Tag: Tamilnadu Government

  • ವಿಶ್ವ ಚೆಸ್ ಚಾಂಪಿಯನ್ ಗುಕೇಶ್‌ಗೆ ತಮಿಳುನಾಡು ಸರ್ಕಾರದಿಂದ ಸನ್ಮಾನ – 5 ಕೋಟಿ ರೂ. ಬಹುಮಾನ!

    ವಿಶ್ವ ಚೆಸ್ ಚಾಂಪಿಯನ್ ಗುಕೇಶ್‌ಗೆ ತಮಿಳುನಾಡು ಸರ್ಕಾರದಿಂದ ಸನ್ಮಾನ – 5 ಕೋಟಿ ರೂ. ಬಹುಮಾನ!

    ಚೆನ್ನೈ: ವಿಶ್ವ ಚೆಸ್ ಚಾಂಪಿಯನ್ (World Chess Champion) ಡಿ.ಗುಕೇಶ್‌ಗೆ ಇಂದು (ಡಿ.17) ತಮಿಳುನಾಡು ಸರ್ಕಾರ ಸನ್ಮಾನ ಸಮಾರಂಭ ಹಮ್ಮಿಕೊಂಡಿದ್ದು, 5 ಕೋಟಿ ರೂ. ಬಹುಮಾನ ವಿತರಣೆ ಮಾಡಲಿದೆ.

    ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ (MK Stalin) ಅವರು ಇಂದು 5 ಕೋಟಿ ರೂ. ಬಹುಮಾನ ಚೆಕ್ ಹಸ್ತಾಂತರಿಸಲಿದ್ದಾರೆ. ಅಭಿನಂದನಾ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಹಾಗೂ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ (Viswanathan Anand) ಸಹ ಭಾಗವಹಿಸಲಿದ್ದಾರೆ.ಇದನ್ನೂ ಓದಿ: ದರ್ಶನ್ ಜೊತೆ ಪವಿತ್ರಾ ಚೆನ್ನಾಗಿರುತ್ತೇನೆ ಅಂದರೆ ಇರಲಿ: ಮಾಜಿ ಪತಿ ಸಂಜಯ್ ಸಿಂಗ್

    ಈ ಕುರಿತು ಸಿಎಂ ಎಂ.ಕೆ. ಸ್ಟಾಲಿನ್ ಡಿ.ಗುಕೇಶ್ ಐತಿಹಾಸಿಕ ಸಾಧನೆ ಗುರುತಿಸಿ 5 ಕೋಟಿ ನಗದು ಬಹುಮಾನವನ್ನು ನೀಡುವುದಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು.

    ಸೋಮವಾರ (ಡಿ.16) ತವರಿಗೆ ಬಂದಿಳಿದದ ಗುಕೇಶ್ ಅವರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಅವರ ಅಭಿಮಾನಿಗಳು ಸೇರಿದಂತೆ ಇನ್ನಿತರರು ಅದ್ದೂರಿಯಾಗಿ ಸ್ವಾಗತಿಸಿದರು.

