Tag: Tamil Nadu Police

  • ಕೋಲಾರದಲ್ಲಿ ಕೊಲೆ, ತಮಿಳುನಾಡಿನಲ್ಲಿ ಶವ ಪತ್ತೆ – 6 ವರ್ಷಗಳ ಬಳಿಕ ಪ್ರಕರಣ ಭೇದಿಸಿದ ಶಿಡ್ಲಘಟ್ಟ ಪೊಲೀಸ್‌

    ಕೋಲಾರದಲ್ಲಿ ಕೊಲೆ, ತಮಿಳುನಾಡಿನಲ್ಲಿ ಶವ ಪತ್ತೆ – 6 ವರ್ಷಗಳ ಬಳಿಕ ಪ್ರಕರಣ ಭೇದಿಸಿದ ಶಿಡ್ಲಘಟ್ಟ ಪೊಲೀಸ್‌

    – ತಮಿಳುನಾಡು ಪೊಲೀಸರು ಭೇದಿಸಲಾಗದೇ ಕೈಚೆಲ್ಲಿದ್ದ ಕೇಸ್

    ಚಿಕ್ಕಬಳ್ಳಾಪುರ: ಅದು 6 ವರ್ಷಗಳ ಹಿಂದೆ ನಡೆದ ಕಿಡ್ನಾಪ್ ಮತ್ತು ಕೊಲೆ ಪ್ರಕರಣ. ಆರು ವರ್ಷ ಕಳೆದ್ರೂ ನಿಗೂಢವಾಗಿ ಕಾಣೆಯಾಗಿದ್ದ ಆಟೋ ಚಾಲಕನ ಕೊಲೆ ಆಗಿದೆ ಅಂತ ಗೊತ್ತಿದ್ರೂ, ಆರೋಪಿಗಳ ಬಂಧನ ಆಗೇ ಇರಲಿಲ್ಲ. ಮನೆಯವರು ಸಹ ಸತ್ತವನು ಸತ್ತ ಅಂತ ಸುಮ್ಮನಾಗಿದ್ರು. ಇನ್ನೂ ಕೊಲೆ ಮಾಡಿದವರು ಸಹ ಆರಾಮಾಗಿ ಕೆಲಸ ಕಾರ್ಯ ಮಾಡಿಕೊಂಡು ಒಡಾಡಿಕೊಂಡು ಇದ್ರು. ಆದ್ರೆ 6 ವರ್ಷಗಳ ನಂತರ ಕೊಲೆ ಮಾಡಿದ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಲಾಗಿದೆ.

    ಹೌದು. ಹೀಗೆ ಪೊಲೀಸರ ಅತಿಥಿಗಳಾಗಿ ಜೈಲು ಸೇರಿರೋ ಆರೋಪಿಗಳ ಹೆಸರು ಹರೀಶ್ ಅಲಿಯಾಸ್ ಅಫಲ್, ದಿವಾಕರ್, ಮಾರ್ತಾಂಡಾ ಅಲಿಯಾಸ್ ಕೊಂಡಾ, ರಂಜಿತ್ ಕುಮಾರ್ ಅಲಿಯಾಸ್ ಎಗ್ ರೈಸ್ ರಂಜಿತ್, ಮಂಜುನಾಥ ಅಲಿಯಾಸ್ ಕಾಡೆಮ್ಮೆ ಅಂತ. ಇದನ್ನೂ ಓದಿ: ಸಮೀರ್‌ಗೆ ತಪ್ಪದ ಸಂಕಷ್ಟ – ಕಡೂರು ಠಾಣೆಯಲ್ಲಿ ಮತ್ತೊಂದು ದೂರು!

