Tag: tamil nadu

  • ಮರಕ್ಕೆ ಗುದ್ದಿ, ಅಂಗಡಿ ಛಾವಣಿಗೆ ಡಿಕ್ಕಿ ಹೊಡೆದು ತಮಿಳುನಾಡು ಕಾರ್ ಪಲ್ಟಿ- ಐವರಿಗೆ ಗಾಯ

    ಮರಕ್ಕೆ ಗುದ್ದಿ, ಅಂಗಡಿ ಛಾವಣಿಗೆ ಡಿಕ್ಕಿ ಹೊಡೆದು ತಮಿಳುನಾಡು ಕಾರ್ ಪಲ್ಟಿ- ಐವರಿಗೆ ಗಾಯ

    ಮಂಡ್ಯ: ತಮಿಳುನಾಡು ನೊಂದಣಿಯ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಐವರಿಗೆ ಗಾಯಗಳಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಶ್ರೀರಂಗಪಟ್ಟಣದ ಲೋಕಪಾವನಿ ಸೇತುವೆ ಸಮೀಪ ಇಂದು ಮುಂಜಾನೆ ಈ ಘಟನೆ ಸಂಭವಿಸಿದೆ. ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಕಾರು ಇದ್ದಕ್ಕಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಇದ್ದ ಮರಕ್ಕೆ ಗುದ್ದಿ ಬಳಿಕ ಅಂಗಡಿಯ ಛಾವಣಿಗೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದಿದೆ. ಈ ವೇಳೆ ಮರದ ಬುಡದಲ್ಲಿ ಕುಳಿತಿದ್ದ ಸ್ಥಳೀಯ ಜಿ.ಜಯಕುಮಾರ್ ಕಾರಿನಿಂದ ತಪ್ಪಿಸಿಕೊಳ್ಳಲು ಪಕ್ಕಕ್ಕೆ ಬಿದ್ದು ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ.

    ಪಲ್ಟಿ ಹೊಡೆದ ಪರಿಣಾಮ ಕಾರಿನ ಒಳಗಿದ್ದ ತಮಿಳುನಾಡು ಮೂಲದ ದಂಪತಿ, ಇಬ್ಬರು ಮಕ್ಕಳು ಮತ್ತು ಕಾರಿನ ಚಾಲಕ ಸಹ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಗಾಯಾಳುಗಳ ವಿವರ ತಿಳಿದುಬಂದಿಲ್ಲ.

    ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚಾಮರಾಜನಗರಕ್ಕೆ ಪದೇ ಪದೇ ನಾನು ಬರೋದು ಯಾಕೆ: ಸಿಎಂ ಉತ್ತರಿಸಿದ್ದು ಹೀಗೆ

    ಚಾಮರಾಜನಗರಕ್ಕೆ ಪದೇ ಪದೇ ನಾನು ಬರೋದು ಯಾಕೆ: ಸಿಎಂ ಉತ್ತರಿಸಿದ್ದು ಹೀಗೆ

    ಚಾಮರಾಜನಗರ: ಅಂಟಿರುವ ಮೌಢ್ಯವನ್ನು ಹೋಗಲಾಡಿಸಲು ನಾನು ಪದೇ ಪದೇ ಚಾಮರಾಜನಗರಕ್ಕೆ ಬರುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ನಗರದ ಬಿ.ರಾಚಯ್ಯ ಜೋಡಿರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ತಾಲೂಕಿನ ಆಲೂರು ಗ್ರಾಮದಲ್ಲಿ ಮಾಜಿ ರಾಜ್ಯಪಾಲ ಬಿ.ರಾಚಯ್ಯ ಅವರ ಸ್ಮಾರಕ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿ ಮಾಧ್ಯಮದ ಜೊತೆ ಮಾತನಾಡಿದ ಸಿಎಂ, ನಾನು ಇಲ್ಲಿ 7 ಬಾರಿ ಬಂದಿರುವುದು ಇಲ್ಲಿನ ಮೌಢ್ಯವನ್ನು ತಡೆಯಲು ಎಂದು ಹೇಳಿದರು.

    ನಾನು ಇಲ್ಲಿಗೆ ಬರುತ್ತಿರುವುದರಿಂದ ಈ ಜಿಲ್ಲೆಯ ನಗರದ ಮೌಢ್ಯ ಅಳಿಸಿ ಹೋಗಿದೆ. ಅಷ್ಟೇ ಅಲ್ಲದೇ ನನ್ನ ಕುರ್ಚಿಯೂ ಸಹ ಗಟ್ಟಿಯಾಗಿದೆ ಎಂದು ಚಾಮರಾಜನಗರಕ್ಕಿರುವ ಅಪನಂಬಿಕೆ ವಿರುದ್ಧ ಸಿಎಂ ಧ್ವನಿ ಎತ್ತಿದರು.

