ಟಾಸ್ಕ್ ಆಡುತ್ತಿದ್ದಾಗ ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಅವಘಡ ಸಂಭವಿಸಿದೆ. ಈ ಕಾರಣದಿಂದಾಗಿ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿರುವ ತನಿಷಾ ಕುಪ್ಪಂಡ (Tanisha Kuppanda) ಮನೆಯಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಟಾಸ್ಕ್ ಆಡುವಾಗ ಅವರಿಗೆ ಬಲವಾದ ಪೆಟ್ಟು ಬಿದ್ದಿದ್ದು, ಚಿಕಿತ್ಸೆಗಾಗಿ (Treatment) ಅವರನ್ನು ಮನೆಯಿಂದ ಕಳುಹಿಸಲಾಗಿದೆ ಎನ್ನುವ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಬಿಗ್ ಬಾಸ್ ಆಟದಲ್ಲಿ ಎಂದಿನಂತೆ ಟಾಸ್ಕ್ ಆಡಲು ಎರಡು ತಂಡಗಳಾಗಿ ವಿಂಗಡಿಸಿದ್ದರು. ಮನೆಯವರ ವೋಟ್ ಮೇರೆಗೆ ಡ್ರೋನ್ ಪ್ರತಾಪ್ ಮತ್ತು ಮೈಕಲ್ ಅವರನ್ನ ಕ್ಯಾಪ್ಟನ್ ಆಗಿ ಕಣಕ್ಕೆ ಬಿಡಲಾಯಿತು. ಎರಡು ಟೀಮ್‌ನ ಜಟಾಪಟಿ ನಂತರ ಗೆದ್ದಿರುವ ತಂಡ ಕ್ಯಾಪ್ಟನ್ ರೇಸ್‌ಗೆ ಕಾಲಿಡಲಿದ್ದಾರೆ ಎಂದು ಹೇಳಲಾಗಿತ್ತು

ಡ್ರೋನ್ ತಂಡದಲ್ಲಿ ಪವಿ, ತುಕಾಲಿ, ನಮ್ರತಾ, ವರ್ತೂರು, ಸಿರಿ, ಆಟ ಆಡಿದ್ರೆ, ಮೈಕಲ್ ಟೀಮ್‌ನಲ್ಲಿ ತನಿಷಾ, ವಿನಯ್, ಸ್ನೇಹಿತ್, ಸಂಗೀತಾ, ಅವಿನಾಶ್ ಶೆಟ್ಟಿ ತಂಡವಾಗಿ ರೂಪುಗೊಂಡಿದ್ದಾರೆ. ಎರಡು ತಂಡ ಟಾಸ್ಕ್ವೊಂದರಲ್ಲಿ ಆಟ ಆಡುವಾಗ ತನಿಷಾ ಕಾಲಿಗೆ ಪೆಟ್ಟಾಗಿದ್ದು, ತುಂಬಾ ನೋವಿನಿಂದ ಒದ್ದಾಡಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗೆ ಕಳುಹಿಸಲಾಗಿದೆ.

ಬಿಗ್ ಬಾಸ್ ಟೀಮ್ ಕಡೆಯಿಂದ ಬಂದು ತನಿಷಾ ಅವರನ್ನು ಚಿಕಿತ್ಸೆಗಾಗಿ ಹೊರ ಕರೆದುಕೊಂಡು ಹೋಗಿದ್ದಾರೆ. ಸಣ್ಣ ಪುಟ್ಟ ಏಟಾಗಿದ್ದರೆ ಆದಷ್ಟು ಬೇಗ ಬಿಗ್ ಬಾಸ್‌ಗೆ ಬರಲಿದ್ದಾರೆ. ಹೆಚ್ಚಿನ ಚಿಕಿತ್ಸೆ ಬೇಕಿದ್ರೆ ಮತ್ತೆ ಬಿಗ್ ಬಾಸ್‌ಗೆ ಬರೋದು ಅನುಮಾನವೇ ಸರಿ ಎಂದು ಹೇಳಲಾಗುತ್ತಿದೆ.
ದೊಡ್ಮನೆಗೆ ಕಾಲಿಟ್ಟ ಮೊದಲ ದಿನದಿಂದಲೂ ಗಟ್ಟಿ ಸ್ಪರ್ಧಿಯಾಗಿ ತನಿಷಾ ಸೆಡ್ಡು ಹೊಡೆದಿದ್ದಾರೆ. ಎದುರಾಳಿಗೆ ಮಸ್ತ್ ಠಕ್ಕರ್ ಕೊಟ್ಟಿದ್ದಾರೆ. ಸದ್ಯ ತನಿಷಾ ಮನೆಯಿಂದ ಹೊರಹೋಗಿರೋದು ಬಿಗ್ ಬಾಸ್ ಮನೆಮಂದಿಗೂ ಬೇಸರ ಮೂಡಿಸಿದೆ. ತಮ್ಮ ನೆಚ್ಚಿನ ನಟಿಯು ಬೇಗ ಗುಣಮುಖರಾಗಿ ಮತ್ತೆ ಬಿಗ್ ಬಾಸ್ ಮನೆಗೆ ಬರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.


