Tag: tamil nadu

  • ಕಾವೇರಿ ನದಿ ನೀರು ಹಂಚಿಕೆ ವಿವಾದ – ಶುಕ್ರವಾರ ಪ್ರಕಟವಾಗಲಿದೆ ಸುಪ್ರೀಂ ಅಂತಿಮ ತೀರ್ಪು

    ಕಾವೇರಿ ನದಿ ನೀರು ಹಂಚಿಕೆ ವಿವಾದ – ಶುಕ್ರವಾರ ಪ್ರಕಟವಾಗಲಿದೆ ಸುಪ್ರೀಂ ಅಂತಿಮ ತೀರ್ಪು

    ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬೆಳಗ್ಗೆ 10.30ಕ್ಕೆ ಸುಪ್ರೀಂಕೋರ್ಟ್ ಅಂತಿಮ ತೀರ್ಪು ಪ್ರಕಟಿಸಲಿದೆ.

    ಕಾವೇರಿ ನಾಯಾಧಿಕರಣದ ಐತೀರ್ಪು(ನ್ಯಾಯಾಲಯಗಳು ವಿಚಾರಣೆ ನಡೆಸಿ ತೀರ್ಪು ನೀಡಿದರೆ, ನ್ಯಾಯಮಂಡಳಿಗಳು ವಿಚಾರಣೆ ನಡೆಸಿ ನೀಡುವ ಮಧ್ಯಂತರ/ಅಂತಿಮ ತೀರ್ಪಿಗೆ ಐತೀರ್ಪು ಎಂದು ಕರೆಯಲಾಗುತ್ತದೆ) ಪ್ರಶ್ನಿಸಿ ಕರ್ನಾಟಕ ಮತ್ತು ತಮಿಳುನಾಡು ಸುಪ್ರೀಂ ಮೊರೆ ಹೋಗಿತ್ತು. ಈ ವಿಶೇಷ ಮೇಲ್ಮನವಿಯ ಅರ್ಜಿಯ ವಿಚಾರಣೆ 2016ರ ಅಕ್ಟೋಬರ್ 18ರಿಂದ ಆರಂಭವಾಗಿ 2017ರ ಸೆಪ್ಟೆಂಬರ್ 20ಕ್ಕೆ ವಿಚಾರಣೆ ಅಂತ್ಯವಾಗಿತ್ತು. ಸುಪ್ರೀಂ ಈ ಅರ್ಜಿಯ ವಿಚಾರಣೆಗಾಗಿ ನ್ಯಾ.ದೀಪಕ್ ಮಿಶ್ರಾ, ನ್ಯಾ. ಅಮಿತ್ ರಾಯ್, ಎ.ಎಂ ಖಾನ್ವಿಲ್ಕಾರ್ ಅವರ ತ್ರಿಸದಸ್ಯ ಪೀಠ ರಚಿಸಿತ್ತು.

    ಶುಕ್ರವಾರವೇ ಯಾಕೆ?
    ಫೆ.24 ರಿಂದ ಮಾರ್ಚ್ 4 ವರೆಗೆ ಕೋರ್ಟ್ ಗೆ ರಜೆ ಇರಲಿದೆ. ಮಾರ್ಚ್ 1ರಂದು ಈ ಅರ್ಜಿಯ ವಿಚಾರಣೆ ನಡೆಸಿದ್ದ ಪೀಠದಲ್ಲಿದ್ದ ನ್ಯಾ. ಅಮಿತಾವ್ ರಾಯ್ ನಿವೃತ್ತಿಯಾಗಲಿದ್ದಾರೆ. ಫೆ.23ಕ್ಕೆ ತೀರ್ಪು ಪ್ರಕಟಿಸಿದರೆ ತೀರ್ಪಿನಲ್ಲಿ ಅಸಮಾಧಾನ ಇದ್ದರೆ ಪರಿಶೀಲನಾ ಅರ್ಜಿ ಹಾಕಲು ಸಮಸ್ಯೆ ಆಗಲಿರುವುದರಿಂದ ನಾಳೆ ತೀರ್ಪು ಪ್ರಕಟವಾಗಲಿದೆ.

    ಅಂತಿಮ ಐತೀರ್ಪು ಪ್ರಕಾರ ಯಾರಿಗೆ ಎಷ್ಟು ನೀರು?
    ನ್ಯಾ. ಎನ್.ಪಿ.ಸಿಂಗ್, ನ್ಯಾ. ಸುಧೀರ್ ನಾರಿಯನ್, ನ್ಯಾ. ಎನ್.ಎಸ್. ರಾವ್ ಅವರನ್ನು ಒಳಗೊಂಡ ಕಾವೇರಿ ನ್ಯಾಯಾಧಿಕರಣ 2007ರ ಫೆಬ್ರವರಿ 2ರಂದು ಅಂತಿಮ ಐತೀರ್ಪು ನೀಡಿತು. ಈ ಐತೀರ್ಪಿನ ಅನ್ವಯ ಕಾವೇರಿ ಕಣಿವೆಯಲ್ಲಿ 740 ಟಿಎಂಸಿ ನೀರಿದೆ ಎಂದು ಲೆಕ್ಕಹಾಕಲಾಯಿತು. ಕರ್ನಾಟಕಕ್ಕೆ 270 ಟಿಎಂಸಿ, ತಮಿಳುನಾಡಿಗೆ 419 ಟಿಎಂಸಿ, ಕೇರಳಕ್ಕೆ 30 ಟಿಎಂಸಿ, ಪುದುಚೇರಿಗೆ 10,ಪರಿಸರ ಸಂರಕ್ಷಣೆಗೆ 10 ಟಿಎಂಸಿ, ಸಮುದ್ರ ಸೇರುವ ನೀರು 4 ಟಿಎಂಸಿ ಟಿಎಂಸಿ ನೀರನ್ನು ಹಂಚಲಾಯಿತು. ಇದರ ಜೊತೆ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಆದೇಶಿಸಿತು.

    ಯಾವ ತಿಂಗಳಿನಲ್ಲಿ ತಮಿಳುನಾಡಿಗೆ ಎಷ್ಟು ಟಿಎಂಸಿ ನೀರು?
    ಜೂನ್ 10, ಜುಲೈ 34, ಅಗಸ್ಟ್ 50, ಸೆಪ್ಟೆಂಬರ್ 40, ಅಕ್ಟೋಬರ್ 22, ನವೆಂಬರ್ 15, ಡಿಸೆಂಬರ್ 8, ಜನವರಿ 3, ಫೆಬ್ರವರಿ 2.5, ಮಾರ್ಚ್ 2.5, ಏಪ್ರಿಲ್ 2.5, ಮೇ 2.5 ಸೇರಿ ಒಟ್ಟು 192 ಟಿಎಂಸಿ ನೀರನ್ನು ಕನಾಟಕ ಪ್ರತಿವರ್ಷ ತಮಿಳುನಾಡಿಗೆ ಹರಿಸಬೇಕು.

    2013ರಲ್ಲಿ ಅಧಿಸೂಚನೆ ಪ್ರಕಟ
    ಐತೀರ್ಪಿನ ಆದೇಶದ ಅನ್ವಯ ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸಬೇಕಿತ್ತು. ಆದರೆ ತೀರ್ಪು ಬಂದು 5 ವರ್ಷ ಕಳೆದರೂ ನಿರ್ವಹಣಾ ಮಂಡಳಿಯನ್ನು ರಚಿಸದ್ದಕ್ಕೆ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ ಫೆ.20ರ ಒಳಗಡೆ ಅಂತಿಮ ಆದೇಶವನ್ನು ಜಾರಿಗೊಳಿಸಿ ಅಧಿಸೂಚನೆ ಹೊರಡಿಸಬೇಕೆಂದು 2013ರ ಫೆ.4ರಂದು ಖಡಕ್ ಆದೇಶವನ್ನು ಹೊರಡಿಸಿತು. ಈ ಆದೇಶದ ಅನ್ವಯ ಅಂತಿಮವಾಗಿ ಕೇಂದ್ರ ಸರ್ಕಾರ ಫೆ.19ರಂದು ಗೆಜೆಟ್ ಅಧಿಸೂಚನೆ ಹೊರಡಿಸಿತು.