    ಅಂದಹಾಗೆ ಈಗ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪೊಲೀಸರ ಅತಿಥಿಗಳಾಗಿ ಜೈಲು ಸೇರಿರೋ ಈ ಆರೋಪಿಗಳು 6 ವರ್ಷಗಳಿಂದ ತಮಗೇನು ಗೊತ್ತೆ ಇಲ್ಲ. ತಾವ್ಯಾರನ್ನ ಮರ್ಡರ್ ಮಾಡೇ ಇಲ್ಲ ಕಿಡ್ನಾಪ್ ಅಂತೂ ಮೊದಲೇ ಮಾಡಿಲ್ಲ ಅನ್ನೋ ಹಾಗೆ ಜೀವನ ರೂಪಿಸಿಕೊಂಡು ಒಡಾಡಿಕೊಂಡಿದ್ರು. ಆದ್ರೆ 6 ವರ್ಷಗಳ ನಂತರ ಈಗ ಆರೋಪಿಗಳು ಮಾಡಿರೋ ಕಿಡ್ನಾಪ್ ಕೊಲೆ ಪ್ರಕರಣ ಬಯಲಾಗಿದೆ. ಇದನ್ನೂ ಓದಿ: ಬೆಂಗಳೂರಿನ ಸವಾರರಿಗೆ ಗುಡ್‌ನ್ಯೂಸ್‌ – ದಂಡ ಪಾವತಿಗೆ 50% ಡಿಸ್ಕೌಂಟ್ 

    5 ಮಂದಿ ಆರೋಪಿತರು ಸೇರಿದಂತೆ ತಲೆ ಮರೆಸಿಕೊಂಡಿರೋ ಮಹೇಶ್ ಅಲಿಯಾಸ್ ಹಂಡಿಗನಾಳ ಮಹೇಶ. ಹಾಗೂ ತಮಿಳುನಾಡು ಪೊಲೀಸರ ಬಂಧಿಸಿರೋ ಜಾಕಿ ಅಲಿಯಾಸ್ ಶಿವಶಂಕರ್ ಹಾಗೂ ಇತರರು ಸೇರಿ ಶಿಡ್ಲಘಟ್ಟ ಪಟ್ಟಣದ ರಾಜೀವ್ ಗೌಡ ಬಡಾವಣೆಯ ನಿವಾಸಿ 27 ವರ್ಷದ ಗಿರೀಶ್ ನನ್ನ ಕಿಡ್ನಾಪ್ ಮಾಡಿ ಕೊಲೆ ಮಾಡಿದ್ರು. ಶಿಡ್ಲಘಟ್ಟಲ್ಲಿ ಕಿಡ್ನಾಪ್ ಮಾಡಿದ ಆರೋಪಿಗಳು ಗಿರೀಶ್ ನನ್ನ ಕೋಲಾರದ ನರಸಾಪುರ ಹೊಸಕೋಟೆ ಮಾಲೂರು ಮಾರ್ಗದಲ್ಲಿ ಕಾರಿನಲ್ಲಿ ಕಿಡ್ನಾಪ್‌ ಮಾಡಿ, ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ರು. ಬಳಿಕ ಮೃತದೇಹವನ್ನ ತಮಿಳುನಾಡಿನ ಡೆಂಕಣಿಕೋಟೆ ಬಳಿಯ ತಳಿ ರಸ್ತೆಯ ಕೆರೆಯೊಂದರಲ್ಲಿ ಬಿಸಾಡಿ ಬಂದಿದ್ರು. ಅನ್ನೋದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

