ಬಿಗ್ ಬಾಸ್ ಬೆಡಗಿ ತನಿಷಾ ಕುಪ್ಪಂಡ (Tanisha Kuppanda) ಅವರು ದೊಡ್ಮನೆ ಆಟ ಮುಗಿದ ಮೇಲೆ ಭಾರೀ ಬೇಡಿಕೆ ಇದೆ. ಸಿನಿಮಾ, ಬ್ಯುಸಿನೆಸ್ ಅಂತ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಪೊಲೀಸ್ ಅವತಾರದಲ್ಲಿ ತನಿಷಾ ಕುಪ್ಪಂಡ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ.
ತನಿಷಾ ಕುಪ್ಪಂಡ ಖಡಕ್ ಮಾತುಗಳ ಮೂಲಕ ಗಮನ ಸೆಳೆದ ನಟಿ. ಬಿಗ್ ಬಾಸ್ ಮನೆಯ ಬೆಂಕಿ ಎಂದೇ ಹೈಲೆಟ್ ಆಗಿರೋ ತನಿಷಾ ಕಾಕಿ ತೊಟ್ಟು ದುಷ್ಟರಿಗೆ ಕ್ಲ್ಯಾಸ್ ತೆಗೆದುಕೊಳ್ಳೋಕೆ ರೆಡಿಯಾಗಿದ್ದಾರೆ. ಇದನ್ನೂ ಓದಿ:‘ಸೀರೆ’ ಹಿಂದೆ ಬಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ
ಕನ್ನಡತಿ ಹೀರೋ ಕಿರಣ್ ರಾಜ್ (Kiran Raj) ನಟನೆಯ ‘ಶೇರ್’ (Sherr) ಸಿನಿಮಾದಲ್ಲಿ ತನಿಷಾ ಕುಪ್ಪಂಡ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಬಗ್ಗೆ ನಟಿಯೇ ಸ್ವತಃ ಅಪ್‌ಡೇಟ್ ನೀಡಿದ್ದಾರೆ. ನಟಿಯ ಖದರ್ ನೋಡಿ ಫ್ಯಾನ್ಸ್ ವಾವ್ ಎಂದಿದ್ದಾರೆ. ನಿಮ್ಮ ಗೆಟಪ್ ಬೆಂಕಿ ಎಂದು ತನಿಷಾಗೆ ಮೆಚ್ಚುಗೆ ಸೂಚಿಸಿದ್ದಾರೆ.
ನಿಮ್ಮ ಶತ್ರುವಿಗಾಗಿ ನೀವು ಹೊತ್ತಿಸುವ ಬೆಂಕಿಯು ಅವರಿಗಿಂತ ಹೆಚ್ಚಾಗಿ ನಿಮ್ಮನ್ನು ಸುಡುತ್ತದೆ ಎಂದು ನಟಿ ಅಡಿಬರಹ ನೀಡಿದ್ದಾರೆ. ಪೊಲೀಸ್ ಅವತಾರದಲ್ಲಿರುವ ವಿವಿಧ ಭಂಗಿಯ ಫೋಟೋ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಮತ್ತೆ ಸೆಕ್ಸಿಯಾಗಿ ಡಾನ್ಸ್ ಮಾಡಲಾರೆ: ನಟಿ ಸಮಂತಾ ಘೋಷಣೆ
ಅಂದಹಾಗೆ ತನಿಷಾ, ಕಾರ್ತಿಕ್ ಜೊತೆ ಹೊಸ ಸಿನಿಮಾ ಮತ್ತು ವರ್ತೂರು ಸಂತೋಷ್ ಚಿತ್ರಕ್ಕೆ ನಟಿ ನಿರ್ಮಾಣ ಮಾಡೋದಾಗಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಿನಿಮಾ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ.
ಬಿಗ್ ಬಾಸ್ (Bigg Boss) ಮನೆಯಲ್ಲಿ ವರ್ತೂರು ಸಂತೋಷ್ (Varthuru Santhosh) ಮತ್ತು ಬೆಂಕಿ ತನಿಷಾ ಕುಪ್ಪಂಡ (Tanisha Kuppanda) ಮಧ್ಯ ಏನೋ ನೆಡೀತಾ ಇದೆ ಎನ್ನುವುದು ಪಕ್ಕಾ ಆಗಿತ್ತು. ಆದರೆ, ಎಲ್ಲಿಯೂ ಅವರು ಅನುಮಾನ ಬರುವ ರೀತಿಯಲ್ಲಿ ನಡೆದುಕೊಳ್ಳಲಿಲ್ಲ. ಮನೆಯಿಂದ ಆಚೆ ಬಂದ ಮೇಲೂ ಅವರು ಹಾಗಿಲ್ಲ. ಆದರೆ, ಅವರ ನಡವಳಿಕೆ ಮಾತ್ರ ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿವೆ. ಹಾಗಾಗಿ ವರ್ತೂರು ಹೆಸರು ಕೇಳಿ ಬಂದಾಗೆಲ್ಲ ತನಿಷಾ ಹೆಸರು ತಳುಕು ಹಾಕಿಕೊಳ್ಳುತ್ತೆ.
ಇಂತಹ ಫ್ರೆಂಡ್ ಶಿಪ್ ಬಗ್ಗೆ ಮತ್ತೆ ನೆನಪಿಸಿದ್ದಾರೆ ನಟಿ ತನಿಷಾ, ಇಂದು ವರ್ತೂರು ಸಂತೋಷ್ ಅವರ ಹುಟ್ಟು ಹಬ್ಬ (Birthday). ಅವರ ಹುಟ್ಟು ಹಬ್ಬಕ್ಕಾಗಿ ಸ್ಪೆಷಲ್ ಆಗಿಯೇ ತನಿಷಾ ವಿಶ್ ಮಾಡಿದ್ದಾರೆ. ನನ್ನ ಅಭಿಮಾನಿಗಳಲ್ಲಿ ನಾನೂ ಒಬ್ಬಳು. ಆ ಸಾಲಿನಲ್ಲಿ ನಿಂತು ದೂರದಿಂದ ನಿಮ್ಮ ಹುಟ್ಟು ಹಬ್ಬಕ್ಕೆ ಜೋರಾಗಿ ಕೂಗಿ ವಿಶ್ ಮಾಡುವ ಆಸೆ ಎಂಬುದನ್ನು ಬರೆದುಕೊಂಡಿದ್ದಾರೆ. ವರ್ತೂರು ಜೊತೆಗಿರೋ ಫೋಟೋ ಹಂಚಿಕೊಂಡು, ಹಾರ್ಟ್ ಸಿಂಬಲ್ ಕೂಡ ಹಾಕಿದ್ದಾರೆ.