     

  • ರಾಜ್ಯದಲ್ಲಿ ಎರಡು ದಿನ ಮಳೆಯಾಗುವ ಸಾಧ್ಯತೆ

    ರಾಜ್ಯದಲ್ಲಿ ಎರಡು ದಿನ ಮಳೆಯಾಗುವ ಸಾಧ್ಯತೆ

    ಬೆಂಗಳೂರು: ಶಿವರಾತ್ರಿಯ ದಿನ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬಂಗಾಳಕೊಲ್ಲಿ ಹಾಗೂ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನಲೆಯಲ್ಲಿ ಇವತ್ತು ಹಾಗೂ ನಾಳೆ ಮಳೆಯಾಗುವ ಸಂಭವವಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದ್ದು, ಮಳೆ ಕೂಡ ಆಗುವ ಸಾಧ್ಯತೆ ಇದೆ. ತಮಿಳುನಾಡಿನ ಕೆಲ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಂಭವಿದೆ ಎಂದು ಅವರು ಮಾಹಿತಿ ನೀಡಿದರು.

  • 8 ಮದುವೆ ಮಾಡಿಕೊಂಡು 4.5 ಕೋಟಿ ರೂ. ವಂಚಿಸಿದ ಉದ್ಯಮಿ

    8 ಮದುವೆ ಮಾಡಿಕೊಂಡು 4.5 ಕೋಟಿ ರೂ. ವಂಚಿಸಿದ ಉದ್ಯಮಿ

    ಕೊಯಮತ್ತೂರು: ಸಾರಿಗೆ ಉದ್ಯಮಿಯೊಬ್ಬ ಎಂಟು ಮದುವೆಯಾಗಿ ಸುಮಾರು 4.5 ಕೋಟಿ ರೂ. ಹಣದೊಂದಿಗೆ ಪರಾರಿಯಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಚೆನ್ನೈನ ಕಾಲೇಜೊಂದರಲ್ಲಿ ಪ್ರಾಧ್ಯಾಪಕಿಯಾಗಿರುವ ಇಂದಿರಾ ಗಾಂಧಿ ಎಂಬವರು ಈ ಕುರಿತು ದೂರು ನೀಡಿದ ಬಳಿಕ ಉದ್ಯಮಿಯ ನಿಜ ಬಣ್ಣ ಈಗ ಬೆಳಕಿಗೆ ಬಂದಿದೆ.

    ಇತ್ತೀಚೆಗಷ್ಟೇ 57 ವರ್ಷದ ಪುರುಷೋತ್ತಮ್ ಎಂಬಾತನನ್ನು ಇಂದಿರಾ ಗಾಂಧಿ ಎಂಬವರು ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಬಳಿಕ ಇಂದಿರಾ ತಮ್ಮ ಹೆಸರಿನಲ್ಲಿ ಚೆನ್ನೈನಲ್ಲಿರುವ ಬಂಗಲೆಯೊಂದನ್ನು ಮಾರಾಟ ಮಾಡಿ ಕೊಯಮತ್ತೂರ್ ನಲ್ಲಿ ಜೀವನ ಸಾಗಿಸುವ ಆಸೆಯನ್ನು ತಮ್ಮ ಪತಿ ಪುರುಷೋತ್ತಮ್ ಬಳಿ ಹಂಚಿಕೊಂಡಿದ್ದರು. ಆದರೆ ಮನೆ ಮಾರಾಟ ಮಾಡಿದ ಬಳಿಕ ಬಂದ 1.5 ಕೋಟಿ ಹಣದೊಂದಿಗೆ ಪುರುಷೋತ್ತಮ್ ಪರಾರಿಯಾಗಿದ್ದಾನೆ.

    ಈ ವಿಚಾರ ತಿಳಿದ ಇಂದಿರಾ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಪುರುಷೋತ್ತಮ್ ಇತಿಹಾಸ ಕಂಡು ಬೆಚ್ಚಿಬಿದ್ದಿದ್ದಾರೆ. ಈತ ಇಂದಿರಾರನ್ನು ಮದುವೆಯಾಗುವುದಕ್ಕೂ ಮುನ್ನ ಮೂವರು ಮಹಿಳೆಯರನ್ನು ಮದುವೆಯಾಗಿದ್ದು, ಅಲ್ಲದೇ ಆತ ಮದುವೆಯಾಗಿದ್ದ ಇಂದಿರಾ ಅವರು ಸೇರಿ ಮೂವರು ಮಹಿಳೆಯರ ಬಳಿ ಒಟ್ಟಾರೆ 4.5 ಕೋಟಿ ಹಣ ವಂಚಿಸಿ ಪರಾರಿಯಾಗಿದ್ದಾನೆ. ಆದರೆ ಇಂದಿರಾ ಅವರನ್ನು ಮದುವೆಯಾದ ಬಳಿಕ ಮತ್ತೆ ಮೂರು ಮದುವೆಯಾಗಿರುವ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ.

    ಇದಕ್ಕೂ ಮುನ್ನ ಮದುವೆಯಾಗಿದ್ದ ಕುಮದವಳ್ಳಿ ಎಂಬ ಮಹಿಳೆ ದೂರಿನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಪುರುಷೋತ್ತಮ್ ತನ್ನ ಆಸ್ತಿ ಕುರಿತು ನ್ಯಾಯಾಲಯದಲ್ಲಿ ದೂರು ದಾಖಲಾಗಿದ್ದು, ಈ ಆಸ್ತಿ ತನ್ನ ಹೆಸರಿಗೆ ಬಂದರೆ 17 ಕೋಟಿ ರೂ. ಬರುತ್ತದೆ. ಆದರೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವುದರಿಂದ ಹಣದ ಅಗತ್ಯವಿದೆ ಎಂದು ಹೇಳಿ ಕುಮದುವಳ್ಳಿ ಅವರ ಆಸ್ತಿಯನ್ನು ಮಾರಾಟ ಮಾಡಿ 3 ಕೋಟಿ ರೂ. ಹಣದೊಂದಿಗೆ ಪರಾರಿಯಾಗಿದ್ದ ಎಂದು ತಿಳಿಸಿದ್ದಾರೆ.

    ಪುರುಷೋತ್ತಮ್ ವೈವಾಹಿಕ ಸಂಸ್ಥೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಂಸ್ಥೆ ನಡೆಸುತ್ತಿರುವ ಮೋಹನ್ ಹಾಗೂ ವಿಜಯ ಕುಮಾರಿ ಎಂಬವರ ಜೊತೆ ಸೇರಿ ಈ ಕೃತ್ಯ ನಡೆಸಿದ್ದಾನೆ. ಈತನಿಂದ ಹಣ ಪಡೆದು ಸಂಸ್ಥೆ ಮಾಲೀಕರು ಈತನಿಗೆ ಹೆಚ್ಚು ಹಣ ಹೊಂದಿರುವ ಶ್ರೀಮಂತ ಮಹಿಳೆಯರನ್ನು ಪರಿಚಯ ಮಾಡಿಸುತ್ತಿದ್ದರು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಪ್ರಸ್ತುತ ಇಂದಿರಾ ಹಾಗೂ ಮೂವರು ಮಹಿಳೆಯರು ನೀಡಿದ ದೂರಿನ ಮೇರೆಗೆ ಪುರುಷೋತ್ತಮ್ ವಿರುದ್ಧ ಕೊಯಮತ್ತೂರು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಪುರುಷೋತ್ತಮ್ ಹಲವು ಮದುವೆಗಳನ್ನು ಕಾನೂನಾತ್ಮಕವಾಗಿ ರಿಜಿಸ್ಟರ್ ಸಹ ಮಾಡಿಸಿದ್ದು, ಹೆಚ್ಚು ಶ್ರೀಮಂತ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ. ಈತನ ಮೇಲೆ ಈಗಾಗಲೇ 18 ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಕೊಯಮತ್ತೂರು ಪೂರ್ವ ಮಹಿಳಾ ಪೊಲೀಸ್ ಠಾಣೆ ಅಧಿಕಾರಿ ಮಾಸುತಾ ಬೇಗಂ ಹೇಳಿದ್ದಾರೆ.

