Tag: tanisha kuppanda

  • Bigg Boss: ತನಿಷಾ, ವರ್ತೂರು ಸಮ್‌ಥಿಂಗ್‌ ಸಮ್‌ಥಿಂಗ್‌ ಬಗ್ಗೆ ಸುದೀಪ್‌ ರಿಯಾಕ್ಷನ್

    Bigg Boss: ತನಿಷಾ, ವರ್ತೂರು ಸಮ್‌ಥಿಂಗ್‌ ಸಮ್‌ಥಿಂಗ್‌ ಬಗ್ಗೆ ಸುದೀಪ್‌ ರಿಯಾಕ್ಷನ್

    ದೊಡ್ಮನೆಯಲ್ಲಿ ನಮ್ರತಾ-ಸ್ನೇಹಿತ್, ಕಾರ್ತಿಕ್-ಸಂಗೀತಾ, ಇಶಾನಿ-ಮೈಕಲ್ ಜೋಡಿಯ ಲವ್ ಟ್ರ್ಯಾಕ್ ಶುರುವಾಗಿರೋದು ಗೊತ್ತೇ ಇದೆ. ಇದರ ನಡುವೆ ನಿಧಾನವಾಗಿ ತನಿಷಾ ಮತ್ತು ವರ್ತೂರು ಸಂತೋಷ್ ಜೋಡಿಯಾಗುವ ಲಕ್ಷಣ ಕಾಣ್ತಿದೆ. ಇದನ್ನೆಲ್ಲಾ ಗಮನಿಸಿರೋ ಸುದೀಪ್ ಕೂಡ ತನಿಷಾ (Tanisha Kuppanda) ಹೆಸರು ಹೇಳಿ ವರ್ತೂರುಗೆ ಕಾಲೆಳೆದಿದ್ದಾರೆ. ಇದನ್ನೂ ಓದಿ:ಎದೆಯ ಗೀಟು ಕಾಣುವಂತೆ ಕ್ಯಾಮೆರಾಗೆ ಪೋಸ್‌ ಕೊಟ್ಟ ‘ಗಿಲ್ಲಿ’ ನಟಿ

    ಈ ಶನಿವಾರ ದೊಡ್ಮನೆ ಸ್ಪರ್ಧಿಗಳಿಗೆ ಬೆಂಡೆತ್ತಿದ ಮೇಲೆ ‘ಸೂಪರ್ ಸಂಡೇ ವಿತ್ ಸುದೀಪ್’ ಕಾರ್ಯಕ್ರಮದಲ್ಲಿ ಸಖತ್ ಆಗಿ ಕಿಚ್ಚ ಎಲ್ಲರ ಕಾಲೆಳೆದಿದ್ದಾರೆ. ಅದರಲ್ಲಿ ತನಿಷಾ- ವರ್ತೂರುಗೆ (Varthur Santhos) ತಮಾಷೆ ಮಾಡಿರೋದು ಎಲ್ಲರ ಗಮನ ಸೆಳೆದಿದೆ. ಬಿಗ್ ಬಾಸ್ ಸ್ಪರ್ಧಿಗಳು ಮೂವಿ ಮಾಡಿದ್ರೆ ಆ ಚಿತ್ರಕ್ಕೆ ಏನು ಟೈಟಲ್ ಇರುತ್ತೆ ಎಂಬುದರ ಬಗ್ಗೆ ತೋರಿಸಲಾಗಿದೆ. ಸಿರಿ, ಭಾಗ್ಯಶ್ರೀ, ತುಕಾಲಿ ಸಂತೂಗೆ `ಇಬ್ಬರ ಹೆಂಡ್ತಿರ ಮುದ್ದಿನ ಪೊಲೀಸ್ ‘ಎಂದು ಪೋಸ್ಟರ್ ರಿಲೀಸ್ ಮಾಡಿ ರೇಗಿಸಿದ್ರೆ, ಇತ್ತ ತನಿಷಾ- ವರ್ತೂರು ಲವ್ವಿ ಡವ್ವಿ ಬಗ್ಗೆ ಪೋಸ್ಟರ್ ಮೂಲಕ ಪರೋಕ್ಷವಾಗಿ ಕಿಚ್ಚ (Sudeep) ಮಾತಾನಾಡಿದ್ದಾರೆ.

    ಬಳಿಕ ತನಿಷಾಗೆ ಮೊದಲೇ ಬೆಂಕಿ ಎಂದು ದೊಡ್ಮನೆಯಲ್ಲಿ ಹೆಸರಿಟ್ಟಿದ್ದಾರೆ. ಅದನ್ನೇ ಉಪಯೋಗಿಸಿಕೊಂಡು, ‘ಬೆಂಕಿಯ ಬಲೆ’ ಎಂದು ಟೈಟಲ್ ಕೊಟ್ಟು ತನಿಷಾ- ವರ್ತೂರು ಫೋಟೋ ಹಾಕಿದ್ದಾರೆ. ಇದನ್ನ ಎಲ್ಲರೂ ನೋಡ್ತಿದ್ದಂತೆ ಬಿದ್ದು ಬಿದ್ದು ನಕ್ಕಿದ್ದಾರೆ. ಬಳಿಕ ವರ್ತೂರು, ನಾನು ಮಾಮೂಲಾಗಿ ಕ್ಲೋಸ್ ಆಗಿಯೇ ಇರುತ್ತೀನಿ ಎಂದು ತನಿಷಾ ಬಗ್ಗೆ ಹೇಳಿದ್ದಾರೆ. ಅದಕ್ಕೆ ಸುದೀಪ್, ಓಹೋ ನಿಮಗೆ ಕ್ಲೋಸ್ ಆಗಿರೋದೇ ಮಾಮೂಲಾ ಎಂದು ಕಾಲೆಳೆದಿದ್ದಾರೆ. ಕಿಚ್ಚನ ಮಾತಿಗೆ ಸ್ಪರ್ಧಿಗಳು ಚಪ್ಪಾಳೆ ತಟ್ಟುವ ಮೂಲಕ ಬೆಂಬಲ ಸೂಚಿಸಿದ್ದಾರೆ. ಬಳಿಕ ನಿಮ್ಮಿಬ್ಬರದ್ದೂ ಟೊಮೆಟೋ ಸಂಬಂಧ ಅಲ್ವಾ ಅಂತ ತಮಾಷೆ ಮಾಡಿದ್ದಾರೆ ಕಿಚ್ಚ.

