸಿಕೊಳ್ಳಲು ಈ ರೀತಿ ತನ್ವೀರ್ ಸೇಠ್ ಮಾಡುತ್ತಿದ್ದಾರೆ. ತನ್ವೀರ್ ಸೇಠ್ ಮುಸ್ಲಿಂ ಸಮುದಾಯದಲ್ಲಿ ಹಲವು ಮಹನೀಯರು ಇದ್ದಾರೆ. ಅಂತಹ ಮಹನೀಯರ ಪ್ರತಿಮೆಯನ್ನು ಮಾಡಿ. ಅದಕ್ಕಾಗಿ ನಾವು ಕೈಜೋಡಿಸುತ್ತೇವೆ. ಟಿಪ್ಪು ಪ್ರತಿಮೆ ಮಾಡಲು ನಾವು ಬಿಡುವುದಿಲ್ಲ ಎಂದರು. ಇದನ್ನೂ ಓದಿ: ಮಗನ ಅನಾರೋಗ್ಯ ನಿವಾರಿಸಿದ ಕೊರಗಜ್ಜನಿಗೆ ಉಕ್ರೇನ್ ಕುಟುಂಬದಿಂದ ಅಗೆಲು ಸೇವೆ

    Live Tv
    [brid partner=56869869 player=32851 video=960834 autoplay=true]

  • ಟಿಪ್ಪು ಪ್ರತಿಮೆ ಪ್ರತಿಷ್ಠಾಪಿಸಿ ಊದುಬತ್ತಿ ಹಚ್ಚಿ, ಆರತಿ ಬೆಳಗ್ತಾರಾ ನೋಡೋಣ – ಪ್ರಹ್ಲಾದ್‌ ಜೋಶಿ ಟಾಂಗ್‌

    ಟಿಪ್ಪು ಪ್ರತಿಮೆ ಪ್ರತಿಷ್ಠಾಪಿಸಿ ಊದುಬತ್ತಿ ಹಚ್ಚಿ, ಆರತಿ ಬೆಳಗ್ತಾರಾ ನೋಡೋಣ – ಪ್ರಹ್ಲಾದ್‌ ಜೋಶಿ ಟಾಂಗ್‌

    ಹುಬ್ಬಳ್ಳಿ: ಟಿಪ್ಪು ಪ್ರತಿಮೆ ನಿರ್ಮಾಣ ಮಾಡಿ ಊದುಬತ್ತಿ ಹಚ್ಚಿ, ಆರತಿ ಬೆಳಗುತ್ತಾರಾ ನೋಡೋಣ. ಅವರು ಟಿಪ್ಪು (Tippu Sultan) ಪ್ರತಿಮೆ ಮಾಡಲಿ, ಅವರನ್ನ ಜನ ಮನೆಗೆ ಕಳಸ್ತಾರೆ ಎಂದು ಶಾಸಕ ತನ್ವೀರ್‌ ಸೇಠ್‌ (Tanveer Sait) ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ವಾಗ್ದಾಳಿ ನಡೆಸಿದ್ದಾರೆ.

    ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಟಿಪ್ಪು ಪ್ರತಿಮೆಗೆ ಬೆಂಬಲ ಕೊಟ್ಟವರನ್ನು ಜನರು ಮನೆಗೆ ಕಳಿಸುತ್ತಾರೆ. ಈಗಲೂ ಟಿಪ್ಪು ಜಯಂತಿಗೆ ನಮ್ಮ ವಿರೋಧವಿದೆ. ಟಿಪ್ಪು ಒಬ್ಬ ಮತಾಂಧ, ದೇಶದ್ರೋಹಿ, ಕನ್ನಡ ವಿರೋಧಿ. ಇದು ನನ್ನ ವೈಯಕ್ತಿಕ ನಿಲುವು ಮತ್ತು ಪಕ್ಷದ ನಿಲವು. ಯಾವುದೇ ಮೂರ್ತಿ ನಿಲ್ಲಿಸಲು ಸರ್ಕಾರದ ಅನುಮತಿ ಬೇಕು. ಜನ ಇದಕ್ಕೆಲ್ಲ ಉತ್ತರ ಕೊಡ್ತಾರೆ. ನಾವು ಯಾವ ಕಾಲದಲ್ಲಿ ಉತ್ತರ ಕೊಡಬೇಕು ಕೊಡ್ತೀವಿ. ನಾವು ಬೇಜವಬ್ದಾರಿಯಿಂದ ಮಾತಾಡೋಕೆ ಆಗಲ್ಲ ಎಂದು ತನ್ವೀರ್‌ಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಟಿಪ್ಪು ಪ್ರತಿಮೆ ಸ್ವಂತ ಜಾಗದಲ್ಲಿ ಕಟ್ತೀವಿ ಅಂದ್ರೂ ಬಿಡಲ್ಲ, ಬಾಬ್ರಿ ಮಸೀದಿ ರೀತಿ ಧ್ವಂಸ ಮಾಡ್ತೇವೆ – ಮುತಾಲಿಕ್

    tippu

    ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆಗೆ ದೇವೇಗೌಡರಿಗೆ ಆಹ್ವಾನ ವಿಚಾರ‌‌ವಾಗಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಗಳು, ಅಶೋಕ್, ಅಶ್ವಥ್ ನಾರಾಯಣ ಅವರೊಂದಿಗೆ ಮಾತನಾಡಿದ್ದೇನೆ. ದೇವೇಗೌಡರು ಈ ದೇಶದ ಪ್ರಧಾನಿಯಾಗಿದ್ದ ಕರ್ನಾಟಕದ ಏಕೈಕ ನಾಯಕ. ಅವರನ್ನು ಕರೆದಿಲ್ಲ ಅನ್ನೋದು ಸರಿಯಲ್ಲ. ಮುಖ್ಯಮಂತ್ರಿಗಳು ನನಗೆ ಹೇಳಿದ್ದಾರೆ. ನಾನು ಕರೆದಿದ್ದೇನೆ ಎಂದು ಹೇಳಿದ್ದಾರೆ. ಆದರೆ ದೇವೇಗೌಡರು ಯಾಕೆ ಬಂದಿಲ್ಲ ಅನ್ನೋದನ್ನು ವಿಚಾರಿಸ್ತೀನಿ ಎಂದಿದ್ದಾರೆ.

    ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದವರು. ಆದರೆ ಅವರ ಅವಧಿಯಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ ಮಾಡಲಿಲ್ಲ. ಹೆಸರು ಕೂಡ ಇಡಲಿಲ್ಲ. ಅವರ ಕುಟುಂಬಕ್ಕೆ ಕೆಂಪೇಗೌಡರ ನೆನಪು ಆಗಲಿಲ್ಲ. ನಾನು ದೇವೇಗೌಡರ ಬಗ್ಗೆ ಮಾತಾಡಲ್ಲ, ಅವರು ಹಿರಿಯರು. ಕುಮಾರಸ್ವಾಮಿ, ಸಾರಾ ಮಹೇಶ್ ಹೊಟ್ಟೆಕಿಚ್ಚಿನಿಂದ ಮಾತಾಡ್ತೀದಾರೆ. ನಾವು ಮಾಡಲಾಗದ್ದನ್ನು ಬಿಜೆಪಿ ಮಾಡಿದೆ ಎಂಬ ಹೊಟ್ಟೆಕಿಚ್ಚು ಅವರದು ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ರಥ ಬೀದಿಯಲ್ಲಿ ಅರೆಬರೆ ವಸ್ತ್ರ ಧರಿಸಿದವರ ಸಂಚಾರಕ್ಕೆ ನಿಷೇಧ!

