Tag: tanisha kuppanda

  • ಅಸಮರ್ಥರಾಗಿದ್ದ ಕಾರ್ತಿಕ್- ಸಂಗೀತಾ- ತನಿಷಾ ಸಮರ್ಥರಾದ ರೋಚಕ ಕಥೆ

    ಅಸಮರ್ಥರಾಗಿದ್ದ ಕಾರ್ತಿಕ್- ಸಂಗೀತಾ- ತನಿಷಾ ಸಮರ್ಥರಾದ ರೋಚಕ ಕಥೆ

    ಬಿಗ್ ಬಾಸ್ (Bigg Boss Kannada)ಮನೆಯಲ್ಲಿ ಅಸಮರ್ಥರ ತಂಡದಲ್ಲಿ ಒಂದಾಗಿ ಮನೆಯೊಳಗೆ ಪ್ರವೇಶಿಸಿದ ಕಾರ್ತಿಕ್ (Karthik), ಸಂಗೀತಾ (Sangeetha) ಮತ್ತು ತನಿಷಾ (Tanisha Kuppanda)ಬಹುಬೇಗ ಆಪ್ತ ಸ್ನೇಹಿತರಾದರು. ಅದರಲ್ಲಿಯೂ ಸಂಗೀತಾ ಮತ್ತು ಕಾರ್ತಿಕ್ ಅವರ ಸಂಬಂಧಕ್ಕೆ ಕೆಲವು ಸಲ ರೊಮ್ಯಾಂಟಿಕ್ ಆಂಗಲ್ ಕೂಡ ದಕ್ಕಿತ್ತು. ಆದರೆ ಆರಂಭದಲ್ಲಿಯೇ, ‘ಲವ್‌ ಗಿವ್‌ ಎಲ್ಲ ಬೇಡ… ಫ್ರೆಂಡ್ ಆಗಿರೋಣ’ ಎಂದು ಸಂಗೀತ ಸ್ಪಷ್ಟವಾಗಿ ಹೇಳಿದ್ದರು. ಅದಕ್ಕೆ ಕಾರ್ತಿಕ್ ಕೂಡ ಒಪ್ಪಿದ್ದರು. ಈ ಮೂವರ ಫ್ರೆಂಡ್‌ಷಿಪ್ ಬಿಗ್‌ಬಾಸ್ ಮನೆಯಲ್ಲಿ ಸಾಕಷ್ಟು ದೂರ ಸಾಗಿತ್ತು.

    ಒಮ್ಮೆ ಸಂಗೀತಾ ಜೈಲಿಗೆ ಹೋದಾಗ ಕಾರ್ತಿಕ್ ನೇರವಾಗಿಯೇ, ‘ನಾವು ಮೊದಲ ದಿನದಿಂದಲೂ ಒಬ್ಬರಿಗೊಬ್ಬರು ನಿಂತಿದ್ದೇವೆ. ಮುಂದೆಯೂ ನಿಲ್ಲುತ್ತೇವೆ’ ಎಂದೇ ಹೇಳಿದ್ದರು. ಜೈಲು ಅವಧಿ ಮುಗಿದಾಗ, ಸಂಗೀತಾಳನ್ನು ಹೆಗಲ ಮೇಲೆ ಹೊತ್ತು ಮನೆಯೊಳಗೆ ತಂದ ಸನ್ನಿವೇಶ ಅವರಿಬ್ಬರ ಸ್ನೇಹಸಂಬಂಧದ ಬಗ್ಗೆ ಬಹಳಷ್ಟನ್ನು ಹೇಳುವಂತಿತ್ತು. ಹಲವು ಸಲ ಕಾರ್ತಿಕ್, ತನ್ನ ಸ್ನೇಹಿತರಾದ ಸಂಗೀತಾ ಮತ್ತು ತನಿಷಾ ಪರವಾಗಿ ನಿಂತಿದ್ದಾರೆ. ಅವರೊಟ್ಟಿಗೆ ಸೇರಿ ಆಡಿದ್ದಾರೆ. ಮನೆಯ ಉಳಿದ ಸಮಯದಲ್ಲಿಯೂ ಅವರ ನೋವುಗಳಿಗೆ ಜೊತೆಯಾಗಿದ್ದಾರೆ. ಕಣ್ಣೀರು ಒರೆಸಿದ್ದಾರೆ. ಹಾಗೆಯೇ ತಮ್ಮ ನೋವು ನಲಿವುಗಳನ್ನೂ ಅವರೊಟ್ಟಿಗೆ ಹಂಚಿಕೊಂಡಿದ್ದಾರೆ.

    ಆದರೆ ಸಂಗೀತಾ ಜೊತೆಗಿನ ಈ ಸ್ನೇಹ ಒಂದು ಹಂತದ ನಂತರ ಸಡಿಲಗೊಳ್ಳುತ್ತ ಬಂದಿತು. ಸಂಗೀತಾ ತಮ್ಮ ಕಂಪರ್ಟ್‌ ಝೋನ್ ಬಿಟ್ಟು ಹೊರಬರಲೆಂದು ವಿನಯ್ ಅವರಿದ್ದ ತಂಡದಲ್ಲಿ ಆಡಲು ನಿರ್ಧರಿಸಿದಾಗ ಆ ಸಂಬಂಧ ಇನ್ನಷ್ಟು ಸಡಿಲಾಗಿದ್ದು ನಿಜ. ಅಂಥ ಒಂದು ಸಂದರ್ಭದಲ್ಲಿ ಸಂಗೀತಾ ಎಸೆದ ಛಾಲೆಂಜ್ ಅನ್ನು ಸವಾಲಾಗಿ ಸ್ವೀಕರಿಸಿದ ಕಾರ್ತಿಕ್ ಮತ್ತು ತುಕಾಲಿ ಸಂತೋಷ್ ತಮ್ಮ ತಲೆಯನ್ನು ಬೋಳಿಸಿಕೊಂಡಿದ್ದರು. ನಂತರ ನಾಮಿನೇಷನ್‌ನಲ್ಲಿ, ಮನೆಯೊಳಗಿನ ಚಟುವಟಿಕೆಗಳ ಸಂದರ್ಭದಲ್ಲಿಯೆಲ್ಲ ಸಂಗೀತಾ ಮತ್ತು ಕಾರ್ತೀಕ್ ನಡುವಿನ ಗ್ಯಾಪ್ ಹೆಚ್ಚುತ್ತಲೇ ಹೋಯಿತು. ಒಂದು ಹಂತದಲ್ಲಿ ಈ ಸ್ನೇಹವನ್ನು ಬೇರ್ಪಡಿಸುವುದು ಸಾಧ್ಯವೇ ಇಲ್ಲ ಎಂಬಂತೆ ಕಾಣಿಸುತ್ತಿದ್ದ ಈ ಜೋಡಿ ಪರಸ್ಪರ ಕಿತ್ತಾಡುವ ಹೆಜ್ಜೆಹೆಜ್ಜೆಗೂ ಜಗಳವಾಡುವ ಎದುರಾಳಿಗಳಾಗಿ ಬದಲಾದರು.

    ಬೆರ್ಚುಗೊಂಬೆಯ ತಲೆಮೇಲಿನ ಮಡಕೆ ಒಡೆಯುವ ಸಂದರ್ಭದಲ್ಲಿ ಕಾರ್ತಿಕ್, ಸಂಗೀತಾ ಚಿತ್ರವಿರುವ ಮಡಕೆಯನ್ನು ಪುಡಿಗಟ್ಟಿ, ‘ಸಂಗೀತಾ ಅವರಲ್ಲಿ ನನ್ನನ್ನು ಕಳೆದರೆ ನಾನು ಜಿರೋ ಎಂದು ಕೆಲವರ ವಾದ. ಅದು ಸುಳ್ಳು ಅಂತ ನಾನು ಪ್ರೂವ್ ಮಾಡಿ ತೋರಿಸುತ್ತೇನೆ’ ಎಂದು ಹೇಳಿದ್ದರು.

     

    ಆದರೆ ಅದಾದ ನಂತರ ಕಾರ್ತಿಕ್ ಅವರ ಗ್ರಾಫ್‌ ನಿಧಾನಕ್ಕೆ ಇಳಿಯುತ್ತಲೇ ಬಂತು. ತನಿಷಾ ಅವರನ್ನು ನಾಮಿನೇಟ್ ಮಾಡುವುದರ ಮೂಲಕ ಅವರ ಅವರ ಸ್ನೇಹದಲ್ಲಿಯೂ ಒಡಕು ಬಂದಿತು. ಅವರ ನೆಚ್ಚಿನ ಅಕ್ಕ ಸಿರಿ ಎಲಿಮಿನೇಟ್ ಆಗಿ ಮನೆಯಿಂದ ಹೊರಗೆ ಹೋದರು. ನಮ್ರತಾ ಜೊತೆಗಿನ ಅವರ ಸಂಬಂಧ ಬೇರೆಯದೇ ಆಯಾಮ ಪಡೆದುಕೊಳ್ಳುವ ಸೂಚನೆ ಸಿಕ್ಕಿತ್ತು. ಈ ಎಲ್ಲದರಿಂದ ಕಾರ್ತಿಕ್ ಮಾನಸಿಕವಾಗಿ ಕುಗ್ಗಿದ್ದು ಸುಳ್ಳಲ್ಲ. ಮನೆಯೊಳಗೆ ಒಬ್ಬಂಟಿಯಾದರು ಕೂಡ.

  • ವರ್ತೂರು ಮದುವೆ ಬಗ್ಗೆ ಮಾತನಾಡುತ್ತಿದ್ದಂತೆ ನಾಚಿ ನೀರಾದ ಬೆಂಕಿ

    ವರ್ತೂರು ಮದುವೆ ಬಗ್ಗೆ ಮಾತನಾಡುತ್ತಿದ್ದಂತೆ ನಾಚಿ ನೀರಾದ ಬೆಂಕಿ

    ದೊಡ್ಮನೆಯ 112 ದಿನಗಳ ಆಟಕ್ಕೆ ತೆರೆ ಬೀಳುವ ಸಮಯ ಬಂದಿದೆ. ಗ್ರ್ಯಾಂಡ್ ಫಿನಾಲೆಗೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಇನ್ನೂ ಈ ವೇದಿಕೆಯಲ್ಲಿ ವರ್ತೂರು ಸಂತೋಷ್ (Varthur Santhosh) ಮದುವೆ ಬಗ್ಗೆ ಕೂಡ ಚರ್ಚೆಯಾಗಿದೆ. ಈಗ ಇರೋ ಜನಪ್ರಿಯತೆಗೆ 3 ಮದುವೆ ಆಗುತ್ತದೆ ಎಂದು ವರ್ತೂರು ಸಂತೋಷ್ ಅವರ ಕಾಲೆಳೆದಿದ್ದಾರೆ ಸುದೀಪ್. ಈ ಮಾತು ಕೇಳ್ತಿದ್ದಂತೆ ಬೆಂಕಿ ತನಿಷಾ ಕುಪ್ಪಂಡ (Tanisha Kuppanda) ನಾಚಿ ನೀರಾಗಿದ್ದಾರೆ. ಇದನ್ನೂ ಓದಿ:ನೀವು ಹೇಗಿದ್ದೀರೋ ಹಾಗೇ ತೋರಿಸಿದ್ದೀವಿ- ಕಿಚ್ಚನ ಮಾತಿಗೆ ಸ್ಪರ್ಧಿಗಳು ಗಪ್‌ಚುಪ್