    ವರ್ತೂರು- ತನಿಷಾ ಜೊತೆಯಾಗಿ ಡ್ಯಾನ್ಸ್ ಮಾಡಿದ್ರೆ ನಾನು ಈ ವಿಚಾರ ಇಲ್ಲಿಗೆ ಬಿಡ್ತೀನಿ ಎಂದು ಕಿಚ್ಚ ಡಿಮ್ಯಾಂಡ್ ಮಾಡಿದ್ದಾರೆ. ಬಳಿಕ ಲವ್‌ ಆಗಿಹೋಯ್ತು ನಿನ್ನ ಮೇಲೆ ಹಾಡಿಗೆ ಇಬ್ಬರೂ ಹೆಜ್ಜೆ ಹಾಕಿದ್ದಾರೆ.

  • ಬಿಗ್ ಬಾಸ್ ಸ್ಪರ್ಧಿ ತನಿಷಾ ಕುಪ್ಪಂಡ ನಟನೆಯ ‘ಪೆಂಟಗನ್’ ಹಿಂದಿಯಲ್ಲಿ ರಿಲೀಸ್

    ಬಿಗ್ ಬಾಸ್ ಸ್ಪರ್ಧಿ ತನಿಷಾ ಕುಪ್ಪಂಡ ನಟನೆಯ ‘ಪೆಂಟಗನ್’ ಹಿಂದಿಯಲ್ಲಿ ರಿಲೀಸ್

    ದ್ಯ ಬಿಗ್ ಬಾಸ್ ಮನೆಯ ಕೇಂದ್ರಬಿಂದು ಆಗಿರುವ ನಟಿ ತನಿಷಾ ಕುಪ್ಪಂಡ ಮತ್ತು ಇತರರು ನಟನೆಯ ‘ಪೆಂಟಗನ್’ ಸಿನಿಮಾ ಹಿಂದಿಯಲ್ಲಿ (Hindi) ಬಿಡುಗಡೆ ಆಗಿದೆ. ‘ಪೆಂಟಗನ್’ ಈಗ ಹಿಂದಿ ಭಾಷೆಯಲ್ಲಿ ‘ಪೆಂಟಗನ್- ಪಾಂಚ್ ಕಾ ಧಮ್’ ಎಂದು dollywood play ನಲ್ಲಿ ಇಂದಿನಿಂದ ಪ್ರಸಾರವಾಗುತ್ತಿದೆ. ಐದು ಕಥೆಗಳು, ಐದು ನಿರ್ದೇಶಕರು ಹಾಗೂ ಹಲವಾರು ನಟರು ಈ ಸಿನಿಮಾದ ಭಾಗವಾಗಿದ್ದಾರೆ. ಗುರು ದೇಶಪಾಂಡೆ (Guru Deshpanda) ಅವರ ನಿರ್ಮಾಣ ಮತ್ತು ಸಾರಥ್ಯದಲ್ಲಿ ಈ ಸಿನಿಮಾ ಮೂಡಿ ಬಂದಿದೆ. ರಾಘು ಶಿವಮೊಗ್ಗ, ಆಕಾಶ್ ಶ್ರೀವತ್ಸ, ಚಂದ್ರ ಮೋಹನ್, ಕಿರಣ್ ಕುಮಾರ್ ಮತ್ತು ಗುರು ದೇಶಪಾಂಡೆ ತಲಾ ಒಂದೊಂದು ಕಥೆಯನ್ನು ನಿರ್ದೇಶನ ಮಾಡಿದ್ದಾರೆ. ಕಿಶೋರ್, ಪ್ರಕಾಶ್ ಬೆಳವಾಡಿ, ರವಿಶಂಕರ್ ಸೇರಿದಂತೆ ಹೆಸರಾಂತ ತಾರಾ ಬಳಗವೇ ಸಿನಿಮಾ ದಲ್ಲಿದೆ.

    ನೆನಪಾಗುವ ತನಿಷಾ ವಿವಾದ

    ಸದ್ಯ ಬಿಗ್ ಬಾಸ್ ಮನೆಯಲ್ಲಿರುವ ತನಿಷಾ ಪೆಂಟಗನ್ ಸಿನಿಮಾದ ಒಂದು ಕಥೆಯಲ್ಲಿ ಬೋಲ್ಡ್ ಆಗಿ ನಟಿಸಿದ್ದರು. ಈ ನಟಿಗೆ ಅನೇಕ ರೀತಿಯಲ್ಲಿ ಕಿರುಕುಳ ಆಗಿದೆ ಎಂದು ಈ ಹಿಂದೆ ಆರೋಪ ಮಾಡಿದ್ದರು. ಸಿನಿಮಾ ರಿಲೀಸ್ ವೇಳೆ ಯುಟ್ಯೂಬರ್ ಒಬ್ಬನ ಮೇಲೆ ಆರೋಪ ಮಾಡಿದ್ದ ತನಿಷಾ, ನಂತರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸೂಪರ್ ಹಿಟ್ ಸಿನಿಮಾದ ನಟನೊಬ್ಬನ ಮೇಲೆ ಗುರುತರ ಆರೋಪ ಮಾಡಿದ್ದರು.

    ಪೆಂಟಗನ್ (Pentagon) ಸಿನಿಮಾದ ಒಂದು ಕಥೆಯಲ್ಲಿ ತನಿಷಾ ಬೋಲ್ಡ್ ಆಗಿರುವಂಥ ಪಾತ್ರವನ್ನು ನಿರ್ವಹಿಸಿದ್ದಾರೆ. ಅದು ಡೇಟಿಂಗ್ ಆಪ್ ಕುರಿತಾದ ಕಥೆಯಾಗಿದ್ದರಿಂದ, ಪಾತ್ರವೇ ಡಿಮಾಂಡ್ ಮಾಡಿದ್ದರಿಂದ ಅಂಥದ್ದೊಂದು ಪಾತ್ರವನ್ನು ನಿರ್ವಹಿಸಿದ್ದೇನೆ ಎಂದಿದ್ದರು. ಆದರೆ, ರಾಜಾಹುಲಿ ಅಂತಹ ಹಿಟ್ ಸಿನಿಮಾದಲ್ಲಿ ಯಶ್ ಗೆಳೆಯನ ಪಾತ್ರ ಮಾಡಿದ್ದ ನಟನೊಬ್ಬ ತನಿಷಾಗೆ ಬ್ಲೂಫಿಲ್ಮ್ ಮಾಡ್ತೀಯಾ ಎಂದು ಸೋಷಿಯಲ್ ಮೀಡಿಯಾ ಮೂಲಕ ಪ್ರಶ್ನೆ ಮಾಡಿದ್ದಾರಂತೆ. ಆ ನಟನ ಬಗ್ಗೆ ಮಾತನಾಡಿದ ತನಿಷಾ ಪತ್ರಿಕಾಗೋಷ್ಠಿಯಲ್ಲೇ ಕಣ್ಣೀರಿಟ್ಟಿದ್ದರು.

