Tag: tank

  • ಪ್ರೇಯಸಿಯನ್ನು ಕೊಂದು ಟ್ಯಾಂಕ್‌ನಲ್ಲಿ ಬಚ್ಚಿಟ್ಟ ಭೂಪ ಅಂದರ್

    ಪ್ರೇಯಸಿಯನ್ನು ಕೊಂದು ಟ್ಯಾಂಕ್‌ನಲ್ಲಿ ಬಚ್ಚಿಟ್ಟ ಭೂಪ ಅಂದರ್

    ಲಕ್ನೋ: ವ್ಯಕ್ತಿಯೋರ್ವ ತನ್ನ ಪ್ರಿಯತಮೆಯನ್ನು (Lover) ಕೊಂದು ಆಕೆಯ ಶವವನ್ನು ನಿರ್ಮಾಣ ಹಂತದಲ್ಲಿರುವ ತನ್ನ ಮನೆಯ ಟ್ಯಾಂಕ್‌ನಲ್ಲಿ (Tank) ಬಚ್ಚಿಟ್ಟ ಘಟನೆ ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ನಲ್ಲಿ (Prayagraj) ನಡೆದಿದೆ.

    ರಾಜ್ ಕೇಸರ್ (35) ಕೊಲೆಯಾದ ಮಹಿಳೆ. ಯಮುನಾಪರ್ ಪೊಲೀಸ್ ಠಾಣಾ ವ್ಯಾಪ್ತಿಯ ಮಾಹೇವಾ ಪ್ರದೇಶದಲ್ಲಿ ಘಟನೆ ನಡೆದಿದ್ದು, ಆರೋಪಿ ಅರವಿಂದ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈತ 15 ದಿನಗಳ ಹಿಂದೆ ತನ್ನ ಪ್ರೇಯಸಿಯನ್ನು ಕೊಂದು ನಿರ್ಮಾಣ ಹಂತದಲ್ಲಿರುವ ತನ್ನ ಮನೆಯ ಟ್ಯಾಂಕ್‌ನಲ್ಲಿ ಆಕೆಯ ಶವವನ್ನು ಬಚ್ಚಿಟ್ಟಿದ್ದ ಎಂದು ಸ್ಟೇಷನ್ ಹೌಸ್ ಆಫೀಸರ್ (SHO) ತಿಳಿಸಿದ್ದಾರೆ. ಇದನ್ನೂ ಓದಿ: ಮದ್ವೆಯಾಗಿ ಮುಚ್ಚಿಟ್ಟಿದ್ದರು – ಡೆಡ್ಲಿ ಮರ್ಡರ್ ತನಿಖೆ ವೇಳೆ ಸ್ಫೋಟಕ ರಹಸ್ಯ ಬಯಲು

    ಮೇ 30ರಂದು ಕೇಸರ್ ಅವರ ಕುಟುಂಬವು ಆಕೆ ಕಾಣೆಯಾಗಿದ್ದಾಳೆ ಎಂದು ದೂರು ನೀಡಿತ್ತು. ಈ ಹಿನ್ನೆಲೆ ಆಕೆಯ ಫೋನ್ ಕರೆ ವಿವರಗಳ ಆಧಾರದ ಮೇಲೆ ಅರವಿಂದ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಸತ್ಯಾಂಶ ಬಯಲಾಗಿದೆ ಎಂದು ಎಸ್‌ಹೆಚ್‌ಒ ವಿಶ್ವಜಿತ್ ಸಿಂಗ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮುಂಬೈ, ದೆಹಲಿಯಷ್ಟೇ ಅಲ್ಲ ಬೆಂಗ್ಳೂರಲ್ಲೂ ಹೆಚ್ಚಾಗ್ತಿದೆ ಲಿವಿಂಗ್ ರಿಲೇಷನ್ ಕೊಲೆ ಕೇಸ್

    ಆರೋಪಿಯ ಮನೆಯಿಂದ ಮೃತದೇಹವನ್ನು ವಶಕ್ಕೆ ಪಡೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ರೈಲು ದುರಂತದ ಬಳಿಕ ಒಡಿಶಾದಲ್ಲಿ ಒಂದಿಲ್ಲೊಂದು ಅವಘಡ – ರೈಲು ಬೋಗಿಯಲ್ಲಿ ಆಕಸ್ಮಿಕ ಬೆಂಕಿ