    ‘ಬಿಗ್ ಬಾಸ್ ಸೀಸನ್ 10’ ಈ ಹಿಂದಿನ ಎಲ್ಲಾ ಸೀಸನ್‌ಗಳ ರೆಕಾರ್ಡ್ ಬ್ರೇಕ್ ಮಾಡಿ ಸದ್ದು ಮಾಡಿರುವಂತಹ ಸೀಸನ್. ಕಾಂಟ್ರವರ್ಸಿ, ಟ್ರೋಲ್, ಟೀಕೆ ಹೀಗೆ ಹಲವು ವಿಚಾರಗಳಿಂದ ಈ ಬಾರಿಯ ಕನ್ನಡದ ಬಿಗ್ ಬಾಸ್ ಸದ್ದು ಮಾಡುತ್ತಿದೆ. ಇದೀಗ ಸುದೀಪ್, ವರ್ತೂರು ಸಂತೋಷ್ ಜೈಲಿಗೆ ಹೋದ ವಿಚಾರವನ್ನು ಮನೆಯೊಳಗಡೆ ಇರುವ ಸ್ಪರ್ಧಿಗಳಿಗೆ ರಿವೀಲ್ ಮಾಡಿದ್ದಾರೆ. ಜೊತೆಗೆ ಅವರಿಗೆ 3 ಮದುವೆಯಾದರು ಅಚ್ಚರಿಪಡಬೇಕಿಲ್ಲ ಎಂದು ಸುದೀಪ್ ತಮಾಷೆ ಮಾಡಿದ್ದಾರೆ.

    ಇಡೀ ಮನೆಯಲ್ಲಿ ಒಂದು ಗುಟ್ಟು ಇದೆ. ಹೊರ ಜಗತ್ತಿಗೆ ಆ ಗುಟ್ಟು ಗೊತ್ತಿದೆ. ಮನೆಯ ಒಂದು ಸ್ಪರ್ಧಿಗೆ ಮಾತ್ರ ಅದು ಗೊತ್ತಿದೆ. ಉಳಿದ ಯಾರಿಗೂ ಆ ಗುಟ್ಟು ತಿಳಿದಿಲ್ಲ, ಏನದು ಎಂದು ಸುದೀಪ್ ಸ್ಪರ್ಧಿಗಳಿಗೆ ಕೇಳಿದ್ದರು. ಮನೆಯವರಿಗೆ ಇದನ್ನು ಕೇಳಿ ಗೊಂದಲ ಆಯಿತು. ಸುದೀಪ್ ಅವರು ವರ್ತೂರು ಅವರೇ ಎಂದು ಹೇಳಿದರು. ಆಗ ವರ್ತೂರು ಸಂತೋಷ್ ಅವರಿಗೆ ಇದು ತಮ್ಮದೇ ವಿಚಾರ ಎಂಬುದು ಗೊತ್ತಾಯಿತು.

    ವರ್ತೂರು ಸಂತೋಷ್ ಅವರು ಒಂದು ವಾರ ಹೊರಗೆ ಹೋಗಿ ಬಂದರು. ಮನೆಯಲ್ಲಿರುವ ಯಾರಿಗೂ ಇದಕ್ಕೆ ಕಾರಣ ಗೊತ್ತಿಲ್ಲ. ಹೊರ ಬಂದು ಎಲ್ಲವನ್ನೂ ತಿಳಿದುಕೊಂಡು ಹೋದರು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅದಲ್ಲ. ಏನಾಗಿತ್ತು ಹೇಳಿ ಎಂದು ಸುದೀಪ್ ಕೇಳಿದ್ದರು. ಈ ಮಾತು ಕೇಳುತ್ತಿದ್ದಂತೆ ವರ್ತೂರು ಸಂತೋಷ್ ಅವರು ಕಣ್ಣೀರು ಹಾಕಿದರು. ಇದನ್ನೂ ಓದಿ:ಪೂಜಾ ಜೊತೆ ಹೊಸ ಜೀವನಕ್ಕೆ ಕಾಲಿಟ್ಟ ನಟ ನಾಗಭೂಷಣ್

    ವರ್ತೂರು ಅವರ ಕತ್ತಿನಲ್ಲಿ ಒಂದು ಪೆಂಡೆಂಟ್ ಇತ್ತು. ಅದು ಧರಿಸುವಂತಿರಲಿಲ್ಲ. ಈ ಕಾರಣಕ್ಕೆ ಅವರನ್ನು ಹೊರಗೆ ಕರೆತರಲಾಯಿತು. ಅವರು ಜೈಲು ಸೇರಿದರು. ಬಿಗ್ ಬಾಸ್ ಮನೆಯಲ್ಲಿ ಇಲ್ಲದ ಸಮಯದಲ್ಲಿ ಅವರು ಒಂದು ವಾರ ಜೈಲಿನಲ್ಲಿ ಇದ್ದರು. ಸಾಕಷ್ಟು ಅನುಭವಿಸಿಕೊಂಡು ಬಂದರು. ಅವರು ನಿಜಕ್ಕೂ ಸ್ಟ್ರಾಂಗ್ ಎಂದರು ಸುದೀಪ್. ಸುದೀಪ್ ಹೇಳಿದ ವಿಚಾರ ಕೇಳಿ ಅನೇಕರಿಗೆ ಶಾಕ್ ಆಗಿದೆ.

    ವರ್ತೂರು ಸಂತೋಷ್ ಅವರ ಸಂಸಾರ ಈಗಾಗಲೇ ಮುರಿದು ಬಿದ್ದಿದೆ. ಆ ವಿಚಾರ ಬಿಗ್ ಬಾಸ್ ಮನೆಯಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಸುದೀಪ್ ಅವರು ವರ್ತೂರು ಸಂತೋಷ್ ಮದುವೆ ಬಗ್ಗೆ ಫಿನಾಲೆಯಲ್ಲಿ ಮಾತನಾಡಿದ್ದಾರೆ. ಈಗೀರೋ ಜನಪ್ರಿಯತೆಗೆ ವರ್ತೂರಿಗೆ ಮೂರು ಮದುವೆ ಆಗುತ್ತದೆ ಎಂದರು ಸುದೀಪ್. ಇದಕ್ಕೆ ಉತ್ತರಿಸಿದರು ವರ್ತೂರು ಸಂತೋಷ್ ತಾಯಿ, ಆದರೆ ಆಗಲಿ ಸರ್. ಸಾಮರ್ಥ್ಯ ಇದ್ದರೆ ಆಗಲಿ ಬಿಡಿ ಎಂದರು. ಆಗ ಎಲ್ಲರೂ ತನಿಷಾ ಅತ್ತ ನೋಡಿದರು. ತನಿಷಾ ಅವರು ನಾಚಿ ನೀರಾದರು. ಈ ಮೂಲಕ ಪರೋಕ್ಷವಾಗಿ ವರ್ತೂರು ಸಂತೋಷ್ ಮತ್ತು ತನಿಷಾ (Tanisha Kuppanda) ಮದುವೆ (Wedding) ಬಗ್ಗೆ ಮಾತನಾಡಿದ್ರಾ ಎಂಬ ಅನುಮಾನ ಪ್ರೇಕ್ಷಕರಲ್ಲಿ ಮೂಡಿದೆ.

  • Bigg Boss Kannada: ನಾನು ಫೇಕ್ ಅಲ್ಲ, ಬೆಂಕಿನೇ: ತನಿಷಾ ಸಂದರ್ಶನ

    Bigg Boss Kannada: ನಾನು ಫೇಕ್ ಅಲ್ಲ, ಬೆಂಕಿನೇ: ತನಿಷಾ ಸಂದರ್ಶನ

    ಬಿಗ್‌ಬಾಸ್ Bigg Boss Kannada) ಮನೆಯಲ್ಲಿ ‘ಬೆಂಕಿ’ ಎಂದೇ ಎಲ್ಲರಿಂದಲೂ ಹೇಳಿಸಿಕೊಳ್ಳುತ್ತಿದ್ದವರು ತನಿಷಾ ಕುಪ್ಪಂಡ. ಸ್ನೇಹಿತರಿಗೆ ಬೆಚ್ಚನೆಯ ಭಾವ ನೀಡುತ್ತ, ಎದುರಾಳಿಯಾಗಿ ನಿಂತರೆ ಸುಡುವ ಕೋಪವನ್ನೂ ತೋರುತ್ತಿದ್ದ ಅವರಿಗೆ ಈ ಬಿರುದು ಒಪ್ಪುವಂಥದ್ದೇ ಆಗಿದೆ. ನಡುವಲ್ಲಿ ಕಾಲುನೋವಾಗಿ ವಾಪಸ್ ಬರುತ್ತಾರೋ ಇಲ್ಲವೋ ಎಂಬ ಹಂತ ತಲುಪಿದರೂ, ಬಿಡದೇ ವಾಪಸ್ ಬಂದು ಸಾಕಷ್ಟು ಆಟವಾಡಿ ನೂರಕ್ಕೂ ಅಧಿಕ ದಿನ ಉಳಿದಿಕೊಂಡಿದ್ದ ತನಿಷಾ ಕುಪ್ಪಂಡ ಕಳೆದ ವಾರ ಮಿಡ್‌ವೀಕ್ ಎಲಿಮಿನೇಷನ್‌ನಲ್ಲಿ ಮನೆಯಿಂದ ಹೊರಗೆ ಬಂದಿದ್ದರು. ‘ಇನ್ನಷ್ಟು ದಿನ ಉಳಿದುಕೊಳ್ಳುತ್ತೇನೆ’ ಎಂಬ ವಿಶ್ವಾಸದಲ್ಲಿಯೇ ಇದ್ದ ಅವರಿಗೆ ಎಲಿಮಿನೇಷನ್ ಶಾಕ್ ಕೊಟ್ಟಿತ್ತು. ಅದಕ್ಕಾಗಿ ಹೋಗುವಾಗ ಕಣ್ಣೀರು ಹಾಕುತ್ತ ಮನೆಯ ಸದಸ್ಯರಿಗೂ ಜರಿದು, ‘ಬಿಗ್‌ಬಾಸ್ ಯಾಕಿಷ್ಟುಕೆಟ್ಟದಾಗಿ ಕಳಿಸಿಕೊಡ್ತೀರಾ?’ ಎಂದು ಕೇಳುತ್ತಲೇ ಹೊರಗೆ ಹೋದರು. ಆದರೆ ಈ ವಾರದ ವೀಕೆಂಡ್ ಎಪಿಸೋಡ್‌ನಲ್ಲಿ ಮತ್ತೆ ವೇದಿಕೆಗೆ ಬಂದು ಕಿಚ್ಚನ ಜೊತೆಗೆ ಬಿಚ್ಚುಮಾತುಗಳನ್ನಾಡಿದ ತನಿಷಾ ಕುಪ್ಪಂಡ ಮನೆಯಿಂದ ಹೊರಗೆ ಬಂದಕೂಡಲೇ ಜಿಯೊಸಿನಿಮಾಗೆ ಎಕ್ಸ್‌ಕ್ಲ್ಯೂಸಿವ್ ಸಂದರ್ಶನ ನೀಡಿದ್ದಾರೆ. ಅದರ ಅಕ್ಷರರೂಪ ಇಲ್ಲಿದೆ.