    ಪೆಂಟಗನ್ ಸಿನಿಮಾದಲ್ಲಿ ಒಟ್ಟು ಐದು ಕಥೆಗಳಿವೆ. ಕನ್ನಡದ ಪ್ರೇಮ, ಸಾಮಾಜಿಕ ಸಂದೇಶ ಹಾಗೂ ಮನರಂಜನೆ ನೀಡುವಂತಹ ಎಲ್ಲ ಅಂಶಗಳು ಇದ್ದರೂ, ಕೇವಲ ಒಂದೇ ಒಂದು ಕಥೆಯ ಬಗ್ಗೆ ಈ ರೀತಿ ಮಾತನಾಡುವುದು ಸರಿ ಅಲ್ಲ ಎನ್ನುವುದು ತನಿಷಾ ಮಾತಾಗಿತ್ತು. ಐದು ಪ್ರತಿಭಾವಂತ ನಿರ್ದೇಶಕರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಅವರು ನನ್ನಿಂದ ಕೆಟ್ಟ ರೀತಿಯಲ್ಲಿ ಪಾತ್ರ ಮಾಡಲು ಸಾಧ್ಯವಾ ಎನ್ನುವುದು ಅವರ ಪ್ರಶ್ನೆಯಾಗಿತ್ತು.

    `ಮಂಗಳಗೌರಿ ಮದುವೆ’ (Mangala Gowri Maduve) ಸೀರಿಯಲ್‌ನಲ್ಲಿ ಖಡಕ್ ವಿಲನ್ ಆಗಿ ಮನಗೆದ್ದ ತನಿಷಾ ಕುಪ್ಪಂಡ (Tanisha Kuppanda) ಅವರು (ಸಿನಿಮಾದಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಯೂಟ್ಯೂಬರ್ ಅಸಭ್ಯ ಪ್ರಶ್ನೆಗೆ ತನಿಷಾ ಖಡಕ್ ವಾರ್ನಿಂಗ್ ಕೊಟ್ಟಿದ್ದರು.

     

    ನೀವು ನೀಲಿ ಚಿತ್ರದಲ್ಲಿ ನಟಿಸಲು ಸಿದ್ಧವಿದ್ದೀರಾ? ಎಂದು ಓರ್ವ ಯೂಟ್ಯೂಬರ್ ಪ್ರಶ್ನೆ ಮಾಡಿದ್ದರು. ಆಗ ಸಿಟ್ಟಾದ ತನಿಷಾ ಕುಪ್ಪಂಡ ಹಾಗಿದ್ರೆ ನಾನು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇರಬಾರದಿತ್ತು. ನೀಲಿ ಸಿನಿಮಾ ಇಂಡಸ್ಟ್ರಿಯಲ್ಲೇ ಇರಬೇಕಿತ್ತು. ಬೋಲ್ಡ್ ಆಗಿ ನಟಿಸಿದ್ದೀವಿ ಅಂದ ಮಾತ್ರಕ್ಕೆ. ಈ ತರಹ ಪ್ರಶ್ನೆ ಕೇಳೋದ್ರಲ್ಲಿ ಅರ್ಥವೇ ಇಲ್ಲ. ನೀಲಿ ಚಿತ್ರದ ತಾರೆಯರು ಬೆತ್ತಲಾಗುತ್ತಾರೆ. ನಾನು ನೀಲಿ ಚಿತ್ರದ ತಾರೆಯಲ್ಲ. ಯಾಕೆ ಈ ರೀತಿ ಪ್ರಶ್ನೆ ಮಾಡ್ತಿದ್ದೀರಾ.? ಪ್ರಶ್ನೆ ಮಾಡೋಕೂ ಮುನ್ನ ನಿಮಗೆ ಕಾಮನ್ ಸೆನ್ಸ್ ಇರಬೇಕು. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಯಾರು ಬೆತ್ತಲೆ ಸಿನಿಮಾ ಮಾಡ್ತಿದ್ದಾರೆ? ಯಾಕೆ ಈ ರೀತಿ ಅಸಭ್ಯವಾಗಿ ಪ್ರಶ್ನೆಯನ್ನ ಕೇಳುತ್ತಿದ್ದೀರಾ? ಎಂದು ಹೇಳಿ ಸಂದರ್ಶನವನ್ನ ಮೊಟಕುಗೊಳಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bigg Boss Kannada: ಡ್ರೋನ್ ಪ್ರತಾಪ್ ಬಳಿಕ ವೇಟಿಂಗ್ ಲಿಸ್ಟ್‌ನಲ್ಲಿ ತನಿಶಾ ಕುಪ್ಪಂಡ

    Bigg Boss Kannada: ಡ್ರೋನ್ ಪ್ರತಾಪ್ ಬಳಿಕ ವೇಟಿಂಗ್ ಲಿಸ್ಟ್‌ನಲ್ಲಿ ತನಿಶಾ ಕುಪ್ಪಂಡ

    ನ್ನಡ ಕಿರುತೆರೆ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Kannada 10) ಕಾರ್ಯಕ್ರಮ ಶುರುವಾಗಿದೆ. ದೊಡ್ಮನೆ ಆಟಕ್ಕೆ ತನಿಶಾ ಕುಪ್ಪಂಡ (Tanisha Kuppanda) ಎಂಟ್ರಿ ಕೊಟ್ಟಿದ್ದಾರೆ. ಪ್ರೇಕ್ಷಕರ ವೋಟ್ ಮೇರೆಗೆ ಡ್ರೋನ್‌ ಪ್ರತಾಪ್‌ (Drone Prathap) ಬಳಿಕ ತನಿಶಾ ಹೋಲ್ಡ್‌ನಲ್ಲಿದ್ದಾರೆ.

