Tag: Tamilaga Vettri Kazhagam

  • ಡಿಎಂಕೆ, ಬಿಜೆಪಿ ಯಾವುದೇ ಪಕ್ಷದ ಜೊತೆಗೂ ಮೈತ್ರಿ ಮಾಡಿಕೊಳ್ಳಲ್ಲ – ಟಿವಿಕೆ ವಿಜಯ್ ಘೋಷಣೆ

    ಡಿಎಂಕೆ, ಬಿಜೆಪಿ ಯಾವುದೇ ಪಕ್ಷದ ಜೊತೆಗೂ ಮೈತ್ರಿ ಮಾಡಿಕೊಳ್ಳಲ್ಲ – ಟಿವಿಕೆ ವಿಜಯ್ ಘೋಷಣೆ

    ಚೆನ್ನೈ; ಟಿವಿಕೆ (TVK) ಪಕ್ಷ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳಲ್ಲ, ಡಿಎಂಕೆ (DMK) ಹಾಗೂ ಬಿಜೆಪಿ (DMK) ಯಾವ ಪಕ್ಷದ ಜೊತೆಗೂ ಕೈಜೋಡಿಸಲ್ಲ ಎಂದು ನಟ, ರಾಜಕಾರಣಿ ತಮಿಳಿಗ ವೆಟ್ರಿ ಕಳಗಂ (Tamilaga Vettri Kazhagam) ಪಕ್ಷದ ಮುಖ್ಯಸ್ಥ ವಿಜಯ್ (Vijay) ಘೋಷಣೆ ಮಾಡಿದ್ದಾರೆ.

    ಮಧುರೈ (Madhurai) ಜಿಲ್ಲೆಯ ಪರಪತಿಯಲ್ಲಿ ತಮಿಳಗ ವೆಟ್ರಿ ಕಳಗಂ ಪಕ್ಷದ ಎರಡನೇ ರಾಜ್ಯಮಟ್ಟದ ಸಮ್ಮೇಳನದಲ್ಲಿ ಮಾತನಾಡಿದರು. 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಪಕ್ಷ ಡಿಎಂಕೆ ಹಾಗೂ ಬಿಜೆಪಿ ನಡುವೆ ಹೋರಾಡಲಿದೆ. ಡಿಎಂಕೆ ನಮಗೆ ರಾಜಕೀಯ ಬದ್ದ ವೈರಿ, ಬಿಜೆಪಿಯ ಜೊತೆಗೂ ಕೈಜೋಡಿಸಲ್ಲ. ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳಲ್ಲ ಎಂದು ತಿಳಿಸಿದ್ದಾರೆ.ಇದನ್ನೂ ಓದಿ:ದೆಹಲಿ ಸಿಎಂಗೆ ಕಪಾಳಮೋಕ್ಷ ಕೇಸ್ – ಆರೋಪಿಯನ್ನು 5 ದಿನ ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್

    ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಮಾತನಾಡಿದ ಅವರು, ತಮಿಳುನಾಡಿನಲ್ಲಿರುವ 234 ಕ್ಷೇತ್ರಗಳಲ್ಲಿಯೂ ಟಿವಿಕೆ ಪಕ್ಷ ಸ್ಪರ್ಧಿಸಲಿದೆ. ನಾನು ಪೂರ್ವ ಮಧುರೈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದಿದ್ದಾರೆ.

    ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ. ಡಿಎಂಕೆ ಸರ್ಕಾರವು ಚುನಾವಣೆ ಪೂರ್ವದಲ್ಲಿ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಬುಧವಾರದಿಂದ (ಆ.20) ನಡೆಯುತ್ತಿರುವ ಈ ಸಮಾವೇಶದಲ್ಲಿ ಮೊದಲ ದಿನವೇ ಕಾಲ್ತುಳಿತ ಉಂಟಾಗಿ, ಓರ್ವ ಸಾವನ್ನಪ್ಪಿದ್ದಾನೆ. ಜೊತೆಗೆ ಕ್ರೇನ್ ಕಟ್ಟಾಗಿ ಧ್ವಜಸ್ತಂಭ ಬಿದ್ದು, ಕಾರೊಂದು ಜಖಂ ಆಗಿದೆ.ಇದನ್ನೂ ಓದಿ: ಜಿಎಸ್‌ಟಿ ಪರಿಷ್ಕರಣೆ – 12%, 28% ಸ್ಲ್ಯಾಬ್‌ ತೆಗೆಯಲು ಸಚಿವರ ಸಮಿತಿ ಒಪ್ಪಿಗೆ

  • ಒಂದು ರಾಷ್ಟ್ರ, ಒಂದು ಚುನಾವಣೆಗೆ ನಟ ವಿಜಯ್‌ ದಳಪತಿ ಪಕ್ಷ ವಿರೋಧ

    ಒಂದು ರಾಷ್ಟ್ರ, ಒಂದು ಚುನಾವಣೆಗೆ ನಟ ವಿಜಯ್‌ ದಳಪತಿ ಪಕ್ಷ ವಿರೋಧ

    – ವಕ್ಫ್‌ ತಿದ್ದುಪಡಿ ಮಸೂದೆ ಜಾರಿಗೆ ಮುಂದಾದ ಬಿಜೆಪಿ, ಕೇಂದ್ರದ ವಿರುದ್ಧ ವಾಗ್ದಾಳಿ

    ಟ ಕಮ್ ರಾಜಕಾರಣಿ ವಿಜಯ್ ದಳಪತಿ (Vijay Thalapathy) ಅವರ ಪಕ್ಷ ತಮಿಳಗ ವೆಟ್ರಿ ಕಳಗಂ (TVK) ಬಿಜೆಪಿಯ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಯೋಜನೆ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದೆ.