    ಕೇಸ್‌ ಹಿನ್ನೆಲೆ ಏನು?
    2019ರ ಮೇ 12ರಂದು ಗಿರೀಶ್‌ನನ್ನ ಕಿಡ್ನಾಪ್ ಮಾಡಲಾಗಿತ್ತು. ಕೊಲೆಯಾದ ಗಿರೀಶ್ ಶಿಡ್ಲಘಟ್ಟ ಬಸ್ ನಿಲ್ದಾಣದ ಬಳಿ ಆಟೋ ಚಾಲಕನಾಗಿದ್ದ. ಆರೋಪಿಗಳಾದ ಜಾಕಿ, ಹರೀಶ್ ಜೊತೆ ಗಿರೀಶ್ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದ. ಮೂರ್ನಾಲ್ಕು ಬಾರಿ ಜಗಳಗಳಾಗಿದ್ದು ಇದನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದ ಜಾಕಿ ಹಾಗೂ ಹರೀಶ್. ಪ್ಲ್ಯಾನ್‌ ಪ್ಲಾನ್ ಮಾಡಿ ಗಿರೀಶ್ ಕೊಲೆ ಮಾಡೋಕೆ ಸಂಚು ರೂಪಿಸಿದ್ರು. ಅಪರಿಚಿತ ಮೃತದೇಹ ಸಿಕ್ಕ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ತಮಿಳುನಾಡಿನ ತಳಿ ಪೊಲೀಸರು 6 ವರ್ಷಗಳ ಕಾಲ ತನಿಖೆ ಮಾಡಿದ್ರೂ ಸೂಕ್ತ ತನಿಖೆ ನಡೆಸಿರಲಿಲ್ಲ. ಕೊನೆಗೆ ಕರ್ನಾಟಕಕ್ಕೆ ಕೇಸ್ ವರ್ಗಾವಣೆ ಮಾಡಿದ್ದು, ಈಗ ಶಿಡ್ಲಘಟ್ಟ ಪೊಲೀಸರು ಪ್ರಕರಣದಲ್ಲಿನ 5 ಮಂದಿ ಆರೋಪಿಗಳನ್ನ ಬಂಧಿಸಿದ್ದು. ಮತ್ತೋರ್ವ ಆರೋಪಿ ಮಹೇಶ್ ಅಲಿಯಾಸ್ ಹಂಡಿಗನಾಳ ಮಹೇಶ್‌ಗಾಗಿ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಮುಧೋಳ-ಯಾದವಾಡ ಸಂಪರ್ಕ ಕಡಿತ – ಘಟಪ್ರಭೆಗೆ ಹರಿದು ಬರುತ್ತಿದೆ 62 ಸಾವಿರ ಕ್ಯೂಸೆಕ್‌ ನೀರು

  • ದೇವಸ್ಥಾನದ ಪ್ರತಿಮೆ ನವೀಕರಿಸುವ ನೆಪದಲ್ಲಿ ದೇಣಿಗೆ ಸಂಗ್ರಹ- ಯುಟ್ಯೂಬರ್ ಅರೆಸ್ಟ್

    ದೇವಸ್ಥಾನದ ಪ್ರತಿಮೆ ನವೀಕರಿಸುವ ನೆಪದಲ್ಲಿ ದೇಣಿಗೆ ಸಂಗ್ರಹ- ಯುಟ್ಯೂಬರ್ ಅರೆಸ್ಟ್

    ಚೆನ್ನೈ: ದೇವಸ್ಥಾನದ ಉಪದೇವಾಲಯಗಳ ಪ್ರತಿಮೆಗಳನ್ನು ನವೀಕರಿಸುವ (ಜೀರ್ಣೋದ್ಧಾರ) ಮಾಡುವ ನೆಪದಲ್ಲಿ ಲಕ್ಷಾಂತರ ರೂಪಾಯಿ ದೇಣಿಗೆ ಸಂಗ್ರಹಿಸಿ ದುರುಪಯೋಗ ಪಡಿಸಿಕೊಂಡಿರುವ ಯುಟ್ಯೂಬರ್‌ನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

    ಪೆರಂಬಲೂರಿನ ಅರುಲ್ಮಿಗು ಮಧುರ ಕಾಳಿಯಮ್ಮನ್ ತಿರುಕೋಯಿಲ್‌ನ ಕಾರ್ಯನಿರ್ವಾಹಕ ಅಧಿಕಾರಿ ಟಿ.ಅರವಿಂದನ್ ಅವರ ದೂರಿನ ಆಧಾರದ ಮೇಲೆ ಕೇಂದ್ರ ಅಪರಾಧ ವಿಭಾಗದ (CCB) ಅವಡಿ ಪೊಲೀಸರು `ಇಳಯ ಭಾರತಂ’ ಯುಟ್ಯೂಬ್ ಚಾನೆಲ್‌ನ ಕಾರ್ತಿಕ್ ಗೋಪಿನಾಥ್ ಅವರನ್ನು ಬೆಳಗ್ಗೆ ಬಂಧಿಸಿದ್ದಾರೆ. ಇದನ್ನೂ ಓದಿ: ನಿರ್ಮಾಣ ಹಂತದಲ್ಲಿರುವ ಶೋರೂಂನಲ್ಲಿ ನವವಿವಾಹಿತೆ ಶವ ಪತ್ತೆ