ದೊಡ್ಮನೆಯಲ್ಲಿ ವೈಯಕ್ತಿಕ ದ್ವೇಷಗಳು ಈಗ ಆಟದಲ್ಲೂ ಎದ್ದು ಕಾಣ್ತಿದೆ. ತನಿಷಾ (Tanisha) ಮತ್ತು ಕಾರ್ತಿಕ್‌ಗೆ ಕೈ ಕೊಟ್ಟು ಈಗ ಚಮಚ ನಮ್ರತಾ ಜೊತೆ ಸಂಗೀತಾ (Sangeetha Sringeri) ಸೇರಿಕೊಂಡಿದ್ದಾರೆ. ಕಿಚ್ಚನ ಬುದ್ಧಿ ಮಾತಿಗೂ ಮಣಿಯದ ಸಂಗೀತಾ ಕಾರ್ತಿಕ್ ಟೀಮ್ ಬಿಟ್ಟು ವಿನಯ್ ಜೊತೆ ಸೇರಿಕೊಂಡಿದ್ದಾರೆ. ಇದೆಲ್ಲದರ ನಡುವೆ ಹೊಸ ಟಾಸ್ಕ್‌ವೊಂದನ್ನ ಸ್ಪರ್ಧಿಗಳಿಗೆ ಬಿಗ್ ಬಾಸ್ ನೀಡಿದ್ದಾರೆ. ಇದನ್ನೂ ಓದಿ:
ಟಾಸ್ಕ್‌ಗಾಗಿ ಮತ್ತೆ 2 ತಂಡಗಳಾಗಿ ಬಿಗ್ ಬಾಸ್ ವಿಂಗಡಿಸಿದ್ದಾರೆ. ಟೀಮ್ ಗಜಕೇಸರಿ ಮತ್ತು ಟೀಮ್ ಸಂಪತ್ತಿಗೆ ಸವಾಲ್ ಎಂದು ತಂಡಗಳನ್ನ ಮಾಡಲಾಗಿದೆ. ಎದುರಾಳಿ ತಂಡಕ್ಕೆ ಟಾಸ್ಕ್ ನೀಡಿ ಸವಾಲು ಎಸೆಯಬೇಕು. ಅದನ್ನ ಪೂರ್ಣ ಮಾಡದಿದ್ದರೆ ಎದುರಿರುವ ತಂಡಕ್ಕೆ ವಿಶೇಷ ಅಧಿಕಾರ ಸಿಗಲಿದೆ. ಈ ಅನುಸಾರ, ಟಾಸ್ಕ್‌ವೊಂದರಲ್ಲಿ ಗೆದ್ದಿದ್ದಕ್ಕೆ ಎದುರಾಳಿ ಟೀಮ್‌ಗೆ ಸಂಗೀತಾ ತಲೆ ಬೊಳಿಸಬೇಕು ಎಂದು ಹೇಳಿದ್ದರು.















ಇದೀಗ ಎರಡೂ ಮುದ್ರಿತ ಧ್ವನಿ ಕಲೆಕ್ಟ್ ಮಾಡಿರೋ ಪೊಲೀಸರು, ಈ ಸಂಭಾಷಣೆ ಕುರಿತಂತೆ ಪ್ರತಾಪ್‌ಗೂ ವಿಚಾರಣೆ ಮಾಡಲಾಗಿದೆ. ತನಿಷಾ ಮತ್ತು ಪ್ರತಾಪ್ ಹೇಳಿಕೆ ಪಡೆದಿರೋ ಪೊಲೀಸರ ಮುಂದಿನ ನಡೆಯೇನು? ಎಂದು ಕಾದುನೋಡಬೇಕಿದೆ.


ಇನ್ನೂ ಬಿಗ್ ಬಾಸ್ ಮನೆಯಲ್ಲಿ (Bigg Boss House) ಪರಿಚಯವಾದ ಸಹೋದರಿಯರ ಜೊತೆ ಡ್ರೋನ್ ಪ್ರತಾಪ್ ಹೆಜ್ಜೆ ಹಾಕಿದ್ದಾರೆ. ಅದರಲ್ಲೂ ಸಂಗೀತಾ (Sangeetha Sringeri) ಜೊತೆಗಿನ ಪ್ರತಾಪ್ ಡ್ಯಾನ್ಸ್ ನೋಡಿ ಕಾರ್ತಿಕ್ ನೋಟ ಬೇರೇ ತರಹನೇ ಇತ್ತು. ಶಾಕ್ ಆಗಿ ಇಬ್ಬರೂ ಡ್ಯಾನ್ಸ್ ನೋಡುತ್ತಿದ್ದರು. ಕಾರ್ತಿಕ್ ನಡೆಗೆ ಸುದೀಪ್ ಸೇರಿದಂತೆ ಸಹಸ್ಪರ್ಧಿಗಳು ಕೂಡ ಕಾಲೆಳೆದಿದ್ದಾರೆ.