    ಮಿಡ್ ವೀಕ್ ಎಲಿಮಿನೇಷನ್ ಅನುಭವ ಹೇಗಿತ್ತು?

    ಆ ಸಂದರ್ಭದಲ್ಲಿ ತುಂಬ ಬೇಜಾರಾಯ್ತು ನನಗೆ. ನಾನು ಇನ್ನಷ್ಟು ದಿನ ಉಳಿದುಕೊಳ್ಳಲು ಅರ್ಹಳು ಎಂಬ ಆತ್ಮವಿಶ್ವಾಸದಲ್ಲಿಯೇ ನಾನಿದ್ದೆ. ಆ ನಂಬಿಕೆ ಮುರಿದುಹೋಯಿತು ಎಂಬ ಬೇಜಾರಿದೆ. ಆದರೆ ಆಚೆ ಬಂದು ಸ್ವಲ್ಪ ರಿಲ್ಯಾಕ್ಸ್ ಆಗಿ ಯೋಚಿಸಿದಾಗ ನನ್ನ ಜರ್ನಿ ನನಗೆ ಖುಷಿ ಕೊಟ್ಟಿದೆ. ನಾನು ಮಾಡಬೇಕಾದ ಎಲ್ಲ ಕೆಲಸಗಳನ್ನೂ ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದೇನೆ. ಹಾಗಾಗಿ ನಾನು ಬಿಗ್‌ಬಾಸ್ ಮನೆಯ ಒಳಗೆ ಇದ್ದಾಗ ಎಷ್ಟು ಖುಷಿಯಾಗಿದ್ದೆನೊ, ತೃಪ್ತಳಾಗಿದ್ದೇನೋ. ಆಚೆ ಬಂದಾಗಲೂ ಹಾಗೆಯೇ ಇದ್ದೇನೆ. ಎಲ್ಲರ ಮನೆಯ ಮಗಳಾಗಿದ್ದೇನೆ ನಾನು. ತುಂಬ ಖುಷಿ ಕೊಟ್ಟ ಪಯಣ ಇದು.

    ಬಿಗ್‌ಬಾಸ್ ಮನೆಯಿಂದ ಯಾಕೆ ಹೊರಗೆ ಬಂದಿರಿ?

    ತಪ್ಪು ಅಂತ ಏನೂ ಮಾಡಿಲ್ಲ ನಾನು. ಸಣ್ಣಪುಟ್ಟ ತಪ್ಪುಗಳನ್ನು ಮಾಡ್ತೀವಿ. ಅದು ಎಲ್ಲರಿಂದಲೂ ನಡೆಯುತ್ತದೆ. ಅದು ತಪ್ಪು ಎಂದು ಗೊತ್ತೂ ಆಗಿರಲ್ಲ. ಬಹುಶಃ ಜನರು ನಿರೀಕ್ಷೆ ಮಾಡುತ್ತಿರುವ ಯಾವುದನ್ನೋ ಹೊಸದಾಗಿ ಕೊಡಲಿಲ್ವೇನೋ ನಾನು ಅಂತ ಅನಿಸ್ತು. ನಾವು ಅಲ್ಲದೇ ಇರುವುದನ್ನು ಮಾಡಿದ್ರೆ ಖಂಡಿತವಾಗಿ ಫೇಕ್ ಆಗಿ ಕಾಣಿಸ್ತೀವಿ. ನಾನು ಫೇಕ್ ಆಗಿ ಏನನ್ನೂ ಮಾಡಲಿಲ್ಲ. ಜನರು ನನ್ನಿಂದ ಇನ್ನೂ ಏನನ್ನೋ ನಿರೀಕ್ಷೆ ಮಾಡ್ತಿದ್ರು ಅನಿಸುತ್ತದೆ. ಅನ್ನು ನಾನು ಕೊಡಲಿಲ್ವೇನೋ. ಮತ್ತೆ ಮನೆಯೊಳಗೆ ಹೋಗಲು ಅವಕಾಶ ಸಿಕ್ಕರೆ ನಿಮ್ಮಲ್ಲಿ ನೀವು ಏನನ್ನು ಬದಲಿಸಿಕೊಳ್ಳುತ್ತೀರಿ? ನನ್ನಲ್ಲಿ ನಾನು ಏನೂ ಬದಲಾವಣೆ ಮಾಡಿಕೊಳ್ಳಲ್ಲ. ಬಹುಶಃ ಇನ್ನಷ್ಟು ಮೆಲೊಡ್ರಾಮಾ ಆಡ್ ಮಾಡ್ಕೊಳ್ತಿದ್ದೆ ಅನಿಸುತ್ತದೆ. ಯಾಕಂದ್ರೆ ಎಷ್ಟೋ ಜನರನ್ನು ಮನೆಯೊಳಗಿದ್ದಾಗ ಅಯ್ಯೋ ಪಾಪ ಎಂದು ನೋಡುತ್ತಿದ್ದೆ. ಆದರೆ ಹೊರಗೆ ಬಂದು ನೋಡಿದಾಗ, ಅವರು ಕೊಡುವ ರಿಯಾಕ್ಷನ್ಗಳನ್ನು ನೋಡಿ, ಇವರನ್ನು ಅಯ್ಯೋ ಪಾಪ ಎಂದು ಕ್ಷಮಿಸಿದ್ದು ತಪ್ಪು ಅಂತ ನನಗನಿಸಿತು. ಸಾಮಾನ್ಯವಾಗಿ ನಾನು ಏನಾದ್ರೂ ಅನಿಸಿದ್ರೆ ನೇರವಾಗಿ ಹೇಳಿ ಅಷ್ಟಕ್ಕೆ ಬಿಟ್ಟುಬಿಡ್ತಿದ್ದೆ. ಆದರೆ ಹಾಗೆ ಬಿಡೋದನ್ನು ಕಡಿಮೆ ಮಾಡ್ತಿದ್ನೇನೋ. ಅಂದ್ರೆ ಇನ್ನೊಂಚೂರು ಡ್ರಾಮಾ ಮಾಡ್ತಿದ್ನೇನೋ.

    ಮನೆಯೊಳಗೆ ನಿಮ್ಮ ಧ್ವನಿಯ ಬಗ್ಗೆ ಸಾಕಷ್ಟು ಚರ್ಚೆ ಬಂತು

    ಮೊದಲಿಂದಲೂ ನಾನು ನನ್ನ ಬೆಸ್ಟ್ ಅನ್ನು ಕೊಡುತ್ತ ಬಂದಿದೀನಿ. ಯಾರು ಏನೇ ಅಂದುಕೊಂಡರೂ, ಎಲ್ಲರೂ ಟಾರ್ಗೆಟ್ ಮಾಡಿದಾಗಲೂ ಮನಸ್ಸಿಗೆ ತೆಗೆದುಕೊಳ್ಳದೆ ಆಡಿದ್ದೇನೆ. ಯಾಕೆಂದರೆ ಅದು ಗೇಮ್. ಆದ್ರೆ ಪ್ರತಿ ಸಲ ನನ್ನ ಧ್ವನಿಯನ್ನು ಎತ್ತಿಕೊಂಡು ಮಾತಾಡಿದಾಗಲೂ, -ಅದನ್ನು ಹೆಚ್ಚು ನಮ್ರತಾ, ವಿನಯ್ ಮಾತಾಡಿದ್ದಾರೆ- ಪ್ರತಿ ನಾಮಿನೇಷನ್‌ನಲ್ಲಿಯೂ ಈ ಕಾರಣ ಕೊಟ್ಟಿದ್ದಾರೆ, ಅವರೇನೋ ಕಡಿಮೆ ಧ್ವನಿಯಲ್ಲಿ ಮಾತಾಡುತ್ತಾರೆ ಎನ್ನುವ ರೀತಿಯಲ್ಲಿ. ನಾನು ಯಾವ ಜಾಗದಲ್ಲಿ ಮಾತಾಡಬೇಕೋ ಆ ಜಾಗದಲ್ಲಿ ಮಾತಾಡಿದ್ದೇನೆ. ನಾರ್ಮಲ್ ಆಗಿ ಮಾತಾಡುವಾಗ ನನ್ನ ಧ್ವನಿಯಲ್ಲಿ ಮಾತಾಡುವಾಗ ಎದುರಿಗಿರುವವರಿಗೆ ಕಂಪರ್ಟಬಲ್ ಇರುವ ಧ್ವನಿಯಲ್ಲಿಯೇ ಮಾತಾಡುತ್ತಿರುತ್ತೇನೆ.

    ಕಾಲು ನೋವಾಗಿದ್ದು ನಿಮಗೆ ಹಿನ್ನೆಡೆ ತಂದಿದೆ?

    ಕಾಲುನೋವಾಗಿದ್ದ ದಿನ ನನಗೆ, ಶಾಕ್ ಆಗಿತ್ತು. ನನಗೆ ಯಾರೋ ಚಾಕು ಚುಚ್ಚಿಬಿಟ್ರೆನೋ ಅನ್ನುವಷ್ಟು ನೊಂದುಕೊಂಡದ್ದೆ. ಇಷ್ಟು ಚೆನ್ನಾಗಿ ಆಡ್ತಿದ್ನಲ್ವಾ? ಯಾಕೆ ಹೀಗೆ ಕಷ್ಟಕೊಟ್ಟೆ ಎಂದು ದೇವರನ್ನೆಲ್ಲ ಬೈದುಕೊಂಡಿದ್ದೇನೆ. ಕಾಲು ನೋವು ಮಾಡಿ ಮನೆಯೊಳಗೆ ಹೋಗದೇ ಇರುವ ಹಾಗೆ ಮಾಡಿಬಿಟ್ಯಲ್ಲಾ ಎಂದು ದೂರಿದ್ದೇನೆ. ಆ ವಿಷಯದಲ್ಲಿ ನಾನು ಬಿಗ್‌ಬಾಸ್ ಟೀಮ್‌ಗೆ ಥ್ಯಾಂಕ್‌ಫುಲ್ ಆಗಿದ್ದೇನೆ. ಬಹಳಷ್ಟು ಟಾಸ್ಕ್‌ಗಳು ಕಾಲುನೋವು ಆಗಿದ್ದರೂ ಆಡಬಹುದು ಎನ್ನುವ ರೀತಿಯಲ್ಲಿಯೇ ಇರುತ್ತಿದ್ದವು. ಕಾಲು ನೋವು ನನ್ನನ್ನು ಯಾವುದೋ ನಾಲ್ಕು ಫಿಜಿಕಲ್ ಟಾಸ್ಕ್‌ನಿಂದ ಹೊರಗಿಟ್ಟಿರಬಹುದು ಬಿಟ್ರೆ, ಉಳಿದನ್ನು ನಾನು ಆಡಲು ಸಮರ್ಥಳಾಗಿದ್ದೆ. ಚಾನ್ಸ್ ಸಿಗಬೇಕಿತ್ತಷ್ಟೆ. ಅಲ್ಲದೇ ಟಾಸ್ಕ್ ಅಂತ ಬಂದಾಗ ಅದು ಬರೀ ಮೂವತ್ ಪರ್ಸಂಟ್ ಅಷ್ಟೇ ಇರುತ್ತದೆ. ಅದಕ್ಕಿಂತ ಪರ್ಸನಾಲಿಟಿ ಮುಖ್ಯ ಎಂದು ಸುದೀಪ್ ಅವರು ಮೊದಲೇ ಕ್ಲಿಯರ್ ಆಗಿ ಹೇಳಿದ್ದರು.

