Tag: tanisha

  • BBK 11: ಮತ್ತೆ ಬಿಗ್‌ ಬಾಸ್‌ಗೆ ತನಿಷಾ, ಪ್ರತಾಪ್‌, ಸಂತು ಪಂತು ಎಂಟ್ರಿ

    BBK 11: ಮತ್ತೆ ಬಿಗ್‌ ಬಾಸ್‌ಗೆ ತನಿಷಾ, ಪ್ರತಾಪ್‌, ಸಂತು ಪಂತು ಎಂಟ್ರಿ

    ‘ಬಿಗ್ ಬಾಸ್ ಕನ್ನಡ ಸೀಸನ್ 11’ರ (Bigg Boss Kannada 11)  ಆಟ 70ನೇ ದಿನ ಪೂರೈಸಿ ಮುನ್ನುಗ್ಗುತ್ತಿದೆ. ಇದರ ನಡುವೆ ವಾಹಿನಿ ಹೊಸ ಪ್ರೋಮೋವೊಂದನ್ನು ಹಂಚಿಕೊಂಡಿದ್ದು, ಬಹಳ ವಿಶೇಷವಾದ ಸಂಗತಿಗಳಿವೆ. ಅದೇನಪ್ಪ ಅಂದ್ರೆ ‘ಬಿಗ್ ಬಾಸ್’ ಮನೆಗೆ ಈ ಹಿಂದಿನ 10ನೇ ಸೀಸನ್‌ನ (BBK 10) ಸ್ಪರ್ಧಿಗಳು ಕಾಲಿಟ್ಟಿದ್ದಾರೆ. ಜೊತೆಗೆ ಕಳೆದ ವಾರ ಎಲಿಮಿನೇಷನ್ ಗೊಂದಲಕ್ಕೂ ಉತ್ತರ ಸಿಕ್ಕಿದೆ. ಇದನ್ನೂ ಓದಿ:ಮದುವೆ ಸಂಭ್ರಮದ ಫೋಟೋ ಹಂಚಿಕೊಂಡ ನಾಗಚೈತನ್ಯ

    ಕಳೆದ ವಾರಾಂತ್ಯ ಎಲಿಮಿನೇಷನ್‌ ಟ್ವಿಸ್ಟ್‌ ಇತ್ತು. ಆದರೂ ಚೈತ್ರಾ ಕುಂದಾಪುರ (Chaithra Kundapura) ಅವರನ್ನು ಎಲಿಮಿನೇಟ್ ಮಾಡಿರುವ ರೀತಿಯಲ್ಲಿ ಕರೆದುಕೊಂಡು ಬಂದು ಕನ್ಫೆಷನ್ ರೂಮ್‌ನಲ್ಲಿ ಕೂರಿಸಲಾಗಿತ್ತು. ಆದರೆ ಈಗ ರಿಲೀಸ್ ಆಗಿರುವ ಹೊಸ ಪ್ರೋಮೋದಲ್ಲಿ ಅದು ಗೊತ್ತಾಗಿದೆ. ಚೈತ್ರಾ ಅವರನ್ನು ಪುನಃ ಬಿಗ್ ಬಾಸ್‌ಗೆ ಕಳುಹಿಸಲಾಗಿದೆ.

    ‘ಬಿಗ್ ಬಾಸ್’ ಕನ್ನಡ ಸೀಸನ್ 10ರ ಸ್ಪರ್ಧಿಗಳು ಈಗ ಮನೆಯೊಳಗೆ ಕಾಲಿಟ್ಟಿದ್ದಾರೆ. ತುಕಾಲಿ ಸಂತು, ವರ್ತೂರು ಸಂತೋಷ್ Varthur Santhosh), ತನಿಷಾ ಕುಪ್ಪಂಡ (Tanisha Kuppanda), ಡ್ರೋನ್ ಪ್ರತಾಪ್ (Drone Prathap) ಮುಂತಾದವರು ಆಗಮಿಸಿದ್ದಾರೆ. ಇನ್ನು, ಚೈತ್ರಾಗೆ ಮಾತಿಗೆ ಮುಂಚೆ ಅಣ್ಣ ಅಣ್ಣ ಎನ್ನುವುದು ರೂಢಿ. ಮನೆಗೆ ಬಂದಿರುವ ಡ್ರೋನ್ ಪ್ರತಾಪ್‌ಗೂ ಕೂಡ ಪ್ರತಾಪಣ್ಣ ಅಂತ ಚೈತ್ರಾ ಕರೆದಿದ್ದಾರೆ. ಅದಕ್ಕೆ ಪ್ರತಾಪ್, ಚೈತ್ರಕ್ಕ, ಅಣ್ಣ ಅಂತೆಲ್ಲಾ ಕರೆಯಬೇಡಿ ಎಂದು ಹೇಳಿದ್ದಾರೆ. ಆಗ ಇಡೀ ಮನೆಯ ಸದಸ್ಯರು ಬಿದ್ದು ಬಿದ್ದು ನಕ್ಕಿದ್ದಾರೆ.