ನಿನ್ನೆ ರಾತ್ರಿಯಿಂದಲೇ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ. ಸಂತೋಷ್ ಮನೆಮುಂದೆ ಮಧ್ಯೆ ರಾತ್ರಿಯಿಂದಲೇ ಅಭಿಮಾನಿಗಳು ಜಮಾಯಿಸಿದ್ದರು. ನೆಚ್ಚಿನ ಸ್ಪರ್ಧಿಯ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿದರು.
ಸಂತೋಷ್ ಹುಟ್ಟು ಹಬ್ಬಕ್ಕೆಂದು ರಾಜ್ಯದ ನಾನಾ ಭಾಗಗಳಿಂದ ಅಭಿಮಾನಿಗಳು ಬಂದಿದ್ದು, ಅವರಿಗಾಗಿ ಊಟದ ವ್ಯವಸ್ಥೆಯನ್ನು ಸಂತೋಷ್ ಮಾಡಿದ್ದರು. ನಾಲ್ಕು ಬಗೆಯ ಆಹಾರವನ್ನು ನಾಲ್ಕು ಸಾವಿರ ಜನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಹಾರ, ತುರಾಯಿ ಹಿಡಿದುಕೊಂಡು ಬಂದಿದ್ದ ಅಭಿಮಾನಿಗಳು ಭರ್ಜರಿ ಊಟ ಸವಿದರು.
ಬಿಗ್ ಬಾಸ್ ಸ್ಪರ್ಧಿಗಳು ಕೂಡ ವರ್ತೂರು ಸಂತೋಷ್ ಅವರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಅನೇಕರು ಕರೆ ಮಾಡಿ ವಿಶ್ ಮಾಡಿದ್ದರೆ, ಇನ್ನೂ ಕೆಲವರು ಸೋಷಿಯಲ್ ಮೀಡಿಯಾ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ. ಕೆಲವರು ಇಂದು ನೇರವಾಗಿ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
‘ಬಿಗ್ ಬಾಸ್’ (Bigg Boss Kannada 10) ಬೆಡಗಿ ತನಿಷಾ ಕುಪ್ಪಂಡ (Tanisha Kuppanda) ದೊಡ್ಮನೆ ಆಟ ಮುಗಿದ ಮೇಲೆ ಸಖತ್ ಬ್ಯುಸಿಯಾಗಿದ್ದಾರೆ. ನಟನೆ, ಉದ್ಯಮ ಕ್ಷೇತ್ರಗಳಲ್ಲಿ ತನಿಷಾ ಬ್ಯುಸಿಯಾಗಿದ್ದಾರೆ. ಸದ್ಯ ‘ನನ್ನಮ್ಮ ಸೂಪರ್ ಸ್ಟಾರ್-3’ರಲ್ಲಿ (Nanamma Super Star 3) ತನಿಷಾ ಭಾಗಿಯಾಗಿದ್ದಾರೆ. ಈ ಕುರಿತ ಫೋಟೋವನ್ನು ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ನಿಶ್ಚಿತಾರ್ಥ ಸಂಭ್ರಮದಲ್ಲಿ ಕೌಸ್ತುಭ ಮಣಿ
ಸಿನಿಮಾ ಕೆಲಸ, ಪೇಡ್ ಪ್ರಮೋಷನ್, ಹೋಟೆಲ್ ಬ್ಯುಸಿನೆಸ್ ಎಂದು ಸದಾ ಬ್ಯುಸಿಯಾಗಿರುವ ನಟಿ ಈಗ ‘ನನ್ನಮ್ಮ ಸೂಪರ್ ಸ್ಟಾರ್’-3 ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟಿದ್ದು, ಮಕ್ಕಳ ಜೊತೆ ಬೆರೆತು ಎಂಜಾಯ್ ಮಾಡಿದ್ದಾರೆ. ಅಷ್ಟೇ ಅಲ್ಲ, ಶೋನಲ್ಲಿ ತನಿಷಾ ಅಡುಗೆ ಕೂಡ ಮಾಡಿದ್ದಾರೆ. ಬಳಿಕ ಹಿರಿಯ ನಟಿ ತಾರಾ, ಮತ್ತು ಅನುಪ್ರಭಾಕರ್ ಜೊತೆ ಫೋಟೋ ಕ್ಕಿಕ್ಕಿಸಿಕೊಂಡು ನಟಿ ಸಂಭ್ರಮಿಸಿದ್ದಾರೆ.
ಇತ್ತೀಚೆಗೆ ತನಿಷಾ ಮತ್ತು ಕಾರ್ತಿಕ್ (Karthik Mahesh) ಸಿನಿಮಾ ಮಾಡುವ ಕುರಿತಂತೆ ಮಾತನಾಡಿದ್ದರು. ಈ ಕುರಿತು ಸ್ವತಃ ತನಿಷಾ ಅವರೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ನಮ್ಮದೇ ಬ್ಯಾನರ್‌ನಲ್ಲಿ ಪುಟ್ಟ ಪ್ರಾಜೆಕ್ಟ್‌ವೊಂದನ್ನು ಮಾಡಲು ಹೊರಟ್ಟಿದ್ದೇನೆ. ಕಾರ್ತಿಕ್ ಅವರ ಕಾಲ್‌ಶೀಟ್ ಕೇಳಿದ್ದೇವೆ ಎಂದಿದ್ದರು. ಇದನ್ನೂ ಓದಿ:ಟ್ಯಾಂಕರ್ ಮೂಲಕ ಉಚಿತ ನೀರು ಕೊಟ್ಟ ನಟ ಧ್ರುವ ಸರ್ಜಾ
ಸಿನಿಮಾ ಯಾವುದು, ಏನು ಎನ್ನುವುದರ ಕುರಿತು ತನಿಷಾ ಹೆಚ್ಚಿನ ಮಾಹಿತಿ ನೀಡಿಲ್ಲ. ಆದರೆ ಕಾರ್ತಿಕ್ ಅವರು ಬಿಡುವು ಮಾಡಿಕೊಂಡು, ಕಥೆ ಕೇಳಬೇಕು ಎಂದಷ್ಟೇ ತಿಳಿಸಿದ್ದರು. ಬಿಗ್ ಬಾಸ್ ಮುಗಿದ ನಂತರ ಬಹುತೇಕ ಸ್ಪರ್ಧಿಗಳು ಕಾರ್ಯಕ್ರಮಗಳಲ್ಲಿ ಬಿಜಿ ಆಗಿದ್ದಾರೆ. ಅದರಂತೆ ಕಾರ್ತಿಕ್ ಮತ್ತು ತನಿಷಾ ಒಟ್ಟಾಗಿಯೂ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ತಿದ್ದಾರೆ.