  • ಮನೆಯಲ್ಲಿದ್ದ ನಾಲ್ವರನ್ನು ಬರ್ಬರವಾಗಿ ಹತ್ಯೆಗೈದು ತಾನೂ ಸತ್ತ

    ಮನೆಯಲ್ಲಿದ್ದ ನಾಲ್ವರನ್ನು ಬರ್ಬರವಾಗಿ ಹತ್ಯೆಗೈದು ತಾನೂ ಸತ್ತ

    ಜೈಪುರ: ನಾಲ್ವರು ಕುಟುಂಬಸ್ಥರನ್ನು ಕೊಂದು 38 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಸ್ಥಾನದ (Rajastan) ಜೋಧಪುರದಲ್ಲಿ (Jodhpur) ನಡೆದಿದೆ.

    ಆರೋಪಿಯನ್ನು ಶಂಕರ್ ಲಾಲ್ ಎಂದು ಗುರುತಿಸಲಾಗಿದ್ದು, ಶುಕ್ರವಾರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತಂದೆ ಸೋನಾರಾಮ್ (65) ಅನ್ನು ಕೊಡಲಿಯಿಂದ ಕೊಚ್ಚಿ ಹತ್ಯೆಗೈದು, ಬಳಿಕ ತಾಯಿ ಚಂಪಾ (55), ಆರೋಪಿಯ ಮಕ್ಕಳಾದ ಲಕ್ಷ್ಮಣ್ (14), ಮತ್ತು ದಿನೇಶ್ (8) ಅನ್ನು ಹತ್ಯೆಗೈದಿದ್ದಾನೆ. ನಂತರ ಶವಗಳನ್ನು ತನ್ನ ಮನೆಯ ನೀರಿನ ಟ್ಯಾಂಕ್‍ಗೆ ಎಸೆದು, ಸಮೀಪದ ಸಂಬಂಧಿಕರ ಮನೆಗೆ ತೆರಳಿ ಅವರ ಮನೆಯ ಟ್ಯಾಂಕ್‍ಗೆ ಹಾರಿ ಶಂಕರ್ ಲಾಲ್ ಆತ್ಮಹತ್ಯೆಗೆ ಶರಣಾಗಿದ್ದಾನೆ.  ಇದನ್ನೂ ಓದಿ: ಗುಜರಾತ್‌ ಚುನಾವಣೆ – ಮಾಜಿ ಪತ್ರಕರ್ತ, ಟಿವಿ ಆ್ಯಂಕರ್‌ ಇಸುದನ್‌ ಗಧ್ವಿ ಎಎಪಿ ಸಿಎಂ ಅಭ್ಯರ್ಥಿ

    ಪೀಲ್ವಾ ಗ್ರಾಮದಲ್ಲಿ ರೈತನಾಗಿದ್ದ ಶಂಕರ್ ಲಾಲ್ ಅಫೀಮು ವ್ಯಸನಿಯಾಗಿದ್ದ. ಆತನ ಪತ್ನಿ ಮತ್ತು ಕುಟುಂಬಸ್ಥರಿಗೆ ಮಾದಕ ದ್ರವ್ಯ ಬೆರೆಸಿ ನೀಡಿದರಿಂದ ಅವರಿಗೆ ನಡೆಯುತ್ತಿದ್ದ ಘಟನೆ ಬಗ್ಗೆ ತಿಳಿದು ಬಂದಿಲ್ಲ ಎಂದು ಪೊಲೀಸರು ಶಂಕಿಸಿದ್ದಾರೆ. ಶನಿವಾರ ಬೆಳಗ್ಗೆ ನೀರಿನ ಟ್ಯಾಂಕ್‍ನಿಂದ ಮೃತದೇಹಗಳನ್ನು ಹೊರತೆಗೆದು ಘಟನೆ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ನಮ್ಮ ಪಕ್ಷದ ಕಾರ್ಯಕರ್ತರಿಂದ ಹಣ ಸಂಗ್ರಹಿಸಿದ್ರೆ ಬಿಜೆಪಿಯವರಿಗೇನು ನೋವು?: ಡಿ.ಕೆ. ಶಿವಕುಮಾರ್