    ಕಿಚ್ಚನ (Kichcha Sudeep) ನಿರೂಪಣೆಯಲ್ಲಿ ಬಿಗ್ ಬಾಸ್‌ಗೆ ಅದ್ದೂರಿ ಚಾಲನೆ ಸಿಕ್ಕಿದೆ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಪ್ರೇಕ್ಷಕರ ವೋಟ್ ಮೇರೆಗೆ ಸ್ಪರ್ಧಿ ತನಿಶಾ ವೇಟಿಂಗ್ ಲಿಸ್ಟ್‌ನಲ್ಲಿದ್ದಾರೆ. ಅದರಂತೆ 41% ವೋಟ್ ಪಡೆದು ಸದ್ಯ ಹೋಲ್ಡ್‌ನಲ್ಲಿದ್ದಾರೆ. ಕಾಂಟ್ರವರ್ಸಿ ಕ್ವೀನ್ ತನಿಶಾ ಕುಪ್ಪಂಡ, ಬಿಗ್ ಬಾಸ್ ಮನೆಯ ಬಾಗಿಲು ತೆರೆಯುತ್ತಾರಾ? ಕಾಯಬೇಕಿದೆ.

    ಈಗಾಗಲೇ ಬಿಗ್ ಬಾಸ್ ಸ್ಪರ್ಧಿಗಳಾಗಿ ಪ್ರೇಕ್ಷಕರ ವೋಟ್ ಪಡೆದು ನಮ್ರತಾ ಗೌಡ, ಸ್ನೇಹಿತ್ ಗೌಡ, ವಿನಯ್ ಗೌಡ, ರ‍್ಯಾಪರ್ ಇಶಾನಿ, ಸಂತೋಷ್ ಕುಮಾರ್ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:Bigg Boss Kannada10 : ಬಿಗ್ ಬಾಸ್ ಶುರುವಾಗುವ ಮುನ್ನವೇ ಶಾಕ್ ಕೊಟ್ಟ ಕಿಚ್ಚ ಸುದೀಪ್

    ವಿಶೇಷ ಅತಿಥಿಗಳಾಗಿ ಹಿರಿಯ ನಟಿ ಶ್ರುತಿ, ಪ್ರಥಮ್, ಚಂದನ್ ಶೆಟ್ಟಿ, ಮುಂಜು ಪಾವಗಡ ಭಾಗಿಯಾಗಿ ಕಿಚ್ಚನಿಗೆ ಸಾಥ್ ನೀಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Exclusive: ನೀಲಿ ಚಿತ್ರದಲ್ಲಿ ಆಕ್ಟ್‌ ಮಾಡ್ತೀಯಾ ಎಂದು ಕೇಳಿದ್ರಾ ಹರ್ಷ? ಸ್ಪಷ್ಟನೆ ನೀಡಿದ ನಟ

    Exclusive: ನೀಲಿ ಚಿತ್ರದಲ್ಲಿ ಆಕ್ಟ್‌ ಮಾಡ್ತೀಯಾ ಎಂದು ಕೇಳಿದ್ರಾ ಹರ್ಷ? ಸ್ಪಷ್ಟನೆ ನೀಡಿದ ನಟ

    ನ್ನಡದ ‘ಪೆಂಟಗನ್’ (Pentagon) ಚಿತ್ರದ ನಟಿ ತನಿಷಾ ಕುಪ್ಪಂಡ (Tanisha Kuppanda)  ಕಳೆದೆರೆಡು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಯುಟ್ಯೂಬರ್‌ಯೊಬ್ಬ ಬ್ಲೂಫಿಲ್ಮ್ ಮಾಡ್ತೀರಾ ಎಂದು ಕೇಳಿದ್ದಕ್ಕೆ ನಟಿ ಖಡಕ್ ಕ್ಲಾಸ್ ತೆಗೆದುಕೊಂಡಿದ್ದರು. ಬಳಿಕ ‘ರಾಜಹುಲಿ’ (Rajahuli) ನಟ ಹರ್ಷ (Harsha) ವಿರುದ್ಧ ತನಿಷಾ ಆರೋಪಿಸಿದ್ದರು. ಅಸಭ್ಯ ಸಂದೇಶ ಕಳುಹಿಸಿದ್ದಾರೆ ಎಂದು ಮಾಧ್ಯಮದ ಮುಂದೆ ಕಣ್ಣೀರಿಟ್ಟಿದ್ದರು. ತನಿಷಾ ಮಾಡಿರುವ ಆರೋಪಕ್ಕೆ ಪಬ್ಲಿಕ್ ಟಿವಿ ಡಿಜಿಟಲ್‌ಗೆ ನಟ ಹರ್ಷ ಸ್ಪಷ್ಟನೆ ನೀಡಿದ್ದಾರೆ.

    ‘ಮಂಗಳ ಗೌರಿ’ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನಟಿಸಿರುವ ತನಿಷಾ ಕುಪ್ಪಂಡ ಸದ್ಯ ‘ಪೆಂಟಗನ್’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ, ನೀವು ನೀಲಿ ಚಿತ್ರದಲ್ಲಿ ನಟಿಸಲು ಸಿದ್ಧವಿದ್ದೀರಾ? ಎಂದು ಓರ್ವ ಯೂಟ್ಯೂಬರ್ ಪ್ರಶ್ನೆ ಮಾಡಿದ್ದರು. ಆಗ ಸಿಟ್ಟಾದ ತನಿಷಾ ಕುಪ್ಪಂಡ ಹಾಗಿದ್ರೆ ನಾನು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇರಬಾರದಿತ್ತು. ನೀಲಿ ಸಿನಿಮಾ ಇಂಡಸ್ಟ್ರಿಯಲ್ಲೇ ಇರಬೇಕಿತ್ತು. ಬೋಲ್ಡ್ ಆಗಿ ನಟಿಸಿದ್ದೀವಿ ಅಂದ ಮಾತ್ರಕ್ಕೆ. ಈ ತರಹ ಪ್ರಶ್ನೆ ಕೇಳೋದ್ರಲ್ಲಿ ಅರ್ಥವೇ ಇಲ್ಲ. ನೀಲಿ ಚಿತ್ರದ ತಾರೆಯರು ಬೆತ್ತಲಾಗುತ್ತಾರೆ. ನಾನು ನೀಲಿ ಚಿತ್ರದ ತಾರೆಯಲ್ಲ. ಯಾಕೆ ಈ ರೀತಿ ಪ್ರಶ್ನೆ ಮಾಡ್ತಿದ್ದೀರಾ.? ಪ್ರಶ್ನೆ ಮಾಡೋಕೂ ಮುನ್ನ ನಿಮಗೆ ಕಾಮನ್ ಸೆನ್ಸ್ ಇರಬೇಕು. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಯಾರು ಬೆತ್ತಲೆ ಸಿನಿಮಾ ಮಾಡ್ತಿದ್ದಾರೆ? ಯಾಕೆ ಈ ರೀತಿ ಅಸಭ್ಯವಾಗಿ ಪ್ರಶ್ನೆಯನ್ನ ಕೇಳುತ್ತಿದ್ದೀರಾ? ಎಂದು ತನಿಷಾ ಖಡಕ್ ಉತ್ತರ ನೀಡಿದ್ದರು. ಇದನ್ನೂ ಓದಿ: ಕಿಸ್ಸಿಂಗ್ ಪ್ರಕರಣ: 16 ವರ್ಷಗಳ ನಂತರ ಶಿಲ್ಪಾ ಶೆಟ್ಟಿಗೆ ಬಿಗ್ ರಿಲೀಫ್