    KILLING CRIME

    ಕಾರ್ತಿಕ್ ಗೋಪಿನಾಥ್ ಇಳಯ ಭಾರತಂ ಹೆಸರಿನಲ್ಲಿ ಯುಟ್ಯೂಬ್ ಚಾನಲ್ ತೆರೆದು ಸಾರ್ವಜನಿಕರಿಗೆ ಹಣ ನೀಡುವಂತೆ ಕೇಳಿಕೊಂಡಿದ್ದಾನೆ. ಮಧುರ ಕಾಳಿಯಮ್ಮನ್ ದೇವಸ್ಥಾನದ ಉಪದೇವಾಲಯಗಳ ಪ್ರತಿಮೆಗಳನ್ನು ನವೀಕರಿಸುವ ನೆಪದಲ್ಲಿ ನಿಧಿ ಸಂಗ್ರಹಕ್ಕಾಗಿ ವೆಬ್‌ಸೈಟ್ ಸಹ ತೆರೆದಿದ್ದನು. ಈ ಸಂಬಂಧ ಹಿಂದೂ ಧಾರ್ಮಿಕ ಮತ್ತು ಧರ್ಮದತ್ತಿ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ನಿಧಿ ಸಂಗ್ರಹಿಸುವ ಕೆಲಸಕ್ಕೆ ಮುಂದಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಸ್ವಂತ ಮಾವನಿಂದಲೇ ಸೊಸೆಯ ಮೇಲೆ ರೇಪ್‌ – ಸುಳ್ಳು ಆರೋಪವೆಂದು ಜಾಮೀನು ಕೊಟ್ಟ ಕೋರ್ಟ್‌

    CRIME 2

    ಆದಾಗ್ಯೂ ಕಾರ್ತಿಕ್ ದೇವಸ್ಥಾನದ ಹೆಸರಿನಲ್ಲಿ ಸಂಗ್ರಹಿಸಿದ್ದ ಹಣವನ್ನು ವೈಯಕ್ತಿಕ ಉದ್ದೇಶಗಳಿಗಾಗಿ ಬಳಸಿಕೊಂಡಿದ್ದಾನೆ ಎಂದು ದೂರಿದ್ದರು. ಈ ಹಿನ್ನೆಲೆಯಲ್ಲಿ ಬಂಧಿಸಿದ ತಮಿಳುನಾಡು ಪೊಲೀಸರು ಐಪಿಸಿ ಸೆಕ್ಷನ್ 406 (ನಂಬಿಕೆ ದ್ರೋಹ) ಮತ್ತು ಸೆಕ್ಷನ್ 420 (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