    ಸಂತೋಷ್ ಅವರನ್ನು ಕಂಡ ಕೂಡಲೇ ಹನುಮಂತು, ಮಾವ ಅಂತ ಬೆನ್ನೇರಿದ್ದಾರೆ. ಆಗ ಅವರು ಮಾವ ಅಂತ್ಹೇಳಿ ನನ್ನ ಮಾನಸನ್ನೇ ಹೊರಗೆ ಕಳಿಸಿದ್ಯಲ್ಲೋ ಎಂದು ಕಾಮಿಡಿ ಮಾಡಿದ್ದಾರೆ. ಇದೆಲ್ಲದರ ಜೊತೆಗೆ ಸಂತೋಷ್ ಮತ್ತು ಬೀನ್ ಬ್ಯಾಗ್ ಇಲ್ಲ ಅಂದರೆ ಹೇಗೆ? ಅದು ಸ್ವತಃ ಬಿಗ್ ಬಾಸ್‌ಗೂ ಗೊತ್ತಿದೆ. ಹಾಗಾಗಿ, ವರ್ತೂರು ಸಂತೋಷ್ ಅವರನ್ನು ಕೂಡ ಒಳಗೆ ಕರೆಸಿಕೊಂಡಿದ್ದಾರೆ. ಒಳಗೆ ಬರುವಾಗಲೇ ಎರಡು ಬೀನ್ ಬ್ಯಾಗ್‌ಗಳ ಜೊತೆಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು, ತುಕಾಲಿ ಸಂತು ಅವರು ವರ್ತೂರು ಸಂತೋಷ್ ಒಳಗೆ ಬರುವುದನ್ನು ಕಂಡೊಡನೆ ಜೋರಾಗಿ ಕೂಗುತ್ತಾ ಅವರನ್ನು ತಬ್ಬಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರೋ ಪ್ರೋಮೋ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

    https://youtu.be/2Haq3NSydBU?si=SPGCoHmPzlMdpro3

  • ನಮ್ರತಾ ‘ಬಿಗ್ ಬಾಸ್’ ಜರ್ನಿ ಬಲು ರೋಚಕ

    ನಮ್ರತಾ ‘ಬಿಗ್ ಬಾಸ್’ ಜರ್ನಿ ಬಲು ರೋಚಕ

    ‘ಪುಟ್ಟಗೌರಿ ಮದುವೆ’ ಧಾರಾವಾಹಿಯ ಮೂಲಕ ನಟನೆಗೆ ಕಾಲಿಟ್ಟ ನಮ್ರತಾ ಗೌಡ (Namrata), ಬಿಗ್‌ ಬಾಸ್‌ (Bigg Boss Kannada) ವೇದಿಕೆಗೆ ಕಾಲಿಟ್ಟಿದ್ದು ‘ಡೊಂಟ್ ಯು ನೋ… ಐ ಆಮ್ ವೆರಿ ಸೆಕ್ಸಿ’ ಎಂದು ಹಾಡುತ್ತ… ಸೌಂದರ್ಯ, ಆತ್ಮವಿಶ್ವಾಸ ಮತ್ತು ಸ್ಪಷ್ಟತೆಯ ಹದವಾದ ಮಿಶ್ರಣದಂತೆ ಕಾಣಿಸಿದ್ದ ನಮ್ರತಾ ಅವರಿಗೆ ಪ್ರೀಮಿಯರ್ ವೇದಿಕೆಯಲ್ಲಿ ಶೇಕಡಾ ಮತಗಳು ಬಂದಿದ್ದವು. ಈ ಸೀಸನ್‌ನ ಮೊದಲ ಸ್ಪರ್ಧಿಯಾಗಿ ಅವರು ಬಿಗ್‌ಬಾಸ್‌ ಮನೆಯೊಳಗೆ ಕಾಲಿಟ್ಟಿದ್ದರು. ‘ಹ್ಯಾಪಿ ಬಿಗ್‌ಬಾಸ್‌’ ಎಂಬ ಟ್ಯಾಗ್‌ಲೈನ್‌ ಅನ್ನು ತಮ್ಮ ವ್ಯಕ್ತಿತ್ವಕ್ಕೂ ನೇತುಹಾಕಿಕೊಂಡಂತಿದ್ದ ನಮ್ರತಾ ಅವರು ಸದಾ ನಗುನಗುತ್ತಲೇ ಎಲ್ಲರ ಗಮನ ಸೆಳೆದಿದ್ದರು.

