ಸಹಜಾಭಿನಯದ ಮೂಲಕ ಮನೆ ಮಾತಾಗಿರುವ ಕೋಮಲ್ ಕುಮಾರ್ (Komal) ಇದೀಗ ಕೋಣ (Kona) ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರಲು ರೆಡಿಯಾಗುತ್ತಿದ್ದಾರೆ. ಟೀಸರ್ ಮೂಲಕ ಕುತೂಹಲ ಹೆಚ್ಚಿಸಿದ್ದ ಕೋಣ ಚಿತ್ರದ ಟ್ರೇಲರ್ (Trailer) ಇದೀಗ ರಿಲೀಸ್ ಆಗಿದೆ. ಕಾಮಿಡಿ, ಆಕ್ಷನ್, ಸಸ್ಪೆನ್ಸ್ ಅಂಶಗಳನ್ನು ಬ್ಲೆಂಡ್ ಮಾಡಿ ಟ್ರೇಲರ್ ಕಟ್ ಮಾಡಲಾಗಿದೆ. ಇಲ್ಲಿ ಕೋಮಲ್ ಹೊಸ ಅವತಾರದಲ್ಲಿ ಕಾಣಿಸುತ್ತಾರೆ.
ನಿರ್ಮಾಣದಲ್ಲಿ ಕೈ ಜೋಡಿಸಿರುವ ತನಿಷಾ ಕುಪ್ಪಂಡ (Tanisha Kuppanda) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೀರ್ತಿರಾಜ್, ರಿತ್ವಿ ಜಗದೀಶ್, ನಮ್ರತಾ ಗೌಡ, ವಿನಯ್ ಗೌಡ, ರಾಘು ರಾಮನಕೊಪ್ಪ, ವಿಜಯ್ ಚೆಂಡೂರ್, ಎಂ.ಕೆ.ಮಠ್, ರಂಜಿತ್ ಗೌಡ, ತುಕಾಲಿ ಸಂತೋಷ್, ಹುಲಿ ಕಾರ್ತಿಕ್, ನಿರಂಜನ್, ಅನಂತ್, ಶಿಶಿರ್ ಶಾಸ್ತ್ರಿ, ಗೋಲ್ಡ್ ಸುರೇಶ್, ಸುಷ್ಮಿತ, ಜಗಪ್ಪ, ಮಂಜು ಪಾವಗಡ, ಕುರಿ ಸುನಿಲ್, ಮೋಹನ್ ಕೃಷ್ಣರಾಜ್ ಹೀಗೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಇದನ್ನೂ ಓದಿ: ಮೊದಲ ದಿನವೇ ಬುಕ್‌ಮೈಶೋದಲ್ಲಿ ದಾಖಲೆ ಬರೆದ ಕಾಂತಾರ

ಡಾರ್ಕ್ ಕಾಮೆಡಿ ಶೈಲಿಯಲ್ಲಿ ‘ಕೋಣ’ ಸಿನಿಮಾ ಮೂಡಿಬರಲಿದೆ. ಜಗ್ಗೇಶ್ ನಟನೆಯ ‘8 MM’ ಸಿನಿಮಾಗೆ ನಿರ್ದೇಶನ ಮಾಡಿದ್ದ ಎಸ್. ಹರಿಕೃಷ್ಣ ಅವರು ಈ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ನಾಗೇಶ್.ಎನ್ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಒಂದು ನೈಜ ಘಟನೆಯನ್ನು ಆಧರಿಸಿ ಈ ಚಿತ್ರ ತಯಾರಾಗಿದ್ದು ತೆರೆಗೆ ಬರಲು ಸಿದ್ಧವಾಗಿದೆ. ಕೋಮಲ್ ಕುಮಾರ್ ಅವರು ಈವರೆಗೂ ಕಾಣಿಸಿಕೊಂಡಿರದ ಪಾತ್ರವನ್ನು ‘ಕೋಣ’ ಸಿನಿಮಾದಲ್ಲಿ ನಿಭಾಯಿಸಿದ್ದಾರೆ. ಇದನ್ನೂ ಓದಿ: Kantara: Chapter 1ಗೆ ಭರ್ಜರಿ ರೆಸ್ಪಾನ್ಸ್ – ಮೊದಲ ದಿನವೇ 55 ಕೋಟಿ ಗಳಿಕೆ
ಕುಪ್ಪಂಡಾಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತನಿಷಾ ಕುಪ್ಪಂಡ, ಕಾರ್ತಿಕ್ ಕಿರಣ್ ಸಂಕಪಾಲ್, ರವಿಕಿರಣ್ .ಎನ್ ಅವರು ‘ಕೋಣ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶಶಾಂಕ್ ಶೇಷಗಿರಿ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ವೀನಸ್ ನಾಗರಾಜ್ಮೂರ್ತಿ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದು ಇವರ ಜೊತೆ ವಿಶಾಲ್ ಗೌಡ ಸಹ ಕೈ ಜೋಡಿಸಿದ್ದಾರೆ. ಉಮೇಶ್ ಆರ್. ಬಿ. ಅವರ ಸಂಕಲನ ಚಿತ್ರಕ್ಕಿದೆ, ಸಾಹಸ ನಿರ್ದೇಶಕರಾಗಿ ವಿನೋದ್ ಕುಮಾರ್, ಮುರುಗನ್ ಅವರ ನೃತ್ಯ ನಿರ್ದೇಶನ ಹಾಗೂ ಶಶಿಕುಮಾರ್, ಸಂದೀಪ್ ಆಚಾರ್ಯ ಸಂಭಾಷಣೆ ಚಿತ್ರಕ್ಕಿದ್ದು ಕೋಣ ಚಿತ್ರ ಅದ್ಭುತವಾಗಿ ಮೂಡಿಬಂದಿದ್ದು ಪ್ರೇಕ್ಷಕರನ್ನ ಸೆಳೆಯುವಲ್ಲಿ ಅನುಮಾನವೇ ಇಲ್ಲ.