    ನೀವು, ಸಂಗೀತಾ, ಕಾರ್ತಿಕ್ ಟ್ರಯೋ ಫ್ರೆಂಡ್‌ಷಿಪ್‌ ಬಗ್ಗೆ…?

    ಮೊದಲಿನಿಂದ ನನಗೆ ಒಟ್ಟಿಗೆ ಇದ್ದಿದ್ದರಿಂದ ಸಂಗೀತಾ, ಕಾರ್ತಿಕ್, ನನ್ನ ನಡುವೆ ಟ್ರಯೊ ಫ್ರೆಂಡ್‌ಷಿಪ್ ಬೆಳೀತು. ಆದರೆ ಅವರಿಬ್ಬರೂ ಸ್ವಲ್ಪ ಜಾಸ್ತಿ ಕ್ಲೋಸ್ ಆಗಿರುವುದು ನನಗೆ ಖಂಡಿತವಾಗಲೂ ಗೊತ್ತಿತ್ತು. ಆ ಕಾರಣಕ್ಕೇ ನಾನು ಇದು ಗುಂಪಲ್ಲ. ನನಗೆ ಇವರ ಜೊತೆಗೆ ಹೆಚ್ಚು ಮಾತಾಡಬೇಕು ಅನಿಸುತ್ತದಷ್ಟೆ ಎಂದು ಹೇಳಿಕೊಂಡು ಎಲ್ಲರ ಜೊತೆ ಮಾತಾಡಿಕೊಂಡು ಓಡಾಡಿಕೊಂಡೇ ಇದ್ದೆ. ತನಿಷಾ ಅವರ ದುಃಖಕ್ಕೆ ಸ್ಪಂದಿಸುವುದಕ್ಕೆ ಪ್ರತಿ ಸಲ ಇರುತ್ತಿದ್ದಳು. ಆದರೆ ತನಿಷಾಗೆ, ತನಿಷಾ ಥರ ಯಾರೂ ಇರಲಿಲ್ಲ. ನನ್ನ ದುಃಖಕ್ಕಾಗಲಿ, ಖುಷಿಗಾಗಲಿ, ನನ್ನ ಕೋಪಕ್ಕಾಗಲಿ ಸ್ಪಂದಿಸುವವರು ಯಾರೂ ಇರಲಿಲ್ಲ. ಸಂಗೀತಾಗೆ ಏನು ಸಮಸ್ಯೆ ಎಂದರೆ, ಫ್ರೆಂಡ್ಸ್ ಅಂದ್ರೆ ಅವರನ್ನು ಸ್ವಲ್ಪ ತಲೆಮೇಲೆ ಇಟ್ಕೋಬೇಕು.ಆಗ ಅವರಿಗೆ ಸಮಾಧಾನ ಆಗುತ್ತದೆ. ಇಲ್ಲಾ ಅಂದ್ರೆ ಸಮಾಧಾನ ಆಗುವುದಿಲ್ಲ. ನಾನು ಜಗಳ ಆಯ್ತು ಅಂದ್ರೆ ಅಲ್ಲಲ್ಲೇ ಬಿಟ್ಟು ಹೋಗ್ತಾ ಇರ್ತೀನಿ. ಅವ್ರು ಜನರನ್ನೇ ಬಿಟ್ಟು ಹೋಗ್ತಿರ್ತಾರೆ. ಹಾಗಾಗಿ ಅವರು ತಪ್ಪು ಮಾಡಿದ್ರೂ ತುಂಬ ಬೇಗ ಕ್ಷಮಿಸಿ ನಾರ್ಮಲ್ ಆಗಿಬಿಡ್ತಿದ್ದೆ. ಕಾರ್ತಿಕ್ ವಿಚಾರಕ್ಕೆ ಬಂದ್ರೆ, ಕಾರ್ತಿಕ್ ಸ್ವಲ್ಪ ತಡವಾಗಿ ಅರ್ಥ ಮಾಡಿಕೊಳ್ಳುವುದು. ತುಂಬ ಚೆನ್ನಾಗಿದ್ರು, ಕೊನೆ ಕ್ಷಣದಲ್ಲಿ ಬೇರೆ ಯಾರದೋ ಮಾತು ಕೇಳಿಕೊಂಡು ಎಡವಿದ್ರು ಅಂತ ಅನಿಸ್ತು. ಪ್ರತಿ ಸಲ ಹೇಳಬೇಕಾದ್ರೆ ನಾನು ಇರ್ತಿದ್ದೆ. ಆದ್ರೆ ಅವು ಇರ್ತಿರ್ಲಿಲ್ಲ. ಹಾಗಾಗಿ ಒಬ್ರು ಸ್ವಲ್ಪ ಬೇಗ ದೂರವಾದ್ರು. ಇನ್ನೊಬ್ರು ತುಸು ತಡವಾಗಿ ದೂರವಾದ್ರು. ಆಚೆ ಹೋದರೆ ಬಹುಶಃ ನಾನು ಕಾರ್ತೀಕ್ ಜೊತೆಗೆ ಸ್ನೇಹ ಮುಂದುವರಿಸ್ತೀನಿ.

    ಮನೆಯೊಳಗೆ ಯಾರು ಇಷ್ಟ? ಯಾರು ಫೇಕ್? ಯಾರು ಗೆಲ್ಲಬಹುದು?

    ನನಗೆ ವರ್ತೂರು ಅವರ ಮುಗ್ಧತೆ ಇಷ್ಟ. ಯಾರದೋ ಮಾತಿಗೆ ಕೇಳಿಸಿಕೊಂಡು, ಬಲಿಯಾಗಿ ಯಾರ ಬಗ್ಗೆಯೋ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡುವುದಿಲ್ಲ ಅವರು. ಹಾಗಾಗಿ ಅವರ ಜೊತೆಗೆ ಮಾತಾಡುವುದು ನನಗೆ ಮೊದಲಿನಿಂದಲೂ ಇಷ್ಟ.  ನನ್ನ ಪ್ರಕಾರ ಬಿಗ್‌ಬಾಸ್ ಮನೆಯಲ್ಲಿ ಫೇಕ್ ಅಂದ್ರೆ, ಸಂಗೀತಾ. ಜೆನ್ಯೂನ್ ಅನಿಸುವುದು ವರ್ತೂರು ಸಂತೋಷ್. ನನ್ನ ಪ್ರಕಾರ ಗೆಲ್ಲಬಹುದು ಅನಿಸುವುದು ಸಂಗೀತಾ. ಆದರೆ ನನಗೆ ವಿನ್ ಆಗಬೇಕು ಎಂದುನನಗೆ ಇರುವುದು ಕಾರ್ತಿಕ್.

    ಜಿಯೊ ಸಿನಿಮಾ ಫನ್ ಫ್ರೈಡೆ ಟಾಸ್ಕ್‌ಗಳು ಯಾವಾಗ ಬಂದಿದ್ಯೋ ಅವುಗಳನ್ನು ಸಾಕಷ್ಟು ಎಂಜಾಯ್ ಮಾಡಿದೀನಿ ನಾನು. ಮ್ಯೂಸಿಕಲ್ ಪಾಟ್ ಅಂತೊಂದು ಗೇಮ್ ಮಾಡಿದ್ರು. ಅದರಲ್ಲಿ ನಾನು ಗೆದ್ದೆ ಕೂಡ. ಆ ಟಾಸ್ಕ್ ನಂಗೆ ತುಂಬ ಇಷ್ಟವಾಯ್ತು. ಯಾಕಂದ್ರೆ ಅಸಮರ್ಥರು ಎಂದು ನಾವು ಮನೆಯೊಳಗೆ ಎಂಟರ್‍ ಆಗಿದ್ವಿ. ಇಡೀ ವಾರ ಕೆಲಸ ಮಾಡು ಕೆಲಸ ಮಾಡು ಅಂದ್ಕೊಂಡು ಇದ್ವಿ. ಅವರಾದ್ಮೇಲೆ ತಿನ್ನು, ಅವರಾದ್ಮೇಲೆ ಮಲಗು. ಲೈಟ್ ಆಫ್ ಆಗೋವರೆಗೂ ಕಾಯಬೇಕು ಹೀಗೆಯೇ ಕಳೆದಿದ್ವಿ. ಸಾಕಾಗಿಬಿಟ್ಟಿತ್ತು. ಆ ವಾರ ಬಂದ ಮ್ಯೂಸಿಕಲ್ ಪಾಟ್ ಬಂದಾಗ ಎಂಜಾಯ್ ಮಾಡಿದೀನಿ.

     

    ಬಿಗ್‌ಬಾಸ್ ಮನೆಯಿಂದ ಆಚೆಬಂದು ಏನು ಮಿಸ್ ಮಾಡ್ಕೋತಿದೀರಿ.

    ಮೈಕ್. ಮೈಕ್ ಅನ್ನೋದು ನನ್ನ ದೇಹದ ಒಂದು ಭಾಗವೇ ಆಗಿಬಿಟ್ಟಿದೆ. ಎರಡನೇದಾಗಿ ಬಿಗ್‌ಬಾಸ್ ಧ್ವನಿ. ನೀವು ತುಂಬ ತಿದ್ದಿದೀರಾ, ಪ್ರೀತಿ ಕೊಟ್ಟಿದೀರಾ…. ನಾವು ಮುಂದೆ ನಡೆಯುವುದಕ್ಕೆ ದಾರಿಯೇ ಇಲ್ಲ ಅಂದಾಗ ಹೆಜ್ಜೆ ಎಲ್ಲಿ ಇಡಬಹುದು ಎಂದು ತೋರಿಸಿಕೊಟ್ಟಿದೀರಾ? ನಾನು ಲೋ ಆಗಿದ್ದಾಗ ನನಗೆ ಸಾಂತ್ವನ ಹೇಳಿದ್ದೀರಾ… ನಿಮ್ಮ ಕಡೆಯಿಂದ ಸಮಾನವಾದ ಪ್ರೀತಿ ಕಾಣಿಸ್ತಾ ಇತ್ತು. ನಮ್ಮ ಮನೆಯವರೂ ಇಷ್ಟು ಕೇರ್ ಮಾಡಿರ್ಲಿಲ್ವೇನೋ… ಅಷ್ಟು ಪ್ರೀತಿ ಕೊಟ್ಟಿದೀರಾ… ನಾನು ಇದನ್ನು ಯಾವತ್ತಿಗೂ ಮರೆಯಲಾರೆ