ಕಾರ್ತಿಕ್ ಈ ಸೀಸನ್‌ನಲ್ಲಿ ವಿನ್ ಆದರೆ, ತನಿಷಾ ಕುಪ್ಪಂಡ ಬೆಂಕಿ ಅಂತಾನೇ ಫೇಮಸ್ ಆದವರು. ಬಿಗ್ ಬಾಸ್ ಮನೆಯಲ್ಲಿದ್ದಾಗ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಜೋಡಿ ತೆರೆಯ ಮೇಲೆ ಬರಲಿ ಎನ್ನುವುದು ಹಲವರ ಆಸೆ ಕೂಡ ಇದೆ.
‘ಬಿಗ್ ಬಾಸ್ ಸೀಸನ್ 10’ರ (Bigg Boss kannada 10) ಬಳಿಕ ವರ್ತೂರು ಸಂತೋಷ್ (Varthur Santhosh) ಸಖತ್ ಬ್ಯುಸಿಯಾಗಿದ್ದಾರೆ. ಹಳ್ಳಿಕಾರ್ ರೇಸ್ ಸಿದ್ಧತೆಯಲ್ಲಿ ಸಂತೋಷ್ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ತನಿಷಾ (Tanisha Kuppanda) ಜೊತೆಗಿನ ಸಿನಿಮಾ ಮಾಡ್ತಾರಾ? ಮಾತುಕತೆ ಆಗಿದ್ಯಾ ಎಂಬುದರ ಬಗ್ಗೆ ಸಂತೋಷ್ ಪ್ರತಿಕ್ರಿಯೆ ನೀಡಿದ್ದಾರೆ.
ವರ್ತೂರು ಸಂತೋಷ್ ಜೊತೆ ಸಿನಿಮಾ ಮಾಡ್ತೀನಿ. ಆ ಚಿತ್ರವನ್ನು ನಾನೇ ನಿರ್ಮಾಣ ಮಾಡ್ತೀನಿ ಅಂತ ತನಿಷಾ ಕುಪ್ಪಂಡ ಮಾಧ್ಯಮಕ್ಕೆ ಕೆಲ ದಿನಗಳ ಹಿಂದೆ ಮಾತನಾಡಿದ್ದರು. ಹಾಗಾಗಿ ತನಿಷಾ ಜೊತೆ ಸಿನಿಮಾ ಮಾಡ್ತೀರಾ ಎಂದು ವರ್ತೂರುಗೆ ಸಂದರ್ಶನವೊಂದರಲ್ಲಿ ಪ್ರಶ್ನೆ ಕೇಳಲಾಯಿತು.
ಸಿನಿಮಾ ಕುರಿತು ತನಿಷಾ ನನ್ನ ಜೊತೆ ಮಾತನಾಡಿಲ್ಲ. ಆದರೆ ಅವರು ಕೇಳೋದು ಹೆಚ್ಚಾ, ನಾನು ಮಾಡೋದು ಹೆಚ್ಚಾ ಎಂದಿದ್ದಾರೆ. ಖಂಡಿತಾ ಅವರ ಜೊತೆ ಸಿನಿಮಾ ಮಾಡ್ತೀನಿ ಎಂದು ವರ್ತೂರು ಸಂತೋಷ್ ಮಾತನಾಡಿದ್ದಾರೆ. ಇದನ್ನೂ ಓದಿ:ಪ್ರಣಿತಾ ನಟನೆಯ ಮಲಯಾಳಂ ಚಿತ್ರದ ಲುಕ್ ರಿವೀಲ್
ಅಭಿಮಾನಿಗಳ ಆಸೆಯಂತೆ ‘ಹಳ್ಳಿಕಾರ್’ ಕುರಿತು ಸಿನಿಮಾ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರ ಬಗ್ಗೆ ನಿರ್ಮಾಪಕರ ಜೊತೆ ಮಾತುಕತೆ ಆಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡೋದಾಗಿ ತಿಳಿಸಿದ್ದಾರೆ.
ನಿಮಗೆ ಜನರ ಬೆಂಬಲವಿದೆ. ರಾಜಕೀಯಕ್ಕೆ ಬರುತ್ತೀರಾ ಎಂದು ಸಂತೋಷ್‌ಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ಪ್ರತಿಕ್ರಿಯಿಸಿ, ನಾನು ರಾಜಕೀಯಕ್ಕೆ ಬರಲ್ಲ. ಯಾವುದೇ ಪಕ್ಷ, ಸಂಘದ ಜೊತೆ ಗುರುತಿಸಿಕೊಳ್ಳಲು ಇಷ್ಟವಿಲ್ಲ. ಜನರ ಸೇವೆ ಮಾಡಲು ರಾಜಕೀಯವೇ ಬೇಕೆಂದು ಇಲ್ಲ. ದೇವರ ಆಶೀರ್ವಾದ ಇದ್ದರೆ ಸಾಕು ಎಂದು ವರ್ತೂರು ಸಂತೋಷ್ ಹೇಳಿದ್ದಾರೆ.
ಕನ್ನಡ ಬಿಗ್ ಬಾಸ್ (Big Boss) ಸೀಸನ್ 10 ವಿನ್ನರ್ ಕಾರ್ತಿಕ್ (Karthik), ದೊಡ್ಮನೆಯಿಂದ ಬಂದ ನಂತರ ಹಲವಾರು ಕಥೆಗಳನ್ನು ಕೇಳಿದ್ದಾರಂತೆ. ಸಾಕಷ್ಟು ಕಥೆಗಳನ್ನು ಕೇಳಿದ್ದೇನೆ. ಸ್ವಲ್ಪ ಸಮಯ ತಗೆದುಕೊಂಡು ಒಳ್ಳೆಯ ಕಥೆಯನ್ನು ಆಯ್ಕೆ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ. ಈ ನಡುವೆ ಬಿಗ್ ಬಾಸ್ ಸ್ಪರ್ಧಿ ತನಿಷಾ (Tanisha Kuppanda) ಬ್ಯಾನರ್ ನಲ್ಲಿ ಕಾರ್ತಿಕ್ ನಟಿಸಲಿದ್ದಾರಂತೆ.