    ವೀರಶೈವ ಲಿಂಗಾಯಿತ ಧರ್ಮದ ವಿಚಾರದಲ್ಲಿ ಸರ್ಕಾರದ ನಿಲುವು ಯಾವುದು ಇಲ್ಲ ಎಂದು ಸ್ಪಷ್ಟಪಡಿಸಿದ ಅವರು ವೀರಶೈವ ಲಿಂಗಾಯಿತ ಧರ್ಮದ ವಿಚಾರದಲ್ಲಿ ಸರ್ಕಾರದ ಯಾವುದೇ ನಿಲುವು ಇಲ್ಲ. ಆದರೆ ಇದನ್ನು ನಾನೂ ಹುಟ್ಟಿ ಹಾಕಿದ್ದು ಎಂದು ಬಿಂಬಿಸಲಾಗುತ್ತಿದೆ. ಆದರೆ ಈ ವಿಚಾರವನ್ನ ನಾನೂ ಹುಟ್ಟಾಕಿದ್ದಲ್ಲ. ಇದರಲ್ಲಿ ನನ್ನ ಪಾತ್ರ ಮತ್ತು ನಿಲುವು ಏನು ಇಲ್ಲ. ಮಾತೇ ಮಹದೇವಿ ಮತ್ತು ಶಾಮನೂರು ಶಿವಶಂಕರಪ್ಪ ಪತ್ರ ಬರೆದಿದ್ದರು ಅಷ್ಟೆ ಎಂದರು.

    ತಮಿಳುನಾಡಿಗೆ ಕಬಿನಿ ನೀರು ಬಿಟ್ಟಿರುವ ವಿಚಾರವಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದ ನಾಲ್ಕು ಜಲಾಶಯಗಳಲ್ಲಿ 40 ಟಿ ಎಂಸಿ ಯಷ್ಟು ನೀರಿದೆ. ನೀರು ಬಿಡದೇ ಇದ್ದರೆ ನ್ಯಾಯಾಂಗ ನಿಂದನೆಯಾಗುತ್ತದೆ. ಹಾಗಾಗಿ ಕಾವೇರಿ ನ್ಯಾಯಾಧಿಕರಣದ ಆದೇಶದ ಪ್ರಕಾರ ತಮಿಳುನಾಡಿಗೆ ನೀರು ಬಿಟ್ಟಿದ್ದೇವೆ. ಅದೇ ರೀತಿ ನಮ್ಮ ರೈತರಿಗೂ ಇಂದಿನಿಂದ ನೀರು ಬಿಡಲಾಗುತ್ತಿದೆ ಎಂದು ತಿಳಿಸಿದರು.

  • ರೈತರ ಸಾಲಮನ್ನಾ: ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

    ರೈತರ ಸಾಲಮನ್ನಾ: ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

    ನವದೆಹಲಿ: ತಮಿಳುನಾಡಿನ ಎಲ್ಲಾ ರೈತರ ಸಾಲಮನ್ನಾ ಮಾಡಿ ಎಂದು ಮದ್ರಾಸ್ ಹೈಕೋರ್ಟ್ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.

    ಸರ್ಕಾರದ ಆರ್ಥಿಕ ನೀತಿ-ನಿರ್ಣಯದಲ್ಲಿ ಹಸ್ತಕ್ಷೇಪ ಮಾಡಿದಂತಾಗಿದೆ ಎಂದು ವ್ಯಾಖ್ಯಾನಿಸಿ ನ್ಯಾ. ಮದನ್ ಲೋಕೂರ್ ಅವರು ಮದ್ರಾಸ್ ಹೈಕೋರ್ಟ್ ಪೀಠದ ಆದೇಶಕ್ಕೆ ತಡೆ ನೀಡಿ ನೋಟಿಸ್ ಜಾರಿ ಮಾಡಿದ್ದಾರೆ.

    ರೈತರ ಪ್ರತಿಭಟನೆಗೆ ತೀವ್ರ ಒತ್ತಡಕ್ಕೊಳಗಾಗಿದ್ದ ತಮಿಳುನಾಡಿನ ಪಳನಿಸ್ವಾಮಿ ಸರ್ಕಾರ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಐದು ಎಕರೆ ಭೂಮಿ ಹೊಂದಿರುವ ಸಣ್ಣ ಮತ್ತು ಅತೀಸಣ್ಣ ರೈತರು ಸಹಕಾರಿ ಬ್ಯಾಂಕ್‍ಗಳಿಂದ ಪಡೆದ ಸಾಲವನ್ನು ಮನ್ನಾ ಮಾಡಲು ಮುಂದಾಗಿತ್ತು. ಆದರೆ, ಕೇವಲ ಐದು ಎಕರೆ ಯಾಕೆ ಎಲ್ಲಾ ರೈತರ ಸಾಲಮನ್ನಾ ಮಾಡಿ ಎಂದು ದೆಹಲಿಯಲ್ಲಿ ತಿಂಗಳ ಕಾಲ ತಮಿಳುನಾಡಿನ ರೈತರು ವಿಭಿನ್ನ-ವಿಚಿತ್ರವಾದ ಹೋರಾಟ ಮಾಡಿದ್ದರು.