  • ‘ಬೆಂಕಿ’ ಸಾಂಗ್ ಕೇಳಿ ಸಂಭ್ರಮಿಸಿದ ತನಿಷಾ ಕುಪ್ಪಂಡ

    ‘ಬೆಂಕಿ’ ಸಾಂಗ್ ಕೇಳಿ ಸಂಭ್ರಮಿಸಿದ ತನಿಷಾ ಕುಪ್ಪಂಡ

    ಬಿಗ್ ಬಾಸ್ (Big Boss Kannada) ಮನೆಯಿಂದ ಕಣ್ಣೀರು ಹಾಕುತ್ತಲೇ ಹೊರ ಬಂದ ನಟಿ ತನಿಷಾ ಕುಪ್ಪಂಡ, ಇದೀಗ ತನ್ನ ಬಗ್ಗೆ ಮೂಡಿ ಬಂದಿರುವ ಬೆಂಕಿ (Benki) ಸಾಂಗ್ ಕೇಳಿ ಸಂಭ್ರಮಿಸುತ್ತಿದ್ದಾರೆ. ಸಾಂಗ್ ನೋಡಿದ ಬಳಿಕ ವಿಡಿಯೋವೊಂದನ್ನು ಮಾಡಿರುವ ಅವರು, ತುಂಬಾ ನೋವಿನಿಂದಲೇ ನಾನು ಬಿಗ್ ಬಾಸ್ ಮನೆಯಿಂದ ಆಚೆ ಬಂದೆ. ಆದರೆ, ನನ್ನ ಬಗ್ಗೆ ಸಾಂಗ್ ಮಾಡಿದ್ದು ಕೇಳಿ ತುಂಬಾನೇ ಖುಷಿ ಆಗುತ್ತಿದೆ. ನನಗೂ ಫ್ಯಾನ್ಸ್ ಇದ್ದಾರೆ ಎಂದು ನೋಡಿ ಸಂತಸವಾಯಿತು ಎಂದಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಆದ ರೀತಿಯಲ್ಲಿ ಆಟವಾಡಿದ್ದರು ತನಿಷಾ. ಅವರ ಆಟಕ್ಕೆ ಬೆರಗಾಗಿ ಅವರನ್ನು ಬೆಂಕಿ ಎಂದು ಕರೆಯಲಾಗುತ್ತಿತ್ತು. ಬೆಂಕಿಯಂತೆ ಪರ್ಫಾಮೆನ್ಸ್‌ ಕೊಡ್ತಿರುವ ಬೋಲ್ಡ್ ಬ್ಯೂಟಿ ತನಿಷಾ ಕುಪ್ಪಂಡ (Tanisha Kuppanda) ಕನ್ನಡ ಬಿಗ್ ಬಾಸ್ ಸೀಸನ್ 10ರ ಪ್ರಬಲ ಸ್ಪರ್ಧಿಯಾಗಿದ್ದರು. ಸಖತ್ ಫೈಟ್ ಕೊಡ್ತಿರುವ ಪೆಂಟಗನ್ ಸುಂದರಿ ಬಗ್ಗೆ ಹಾಡೊಂದನ್ನು ಮಾಡಿ ರಿಲೀಸ್ ಮಾಡಲಾಗಿತ್ತು.

    ‘ಬೆಂಕಿ ಬಂತೋ’ ಎಂಬ ಹಾಡಿಗೆ ಶಮಂತ್ ನಾಗಾರಾಜ್ ಕ್ಯಾಚಿ ಮ್ಯಾಚಿ ಪದ ಸೇರಿಸಿ ಸಾಹಿತ್ಯ ಬರೆದಿದ್ದರೆ, ಶಶಾಂಕ್ ಶೇಷಗಿರಿ ಈ ಜಬರ್ದಸ್ತ್ ಗಾನಬಜಾನಕ್ಕೆ ಧ್ವನಿಯಾಗುವುದರ ಜೊತೆಗೆ ಮ್ಯೂಸಿಕ್ ಕಿಕ್ ಕೊಟ್ಟಿದ್ದಾರೆ. ತನಿಷಾ ಕುಪ್ಪಂಡ ಎನರ್ಜಿ, ಸ್ಟೈಲ್, ಮಾತಿಗೆ ನಿಂತ್ರೆ ಎದುರಾಳಿಗೆ ಠಕ್ಕರ್ ಕೊಡುವ ಆಕೆಯ ಗುಣವನ್ನು ವರ್ಣಿಸುವ ಹಾಡು ಇದಾಗಿದೆ. ಈಕೆಯೇ ಬಿಗ್ ಬಾಸ್ ಬೆಂಕಿ ಚೆಂಡು ಎಂಬುದೇ ಹಾಡಿನ ಹೈಲೆಟ್ಸ್ ಆಗಿದೆ.

     

    ‘ಮಂಗಳಗೌರಿ’ ಸೀರಿಯಲ್‌ನಲ್ಲಿ ಖಳನಾಯಕಿಯಾಗಿ ಕಾಣಿಸಿಕೊಂಡಿದ್ದ ತನಿಷಾ ಕುಪ್ಪಂಡ, ಆ ನಂತ್ರ ‘ಪೆಂಟಗನ್’ ಸಿನಿಮಾ ಮೂಲಕ ಬೆಳ್ಳಿಪರದೆಗೂ ಎಂಟ್ರಿ ಕೊಟ್ಟರು. ನಂತರ ಕೋಮಲ್ ಅವರ ‘ಉಂಡೆನಾಮ’ ಚಿತ್ರದಲ್ಲೂ ಕಾಣಿಸಿಕೊಂಡರು ತನಿಷಾ ಇನ್ನು ಅನೇಕ ಹೊಸ ಹೊಸ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿರುವ ಈ ಬೋಲ್ಡ್ ಬ್ಯೂಟಿ ಇದೀಗ ಬಿಗ್ ಬಾಸ್ ಮನೆಯಿಂದ ಮಿಡ್ ವೀಕ್ ಎಲಿಮಿನೇಟ್ ಆಗಿ ಆಚೆ ಬಂದಿದ್ದಾರೆ.

  • Bigg Boss: ಮಿಡ್‌ ವೀಕ್‌ ಎಲಿಮಿನೇಷನ್‌ನಲ್ಲಿ ಬೆಂಕಿ ತನಿಷಾ ಔಟ್‌

    Bigg Boss: ಮಿಡ್‌ ವೀಕ್‌ ಎಲಿಮಿನೇಷನ್‌ನಲ್ಲಿ ಬೆಂಕಿ ತನಿಷಾ ಔಟ್‌

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಮಹಾ ತಿರುವು, ದೊಡ್ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆದಿದೆ. ದೊಡ್ಮನೆ ಆಟದಿಂದ ತನಿಷಾ ಕುಪ್ಪಂಡ (Tanisha Kuppanda) ಔಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

    ದೊಡ್ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದ ತನಿಷಾ ಕುಪ್ಪಂಡ ಅವರಿಗೆ ‘ಬಿಗ್ ಬಾಸ್’ ಬಿಗ್ ಶಾಕ್ ಕೊಟ್ಟಿದ್ದಾರೆ. ತನಿಷಾ ಈ ಮನೆಯಲ್ಲಿ ನಿಮ್ಮ ಪಯಣ ಅಂತ್ಯ ಎಂದು ಹೇಳಿ ‘ಬಿಗ್ ಬಾಸ್’ (Bigg Boss) ಅಚ್ಚರಿ ಮೂಡಿಸಿದ್ದಾರೆ.

    ಕಳೆದ 60 ದಿನಗಳಿಂದ ಎದುರಾಳಿಗಳಿಗೆ ಠಕ್ಕರ್ ಕೊಡುತ್ತಲೇ ತನಿಷಾ ಆಟ ಆಡುತ್ತಿದ್ದರು. ಟಾಸ್ಕ್‌ವೊಂದರಲ್ಲಿ ತನಿಷಾ ಕಾಲಿಗೆ ಏಟಾದ ಮೇಲೆ ಕೊಂಚ ಡಲ್ ಆದರು. ಇದನ್ನೂ ಓದಿ:ಸಾಯಿ ಪಲ್ಲವಿ ಮನೆಯಲ್ಲಿ ಮದುವೆ ಸಡಗರ

    ಬಿಗ್ ಬಾಸ್ ಮನೆಯ ಆಟದಲ್ಲಿ ಕಳೆದ ವಾರ ಎಲಿಮಿನೇಷನ್ ಪ್ರಕ್ರಿಯೆ ನಡೆದಿರಲಿಲ್ಲ. ಈಗ ಸಡನ್ ಆಗಿ ತನಿಷಾ ಅವರ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ. ಈ ಕುರಿತ ವಾಹಿನಿಯ ಪ್ರೋಮೋ ವೈರಲ್ ಆಗುತ್ತಿದೆ.

    ಕಳೆದ ವಾರ ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೂ ಡೇಂಜರ್ ಝೋನ್‌ನಲ್ಲಿದ್ದರು. ಆದರೆ ಈ ವಾರ ತುಕಾಲಿ ಸಂತೂ ನಾಮಿನೇಟ್ ಆಗಿಲ್ಲ. ಮೂಲಗಳ ಪ್ರಕಾರ, ತನಿಷಾ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದೆ.

  • ಹಾರ್ಟ್‌ಗೆ ನಿಧಾನವಾಗಿ ಚುಚ್ಚು, ಈಗಾಗಲೇ ಡೀಪ್ ಆಗಿ ಚಾಕು ಹೋಗಿದೆ- ಕಾರ್ತಿಕ್‌ ವಿರುದ್ಧ ತನಿಷಾ ಕಿಡಿ

    ಹಾರ್ಟ್‌ಗೆ ನಿಧಾನವಾಗಿ ಚುಚ್ಚು, ಈಗಾಗಲೇ ಡೀಪ್ ಆಗಿ ಚಾಕು ಹೋಗಿದೆ- ಕಾರ್ತಿಕ್‌ ವಿರುದ್ಧ ತನಿಷಾ ಕಿಡಿ

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಇದೀಗ ಅಸಲಿ ಆಟ ಶುರುವಾಗಿದೆ. ಫ್ರೆಂಡ್ಸ್ ಆಗಿ ಜೊತೆಯಾಗಿದ್ದ ತನಿಷಾ- ಕಾರ್ತಿಕ್ (Karthik Mahesh) ನಡುವೆ ಮನಸ್ತಾಪ ಆಗಿದೆ. ಇದೀಗ ತನಿಷಾ ಎದೆಗೆ ಕಾರ್ತಿಕ್ ಚೂರಿ ಹಾಕಿದ್ದಾರೆ. ಕಾರ್ತಿಕ್ ನಡೆಗೆ ತನಿಷಾ ಕಣ್ಣೀರಿಟ್ಟಿದ್ದಾರೆ.