  • ತಮಿಳುನಾಡಿಗೆ ಒಬ್ಬರೇ ಎಂಜಿಆರ್, ಒಬ್ಬರೇ ಅಮ್ಮ : ಟಿಟಿವಿ ದಿನಕರನ್

    ತಮಿಳುನಾಡಿಗೆ ಒಬ್ಬರೇ ಎಂಜಿಆರ್, ಒಬ್ಬರೇ ಅಮ್ಮ : ಟಿಟಿವಿ ದಿನಕರನ್

    ಚೆನ್ನೈ: ತಮಿಳುನಾಡಿಗೆ ಒಬ್ಬರೇ ಎಂಜಿಆರ್, ಒಬ್ಬರೇ ಅಮ್ಮ ಅದು ಜಯಲಲಿತಾ. ರಜನಿ ಮೇನಿಯಾ ಎಂಬುವುದು ಕೇವಲ ಮಾಧ್ಯಮಗಳ ಸೃಷ್ಟಿಯಾಗಿದ್ದು, ಇಲ್ಲಿ ಇವೆಲ್ಲ ನಡೆಯುವುದಿಲ್ಲ ಎಂದು ಎಐಡಿಎಂಕೆ ಪಕ್ಷದ ಉಚ್ಛಾಟಿತ ನಾಯಕ ಟಿಟಿವಿ ದಿನಕರನ್ ಹೇಳಿದ್ದಾರೆ.

    ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶ ಸಂಬಂಧ ಘೋಷಣೆ ಮಾಡಿದ ನಂತರ ಪ್ರತಿಕ್ರಿಯೆ ನೀಡಿರುವ ದಿನಕರನ್, ತಮಿಳುನಾಡಿನಲ್ಲಿ ರಜನಿ ಮೇನಿಯಾ ನಡೆಯುವುದಿಲ್ಲ. ತಮಿಳುನಾಡಿಗೆ ಒಬ್ಬರೇ ಎಂಜಿಆರ್, ಒಬ್ಬರೇ ಅಮ್ಮ. ಅಲ್ಲದೇ ಎಂಜಿಆರ್ ಮತ್ತು ಅಮ್ಮ ಅವರೊಂದಿಗೆ ನೀವು ಯಾರನ್ನು ಬೇಕಾದರೂ ಹೋಲಿಕೆ ಮಾಡಬಾರದು. ಜಯಲಲಿತ ಅವರ ನಿಷ್ಠಾವಂತ ಬೆಂಬಲಿಗ ಮುಂದೆ ಯಾರು ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಇತ್ತೀಚೆಗೆ ಜಯಲಲಿತಾ ಸಾವಿನಿಂದ ತೆರವಾಗಿದ್ದ ರಾಧಾಕೃಷ್ಣ ನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ದಿನಕರನ್, ಎಐಎಡಿಎಂಕೆ ಪಕ್ಷದ ಅಭ್ಯರ್ಥಿಯ ವಿರುದ್ಧ ಭರ್ಜರಿ ಜಯ ದಾಖಲಿಸಿದ್ದರು.

    ರಜನಿ ನಿರ್ಧಾರ ಖುಷಿ ತಂದಿದೆ: ತಮಿಳುನಾಡಿನಲ್ಲಿ ರಜನಿಕಾಂತ್ ರಾಜಕೀಯ ಪ್ರವೇಶ ಅವರ ಅಭಿಮಾನಿಗಳಲ್ಲಿ ಹರುಷವನ್ನು ಮೂಡಿಸಿದೆ. ರಜನಿ ಅವರ ಸಮಕಾಲೀನ ನಟ ಕಮಲ್ ಹಾಸನ್ ಈ ಕುರಿತು ತಮ್ಮ ಅಭಿಪ್ರಾಯವನ್ನು ಟ್ವೀಟ್ ಮಾಡಿದ್ದು, ರಜನಿ ಅವರ ರಾಜಕೀಯ ಪ್ರವೇಶ ಖುಷಿ ತಂದಿದೆ. ಸಹೋದರ ರಜನಿಕಾಂತ್ ಅವರ ಸಾಮಾಜಿಕ ಪ್ರಜ್ಞೆ ಬಗ್ಗೆ ನನಗೆ ತಿಳಿದಿದೆ. ಹೀಗಾಗಿ ಅವರಿಗೆ ನಾನು ಶುಭ ಕೋರುತ್ತೇನೆ ಎಂದು ಹೇಳಿದ್ದಾರೆ.

  • ಮೊದಲ ಬಾರಿ ರಾಜ್ ಕುಮಾರ್ ಕಂಡಾಗ ಮೈ ಮರೆತು ನಿಂತೆ ಬಿಟ್ಟೆ : ರಜನಿಕಾಂತ್

    ಮೊದಲ ಬಾರಿ ರಾಜ್ ಕುಮಾರ್ ಕಂಡಾಗ ಮೈ ಮರೆತು ನಿಂತೆ ಬಿಟ್ಟೆ : ರಜನಿಕಾಂತ್

    ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರು ಅಭಿಮಾನಿ ದೇವರು ಡಾ. ರಾಜ್ ಕುಮಾರ್ ಅವರ ಬಹುದೊಡ್ಡ ಅಭಿಮಾನಿ ಎಂಬುದು ಎಲ್ಲರಿಗೂ ತಿಳಿದ ವಿಷಯವೇ, ಆದರೆ ಮತ್ತೊಮ್ಮೆ ರಜನಿ ಅವರು ತಮ್ಮ ಬಾಲ್ಯದ ನೆನಪು ಮಾಡಿಕೊಳ್ಳುವ ಮೂಲಕ ರಾಜ್ ಕುಮಾರ್ ಅವರ ಬಗೆಗಿನ ತಮ್ಮ ಅಭಿಮಾನವನ್ನು ಹಂಚಿಕೊಂಡಿದ್ದಾರೆ.

    ಚೆನ್ನೈನ ಕೂಡಂಬಾಕಂ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ತಮ್ಮ ಅಭಿಮಾನಿಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನಗೆ ನಿಮ್ಮ ತವಕ ಅರ್ಥವಾಗುತ್ತದೆ, ನಾನು ಸಹ ನನ್ನ ಬಾಲ್ಯದ ದಿನಗಳಲ್ಲಿ ರಾಜ್ ಕುಮಾರ್ ಅವರನ್ನು ನೋಡಲು ಇದೇ ರೀತಿ ಹೋಗಿದ್ದೆ ಎಂದು ತಮ್ಮ ಹಿಂದಿನ ದಿನಗಳನ್ನು ಮೆಲುಕು ಹಾಕಿ ಕೊಂಡಿದ್ದಾರೆ.

    ನನ್ನ 16 ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ ಕುಮಾರ್ ಅವರ ಚಲನಚಿತ್ರದ 100 ನೇ ದಿನದ ಕಾಯಕ್ರಮಕ್ಕೆ ಹೋಗಿದ್ದೆ. ಶಿವಾಜಿ ಗಣೇಶನ್ ಸರ್, ಎಂ ಜಿ ಆರ್ ಸರ್ ಸೇರಿದರೆ ಹೇಗೆ, ಹಾಗೆ ಕರ್ನಾಟಕದಲ್ಲಿ ರಾಜ್‍ಕುಮಾರ್. ಮೊದಲ ಬಾರಿ ಅವರನ್ನು ನೋಡಿದ ಕ್ಷಣ ನಾನು ಮೈರೆತು ನಿಂತು ಬಿಟ್ಟೆ. ನನ್ನ ಕಣ್ಣ ಮುಂದೆ ಅವರ ಚಲನಚಿತ್ರದ ದೃಶ್ಯಗಳು ಮಾತ್ರ ಕಾಣಿಸುತ್ತಿತ್ತು. ಈ ವೇಳೆ ಅವರನ್ನು ನಾನು ಮುಟ್ಟಲು ಹೋಗಿದ್ದೆ. ಹಾಗೆಯೇ ಪ್ರಸ್ತುತ ನಿಮ್ಮ ತವಕ ನನಗೇ ಅರ್ಥವಾಗುತ್ತದೆ ಎಂದರು.