ಕನ್ನಡದ ಸಿನಿಮಾಗಳಲ್ಲಿ ತನಿಷಾ ಬ್ಯುಸಿಯಾಗಿದ್ದಾರೆ. ಇದರ ನಡುವೆ ತಮಿಳಿನಲ್ಲಿಯೂ ಕೆಲಸ ಮಾಡಿದ್ದಾರೆ. ‘ಎನ್ ಕಾಧಲೇ’ ಚಿತ್ರದ ರಾಸಾನಾ ಓತಾ ರೋಸಾ ಹಾಡಿನ ಮೇಕಿಂಗ್ ವಿಡಿಯೋವನ್ನು ನಟಿ ಶೇರ್ ಮಾಡಿದ್ದಾರೆ. ಈ ಹಾಡು ಈಗಾಗಲೇ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಆದರೆ ಈ ಡ್ಯಾನ್ಸ್ ಮಾಡಲು ತೆರೆಹಿಂದಿನ ತಯಾರಿ ಹೇಗಿತ್ತು ಎಂಬುದರ ಝಲಕ್ ಅನ್ನು ನಟಿ ಹಂಚಿಕೊಂಡಿದ್ದಾರೆ. ಮಾದಕವಾಗಿ ಹೆಜ್ಜೆ ಹಾಕಿರೋ ತನಿಷಾರನ್ನು ನೋಡಿ ಬೆಂಕಿ ಡ್ಯಾನ್ಸ್ ಎಂದು ಫ್ಯಾನ್ಸ್ ಕೊಂಡಾಡಿದ್ದಾರೆ. ಇದನ್ನೂ ಓದಿ:







ಡಾಕ್ಟರ್ಸ್, ಲಾಯರ್ಸ, ಸಿನಿಮಾ ನಟರು, ಕಿರುತೆರೆ ಕಲಾವಿದರು, ಮಾಧ್ಯಮದವರು ಹೀಗೆ ಎಲ್ಲಾ ಕ್ಷೇತ್ರದವರು ಸೇರಿ ಆಡಲಿರುವ ಕ್ರಿಕೆಟ್ ಟೂರ್ನಮೆಂಟ್. ಈ ಪಂದ್ಯಾವಳಿ ಆರಂಭಕ್ಕೂ ಮುನ್ನ ಲೋಗೋ ಬಿಡುಗಡೆ ಮಾಡಲಾಯಿತು. ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ಈ ಕಾರ್ಯಕ್ರಮ ನೆರವೇರಿದೆ. ನಟಿಯರಾದ ತನಿಷಾ ಕುಪ್ಪಂಡ, ಭವ್ಯಾ ಗೌಡ, ಎನ್ 1 ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಸುನಿಲ್ ಕುಮಾರ್, ಶೈಲೇಶ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬಳಿಕ ನಟಿ ತನಿಷಾ ಕುಪ್ಪಂಡ (Tanisha Kuppanda) ಮಾತನಾಡಿ, ಎನ್ 1 ಕ್ರಿಕೆಟ್ ಅಕಾಡೆಮಿ ಮೂಲಕ ಹಲವು ಟೂರ್ನಮೆಂಟ್ ಮಾಡುವ ಮೂಲಕ ಸುನಿಲ್ ಅವರು ಖ್ಯಾತಿ ಪಡೆದಿದ್ದಾರೆ. ನಾನು ಇದಕ್ಕೂ ಮುನ್ನ ಟಿಪಿಎಲ್ ಸೀಸನ್ ಒಂದರಲ್ಲಿ ಟೀಂ ಒಂದಕ್ಕೆ ಬ್ರ‍್ಯಾಂಡ್ ಅಂಬಾಸಿಡರ್ ಆಗಿದ್ದೆ. ಯಾವುದೇ ಪ್ರೊಫೆಷನ್ ಆಗಲಿ ಕ್ರಿಕೆಟ್ ಅಂದರೆ ಪ್ರಾಣ ಕೊಡುವವರು ಬಹಳಷ್ಟು ಜನ ಇದ್ದಾರೆ. ಈ ಟೂರ್ನಮೆಂಟ್ ವಿಶೇಷತೆ ಏನೆಂದರೆ ಎಲ್ಲಾ ಕ್ರಿಕೆಟ್ ಪ್ರೇಮಿಗಳು ಇದರಲ್ಲಿ ಭಾಗಿಯಾಗಬಹುದು. ಎನ್ 1 ಕ್ರಿಕೆಟ್ ಅಕಾಡೆಮಿ ಅಂದರೆ ಹೊಸ ಪ್ರಯತ್ನ. ಈ ಮೂಲಕ ಮಾಧ್ಯಮದವರು, ಡಾಕ್ಟರ್ಸ್, ಲಾಯರ್ಸ, ಸಿನಿಮಾ ನಟರು, ಕಿರುತೆರೆ ಕಲಾವಿದರು, ಮಾಧ್ಯಮದವರಿಗೆ ಏರ್ಪಡಿಸಲಾಗಿದೆ ಎಂದರು.