    ಚೆನ್ನಾಗಿದ್ದ ತನಿಷಾ- ಕಾರ್ತಿಕ್ ನಡುವೆ ಬಿರುಕು ಮೂಡಿದೆ. ನಾಮಿನೇಷನ್ ಪ್ರಕ್ರಿಯೆಯಲ್ಲಿ ತನಿಷಾ ಎದೆಗೆ ಕಾರ್ತಿಕ್ ಚೂರಿ ಹಾಕಿದ್ದಾರೆ. ತನಿಷಾ ನಂಬಿಕೆಗೂ ಕಾರ್ತಿಕ್ ನಡೆಯಿಂದ ಪೆಟ್ಟು ಬಿದ್ದಿದೆ. ಫ್ರೆಂಡ್‌ಶಿಪ್ ಕಾರ್ಡ್ ನೀಡುವಾಗ ಕಾರ್ತಿಕ್ ಅವರ ಲೋಟವನ್ನೂ ತನಿಷಾ ತೊಳದು ಕೊಡುತ್ತಾರೆ ಎಂಬಿತ್ಯಾದಿ ಆರೋಪಗಳು ವಿನಯ್ ಕಡೆಯಿಂದ ಬಂದವು. ಈ ಆರೋಪವನ್ನು ಕಾರ್ತಿಕ್ ಒಪ್ಪಿಲ್ಲ. ಸ್ನೇಹ ಬೇರೆ, ಆಟ ಬೇರೆ ಎಂದು ಸಹಸ್ಪರ್ಧಿಗಳಿಗೆ ತೋರಿಸಲು ಹೋಗಿ ತನಿಷಾ ಮನಸ್ಸಿಗೆ ಕಾರ್ತಿಕ್ ಘಾಸಿ ಮಾಡಿದ್ದಾರೆ.

    ಇದಾದ ನಂತರ ಬಿಗ್ ಬಾಸ್ ಆದೇಶದಂತೆ ನಾಮಿನೇಷನ್ ಪ್ರಕ್ರಿಯೆ ನಡೆಯಿತು. ಎಲ್ಲರೂ ಒಂದು ಥರ್ಮಕೋಲ್ ಹಾರ್ಟ್ ಹಿಡಿದು ನಿಲ್ಲುತ್ತಾರೆ. ನಾಮಿನೇಟ್ ಮಾಡುವಾಗ ಆ ಹಾರ್ಟ್‌ಗೆ ಚಾಕುವಿನಿಂದ ಚುಚ್ಚಬೇಕು. ಕಾರ್ತಿಕ್ ಅವರು ತನಿಷಾನ ನಾಮಿನೇಟ್ ಮಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಕಾರ್ತಿಕ್ (Karthik) ತಮ್ಮ ಹೆಸರನ್ನು ತೆಗೆದುಕೊಂಡಿದ್ದು ನೋಡಿ ಎಲ್ಲರಿಗೂ ಶಾಕ್ ಆಯಿತು. ತನಿಷಾ ಕಣ್ಣಲ್ಲಿ ನೀರು ತುಂಬಿತ್ತು. ಹಾರ್ಟ್‌ಗೆ ನಿಧಾನವಾಗಿ ಚುಚ್ಚು. ಈಗಾಗಲೇ ಡೀಪ್ ಆಗಿ ಚಾಕು ಹೋಗಿದೆ ಎಂದು ತನಿಷಾ ಸಿಟ್ಟಿನಿಂದಲೇ ಅಸಮಾಧಾನ ಹೊರಹಾಕಿದ್ದರು. ಇದನ್ನೂ ಓದಿ:ಗ್ಲ್ಯಾಮರಸ್ ಆಗಿ ಫೋಟೋಶೂಟ್‌ನಲ್ಲಿ ಮಿಂಚಿದ ಮೇಘಾ ಶೆಟ್ಟಿ

    ಬಿಗ್ ಮನೆಗೆ ಬರುವ ಮುನ್ನವೇ ಮೊದಲಿನಿಂದಲೂ ಇಬ್ಬರೂ ಪರಿಚಿತರು. ಇದೀಗ ದೊಡ್ಮನೆಯಲ್ಲಿ ಕಾರ್ತಿಕ್-ತನಿಷಾ ಕಷ್ಟಗಳನ್ನು ಶೇರ್ ಮಾಡಿಕೊಳ್ಳುತ್ತಾ ಬರುತ್ತಿದ್ದಾರೆ. ಹಾಗಿದ್ದರೂ ಕಾರ್ತಿಕ್ ತಮ್ಮ ಹೆಸರನ್ನು ತೆಗೆದುಕೊಂಡಿದ್ದು, ತನಿಷಾಗೆ ಬೇಸರ ಮೂಡಿಸಿದೆ. ಈ ವಾರ ತನಿಷಾಗೆ ಬಿದ್ದಿದ್ದು ಒಂದೇ ವೋಟ್ ಆಗಿತ್ತು. ಅದೂ ಕಾರ್ತಿಕ್‌ ಕಡೆಯಿಂದ ಆಗಿತ್ತು. ಈ ಪ್ರಕ್ರಿಯೆಯಲ್ಲಿ ಅವರು ವೋಟ್ ಮಾಡದೇ ಇದ್ದಿದ್ದರೆ ತನಿಷಾ ಸೇವ್ ಆಗುತ್ತಿದ್ದರು.

    ಈ ಬಗ್ಗೆ ವಿನಯ್, ನಮ್ರತಾ (Namratha Gowda) ಹಾಗೂ ಸಂಗೀತಾ ಚರ್ಚೆ ಮಾಡಿದ್ದಾರೆ. ನಾವು ಫ್ರೆಂಡ್‌ಶಿಪ್ ಕಾರ್ಡ್ ಎಂದು ಹೇಳಿದ್ದಕ್ಕೆ ಕಾರ್ತಿಕ್ ಈ ರೀತಿ ಮಾಡಿದ್ದಾರೆ. ಆರೋಪ ಸುಳ್ಳು ಎಂಬುದನ್ನು ತೋರಿಸುವುದು ಅವರ ಉದ್ದೇಶ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ಬಿಗ್ ಬಾಸ್ ತನಿಷಾಗಾಗಿ ‘ಬೆಂಕಿ ಬಂತೋ’ ಆಲ್ಬಂ ಸಾಂಗ್ ರಿಲೀಸ್

    ಬಿಗ್ ಬಾಸ್ ತನಿಷಾಗಾಗಿ ‘ಬೆಂಕಿ ಬಂತೋ’ ಆಲ್ಬಂ ಸಾಂಗ್ ರಿಲೀಸ್

    ಟೈಟಲ್ ನೋಡಿ ಕನ್ಫೂಸ್ ಆಗ್ಬೇಡಿ ‘ಬಿಗ್ ಬಾಸ್ ಸೀಸನ್ 10’ರಲ್ಲಿ (Bigg Boss Kannada 10) ಅದೆಲ್ಲಿ ಬೆಂಕಿ ಬಂತು ಅಂತಾ ಯೋಚನೆ ಮಾಡಬೇಡಿ. ನಾವು ಹೇಳ್ತಿರೋದು ಬೆಂಕಿಯಂತೆ ಫರ್ಪೆಮೆನ್ಸ್ ಕೊಡ್ತಿರುವ ಬೋಲ್ಡ್ ಬ್ಯೂಟಿ ತನಿಷಾ ಕುಪ್ಪಂಡ (Tanisha Kuppanda) ಕನ್ನಡ ಬಿಗ್ ಬಾಸ್ ಸೀಸನ್ 10ರ ಪ್ರಬಲ ಸ್ಪರ್ಧಿಯಾಗಿದ್ದಾರೆ. ಇದೀಗ ಸಖತ್ ಫೈಟ್ ಕೊಡ್ತಿರುವ ಪೆಂಟಗನ್ ಸುಂದರಿ ಬಗ್ಗೆ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ:ಗಂಭೀರ ಸ್ಥಿತಿಯಲ್ಲಿರೋ ಗಾಯಾಳು ಅಭಿಮಾನಿಗಳ ಆರೋಗ್ಯ ವಿಚಾರಿಸಿದ ಯಶ್

    ‘ಬೆಂಕಿ ಬಂತೋ’ ಎಂಬ ಹಾಡಿಗೆ ಶಮಂತ್ ನಾಗಾರಾಜ್ ಕ್ಯಾಚಿ ಮ್ಯಾಚಿ ಪದ ಸೇರಿಸಿ ಸಾಹಿತ್ಯ ಬರೆದಿದ್ದಾರೆ. ಶಶಾಂಕ್ ಶೇಷಗಿರಿ ಈ ಜಬರ್ದಸ್ತ್ ಗಾನಬಜಾನಕ್ಕೆ ಧ್ವನಿಯಾಗುವುದರ ಜೊತೆಗೆ ಮ್ಯೂಸಿಕ್ ಕಿಕ್ ಕೊಟ್ಟಿದ್ದಾರೆ. ತನಿಷಾ ಕುಪ್ಪಂಡ ಎನರ್ಜಿ, ಸ್ಟೈಲ್, ಮಾತಿಗೆ ನಿಂತ್ರೆ ಎದುರಾಳಿಗೆ ಟಕ್ಕರ್ ಕೊಡುವ ಆಕೆಯ ಗುಣವನ್ನು ವರ್ಣಿಸುವ ಹಾಡು ಇದಾಗಿದೆ. ಈಕೆಯೇ ಬಿಗ್ ಬಾಸ್ ಬೆಂಕಿ ಚೆಂಡು ಎಂಬುದೇ ಹಾಡಿನ ಹೈಲೆಟ್ಸ್. ಈ ಮಸ್ತ್ ಸಿಂಗಿಂಗ್ ಸೆನ್ಸೇಷನ್ ನೋಡಿದವರೆಲ್ಲ ತನಿಷಾ ಗೆಲ್ಲಬೇಕು ಅಂತಾ ಕಮೆಂಟ್ ಹಾಕುತ್ತಿದ್ದಾರೆ.

    ‘ಮಂಗಳಗೌರಿ’ ಸೀರಿಯಲ್‌ನಲ್ಲಿ ಖಳನಾಯಕಿಯಾಗಿ ಕಾಣಿಸಿಕೊಂಡಿದ್ದ ತನಿಷಾ ಕುಪ್ಪಂಡ, ಆ ನಂತ್ರ ‘ಪೆಂಟಗನ್’ ಸಿನಿಮಾ ಮೂಲಕ ಬೆಳ್ಳಿಪರದೆಗೂ ಎಂಟ್ರಿ ಕೊಟ್ಟರು. ನಂತರ ಕೋಮಲ್ ಅವರ ‘ಉಂಡೆನಾಮ’ ಚಿತ್ರದಲ್ಲೂ ಕಾಣಿಸಿಕೊಂಡರು ತನಿಷಾ ಇನ್ನು ಅನೇಕ ಹೊಸ ಹೊಸ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿರುವ ಈ ಬೋಲ್ಡ್ ಬ್ಯೂಟಿ ಸದ್ಯ ಬಿಗ್ ಬಾಸ್ ಸೀಸನ್ 10ರಲ್ಲಿ ಪ್ರಬಲ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ದೊಡ್ಮನೆ ಆಟದಲ್ಲಿ ಗೆದ್ದು ಬಾ ತನಿಷಾ ಅಂತಾ ಆಕೆಯ ಫ್ಯಾನ್ಸ್ ಬೆಂಬಲ ನೀಡುತ್ತಿದ್ದಾರೆ.