    18ರ ಹರೆಯದ ಹುಡುಗ ಗುಕೇಶ್ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ ಐತಿಹಾಸಿಕ ಸಾಧನೆ ಮಾಡಿದರು. ಕಳೆದ ವಾರ ನಡೆದ ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್ ವಿಶ್ವ್ ಚಾಂಪಿಯನ್‌ಶಿಪ್‌ನ ಕೊನೆಯ 14ನೇ ನಿರ್ಣಾಯಕ ಪಂದ್ಯದಲ್ಲಿ 6.5-6.5 ಸಮಬಲಗೊಂಡು, ಬಳಿಕ 7.5-6.5 ಅಂಕಗಳೊಂದಿಗೆ ಗುಕೇಶ್ ಗೆಲುವು ಸಾಧಿಸುವ ಮೂಲಕ ಅಮೋಘ ಪ್ರದರ್ಶನ ನೀಡಿದ್ದರು. ವಿಶ್ವನಾಥನ್ ಆನಂದ್ ನಂತರ ಚೆಸ್ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ಎರಡನೇ ಭಾರತೀಯನಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಗುಕೇಶ್ ಅವರು ಮುಂದಿನ ವರ್ಷ ನಾರ್ವೆ ಚೆಸ್ ಟೂರ್ನಮೆಂಟ್‌ನಲ್ಲಿ ವಿಶ್ವದ ಅತಿ ಹೆಚ್ಚು ಶ್ರೇಯಾಂಕದ ಆಟಗಾರ ಮ್ಯಾಗ್ನಸ್ ಕಾರ್ಲ್ಸೆನ್ ಅವರನ್ನು ಎದುರಿಸಲಿದ್ದಾರೆ.ಇದನ್ನೂ ಓದಿ: ಔತಣಕೂಟ ಮಾಡಿ ಬೆನ್ನಿಗೆ ಚಾಕು ಹಾಕೋದಲ್ಲ, ಇದ್ರಲ್ಲಿ ಬಿಎಸ್‌ವೈ ಕುತಂತ್ರ ಇದ್ದೇ ಇರುತ್ತೆ – ಯತ್ನಾಳ್ ಕಿಡಿ

  • ನಮ್ಮ ರಾಜ್ಯವನ್ನು ತಮಿಳುನಾಡಿಗೆ ಅಡ ಇಟ್ಟಿದ್ದಾರೆ; ಸರ್ಕಾರದ ವಿರುದ್ಧ ಹೆಚ್.ಡಿ ರೇವಣ್ಣ ಕಿಡಿ

    ನಮ್ಮ ರಾಜ್ಯವನ್ನು ತಮಿಳುನಾಡಿಗೆ ಅಡ ಇಟ್ಟಿದ್ದಾರೆ; ಸರ್ಕಾರದ ವಿರುದ್ಧ ಹೆಚ್.ಡಿ ರೇವಣ್ಣ ಕಿಡಿ

    ಹಾಸನ: 2024ರ ಲೋಕಸಭಾ ಚುನಾವಣಾ (Lok Sabha Elections) ದೃಷ್ಟಿಯಿಂದ ನಮ್ಮ ರಾಜ್ಯವನ್ನು ತಮಿಳುನಾಡಿಗೆ ಅಡ ಇಟ್ಟಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

    ಹಾಸನದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ (Cauvery Issue) ಸರ್ಕಾರ ಆರಂಭಿಕ ಹಂತದಲ್ಲೇ ಮುಗ್ಗರಿಸಿದೆ. ಟ್ರಿಬ್ಯೂನಲ್ (ನ್ಯಾಯಾಧಿಕರಣ) ಮುಂದೆ ನೀರಿಲ್ಲ ಅನ್ನುತ್ತಾರೆ, ಹೊರಗೆ ಬಂದು ಒಳಹರಿವು 10,000 ಕ್ಯೂಸೆಕ್ ಇದೆ ಅಂತ ಹೇಳ್ತಿದ್ದಾರೆ. CWRC ತೀರ್ಪು ಬರುವ ಮುಂಚೆಯೇ ಒಳಹರಿವಿನ ಬಗ್ಗೆ ಹೇಳ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ನಮ್ಮ ರಾಜ್ಯವನ್ನು ತಮಿಳುನಾಡಿಗೆ ಅಡ ಇಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಾಪತ್ತೆಯಾದ ಯುವಕನ ಪತ್ತೆ ಮಾಡಿದ ಸಾಕುನಾಯಿ- ಗ್ರಾಮಸ್ಥರಿಂದ ಇಬ್ಬರ ಮೆರವಣಿಗೆ