    ರೈತರ ಹೋರಾಟಕ್ಕೆ ವಿಪಕ್ಷಗಳು, ಸಿನಿ ನಟರು ಬೆಂಬಲ ನೀಡಿದ್ದರು. ಅಲ್ಲದೆ, ಎಲ್ಲಾ ರೈತರ ಸಾಲಮನ್ನಾ ಮಾಡುವಂತೆ ಮದ್ರಾಸ್ ಹೈಕೋರ್ಟ್ ಗೆ `ದಕ್ಷಿಣ ಭಾರತದ ನದಿಜೋಡಣೆ ಮತ್ತು ಕೃಷಿಕ ಸಂಘ’ದ ಪಿ. ಅಯ್ಯಕಣ್ಣು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ರು. ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್‍ನ ಮದುರೈ ಪೀಠದ ನ್ಯಾ. ಎಸ್.ನಾಗಮುತ್ತು ಪೀಠ ಎಲ್ಲಾ ರೈತರ ಸಾಲಮನ್ನಾ ಮಾಡುವಂತೆ ಆದೇಶ ಹೊರಡಿಸಿತ್ತು.

    ಈ ಆದೇಶದಂತೆ 3 ಲಕ್ಷ ರೈತರ ಸಾಲವನ್ನು ಮನ್ನಾ ಮಾಡಿದ್ರೆ ಎರಡು ಸಾವಿರ ಕೋಟಿ ಹೊರೆಯಾಗಲಿದೆ ಎಂದು ತಮಿಳುನಾಡು ಸರ್ಕಾರ, ಮದ್ರಾಸ್ ಹೈಕೊರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ನಲ್ಲಿ ಮೇಲ್ಮನವಿ ಸಲ್ಲಿತ್ತು.

    ಕರ್ನಾಟಕದ ಮೇಲೆ  ಪರಿಣಾಮವೇನು..?
    50 ಸಾವಿರ ರೂ. ಸಾಲ ಮನ್ನಾ ಮಾಡಿರುವ ಕರ್ನಾಟಕದ ಮೇಲೆ ಯಾವುದೇ ಪರಿಣಾಮವಿಲ್ಲ. ಒಂದು ದೃಷ್ಟಿಯಲ್ಲಿ ಸಿದ್ದರಾಮಯ್ಯ ಪಾಲಿಗೆ ಇದು ನಿರಾಳ. ಆದರೆ ಭವಿಷ್ಯದಲ್ಲಿ ಸುಪ್ರೀಂ ಆದೇಶ ಉಲ್ಲೇಖಿಸಿ ಸಂಪೂರ್ಣ ಸಾಲಮನ್ನಾ ಅಸಾಧ್ಯ ಎಂದು ರಾಜಕೀಯ ಪಕ್ಷಗಳು ಹೇಳಬಹುದು. ಸಾಲಮನ್ನಾ ವಿಚಾರ ಇಟ್ಟುಕೊಂಡು ಹೋರಾಟ ನಡೆಸುತ್ತಿರುವ ರಾಜ್ಯ ಬಿಜೆಪಿಗೆ ಹಿನ್ನಡೆಯಾದರೂ ಕೇಂದ್ರ ಮಟ್ಟದಲ್ಲಿ ಸ್ವಲ್ಪಮಟ್ಟಿಗೆ ನಿರಾಳವಾಗಿದೆ.

     

  • ಯುವಕನ ತಲೆ ಕಡಿದು ಪೊಲೀಸ್ ಠಾಣೆಯೊಳಗೆ ಎಸೆದು ಹೋದ ದುಷ್ಕರ್ಮಿಗಳು – ಸಿಸಿಟಿವಿಯಲ್ಲಿ ಕೃತ್ಯ ಸೆರೆ

    ಯುವಕನ ತಲೆ ಕಡಿದು ಪೊಲೀಸ್ ಠಾಣೆಯೊಳಗೆ ಎಸೆದು ಹೋದ ದುಷ್ಕರ್ಮಿಗಳು – ಸಿಸಿಟಿವಿಯಲ್ಲಿ ಕೃತ್ಯ ಸೆರೆ

    ಪುದುಚೆರಿ: ದುಷ್ಕರ್ಮಿಗಳು ಯುವಕನನ್ನು ಕೊಲೆ ಮಾಡಿ ಆತನ ರುಂಡ ಕಡಿದು ಪೊಲೀಸ್ ಠಾಣೆಯೊಳಗೆ ಎಸೆದು ಹೋದ ಭೀಕರ ಘಟನೆ ಬುಧವಾರ ರಾತ್ರಿ ತಮಿಳುನಾಡಿನಲ್ಲಿ ನಡೆದಿದೆ.

    ಕೊಲೆಗೀಡಾದ ಯುವಕನನ್ನು 17 ವರ್ಷದ ಶ್ವೇತನ್ ಎಂದು ಗುರುತಿಸಲಾಗಿದೆ. ಈತ ಇತ್ತೀಚೆಗೆ ಪುದುಚೆರಿಯಲ್ಲಿ ಮತ್ತೊಂದು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಜಾಮೀನಿನ ಮೇಲೆ ಹೊರಬಂದಿದ್ದ ಎಂದು ಪೊಲೀಸರು ಹೇಳಿದ್ದಾರೆ.