ಎರಡು ದಿನಗಳ ಹಿಂದೆಯಷ್ಟೇ ತನಿಷಾ ಮತ್ತು ಕಾರ್ತಿಕ್ ಸಿನಿಮಾ (Cinema) ಮಾಡುವ ಕುರಿತಂತೆ ಮಾತನಾಡಿದ್ದಾರೆ. ಈ ಕುರಿತಂತೆ ಸ್ವತಃ ತನಿಷಾ ಅವರೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ನಮ್ಮದೇ ಬ್ಯಾನರ್ ನಲ್ಲಿ ಪುಟ್ಟ ಪ್ರಾಜೆಕ್ಟ್ ವೊಂದನ್ನು ಮಾಡಲು ಹೊರಟ್ಟಿದ್ದೇನೆ. ಕಾರ್ತಿಕ್ ಅವರ ಕಾಲ್ ಶೀಟ್ ಕೇಳಿದ್ದೇವೆ ಎಂದಿದ್ದಾರೆ.
ಸಿನಿಮಾ ಯಾವುದು, ಏನು ಎನ್ನುವುದರ ಕುರಿತು ತನಿಷಾ ಹೆಚ್ಚಿನ ಮಾಹಿತಿ ನೀಡಿಲ್ಲ. ಆದರೆ ಕಾರ್ತಿಕ್ ಅವರು ಬಿಡುವು ಮಾಡಿಕೊಂಡು, ಕಥೆ ಕೇಳಬೇಕು ಎಂದಷ್ಟೇ ಹೇಳಿದ್ದಾರೆ. ಬಿಗ್ ಬಾಸ್ ಮುಗಿದ ನಂತರ ಬಹುತೇಕ ಸ್ಪರ್ಧಿಗಳು ಕಾರ್ಯಕ್ರಮಗಳಲ್ಲಿ ಬಿಜಿ ಆಗಿದ್ದಾರೆ. ಅದರಂತೆ ಕಾರ್ತಿಕ್ ಮತ್ತು ತನಿಷಾ ಒಟ್ಟಾಗಿಯೂ ಕಾರ್ಯಕ್ರಮಗಳನ್ನು ಅಟೆಂಡ್ ಮಾಡುತ್ತಿದ್ದಾರೆ.
ಕಾರ್ತಿಕ್ ಈ ಸೀಸನ್ ನಲ್ಲಿ ವಿನ್ ಆದರೆ, ತನಿಷಾ ಕುಪ್ಪಂಡ ಬೆಂಕಿ ಅಂತಾನೇ ಫೇಮಸ್ ಆದವರು. ಬಿಗ್ ಬಾಸ್ ಮನೆಯಲ್ಲಿದ್ದಾಗ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಜೋಡಿ ತೆರೆಯ ಮೇಲೆ ಬರಲಿ ಎನ್ನುವುದು ಹಲವರ ಆಸೆ ಕೂಡ ಇದೆ.
ಬಿಗ್ ಬಾಸ್ (Bigg Boss) ಸ್ಪರ್ಧಿಗಳು ಮನೆಯಿಂದ ಆಚೆ ಬಂದ ಮೇಲೂ ತಮ್ಮ ನಡುವಿನ ಬಾಂಧವ್ಯವನ್ನು ಮತ್ತೆ ಮತ್ತೆ ಸಾಬೀತು ಪಡಿಸುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರುವಾಗ ಕಾರ್ತಿಕ್ ಅವರ ತಂಗಿಯ ಸೀಮಂತ ಮತ್ತು ಹೆರಿಗೆ ಕುರಿತಂತೆ ಮಾತುಕತೆಗಳು ನಡೆಯುತ್ತಲೇ ಇದ್ದವು. ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ಕಾರ್ತಿಕ್ (Karthik) ತಂಗಿಯ ಮಗುವಿಗೆ ತನಿಷಾ ಕುಪ್ಪಂಡ (Tanisha Kuppanda) ಸಣ್ಣದೊಂದು ಉಡುಗೊರೆ ನೀಡಿದ್ದರು. ಇದೀಗ ಮತ್ತೆ ಉಡುಗೊರೆ ಕೊಟ್ಟಿದ್ದಾರೆ.
ಕಾರ್ತಿಕ್ ಅವರ ತಂಗಿಯ ಮನೆಗೆ ಭೇಟಿ ನೀಡಿರುವ ತನಿಷಾ ಕುಪ್ಪಂಡ ಮಗುವಿಗೆ ಚಿನ್ನದ ಉಂಗುರುವನ್ನು ಉಡುಗೊರೆಯಾಗಿ (Gift) ಕೊಟ್ಟಿದ್ದಾರೆ. ಕೆಲ ಸಮಯ ಮಗುವಿನೊಂದಿಗೆ ಕಳೆದಿದ್ದಾರೆ. ಆ ಸ್ಮರಣೆಯನ್ನು ಅವರು ನೆನಪಿಸಿಕೊಂಡಿದ್ದಾರೆ. ಅಲ್ಲದೇ, ಕಾರ್ತಿಕ್ ಅವರ ಸಹಾಯವನ್ನೂ ಗುಣಗಾನ ಮಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಕಾರ್ತಿಕ್ ಅವರಿಗೆ ತನಿಷಾ ಮತ್ತು ತನಿಷಾಗೆ ಕಾರ್ತಿಕ್ ಸಪೋರ್ಟ್ ಮಾಡಿಕೊಂಡು ಆಟವಾಡಿದ್ದಾರೆ. ಟಾಸ್ಕ್ ವಿಚಾರದಲ್ಲಿ ಜಗಳ ಕೂಡ ಮಾಡಿದ್ದಾರೆ. ಅದು ಏನೇ ಇದ್ದರೂ, ಅದನ್ನು ಆಟಕ್ಕಷ್ಟೇ ಸೀಮಿತ ಮಾಡಿಕೊಂಡು ಸ್ನೇಹವನ್ನು ಹಾಗೆಯೇ ಮುಂದುವರೆಸಿಕೊಂಡು ಹೋಗಿದ್ದಾರೆ.