  • ಅತ್ತಿಗೆ ಕತ್ತು ಹಿಸುಕಿ ಕೊಂದ ಮೈದುನ ಅರೆಸ್ಟ್

    ಅತ್ತಿಗೆ ಕತ್ತು ಹಿಸುಕಿ ಕೊಂದ ಮೈದುನ ಅರೆಸ್ಟ್

    ಚೆನ್ನೈ: ಅತ್ತಿಗೆಯನ್ನು ಮೈದುನ ಮತ್ತು ಅವನ ಸ್ನೇಹಿತರು ಸೇರಿ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ತಮಿಳುನಾಡಿನ ತಿರುಪೋರೂರಿನ ಕಾಮರಾಜರ್ ನಗರದಲ್ಲಿ ನಡೆದಿದ್ದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಸಂತ್ರಸ್ತೆ ಶಾಹಿನ್ಶಾ (26) ಕೊಲೆಗಿಡಾದ ಮಹಿಳೆ. ಕಾರ್ತಿಕ್ (19) ಬಂಧನಕ್ಕೆ ಒಳಗಾದ ಆರೋಪಿ. ಶಾಹಿನ್ಶಾ ತನ್ನ ಅಣ್ಣನ್ನು ಕೊಂದಿದ್ದಾಳೆ ಎಂಬ ಶಂಕೆಯಿಂದ ಆರೋಪಿಯು ಈ ಕೊಲೆಗೈದಿದ್ದಾನೆ. ಇದನ್ನೂ ಓದಿ: ಮೋದಿ ಮೇಲೆ ಅಲ್ಲ ಇದು ಪ್ರತಿಯೊಬ್ಬ ಭಾರತೀಯನ ಮೇಲೆ ನಡೆದ ದಾಳಿ: ಕಂಗನಾ

    ಮೃತಳು ಭಾನುವಾರ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ವಾಸಿಸುತ್ತಿದ್ದಳು. ಕಾರ್ತಿಕ್ ಮತ್ತು ಆತನ ಸ್ನೇಹಿತರು ಕುಡಿದ ಅಮಲಿನಲ್ಲಿದ್ದ ಸಂದರ್ಭದಲ್ಲಿ ಟವೆಲ್‍ನಿಂದ ಅವರ ಕುತ್ತಿಗೆಗೆ ಸುತ್ತಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಘಟನೆಯನ್ನು ಕಂಡ ಶಾಹಿನ್ಶಾಳ ತಾಯಿಯು ಕೆಲಬಕ್ಕಂ ಪೊಲೀಸರಿಗೆ ಮಾಹಿತಿ ನೀಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಪಂಜಾಬ್ ಫ್ಲೈ ಓವರ್‌ನಲ್ಲಿ 20 ನಿಮಿಷ ಸಿಲುಕಿದ ಮೋದಿ – ಕಾರ್ಯಕ್ರಮ ರದ್ದು

    ಮೃತಳು ಕಾರ್ತಿಕ್ ಅಣ್ಣನಾದ ವಿಜಯ್ ಅವರನ್ನು ಮದುವೆ ಆಗಿದ್ದಳು. ಆದರೆ ದುರದೃಷ್ಟವಶಾತ್, ಮದುವೆಯಾದ 2 ವರ್ಷಗಳ ನಂತರ ಅವರು ನಿಧನರಾದರು. ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನೆರೆಹೊರೆಯವರಿಗೆ ಶಾಹಿನ್ಶಾ ತಿಳಿಸಿದ್ದಳು. ಆದರೆ ಈ ಹಿನ್ನೆಲೆ ವಿಜಯ ಅವರ ಸಹೋದರ ಕಾರ್ತಿಕ್ ಮೃತಳ ವಿರುದ್ಧ ಶಂಕಿಸಿ ಅಣ್ಣನದು ಆತ್ಮಹತೈಯೋ ಅಥವಾ ಅತ್ತಿಗೆ ಕುತಂತ್ರವೋ ಅಂತಾ ರಹಸ್ಯವನ್ನು ಬಹಿರಂಗಪಡಿಸಲು ಪ್ರಯತ್ನಿಸುತ್ತಿದ್ದ.

    POLICE JEEP

    ಈ ವೇಳೆ ಶಾಹಿನ್ಶಾ ಮೈದುನನಿಗೆ ನನ್ನನ್ನು ಪೀಡಿಸಿದರೆ ನಿನ್ನ ಸಹೋದರನಿಗಾದ ಗತಿ ನಿನಗೂ ಬರುತ್ತದೆ ಎಂದು ಬೆದರಿಸಿದ್ದಳು. ಈ ಕಾರಣಕ್ಕೆ ಆರೋಪಿಗಳು ಶಾಹಿನ್ಶಾಳನ್ನು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