    ಬಿಗ್‌ಬಾಸ್ ಮನೆಯೊಳಗೆ ದಿನಗಳನ್ನು ಕಳೆಯಲಾರಂಭಿಸಿದಂತೆ, ವಿನಯ್, ತುಕಾಲಿ ಸಂತೋಷ್, ಇಶಾನಿ, ಮೈಕಲ್, ಸ್ನೇಹಿತ್‌, ಗೌರಿಶ್ ಮತ್ತು ಸಿರಿ ಅವರ ಜೊತೆಗೆ ಆಪ್ತರಾಗಿದ್ದರು. ‘ಶಾಡೋ’, ‘ಚಮಚ’ ‘ಇನ್‌ಪ್ಲ್ಯೂಯೆನ್ಸ್‌ ಆಗುವವರು’ ಪದೇ ಪದೇ ಇಂಥ ಮಾತುಗಳನ್ನು ಕೇಳುತ್ತಲೇ ಬಂದ ನಮ್ರತಾ, ಬಿಗ್‌ಬಾಸ್‌ ಮನೆಯಲ್ಲಿ ಹದಿನೈದು ವಾರಗಳನ್ನು ಉಳಿದುಕೊಂಡಿರುವುದೇ ಈ ಎಲ್ಲವಕ್ಕೂ ಉತ್ತರದಂತಿತ್ತು.

    ಈ ಸೀಸನ್‌ನಲ್ಲಿ ಹಲವು ಏಳುಬೀಳುಗಳನ್ನು ಹಾದು ಅಂತಿಮ ಹಂತಕ್ಕೆ ಒಂದೇ ಹೆಜ್ಜೆ ಉಳಿದಿರುವಾಗ ನಮ್ರತಾ ಮನೆಯಿಂದ ಹೊರಬಿದ್ದಿದ್ದಾರೆ. ಕೊನೆಕೊನೆಯ ದಿನಗಳಲ್ಲಿ ಅವರ ಆಟದ ವೈಖರಿಯನ್ನು ಕಂಡು ಹಿಂದೆ ಜರಿದವರೇ ಅವರನ್ನು ಹೊಗಳಿದ್ದು ಅವರ ಸಾಮರ್ಥ್ಯಕ್ಕೆ ಸಾಕ್ಷಿ. ಅವರ ಜರ್ನಿಯ JioCinemaದಲ್ಲಿ ಕಂಡ ಒಂದು ಕಿರುನೋಟ ಇಲ್ಲಿದೆ. ಜಿಯೊ ಸಿನಿಮಾ ಫನ್‌ ಫ್ರೈಡೆ ಟಾಸ್ಕ್‌ಗಳಲ್ಲಿ ನಮ್ರತಾ ಅವರ ಕಾಂಟ್ರಿಬ್ಯೂಷನ್ ದೊಡ್ಡದಿದೆ. ‘ಹೂಂ ಅಂತಿಯಾ ಊಹೂಂ’ ಅಂತಿಯಾ ಟಾಸ್ಕ್‌ನಲ್ಲಿ ಆನೆಗೆ ನಿಖರವಾಗಿ ಬಾಲ ಬಿಡಿಸುವುದರ ಮೂಲಕ ಅವರು ಗಮನಸೆಳೆದಿದ್ದರು. ಗೇಮ್‌ ಆಡುವುದು, ಜೊತೆಗೆ ಆಡುವ ಆಟಗಾರರಿಗೆ ಪ್ರೋತ್ಸಾಹಿಸುವುದು ಈ ಎರಡರಲ್ಲಿಯೂ ನಮ್ರತಾ ಅವರದ್ದು ಎತ್ತಿದ ಕೈ. ‘ಹುಡುಕಿ ತಂದವರೇ ಮಹಾಶೂರ’ ಟಾಸ್ಕ್‌ನಲ್ಲಿ ಅವರು ತೋರಿದ ಚಾಕಚಕ್ಯತೆ ಅವರ ತಂಡಕ್ಕೆ ದೊಡ್ಡ ಬಲ ತಂದಿತ್ತಿತ್ತು.