    ಯುವಕನ ಮೃತದೇಹ ಪುದುಚೆರಿಯ ಬಹೂರ್ ಗ್ರಾಮದ ನದಿಯೊಂದರ ಬಳಿ ಪತ್ತೆಯಾಗಿದೆ. ಶವವನ್ನ ಪುದುಚೆರಿಯ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ತೆಗೆದುಕೊಂಡು ಹೋಗಲಾಗಿದೆ.

    ದುಷ್ಕರ್ಮಿಗಳು ಯುವಕನ ತಲೆಯನ್ನ ಕತ್ತರಿಸಿ ಬೈಕ್‍ನಲ್ಲಿ ಬಂದು ತಮಿಳುನಾಡಿನ ಕಡಲೂರು ಪೊಲೀಸ್ ಠಾಣೆಯೊಳಗೆ ಎಸೆದು ಹೋಗಿದ್ದಾರೆ. ಈ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಈ ಘಟನೆ ಪುದುಚೆರಿಯಲ್ಲಿ ನಡೆದಿರುವುದರಿಂದ ಅಲ್ಲಿನ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ನಾವು ಎಲ್ಲಾ ರೀತಿಯ ನೆರವು ನೀಡುತ್ತಿದ್ದೇವೆ ಅಂತ ಕಡಲೂರಿನ ಹಿರಿಯ ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ.

  • ಜಿದ್ದಿಗೆ ಬಿದ್ದು ಬಸ್ ಓಡಿಸಿದ ಡ್ರೈವರ್‍ಗಳು: ವೈರಲ್ ಆಗಿದೆ ತಮಿಳುನಾಡಿನ ರೇಸ್ ವಿಡಿಯೋ

    ಜಿದ್ದಿಗೆ ಬಿದ್ದು ಬಸ್ ಓಡಿಸಿದ ಡ್ರೈವರ್‍ಗಳು: ವೈರಲ್ ಆಗಿದೆ ತಮಿಳುನಾಡಿನ ರೇಸ್ ವಿಡಿಯೋ

    ಚೆನ್ನೈ: ರೇಸ್ ಟ್ರ್ಯಾಕ್ ನಲ್ಲಿ ಬಸ್ ಗಳು ಸ್ಪರ್ಧೆ ಮಾಡುವುದನ್ನು ನೀವು ನೋಡಿರಬಹುದು. ಆದರೆ ಈ ರೇಸ್ ಸ್ಪರ್ಧೆ ರಸ್ತೆಯಲ್ಲಿ ನಡೆದರೆ ಹೇಗಿರುತ್ತದೆ ಎನ್ನುವುದಕ್ಕೆ ತಮಿಳುನಾಡಿನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕೊಯಂಬತ್ತೂರು – ಪುಲೈಚ್ಚಿ ಹೈವೇಯಲ್ಲಿ ಎರಡು ಖಾಸಗಿ ಬಸ್‍ಗಳು ಸ್ಪರ್ಧೆಗೆ ಬಿದ್ದಂತೆ ಸಂಚರಿಸಿದೆ. ಇಬ್ಬರು ಡ್ರೈವರ್ ಗಳು ಓವರ್ ಟೇಕ್ ಮಾಡಲು ಕಾಮಗಾರಿ ನಡೆಯುತ್ತಿದ್ದ ರಸ್ತೆಯ ಮೇಲೆ ಬಸ್ ಹತ್ತಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

    ಈ ಬಸ್‍ಗಳ ಸ್ಪರ್ಧೆಯನ್ನು ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಗಳು ಸೆರೆ ಹಿಡಿದಿದ್ದಾರೆ. ಈ ವಿಡಿಯೋವನ್ನು ವೀಕ್ಷಿಸಿದ ಬಳಿಕ ಪುಲ್ಲೈಚ್ಚಿ ಜಿಲ್ಲಾಧಿಕಾರಿ ಗಾಯತ್ರಿ ಕೃಷ್ಣನ್ ಬಸ್ ಮಾಲೀಕರ ಸಭೆಯನ್ನು ಕರೆದಿದ್ದಾರೆ.

    ಮುಂದುಗಡೆ ವಾಹನಗಳು ಬರುತ್ತಿದ್ದರೂ ಜಿದ್ದಿಗೆ ಬಿದ್ದ ಡ್ರೈವರ್‍ಗಳು ಬಸ್ಸನ್ನು ಓಡಿಸಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

    https://www.youtube.com/watch?v=3Qj39Ot1RGs

  • ಕೆಆರ್‍ಎಸ್‍ನಿಂದ ತಮಿಳುನಾಡಿಗೆ ನೀರು ಬಿಡಿ: ಸುಪ್ರೀಂ

    ಕೆಆರ್‍ಎಸ್‍ನಿಂದ ತಮಿಳುನಾಡಿಗೆ ನೀರು ಬಿಡಿ: ಸುಪ್ರೀಂ

    ನವದೆಹಲಿ: ಬರಗಾದಲ್ಲಿ ಹನಿ ನೀರು ಸಿಗದೇ ರಾಜ್ಯದ ಜನರು ತತ್ತರಿಸುತ್ತಿದ್ದರೂ ಇತ್ತ ಮಂಡ್ಯದಲ್ಲಿರುವ ಕೆಆರ್‍ಎಸ್ ಜಲಾಶಯದಿಂದ ತಮಿಳುನಾಡಿಗೆ ಎರಡು ಸಾವಿರ ಕ್ಯೂಸೆಕ್ ನೀರು ಬಿಡುವ ಆದೇಶ ಮುಂದುವರಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