ಕಾರ್ತಿಕ್ ಅವರ ತಂಗಿಯ ಬಗ್ಗೆ ಸಾಕಷ್ಟು ಜನರು ಮಾತನಾಡಿದ್ದರು. ಸ್ವತಃ ಕಾರ್ತಿಕ್ ಕೂಡ ಬಿಗ್ ಬಾಸ್ ಮನೆಯಲ್ಲಿ ಈ ಕುರಿತಂತೆ ಹೇಳಿಕೊಂಡಿದ್ದರು. ಕೊನೆಗೂ ಟ್ರೋಫಿ ಎತ್ತಿಕೊಂಡು ತಂಗಿಯ ಮಗುವನ್ನು ನೋಡಲು ಹೋಗಿದ್ದು ಮಾತ್ರ ಸಂಭ್ರಮಿಸಬೇಕಾದ ಸಂಗತಿ.
ಬಿಗ್ ಬಾಸ್ (Big Boss) ಮನೆಯಿಂದ ಬಂದ ನಂತರವೂ ಬಿಗ್ ಬಾಸ್ ಕಂಟೆಸ್ಟೆಂಟ್ ಗಳ ಫ್ಯಾನ್ಸ್ ವಾರ್ ನಿಂತಿಲ್ಲ. ಇದರಿಂದಾಗಿ ಸಹಜವಾಗಿಯೇ ಕಾರ್ತಿಕ್ (Karthik) ಮತ್ತು ತನಿಷಾಗೆ (Tanisha Kuppanda) ಬೇಸರವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಲೈವ್ ಗೆ ಬಂದಿದ್ದ ಈ ಜೋಡಿ ಕಲಾವಿದರ ಮಧ್ಯ ತಂದಿಡುತ್ತಿರುವ ಫ್ಯಾನ್ಸ್ ಬಗ್ಗೆ ಗರಂ ಆಗಿದ್ದಾರೆ.
ಈ ಜೋಡಿಯು ಅಭಿಮಾನಿಗಳ ಜೊತೆ ಲೈವ್ ನಲ್ಲಿ ಇದ್ದಾಗ ಬೇರೆ ಕಂಟೆಸ್ಟೆಂಟ್ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ಕಾರ್ತಿಕ್ ಮತ್ತು ತನಿಷಾಗೆ ಟಾಂಗ್ ಕೊಟ್ಟಿದ್ದಾರೆ ಹಲವರು. ಇದರಿಂದಾಗಿ ಬೇಸರಿಸಿಕೊಂಡ ಕಾರ್ತಿಕ್ ಮತ್ತು ತನಿಷಾ ಶೂಟ್ ಮಾಡುವ ಮಾತುಗಳನ್ನು ಆಡಿದ್ದಾರೆ. ಈ ಮೂಲಕ ಕಂಟೆಸ್ಟೆಂಟ್ ಗಳ ಮಧ್ಯೆ ಜಗಳಕ್ಕೆ ಕಾರಣರಾದವರ ವಿರುದ್ಧ ಕೋಪದಲ್ಲೇ ಮಾತನಾಡಿದ್ದಾರೆ.
ಬೇರೆ ಬೇರೆ ಕಂಟೆಸ್ಟೆಂಟ್ ಗಳ ಮಧ್ಯ ಪಿನ್ ಇಡುವವರನ್ನು ನಾನಂತೂ ಸುಮ್ಮನೆ ಬಿಡಲ್ಲ ಎಂದು ತನಿಷಾ ಹೇಳಿದಾಗ, ಪಿನ್ ಅಲ್ಲ, ಗನ್ (Gun) ಇಟ್ಟು ಶೂಟ್ ಮಾಡ್ತೀನಿ ಅಂತ ಹೇಳು ಎಂದು ತನಿಷಾಗೆ ಹೇಳ್ತಾರೆ ಕಾರ್ತಿಕ್. ನಿಜವಾಗಿಯೂ ನನಗೆ ಶೂಟ್ ಮಾಡೋಕೆ ಬರತ್ತೆ. ಹುಷಾರ್ ಅಂದಿದ್ದಾರೆ ತನಿಷಾ.
ಸಂಗೀತಾ, ಡ್ರೋನ್ ಪ್ರತಾಪ್, ನಮ್ರತಾ, ಕಾರ್ತಿಕ್ ಫ್ಯಾನ್ಸ್ ಗಳ ಮಧ್ಯೆ ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆರೋಪ, ಪ್ರತ್ಯಾರೋಪಗಳು ನಡೆಯುತ್ತಲೇ ಇವೆ. ತಮ್ಮ ತಮ್ಮ ನೆಚ್ಚಿನ ತಾರೆಯರ ವಹಿಸಿ ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಬೆದರಿಕೆಯ ಮಾತುಗಳನ್ನು ಈ ಜೋಡಿ ಆಡಿದೆ.
ವರ್ತೂರ್ ಸಂತೋಷ್ (Varthur Santhosh) ಕೆಂಡ ಕಾರುತ್ತಿದ್ದಾರೆ. ಇದುವರೆಗೆ ಬಿಗ್‌ಬಾಸ್ (Bigg Boss) ಮನೆಯಲ್ಲಿದ್ದರು. ಆಗ ಹೊರಗಿನ ವಿಷಯ ಗೊತ್ತಾಗುತ್ತಿರಲಿಲ್ಲ. ಅಂದರೆ ಊರಿನ ಜನರು ಏನು ಮಾತಾಡುತ್ತಿದ್ದಾರೆ? ವೈಯಕ್ತಿಕ ವಿಷಯಗಳನ್ನು ಹೇಗೆ ಕೆಣಕುತ್ತಿದ್ದಾರೆ? ಯಾವ ರೀತಿ ಗೇಲಿ ಮಾಡುತ್ತಿದ್ದಾರೆ? ಇದೆಲ್ಲವನ್ನೂ ಅವರಿಗೆ ಗೊತ್ತಿರಲಿಲ್ಲ. ಈಗ ಒಂದೊಂದೇ ವಿಷಯ ಹೊರ ಬೀಳುತ್ತಿವೆ. ಅದಕ್ಕಾಗಿಯೇ ಅವರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಏನಂದರು ಹಳ್ಳಿಕಾರ್ ಹುಡುಗ? ಯಾರಿಗೆ ಎಚ್ಚರಿಕೆ ನೀಡಿದರು ? ಅದರ ಮಾಹಿತಿ ಇಲ್ಲಿದೆ.