    Live Tv
    [brid partner=56869869 player=32851 video=960834 autoplay=true]

  • ಟಿಪ್ಪು ಪ್ರತಿಮೆ ಸ್ವಂತ ಜಾಗದಲ್ಲಿ ಕಟ್ತೀವಿ ಅಂದ್ರೂ ಬಿಡಲ್ಲ, ಬಾಬ್ರಿ ಮಸೀದಿ ರೀತಿ ಧ್ವಂಸ ಮಾಡ್ತೇವೆ – ಮುತಾಲಿಕ್

    ಟಿಪ್ಪು ಪ್ರತಿಮೆ ಸ್ವಂತ ಜಾಗದಲ್ಲಿ ಕಟ್ತೀವಿ ಅಂದ್ರೂ ಬಿಡಲ್ಲ, ಬಾಬ್ರಿ ಮಸೀದಿ ರೀತಿ ಧ್ವಂಸ ಮಾಡ್ತೇವೆ – ಮುತಾಲಿಕ್

    ಶಿವಮೊಗ್ಗ: ಟಿಪ್ಪು ಪ್ರತಿಮೆಯನ್ನ (Tippu Statue) ಹಠದಿಂದ ಸ್ವಂತ ಜಾಗದಲ್ಲಿ ಕಟ್ಟುತ್ತೀವಿ ಅಂದ್ರೂ ಬಿಡಲ್ಲ. ಬಾಬ್ರಿ ಮಸೀದಿ (Babri Masjid) ಧ್ವಂಸ ಮಾಡಿದ ರೀತಿಯಲ್ಲೇ ಟಿಪ್ಪು ಸುಲ್ತಾನ್ ಮೂರ್ತಿಯನ್ನು ಹೊಡೆದು ಹಾಕ್ತೀವಿ ಎಂದು ಶ್ರೀರಾಮಸೇನೆ (SriRamsena) ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಎಚ್ಚರಿಕೆ ನೀಡಿದ್ದಾರೆ.

    ಮೈಸೂರು ಎನ್.ಆರ್ ಕ್ಷೇತ್ರದ ಶಾಸಕ ತನ್ವೀರ್ ಸೇಠ್ (Tanveer Sait) `100 ಅಡಿ ಎತ್ತರದ ಟಿಪ್ಪು ಸುಲ್ತಾನ್ ಮೂರ್ತಿ ಸ್ಥಾಪಿಸೋದು ಖಚಿತ’ ಎಂಬ ಹೇಳಿಕೆಗೆ ಮುತಾಲಿಕ್ (Pramod Muthalik) ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: 100 ಅಡಿ ಎತ್ತರದ ಟಿಪ್ಪು ಪ್ರತಿಮೆ ಸ್ಥಾಪಿಸೋದು ನಿಶ್ಚಿತ: ತನ್ವೀರ್ ಸೇಠ್

    tippu

    ಪ್ರತಿಮೆ ನಿರ್ಮಾಣದ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ಮಾಡ್ತೀವಿ. ಹಠದಿಂದ ಸ್ವಂತ ಜಾಗದಲ್ಲಿ ಕಟ್ಟುತ್ತೀವಿ ಅಂದ್ರು ಬಿಡಲ್ಲ. ನಿಮ್ದು ಸ್ವಂತ ಜಾಗ ಯಾವುದೂ ಇಲ್ಲ. ಎಲ್ಲಾ ಜಾಗ ಹಿಂದೂಗಳದ್ದು, ಭಾರತ ದೇಶದ್ದು. ಇವತ್ತು ಟಿಪ್ಪು ಸುಲ್ತಾನ್‌ಗೆ ಕೊಟ್ಟರೆ ನಾಳೆ ಔರಂಗಜೇಬ್, ಬಾಬರ್ ಪ್ರತಿಮೆಯನ್ನೂ ಕಟ್ಟುತ್ತೀರಿ. ಹಾಗಾಗಿ ಟಿಪ್ಪು ಮೂರ್ತಿ ಸ್ಥಾಪನೆಗೆ ಅವಕಾಶ ಕೊಡಲ್ಲ ಎಂದು ಹೇಳಿದ್ದಾರೆ.