    Live Tv
    [brid partner=56869869 player=32851 video=960834 autoplay=true]

  • ಚಲಿಸುತ್ತಿದ್ದ ಟ್ಯಾಂಕರ್‌ನಿಂದ ಕಳಚಿದ ಗ್ಯಾಸ್ ಟ್ಯಾಂಕ್- ತಪ್ಪಿದ ಭಾರೀ ದುರಂತ

    ಚಲಿಸುತ್ತಿದ್ದ ಟ್ಯಾಂಕರ್‌ನಿಂದ ಕಳಚಿದ ಗ್ಯಾಸ್ ಟ್ಯಾಂಕ್- ತಪ್ಪಿದ ಭಾರೀ ದುರಂತ

    ಕಾರವಾರ: ಚಲಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ನ ಟ್ಯಾಂಕ್ ಕಳಚಿ ಹೆದ್ದಾರಿಗೆ ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಅರೆಬೈಲ್ ಗಟ್ಟದಲ್ಲಿ ನಡೆದಿದೆ.

    ಮಹಾರಾಷ್ಟ್ರ ಮೂಲದ ಮಂಗಳೂರಿನಿಂದ ಹುಬ್ಬಳ್ಳಿ ಕಡೆ ಭಾರತ್ ಗ್ಯಾಸ್ ಟ್ಯಾಂಕರ್ ಚಲುಸುತಿದ್ದಾಗ ಟ್ಯಾಂಕರ್ ನ ಕೊಂಡಿ ಕಳಚಿದ್ದರಿಂದ ಹೆದ್ದಾರಿಗೆ ಬಿದ್ದಿದೆ. ತಕ್ಷಣ ಹೆದ್ದಾರಿ ನಿರ್ವಹಣೆ ಮಾಡುವ ಸಿಬ್ಬಂದಿ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಪೊಲೀಸರು ಹಾಜರಾಗಿ ಯಾವುದೇ ದುರಂತವಾಗದಂತೆ ತಡೆದಿದ್ದಾರೆ. ಇದನ್ನೂ ಓದಿ: ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಕಳ್ಳ ಅಂದರ್

    ಈ ಸಂದರ್ಭದಲ್ಲಿ ಕೆಲ ಸಮಯ ಹುಬ್ಬಳ್ಳಿ-ಅಂಕೋಲ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಸಂಚಾರ ವ್ಯತ್ಯಯವಾಗಿತ್ತು. ಯಲ್ಲಾಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೆಚ್ಚಿನ ವಿವರಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

  • ಸಂಪ್‍ಗೆ ಬಿದ್ದ ಮಗು – ಒಂದು ನಿಮಿಷದ ಬಳಿಕ ಹೊರ ತೆಗೆದ್ರು!

    ಸಂಪ್‍ಗೆ ಬಿದ್ದ ಮಗು – ಒಂದು ನಿಮಿಷದ ಬಳಿಕ ಹೊರ ತೆಗೆದ್ರು!

    – ಸಾವು ಗೆದ್ದು ಬಂದ ಪುಟ್ಟ ಕಂದ

    ಬೆಂಗಳೂರು: ಸಂಪ್‍ಗೆ ಬಿದ್ದ ಮಗುವನ್ನ ರಕ್ಷಿಸಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಎರಡನೇ ಹಂತದಲ್ಲಿ ನಡೆದಿದೆ. ಮಗು ರಕ್ಷಣೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಏಪ್ರಿಲ್ 3ರಂದು ಎಲೆಕ್ಟ್ರಾನಿಕ್ ಸಿಟಿಯ ಆಂಧ್ರ ಮೆಸ್ ಕಟ್ಟಡದ ಸಂಪಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತಿತ್ತು. ನೀರು ತುಂಬಿಸುವ ವೇಳೆ ಟ್ಯಾಂಕರ್ ಸಿಬ್ಬಂದಿ ಅಥವಾ ಕಟ್ಟಡದ ಮಾಲೀಕರು ಸಹ ಅಲ್ಲಿ ಇರಲಿಲ್ಲ. ಈ ವೇಳೆ ಆಟವಾಡುತ್ತಾ ಬಂದ ಮಗು ತೆರೆದ ಸಂಪ್‍ಗೆ ಬಿದ್ದಿದೆ. ಮಗು ಸಂಪ್ ಒಳಗೆ ಬಿದ್ದ ಕೆಲವೇ ಕ್ಷಣಗಳಲ್ಲಿ ಜನ ಅಲ್ಲಿಯೇ ಓಡಾಡಿದ್ದಾರೆ. ಆದ್ರೆ ಮಗು ಬಿದ್ದಿರೋದು ಯಾರ ಗಮನಕ್ಕೂ ಬಂದಿಲ್ಲ.