    ನಟ ಹರ್ಷ ಕೂಡ ನೀಲಿ ಸಿನಿಮಾ ಮಾಡ್ತೀರಾ ಎಂದು ಕೇಳಿದ್ದರು. ಅಸಭ್ಯ ಸಂದೇಶ ಕಳುಹಿಸಿದ್ದಾರೆ ಎಂದು ತನಿಷಾ ಆರೋಪಿಸಿದರು. ಈ ಬೆನ್ನಲ್ಲೇ ನಟ ಹರ್ಷ ಕೂಡ ತನಿಷಾ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಮತ್ತು ತನಿಷಾ ಒಳ್ಳೆಯ ಸ್ನೇಹಿತರು. ನೀಲಿ ಚಿತ್ರದ ಬಗ್ಗೆ ಕೇಳಿದ್ದ ಯುಟ್ಯೂಬರ್ ವೈರಲ್ ವೀಡಿಯೋಗೆ ಪ್ರತಿಕ್ರಿಯಿಸಿ, ನಾನು ಸಂದೇಶ ಕಳಿಸಿದ್ದೇ ನಿಜ. ಆದರೆ ಯಾವುದೇ ಕೆಟ್ಟ ಆಲೋಚನೆಯಿಂದ ಅಲ್ಲ. ಬ್ಲೂಫಿಲ್ಮ್ ಮಾಡ್ತೀರಾ ಎಂದು ಆ ಯುಟ್ಯೂಬರ್ ಹೀಗ್ಯಾಕೆ ಕೇಳಿದ್ದರು ಎಂದು ಪ್ರಶ್ನೆ ಮಾಡುವ ರೀತಿಯಲ್ಲಿ ನಗುವಿನ ಇಮೋಜಿ ಕಳುಹಿಸಿದೆ ಅಷ್ಟೇ. ಆ ಸಂದೇಶವೇ ಈ ಗೊಂದಲಕ್ಕೆ ಕಾರಣವಾಗಿದೆ. ಅನ್ಯತಾ ಭಾವಿಸಬಾರದು ಎಂದು ಮತ್ತೆ ವಾಯ್ಸ್ ನೋಟ್ ಕಳುಹಿಸಿದ್ದೀನಿ. ಯುಟ್ಯೂಬರ್ ಯಾಕೆ ಹೀಗೆ ಪ್ರಶ್ನೆ ಮಾಡಿದ್ದರು ಎಂದು ಕೇಳಿದ್ದೀನಿ. ಅದು ಬಿಟ್ಟು ನೀಲಿ ಸಿನಿಮಾದಲ್ಲಿ ಆಕ್ಟ್ ಮಾಡ್ತೀರಾ ಎಂದು ನಾನು ಪ್ರಶ್ನೆ ಮಾಡಿಲ್ಲ. ಎಲ್ಲವೂ ನಾವು ಅರ್ಥ ಮಾಡಿಕೊಳ್ಳುವ ದೃಷ್ಟಿಕೋನದಲ್ಲಿದೆ ಎಂದು ನಟ ಹರ್ಷ ಸ್ಪಷ್ಟನೆ ನೀಡಿದ್ದಾರೆ.

    ಇನ್ನೂ ತನಿಷಾ ಅವರನ್ನು ಕೆಟ್ಟ ಆಲೋಚನೆಯಿಂದ ನಾನು ಸಂದೇಶ ಕಳುಹಿಸಿಲ್ಲ. ಇದೀಗ ಅವರ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಪ್ರಚಾರಕ್ಕಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ. ತನಿಷಾ ಅವರ ನಡೆ ಎಷ್ಟು ಸರಿ ಎಂದು ಹರ್ಷ ಪ್ರಶ್ನೆ ಮಾಡಿದ್ದಾರೆ. ನಟಿಯಾಗಿ ಬೋಲ್ಡ್ ಸಿನಿಮಾದಲ್ಲಿ ನಟಿಸಿದ ಮೇಲೆ ಬೋಲ್ಡ್ ಪ್ರಶ್ನೆಗಳನ್ನ ಕೂಡ ಎದುರಿಸಲು ರೆಡಿಯಾಗಿಬೇಕು ಎಂದು ಹರ್ಷ ಮಾತನಾಡಿದ್ದಾರೆ.

    ಶೃತಿ ರಿಪ್ಪನ್‌ಪೇಟೆ, ಪಬ್ಲಿಕ್‌ ಟಿವಿ ಡಿಜಿಟಲ್‌ 

  • ಬ್ಲೂಫಿಲ್ಮ್ ಮಾಡ್ತೀಯಾ ಅಂತ ಕೇಳಿದ ‘ಆ’ ನಟ: ಪೆಂಟಗನ್ ನಟಿಯ ಕಣ್ಣೀರು

    ಬ್ಲೂಫಿಲ್ಮ್ ಮಾಡ್ತೀಯಾ ಅಂತ ಕೇಳಿದ ‘ಆ’ ನಟ: ಪೆಂಟಗನ್ ನಟಿಯ ಕಣ್ಣೀರು

    ಕಿರುತೆರೆ ಮತ್ತು ಹಿರಿತೆರೆ ನಟಿ ತನಿಷಾ ಕುಪ್ಪಂಡ (Tanisha Kuppanda) ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರು ಹಾಕಿದ್ದಾರೆ. ಗುರು ದೇಶಪಾಂಡೆ ಸಾರಥ್ಯದಲ್ಲಿ ಮೂಡಿ ಬಂದಿರುವ ಪೆಂಟಗನ್ ಸಿನಿಮಾದ ಒಂದು ಕಥೆಯಲ್ಲಿ ಬೋಲ್ಡ್ ಆಗಿ ನಟಿಸಿರುವ ಈ ನಟಿಗೆ ಅನೇಕ ರೀತಿಯಲ್ಲಿ ಕಿರುಕುಳ ಆಗಿದೆಯಂತೆ. ಮೊನ್ನೆಯಷ್ಟೇ ಯುಟ್ಯೂಬರ್ ಒಬ್ಬನ ಮೇಲೆ ಆರೋಪ ಮಾಡಿದ್ದ ತನಿಷಾ ನಿನ್ನೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸೂಪರ್ ಹಿಟ್ ಸಿನಿಮಾದ ನಟನೊಬ್ಬನ ಮೇಲೆ ಗುರುತರ ಆರೋಪ ಮಾಡಿದ್ದಾರೆ.