    ಶಾಸಕ ತನ್ವೀರ್ ಸೇಠ್ ಮುಸ್ಲಿಮರ (Muslim Community) ತತ್ವ, ಸಿದ್ಧಾಂತಗಳನ್ನ ಗಾಳಿಗೆ ತೂರುತ್ತಿದ್ದಾರೆ. ಒಂದು ವೇಳೆ ಟಿಪ್ಪು ಪ್ರತಿಮೆ ನಿರ್ಮಾಣಕ್ಕೆ ಮುಂದಾದರೆ `ಚಲೋ ಮೈಸೂರು’ ಕರೆ ಕೊಡ್ತೀವಿ, ಬಾಬ್ರಿ ಮಸೀದಿ ಧ್ವಂಸ ಮಾಡಿದ ರೀತಿಯಲ್ಲೇ ಮೂರ್ತಿಯನ್ನ ಹೊಡೆದು ಹಾಕ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ.

    ಟಿಪ್ಪು ಸುಲ್ತಾನ್ (Tippu Sultan) ಮತಾಂಧ, ಒಬ್ಬ ದ್ರೋಹಿ, ಕನ್ನಡ ವಿರೋಧಿ, ಸಾವಿರಾರು ದೇವಸ್ಥಾನ ಭಗ್ನಗೊಳಿಸಿ ಮಸೀದಿ ಕಟ್ಟಿಸಿದ ಧೂರ್ತ. ಲಕ್ಷಾಂತರ ಹಿಂದೂಗಳನ್ನು ಕ್ರೌರ್ಯದಿಂದ, ಮೋಸದಿಂದ ಮತಾಂತರ ಮಾಡಿದ. ಮೋಸದಿಂದ ಮೈಸೂರು ಮಹಾರಾಜ, ಮಹಾರಾಣಿ ಅವರನ್ನು ಬಂಧನದಲ್ಲಿಟ್ಟು ಹಾಳು ಮಾಡಿದ ವ್ಯಕ್ತಿ. ಅಂತಹವನ ಮೂರ್ತಿ ಪ್ರತಿಷ್ಠಾಪನೆ ಮಾಡಲು ಎಲ್ಲಿಯೂ ಅವಕಾಶ ಕೊಡಲ್ಲ ಎಂದು ಪಟ್ಟುಹಿಡಿದಿದ್ದಾರೆ. ಇದನ್ನೂ ಓದಿ: ಮುಸ್ಲಿಮರ ಮತಕ್ಕಾಗಿ ಹಿಂದೂಗಳ ಅವಹೇಳನ ಮಾಡ್ತಿರೋದು ನೀಚ ಕೆಲಸ – ಜಾರಕಿಹೊಳಿ ವಿರುದ್ಧ ಮುತಾಲಿಕ್ ಆಕ್ರೋಶ

     

    ಈ ಬಾರಿ ಚುನಾವಣೆಯಲ್ಲಿ (Election 2023) ಮುಸ್ಲಿಮರೇ ತನ್ವೀರ್‌ಸೇಠ್ ಅವರಿಗೆ ಓಟ್ ಹಾಕಲ್ಲ. ಆದ್ದರಿಂದ ಅವರೊಬ್ಬ ಕಟ್ಟಾ ಮುಸ್ಲಿಂ ವಾದಿ, ಕಟ್ಟಾ ಟಿಪ್ಪುವಾದಿ ಅಂತಾ ತೋರಿಸುವ ಪ್ರಯತ್ನ ಮಾಡ್ತಿದ್ದಾರೆ. ಇದಕ್ಕೆ ನಾನಂತೂ ಅವಕಾಶ ಕೊಡಲ್ಲ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]