    ಇದೇ ವೇಳೆ ಕಾರ್ಯಕ್ರಮದಲ್ಲಿ ಅಭಿಮಾನಿಗಳು ತಮ್ಮ ಕಾಲ ಮೇಲೆ ಬೀಳದಂತೆ ಮನವಿ ಮಾಡಿದ ಅವರು, ನಿಮ್ಮ ತಂದೆ ತಾಯಿ, ದೇವರು ಇವರ ಪಾದಕ್ಕೆ ಮಾತ್ರ ನಮಸ್ಕರಿಸಿ. ಒಳ್ಳೆ ಆರೋಗ್ಯ, ಉತ್ತಮ ಜೀವನ ಪಡೆಯಲು ಪ್ರಾರ್ಥನೆ ಮಾಡಿ ಎಂದರು. ಆದರೂ ಅಭಿಮಾನಿಗಳು ರಜನಿ ಅವರ ಮನವಿಯನ್ನು ಸ್ವೀಕರಿಸದೆ ಅವರ ಕಾಲಿಗೆ ಬಿದ್ದು ಆರ್ಶೀವಾದ ಪಡೆಯವುದು ಸಾಮಾನ್ಯವಾಗಿತ್ತು.

    ಅಂದ ಹಾಗೇ ರಜನಿ ಅವರ ರಾಜಕೀಯ ರಂಗ ಪ್ರವೇಶ ಕುರಿತು ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಿದ್ದರು, ಅವರು ಯಾವುದೇ ನಿರ್ಣಯವನ್ನು ಸ್ಪಷ್ಟಪಡಿಸಿರಲಿಲ್ಲ. ಆದರೆ ಪ್ರಸ್ತುತ ನಡೆಯುತ್ತಿರುವ ಅಭಿಮಾನಿಗಳ ಜೊತೆಗಿನ ಭೇಟಿ ಕಾರ್ಯಕ್ರಮದ ಕೊನೆಯ ದಿನವಾದ ಡಿಸೆಂಬರ್ 31 ರಂದು ಈ ಕುರಿತು ತಮ್ಮ ನಿರ್ಣಯವನ್ನು ಘೋಷಣೆ ಮಾಡುವ ಸಾಧ್ಯತೆಗಳಿವೆ.

    2014ರ ನವೆಂಬರ್ 29 ರಂದು ಬೆಂಗಳೂರಿನ ಕಂಠಿರವ ಸ್ಟುಡಿಯೋದಲ್ಲಿ ರಾಜ್ ಸ್ಮಾರಕ ಲೋಕರ್ಪಣೆಯಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಜನಿಕಾಂತ್ ಕನ್ನಡದಲ್ಲೇ ಮಾತನಾಡಿ ರಾಜ್ ಅವರ ನೆನಪು ಮಾಡಿ ಹಾಡಿ ಹೊಗಳಿದ್ದರು.

    https://www.youtube.com/watch?v=NRhhZ2qMh80

  • 2ಜಿ ಕೂಪದಿಂದ ಕನಿಮೋಳಿ ಹೊರಬರಲು ಶ್ರೀಕೃಷ್ಣ, ಮುಖ್ಯಪ್ರಾಣರೇ ಕಾರಣ : ಶೀರೂರು ಶ್ರೀ

    2ಜಿ ಕೂಪದಿಂದ ಕನಿಮೋಳಿ ಹೊರಬರಲು ಶ್ರೀಕೃಷ್ಣ, ಮುಖ್ಯಪ್ರಾಣರೇ ಕಾರಣ : ಶೀರೂರು ಶ್ರೀ

    ಉಡುಪಿ: 2ಜಿ ಹಗರಣದ ಬಲೆಯಿಂದ ಕರುಣಾನಿಧಿ ಪುತ್ರಿ ಕನಿಮೋಳಿ ಹೊರಬಂದಾಗಿದೆ. ಸಿಬಿಐ ವಿಶೇಷ ಕೋರ್ಟ್ ಕನಿಮೋಳಿಯನ್ನು ಖುಲಾಸೆ ಮಾಡಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ರಾಜಕೀಯ ಗರಿಗೆದರಿದೆ. ಆದರೆ 2 ಜಿ ಭ್ರಷ್ಟಚಾರ ಆರೋಪದಿಂದ ಕನಿಮೋಳಿ ಅವರು ಹೊರ ಬರಲು ಸಾಧ್ಯವೇ ಇಲ್ಲ ಎಂದು ವಿಶ್ಲೇಷಿಸಲಾಗಿದ್ದ ಎಲ್ಲರಿಗೂ ಅಚ್ಚರಿಯಾಗಿದ್ದು, ಇದಕ್ಕೆ ಪ್ರಮುಖ ಕಾರಣ ಉಡುಪಿ ಶ್ರೀ ಕೃಷ್ಣನೇ ಎನ್ನುವ ವಾದ ಹುಟ್ಟಿಕೊಂಡಿದೆ.

    ಆದರೆ ಕನಿಮೋಳಿ ಪ್ರಕರಣಕ್ಕೂ ಉಡುಪಿ ಶ್ರೀ ಕೃಷ್ಣ ಮಠಕ್ಕೂ ಏನು ಸಂಬಂಧ ಎಂಬ ಮಾಹಿತಿ ತಿಳಿಯಬೇಕಾದರೆ ಆರು ವರ್ಷಗಳ ಹಿಂದಿನ ಘಟನೆ ತೆರೆದುಕೊಳ್ಳುತ್ತದೆ. ಆ ಸಂದರ್ಭದಲ್ಲಿ ಉಡುಪಿ ಶ್ರೀಕೃಷ್ಣನ ಪೂಜಾಧಿಕಾರವನ್ನು ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥರು ನೋಡಿಕೊಳ್ಳುತ್ತಿದ್ದರು.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಶೀರೂರು ಶ್ರೀಗಳು, ಆರು ವರ್ಷದ ಹಿಂದೆ ಕನಿಮೋಳಿಯವರ ತಾಯಿ ರಜತಿ ಅವರು ಮಠಕ್ಕೆ ಬಂದಿದ್ದರು. ತಮ್ಮ ಕುಟುಂಬದಲ್ಲಿ ಗೊಂದಲಗಳಾಗಿದೆ. ತನ್ನ ಮಗಳಿಗೆ ಮಾಡದ ತಪ್ಪಿಗೆ ಶಿಕ್ಷೆಯಾಗಿ ಜೈಲು ಸೇರಿದ್ದಾಳೆ. ಹೀಗಾಗಿ ದೇವರಲ್ಲಿ ವಿಶೇಷ ಪ್ರಾರ್ಥನೆ ನಡೆಸಲು ಕೇಳಿಕೊಂಡಿದ್ದರು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ರಜತಿ ಅವರಿಗೆ ಧೈರ್ಯ ತುಂಬಿದ್ದ ಶ್ರೀಗಳು ತಪ್ಪು ಮಾಡದಿದ್ದರೆ ದೇವರ ಅನುಗ್ರಹ ನಿಮ್ಮ ಮೇಲೆ ಇರುತ್ತದೆ. ಅವರ ಮನವಿಯಂತೆ ಪೂಜೆಯ ಸಂದರ್ಭ ದೇವರಲ್ಲಿ ಪ್ರಾರ್ಥನೆಯನ್ನು ಮಾಡಿಕೊಂಡಿದ್ದೆವು. ಇದೀಗ ಕನಿಮೋಳಿ ಅವರು ಆರೋಪ ಮುಕ್ತರಾಗಿದ್ದಾರೆ ಎಂದು ವಿವರಿಸಿದರು.