    ಪೆಂಟಗನ್ (Pentagon) ಸಿನಿಮಾದ ಒಂದು ಕಥೆಯಲ್ಲಿ ತನಿಷಾ ಬೋಲ್ಡ್ ಆಗಿರುವಂಥ ಪಾತ್ರವನ್ನು ನಿರ್ವಹಿಸಿದ್ದಾರೆ. ಅದು ಡೇಟಿಂಗ್ ಆಪ್ ಕುರಿತಾದ ಕಥೆಯಾಗಿದ್ದರಿಂದ, ಪಾತ್ರವೇ ಡಿಮಾಂಡ್ ಮಾಡಿದ್ದರಿಂದ ಅಂಥದ್ದೊಂದು ಪಾತ್ರವನ್ನು ನಿರ್ವಹಿಸಿದ್ದೇನೆ ಎನ್ನುತ್ತಾರೆ. ಆದರೆ, ರಾಜಾಹುಲಿ ಅಂತಹ ಹಿಟ್ ಸಿನಿಮಾದಲ್ಲಿ ಯಶ್ ಗೆಳೆಯನ ಪಾತ್ರ ಮಾಡಿದ್ದ ನಟನೊಬ್ಬ ತನಿಷಾಗೆ ಬ್ಲೂಫಿಲ್ಮ್ ಮಾಡ್ತೀಯಾ ಎಂದು ಸೋಷಿಯಲ್ ಮೀಡಿಯಾ ಮೂಲಕ ಪ್ರಶ್ನೆ ಮಾಡಿದ್ದಾರಂತೆ. ಆ ನಟನ ಬಗ್ಗೆ ಮಾತನಾಡಿದ ತನಿಷಾ ಪತ್ರಿಕಾಗೋಷ್ಠಿಯಲ್ಲೇ ಕಣ್ಣೀರಿಟ್ಟಿದ್ದಾರೆ.

    ಪೆಂಟಗನ್ ಸಿನಿಮಾದಲ್ಲಿ ಒಟ್ಟು ಐದು ಕಥೆಗಳಿವೆ. ಕನ್ನಡದ ಪ್ರೇಮ, ಸಾಮಾಜಿಕ ಸಂದೇಶ ಹಾಗೂ ಮನರಂಜನೆ ನೀಡುವಂತಹ ಎಲ್ಲ ಅಂಶಗಳು ಇದ್ದರೂ, ಕೇವಲ ಒಂದೇ ಒಂದು ಕಥೆಯ ಬಗ್ಗೆ ಈ ರೀತಿ ಮಾತನಾಡುವುದು ಸರಿ ಅಲ್ಲ ಎನ್ನುವುದು ತನಿಷಾ ಮಾತು. ಐದು ಪ್ರತಿಭಾವಂತ ನಿರ್ದೇಶಕರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಅವರು ನನ್ನಿಂದ ಕೆಟ್ಟ ರೀತಿಯಲ್ಲಿ ಪಾತ್ರ ಮಾಡಲು ಸಾಧ್ಯವಾ ಎನ್ನುವುದು ಅವರ ಪ್ರಶ್ನೆ. ಇದನ್ನೂ ಓದಿ: ನಟಿ ನಗ್ಮಾ ಜೊತೆಗೆ ಯಾವುದೇ ಸಂಬಂಧ ಹೊಂದಿಲ್ಲ : ನಟ ರವಿಕಿಶನ್

    `ಮಂಗಳಗೌರಿ ಮದುವೆ’ (Mangala Gowri Maduve) ಸೀರಿಯಲ್‌ನಲ್ಲಿ ಖಡಕ್ ವಿಲನ್ ಆಗಿ ಮನಗೆದ್ದ ತನಿಷಾ ಕುಪ್ಪಂಡ (Tanisha Kuppanda) ಅವರು Pentagon ಸಿನಿಮಾದಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಿರುವ ನಟಿ ತನಿಷಾ ಮುಜುಗರದ ಸನ್ನಿವೇಶವೊಂದು ಎದುರಾಗಿದೆ. ಸಂದರ್ಶನವೊಂದರಲ್ಲಿ ಯೂಟ್ಯೂಬರ್ ಅಸಭ್ಯ ಪ್ರಶ್ನೆಗೆ ತನಿಷಾ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

    ನೀವು ನೀಲಿ ಚಿತ್ರದಲ್ಲಿ ನಟಿಸಲು ಸಿದ್ಧವಿದ್ದೀರಾ? ಎಂದು ಓರ್ವ ಯೂಟ್ಯೂಬರ್ ಪ್ರಶ್ನೆ ಮಾಡಿದ್ದಾರೆ. ಆಗ ಸಿಟ್ಟಾದ ತನಿಷಾ ಕುಪ್ಪಂಡ ಹಾಗಿದ್ರೆ ನಾನು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇರಬಾರದಿತ್ತು. ನೀಲಿ ಸಿನಿಮಾ ಇಂಡಸ್ಟ್ರಿಯಲ್ಲೇ ಇರಬೇಕಿತ್ತು. ಬೋಲ್ಡ್ ಆಗಿ ನಟಿಸಿದ್ದೀವಿ ಅಂದ ಮಾತ್ರಕ್ಕೆ. ಈ ತರಹ ಪ್ರಶ್ನೆ ಕೇಳೋದ್ರಲ್ಲಿ ಅರ್ಥವೇ ಇಲ್ಲ. ನೀಲಿ ಚಿತ್ರದ ತಾರೆಯರು ಬೆತ್ತಲಾಗುತ್ತಾರೆ. ನಾನು ನೀಲಿ ಚಿತ್ರದ ತಾರೆಯಲ್ಲ. ಯಾಕೆ ಈ ರೀತಿ ಪ್ರಶ್ನೆ ಮಾಡ್ತಿದ್ದೀರಾ.? ಪ್ರಶ್ನೆ ಮಾಡೋಕೂ ಮುನ್ನ ನಿಮಗೆ ಕಾಮನ್ ಸೆನ್ಸ್ ಇರಬೇಕು. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಯಾರು ಬೆತ್ತಲೆ ಸಿನಿಮಾ ಮಾಡ್ತಿದ್ದಾರೆ? ಯಾಕೆ ಈ ರೀತಿ ಅಸಭ್ಯವಾಗಿ ಪ್ರಶ್ನೆಯನ್ನ ಕೇಳುತ್ತಿದ್ದೀರಾ? ಎಂದು ಹೇಳಿ ಸಂದರ್ಶನವನ್ನ ಮೊಟಕುಗೊಳಿಸುತ್ತಾರೆ.