    ತನಿಷಾ ಜೊತೆಗೆ ಕ್ಲಾಶ್‌

    ಈ ಸೀಸನ್‌ನ ಆರಂಭದ ದಿನಗಳಲ್ಲಿ ನಮ್ರತಾ ವಿನಯ್ ಮತ್ತು ಇಶಾನಿ ಅವರನ್ನು ಸಾಕಷ್ಟು ಹಚ್ಚಿಕೊಂಡಿದ್ದರು. ಅದರಲ್ಲಿಯೂ ವಿನಯ್‌ ಅವರ ಜೊತೆಗಿನ ಅವರ ಬಾಂಧವ್ಯ ಕೊನೆಯ ದಿನದವರೆಗೂ ಕಿಂಚಿತ್ ಊನಗೊಳ್ಳದೆ ಬೆಳೆದುಕೊಂಡು ಬಂದಿತ್ತು. ಕ್ರಿಕೆಟ್‌ ಟಾಸ್ಕ್‌ನಲ್ಲಿ ತನಿಷಾ ಜೊತೆಗೆ ನಡೆದ ಮಾತಿನ ಚಕಮಕಿ ನಮ್ರತಾ ಅವರ ವ್ಯಕ್ತಿತ್ವದ ಮತ್ತೊಂದು ಸ್ಟ್ರಾಂಗ್ ಆಯಾಮವನ್ನು ಜನರೆದುರು ತೆರೆದಿಟ್ಟಿತ್ತು. ಹಾಗೆಯೇ ‘ಹಳ್ಳಿಮನೆ’ ಟಾಸ್ಕ್‌ನಲ್ಲಿಯೂ ತನಿಷಾ ಜೊತೆಗೆ ನಮ್ರತಾ ಮಾತಿನ ಚಕಮಕಿ ಜೋರಾಗಿಯೇ ನಡೆದಿತ್ತು. ಈ ಚಕಮಕಿ ಬೆಂಕಿಯಾಗಿ ಹೊತ್ತಿಕೊಂಡು ಮನೆಯ ನೆಮ್ಮದಿಯನ್ನೇ ಕೆಡಿಸಿದ್ದು, ಬಿಗ್‌ಬಾಸ್ ಮನೆಯ ಆಚೆಗೂ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಸಂಗೀತಾ ಮತ್ತು ತನಿಷಾ ಜೊತೆಗೆ ಅಂದು ಹುಟ್ಟಿಕೊಂಡಿದ್ದ ಭಿನ್ನಾಭಿಪ್ರಾಯದ ಕಿಡಿ ಆರಲು ಸಾಕಷ್ಟು ದಿನಗಳನ್ನೇ ತೆಗೆದುಕೊಂಡಿತು. ತನಿಷಾ ಮನೆಯಿಂದ ಹೊರಗೆ ಹೋಗುವ ಹೊತ್ತಿನಲ್ಲಿಯೂ ನಮ್ರತಾ ಅವರನ್ನೇ ನಾಮಿನೇಟ್ ಮಾಡಿದ್ದು ಇದಕ್ಕೊಂದು ಉದಾಹರಣೆ. ಆದರೆ ಸಂಗಿತಾ ಜೊತೆಗಿನ ಅವರ ಹಳಸಿದ್ದ ಸಂಬಂಧ ಕೊನೆದಿನಗಳಲ್ಲಿ ಸರಿಹೋಗಿತ್ತು. ನಮ್ರತಾ ಹಲವು ಸಲ ಕುಗ್ಗಿದಾಗ ಸಂಗೀತಾ ಹೆಗಲೆಣೆಯಾಗಿ ನಿಂತು ಸಂತೈಸಿದ್ದರು.