    ಕಾವೇರಿ ನ್ಯಾಯಾಧಿಕರಣದ ಐತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿಶೇಷ ಮೆಲ್ಮನವಿ ಅರ್ಜಿಗಳ ವಿಚಾರಣೆ ಇಂದು ಸುಪ್ರಿಂಕೊರ್ಟ್ ನಲ್ಲಿ ನಡೆಯಿತು. ಈ ವೇಳೆ ತಮಿಳುನಾಡು ಕರ್ನಾಟಕ ಸೂಚನೆಯಂತೆ ಸರಿಯಾದ ಪ್ರಮಾಣದ ನೀರು ಬಿಡುತ್ತಿಲ್ಲ ಎನ್ನುವ ಖ್ಯಾತೆ ತೆಗೆಯಿತು. ಕರ್ನಾಟಕ ಕುಡಿಯುವ ನೀರಿನ ಹೆಸರಲ್ಲಿ ಕೃಷಿಗೆ ನೀರು ಬಳಕೆ ಮಾಡುತ್ತಿದೆ ನೀರು ಸರಿಯಾಗಿ ಬಿಡುವಂತೆ ಸೂಚಿಸಲು ತಮಿಳುನಾಡು ಪರ ಶೇಖರ್ ನಾಫಡೆ ವಾದ ಮಂಡಿಸಿದರು.

    ಇದಕ್ಕೆ ತಕ್ಕ ಉತ್ತರ ಕೊಟ್ಟ ರಾಜ್ಯ ಪರ ಹಿರಿಯ ವಕೀಲ ಫಾಲಿ ನಾರಿಮನ್ ರಾಜ್ಯದಲ್ಲಿ ಬರಗಾಲ ತೀವ್ರವಾಗಿದ್ದು ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಮುಖ್ಯವಾಗಿ ಕೆಆರ್‍ಎಸ್ ಜಲಾಶಯದಲ್ಲಿ ನೀರಿಲ್ಲ ನೀರು ಹೇಗೆ ಸಾಧ್ಯ ಎಂಬ ಪ್ರಶ್ನೆ ಹಾಕಿದರು. ಇರುವ ನೀರಿನಲ್ಲಿ ಸಾಧ್ಯವಾದಷ್ಟು ನೀರನ್ನು ಸುಪ್ರೀಂಕೋರ್ಟ್ ಸೂಚನೆಯಂತೆ ಹರಿಸಲಾಗುತ್ತಿದೆ ಅಂತಾ ತಮಿಳುನಾಡಿಗೆ ಖಡಕ್ ಉತ್ತರ ನೀಡಿದರು.

    ವಿಚಾರಣೆ ಆಲಿಸಿದ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ, ಜನವರಿ 4 ರಂದು ನೀಡಿದ ಆದೇಶದಂತೆ ಎರಡು ಸಾವಿರ ಕ್ಯೂಸೆಕ್ ನೀರು ಬಿಡುವಂತೆ ರಾಜ್ಯಕ್ಕೆ ಸೂಚನೆ ನೀಡಿತು. ಜೊತೆಗೆ ಈ ಹಿಂದೆ ಹೇಳಿದಂತೆ ಕಾವೇರಿ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವ ನಿಟ್ಟಿನಲ್ಲಿ ಬೇಸಿಗೆ ರಜೆಯ ನಂತರ ಜುಲೈ 11 ರಿಂದ 15 ದಿನಗಳಲ್ಲಿ ದೀರ್ಘಾವಧಿ ವಿಚಾರಣೆ ನಡೆಸಲಾಗುವುದು ಎಂದು ಪೀಠ ತಿಳಿಸಿತು.

    ಇದನ್ನೂ ಓದಿ: ಕಾವೇರಿ ವಿಚಾರಣೆ- ಬ್ರಿಟಿಷ್ ಒಪ್ಪಂದಗಳಿಗೆ ಕರ್ನಾಟಕ ಬದ್ಧವಿರಬೇಕೇ: ಸುಪ್ರೀಂ ಪ್ರಶ್ನೆ

  • ನಾನೇ ಜಯಲಲಿತಾರ ಮಗ, ಅವರ ಆಸ್ತಿಗೆ ನಾನೇ ವಾರಸ್ದಾರ- ಪ್ರತ್ಯಕ್ಷನಾದ ಅಮ್ಮನ ಮಗ!