    ಸುಮಾರು ಒಂದೂವರೆ ನಿಮಿಷದ ಬಳಿಕ ಮಗುವನ್ನ ಹುಡುಕಿಕೊಂಡ ಬಂದ ತಂದೆ ಸಂಪ್ ನಲ್ಲಿ ಇಣುಕಿ ನೋಡಿದ್ದಾರೆ. ಮಗು ಕಾಣಿಸುತ್ತಿದ್ದಂತೆ ಸಂಪ್ ಗೆ ಇಳಿದ ಕಂದನ ರಕ್ಷಣೆ ಮಾಡಿದ್ದಾರೆ. ನಂತರ ಮಗುವಿನ ತಾಯಿ ಬಂದು ಮಗುವನ್ನ ಮೇಲೆತ್ತಿಕೊಂಡಿದ್ದಾರೆ. ನಂತರ ಸೇರಿದ ಜನ ಮಗುವಿನ ತಂದೆಗೆ ಸಂಪ್ ನಿಂದ ಹೊರ ಬರಲು ಸಹಾಯ ಮಾಡಿದ್ದಾರೆ. ಸುಮಾರು ಒಂದು ನಿಮಿಷಕ್ಕೂ ಅಧಿಕ ಕಾಲ ಸಂಪ್ ನಲ್ಲಿ ಬಿದ್ದಿದ್ದ ಮಗು ಸಾವನ್ನು ಗೆದ್ದು ಬಂದಿದೆ.

  • ಟ್ಯಾಂಕಿಗೆ ಬಿದ್ದು ಮಹಿಳೆ ಆತ್ಮಹತ್ಯೆ- 3 ದಿನ ಅದೇ ನೀರು ಕುಡಿದ ಅಪಾರ್ಟ್‍ಮೆಂಟ್ ನಿವಾಸಿಗಳು

    ಟ್ಯಾಂಕಿಗೆ ಬಿದ್ದು ಮಹಿಳೆ ಆತ್ಮಹತ್ಯೆ- 3 ದಿನ ಅದೇ ನೀರು ಕುಡಿದ ಅಪಾರ್ಟ್‍ಮೆಂಟ್ ನಿವಾಸಿಗಳು

    ಬೆಂಗಳೂರು: ಕಳೆದ ಶುಕ್ರವಾರದಿಂದ ಕಾಣೆಯಾಗಿದ್ದ 49 ವರ್ಷದ ಮಹಿಳೆ ತಾನು ವಾಸವಾಗಿದ್ದ ಅಪಾರ್ಟ್ ಮೆಂಟ್ ಟ್ಯಾಂಕಿನಲ್ಲಿ ಶವವಾಗಿ ಭಾನುವಾರ ಪತ್ತೆಯಾಗಿದ್ದಾರೆ. ಈ ಘಟನೆ ಯಲಹಂಕದ ನ್ಯೂಟೌನ್ ನಡೆದಿದೆ.

    ಇತ್ತ ಅಪಾರ್ಟ್‍ಮೆಂಟ್ ನಿವಾಸಿಗಳು ಅದೇ ಟ್ಯಾಂಕಿನ ನೀರು ಬಳಸುತ್ತಿದ್ದರು. ಹೀಗಾಗಿ ಯಾಕೋ ನೀರು ವಾಸನೆ ಬರುತ್ತಿದೆ ಎಂದು ಪ್ಲಂಬರ್ ನನ್ನು ಕರೆಸಿದ್ದಾರೆ. ಈ ವೇಳೆ ಟ್ಯಾಂಕಿನಲ್ಲಿ ಮಹಿಳೆಯ ಶವ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