    ನೀರಾವರಿ ಸಲಹಾ ಸಮಿತಿ ಸಭೆ ಕರೆಯದೇ ತಮಿಳುನಾಡಿಗೆ ನೀರು ಹರಿಸಿದ್ದಾರೆ. ತಮಿಳುನಾಡಿನವರಿಗೆ ಕೀ ಕೊಟ್ಟು ಇವರು ಏನು ತೀರ್ಮಾನ ಮಾಡ್ತಾರೆ? ಕುಡಿಯಲು ನೀರಿಲ್ಲ ಎಂದು ಜನ ದಂಗೆ ಏಳುತ್ತಿದ್ದಾರೆ. 4 ತಿಂಗಳು ಗ್ಯಾರಂಟಿ ಕೊಡಲು ಹೋಗಿ ನೀರು ನಿರ್ವಹಣೆ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಎಲ್ಲ ಕಡೆ ಗ್ಯಾರಂಟಿ ಕೊಡಲು ಲಕ್ಷಾಂತರ ಜನರನ್ನ ಸೇರಿಸಿ ಸರ್ಕಾರದ ಹಣ ಖರ್ಚು ಮಾಡಿದ್ದಾರೆ. ಆದ್ದರಿಂದ ರಾಜ್ಯದ ಹಿತದೃಷ್ಟಿಯಿಂದ, ನೆಲ-ಜಲಕ್ಕೋಸ್ಕರ ಯಾವುದೇ ಸಂಘಟನೆ ಬಂದ್ ಮಾಡಿದ್ರು ನಮ್ಮ ಬೆಂಬಲ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ – ಸಾತೇರಿ ದೇವಿ ಮೂರ್ತಿಗೆ ಉಡಿಸಿದ ಸೀರೆ 1.06 ಲಕ್ಷ ರೂ.ಗೆ ಹರಾಜು

    ಅಲ್ಲದೇ 135 ಶಾಸಕರು ಸಾಕಾಗಲ್ಲ ಅಂತ ಕೆಲವು ಪಕ್ಷಗಳ ಮುಖಂಡರನ್ನ ಸೆಳೆಯುವಲ್ಲಿ ಕೆಲವರು ಮಗ್ನರಾಗಿದ್ದಾರೆ. ಅಧಿಕಾರ ದುರುಪಯೋಗಪಡಿಸಿಕೊಂಡು ಬೇರೆ ಪಕ್ಷದವರನ್ನು ಸೆಳೆಯುತ್ತಿದ್ದಾರೆ. ಮುಂದಿನ ಚುನಾವಣೆವರೆಗೂ ಕರ್ನಾಟಕ ಸರ್ಕಾರ, ತಮಿಳುನಾಡಿನ ಸರ್ಕಾರದ ಪಾದಕ್ಕೆ ರಾಜ್ಯವನ್ನ ಅಡ ಇಟ್ಟಿದ್ದಾರೆ. ತಮಿಳುನಾಡು ಸರ್ಕಾರ ಕರ್ನಾಟಕದಲ್ಲಿ ನೀರಿನ ವಿಚಾರದಲ್ಲಿ `ಆಪರೇಷನ್ ಐಎನ್‌ಡಿಐಎ’ ಮಾಡುತ್ತಿದೆ. ಇದರಿಂದ ಕರ್ನಾಟಕದ ರೈತರ ಮನೆ ಹಾಳಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.

    ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರ ಜೊತೆ ಸೇರಿದರೂ ನಮ್ಮ ಸಿದ್ಧಾಂತ ಬಿಡಲ್ಲ. ಕಾಂಗ್ರೆಸ್‌ನವರು ಬೇಕಾದಾಗ ನಮ್ಮ ಹತ್ರ ಕೋಮುವಾದಿ ದೂರ ಇಡಬೇಕು ಅಂತ ಬರ್ತಾರೆ. ಅಧಿಕಾರ ಬಂದ ಮೇಲೆ ನಮ್ಮನ್ನ ಯಾವ ರೀತಿ ಟ್ರೀಟ್ ಮಾಡ್ತಿದ್ದಾರೆ ಎಂದು ಸಮಯ ಬಂದಾಗ ಹೇಳ್ತಿನಿ ಎಂದು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಯಲಲಿತಾ ಜಪ್ತಿ ಆಸ್ತಿ ಹರಾಜಿಗೆ ಕೋರ್ಟ್ ಅನುಮತಿ

    ಜಯಲಲಿತಾ ಜಪ್ತಿ ಆಸ್ತಿ ಹರಾಜಿಗೆ ಕೋರ್ಟ್ ಅನುಮತಿ

    ಬೆಂಗಳೂರು: ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜಯಲಲಿತಾ (Jayalalithaa) ಅವರಿಗೆ ಸಂಬಂಧಿಸಿದ ಕೆಲ ಆಸ್ತಿಯನ್ನು ಹರಾಜು ಹಾಕಲು ಕೋರ್ಟ್ (Court) ಅನುಮತಿ ನೀಡಿದೆ.

    ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪದ ಮೇಲೆ ದಾಳಿ ಮಾಡಿ ಜಯಲಲಿತಾಗೆ ಸೇರಿದ ಸೀರೆಗಳು, ವಾಚ್ ಗಳು (Watch) ಹಾಗೂ ಚಿನ್ನಾಭರಣಗಳನ್ನ (Gold Properties) ವಶಪಡಿಸಿಕೊಳ್ಳಲಾಗಿತ್ತು. ಅವೆಲ್ಲವನ್ನೂ ಕರ್ನಾಟಕ ವಿಧಾನಸೌಧದ ಖಜಾನೆಯಲ್ಲಿ ಇರಿಸಲಾಗಿತ್ತು. ಆದರೆ ಜಯಲಲಿತಾ ಅವರು ನಿಧನರಾದ ಹಿನ್ನೆಲೆಯಲ್ಲಿ ಆ ಆಸ್ತಿಗಳನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಡುವಂತೆ ಆರ್‌ಟಿಐ ಕಾರ್ಯಕರ್ತ ಸಿಟಿ ಸಿವಿಲ್ ಕೋರ್ಟ್ (City Civil Court) ನ್ಯಾಯಾಧೀಶರಿಗೆ ಮನವಿ ಸಲ್ಲಿಸಿದ್ದರು. ಇದನ್ನೂ ಓದಿ: ವಿಕ್ಟರಿ ವೆಂಕಟೇಶ್ ನಟನೆಯ ಎಪ್ಪತ್ತೈದನೇ ಸಿನಿಮಾ ಜನವರಿ 25ಕ್ಕೆ ಅನೌನ್ಸ್

    ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯ ವಶಪಡಿಸಿಕೊಂಡ ವಸ್ತುಗಳನ್ನು ಮಾರಾಟ ಮಾಡಲು ಸೂಕ್ತವಾದ ಅಧಿಕಾರಿಯನ್ನು ನೇಮಿಸುವಂತೆ ಜೊತೆಗೆ ಬಂದ ಹಣದಲ್ಲಿ ಕರ್ನಾಟಕ ಸರ್ಕಾರ (Government Of Karnataka) ಖರ್ಚು ಮಾಡಿದ್ದ 5 ಕೋಟಿಯನ್ನು ತನ್ನಲ್ಲೇ ಇಟ್ಟುಕೊಂಡು ಉಳಿದ ಬಾಕಿ ಹಣವನ್ನು ತಮಿಳುನಾಡಿನ ಸರ್ಕಾರಕ್ಕೆ (TamilNadu Government) ನೀಡುವಂತೆ ಸೂಚನೆ ನೀಡಿದೆ. ಇದನ್ನೂ ಓದಿ: ವಿನಯ್ ರಾಜ್‌ಕುಮಾರ್‌ಗೆ ನಾಯಕಿಯಾದ `ವಿಕ್ರಮ್’ ನಟಿ ಸ್ವಾತಿಷ್ಟ ಕೃಷ್ಣನ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಜೀವ್‌ಗಾಂಧಿ ಹತ್ಯೆ ಕೇಸ್ – ರೀಲಿಸ್ ಆದ 6 ಮಂದಿಯಲ್ಲಿ ನಾಲ್ವರು ಗಡಿಪಾರು