    ಸ್ನೇಹಿತ್ ಜೊತೆಗಿನ ಮಧುರ ಬಾಂಧವ್ಯ

    ಈ ಸೀಸನ್‌ನಲ್ಲಿ ನಮ್ರತಾ ನಂತರ ಮನೆಯೊಳಗೆ ಹೊಕ್ಕಿದ್ದು ಸ್ನೇಹಿತ್‌. ಮನೆಯೊಳಗೆ ಪರಸ್ಪರ ಎಲ್ಲರಿಗಿಂತ ಮೊದಲು ಮೀಟ್ ಆಗಿದ್ದ ಅವರ ನಡುವಿನ ಬಾಂಧವ್ಯ ನಂತರದ ದಿನಗಳಲ್ಲಿಯೂ ಮುಂದುವರಿದಿತ್ತು. ಅದರಲ್ಲಿಯೂ ಸ್ನೇಹಿತ್ ಅವರಂತೂ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ, ‘ನಿಮ್ಮ ಬಗ್ಗೆ ನನಗೆ ಸೀರಿಯಸ್‌ ಆಗಿ ಒಲವಿದೆ’ ಎಂಬರ್ಥದ ಮಾತುಗಳನ್ನು ಆಡಿಯೂ ಇದ್ದರು. ಸದಾ ಕಾಲ ನಮ್ರತಾ ಹಿಂದೆ ಸುತ್ತುತ್ತ, ಸಮಯ ಸಿಕ್ಕಾಗೆಲ್ಲ ಅವರನ್ನು ಹೊಗಳುತ್ತ, ಅವರಿಗೆ ಸಹಾಯ ಮಾಡುತ್ತ ಕೆಲವೊಮ್ಮೆ ಕಿರಿಕಿರಿಯಾಗುಷ್ಟು ಜೊತೆಗಿದ್ದರು ಸ್ನೇಹಿತ್. ನಮ್ರತಾ ಮಾತ್ರ ಅವರನ್ನು ತಮಾಷೆಯಾಗಿಯೇ ನೋಡುತ್ತ, ಅವರ ಮಾತಿಗೆಲ್ಲ ನಗುನಗುತ್ತಲೇ ಹಾರಿಕೆಯ ಉತ್ತರ ನೀಡುತ್ತಿದ್ದರು.

     

    ತಾವು ಎಲಿಮಿನೇಟ್ ಆಗುವ ವಾರದಲ್ಲಿ ಪಡೆದ ವಿಶೇಷ ಅಧಿಕಾರವನ್ನೂ ಸ್ನೇಹಿತ್, ನಮ್ರತಾ ಅವರನ್ನು ಇಂಪ್ರೆಸ್ ಮಾಡುವ ರೀತಿಯಲ್ಲಿಯೇ ಉಪಯೋಗಿಸಿದ್ದು ಮನೆಯ ಉಳಿದವರ ಅಸಮಧಾನಕ್ಕೂ ಕಾರಣವಾಗಿತ್ತು. ಆದರೆ ಸ್ನೇಹಿತ್ ಎಲಿಮಿನೇಟ್ ಆಗುವ ಸುದ್ದಿ ಕೇಳುತ್ತಿದ್ದ ಹಾಗೆಯೇ ನಮ್ರತಾ ಬಿಕ್ಕಿ ಬಿಕ್ಕಿ ಅತ್ತಿದ್ದರು. ಹೋಗುವಾಗ ‘ಇನ್ನು ಮೇಲೆ ನೀವು ನಿಮಗೊಬ್ಬರಿಗೆ ಮಾತ್ರವಲ್ಲ, ನನ್ನ ಪರವಾಗಿಯೂ ಆಡುತ್ತಿದ್ದೀರಿ. ಆಡಿ ಗೆದ್ದು ಬನ್ನಿ’ ಎಂದು ಹೇಳಿಯೇ ಸ್ನೇಹಿತ್ ಹೊರಗೆ ಹೋಗಿದ್ದರು. ಸ್ನೇಹಿತ್ ಅವರ ನೆನಪಿಗಾಗಿ ಅವರು ಕಾಫಿ ಕುಡಿಯುತ್ತಿದ್ದ ಕಪ್ ಅನ್ನು ನಮ್ರತಾ ಉಳಿಸಿಕೊಂಡಿದ್ದರು. ಅಲ್ಲದೆ, ಮನೆಯಲ್ಲಿದ್ದಾಗ ಅವರ ಜೊತೆಗೆ ನಡೆದುಕೊಂಡು ರೀತಿಯ ಬಗ್ಗೆ ಪಶ್ಚಾತ್ತಾಪದಿಂದ ಮಾತಾಡಿದ್ದರು. ತಾವು ಕ್ಯಾಪ್ಟನ್ ಆದಾಗಲೂ ಅದನ್ನು ಸ್ನೇಹಿತ್‌ ಅವರಿಗೆ ಅರ್ಪಿಸಿದ್ದರು.