    ಮೃತ ಮಹಿಳೆಯನ್ನು ಗೌರಿ ನಾಗರಾಜ್ ಎಮದು ಗುರುತಿಸಲಾಗಿದ್ದು, ಇವರು ಎಸ್‍ಎಂಐಜಿ ಅಪಾರ್ಟ್‍ಮೆಂಟಿನ 5ನೇ ಮಹಡಿಯಲ್ಲಿ ವಾಸವಾಗಿದ್ದರು. ಇವರು ರಿಯಲ್ ಎಸ್ಟೇಟ್ ದಲ್ಲಾಳಿಯಾಗಿದ್ದರು.

    ಉಪಪೊಲೀಸ್ ಆಯುಕ್ತ ಭೀಮಾಶಂಕರ್ ಎಸ್ ಗುಲ್ಡ್ ಈ ಬಗ್ಗೆ ಮಾತನಾಡಿ, ಆರ್ಥಿಕ ಬಿಕ್ಕಟ್ಟಿನಿಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಿಳೆಯ ಡೆತ್ ನೋಟ್ ಪತ್ತೆಯಾಗಿದ್ದು, ಈ ಸಂಬಂಧ ಜಯಸೂರ್ಯ ಡೆವಲಪರ್ಸ್‍ನ ಗೋಪಿ, ಭಾರ್ಗವ್ ಹಾಗೂ ದೇವರಾಜಪ್ಪ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಇತ್ತ ಗೌರಿ ಪತಿ ಹೆಚ್‍ಬಿ ನಾಗರಾಜ್ ಅವರು ಜೂನ್ 24 ರಂದು ರಾತ್ರಿ, ಮಧ್ಯಾಹ್ನದ ಬಳಿಕ ನನ್ನ ಪತ್ನಿ ನಾಪತ್ತೆಯಾಗಿದ್ದಾಳೆಂದು ಪೊಲೀಸರಿಗೆ ದೂರು ನೀಡಿದ್ದರು. ಡೆತ್‍ನೋಟ್‍ನಲ್ಲಿ, ನಾನು ಕೆಲವರಿಂದ ಹಣ ಪಡೆದುಕೊಂಡು ರೆಸೊಡೆನ್ಶಿಯಲ್ ಸೈಟ್ ಕೊಡುವುದಾಗಿ ಭರವಸೆ ನೀಡಿದ್ದೆ. ಬಳಿಕ ಹಣವನ್ನೆಲ್ಲ ಜಯಸೂರ್ಯ ಡೆವಲಪರ್ಸ್‍ಗೆ ನಿಡಿದ್ದೇನೆ. ಆದರೆ ಬಿಲ್ಡರ್ ಗಳು ಸೈಟ್ ಕೊಡಿಸಲಿಲ್ಲ ಇತ್ತ ಹಣವನ್ನೂ ವಾಪಸ್ ಮಾಡಲಿಲ್ಲ ಎಂದು ಬರೆದಿದೆ. ಈ ಸಂಬಂಧ ಕೆಲವು ಶಂಕಿತರನ್ನು ವಿಚಾರಣೆ ನಡೆಸುತ್ತಿದ್ದೇವೆ ಎಮದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ಕುಡಿಯುವ ನೀರಿನ ಟ್ಯಾಂಕಿನಲ್ಲಿ ಕ್ರಿಮಿನಾಶಕ ಪ್ರಕರಣ- ಚಿಕಿತ್ಸೆ ಫಲಿಸದೇ ರಕ್ತವಾಂತಿಯಾಗಿ ಮಹಿಳೆ ಸಾವು

    ಕುಡಿಯುವ ನೀರಿನ ಟ್ಯಾಂಕಿನಲ್ಲಿ ಕ್ರಿಮಿನಾಶಕ ಪ್ರಕರಣ- ಚಿಕಿತ್ಸೆ ಫಲಿಸದೇ ರಕ್ತವಾಂತಿಯಾಗಿ ಮಹಿಳೆ ಸಾವು

    ಯಾದಗಿರಿ: ಕುಡಿಯುವ ನೀರಿನ ಟ್ಯಾಂಕಿನಲ್ಲಿ ದುಷ್ಕರ್ಮಿಗಳು ಕ್ರಿಮಿನಾಶಕ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೇ ರಕ್ತವಾಂತಿ ಆಗಿ ಇಂದು ಮೃತಪಟ್ಟಿದ್ದಾರೆ.