    ರಾಜೀವ್‌ಗಾಂಧಿ ಹತ್ಯೆ ಕೇಸ್ – ರೀಲಿಸ್ ಆದ 6 ಮಂದಿಯಲ್ಲಿ ನಾಲ್ವರು ಗಡಿಪಾರು

    ನವದೆಹಲಿ/ಚೆನ್ನೈ: ರಾಜೀವ್‌ಗಾಂಧಿ ಗಾಂಧಿ ಹತ್ಯೆ (Rajiv Gandhi Murder Case) ಪ್ರಕರಣದಲ್ಲಿ ದೋಷಿಗಳಾಗಿದ್ದ 6 ಮಂದಿ 31 ವರ್ಷಗಳ ಜೈಲುವಾಸದ ನಂತರ ಬಿಡುಗಡೆಯಾಗಿದ್ದಾರೆ. ಆದರೆ ಬಿಡುಗಡೆಯಾದ 6 ಮಂದಿ ಪೈಕಿ ನಾಲ್ವರು ಗಡಿಪಾರು ಸಮಸ್ಯೆ ಎದುರಿಸುತ್ತಿದ್ದಾರೆ. ಅವರು ಮುಂದಿನ 10 ದಿನಗಳಲ್ಲಿ ಆದೇಶ ಪಡೆದು ಗಡಿಪಾರು ಆಗಲಿದ್ದಾರೆ.

    ಸುಪ್ರೀಂ ಕೋರ್ಟ್ (Supreme Court) ಆರೋಪಿಗಳ ಶಿಕ್ಷೆಯನ್ನು ಕಡಿತಗೊಳಿಸಿದ್ದರಿಂದಾಗಿ ನವೆಂಬರ್ 12ರಂದು ದೋಷಿಗಳನ್ನೂ ಜೈಲಿನಿಂದ ಬಿಡುಗಡೆ ಮಾಡಲಾಯಿತು. ಆ ಬಳಿಕ ತಿರುಚ್ಚಿ ವಿಶೇಷ ಶಿಬಿರದಲ್ಲಿ (Trichy Special Camp) ಗಡಿಪಾರು ಮಾಡಲು ನಿರ್ಧರಿಸಿದ್ದು, ಅವರು ಹೋಗಲು ಬಯಸುವ ದೇಶಗಳಿಗೆ ಕಳುಹಿಸಿಕೊಡಲು ನಿರ್ಣಯ ಕೈಗೊಳ್ಳಲಾಗಿದೆ. ವಿಶೇಷ ಶಿಬಿರ ಅಂದರೆ, ದೇಶದ ನೆಲದಲ್ಲಿ ಇದ್ದುಕೊಂಡೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ಪ್ರಜೆಗಳನ್ನು ಗಡಿಪಾರು ಮಾಡುವವರೆಗೆ ಇರಿಸುವ ಸ್ಥಳ. ಇದನ್ನೂ ಓದಿ: ರಾಜೀವ್‌ಗಾಂಧಿ ಹತ್ಯೆ – ಜೀವಾವಧಿ ಶಿಕ್ಷೆಗೊಳಗಾದ 6 ಮಂದಿಯ ಬಿಡುಗಡೆಗೆ ಸುಪ್ರೀಂ ಆದೇಶ

    ರಾಬರ್ಟ್ ಪಾಯಸ್ ಉಪವಾಸ ಸತ್ಯಾಗ್ರಹ ನಡೆಸಲು ಯೋಜನೆ ರೂಪಿಸಿದ್ದರು. ಈ ವೇಳೆ ವಿಶೇಷ ಶಿಬಿರಕ್ಕೇ ಭೇಟಿ ನೀಡಿದ ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್ ಸಮಸ್ಯೆ ಬಗೆಹರಿಸಿದ್ದಾರೆ. ಬಳಿಕ ಮಾತನಾಡಿರುವ ಅವರು, ವಿದೇಶಗಳಲ್ಲಿ ಪೌರತ್ವ ದೃಢೀಕರಿಸಿದ ನಂತರ ಗಡಿಪಾರು ಮಾಡಲಾಗುತ್ತದೆ. ಅವರನ್ನು ಭೇಟಿ ಮಾಡಲು ರಕ್ತಸಂಬಂಧಿಗಳಿಗೆ ಮಾತ್ರ ಅವಕಾಶವಿರಲಿದೆ. ಆದರೆ ದೋಷಿಗಳಾಗಿದ್ದವರು ಗಡಿಪಾರು ವೇಳೆ ಮೊಬೈಲ್‌ಫೋನ್‌ಗಳನ್ನು ಕೊಂಡೊಯ್ಯಲು ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.