  • ಕಾರ್ತಿಕ್ ವಿರುದ್ಧ ಕಿಡಿಕಾರಿದ ಬೆಂಕಿ ತನಿಷಾ

    ಕಾರ್ತಿಕ್ ವಿರುದ್ಧ ಕಿಡಿಕಾರಿದ ಬೆಂಕಿ ತನಿಷಾ

    ಬಿಗ್‌ಬಾಸ್ ಮನೆಯಲ್ಲಿ (Bigg Boss House) ದಿನದಿಂದ ದಿನಕ್ಕೆ ಸ್ಪರ್ಧೆ ಕಠಿಣವಾಗುತ್ತಿದೆ. ಟಾಸ್ಕ್‌ಗಳ ಸ್ವರೂಪ ಬದಲಾಗುತ್ತಿದೆ. ಹಾಗೆಯೇ ಸ್ಪರ್ಧಿಗಳ ಮನಸ್ಥಿತಿ ಮನೆಯ ಪರಿಸ್ಥಿತಿಯೂ ಬದಲಾಗುತ್ತಿದೆ. ಈ ವಾರದ ಅಂತ್ಯ ಸಮೀಪಿಸುತ್ತಿದ್ದಂತೆಯೇ ಮತ್ತೆ ಕ್ಯಾಪ್ಟನ್ಸಿಗಾಗಿ ಜಿದ್ದಾಜಿದ್ದಿ ಶುರುವಾಗಿದೆ. ಕ್ಯಾಪ್ಟನ್ ಆಗಿರೋ ತನಿಷಾ ವಿರುದ್ಧ ತುಕಾಲಿ ಸಂತೂ, ಕಾರ್ತಿಕ್ ತಿರುಗಿ ಬಿದ್ದಿದ್ದಾರೆ.

    ಬಿಗ್‌ ಬಾಸ್ ಮನೆಯ ಸದಸ್ಯರಲ್ಲಿ ಯಾರು ಕ್ಯಾಪ್ಟನ್ಸಿ ಓಟದಿಂದ ಹೊರಗೆ ಇರಬೇಕು ಎಂದು ಮನೆಯ ಸದಸ್ಯರು ನಿರ್ಧರಿಸಬೇಕು ಎಂದು ಹೇಳಿದ್ದಾರೆ. ನಮ್ರತಾ ಅವರು, ವರ್ತೂರು ಸಂತೋಷ್ ಅವರನ್ನು ನಾಮಿನೇಟ್ ಮಾಡಿದರು. ತನಿಷಾ, ಮೈಕಲ್ ಹೆಸರು ಹೇಳಿದರು. ಮೈಕಲ್ ಮತ್ತು ತುಕಾಲಿ ಸಂತೋಷ್ ಅವರು ತನಿಷಾ ಕುಪ್ಪಂಡ ಅವರ ಹೆಸರು ಹೇಳಿದರು. ಇದನ್ನೂ ಓದಿ:ನನ್ನ ಪತ್ನಿ ನಿಮ್ಮಂತೆಯೇ ಇರಬೇಕು ಎಂದ ಅಭಿಮಾನಿಗೆ ರಶ್ಮಿಕಾ ಏನಂದ್ರು ಗೊತ್ತಾ?

    ಅದಕ್ಕಿಂತ ಹೆಚ್ಚಾಗಿ, ಕಾರ್ತೀಕ್ (Karthik Mahesh) ಅವರು ಕ್ಯಾಪ್ಟನ್ ಆಗಿ ಕೆಲವು ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಎಡವಿದರು ಎಂದು ತನಿಷಾ (Tanisha Kuppanda) ಬಗ್ಗೆ ಹೇಳಿದ್ದಾರೆ. ಇದನ್ನು ಕೇಳಿ ತನಿಷಾ ಕೂಡ ಗರಂ ಆಗಿದ್ದಾರೆ. ಒಟ್ಟಾರೆ ಕ್ಯಾಪ್ಟನ್ಸಿ ಓಟದಿಂದ ಈ ವಾರ ಹೊರಗೆ ಬೀಳುವವರು ಯಾರು? ಯಾರು ಉಳಿದುಕೊಳ್ಳುತ್ತಾರೆ? ಕೊನೆಗೆ ಯಾರು ಕ್ಯಾಪ್ಟನ್ ಆಗುತ್ತಾರೆ ಎಂಬುದನ್ನು ಕಾದುನೋಡಬೇಕಷ್ಟೆ.

    100 ದಿನಗಳಿದ್ದ ಆಟ ಈಗ 2 ವಾರಗಳ ಕಾಲ ಮುಂದಕ್ಕೆ ಹೋಗಿದೆ. ಸಿರಿ (Siri) ಎಲಿಮಿನೇಷನ್ ನಂತರ 9 ಜನ ಸ್ಪರ್ಧಿಗಳು ಮನೆಯಲ್ಲಿ ಉಳಿದುಕೊಂಡಿದ್ದಾರೆ. ಯಾರಿಗೆ ಈ ವಾರ ಆಟ ಅಂತ್ಯವಾಗಲಿದೆ ಎಂದು ಕಾಯಬೇಕಿದೆ.

  • ಕ್ಯಾಪ್ಟನ್‌ ಮಾತು ಕೇಳದ ಮೈಕಲ್‌- ವೀಕೆಂಡ್‌ನಲ್ಲಿದ್ಯಾ ಮಾರಿಹಬ್ಬ?

    ಕ್ಯಾಪ್ಟನ್‌ ಮಾತು ಕೇಳದ ಮೈಕಲ್‌- ವೀಕೆಂಡ್‌ನಲ್ಲಿದ್ಯಾ ಮಾರಿಹಬ್ಬ?

    ಬಿಗ್ ಬಾಸ್ ಮನೆಗೆ (Bigg Boss Kannada 10)  ಕಾಲಿಟ್ಟಾಗ ಮೈಕಲ್ ಅಜಯ್‌ಗೆ (Michael Ajay) ಸರಿಯಾಗಿ ಕನ್ನಡ ಬರುತ್ತಿರಲಿಲ್ಲ. ದೊಡ್ಮನೆಗೆ ಬಂದ ಮೇಲೆಯೇ ಮೈಕಲ್ ಕನ್ನಡ ಕಲಿತು ಕನ್ನಡಿಗರ ಮೆಚ್ಚುಗೆಗೆ ಪಾತ್ರರಾದರು. ಮೈಕಲ್ ನಡೆಗೆ ಕನ್ನಡದ ಮಣ್ಣಿನ ಮಗ ಎಂದೇ ಹೈಲೆಟ್‌ ಆದರು. ಆದರೆ ಈಗ ಮೈಕಲ್ ವರ್ತನೆ ಬದಲಾಗಿದೆ. ಎಲ್ಲದ್ದಕ್ಕೂ ಡೋಂಟ್ ಕೇರ್ ಅನ್ನುವ ಗುಣ ಅವರದ್ದಾಗಿದೆ. ಬಿಗ್ ಬಾಸ್ ರೂಲ್ಸ್ ವಿರುದ್ಧ ಮೈಕಲ್ ನಡೆದುಕೊಂಡಿದ್ದಾರೆ. ಪ್ರಶ್ನಿಸಿದ ಕ್ಯಾಪ್ಟನ್ ತನಿಷಾ (Tanisha Kuppanda) ಜೊತೆ ವಾಗ್ವಾದ ಮಾಡಿದ್ದಾರೆ. ಇದನ್ನೂ ಓದಿ:ನಿಮ್ಮ ಬದುಕಲ್ಲಿ ಹೊಸ ವ್ಯಕ್ತಿಯ ಆಗಮನ- ನಮ್ರತಾಗೆ ಗುರೂಜಿ ಭವಿಷ್ಯ

    ಬಿಗ್ ಬಾಸ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ಮೈಕಲ್- ವಿನಯ್‌ಗೆ ಶಿಕ್ಷೆ ನೀಡಲು ಮುಂದಾ ತನಿಷಾ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ಹೊರಗೆ ಕುಳಿತು ವಿನಯ್ ಗೌಡ- ಮೈಕಲ್ ನಿದ್ರಿಸುತ್ತಿದ್ದರು. ಈ ಕಾರಣಕ್ಕೆ ಬಿಗ್ ಬಾಸ್ ನಾಯಿ ಬೊಗಳುವ ಸೌಂಡ್ ಹಾಕಿದರು. ಈ ವಾರದ ಕ್ಯಾಪ್ಟನ್ ತನಿಷಾ ಅವರು ಶಿಕ್ಷೆ ನೀಡಲು ಬಂದರು. ನಿದ್ದೆ ಮಾಡಿದ್ದಕ್ಕೆ ಮೂರು ಬಾರಿ ಸ್ವಿಮಿಂಗ್ ಪೂಲ್‌ನಲ್ಲಿ ಮುಳುಗೆದ್ದು ಬನ್ನಿ ಎಂದರು. ಇದಕ್ಕೆ ಮೈಕಲ್ ಹಾಗೂ ವಿನಯ್ ಮಾಡಲ್ಲ ಹೋಗು ಎಂದರು. ಕ್ಯಾಪ್ಟನ್ ಆದಾಗ ನೇರವಾಗಿ ನಾಮಿನೇಟ್ ಮಾಡುವ ಅವಕಾಶ ಸಿಗುತ್ತದೆ. ಆಗ ನನ್ನ ನಾಮಿನೇಟ್ ಮಾಡಿ ಎಂದು ದುರಹಂಕಾರ ಮೈಕಲ್ ತೋರಿದರು. ಇನ್ನೊಂದು ಸ್ವಲ್ಪ ಹೊತ್ತು ಮಲಗಿ ಮನೆಯ ಪರಿಸ್ಥಿತಿಯನ್ನು ಹಾಳು ಮಾಡೋಣ ಎಂದು ದರ್ಪದಿಂದ ಹೇಳಿಕೊಂಡರು ಮೈಕಲ್.

    ಅಡುಗೆ ಮಾಡಲು ಪಾತ್ರೆಗಳನ್ನು ತೊಳೆದಿರಲಿಲ್ಲ. ಇದನ್ನು ಮಾಡುವ ಕೆಲಸ ಮೈಕಲ್ ಅವರದ್ದಾಗಿತ್ತು. ಆದರೆ, ತನಿಷಾ ಅವರು ಪದೇ ಪದೇ ಬಂದು ಮನವಿ ಮಾಡಿಕೊಂಡರೂ ಪಾತ್ರೆ ತೊಳೆಯಲು ಅವರು ಮುಂದಾಗಲೇ ಇಲ್ಲ. ಕೊನೆಗೂ ಅವರು ಸಿಂಕ್ ಬಳಿ ಬಂದು ನಿಧಾನಕ್ಕೆ ಪಾತ್ರೆ ತೊಳೆಯಲು ಆರಂಭಿಸಿದರು. ನನ್ನಿಷ್ಟ ಬಂದಾಗ ಮಾಡ್ತೀನಿ. ಇದೆಲ್ಲ ಮಾಡಬೇಕು ಎಂದು ಎಲ್ಲಿ ಬರೆದಿದೆ. ನನಗೆ ಮಾಡೋಕೆ ಇಷ್ಟವೇ ಇಲ್ಲ ಎಂದರು ಮೈಕಲ್. ಮಲಗಿದ್ದಕ್ಕೆ ನಿಮಗೆ ಶಿಕ್ಷೆ ನೀಡಿದೆ. ಅದನ್ನು ಮಾಡದೇ ನೀವು ದುರಹಂಕಾರ ತೋರಿಸಿದಿರಿ. ಅದಕ್ಕೆ ನಾನೇನು ಮಾಡೋಕೆ ಆಗಲ್ಲ. ನೀವು ನಿದ್ದೆ ಮಾಡ್ತಾ ಇದ್ರೆ ಇನ್ನಷ್ಟು ನಿದ್ದೆ ಮಾಡಿ ಎಂದು ಹೇಳಬೇಕಾ ಎಂದು ತನಿಷಾ ಪ್ರಶ್ನಿಸಿದರು.