    ಜಿಲ್ಲೆಯ ಸುರಪುರ ತಾಲೂಕಿನ ಮುದನೂರ ಕೆ ಗ್ರಾಮದಲ್ಲಿ ಬುಧವಾರ ಈ ಘಟನೆ ನಡೆದಿದೆ. ಪಂಪ್ ಆಪರೇಟರ್ ಮೌನೇಶ್ ತಾಯಿ ಹೊನ್ನಮ್ಮ ಚಿಕಿತ್ಸೆ ಫಲಿಸದೇ ರಕ್ತ ವಾಂತಿ ಮಾಡಿಕೊಂಡು ಇಂದು ಮೃತಪಟ್ಟಿದ್ದಾರೆ. ಬುಧವಾರ ತಪಾಸಣೆಗೆಂದು ಕ್ರಿಮಿನಾಶಕ ಬೆರೆಸಿದ ಕುಡಿಯುವ ನೀರು ಕುಡಿದು ಹೊನ್ನಮ್ಮ ಅಸ್ವಸ್ಥಗೊಂಡಿದ್ದರು. ಬಳಿಕ ಅವರನ್ನು ಯಾದಗಿರಿಯ ಕೆಂಬಾವಿಯಲ್ಲಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಕಲಬುರಗಿಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.

    ಕುಡಿಯುವ ನೀರಿಗೆ ದುಷ್ಕರ್ಮಿಗಳು ಬುಧವಾರ ಕ್ರಿಮಿನಾಶಕ ಬೆರೆಸಿದ್ದರು. ಸುರಪುರ ತಾಲೂಕಿನ ಮುದನೂರ ಕೆ ಗ್ರಾಮದ ಹೊರಭಾಗದಲ್ಲಿರುವ ಬಾವಿಯ ನೀರು ಶಾಖಾಪುರ ಹಾಗೂ ತೆಗ್ಗಳ್ಳಿ ಗ್ರಾಮಕ್ಕೆ ಫಿಲ್ಟರ್ ಅಗಿ ಸರಬರಾಜಾಗ್ತಿತ್ತು. ಆದರೆ ಯಾರೋ ಕಿಡಿಗೇಡಿಗಳು ಈ ನೀರಿಗೆ ಭತ್ತದ ಬೆಳೆಗೆ ಸಿಂಪಡಿಸುವ ಕ್ರಿಮಿನಾಶಕ ಬೆರೆಸಿದ್ದರು.

    ಈ ನೀರು ಕುಡಿದ ಪಂಪ್ ಆಪರೇಟರ್ ತಾಯಿ ನಾಗಮ್ಮ ಸೇರಿ ಐವರು ಅಸ್ವಸ್ಥರಾಗಿದ್ದು ಕೆಂಬಾವಿ ಆಸ್ಪತ್ರೆಗೆ ದಾಖಲಾಗಿದ್ದರು. ತಕ್ಷಣ ಎಚ್ಚೆತ್ತುಕೊಂಡ ಪಂಪ್ ಆಪರೇಟರ್ ಮೌನೇಶ್ ನೀರು ಪೂರೈಕೆ ಸ್ಥಗಿತಗೊಳಿಸಿ ಗ್ರಾಮದಲ್ಲಿ ಯಾರು ಈ ನೀರು ಕುಡಿಯಬೇಡಿ ಎಂದು ಡಂಗೂರ ಸಾರಿಸಿ ದೊಡ್ಡ ಅನಾಹುತ ತಪ್ಪಿಸಿದ್ದರು. ಸದ್ಯ ಬಾವಿಯ ನೀರು ಖಾಲಿ ಮಾಡಿಸಲಾಗ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತೆರೆದ ಟ್ಯಾಂಕ್ ಗೆ ಬಿದ್ದ 12 ಅಡಿ ಉದ್ದದ ಹೆಬ್ಬಾವು!