    ಉಡುಪಿಯಲ್ಲಿ ಶ್ರೀಕೃಷ್ಣ ಭಕ್ತರ ಕಣ್ಮಣಿ, ಆದರೂ ಮಠದೊಳಗೆ ಮುಖ್ಯಪ್ರಾಣ ಅಂದರೆ ಆಂಜನೇಯ ದೇವರು ಹೆಚ್ಚು ಶಕ್ತಿಯನ್ನು ಹೊಂದಿದ್ದಾರೆ ಎಂಬ ನಂಬಿಕೆ ಇದೆ. ಕೃಷ್ಣ ಮುಖ್ಯಪ್ರಾಣರಿಗೆ ಮಾಡಿದ ಪ್ರಾರ್ಥನೆ ಫಲ ನೀಡಿದೆ. ಕರುಣಾನಿಧಿ ಕುಟುಂಬ ಹರಕೆ ತೀರಿಸಲು ಮತ್ತೆ ಉಡುಪಿಗೆ ಬರಬಹುದು ಎಂಬ ನಿರೀಕ್ಷೆಯಿದೆ ಎಂದು ಶ್ರೀ ಶೀರೂರು ಸ್ವಾಮೀಜಿ ಹೇಳಿದರು.

    ಹರಕೆ ಹೊತ್ತಿದ್ದರೆ, ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡ ವೇಳೆ ಮತ್ತೆ ಬರುವುದಾಗಿ ಹೇಳಿಕೊಂಡಿದ್ದರೆ ಮತ್ತೆ ಉಡುಪಿಗೆ ಬಂದು ಕೃಷ್ಣಮುಖ್ಯಪ್ರಾಣರ ಸನ್ನಿಧಿಗೆ ಭೇಟಿಕೊಡಬೇಕು ಎಂಬ ನಂಬಿಕೆ ಭಕ್ತರಲ್ಲಿ ಇದೆ.

     

  • ತಮಿಳುನಾಡು ಚುನಾವಣೆಯ ದಿಕ್ಕನ್ನೆ ಬದಲಾಯಿಸುವ ಶಕ್ತಿ ಫೋಟೋ, ವಿಡಿಯೋಗಳಿಗಿದೆ!

    ತಮಿಳುನಾಡು ಚುನಾವಣೆಯ ದಿಕ್ಕನ್ನೆ ಬದಲಾಯಿಸುವ ಶಕ್ತಿ ಫೋಟೋ, ವಿಡಿಯೋಗಳಿಗಿದೆ!

    ಬೆಂಗಳೂರು: ರಾಧಾಕೃಷ್ಣ ನಗರ ಉಪಚುನಾವಣೆಗೆ ಮುನ್ನ ಜಯಲಲಿತಾ ಆಸ್ಪತ್ರೆಯಲ್ಲಿರುವ ವಿಡಿಯೋ ಪ್ರಕಟವಾಗಿದ್ದು ತಮಿಳುನಾಡು ರಾಜಕೀಯದಲ್ಲಿ ಈಗ ಬಿರುಗಾಳಿ ಎದ್ದಿದೆ.

    ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗುವ ಮುನ್ನವೇ ಜಯಲಲಿತಾ ಮೃತಪಟ್ಟಿದ್ದರು ಎನ್ನುವ ಅಂತ ಕಂತೆಗಳ ಸುದ್ದಿಗೆ ತಿರುಗೇಟು ಎನ್ನುವಂತೆ, ಜೊತೆಗೆ ಅಮ್ಮ ಅಭಿಮಾನಿಗಳನ್ನು ಭಾವನಾತ್ಮಕವಾಗಿ ಸೆಳೆಯಲು ಶಶಿಕಲಾ ಬಣ ಈಗ ವಿಡಿಯೋ ರಿಲೀಸ್ ಮಾಡಿದೆ.

    ತಮಿಳುನಾಡು ಚುನಾವಣೆಯಲ್ಲಿ ವಿಡಿಯೋ ಮತ್ತು ಫೋಟೋಗಳು ಸದ್ದುಮಾಡುವುದು ಇದೇ ಮೊದಲಲ್ಲ. ಜಯಲಲಿತಾ ಅವಧಿಯಲ್ಲೂ ಸದ್ದು ಮಾಡಿತ್ತು. ಅಷ್ಟೇ ಅಲ್ಲದೇ ಜಯಲಲಿತಾ ಚುನಾವಣೆ ಗೆಲ್ಲಲು ವಿಡಿಯೋ ಮತ್ತು ಫೋಟೋಗಳು ನೆರವಾಗಿತ್ತು. ಅದರಲ್ಲೂ 1991ರಲ್ಲಿ ಫೋಟೋದಿಂದಾಗಿ ಎದ್ದ ಅನುಕಂಪದ ಅಲೆಯಿಂದಾಗಿ ಜಯ ಜಯಭೇರಿ ಬಾರಿಸಿದ್ದರು.

    1982ರಲ್ಲಿ ಜಯಲಲಿತಾ ಎಐಎಡಿಎಂಕೆಗೆ ಸೇರ್ಪಡೆಯಾಗಿದ್ದರು. ಇಂಗ್ಲೀಷ್‍ನಲ್ಲಿ ಉತ್ತಮ ಹಿಡಿತ ಹೊಂದಿದ್ದ ಕಾರಣ ಜಯಲಲಿತಾರನ್ನು ಎಂಜಿ ರಾಮಚಂದ್ರನ್ ರಾಜ್ಯಸಭೆಗೆ ಕಳುಹಿಸಿದ್ದರು. 1984 ರಾಮಚಂದ್ರನ್ ಆರೋಗ್ಯ ಹದೆಗೆಟ್ಟಾಗ ಜಯಲಲಿತಾ ಕಾಂಗ್ರೆಸ್ ಸಹಕಾರವನ್ನು ಪಡೆದು ಪಕ್ಷವನ್ನು ಮುನ್ನಡೆಸಿದ್ದರು. 1987ರ ಆಗಸ್ಟ್ 24 ರಂದು ತಮ್ಮ 70ನೇ ವಯಸ್ಸಿನಲ್ಲಿ ಎಂಜಿ ರಾಮಚಂದ್ರನ್ ವಿಧಿವಶರಾದರು.

    ನಿಧನದ ಸುದ್ದಿ ಕೇಳಿ ಜಯಲಲಿತಾ ಎಂಜಿಆರ್ ನಿವಾಸಕ್ಕೆ ಧಾವಿಸಿದ್ದರು. ಆದರೆ ಅಲ್ಲಿ ಅವರಿಗೆ ಪ್ರವೇಶ ಸಿಕ್ಕಿರಲಿಲ್ಲ. ರಾಜಾಜಿಹಾಲ್ ನಲ್ಲಿ ಎಂಜಿಆರ್ ಪಾರ್ಥಿವ ಶರೀರದ ಮುಂದೆ 2 ದಿನ ಮೌನವಾಗಿ ಜಯಲಲಿತಾ ನಿಂತಿದ್ದರು. ಶವಸಂಸ್ಕಾರ ಮೆರವಣಿಗೆ ವಾಹನ ಏರಲು ಜಯ ಮೇಲಕ್ಕೆ ಹತ್ತಿದ್ದಾಗ ಕೆಲ ಶಾಸಕರು ಹಾಗೂ ಎಂಜಿಆರ್ ಪತ್ನಿ ಜಾನಕಿ ಸಂಬಂಧಿಕರು, ಹಿಯಾಳಿಸಿ ವಾಹನದಿಂದ ಕೆಳಕ್ಕೆ ದೂಡಿದರು. ಜಯಲಲಿತಾರನ್ನು ಕೆಳಕ್ಕೆ ದೂಡುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಅಂದೇ ಬಾರಿ ಸದ್ದು ಮಾಡಿತ್ತು.

    ಎಂಜಿಆರ್ ನಿಧನದ ಬಳಿಕ ಪಕ್ಷ ಜಾನಕಿ ರಾಮಚಂದ್ರನ್ ಮತ್ತು ಜಯಲಲಿತಾ ಬಣಗುತ್ತದೆ. ಜಾನಕಿ ರಾಮಚಂದ್ರನ್ 1988ರಲ್ಲಿ 96 ಮಂದಿ ಶಾಸಕರ ಬೆಂಬಲ ಪಡೆದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ. ವಿಧಾನಸಭೆಯಲ್ಲೂ ಬಹುಮತವನ್ನು ಸಾಬೀತು ಪಡಿಸುವಲ್ಲೂ ಯಶಸ್ವಿ ಆಗುತ್ತಾರೆ. ಆದರೆ ಪ್ರಧಾನಿ ರಾಜೀವ್ ಗಾಂಧಿ 356ನೇ ವಿಧಿಯನ್ನು ಬಳಸಿ ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರುತ್ತಾರೆ.