  • ಪೆಂಟಗನ್ ನಲ್ಲಿ ತನಿಷಾ ಬೋಲ್ಡ್ : ನೆಗೆಟಿವ್ ಕಾಮೆಂಟ್ ಕೇರ್ ಮಾಡಲ್ಲ ಎಂದ ನಟಿ

    ಪೆಂಟಗನ್ ನಲ್ಲಿ ತನಿಷಾ ಬೋಲ್ಡ್ : ನೆಗೆಟಿವ್ ಕಾಮೆಂಟ್ ಕೇರ್ ಮಾಡಲ್ಲ ಎಂದ ನಟಿ

    ಗುರು ದೇಶಪಾಂಡೆ ಸಾರಥ್ಯದಲ್ಲಿ ಮೂಡಿ ಬಂದಿರುವ ಪೆಂಟಗನ್ ಸಿನಿಮಾದ ಒಂದು ಕಥೆಯಲ್ಲಿ ನಟಿ ತನಿಷಾ ಕುಪ್ಪಂಡ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ನಾಯಕನ ಜೊತೆ ಲಿಪ್ ಲಾಕ್ ಮತ್ತು ಬ್ಯಾಕ್ ಲೆಸ್ ಕಾರಣದಿಂದಾಗಿಯೂ ಸುದ್ದಿಯಾಗಿದ್ದಾರೆ.  ಈ ಕುರಿತು ಅವರು ಮಾತನಾಡಿದ್ದು, ಈ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ನನಗೆ ಯಾವುದೇ ಮುಜಗರವಿಲ್ಲ. ಅಲ್ಲದೇ, ನೆಗೆಟಿವ್ ಕಾಮೆಂಟ್ ಗಳಿಗೆ ನಾನು ಕೇರ್ ಮಾಡುವುದಿಲ್ಲ ಎಂದಿದ್ದಾರೆ.

    `ಮಂಗಳಗೌರಿ ಮದುವೆ’ (Mangala Gowri Maduve) ಸೀರಿಯಲ್‌ನಲ್ಲಿ ಖಡಕ್ ವಿಲನ್ ಆಗಿ ಮನಗೆದ್ದ ತನಿಷಾ ಕುಪ್ಪಂಡ (Tanisha Kuppanda) ಅವರು Pentagon ಸಿನಿಮಾದಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಿರುವ ನಟಿ ತನಿಷಾ ಮುಜುಗರದ ಸನ್ನಿವೇಶವೊಂದು ಎದುರಾಗಿದೆ. ಸಂದರ್ಶನವೊಂದರಲ್ಲಿ ಯೂಟ್ಯೂಬರ್ ಅಸಭ್ಯ ಪ್ರಶ್ನೆಗೆ ತನಿಷಾ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:ಮಗ ಸತ್ತಾಗ ಆತ್ಮಸ್ಥೈರ್ಯ ತುಂಬಿ ಜೊತೆಯಾಗಿದ್ದು, ಪ್ರಭುದೇವ: ಪ್ರಕಾಶ್‌ ರಾಜ್‌

    ನೀವು ನೀಲಿ ಚಿತ್ರದಲ್ಲಿ ನಟಿಸಲು ಸಿದ್ಧವಿದ್ದೀರಾ? ಎಂದು ಓರ್ವ ಯೂಟ್ಯೂಬರ್ ಪ್ರಶ್ನೆ ಮಾಡಿದ್ದಾರೆ. ಆಗ ಸಿಟ್ಟಾದ ತನಿಷಾ ಕುಪ್ಪಂಡ ಹಾಗಿದ್ರೆ ನಾನು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇರಬಾರದಿತ್ತು. ನೀಲಿ ಸಿನಿಮಾ ಇಂಡಸ್ಟ್ರಿಯಲ್ಲೇ ಇರಬೇಕಿತ್ತು. ಬೋಲ್ಡ್ ಆಗಿ ನಟಿಸಿದ್ದೀವಿ ಅಂದ ಮಾತ್ರಕ್ಕೆ. ಈ ತರಹ ಪ್ರಶ್ನೆ ಕೇಳೋದ್ರಲ್ಲಿ ಅರ್ಥವೇ ಇಲ್ಲ. ನೀಲಿ ಚಿತ್ರದ ತಾರೆಯರು ಬೆತ್ತಲಾಗುತ್ತಾರೆ. ನಾನು ನೀಲಿ ಚಿತ್ರದ ತಾರೆಯಲ್ಲ. ಯಾಕೆ ಈ ರೀತಿ ಪ್ರಶ್ನೆ ಮಾಡ್ತಿದ್ದೀರಾ.? ಪ್ರಶ್ನೆ ಮಾಡೋಕೂ ಮುನ್ನ ನಿಮಗೆ ಕಾಮನ್ ಸೆನ್ಸ್ ಇರಬೇಕು. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಯಾರು ಬೆತ್ತಲೆ ಸಿನಿಮಾ ಮಾಡ್ತಿದ್ದಾರೆ? ಯಾಕೆ ಈ ರೀತಿ ಅಸಭ್ಯವಾಗಿ ಪ್ರಶ್ನೆಯನ್ನ ಕೇಳುತ್ತಿದ್ದೀರಾ? ಎಂದು ಹೇಳಿ ಸಂದರ್ಶನವನ್ನ ಮೊಟಕುಗೊಳಿಸುತ್ತಾರೆ.

    ಇದೇ ವೇಳೆ ಯೂಟ್ಯೂಬರ್‌ನ `ಪೆಂಟಗನ್’ ಚಿತ್ರತಂಡ ತರಾಟೆಗೆ ತೆಗೆದುಕೊಂಡಿದೆ. ಯೂಟ್ಯೂಬರ್ ವಿರುದ್ಧ ನಟಿ ತನಿಷ ಕುಪ್ಪಂಡ ಮತ್ತು ಚಿತ್ರತಂಡ ಕಿಡಿಕಾರಿದೆ. ತಮ್ಮ ಆಕ್ರೋಶವನ್ನ ತನಿಷಾ ಕುಪ್ಪಂಡ ಹೊರಹಾಕಿದ್ದಾರೆ.