    ಸಂತನ್ ಶ್ರೀಲಂಕಾಗೆ (SriLanka) ಹೋಗುವುದಾಗಿ ಹೇಳಿದ್ದು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಿದೇಶಿ ಪ್ರಾದೇಶಿಕ ನೋಂದಣಾಧಿಕಾರಿಗಳು ಶ್ರೀಲಂಕಾ ರಾಯಭಾರ ಕಚೇರಿಗೆ (Sri Lankan Embassy) ಮಾಹಿತಿ ನೀಡಿದ್ದಾರೆ. ಅವರು ತಮ್ಮ ಪೌರತ್ವ (Citizenship) ದೃಢೀಕರಿಸಿದ ನಂತರ, ನಾವು ಸಂತನ್‌ನನ್ನು ಗಡೀಪಾರು ಮಾಡುತ್ತೇವೆ. 10 ದಿನಗಳಲ್ಲಿ ಗಡಿಪಾರು ಆದೇಶ ಸಿಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಗಡಿಪಾರಾಗುತ್ತಿರುವ ನಳಿನಿ ಮುರುಗನ್ ತಮ್ಮ ಮಗಳು ಹರಿತಾ ವಾಸಿಸುವ ದೇಶಕ್ಕೆ ಕಳುಹಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ಸಂತನ್ ಶ್ರೀಲಂಕಾಗೆ ಹೋಗಲು ನಿರ್ಧರಿಸಿದ್ದಾರೆ. ಉಳಿದ ಇಬ್ಬರು ಇನ್ನೂ ನಿರ್ಧರಿಸಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜೀವ್‌ ಗಾಂಧಿ ಹತ್ಯೆ ಕೇಸ್‌ – 30 ವರ್ಷಗಳ ನಂತರ ನಳಿನಿ ಶ್ರೀಹರನ್‌ ಸೇರಿ 3 ಅಪರಾಧಿಗಳು ರಿಲೀಸ್‌

    ಏನಿದು ಪ್ರಕರಣ?
    1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆ ಪ್ರಕರಣದಲ್ಲಿ ನಳಿನಿ ಅವರಲ್ಲದೆ, ಶ್ರೀಹರನ್, ಸಂತನ್, ಮುರುಗನ್, ರಾಬರ್ಟ್ ಪಾಯಸ್ ಮತ್ತು ಆರ್ಪಿ ರವಿಚಂದ್ರನ್ ಅವರು ಜೈಲು ಪಾಲಾಗಿದ್ದರು. `ಅಪರಾಧಿಗಳು ತೃಪ್ತಿದಾಯಕ ನಡವಳಿಕೆ ತೋರಿದ್ದಾರೆ. ಪದವಿಗಳನ್ನು ಪಡೆದಿದ್ದು, ಪುಸ್ತಕಗಳನ್ನು ಬರೆದಿದ್ದಾರೆ. ಸಮಾಜ ಸೇವೆಯಲ್ಲಿ ಭಾಗವಹಿಸಿದ್ದಾರೆ’ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಹತ್ಯೆ ಪ್ರಕರಣದಲ್ಲಿ ದೋಷಿಗಳಾಗಿದ್ದ 6 ಮಂದಿಯನ್ನು ಬಿಡುಗಡೆಗೊಳಿಸಿದೆ.

    ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ತಮಿಳುನಾಡು ಕ್ಯಾಬಿನೆಟ್ 2018 ರಲ್ಲಿ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ಈ ಶಿಫಾರಸಿಗೆ ರಾಜ್ಯಪಾಲರು ಬದ್ಧರಾಗಿದ್ದಾರೆ ಎಂದು ನ್ಯಾಯಾಲಯ ಗಮನಿಸಿತ್ತು. ಪ್ರಸಕ್ತ ವರ್ಷದ ಮೇ ತಿಂಗಳಲ್ಲಿ, ಏಳನೇ ಅಪರಾಧಿ ಪೆರಾರಿವಾಲನ್‌ನನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ತನ್ನ ಅಸಾಮಾನ್ಯ ಅಧಿಕಾರವನ್ನು ಬಳಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಮದುವೆಯಾಗ್ಬೇಕು, ಮಳೆಯಿಂದ ನೀರುತುಂಬಿದ ದೇವಸ್ಥಾನ ಕ್ಲೀನ್ ಮಾಡಿಸಿ – ವಧು, ವರರ ಮನವಿ

    ಮದುವೆಯಾಗ್ಬೇಕು, ಮಳೆಯಿಂದ ನೀರುತುಂಬಿದ ದೇವಸ್ಥಾನ ಕ್ಲೀನ್ ಮಾಡಿಸಿ – ವಧು, ವರರ ಮನವಿ

    ಚೆನ್ನೈ: ಕೆಲ ದಿನಗಳಿಂದ ತಮಿಳುನಾಡಿನಲ್ಲಿ (Tamil Nadu)ಮಳೆಯ ಅಬ್ಬರ (Heavy Rain) ಜೋರಾಗಿದ್ದು ದೇವಸ್ಥಾನಗಳಿಗೂ ನೀರು ನುಗ್ಗಿದೆ. ಇದರಿಂದ ದೇವಸ್ಥಾನದಲ್ಲಿ (Temple) ನಡೆಯಬೇಕಿದ್ದ ಎಷ್ಟೋ ಮದುವೆಗಳು ವಿಳಂಬವಾಗಿದ್ದು, ವಧುವರರು ಸರ್ಕಾರದ ಮೊರೆ ಹೋಗಿದ್ದಾರೆ.

    ಪುಲಿಯನ್‌ತೋಪ್‌ನ ಆಂಜಿನೇಯರ್ ದೇವಸ್ಥಾನದಲ್ಲಿ (Anjineyar Temple) ನಡೆಯಬೇಕಿದ್ದ 5 ಮದುವೆಗಳು ಮಳೆಯಿಂದಾಗಿ ವಿಳಂಬವಾಗಿವೆ. ಶುಕ್ರವಾರ ಭಾರೀ ಮಳೆಯ ನಡುವೆಯೂ ದೇವಸ್ಥಾನಕ್ಕೆ ಬಂದ ನವ ಜೋಡಿ ಮಳೆಯಲ್ಲೂ ಹರಸಾಹಸ ನಡೆಸಿ ಮದುವೆಯಾಗಿದೆ. ಬಳಿಕ ದೇವಸ್ಥಾನ ಜಲಾವೃತವಾಗಿದೆ, ನಾವೂ ಒದ್ದೆಯಾಗಿದ್ದೇವೆ, ದೇವಸ್ಥಾನದ ಆವರಣ ಮತ್ತು ಇತರ ಸಾರ್ವಜನಿಕ ಪ್ರದೇಶಗಳನ್ನು ದುರಸ್ತಿಗೊಳಿಸುವಂತೆ ಸರ್ಕಾರಕ್ಕೆ (Tamilnadu Government) ಮನವಿ ಮಾಡುತ್ತೇನೆ ಎಂದು ಬೇಡಿಕೊಂಡಿದ್ದಾರೆ. ಇದನ್ನೂ ಓದಿ: ಮಾಡೆಲ್ ಆಗಲು ಪೊಲೀಸ್ ಉದ್ಯೋಗ ಬಿಡಲ್ಲ ಎಂದ ವಿಶ್ವಸುಂದರಿ ಡಯಾನಾ

    ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಶಾಲಾ ಕಾಲೇಜುಗಳನ್ನು (Schools, College) ಬಂದ್ ಮಾಡಲಾಗಿದೆ. ಚೆನ್ನೈನ (Chennai) ತಿರುವಲ್ಲೂರ್, ಕಾಂಚಿಪುರಂ, ರಾಣಿಪೇಟ್ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ಹತ್ಯೆಯ ಭಯ – ಜಿ20 ಶೃಂಗಸಭೆಯಲ್ಲಿ ಭಾಗವಹಿಸಲ್ಲ ಎಂದ ಪುಟಿನ್‌