    ನಾನೇ ಜಯಲಲಿತಾರ ಮಗ, ಅವರ ಆಸ್ತಿಗೆ ನಾನೇ ವಾರಸ್ದಾರ- ಪ್ರತ್ಯಕ್ಷನಾದ ಅಮ್ಮನ ಮಗ!

    ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಮೃತಪಟ್ಟು ನಾಲ್ಕು ತಿಂಗಳಾಗುತ್ತಾ ಬಂದರೂ ಅವರನ್ನೇ ಕೇಂದ್ರೀಕರಿಸಿಕೊಂಡು ದಿನಕ್ಕೊಂದು ವಿವಾದಗಳು ಎದ್ದೇಳುತ್ತಿವೆ. ಈಗ ನಾನೇ ಜಯಲಲಿತಾ ಅವರ ಮಗ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬರು ಮುಂದೆ ಬಂದಿದ್ದಾರೆ. ಅಷ್ಟೇ ಅಲ್ಲದೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮುಂದೆ ದೂರನ್ನು ದಾಖಲಿಸಿದ್ದಾರೆ.

    ಈರೋಡ್ ಮೂಲದ ಕೃಷ್ಣಮೂರ್ತಿಯೇ ಆ ವ್ಯಕ್ತಿ. ಜಯಲಲಿತಾ ಅವರ ಮಗನಾಗಿರುವ ನಾನು ಅಮ್ಮಾ ಅವರ ಸ್ನೇಹಿತೆ ವನಿತಾಮಣಿ ಅವರ ಮನೆಯಲ್ಲಿ ವಾಸವಾಗಿದ್ದೇನೆ. ನನ್ನ ಜೊತೆಗೆ ನನ್ನನ್ನು ದತ್ತು ಪಡೆದಿರುವ ಹೆತ್ತವರೂ ಇದ್ದಾರೆ. ಕಳೆದ ವರ್ಷದ ಸೆಪ್ಟೆಂಬರ್ 14ರಂದು ನಾನು ಚೆನ್ನೈನ ಪೋಯಸ್ ಗಾರ್ಡನ್‍ನಲ್ಲಿರುವ ಜಯಾ ಅವರ ಮನೆಗೆ ಹೋಗಿದ್ದೆ. ಅಮ್ಮಾ ಅವರ ಜೊತೆಗೆ ನಾಲ್ಕು ದಿನ ತಂಗಿದ್ದೆ ಅಂತ ಕೃಷ್ಣಮೂರ್ತಿ ಹೇಳಿದ್ದಾರೆ.

    ನನ್ನನ್ನು ತಮ್ಮ ಮಗ ಎಂದು ಬಹಿರಂಗವಾಗಿ ಹೇಳಿಕೊಳ್ಳಲು ಜಯಲಲಿತಾ ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಜಯಲಲಿತಾ ಹಾಗೂ ಶಶಿಕಲಾರ ನಡುವೆ ಜಗಳ ನಡೆದಿತ್ತು. ಸೆಪ್ಟೆಂಬರ್ 22ರಂದು ನಡೆದ ಈ ಗಲಾಟೆಯಲ್ಲಿ ಶಶಿಕಲಾ ಜಯಾರನ್ನು ಮಹಡಿಯಿಂದ ಕೆಳಕ್ಕೆ ತಳ್ಳಿ ಕೊಲೆ ಮಾಡಿದ್ದಾರೆ ಎಂದು ಕೃಷ್ಣಮೂರ್ತಿ ಆರೋಪಿಸಿದ್ದಾರೆ.

    ನನಗೆ ಜೀವಬೆದರಿಕೆ ಇತ್ತು. ಆದ್ರೆ ಸತ್ಯ ಹೇಳಲು ಧೈರ್ಯ ಮಾಡಿದ್ದೇನೆ. ಜಯಲಲಿತಾ ಅವರ ಮಗನಾಗಿರುವ ಕಾರಣ ಅವರ ಆಸ್ತಿಗಳಿಗೆಲ್ಲಾ ನಾನೇ ನಿಜವಾದ ವಾರಸ್ದಾರ ಎಂದು ಕೃಷ್ಣಮೂರ್ತಿ ವಾದಿಸಿದ್ದಾರೆ.

    ಈ ಹಿಂದೆ ಪ್ರಿಯಾ ಲಕ್ಷ್ಮಿ ಎಂಬಾಕೆ ನಾನು ಜಯಲಲಿತಾ ಮತ್ತು ಎಂಜಿರ್ ಅವರ ಪುತ್ರಿ ಎಂದು ಹೇಳಿಕೊಂಡು ಮುಂದೆ ಬಂದಿದ್ದರು. ಆದ್ರೆ ಅಕೆಯ ಹೇಳಿಕೆ ಸುಳ್ಳು ಎಂದು ಪತ್ತೆ ಮಾಡಿದ ಪೊಲೀಸರು ವಂಚನೆ ಆರೋಪದಡಿ ಆಕೆಯನ್ನು ಬಂಧಿಸಿದ್ದರು.