  • ಲಂಚ ಪಡೆದು ಕರ್ನಾಟಕಕ್ಕೆ ಜನರನ್ನು ಬಿಡ್ತಿರುವ ತಮಿಳುನಾಡು ಪೊಲೀಸರು

    ಲಂಚ ಪಡೆದು ಕರ್ನಾಟಕಕ್ಕೆ ಜನರನ್ನು ಬಿಡ್ತಿರುವ ತಮಿಳುನಾಡು ಪೊಲೀಸರು

    -ದುಡ್ಡು ಕೊಟ್ರೆ ರಾಜ್ಯಕ್ಕೆ ಪಾಸ್ ಇಲ್ಲದಿದ್ರು ಸಿಗುತ್ತೆ ಎಂಟ್ರಿ

    ಬೆಂಗಳೂರು: ತಮಿಳುನಾಡಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದು, ಅಲ್ಲಿನ ಜನಕ್ಕೆ ಪಾಸ್ ಇದ್ದರೆ ಮಾತ್ರ ಕರ್ನಾಟಕಕ್ಕೆ ಪ್ರವೇಶ ಸಿಗುತ್ತದೆ. ಆದರೆ ಅಲ್ಲಿನ ಪೊಲೀಸರಿಗೆ ಸ್ವಲ್ಪ ಹಣ ಕೊಟ್ಟರೆ ಯಾವುದೇ ಪಾಸ್ ಇಲ್ಲದಿದ್ದರೂ ರಾಜ್ಯಕ್ಕೆ ಎಂಟ್ರಿ ಕೊಡಿಸುತ್ತಾರೆ. ಕರ್ನಾಟಕ ಸರ್ಕಾರದ ನಿರ್ಲಕ್ಷ ತಮಿಳುನಾಡು ಪೊಲೀಸರಿಗೆ ವರದಾನವಾಗಿದೆ.

    ಬೆಂಗಳೂರು ಹೊರವಲಯ ಆನೇಕಲ್ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ತಳಿ ಚೆಕ್ ಪೋಸ್ಟ್ ನಲ್ಲಿ ಪೊಲೀಸರಿಗೆ ಹಣ ನೀಡಿದ್ರೆ ಕರ್ನಾಟಕ ಪ್ರವೇಶಿಸಬಹುದು. ತಮಿಳುನಾಡಿನಲ್ಲಿ ಕೊರೊನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆ ಕರ್ನಾಟಕ ಸರ್ಕಾರ ಅಲ್ಲಿನ ಜನ ರಾಜ್ಯ ಪ್ರವೇಶಿಸಲು ಈ ಪಾಸ್ ಹಾಗೂ ಕ್ವಾರಂಟೈನ್ ಕಡ್ಡಾಯ ಮಾಡಿದೆ. ಆದರೆ ಆನೇಕಲ್ ತಾಲೂಕಿನ ಸುತ್ತ ತಮಿಳುನಾಡಿನಿಂದ ಬರುವ ಅನೇಕ ರಸ್ತೆಗಳಿದ್ದು, ಜಿಲ್ಲಾಡಳಿತ ಅತ್ತಿಬೆಲೆಯಲ್ಲಿ ಮಾತ್ರ ಚೆಕ್ ಪೋಸ್ಟ್ ನಿರ್ಮಿಸಿ ತಪಾಸಣೆ ನಡೆಸಲಾಗುತ್ತಿದೆ.

    ಸರ್ಜಾಪುರ, ಸೋಲುರೂ, ಬಳ್ಳೂರು ಇನ್ನು ಕೆಲವು ಕಡೆಗಳಲ್ಲಿ ಕನಿಷ್ಠ ಬ್ಯಾರಿಕೇಡ್ ಕೂಡ ಹಾಕಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ತಮಿಳುನಾಡಿನ ಜನ ಕಳ್ಳ ದಾರಿಯಲ್ಲಿ ರಾಜ್ಯ ಪ್ರವೇಶಿಸುತ್ತಿದ್ದಾರೆ. ಆದ್ರೆ ತಮಿಳುನಾಡು ಸರ್ಕಾರ ಕರ್ನಾಟಕ ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲೂ ಚೆಕ್ ಪೋಸ್ಟ್ ನಿರ್ಮಿಸಿ ಪೊಲೀಸರನ್ನು ನಿಯೋಜಿಸಿದೆ. ಚೆಕ್‍ಪೋಸ್ಟ್ ಗಳಲ್ಲಿ ನಿಯೋಜಿತ ತಮಿಳುನಾಡು ಪೊಲೀಸರು ಈಗ ಹಣ ಮಾಡುವ ದಂಧೆಯಲ್ಲಿ ನಿರತರಾಗಿದ್ದಾರೆ.