    ತೆರೆದ ಟ್ಯಾಂಕ್ ಗೆ ಬಿದ್ದ 12 ಅಡಿ ಉದ್ದದ ಹೆಬ್ಬಾವು!

    ಕಾರವಾರ: ಭಾರೀ ಮಳೆಯ ಪರಿಣಾಮ ಅರಣ್ಯದಿಂದ ಹರಿದ ನೀರಿನೊಂದಿಗೆ 12 ಅಡಿ ಉದ್ದದ ಹೆಬ್ಬಾವೊಂದು ತೆರೆದ ನೀರಿನ ಟ್ಯಾಂಕ್ ನಲ್ಲಿ ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ.

    ನಗದ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಪೂರ್ಣಿಮಾ ಹೋಟೆಲಿನ ಹಿಂಭಾಗದಲ್ಲಿದ್ದ ಗುಡ್ಡದಲ್ಲಿ ಮಳೆಯ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬಂದಿದೆ. ಇದರೊಂದಿಗೆ ಹೆಬ್ಬಾವು ತೇಲಿಬಂದು ಇಲ್ಲಿನ ತೆರೆದ ನೀರಿನ ಟ್ಯಾಂಕ್ ಗೆ ಬಿದ್ದಿದೆ.

    ಇದನ್ನು ಗಮನಿಸಿದ ಹೋಟೆಲ್ ಸಿಬ್ಬಂದಿಗಳು ಉರಗ ತಜ್ಞ ಪವನ್ ರವರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪವನ್ ಸುಮಾರು ಹತ್ತು ಅಡಿಗಳಷ್ಟು ಆಳವಿದ್ದ ಟ್ಯಾಂಕ್ ನಿಂದ ಹೆಬ್ಬಾವನ್ನು ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

    ಮಳೆಗಾಲ ಹೆಚ್ಚಾದಾಗ ಆಹಾರ ಹುಡುಕಿ ಕಾಡಿನಿಂದ ಹೆಬ್ಬಾವುಗಳು ವಲಸೆ ಬರುವುದು ಸಾಮಾನ್ಯವಾಗಿದೆ. ಆದರೆ ಕೆಲವೊಮ್ಮೆ ಮಳೆ ನೀರಿಗೆ ಕೊಚ್ಚಿ ಮಾನವ ನಿರ್ಮಿತ ಬಾವಿಗಳು ಹಾಗೂ ಈ ರೀತಿಯ ತೆರೆದ ಟ್ಯಾಂಕ್ ಗಳಲ್ಲಿ ಬಿದ್ದು ಎಷ್ಟೋ ಹಾವುಗಳು ಆಹಾರವಿಲ್ಲದೆ ಸಾವನ್ನಪ್ಪುತ್ತವೆ ಎಂದು ಉರಗ ತಜ್ಞ ಪವನ್ ಹೇಳಿದ್ದಾರೆ.

  • ಗಮನಿಸಿ, ಟ್ಯಾಂಕರ್ ಪಲ್ಟಿಯಾದರೆ ತೈಲ ತುಂಬಿಸೋ ಮುನ್ನ ಈ ಸುದ್ದಿ ಓದಿ

    ಗಮನಿಸಿ, ಟ್ಯಾಂಕರ್ ಪಲ್ಟಿಯಾದರೆ ತೈಲ ತುಂಬಿಸೋ ಮುನ್ನ ಈ ಸುದ್ದಿ ಓದಿ

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ತೈಲ ಟ್ಯಾಂಕರೊಂದು ಪಲ್ಟಿಯಾಗಿ ಬಳಿಕ ಸ್ಫೋಟಗೊಂಡ ಪರಿಣಾಮ 123 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾದ ಘಟನೆ ಇಂದು ಮುಂಜಾನೆ ನಡೆದಿದೆ.

    ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ಬಹವಲ್‍ಪುರ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ.