ವರ್ತೂರ್ ಸಂತೋಷ್ ಬಿಗ್ ಬಾಸ್ ಮನೆಗೆ ಹೋಗೋವರೆಗೂ ಇವರು ಯಾರಿಗೂ ಹೆಚ್ಚು ಪರಿಚಯ ಇರಲಿಲ್ಲ. ಹಳ್ಳಿಕಾರ್ ಹೋರಿಗಳನ್ನು ಬೆಳೆಸುತ್ತಾ, ಅದರ ಬಗ್ಗೆ ಜನರಿಗೆ ಪ್ರೀತಿ ಹುಟ್ಟಿಸುತ್ತಾ, ನಿಯತ್ತನ್ನು ಬೆಳೆಸುತ್ತಾ ಇದ್ದರು. ಆದರೆ ಯಾವಾಗ ಬಿಗ್ ಬಾಸ್ ಮನೆ ಒಳಗೆ ಕಾಲಿಟ್ಟರೊ ಅಲ್ಲಿಂದ ಇವರು ಕರುನಾಡಿನಲ್ಲಿ ಮೆರವಣಿಗೆ ಹೊರಟರು. ಅದು ಅಂತಿಂಥ ಮೆರವಣಿಗೆ ಅಲ್ಲ. ಎಲ್ಲರೂ ಇವರನ್ನು ಹಳ್ಳಿಕಾರ್ ಹೈದ ಎನ್ನುವ ಬಿರುದನ್ನು ಕೊಟ್ಟರು. ಅದನ್ನೂ ಕೆಲವರಿಗೆ ಸಹಿಸಲು ಆಗಲಿಲ್ಲ. ಆದರೇನಂತೆ ಈಗ ವರ್ತೂರ್ ಸಂತೋಷ್ ಕೂಡ ಸೆಲೆಬ್ರಿಟಿ ಆಗಿದ್ದಾರೆ. ಅದಕ್ಕಾಗಿಯೇ ಹಳ್ಳಿಕಾರ್ ಹೋರಿಗಳ ಜಾತ್ರೆ ಮಾಡುತ್ತಿದ್ದಾರೆ.
ಹಳ್ಳಿಕಾರ್ ಜಾತ್ರೆ ಮಾಡುವುದಾಗಿ ಮೊದಲೇ ಘೋಷಣೆ ಮಾಡಿದ್ದರು. ಅದಕ್ಕಾಗಿ ಸಕಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈಗ ನೋಡಿದರೆ ಕೆಲವರು ಇವರ ವೈಯಕ್ತಿಕ ಬದುಕನ್ನು ಇಟ್ಟುಕೊಂಡು ಗೇಲಿ ಮಾಡುತ್ತಿದ್ದಾರೆ. ಇವರಿಗೆ ಮದುವೆ ಆಗಿದ್ದನ್ನು ಮುಚ್ಚಿಡಲಿಲ್ಲ. ಮದುವೆಯಾಗಿ ಕೆಲವೇ ದಿನಗಳಲ್ಲಿ ಪತ್ನಿಯಿಂದ ದೂರವಾಗಿದ್ದನ್ನು ಮುಚ್ಚಿಡಲಿಲ್ಲ. ಆದರೆ ಅದ್ಯಾಕೊ ಇವರ ಮೇಲೆ ಕೋಪ ಹುಟ್ಟಿಕೊಂಡಿತು. ಅದು ಹೆಣ್ಣು ಕೊಟ್ಟ ಮಾವನಿಗೆ. ಹೀಗಾಗಿಯೇ ಆ ಮಾವ ಸಂತೋಷ್ ಬಗ್ಗೆ ಪ್ರೆಸ್ ಮೀಟ್ ಮಾಡಿದರು. ಇವರ ಮೇಲೆ ಏನೇನೊ ಆರೋಪ ಹೊರಿಸಿದರು. ಈಗ ಅದೇ ಕಾರಣಕ್ಕೆ ಸಂತೋಷ್ ಕೆಂಡ ಕೆಂಡವಾಗಿದ್ದಾರೆ.
ವರ್ತೂರ್ ಸಂತೋಷ್ ಹಾಗೂ ಬೆಂಕಿ ತನಿಷಾ ಈ ಇಬ್ಬರ ನಡುವೆ ಏನೊ ನಡೆದಿದೆ. ಎನ್ನುವ ಮಾತು ಬಿಗ್‌ಬಾಸ್ ಮನೆ ಒಳಗೆ ಇದ್ದಾಗಲೇ ಕೇಳಿಬಂದಿತ್ತು. ಹಾಗಂತ ಇಬ್ಬರೂ ಅಗತ್ಯಕ್ಕಿಂತ ಹೆಚ್ಚಾಗಿ ಹತ್ತಿರ ಆಗಿರಲಿಲ್ಲ. ಹಾಗಂತ ದೂರವೂ ಇರಲಿಲ್ಲ. ಒಂದು ಗಂಡು ಹೆಣ್ಣು ಹತ್ತಿರ ಇದ್ದಾಗ ಆಕರ್ಷಣೆ ಬೆಳೆಯುವುದು ಸಹಜ. ಅದನ್ನೇ ಹೊರಗಿದ್ದವರು ತಪ್ಪಾಗಿ ತಿಳಿದುಕೊಂಡರು. ಅದನ್ನೇ ಏನೋ ಇದೆ ಎನ್ನುವ ಅರ್ಥದಲ್ಲಿ ಮಾತಾಡಿದರು. ಅದಕ್ಕೆ ತನಿಷಾ ಹಾಗೂ ಸಂತೋಷ್ ಇಬ್ಬರೂ ಸ್ಪಷ್ಟ ಉತ್ತರ ಕೊಡಲಿಲ್ಲ. ಈಗ ಅದೇ ದೊಡ್ಡದಾಗಿದೆ.