    ಹಣ ವಸೂಲಿಗೆಂದೇ ಓರ್ವನನ್ನು ಚೆಕ್ ಪೋಸ್ಟ್ ನಲ್ಲಿ ಇಟ್ಟುಕೊಂಡಿದ್ದು ಆತನಿಂದ ಸಾವಿರ ಗಟ್ಟಲೆ ಹಣ ವಸೂಲಿ ಮಾಡುತ್ತಿದ್ದಾರೆ. ಈ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ತಮಿಳುನಾಡು ಪೊಲೀಸರ ಲಂಚಾವತಾರ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಪೊಲೀಸ್ – ಅವರ ಹತ್ತಿರ ಇದೆ ಹೋಗಿ
    ವಾಹನ ಸವಾರ – ಸರ್ ಅವರ ಹತ್ತಿರ ಇಲ್ಲ ಅಂತೆ

    ಪೊಲೀಸ್ – ಕೊಡಿ.
    ವಾಹನ ಸವಾರ – ಅದಕ್ಕೆ ಫಸ್ಟ್ ಕೇಳ್ಬಿಟ್ಟೆ

    ಪೊಲೀಸ್ – ಎಷ್ಟ್ ಕೊಡ್ತೀರಾ?
    ವಾಹನ ಸವಾರ – ಸರ್ 100… 100 ಅಂತಾ ಹೇಳಿದ್ದಾರೆ.

    ಪೊಲೀಸ್ – ಇಲ್ಲಿ 2 ಚೆಕ್‍ಪೋಸ್ಟ್ ಇದೆ.
    ವಾಹನ ಸವಾರ – ಅದೇ ಅವರಿಗೆ 100, ನಿಮಗೆ 100

    ಪೊಲೀಸ್ – ನನಗೆ 200 ಕೊಡಪ್ಪ
    ವಾಹನ ಸವಾರ – ಸರ್ ನೋಡಿ ಸರ್ ಆನೇಕಲ್‍ನವರೇ ಸರ್.

    ಪೊಲೀಸ್ – ನೋಡು ಸರ್‍ಗೆ ಕೊಟ್ಟುಬಿಡ್ತಿನಿ. ಹೋಗು ಅಲ್ಲಿ 100 ರೂ. ಕೊಟ್ಟು ಹೋಗು.
    ವಾಹನ ಸವಾರ – ಸರ್ 250 ರೂ. ತೆಗೆದುಕೊಂಡಿದ್ದೀರಿ.

    ಪೊಲೀಸ್ – ಇಲ್ಲ 300 ರೂ. ಇದೆ.. ಅಲ್ಲಿ ಹೇಳಿ ಕೊಟ್ಟು ಹೋಗು
    ವಾಹನ ಸವಾರ – ಅಲ್ಲಿ ಕೊಡಬೇಕಾ?

    ಪೊಲೀಸ್ – ಎಷ್ಟೋತ್ತು ಆಗುತ್ತೆ?
    ವಾಹನ ಸವಾರ – ಸರ್ ಒಂದೂವರೆ ಗಂಟೆ ಆಗಬಹುದು ಸರ್.

    ಪೊಲೀಸ್ – ತಮಿಳುನಾಡಲ್ಲ 31 ರವರೆಗೆ ಲಾಕ್‍ಡೌನ್ ಇದೆ ಅದಕ್ಕೆ.. ಏನು ಪ್ರಾಬ್ಲಂ ಇಲ್ಲ. ಎಷ್ಟೋತ್ತಿಗೆ ಬರ್ತಿಯಾ..?
    ವಾಹನ ಸವಾರ – ಒಂದು 8 ಗಂಟೆಯೊಳಗೆ ಬರ್ತಿನಿ