    1989ರಲ್ಲಿ ಮೊದಲ ಬಾರಿಗೆ ಜಯಲಲಿತಾ ಶಾಸಕಿಯಾಗಿ ಆಯ್ಕೆ ಆಗುತ್ತಾರೆ. ಜಯಲಲಿತಾ ಸಾರಥ್ಯದಲ್ಲಿ ಎಐಎಡಿಎಂಕೆ 27 ಸ್ಥಾನಗಳಲ್ಲಿ ಜಯಗಳಿಸುತ್ತದೆ. ಈ ಮೂಲಕ ಜಯಲಲಿತಾ ವಿರೋಧ ಪಕ್ಷದ ನಾಯಕಿಯಾಗಿ ಆಯ್ಕೆ ಆಗುತ್ತಾರೆ. ಈ ವೇಳೆ ಪಕ್ಷಕ್ಕೆ ಎರಡು ಎಲೆಯ ಚಿಹ್ನೆಯನ್ನು ಸೇರಿಸುತ್ತಾರೆ. ಎಂಜಿಆರ್ ಅಂತ್ಯಕ್ರಿಯೆ ವೇಳೆ ಸೆರೆಯಾದ ಫೋಟೋ ಮತ್ತು ವಿಡಿಯೋ ಜಯ ಗೆಲುವಿಗೆ ಸಹಕಾರಿ ಆಯ್ತು ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

    ಹರಿದ ಸೀರೆ ಫೋಟೋದಿಂದ ಗೆಲುವು!
    ಮಾರ್ಚ್, 25 1989ರಂದು ತಮಿಳುನಾಡಿನ ವಿಧಾನಸೌಧದ ಒಳಗಡೆ ಚರ್ಚೆಯ ವೇಳೆ ಆಡಳಿತ ಪಕ್ಷ ಡಿಎಂಕೆ ಮತ್ತು ವಿರೋಧ ಪಕ್ಷದ ಶಾಸಕರ ಮಧ್ಯೆ ಗಲಾಟೆ ನಡೆಯುತ್ತದೆ. ಈ ವೇಳೆ ಜಯಲಲಿತಾ ಅವರನ್ನು ಡಿಎಂಕೆ ಸದಸ್ಯರು ನಿಂದಿಸುತ್ತಾರೆ. ಅವರ ಮೇಲೆ ದಾಳಿ ಮಾಡುತ್ತಾರೆ. ಈ ದಾಳಿಯ ವೇಳೆ ಜಯಲಲಿತಾ ಅವರ ಸೀರೆ ಹರಿದುಹೋಗುತ್ತದೆ. ಹರಿದ ಸೇರೆಯೊಂದಿಗೆ, ಆಳುತ್ತಾ ಸದನದದಿಂದ ಹೊರ ಬರುತ್ತಿರುವ ದೃಶ್ಯ ಮಾಧ್ಯಮಗಳಲ್ಲಿ ಪ್ರಕಟವಾಗುತ್ತದೆ. ಈ ಫೋಟೋ ನೋಡಿದ ಜನತೆ ಜಯಲಲಿತಾ ಪರ ವಾಲುತ್ತಾರೆ. “ಮಹಾಭಾರತದಲ್ಲಿ ತುಂಬಿದ ಸಭೆಯಲ್ಲಿ ದ್ರೌಪದಿಗೆ ಹೇಗೆ ಅಪಮಾನವಾಗುತ್ತದೋ ಅದೇ ರೀತಿಯಾಗಿ ಡಿಎಂಕೆ ನಾಯಕರು ಜಯಲಲಿತಾಗೆ ಅಪಮಾನ ಮಾಡಿದ್ದಾರೆ” ಎಂದು ಜಯ ಪರ ನಾಯಕರು ಪ್ರಚಾರ ಮಾಡುತ್ತಾರೆ. ಇದೇ ವೇಳೆ ನಾನು ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಹೊರತು ನಾನು ಸದನವನ್ನು ಪ್ರವೇಶ ಮಾಡುವುದಿಲ್ಲ ಎಂದು ಜಯ ಪ್ರತಿಜ್ಞೆ ಮಾಡುತ್ತಾರೆ. ಈ ಎಲ್ಲ ಘಟನೆಗಳು ನಡೆದ ಬಳಿಕ 1989ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್- ಎಐಡಿಎಂಕೆ ಮೈತ್ರಿಕೂಟ 39 ಸ್ಥಾನಗಳಲ್ಲಿ 38ರಲ್ಲಿ ಗೆಲುವು ಸಾಧಿಸುತ್ತದೆ.

    1991ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಜಯಾ ಪಕ್ಷ 164 ಸ್ಥಾನಗಳನ್ನು ಗೆಲ್ಲುತ್ತದೆ. ಮಿತ್ರ ಪಕ್ಷವಾದ ಕಾಂಗ್ರೆಸ್ 60ರಲ್ಲಿ ಜಯಗಳಿಸುತ್ತದೆ. ಒಟ್ಟು 234 ಕ್ಷೇತ್ರಗಳಲ್ಲಿ ಜಯಾ – ಕಾಂಗ್ರೆಸ್ ಮೈತ್ರಿಕೂಟ 224 ಸ್ಥಾನಗಳಲ್ಲಿ ಜಯಗಳಿಸುತ್ತದೆ. ಭರ್ಜರಿ ಬಹುಮತ ಪಡೆದು ಜಯಲಲಿತಾ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ.

    ಈಗ ಆರ್.ಕೆ ನಗರದ ಉಪಚುನಾವಣೆಗೂ ಮುನ್ನ ವಿಡಿಯೋ ರಿಲೀಸ್ ಆಗಿದ್ದು, ಈ ವಿಡಿಯೋ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದು ಡಿಸೆಂಬರ್ 24ರ ಫಲಿತಾಂಶ ಬಂದಾಗ ತಿಳಿಯಲಿದೆ.

     

    https://www.youtube.com/watch?v=gZTeqiaWTh4&feature=youtu.be

  • ಮಗಳನ್ನ ಅತ್ಯಾಚಾರ ಮಾಡಿದ ತಂದೆಗೆ 43 ವರ್ಷ ಜೈಲು ಶಿಕ್ಷೆ

    ಮಗಳನ್ನ ಅತ್ಯಾಚಾರ ಮಾಡಿದ ತಂದೆಗೆ 43 ವರ್ಷ ಜೈಲು ಶಿಕ್ಷೆ

    ಚೆನ್ನೈ: 14 ವರ್ಷದ ಮಗಳ ಮೇಲೆ ಅತ್ಯಾಚಾರ ಮಾಡಿದ್ದ ದೋಷಿ ತಂದೆಗೆ ತಮಿಳುನಾಡಿನ ತಿರುಚ್ಚಿಯಲ್ಲಿರುವ ಮಹಿಳಾ ಕೋರ್ಟ್ 43 ವರ್ಷ ಜೈಲು ಶಿಕ್ಷೆ ವಿಧಿಸಿ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.

    2013 ಜುಲೈ ನಲ್ಲಿ ಅರಸಂಕುಡಿ ಗ್ರಾಮದ ಆರೋಪಿ ಕಾಮರಾಜ್ ತನ್ನ ಅಪ್ರಾಪ್ತ ಮಗಳ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದ. ಅಷ್ಟೇ ಅಲ್ಲದೇ ಪತ್ನಿಗೂ ಕೂಡ ಜೀವ ಬೆದರಿಕೆ ಒಡ್ಡಿದ್ದ. ಈ ಎಲ್ಲಾ ಪ್ರಕರಣಗಳ ಮೇಲಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗುರುವಾರ ನ್ಯಾ. ಜಸಿಂತಾ ಮಾರ್ಟಿನ್ ಕಾಮರಾಜ್‍ಗೆ 43 ವರ್ಷ ಜೈಲು ಶಿಕ್ಷೆ ಮತ್ತು ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ.

    ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ 2015 ಮಾರ್ಚ್ 5ರಂದು ಮಗುವಿಗೆ ಜನ್ಮ ನೀಡಿದ್ದಳು. ಆದರೆ ದುರದೃಷ್ಟವಶಾತ್ ಅದೇ ವರ್ಷ ಸಂತ್ರಸ್ತೆ ಮೃತಪಟ್ಟಿದ್ದಳು. ಪತ್ನಿ ನೀಡಿದ ದೂರಿನ ಅನ್ವಯ ಪೊಲೀಸರು ಪೋಸ್ಕೋ ಕಾಯ್ದೆ ಅಡಿ ಕಾಮರಾಜ್ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ಆರೋಪಿ ವಿರುದ್ಧ 506 ಅಡಿಯಲ್ಲಿ ಕ್ರಿಮಿನಲ್ ಕೇಸ್ ಕೂಡ ದಾಖಲಿಸಿಕೊಂಡಿದ್ದರು. ನ್ಯಾಯಾಧೀಶರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ 43 ವರ್ಷ ಶಿಕ್ಷೆ ನೀಡಿದ್ದಾರೆ.

    ಅತ್ಯಾಚಾರ ಪ್ರಕರಣಕ್ಕೆ 43 ವರ್ಷ ಜೈಲು ಶಿಕ್ಷೆ, ಹೆಂಡತಿಗೆ ಜೀವ ಬೆದರಿಕೆ ಹಾಕಿದ್ದಕ್ಕೆ ಒಂದು ವರ್ಷ ಕಠಿಣ ಶಿಕ್ಷೆ ಹಾಗೂ ಪೋಸ್ಕೋ ಕಾಯ್ದೆಯಡಿ 1 ಸಾವಿರ ರೂ. ಮತ್ತು ಪತ್ನಿಗೆ ಜೀವ ಬೆದರಿಕೆ ಹಾಕಿದ್ದಕ್ಕೆ 500 ರೂ. ದಂಡ ವಿಧಿಸಲಾಗಿದೆ.

    ಪತಿ ಅತ್ಯಾಚಾರ ಎಸಗಿ ಮಗಳು 7 ತಿಂಗಳ ಗರ್ಭಿಣಿ ಆಗಿರುವುದನ್ನು ತಿಳಿದು 2014 ರ ಡಿಸೆಂಬರ್‍ನಲ್ಲಿ ದೂರು ದಾಖಲಿಸಿದ್ದಳು.

  • ಓಖಿ ಚಂಡಮಾರುತದ ಅಬ್ಬರ- ಮಂಗಳೂರಲ್ಲಿ 4 ಮಿನಿ ಹಡಗು ಮುಳುಗಿ 8 ಮಂದಿ ಕಣ್ಮರೆ

    ಓಖಿ ಚಂಡಮಾರುತದ ಅಬ್ಬರ- ಮಂಗಳೂರಲ್ಲಿ 4 ಮಿನಿ ಹಡಗು ಮುಳುಗಿ 8 ಮಂದಿ ಕಣ್ಮರೆ

    – ಮಂಡ್ಯ, ಕಾರವಾರದಲ್ಲೂ ಸೈಕ್ಲೋನ್ ಹೊಡೆತ
    – 14 ಜನರ ಸಾವು, 223 ಜನರ ರಕ್ಷಣೆ

    ತಿರುವನಂತರಪುರ: ಕನ್ಯಾಕುಮಾರಿ ಸೇರಿದಂತೆ ಕೇರಳದ ಕರಾವಳಿಯಲ್ಲಿ ಓಖಿ ಚಂಡಮಾರುತದ ಅಬ್ಬರ ಹೆಚ್ಚಾಗಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿದೆ. ರಾಜ್ಯದ ಮಂಗಳೂರು ಕರಾವಳಿಗೂ ಓಖಿ ಚಂಡಮಾರತ ಅಪ್ಪಳಿಸಿದ್ದು, ಚಂಡಮಾರುತದ ರಭಸಕ್ಕೆ 4 ಮೀನುಗಾರಿಕಾ (ವೆಸಲ್) ಹಡುಗು ಮುಳುಗಡೆಯಾಗಿದೆ.

    ಇದರ ಜೊತೆಗೆ ಇನ್ನೊಂದು ವೆಸಲ್ ನಾಪತ್ತೆಯಾಗಿದ್ದು, ಅದರಲ್ಲಿದ್ದ 8 ಮಂದಿ ಕಾರ್ಮಿಕರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ ವೆಸಲ್‍ನ ಮಾಲೀಕರು, ಸಾಮಾಗ್ರಿಗಳನ್ನು ಕಳಿಸುತ್ತಿರುವ ಬಳಕೆದಾರರು ಆತಂಕ ವ್ಯಕ್ತಪಡಿಸಿದ್ದಾರೆ.

    ಮಂಗಳೂರಲ್ಲಿ ಅನಾಹುತದ ಬೆನ್ನಲ್ಲೇ ಕಾರವಾರದಲ್ಲೂ ಓಖಿ ಸೈಕ್ಲೋನ್ ಗಂಟೆಗೆ 40 ಕಿ.ಮೀ ವೇಗದಲ್ಲಿ ಅಪ್ಪಳಿಸುತ್ತಿದೆ. ಇದರಿಂದ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು, ಮೀನುಗಾರರಿಗೆ ಕಟ್ಟೆಚ್ಚರ ವಹಿಸುವಂತೆ ಆದೇಶ ನೀಡಲಾಗಿದೆ. ಓಖಿ ಪ್ರಭಾವ ಸತತ 48 ಗಂಟೆಗಳ ಕಾಲ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    ಓಖಿ ಚಂಡಮಾರುತದ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿಯೂ ಸಹ ಕಟ್ಟೆಚ್ಚರ ವಹಿಸಲಾಗಿದೆ. ಅರಬ್ಬಿ ಸಮುದ್ರದಲ್ಲಿ ಅಲೆಗಳು ಹೆಚ್ಚು ಏಳುತ್ತಿದ್ದು ಗಂಟೆಗೆ 35 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಈ ಕಾರಣದಿಂದ ಎರಡು ದಿನಗಳವರೆಗೆ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಇನ್ನು ಕಾರವಾರ ಭಾಗದಲ್ಲಿ ನಾರ್ತ್ ಈಸ್ಟ್ ನಿಂದ ಬೀಸುತ್ತಿರುವ ಬಿರುಗಾಳಿಯ ಪ್ರಮಾಣ ತಗ್ಗಿದೆ. ಗಾಳಿಯು ದಿಕ್ಕು ಬದಲಿಸುತ್ತಿದ್ದು ಜಿಲ್ಲೆಯ ಕರಾವಳಿ ಭಾಗದಲ್ಲಿ ಇಂದು ಸಂಜೆ ಅಥವಾ ನಾಳೆ ಸಂಜೆ ಒಳಗೆ ತುಂತುರು ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

     

    ಕರಾವಳಿ ಭಾಗದಲ್ಲಿ ಮಾತ್ರವಲ್ಲದೇ ಮಂಡ್ಯ, ಕೋಲಾರದಲ್ಲೂ ಸೈಕ್ಲೋನ್ ಭೀತಿ ಎದುರಾಗಿದೆ. ಓಖಿ ಚಂಡಮಾರುತದಿಂದಾಗಿ ಕಟಾವಿಗೆ ಬಂದಿರುವ ಭತ್ತ, ರಾಗಿ ಆಹಾರ ಪದಾರ್ಥಗಳು ಬಿರುಗಾಳಿಗೆ ನಾಶವಾಗುವ ಆಂತಕವನ್ನು ರೈತರು ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕಟಾವು ಮಾಡಲಾಗಿರುವ ಬೆಳೆಗಳು ಮಳೆಗೆ ನಾಶವಾಗಿದೆ. ಮಂಡ್ಯದ ಮದ್ದೂರು ತಾಲೂಕಿನ ವೈದ್ಯನಾಥಪುರದಲ್ಲಿ ರೈತ ಬೆಳೆದ ಭತ್ತದ ಬೆಳೆ ನಾಶವಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂಥ ಸ್ಥಿತಿ ನಿರ್ಮಾಣವಾಗಿದೆ.