    ಅದಕ್ಕೆ ಮೈಕಲ್ ತಿರುಗಿ ಮಾತನಾಡಿದ್ದರು. ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಮೂರು ಬಾಲ್ ಹಾಕಿದೀಯಾ ಅಷ್ಟೇ. ನೀನು ದೊಡ್ಡ ಸಾಧನೆ ಮಾಡಿಲ್ಲ. ನಿನ್ನ ಧ್ವನಿಯನ್ನು ಕೇಳಿ ಮೊದಲಿನಿಂದಲೂ ಇರಿಟೇಷನ್ ಆಗುತ್ತಿದೆ ಎಂದು ಮೈಕಲ್ ಸಿಟ್ಟಲ್ಲೇ ಹೇಳಿದರು.

    ಈ ಹಿಂದೆ ವಾರಾಂತ್ಯದ ಮಾತುಕತೆಯಲ್ಲಿ ಕ್ಯಾಪ್ಟನ್‌ಗೆ ಗೌರವ ನೀಡಬೇಕು ಎಂದು ಸುದೀಪ್ (Sudeep) ಈ ಮೊದಲೇ ಹೇಳಿದ್ದರು. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಸೂಚಿಸಿದ್ದರು. ಆದರೆ, ಮೈಕಲ್ ಹಾಗೂ ವಿನಯ್ ಇಬ್ಬರೂ ಇದನ್ನು ಫಾಲೋ ಮಾಡಿಲ್ಲ. ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಅವರು ಇಬ್ಬರಿಗೂ ಖಡಕ್ ಆಗಿ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ. ಎಲ್ಲದ್ದಕ್ಕೂ ವಾರಾಂತ್ಯದಲ್ಲಿ ಉತ್ತರ ಸಿಗಲಿದೆ.

  • Bigg Boss: ಜೋಡಿಯಾಗ್ತಾರೆ ಎಂದು ಊಹಿಸಿದ್ದ ಫ್ಯಾನ್ಸ್‌ಗೆ ತನಿಷಾ- ವರ್ತೂರು ಶಾಕ್

    Bigg Boss: ಜೋಡಿಯಾಗ್ತಾರೆ ಎಂದು ಊಹಿಸಿದ್ದ ಫ್ಯಾನ್ಸ್‌ಗೆ ತನಿಷಾ- ವರ್ತೂರು ಶಾಕ್

    ದೊಡ್ಮನೆ ಆಟ (Bigg Boss Kannada 10) ಮುಗಿಯುವ ಮುನ್ನ ಜೋಡಿಯಾಗುತ್ತಾರೆ ಎಂದು ಭಾವಿಸಿದವರಿಗೆ ತನಿಷಾ ಮತ್ತು ವರ್ತೂರು ಸಂತೋಷ್ (Varthur Santhosh) ಶಾಕ್ ಕೊಟ್ಟಿದ್ದಾರೆ. ಲವ್ ಬರ್ಡ್ಸ್ ಆಗುತ್ತಾರೆ ಎಂದುಕೊಂಡಿದ್ದ ಫ್ಯಾನ್ಸ್‌ಗೆ ನಿರಾಸೆ ಮೂಡಿಸಿದ್ದಾರೆ. ಜೋಡಿಯಾಗುವುದು ಇರಲಿ, ಫ್ರೆಂಡ್‌ಶಿಪ್‌ ಮಾಡಿಕೊಳ್ಳುವುದಕ್ಕೂ ಹಿಂದೆ ಮುಂದೆ ನೋಡ್ತಿದ್ದಾರೆ ತನಿಷಾ- ವರ್ತೂರು. ಇಬ್ಬರೂ ಒಬ್ಬರ ಮೇಲೆ ಒಬ್ಬರು ಮುನಿಸಿಕೊಂಡು ದೂರ ದೂರ ಆಗಿದ್ದಾರೆ.

    ಈ ವಾರ ಲೋಕದೊಳಗೆ ಗಂಧರ್ವರನ್ನು ರಾಕ್ಷಸರು ಸಿಕ್ಕಾಪಟ್ಟೆ ಗೋಳು ಹೊಯ್ದುಕೊಳ್ಳುತ್ತಿದ್ದಾರೆ. ತಮಗೆ ಹೇಗೆ ಬೇಕೋ ಹಾಗೇ ಕೆಲಸಗಳನ್ನು ಮಾಡಿಸಿಕೊಳ್ಳುವುದಲ್ಲದೆ, ತಮ್ಮಲ್ಲಿರುವ ಕೋಪವನ್ನೆಲ್ಲಾ ತೀರಿಸಿಕೊಳ್ಳುತ್ತಿದ್ದಾರೆ. ಇವತ್ತು ರೂಲ್ಸ್ ಬ್ರೇಕ್ ಹಾಗೂ ವೈಯಕ್ತಿಕ ನಿಂದನೆಯೇ ಜೋರಾಗಿದೆ. ಬಿಗ್ ಬಾಸ್ ಮನೆಯಲ್ಲಿ ಇದೆ ಮೊದಲ ಬಾರಿಗೆ ಸಾಕಷ್ಟು ಬಾರಿಗೆ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಬಿಗ್ ಬಾಸ್ ಕೂಡ ಇದನ್ನು ಹಲವು ಬಾರಿ ಎಚ್ಚರಿಸಿದ್ದಾರೆ. ಇದನ್ನೂ ಓದಿ:‘ಮೂರನೇ ಕೃಷ್ಣಪ್ಪ’ ಸಿನಿಮಾದ ಮೆಲೋಡಿ ಸಾಂಗ್ ರಿಲೀಸ್

    ಸಂಗೀತಾ (Sangeetha Sringeri) ಮತ್ತು ತಂಡದವರಿಗೆ ರಾಕ್ಷಸರು ಎಂಬ ಪಟ್ಟ ನೀಡಲಾಗಿದೆ. ರಾಕ್ಷಸರ ವೇಷ ತೊಟ್ಟು ಮನೆಯೊಳಗೆಲ್ಲಾ ರಾಕ್ಷಸರ ರೀತಿಯೇ ವರ್ತಿಸುತ್ತಿದ್ದಾರೆ. ಆದರೆ, ಟಾಸ್ಕ್ ವಿಚಾರದಲ್ಲಿ ವರ್ತೂರು ಸಂತೋಷ್ ಹಾಗೂ ಸಂಗೀತಾ ನಡುವಲ್ಲಿ ಎದ್ದ ಗಲಾಟೆ ದೊಡ್ಡಮಟ್ಟದಲ್ಲಿ ಆಗುತ್ತಿದೆ. ನಿಮ್ಮ ಕ್ಯಾರೆಕ್ಟರ್ ಇರುವುದು ಅದೇ ರೀತಿ ಎಂದಿದ್ದೇ ತಡ, ವಾದ ಜೋರಾಗಿಯೇ ನಡೆದಿದೆ. ಅವಳಾಗಿಯೇ ಅವಳು ಹೇಳಿದಾಗ ಅವಳ ಕ್ಯಾರೆಕ್ಟರ್ ಡ್ಯಾಮೇಜ್ ಆಗಲ್ಲ. ನಾನು ಹೇಳಿದ ಕೂಡಲೇ ಅವರು ಕೋಪಗೊಳ್ತಾರೆ ಎಂದು ವರ್ತೂರು ಸಂತೋಷ್ ಕೋಪ ಹೊರಹಾಕಿದ್ದಾರೆ. ಬಳಿಕ ನಮ್ರತಾ & ತಂಡದವರ ಬಳಿ ಕುಳಿತು ಇದನ್ನೇ ಚರ್ಚೆ ಮಾಡಿದ್ದಾರೆ.

    ಸಂಗೀತಾ ಜೊತೆಗಿನ ಜಗಳದಲ್ಲಿ ತನಿಷಾ (Tanisha Kuppanda) ಮಧ್ಯೆ ಪ್ರವೇಶಿಸಿದ್ದು, ವರ್ತೂರು ಸಂತೋಷ್‌ಗೆ ಸಿಟ್ಟು ತರಿಸಿದೆ. ಹೌದು, ನೀವು ಸಂಗೀತಾ ಕ್ಯಾರೆಕ್ಟರ್ ಬಗ್ಗೆ ಮಾತನಾಡಿದ್ರಿ ಎಂದು ತನಿಷಾ ಧ್ವನಿಯೆತ್ತಿರೋದು ಸಂತೋಷ್ ಕೆಂಗಣ್ಣಿಗೆ ಗುರಿಯಾಗಿದೆ. ಬೆಂಕಿ ತನಿಷಾ ಹೀಗಾ ಛೇ, ತನಿಚಾ ಕಚಡಾ ಎಂದು ಸಂತೋಷ್ ಗುಡುಗಿದ್ದಾರೆ.

    ಕಾರ್ತಿಕ್ ಮತ್ತು ತನಿಷಾ ಜೊತೆ ಜಗಳ ಮಾಡಿಕೊಂಡು ಬಂದಿದ್ದ ಸಂಗೀತಾ, ತನಿಷಾ ಹಾಗೇ, ಕಾರ್ತಿಕ್ ಹೀಗೆ ಎಂದು ನಮ್ಮ ಬಳಿಯೇ ಹೇಳಿದ್ದರು. ನೀವೂ ಈಗ ಅವರನ್ನು ನೋಡುತ್ತಿದ್ದೀರಿ. ಆದರೆ, ಅವರನ್ನು ನಾವೂ ಮೊದಲಿನಿಂದಲೂ ನೋಡಿದ್ದೀವಿ ಎಂದರು ನಮ್ರತಾ. ಬಳಿಕ, ತನಿಷಾ ಮಾತಿನ ದಾಟಿ ಬಗ್ಗೆ ಮಾತು ಕತೆಯಾಯಿತು. ಆಗ ವರ್ತೂರು ಸಂತೋಷ್ ನಿಜಕ್ಕೂ ತನಿಷಾ ಕಚಡಾನೇ ಎಂದಿದ್ದಾರೆ. ಅವರು ಹೀಗೆ ಅಂತ ಗೊತ್ತಿರಲಿಲ್ಲ ಎಂದು ತನಿಷಾ ವಿರುದ್ಧ ವರ್ತೂರು ಸಂತೋಷ್ ಸಿಡಿದೆದಿದ್ದಾರೆ.