ಸಂತೋಷ್ ಮೊದಲೇ ಹಳ್ಳಿ ಹುಡುಗ. ಅವರಿಗೂ ಕೋಪ ತಾಪ ಇರುತ್ತದೆ. ಹೀಗಾಗಿಯೇ ಅದನ್ನು ಅವರು ಬಾಯಿ ಬಿಟ್ಟು ಹೇಳಿದ್ದಾರೆ. ಕಟ್ಟಿಕೊಂಡ ಪತ್ನಿ ಈಗಲೂ ನನ್ನ ಮಾತು ಕೇಳಿ…ಬಂದರೆ ರಾಣಿ ಥರ ನೋಡಿಕೊಳ್ಳುತ್ತೇನೆ ಎಂದಿದ್ದರು. ಅದಕ್ಕೆ ಈಗಲೂ ಅವರು ಬದ್ದರಾಗಿದ್ದಾರೆ. ಆದರೆ ಇದನ್ನು ಸಹಿಸದ ಅಥವಾ ಒಪ್ಪದ ಅಥವಾ ಇನ್ನೊಂದು ಉದ್ದೇಶಕ್ಕಾಗಿಯೇ ಇವರ ಬದುಕಿನಲ್ಲಿ ಹುಳಿ ಹಿಂಡಲು ಸಜ್ಜಾಗಿದ್ಧಾರೆ ಕೆಲವರು. ಅವರಿಗೆ ಸಂತೋಷ್ ಹಾಗಿಗೇ ಮಾತಾಡಿಲ್ಲ. ಅಂತಿಂಥ ರೀತಿ ವಾರ್ನಿಂಗ್ ಕೊಟ್ಟಿಲ್ಲ. ನೋಡೋಣ ನಾನಾ ನೀವಾ ಎಂದು ತೊಡೆ ತಟ್ಟಿದ್ದಾರೆ. ಇಲ್ಲಿಂದಲೇ ಎದ್ದಿದೆ ಬಿರುಗಾಳಿ, ಸುಂಟರಗಾಳಿ.
ಸಂತೋಷ್ ಪಕ್ಕಾ ಗ್ರಾಮೀಣ ಪ್ರತಿಭೆ. ಇರುವಷ್ಟು ಜಾಗದಲ್ಲಿ, ಇರುವಷ್ಟು ಬದುಕಿನಲ್ಲಿ ಏನು ಮಾಡಬೇಕು ಅದನ್ನು ಮಾಡುತ್ತಿದ್ದಾರೆ. ಇನ್ನೊಬ್ಬರಿಗೆ ಕೆಟ್ಟದ್ದನ್ನು ಮಾಡುವ ಮನಸೂ ಇಲ್ಲ. ಅಂಥ ಉದ್ದೇಶ ಕೂಡ ಇಲ್ಲ. ಹೀಗಾಗಿಯೇ ಹುಲಿ ಉಗುರಿನ ಸತ್ಯವನ್ನು ಬಿಚ್ಚಿಟ್ಟು ಜೈಲು ಸೇರಬೇಕಾಯಿತು. ಒಬ್ಬ ಸಂತೋಷ್ ಮಾತ್ರ ಸತ್ಯ ಹೇಳಿ ಹದಿನೈದು ದಿನ ಕಣ್ಣೀರಿನಲ್ಲಿ ಕೈ ತೊಳೆದರು. ಅದನ್ನೆಲ್ಲ ಮರೆತು ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಅದಕ್ಕೆ ಕಾಸು ಹಾಕಲು ತಯಾರಾಗಿದ್ಧಾರೆ. ಇದು ಗಟ್ಸ್ ಅಂದರೆ.
ಏನಾದರಾಗಲಿ, ಸಂತೋಷ್ ಈಗ ಹೊರ ಬಂದಿದ್ದಾರೆ. ಹಳ್ಳಿಕಾರ್ ಹೋರಿಗಳ ಜಾತ್ರೆ ಮಾಡಲು ಸಜ್ಜಾಗಿದ್ದಾರೆ. ಅದಕ್ಕಾಗಿ ಎಲ್ಲರನ್ನೂ ಒಂದು ಕಡೆ ಸೇರಿಸುತ್ತಿದ್ದಾರೆ. ಸುದೀಪ್ ಹಾಗೂ ಧ್ರು ಸರ್ಜಾ ಕೂಡ ಇದಕ್ಕೆ ಹಾಜರಿ ಹಾಕುವುದಾಗಿ ಹೇಳಿದ್ದಾರೆ. ಸಾವಿರಾರು ಜನರು ಸೇರಲಿದ್ದಾರೆ. ಇದರಿಂದ ಸಂತೋಷ್‌ಗೆ ಏನೇನೂ ಲಾಭ ಇಲ್ಲ. ಆದರೆ ಅದರಿಂದ ಜನರಿಗೆ ಲಾಭ ಆಗಲಿದೆ. ಮುಂದೊಂದು ದಿನ ಹಳ್ಳಿಕಾರ್ ಹೋರಿಗಳು ಇವರಿಂದ ಇನ್ನಷ್ಟು ಜನಪ್ರಿಯ ಆಗಲಿವೆ. ಅದನ್ನೇ ಇವರು ಬದುಕು ಮಾಡಿಕೊಂಡಿದ್ದಾರೆ. ಅದಕ್ಕೂ ಅಡ್ಡಗಾಲು ಹಾಕುವ ಜನರಿದ್ದರೆ ಅವರನ್ನು ಏನಂತ ಕರೆಯಬೇಕು ? ದೇವರೇ ಉತ್ತರ ಕೊಡುತ್ತಾನೆ ಬಿಡಿ ಸಮಯ ಬಂದಾಗ.
ಬಿಗ್ಬಾಸ್ (Bigg Boss) ಸ್ಪರ್ಧಿ ತನಿಷಾಗೆ (Tanisha Kuppanda) ಬಿಗ್ ರಿಲೀಫ್ ಸಿಕ್ಕಿದೆ. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಅವರ ಮೇಲೆ ಅಟ್ರಾಸಿಟಿ ದೂರು (Atrocity Case) ದಾಖಲಾಗಿತ್ತು. ಇದೀಗ ಅಟ್ರಾಸಿಟಿ ಕೇಸ್‍ನಲ್ಲಿ ತನಿಷಾಗೆ ಕ್ಲೀನ್‍ಚಿಟ್ ಕೊಡಲಾಗಿದೆ. ಬೆಂಕಿ ತನಿಷಾ ಈಗ ಬಿಸೋ ದೊಣ್ಣೆಯಿಂದ ಪಾರಾಗಿದ್ದಾರೆ ಎನ್ನುತ್ತಿದೆ ಪೊಲೀಸ್ ಮೂಲಗಳು.