     

  • ಯುವತಿಯರ ನಡುವೆ ಮದ್ವೆ, ಎಸ್ಕೇಪ್: ಬೆಂಗಳೂರಿನಲ್ಲೊಂದು ವಿಚಿತ್ರ ಕೇಸ್

    ಯುವತಿಯರ ನಡುವೆ ಮದ್ವೆ, ಎಸ್ಕೇಪ್: ಬೆಂಗಳೂರಿನಲ್ಲೊಂದು ವಿಚಿತ್ರ ಕೇಸ್

    ಬೆಂಗಳೂರು: ಇಬ್ಬರು ಯುವತಿಯರು ಪರಸ್ಪರ ಪ್ರೀತಿಸಿ ಮದುವೆಯಾಗಿ ಈಗ ನಾಪತ್ತೆಯಾಗಿರುವ ಘಟನೆ ವಿವೇಕನಗರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ನಗರದ ಮಾಲಿನಿ ಮತ್ತು ವೆರೋನಿಕಾ ಪ್ರೀತಿಸಿ ಮದುವೆಯಾಗಿ ಮೂರನೇ ಬಾರಿ ಓಡಿ ಹೋಗಿದ್ದು, ಪೋಷಕರು ದುಃಖದಲ್ಲಿದ್ದಾರೆ.

    ಏನಿದು ಘಟನೆ?
    ಮಾಲಿನಿ ಮತ್ತು ವೆರೋನಿಕಾ ಕಾಲೇಜಿನಲ್ಲಿ ಓದುತ್ತಿದ್ದಾಗ 2016 ಜೂನ್‍ನಲ್ಲಿ ತಾಮಿಳುನಾಡಿನ ವೆಲ್ಲಂಕಣಿಗೆ ಓಡಿ ಹೋಗಿದ್ದರು. ಒಂದು ವಾರದ ಬಳಿಕ ಮನೆಯವವರ ಒತ್ತಡದ ಮೇಲೆ ಮನೆಗೆ ಬಂದಿದ್ದ ಇವರು ಕಳೆದ ವರ್ಷದ ನವೆಂಬರ್‍ನಲ್ಲಿ ಮತ್ತೆ ಮಧುರೈಗೆ ಓಡಿಹೋಗಿದ್ದರು. ಇಲ್ಲಿ ಇವರಿಗೆ ಮಂಗಳಮುಖಿಯರ ಸಂಪರ್ಕವಾಗಿದೆ. ಈ ವಿಚಾರ ತಿಳಿದು ಹೇಗೂ ಇವರನ್ನು ಪೋಷಕರು ಮನ ಒಲಿಸಿ ಮನೆಗೆ ಕರೆ ತರುವಲ್ಲಿ ಯಶಸ್ವಿಯಾಗಿದ್ದರು.

    ಮನೆಗೆ ಬಂದ ಬಳಿಕ ಇವರಿಬ್ಬರು ಚೆನ್ನಾಗಿದ್ದರು. ಆದರೆ ಶುಕ್ರವಾರ ದೇವಸ್ಥಾನಕ್ಕೆ ಹೋಗಿ ಬರುತ್ತೇವೆ ಎಂದು ಹೇಳಿದ ಇಬ್ಬರು ಈಗ ಮನೆಗೆ ಬಾರದೇ ಮೂರನೇ ಬಾರಿ ಓಡಿ ಹೋಗಿದ್ದಾರೆ.

    ಈಗ ಇವರಿಬ್ಬರು ಎಲ್ಲಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಪೋಷಕರು ಇದೂವರೆಗೂ ಪೊಲೀಸ್ ಠಾಣೆಯಲ್ಲಿ ದೂರು ನೀಡಿಲ್ಲ.

  • ಜಯಾ 69ನೇ ಜನ್ಮದಿನದಂದು ‘ಎಂಜಿಆರ್ ಅಮ್ಮಾ ದೀಪಾ ಫೋರಂ’ ಸ್ಥಾಪಿಸಿದ ದೀಪಾ

    ಜಯಾ 69ನೇ ಜನ್ಮದಿನದಂದು ‘ಎಂಜಿಆರ್ ಅಮ್ಮಾ ದೀಪಾ ಫೋರಂ’ ಸ್ಥಾಪಿಸಿದ ದೀಪಾ

    ಚೆನ್ನೈ: ಮಾಜಿ ಸಿಎಂ ಜಯಲಲಿತಾ 69ನೇ ಜನ್ಮದಿನದಂದೇ ತಮಿಳುನಾಡು ರಾಜಕೀಯದಲ್ಲಿ ಹೊಸ ರಾಜಕೀಯ ಪಕ್ಷವೊಂದು ಶುರುವಾಗಿದೆ. ಜಯಲಲಿತಾ ಅಣ್ಣನ ಮಗಳಾದ ದೀಪಾ ಜಯಕುಮಾರ್ `ಎಂಜಿಆರ್ ಅಮ್ಮಾ ದೀಪಾ ಫೋರಂ’ ಅಂತ ಹೆಸರಿಟ್ಟಿದ್ದಾರೆ.