    ಜಿಲ್ಲೆಯ ಮದ್ದೂರು ತಾಲೂಕಿನ, ವೈದ್ಯನಾಥಪುರ ಗ್ರಾಮದ ರೈತರು ಚಂಡಮಾರುತದ ಅರಿವಿಲ್ಲದೇ ತೆನೆ ಬಂದಿದ್ದ ಸುಮಾರು ನಾಲ್ಕು ಎಕರೆ ಪ್ರದೇಶದ ಭತ್ತದ ಪೈರನ್ನು ಕಟಾವು ಮಾಡಿದ್ದರು. ಆದರೆ ಭತ್ತದ ಪೈರನ್ನು ಒಕ್ಕಣೆ ಮಾಡುವ ಮುನ್ನವೇ ಮಳೆ ಸುರಿದು ಗದ್ದೆಯಲ್ಲಿ ನೀರು ನಿಂತಿದೆ. ಪರಿಣಾಮ ಭತ್ತದ ಬೆಳೆ ಸಂಪೂರ್ಣ ನೀರಿನಲ್ಲಿ ನೆನೆದು ಹೋಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.

    ಸಮುದ್ರಕ್ಕೆ ತೆರಳಿದ ಮೀನುಗಾರರನ್ನು ಭಾರತೀಯ ನೌಕಾ ಪಡೆ ಹೆಲಿಕಾಪ್ಟರ್ ಗಳ ಮೂಲಕ ರಕ್ಷಣೆ ಮಾಡುತ್ತಿದ್ದು, ಇದುವರೆಗೂ ಸುಮಾರು 223 ಜನರನ್ನು ರಕ್ಷಣೆ ಮಾಡಿದೆ. ಇನ್ನು ಸಮುದ್ರಕ್ಕೆ ತೆರಳಿದ 40 ರಿಂದ 60 ಮೀನುಗಾರರ ಸುಳಿವು ಸಿಕ್ಕಿಲ್ಲ ಎಂದು ವರದಿಯಾಗಿದೆ. ಈವರೆಗೆ 14 ಜನ ಮೃತಪಟ್ಟಿದ್ದಾರೆ.

    ಭಾರತೀಯ ನೌಕಪಡೆ ರಕ್ಷಣಾ ಕಾರ್ಯಚಾರಣೆ ಕೈಗೊಂಡಿರುವ ದೃಶ್ಯಗಳು ಲಭ್ಯವಾಗಿದೆ. ಇನ್ನು ಸಮುದ್ರಕ್ಕೆ ತೆರಳಿರುವ ಮೀನುಗಾರರ ಕುಟುಂಬಸ್ಥರು ಸಮುದ್ರ ದಡದಲ್ಲೇ ಕಾದು ಕುಳಿತ್ತಿದ್ದು, ನೀರು ಆಹಾರವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ.

    https://www.youtube.com/watch?v=FlExdKZ96-U

    https://www.youtube.com/watch?v=IskPbU9PesM

     

     

  • ಹೆಲ್ಮೆಟ್ ಧರಿಸದ್ದಕ್ಕೆ ಪೇದೆಯಿಂದ ಲಾಠಿ ಏಟು: ರಸ್ತೆಗೆ ಬಿದ್ದ ಸವಾರನ ತಲೆಗೆ ಬಿತ್ತು ಪೆಟ್ಟು

    ಹೆಲ್ಮೆಟ್ ಧರಿಸದ್ದಕ್ಕೆ ಪೇದೆಯಿಂದ ಲಾಠಿ ಏಟು: ರಸ್ತೆಗೆ ಬಿದ್ದ ಸವಾರನ ತಲೆಗೆ ಬಿತ್ತು ಪೆಟ್ಟು

    ಕನ್ಯಾಕುಮಾರಿ: ಹೆಲ್ಮೆಟ್ ಧರಿಸದೆ ಬೈಕ್ ರೈಡ್ ಮಾಡುತ್ತಿದ್ದ ಸವಾರನ ತಲೆಗೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಪೊಲೀಸ್ ಪೇದೆಯೊಬ್ಬರು ಲಾಠಿಯಿಂದ ಹೊಡೆಯುತ್ತಿರುವ ವಿಡಿಯೋ ಒಂದು ವೈರಲ್ ಆಗಿ ಭಾರೀ ಟೀಕೆಗೆ ಗುರಿಯಾಗಿದೆ.

    ಘಟನೆಯಲ್ಲಿ ಗಾಯಗೊಂಡ ಯುವಕ ಸೆರುಕೋಲ್ ನಿವಾಸಿ ರಾಕೇಶ್ ಎಂದು ತಿಳಿದು ಬಂದಿದ್ದು, ಪೊಲೀಸ್ ಪೇದೆಯ ಕೃತ್ಯ ಸಿಸಿಟಿವಿ ಸೆರೆಯಾಗಿದೆ.

    ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿರುವ ಪ್ರಕಾರ ನವೆಂಬರ್ 23 ರ ಸಂಜೆ 5.30 ರ ವೇಳೆಯಲ್ಲಿ ಘಟನೆ ನಡೆದಿದ್ದು, ಹೆಲ್ಮೆಟ್ ಧರಿಸದೆ ಬಂದ ಬೈಕ್ ಸವಾರ ರಾಕೇಶ್ ನನ್ನು ಪೇದೆ ತಡೆಯಲು ಯತ್ನಿಸಿದ್ದಾರೆ. ಈ ವೇಳೆ ರಾಕೇಶ್ ಬೈಕ್ ನಿಲ್ಲಿಸದೆ ಹೋದ ಸಂದರ್ಭದಲ್ಲಿ ಪೊಲೀಸ್ ಪೇದೆ ತಲೆಗೆ ಲಾಠಿಯಿಂದ ಹೊಡೆದಿದ್ದಾರೆ. ಇದರ ಪರಿಣಾಮವಾಗಿ ರಾಕೇಶ್ ಬೈಕ್ ಸಮೇತ ಕೆಳಗೆ ಬಿದ್ದಿದ್ದು, ಲಾಠಿ ಏಟಿಗೆ ತಲೆಗೆ ತೀವ್ರ ಗಾಯವಾಗಿ ರಕ್ತ ಹೊರ ಚಿಮ್ಮಿದೆ.

    ಇದನ್ನೂ ಓದಿ: ಬೆಂಗ್ಳೂರಲ್ಲಿ ಮನಕಲಕುವ ದುರಂತ- ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಮೊಮ್ಮಗನನ್ನು ಕಳೆದುಕೊಂಡ ಬೈಕ್ ಸವಾರ

    ಘಟನೆ ನಂತರ ಗಾಯಗೊಂಡ ರಾಕೇಶ್ ನನ್ನು ಪೊಲೀಸರು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಪೇದೆಯ ವರ್ತನೆಗೆ ಸಾರ್ವಜನಿಕರು ಪ್ರತಿಭಟನೆ ನಡೆಸಿಲು ಯತ್ನಿಸಿದ್ದು, ಈ ವೇಳೆ ಸಾರ್ವಜನಿಕರೊಂದಿಗೂ ಪೊಲೀಸರು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪ ಕೇಳಿಬಂದಿದೆ.

    ಘಟನೆ ಕುರಿತು ಮಾಹಿತಿ ನೀಡಿದ ಕನ್ಯಾಕುಮಾರಿ ಎಸ್‍ಪಿ ಧುರೈ, ಯುವಕನ ಮೇಲೆ ದಾಳಿ ನಡೆಸಿದ ಪೊಲೀಸ್ ಪೇದೆ ಮರಿಯಾ ಅಕ್ರಾಸ್ ರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    https://www.youtube.com/watch?time_continue=54&v=rIv99wmVLGk