  • ಸುಟ್ಟು ಪುಡಿ ಪುಡಿಯಾಗಿ, ಬೂದಿನೂ ಸಿಗದಿರುವಷ್ಟು ಕ್ರೂರಿ ಆಗಿಬಿಡ್ತೀನಿ- ಕಾರ್ತಿಕ್‌ಗೆ ತನಿಷಾ ವಾರ್ನಿಂಗ್

    ಸುಟ್ಟು ಪುಡಿ ಪುಡಿಯಾಗಿ, ಬೂದಿನೂ ಸಿಗದಿರುವಷ್ಟು ಕ್ರೂರಿ ಆಗಿಬಿಡ್ತೀನಿ- ಕಾರ್ತಿಕ್‌ಗೆ ತನಿಷಾ ವಾರ್ನಿಂಗ್

    ಸಂಕ್ರಾಂತಿ ಸಂಭ್ರಮಕ್ಕೆ ನೋ ಎಲಿಮಿನೇಷನ್ ಸಿಹಿ ಕೊಟ್ಟಿರುವ ಬಿಗ್‌ಬಾಸ್, ಹೊಸ ವಾರಕ್ಕೆ ಸ್ಪರ್ಧಿಗಳಿಗೆ ಹೊಸ ಹೊಸ ಟಾಸ್ಕ್‌ಗಳನ್ನು ನೀಡುತ್ತಿದ್ದಾರೆ. ಸದಸ್ಯರ ನಡುವಿನ ಸ್ಪರ್ಧೆಯ ತುರುಸನ್ನು ಹೆಚ್ಚಿಸುವ ಬೆಂಕಿ ಚಟುವಟಿಕೆಯೊಂದು ಮನೆಯೊಳಗೆ ನಡೆದಿದೆ. ಜಿಯೋ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಅದರ ಝಲಕ್ ತೋರಿಸಲಾಗಿದೆ. ಇದನ್ನೂ ಓದಿ:ದೈವ ಸನ್ನಿಧಿಯಲ್ಲಿ ರಿಷಬ್ ಶೆಟ್ಟಿ- ಕೋಲದ ವಿಡಿಯೋ ಹಂಚಿಕೊಂಡ ‘ಕಾಂತಾರ’ ನಟ

    ಈ ವಾರದ ನಾಮಿನೇಷನ್‌ನಲ್ಲಿ ನಿಮ್ಮೊಳಗಿರುವ ಗೆಲುವಿನ ಕಿಚ್ಚಿಗೆ ಇಬ್ಬರು ಸದಸ್ಯರು ಬಲಿಯಾಗಬೇಕು ಎಂದು ಹೇಳಿದ್ದಾರೆ. ಎದುರಿಗೆ ಧಗದಹಿಸಿ ಉರಿಯುತ್ತಿರುವ ಬೆಂಕಿಗೆ ತಾವು ಇಚ್ಛಿಸಿರುವ ಇಬ್ಬರು ಸದಸ್ಯರ ಫೊಟೊಗಳನ್ನು ಹಾಕಬೇಕು. ಮನೆಯೊಳಗೇ ರೂಪುಗೊಂಡಿರುವ ಬಾಂಧವ್ಯವೆಲ್ಲವೂ ಈ ಬೆಂಕಿಯಲ್ಲಿ ಹಾದು ಬಣ್ಣ ಬದಲಿಸಿಕೊಳ್ಳುತ್ತಿವೆ. ಕೆಲವು ಉರಿದು ಬೂದಿಯಾಗುತ್ತಿವೆ. ಕೆಲವು ಕರಕಲಾಗುತ್ತಿವೆ. ಯಾವುದಾದರೂ ಬೆಂಕಿಯಲ್ಲಿ ಬೆಂದು ಅಪ್ಪಟ ಚಿನ್ನವಾಗಿ ಹೊರಬರಲಿವೆಯೇ ಎಂದು ಕಾದು ನೋಡಬೇಕಿದೆ.

    ಸಂಗೀತಾ(Sangeetha Sringeri), ಪ್ರತಾಪ್ ಅವರ ಫೋಟೊವನ್ನು ಬೆಂಕಿಗೆ ಎಸೆದಿದ್ದಾರೆ. ನಾನು ಇದುವರೆಗೆ ನೋಡಿರುವ ಪ್ರತಾಪ್ ಬೇರೆಯೇ, ಈಗ ನೋಡ್ತಿರೋ ಪ್ರತಾಪ್ (Prathap) ಬೇರೆಯೇ. ಹಾಗಾಗಿ ಅವರನ್ನು ನಾಮಿನೇಟ್ ಮಾಡುತ್ತೇನೆ ಎಂದು ಸಂಗೀತಾ ವಿವರಣೆ ನೀಡಿದ್ದಾರೆ. ತುಕಾಲಿ ಸಂತೋಷ್ ಮತ್ತು ತನಿಷಾ ಇಬ್ಬರೂ ಕಾರ್ತಿಕ್ ಅವರನ್ನು ನಾಮಿನೇಟ್ ಮಾಡಿದ್ದಾರೆ.