    ನಡೆದಿದ್ದೇನು?: ಹೆದ್ದಾರಿಯಲ್ಲಿ ತೈಲ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದ್ದು, ಅದರಲ್ಲಿದ್ದ ಇಂಧನ ಸೋರಿಕೆಯಾಗುತ್ತಿತ್ತು. ಇದನ್ನು ಕಂಡ ಸ್ಥಳೀಯರು ಇಂಧನ ತುಂಬಿಸಿಕೊಳ್ಳಲೆಂದು ಘಟನಾ ಸ್ಥಳದಲ್ಲಿ ಜಮಾಯಿಸಿದ್ದರು. ಅಪಘಾತದ ತೀವ್ರತೆಗೆ ಟ್ಯಾಂಕರ್ ಭಾರೀ ಶಬ್ಧದೊಂದಿಗೆ ಸ್ಫೋಟಗೊಂಡಿದೆ ಅಂತಾ ಸ್ಥಳೀಯ ಸರ್ಕಾರಿ ಅಧಿಕಾರಿ ಮೊಹಮ್ಮದ್ ಸಲೀಂ ಅಫ್ಜಲ್ ಅಲ್ಲಿನ ಮಾಧ್ಯಮಕ್ಕೆ ವಿವರಿಸಿದ್ದಾರೆ.

    ಟ್ಯಾಂಕರ್ ಸ್ಫೋಟಗೊಳ್ಳುತ್ತಿದ್ದಂತೆಯೇ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವಲ್ಲಿ ಕಾರ್ಯದಲ್ಲಿ ತೊಡಗಿದ್ರು. ಸದ್ಯ ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

    ಈ ರಕ್ಷಣಾ ಕಾರ್ಯಾಚರಣೆಗೆ ಸ್ಥಳೀಯ ಸಿಬ್ಬಂದಿಯ ಜತೆ ಸೇನೆಯೂ ಸಹ ಕೈ ಜೋಡಿಸಿದೆ ಎಂದು ಪಾಕಿಸ್ತಾನದ ಸೇನಾ ವಕ್ತಾರರು ತಿಳಿಸಿದ್ದಾರೆ.

    https://youtu.be/JcfwKTpZ-wU

     

  • ಚಂದ್ರಲೋಕದಲ್ಲಿ ಅನ್ಯ ಗ್ರಹ ಜೀವಿಗಳ ಟ್ಯಾಂಕ್ ಪತ್ತೆ? ವಿಡಿಯೋ ನೋಡಿ

    ಚಂದ್ರಲೋಕದಲ್ಲಿ ಅನ್ಯ ಗ್ರಹ ಜೀವಿಗಳ ಟ್ಯಾಂಕ್ ಪತ್ತೆ? ವಿಡಿಯೋ ನೋಡಿ

    ನವದೆಹಲಿ: ಚಂದ್ರಲೋಕದಲ್ಲಿ ಅನ್ಯ ಗ್ರಹ ಜೀವಿಗಳ ಟ್ಯಾಂಕ್ ಒಂದು ಪತ್ತೆಯಾಗಿದೆ ಎನ್ನುವ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಇದು ಟ್ಯಾಂಕ್ ಅಥವಾ ದೊಡ್ಡ ಬಂಡೆಯಾಗಿರಬಹುದು ಎಂದು ಅನ್‍ಐಡೆಂಟಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್ ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸೆಕ್ಯೂರ್‍ಟೀಂ10 ಹೆಸರಿನ ತಂಡವೊಂದು ಚಂದ್ರ ಲೋಕದಲ್ಲಿ ಕಂಡ ಈ ವಸ್ತುವಿನ ವಿಡಿಯೋವನ್ನು ಯೂ ಟ್ಯೂಬ್‍ನಲ್ಲಿ ಮೇ 9ರಂದು ಅಪ್ಲೋಡ್ ಮಾಡಿದ್ದು 6.29 ಲಕ್ಷ ವ್ಯೂ ಕಂಡಿದೆ.

    ಸಂಶೋಧಕರ ಈ ಸಂಶೋಧನೆಯ ಬಗ್ಗೆ ಫಾಕ್ಸ್ ನ್ಯೂಸ್ ವರದಿ ಮಾಡಿದೆ. ಚಂದ್ರನ ನೆಲದಲ್ಲಿ ಟ್ಯಾಂಕ್ ರೀತಿಯ ವಸ್ತುವೊಂದು ಪತ್ತೆಯಾಗಿದೆ ಎಂದು ಸೆಕ್ಯೂರ್‍ಟೀಂ10 ವಿಡಿಯೋದಲ್ಲಿ ಹೇಳಿಕೊಂಡಿದೆ.