ತನಿಷಾ ಕುಪ್ಪಂಡ ಬಿಗ್ ಬಾಸ್ ಶೋನಲ್ಲಿ ಭೋವಿ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಆರೋಪದ ಮೇಲೆ ತನಿಷಾ ವಿರುದ್ಧ ಭೋವಿ ಸಮಾಜದ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಪದ್ಮ ಕುಂಬಳುಗೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ಸಂಬಂಧ ಕುಂಬಳಗೋಡು ಪೊಲೀಸರು ಜಾತಿನಿಂದನೆ ಆರೋಪದಡಿ ತನಿಷಾ ಕುಪ್ಪಂಡ ವಿರುದ್ಧ ಎಫ್‍ಐಆರ್ ದಾಖಲಾಸಿದ್ದರು.
ದೂರಿನ ಜೊತೆ ತನಿಷಾ ಬಿಗ್ ಬಾಸ್ ಶೋನಲ್ಲಿ ಪ್ರತಾಪ್ ಜೊತೆ ಸಂಭಾಷಣೆ ಮಾಡುವಾಗ ಭೋವಿ ಸಮಾಜದ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದ ವಿಡಿಯೋ ಕೊಟ್ಟಿದ್ದರು. ಜಾತಿನಿಂದನೆ ಕೇಸ್ ಆಗಿದ್ದರಿಂದ ಡಿವೈಎಸ್ಪಿ ಪ್ರಕರಣ ತನಿಖೆ ಮಾಡಿದ್ದರು. ತನಿಷಾ ಬಿಗ್ ಬಾಸ್ ಶೋನಲ್ಲಿ ಬಳಕೆ ಮಾಡಿರೋ ಆಕ್ಷೇಪಾರ್ಹ ಪದ ಇರುವ ವಿಡಿಯೋ ಆಡಿಯೋ ಒಂದನ್ನ ಪೊಲೀಸರು ಎಫ್‍ಎಸ್‍ಎಲ್‍ಗೆ ಕಳಿಸಿಕೊಟ್ಟಿದ್ದರು. ಎರಡು ತಿಂಗಳ ಬಳಿಕ ಎಫ್‍ಎಸ್‍ಎಲ್‍ವರದಿ ತನಿಖಾಧಿಕಾರಿ ಕೈ ಸೇರಿದೆ.
ಈ ಪ್ರಕರಣದಲ್ಲಿ ತನಿಷಾ ಮೇಲೆ ಕ್ರಮ ತೆಗೆದುಕೊಳ್ಳಲೇಬೇಕು ಎಂದು ಒತ್ತಡ ಹೇರಲಾಗಿತ್ತು. ಈ ಕುರಿತಂತೆ ತನಿಷಾ ತಾನು ಆ ರೀತಿ ಮಾತನಾಡಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಆದರೂ, ಕ್ರಮಕ್ಕೆ ಒತ್ತಾಯ ಮಾಡಲಾಗಿತ್ತು. ಸದ್ಯ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಬಿಗ್ ಬಾಸ್ ಕನ್ನಡ 10ರ ಹಾಟ್ ಬ್ಯೂಟಿ ತನಿಷಾ ಕುಪ್ಪಂಡ (Tanisha Kuppanda) ಅವರಿಗೆ ವರ್ತೂರು ಸಂತೋಷ್ (Varthur Santhosh) ಸರ್ಪ್ರೈಸ್‌ವೊಂದನ್ನು ಕೊಟ್ಟಿದ್ದಾರೆ. ತನಿಷಾರ ರೆಸ್ಟೋರೆಂಟ್‌ಗೆ ಭೇಟಿ ಕೊಟ್ಟು ವರ್ತೂರು ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ:ನನ್ನ ಲೈಫ್‌ನಲ್ಲಿ ವಿಜಯ್ ಎಲ್ಲರಿಗಿಂತ ಹೆಚ್ಚಾಗಿ ಬೆಂಬಲಿಸಿದ್ದಾರೆ- ರಶ್ಮಿಕಾ
ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಪ್ರೇಮ ಪಕ್ಷಿಗಳಾಗಿ ತನಿಷಾ- ವರ್ತೂರು ಸಂತೋಷ್ ಹೈಲೆಟ್ ಆಗಿದ್ದರು. ಬಿಗ್ ಬಾಸ್ ಶೋ ಮುಗಿದ ಮೇಲೆ ಇಬ್ಬರೂ ಜೊತೆಯಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ತನಿಷಾ- ವರ್ತೂರು ಸಂತೋಷ್ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.
ತನಿಷಾರ ಮುಂದಾಳತ್ವದ ಹೋಟೆಲ್‌ಗೆ ಸಡನ್ ಭೇಟಿ ನೀಡಿ ಬೆಂಕಿ ಮುಖದಲ್ಲಿ ಸಂತೋಷ್ ನಗು ಮೂಡಿಸಿದ್ದಾರೆ. ಸಂತೋಷ್ ದಿಢೀರ್ ಭೇಟಿ ತನಿಷಾಗೆ ಖುಷಿ ಕೊಟ್ಟಿದೆ. ಈ ವೇಳೆ, ಇಬ್ಬರು ಜೊತೆಯಾಗಿ ಫೋಟೋ ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ.
ತನಿಷಾ- ವರ್ತೂರು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಇಬ್ಬರ ಮದುವೆ ಯಾವಾಗ? ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಇನ್ನೂ ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲಿ ಸುದೀಪ್, ವರ್ತೂರುಗೆ ಇರುವ ಫೇಮ್‌ಗೆ 3 ಬಾರಿ ಮದುವೆಯಾಗಬಹುದು ಎಂದಿದ್ದರು. ಅದಕ್ಕೆ ವರ್ತೂರು ತಾಯಿ, ಆದರೆ ಆಗಲಿ ಬಿಡಿ ಎಂದು ಗ್ರೀನ್ ಸಿಗ್ನಲ್ ನೀಡಿದ್ದರು. ಆಗ ತನಿಷಾ ನಾಚಿ ನೀರಾಗಿದ್ದರು.