    ತನಿಷಾ, ಕಾರ್ತಿಕ್ (Karthik Mahesh) ಫೋಟೊವನ್ನು ಹರಿದು ಬೆಂಕಿಗೆ ಎಸೆದಿದ್ದಾರೆ. ಹೇಳುವಂಥ ಮಾತು ಉಳಿಸಿಕೊಳ್ಳಕ್ಕಾಗಲ್ಲ. ಹಾರ್ಟಿಗೆ ಚುಚ್ಚಿದ್ರೆ ನಾನು ಡೈರೆಕ್ಟ್ ಬೆಂಕಿಗೇ ಹಾಕ್ತೀನಿ. ಸುಟ್ಟು ಪುಡಿಪುಡಿಯಾಗಿ, ಬೂದಿನೂ ಸಿಗದಿರುವಷ್ಟು ಕ್ರೂರ ಆಗಿಬಿಡ್ತೀನಿ ಎಂದು ಕಾರ್ತಿಕ್‌ಗೆ ಖಡಕ್ಕಾಗಿ ತನಿಷಾ (Tanisha Kuppanda) ಹೇಳಿದ್ದಾರೆ. ಬಿಗ್‌ಬಾಸ್ ಷೋ ಅಂತಿಮ ಹಂತದಲ್ಲಿನ ಈ ಸಂದರ್ಭದಲ್ಲಿ ಮನೆಯೊಳಗಿನ ಸದಸ್ಯರ ನಡುವಿನ ಸ್ಪರ್ಧೆಯೂ ಅಷ್ಟೇ ತುರುಸಿನದಾಗಿರುತ್ತದೆ. ಕಳೆದ ವಾರ ಬೆಸ್ಟ್ ಪರ್ಫಾರ್ಮೆನ್ಸ್ ನೀಡಿದ್ದ ಸ್ಪರ್ಧಿಗಳೆಲ್ಲ ಈ ವಾರ ಅದನ್ನು ಮುಂದುವರಿಸುತ್ತಾರಾ? ಕಾದು ನೋಡಬೇಕು.

  • ನಾಮಿನೇಟ್ ಮಾಡೋಕೆ ಪ್ಲ್ಯಾನ್ ಮಾಡಿದ ಬಿಗ್ ಬಾಸ್

    ನಾಮಿನೇಟ್ ಮಾಡೋಕೆ ಪ್ಲ್ಯಾನ್ ಮಾಡಿದ ಬಿಗ್ ಬಾಸ್

    ಬಿಗ್‌ಬಾಸ್ (Bigg Boss Kannada) ಕನ್ನಡ ಹತ್ತನೇ ಸೀಸನ್‌ ಫೈನಲ್‌ ಹಂತಕ್ಕೆ ಇನ್ನು ಎರಡೇ ಹೆಜ್ಜೆ ಬಾಕಿ ಇದೆ. ಈ ಹಂತದಲ್ಲಿ ಮನೆಯೊಳಗೆ ಪೈಪೋಟಿ ಜೋರಾಗಿಯೇ ನಡೆಯುತ್ತಿದೆ. ಅದರ ಒಂದು ಭಾಗವಾಗಿ ನಾಮಿನೇಷನ್‌ ಚಟುವಟಿಕೆ ನಡೆದಿದೆ. ಅದರ ಝಲಕ್ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಕಾಣಿಸಿಕೊಂಡಿದೆ. ಎಲ್ಲ ಸ್ಪರ್ಧಿಗಳ ಎದೆಯ ಮೇಲೆ ಹೃದಯಾಕಾರದ ಬೋರ್ಡ್‌ ಅನ್ನು ನೇತುಹಾಕಲಾಗಿದೆ. ಸಂಗೀತಾ ಹೊರತುಪಡಿಸಿ ಎಲ್ಲ ಸ್ಪರ್ಧಿಗಳೂ ತಾವು ನಾಮಿನೇಷನ್ ಮಾಡಲು ಇಚ್ಛಿಸುವ ಇಬ್ಬರು ಸ್ಪರ್ಧಿಗಳ ಹೆಸರು ಹೇಳಿ ಅವರ ಕತ್ತಿನಲ್ಲಿ ತೂಗು ಹಾಕಿದ್ದ ಬೋರ್ಡ್‌ಗೆ ಚೂರಿ ಹಾಕಬೇಕು.