    ‘ಒಂದು ರಾಷ್ಟ್ರ, ಒಂದು ಚುನಾವಣೆ’ (One Nation, One Election) ಯೋಜನೆಯು ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆ ತತ್ವಗಳಿಗೆ ವಿರುದ್ಧವಾಗಿದೆ ಎಂದು ಟಿವಿಕೆ ನಿರ್ಣಯದಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಜಮ್ಮು & ಕಾಶ್ಮೀರದ ಪ್ರವಾಸೋದ್ಯಮ ಕಚೇರಿ ಬಳಿ ಗ್ರೆನೇಡ್ ದಾಳಿ – 10 ಮಂದಿಗೆ ಗಾಯ

    ಪಕ್ಷವು ನೀಟ್ ವಿಚಾರದಲ್ಲಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ. ಶಿಕ್ಷಣವನ್ನು ರಾಜ್ಯ ಪಟ್ಟಿಗೆ ತರಬೇಕೆಂದು ಒತ್ತಾಯಿಸಿದೆ. ರಾಜ್ಯ ಸ್ವಾಯತ್ತ ನೀತಿಯ ನಮ್ಮ ಬೇಡಿಕೆಯ ಪ್ರಕಾರ, ಶಿಕ್ಷಣವು ರಾಜ್ಯ ಪಟ್ಟಿಗೆ ಸೇರಿದೆ. ಕೇಂದ್ರ ಸರ್ಕಾರವು ಶಿಕ್ಷಣವನ್ನು ರಾಜ್ಯ ಪಟ್ಟಿಗೆ ವರ್ಗಾಯಿಸಿದರೆ, ರಾಜ್ಯ ಸರ್ಕಾರವು ತಾನೇ NEET ಅನ್ನು ರದ್ದುಗೊಳಿಸಬಹುದು. ನಮ್ಮ ಪಕ್ಷದ ಕಾರ್ಯಕಾರಿ ಸಮಿತಿಯು, ಇದಕ್ಕೆ ಕೇಂದ್ರ ಸರ್ಕಾರದ ಅಡಚಣೆಯನ್ನು ವಿರೋಧಿಸುತ್ತದೆ. ತಮಿಳುನಾಡು ಜನರನ್ನು ನಕಲಿ ಭರವಸೆಗಳೊಂದಿಗೆ ವಂಚಿಸುತ್ತಿರುವ ರಾಜ್ಯ ಡಿಎಂಕೆ ಸರ್ಕಾರವನ್ನೂ ವಿರೋಧಿಸುತ್ತದೆ ಎಂದು ಟೀಕಿಸಿದೆ.

    ಕಾನೂನು ಮತ್ತು ಸುವ್ಯವಸ್ಥೆ, ಮದ್ಯ ಮಾರಾಟ ಮತ್ತು ಔಷಧಗಳ ವಿಚಾರವಾಗಿ ಆಡಳಿತಾರೂಢ ಡಿಎಂಕೆಯನ್ನು ಟಿವಿಕೆ ತರಾಟೆಗೆ ತೆಗೆದುಕೊಂಡಿದೆ. ಸರ್ಕಾರಿ ಸ್ವಾಮ್ಯದ ಮದ್ಯದ ಅಂಗಡಿಗಳನ್ನು ಹಂತ ಹಂತವಾಗಿ ಮುಚ್ಚುವಂತೆ ಒತ್ತಾಯಿಸಿದೆ. ಇದನ್ನೂ ಓದಿ: ಮಣಿಪುರ | ಇನ್ಸ್‌ಪೆಕ್ಟರ್‌ನನ್ನು ಗುಂಡಿಕ್ಕಿ ಹತ್ಯೆಗೈದ ಕಾನ್ಸ್‌ಟೇಬಲ್‌!

    ವಿಜಯ್‌ ದಳಪತಿ ಪಕ್ಷವು ಸಾಮಾಜಿಕ ನ್ಯಾಯಕ್ಕಾಗಿ ಡಿಎಂಕೆಯ ಘೋಷಣೆಯನ್ನು ಲೇವಡಿ ಮಾಡಿದೆ. ಆಡಳಿತ ಪಕ್ಷವು ಜಾತಿ ಗಣತಿಗೆ ಒತ್ತಾಯಿಸುವ ಬದಲು ಜಾತಿ ಸಮೀಕ್ಷೆಯನ್ನು ನಡೆಸಬೇಕು ಎಂದು ಹೇಳಿದೆ.

    ವಕ್ಫ್‌ ತಿದ್ದುಪಡಿ ಮಸೂದೆ 2024 ಅನ್ನು ಒಕ್ಕೂಟ ವ್ಯವಸ್ಥೆ ವಿರುದ್ಧದ ದಾಳಿ ಎಂದು ಬಿಜೆಪಿ ಮತ್ತು ಕೇಂದ್ರ ಸರ್ಕಾರವನ್ನು ಟಿವಿಕೆ ತರಾಟೆಗೆ ತೆಗೆದುಕೊಂಡಿದೆ. ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆಯು ಮುಸ್ಲಿಮರ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ. ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ಈ ಮಸೂದೆಯನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂದು ವಿಜಯ್‌ ಪಕ್ಷ ಒತ್ತಾಯಿಸಿದೆ.