    ಎಂಜಿಆರ್ ಮತ್ತು ಜಯಲಲಿತಾ ಗದೆ ಹಿಡಿದಿರೋದು ಪಕ್ಷದ ಚಿಹ್ನೆಯಾಗಿದೆ. ಜಯಾ ಕ್ಷೇತ್ರ ರಾಧಾಕೃಷ್ಣ ನಗರದಿಂದ(ಆರ್‍ಕೆ ನಗರ) ಸ್ಪರ್ಧಿಸೋದಾಗಿ ದೀಪಾ ಹೇಳಿದ್ದು, ಜನರ ಬೆಂಬಲ ಕೇಳಿದ್ದಾರೆ.

    ಶಶಿಕಲಾ ವಿರುದ್ಧವಾಗಿರುವ ತಂಡದ ಜೊತೆ ಕೆಲಸ ಮಾಡಲು ನಾವು ಸಿದ್ಧರಿದ್ದೇವೆ. ಈಗ ಇರುವ ಸರ್ಕಾರವನ್ನು ಕಿತ್ತುಹಾಕುವುದು ನಮ್ಮ ಉದ್ದೇಶ. ಮುಂದಿನ ಸ್ಥಳಿಯ ಚುನಾವಣೆಯಲ್ಲಿ ನಮ್ಮ ಪಕ್ಷದ ಅಬ್ಯರ್ಥಿಗಳು ಕಣಕ್ಕೆ ಇಳಿಯಲಿದ್ದು, ಯುವ ಜನಾಂಗ ನಮಗೆ ಸಹಕಾರ ನೀಡಬೇಕೆಂದು ದೀಪಾ ಕೇಳಿಕೊಂಡಿದ್ದಾರೆ.

    ಶಶಿಕಲಾಗೆ ಬೆಂಬಲ ನೀಡಿದ್ದ ದೀಪಾ ಸಹೋದರ ದೀಪಕ್ ಈಗ ಉಲ್ಟಾ ಹೊಡೆದಿದ್ದಾರೆ. ಪೋಯಸ್ ಗಾರ್ಡನ್‍ನ ಬಂಗಲೆ, ಇತರೆ ಆಸ್ತಿಗಳು ತನಗೆ ಹಾಗೂ ತನ್ನ ಸಹೋದರಿ ದೀಪಾಗೆ ಸೇರಿದ್ದು ಅಂದಿದ್ದಾರೆ.

    ನಮ್ಮ ಅತ್ತೆ ಜಯಲಲಿತಾಗಾಗಿ 100 ಕೋಟಿ ದಂಡ ಕಟ್ಟುತ್ತೇನೆ. ಆದ್ರೆ ನನ್ನ ಹತ್ರ ದುಡ್ಡಿಲ್ಲ. ಹೀಗಾಗಿ ಅತ್ತೆಯ ಆಸ್ತಿ ಮಾರಾಟ ಮಾಡ್ತೀನಿ ಅಂತಿದ್ದಾರೆ. ಇದೇ ವೇಳೆ, ಟಿಟಿವಿ ದಿನಕರನ್ ಅಧಿಕಾರ ವಹಿಸಿಕೊಂಡಿರೊದನ್ನು ಖಂಡಿಸಿದ್ದು, ಇದೆಲ್ಲಾ ಹೇಗಾಯ್ತೋ ಗೊತ್ತಾಗ್ತಿಲ್ಲ. ಬಹುಶಃ ಶಶಿಕಲಾರನ್ನು ಬೆದರಿಸಿ ಟಿಟಿವಿ ದಿನಕರನ್ ಪಕ್ಷದ ಗದ್ದುಗೆ ಏರಿರಬಹುದು. ಆದ್ರೆ ನಾವಿದನ್ನು ಒಪ್ಪಲ್ಲ ಎಂದಿದ್ದಾರೆ. ಪನ್ನೀರ್ ಸೆಲ್ವಂ ಒಳ್ಳೆ ಆಡಳಿತಗಾರ ಎಂದಿರುವ ದೀಪಕ್, ತನಗೆ ರಾಜಕೀಯಕ್ಕೆ ಬರೋ ಆಸಕ್ತಿ ಇಲ್ಲ ಎಂದಿದ್ದಾರೆ.

    ಶಶಿಕಲಾ ಪೂಜೆ: ಪರಪ್ಪನ ಅಗ್ರಹಾರದಲ್ಲಿ ಶಿವರಾತ್ರಿ ಪ್ರಯುಕ್ತ ಶಶಿಕಲಾ ರಾತ್ರಿಯಲ್ಲಾ ಶಿವನಪೂಜೆ ಮಾಡ್ತಿನಿ ಅಂತ ಕೂತಿದ್ರಂತೆ. ಬೆಳಗ್ಗೆಯಿಂದ ಐದಾರು ಬಾರಿ ತುಳಸಿ ಕಟ್ಟೆಯ ಕಡೆ ಬಂದು ಹೋಗಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಸಿಕ್ಕಿದೆ.