    ಈ ಚಟುವಟಿಕೆಯಲ್ಲಿ ಕಾರ್ತಿಕ್‌ ಅವರು ವರ್ತೂರು ಸಂತೋಷ್ ಮತ್ತು ತನಿಷಾ ಅವರ  ಹೆಸರನ್ನು ಸೂಚಿಸಿ ಚೂರಿ ಹಾಕಿದ್ದಾರೆ. ಪ್ರೇಕ್ಷಕರಲ್ಲಿ ನಿಜಕ್ಕೂ ಇದು ಸಖತ್ ಬೇಸರ ತರಿಸಿದೆ. ವರ್ತೂರು (Varthur) ಮತ್ತು ತನಿಷಾ (Tanisha) ಅವರನ್ನು ಲವ್ ಬರ್ಡ್ಸ್ ಎಂದು ಕರೆಯಲಾಗಿತ್ತು. ಅದೆಷ್ಟೋ ಬಾರಿ ತಮ್ಮ ತೊಡೆಯ ಮೇಲೆ ತನಿಷಾರನ್ನು ಮಲಗಿಸಿಕೊಂಡು ಪ್ರೀತಿ ತೋರಿದ್ದಾರೆ ವರ್ತೂರು. ತನಿಷಾ ಕೂಡ ವರ್ತೂರು ಮೇಲೆ ಅಷ್ಟೇ ಇಷ್ಟ ಪಟ್ಟಿದ್ದಾರೆ. ಆದರೆ, ನಾಮಿನೇಷನ್ ಟಾಸ್ಕ್ ನಲ್ಲಿ ಮಾತ್ರ ಇಬ್ಬರೂ ದುಷ್ಮನ್ ರೀತಿಯಲ್ಲಿ ಕಂಡಿದ್ದಾರೆ.

    ಮತ್ತೊಂದು ಕಡೆ ತನಿಷಾ ಅವರು ತಮ್ಮ ಸರದಿ ಬಂದಾಗ, ವರ್ತೂರು ಸಂತೋಷ್ ಅವರ ಹೆಸರನ್ನು ತೆಗೆದುಕೊಳ್ಳುತ್ತಾರೆ ಎಂದು ಅಂದಾಜಿಸಲಾಗಿತ್ತು. ಆದರೆ, ವರ್ತೂರು ಮೇಲಿನ ಪ್ರೀತಿಯನ್ನು ಹಾಗೆಯೇ ಉಳಿಸಿಕೊಂಡು ನಮ್ರತಾ ಅವರ ಹೆಸರು ಹೇಳಿದ್ದಾರೆ. ವಿನಯ್‌ ಮತ್ತು ಪ್ರತಾಪ್ ಫೈಟ್‌ನ ಪರಿಣಾಮ ಈ ಚಟುವಟಿಕೆಯಲ್ಲಿಯೂ ಕಾಣಿಸಿಕೊಂಡಿದೆ. ಅವರಿಬ್ಬರೂ ಪರಸ್ಪರ ಚೂರಿ ಹಾಕಿಕೊಂಡಿದ್ದಾರೆ. ಈ ಮೂಲಕ ನಾವಿಬ್ಬರೂ ಬದ್ಧ ವೈರಿಗಳು ಎನ್ನುವುದನ್ನು ಮತ್ತೆ ಸಾರಿದ್ದಾರೆ.

     

    ಒಟ್ಟಾರೆ ಈ ವಾರ ನಾಮಿನೇಟ್ ಆಗುವ ಸ್ಪರ್ಧಿಗಳು ಯಾರು ಯಾರು? ಅವರಲ್ಲಿ ಯಾರು ಸೇವ್ ಆಗಲಿದ್ದಾರೆ? ಯಾರು ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ವಾರಾಂತ್ಯದವರೆಗೂ ಕಾಯಲೇಬೇಕು. ಆದರೆ, ಟಾಸ್ಕ್ ನಲ್ಲಿ ಮಾತ್ರ ಬೆಂಕಿ, ಬಿರುಗಾಳಿ ಎರಡೂ ಕಾಣಿಸಿಕೊಂಡಿವೆ. ಬೆಳ್ಳಂ ಬೆಳಗ್ಗೆ ಬಿಗ್ ಬಾಸ್ ಮನೆ ಬಿಸಿಯಾಗಿದೆ. ಇದರಲ್ಲಿ ಯಾರೆಲ್ಲ ಬೆಂದು ಹೋಗುತ್ತಾರೆ ಎಂದು ಕಾದು ನೋಡಬೇಕಿದೆ.