  • `ನೀಲಿ ಚಿತ್ರದಲ್ಲಿ ಆಕ್ಟ್ ಮಾಡ್ತೀರಾ’ ಎಂದು ಕೇಳಿದ ಯೂಟ್ಯೂಬರ್‌ಗೆ ತನಿಷಾ ಖಡಕ್‌ ಕ್ಲಾಸ್

    `ನೀಲಿ ಚಿತ್ರದಲ್ಲಿ ಆಕ್ಟ್ ಮಾಡ್ತೀರಾ’ ಎಂದು ಕೇಳಿದ ಯೂಟ್ಯೂಬರ್‌ಗೆ ತನಿಷಾ ಖಡಕ್‌ ಕ್ಲಾಸ್

    `ಮಂಗಳಗೌರಿ ಮದುವೆ’ (Mangala Gowri Maduve) ಸೀರಿಯಲ್‌ನಲ್ಲಿ ಖಡಕ್ ವಿಲನ್ ಆಗಿ ಮನಗೆದ್ದ ತನಿಷಾ ಕುಪ್ಪಂಡ (Tanisha Kuppanda) ಅವರು Pentagon ಸಿನಿಮಾದಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಬೋಲ್ಡ್ ಲುಕ್‌ನಲ್ಲಿ ಲಿಪ್‌ಲಾಕ್, ಬ್ಯಾಕ್‌ಲೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಿರುವ ನಟಿ ತನಿಷಾ ಮುಜುಗರದ ಸನ್ನಿವೇಶವೊಂದು ಎದುರಾಗಿದೆ. ಸಂದರ್ಶನವೊಂದರಲ್ಲಿ ಯೂಟ್ಯೂಬರ್ ಅಸಭ್ಯ ಪ್ರಶ್ನೆಗೆ ತನಿಷಾ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

    `ಪೆಂಟಗನ್’ ಸಿನಿಮಾ ಇದೇ ಏಪ್ರಿಲ್ 7ಕ್ಕೆ ತೆರೆಗೆ ಅಬ್ಬರಿಸುತ್ತಿದೆ. ಚಿತ್ರದಲ್ಲಿ ಕಾಮನ ಬಿಲ್ಲು (Kamana Billu) ಎಂಬ ಹಾಡಿನಲ್ಲಿ ಸಖತ್ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಸಂದರ್ಶನದಲ್ಲಿ ಯೂಟ್ಯೂಬರ್, ನಟಿಗೆ ನ್ಯೂಡ್ ಸಿನಿಮಾದಲ್ಲಿ ಆಕ್ಟ್ ಮಾಡ್ತೀರಾ ಎಂದು ಕೇಳಿದ್ದಾರೆ. ಅದಕ್ಕೆ ನಟಿ ತನಿಷಾ ಗರಂ ಆಗಿದ್ದಾರೆ. ಅಷಕ್ಕೂ ಆಗಿದ್ದೇನು?

    ನೀವು ನೀಲಿ ಚಿತ್ರದಲ್ಲಿ ನಟಿಸಲು ಸಿದ್ಧವಿದ್ದೀರಾ? ಎಂದು ಓರ್ವ ಯೂಟ್ಯೂಬರ್ ಪ್ರಶ್ನೆ ಮಾಡಿದ್ದಾರೆ. ಆಗ ಸಿಟ್ಟಾದ ತನಿಷಾ ಕುಪ್ಪಂಡ ಹಾಗಿದ್ರೆ ನಾನು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇರಬಾರದಿತ್ತು. ನೀಲಿ ಸಿನಿಮಾ ಇಂಡಸ್ಟ್ರಿಯಲ್ಲೇ ಇರಬೇಕಿತ್ತು. ಬೋಲ್ಡ್ ಆಗಿ ನಟಿಸಿದ್ದೀವಿ ಅಂದ ಮಾತ್ರಕ್ಕೆ. ಈ ತರಹ ಪ್ರಶ್ನೆ ಕೇಳೋದ್ರಲ್ಲಿ ಅರ್ಥವೇ ಇಲ್ಲ. ನೀಲಿ ಚಿತ್ರದ ತಾರೆಯರು ಬೆತ್ತಲಾಗುತ್ತಾರೆ. ನಾನು ನೀಲಿ ಚಿತ್ರದ ತಾರೆಯಲ್ಲ. ಯಾಕೆ ಈ ರೀತಿ ಪ್ರಶ್ನೆ ಮಾಡ್ತಿದ್ದೀರಾ.? ಪ್ರಶ್ನೆ ಮಾಡೋಕೂ ಮುನ್ನ ನಿಮಗೆ ಕಾಮನ್ ಸೆನ್ಸ್ ಇರಬೇಕು. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಯಾರು ಬೆತ್ತಲೆ ಸಿನಿಮಾ ಮಾಡ್ತಿದ್ದಾರೆ? ಯಾಕೆ ಈ ರೀತಿ ಅಸಭ್ಯವಾಗಿ ಪ್ರಶ್ನೆಯನ್ನ ಕೇಳುತ್ತಿದ್ದೀರಾ? ಎಂದು ಹೇಳಿ ಸಂದರ್ಶನವನ್ನ ಮೊಟಕುಗೊಳಿಸುತ್ತಾರೆ. ಇದನ್ನೂ ಓದಿ:ಮಗ ಸತ್ತಾಗ ಆತ್ಮಸ್ಥೈರ್ಯ ತುಂಬಿ ಜೊತೆಯಾಗಿದ್ದು, ಪ್ರಭುದೇವ: ಪ್ರಕಾಶ್‌ ರಾಜ್‌

    ಇದೇ ವೇಳೆ ಯೂಟ್ಯೂಬರ್‌ನ `ಪೆಂಟಗನ್’ ಚಿತ್ರತಂಡ ತರಾಟೆಗೆ ತೆಗೆದುಕೊಂಡಿದೆ. ಯೂಟ್ಯೂಬರ್ ವಿರುದ್ಧ ನಟಿ ತನಿಷ ಕುಪ್ಪಂಡ ಮತ್ತು ಚಿತ್ರತಂಡ ಕಿಡಿಕಾರಿದೆ. ತಮ್ಮ ಆಕ್ರೋಶವನ್ನ ತನಿಷಾ ಕುಪ್ಪಂಡ ಹೊರಹಾಕಿದ್ದಾರೆ.