    ಈಗಾಗಲೇ ರಾಜ್ಯದಲ್ಲಿ ಮಳೆಗೆ ಮೂರು ಜೀವಗಳು ಬಲಿಯಾಗಿದೆ. ಹಲವು ಬಡಾವಣೆಗಳಿಗೆ ನೀರು ನುಗ್ಗಿ, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಕೆಲವು ಜಿಲ್ಲೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜೀವ್‌ಗಾಂಧಿ ಹತ್ಯೆ –  ಜೀವಾವಧಿ ಶಿಕ್ಷೆಗೊಳಗಾದ  6 ಮಂದಿಯ ಬಿಡುಗಡೆಗೆ ಸುಪ್ರೀಂ ಆದೇಶ

    ರಾಜೀವ್‌ಗಾಂಧಿ ಹತ್ಯೆ – ಜೀವಾವಧಿ ಶಿಕ್ಷೆಗೊಳಗಾದ 6 ಮಂದಿಯ ಬಿಡುಗಡೆಗೆ ಸುಪ್ರೀಂ ಆದೇಶ

    ನವದೆಹಲಿ: ಭಾರತದ ಮಾಜಿ ಪ್ರಧಾನಿ (Prime Minister Of India) ರಾಜೀವ್ ಗಾಂಧಿ (Rajiv Gandhi) ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್ (Nalini Sriharan) ಸೇರಿದಂತೆ 6 ಮಂದಿಯನ್ನು ಬಿಡುಗಡೆಗೊಳಿಸುವಂತೆ ಸುಪ್ರೀಂ ಕೋರ್ಟ್ (Supreme Court) ಶುಕ್ರವಾರ ಆದೇಶಿಸಿದೆ.

    ಈ ಹಿಂದೆ ತಮಿಳುನಾಡು ಸರ್ಕಾರ (Tamil Nadu Government) ದೋಷಿಗಳ ಬಿಡುಗಡೆಗೆ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು ಎಂಬ ವಿಚಾರವನ್ನು ಸುಪ್ರೀಂ ಕೋರ್ಟ್ ತನ್ನ ಆದೇಶದ ವೇಳೆ ಗಮನಿಸಿದೆ. ಮೇ ತಿಂಗಳಲ್ಲಿ ಮತ್ತೊಬ್ಬ ದೋಷಿ ಪೆರಾರಿವಾಲನ್‌ನನ್ನು ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿತ್ತು. ಇದನ್ನೂ ಓದಿ: 2014ಕ್ಕೂ ಮೊದಲು 70, ಈಗ 140 ವಿಮಾನ ನಿಲ್ದಾಣ: ಬೆಂಗಳೂರನ್ನು ಹಾಡಿ ಹೊಗಳಿದ ಮೋದಿ

    ರಾಜೀವ್ ಗಾಂಧಿಯವರು ಮೇ 21, 1991 ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ತಮಿಳು ಟೈಗರ್ಸ್ ಎಲ್‌ಟಿಟಿಇ (TamilTigers LTTE) ಗುಂಪಿನ ಮಹಿಳಾ ಆತ್ಮಾಹುತಿ ಬಾಂಬರ್‌ನಿಂದ ಹತ್ಯೆಗೀಡಾಗಿದ್ದರು. ಈ ಪ್ರಕರಣದಲ್ಲಿ ನಳಿನಿ ಅಲ್ಲದೆ ಶ್ರೀಹರನ್, ಸಂತನ್, ಮುರುಗನ್, ರಾಬರ್ಟ್ ಪಾಯಸ್ ಹಾಗೂ ರವಿಚಂದ್ರನ್ ಜೈಲು ಪಾಲಾಗಿದ್ದರು.

    Live Tv
    [brid partner=56869869 player=32851 video=960834 autoplay=true]