Tag: Tamil Nadu Govt

  • ಕೆಜಿ ಟೊಮೆಟೊಗೆ 60 ರೂ.: ಅರ್ಧ ಬೆಲೆಗೆ ಪಡಿತರ ಕೇಂದ್ರಗಳಲ್ಲೇ ತಮಿಳುನಾಡು ಸರ್ಕಾರದಿಂದ ಮಾರಾಟ

    ಕೆಜಿ ಟೊಮೆಟೊಗೆ 60 ರೂ.: ಅರ್ಧ ಬೆಲೆಗೆ ಪಡಿತರ ಕೇಂದ್ರಗಳಲ್ಲೇ ತಮಿಳುನಾಡು ಸರ್ಕಾರದಿಂದ ಮಾರಾಟ

    ಚೆನ್ನೈ: ಟೊಮೆಟೊ (Tometo) ಬೆಲೆ ಬಹುತೇಕ ರಾಜ್ಯಗಳಲ್ಲಿ 100 ರೂ. ಗಡಿ ದಾಟಿದೆ. ಟೊಮೆಟೊ ದರ ದಿಢೀರ್‌ ಏರಿಕೆಯಿಂದ ಮಾರಾಟಗಾರರ ಮುಖದಲ್ಲಿ ಮಂದಹಾಸ ಮೂಡಿದೆ. ಆದರೆ ಗ್ರಾಹಕರಿಗೆ ಅಡುಗೆಗೆ ಬಳಸಲಾಗದಷ್ಟು ಹುಳಿಯಾಗಿ ಪರಿಣಮಿಸಿದೆ. ಗ್ರಾಹಕರಿಗೆ ತಟ್ಟಿರುವ ಬೆಲೆ ಏರಿಕೆ ಬಿಸಿ ತಪ್ಪಿಸಲು ತಮಿಳುನಾಡು ಸರ್ಕಾರ (Tamil Nadu) ಮಹತ್ವದ ನಿರ್ಧಾರ ಕೈಗೊಂಡಿದೆ.

    ಹೌದು, ತಮಿಳುನಾಡು ಸರ್ಕಾರವು ಪಡಿತರ ಅಂಗಡಿಗಳು ಅಥವಾ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಮಳಿಗೆಗಳ ಮೂಲಕ ಸಬ್ಸಿಡಿ ದರದಲ್ಲಿ ಟೊಮೆಟೊ ಮಾರಾಟ ಪ್ರಾರಂಭಿಸಿದೆ. ಇದನ್ನೂ ಓದಿ: ದೆಹಲಿಯಲ್ಲಿ ಕೆ.ಜಿ ಟೊಮೆಟೋಗೆ 129 ರೂ., ಯುಪಿಯಲ್ಲಿ 150 ರೂ.!

    MK Stalin (1)

    ರಾಜ್ಯಾದ್ಯಂತ ಸದ್ಯ ಟೊಮೆಟೊ ಕೆಜಿಗೆ 120-140 ರೂ.ಗೆ ಮಾರಾಟವಾಗುತ್ತಿದೆ. ಆದರೆ ಪಡಿತರ ಕೇಂದ್ರಗಳಲ್ಲಿ ಟೊಮೆಟೊ ಕೆಜಿಗೆ 60 ರೂ.ಗೆ ಸಿಗುತ್ತಿದೆ.

    ತಮಿಳುನಾಡು ಸಹಕಾರಿ ಸಚಿವ ಎಸ್. ಪೆರಿಯಕರುಪ್ಪನ್ ಅವರು ಟೊಮೆಟೊ ಮಾರಾಟಕ್ಕೆ ಸಂಬಂಧಿಸಿದಂತೆ ಸೂಕ್ಷ್ಮ ವಿಚಾರಗಳ ಬಗ್ಗೆ ಚರ್ಚಿಸಲು ರಾಜ್ಯ ಸಚಿವಾಲಯದಲ್ಲಿ ಸಭೆ ನಡೆಸಿದ್ದರು. ಟೊಮೆಟೊ ಬೆಲೆ ಏರಿಕೆಯಾಗುತ್ತಲೇ ಇದ್ದರೆ ಗ್ರಾಹಕರಿಗೆ ತೊಂದರೆಯಾಗುತ್ತದೆ. ಅವರಿಗೆ ಸಮಸ್ಯೆಯಾಗದಂತೆ ಹೆಚ್ಚಿನ ಉತ್ಪನ್ನ ಖರೀದಿಸಲು ಮತ್ತು ಕಡಿಮೆ ಬೆಲೆಗೆ ಮಾರಾಟ ಮಾಡಲು ರಾಜ್ಯ ಸರ್ಕಾರವು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ಸೇಬಿಗಿಂತ ಟೊಮೆಟೊ ರೇಟೇ ಜಾಸ್ತಿ!

    ಎಲ್ಲೆಲ್ಲಿ ದರ ಎಷ್ಟು?
    ಪಶ್ಚಿಮ ಬಂಗಾಳದಲ್ಲಿ ಟೊಮೆಟೊ ಕೆಜಿಗೆ 155 ರೂ., ಉತ್ತರ ಪ್ರದೇಶದಲ್ಲಿ 150 ರೂ., ನವದೆಹಲಿಯಲ್ಲಿ 110 ರೂ., ಕೋಲ್ಕತ್ತಾದಲ್ಲಿ 148 ರೂ., ಚೆನ್ನೈನಲ್ಲಿ (ನ್ಯಾಯಬೆಲೆ ಅಂಗಡಿಗಳಲ್ಲಿ) 60 ರೂ.ಗೆ ಟೊಮೆಟೊ ಮಾರಾಟ ಮಾಡಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆನ್‌ಲೈನ್ ಗೇಮಿಂಗ್ ಆ್ಯಪ್‌ಗಳ ನಿಷೇಧ – ಮಧ್ಯಂತರ ತಡೆ ನೀಡಲು ಮದ್ರಾಸ್ ಹೈಕೋರ್ಟ್ ನಿರಾಕರಣೆ

    ಆನ್‌ಲೈನ್ ಗೇಮಿಂಗ್ ಆ್ಯಪ್‌ಗಳ ನಿಷೇಧ – ಮಧ್ಯಂತರ ತಡೆ ನೀಡಲು ಮದ್ರಾಸ್ ಹೈಕೋರ್ಟ್ ನಿರಾಕರಣೆ

    ಚೆನೈ: ಆನ್‌ಲೈನ್ ಗೇಮಿಂಗ್ ಆ್ಯಪ್‌ಗಳನ್ನು (Online Gambling) ನಿಷೇಧಿಸಿ ತಮಿಳುನಾಡು ಸರ್ಕಾರ (Tamil Nadu Govt) ಜಾರಿಗೆ ತಂದಿರುವ ಹೊಸ ಕಾನೂನು ಪ್ರಶ್ನಿಸಿ ಗೇಮಿಂಗ್ ಕಂಪನಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ (Madras High Court) ಮಧ್ಯಂತರ ತಡೆ ನೀಡಲು ನಿರಾಕರಿಸಿದೆ.

    ಮುಖ್ಯ ನ್ಯಾಯಮೂರ್ತಿ ಎಸ್‌.ವಿ ಗಂಗಾಪುರವಾಲಾ ಮತ್ತು ನ್ಯಾಯಮೂರ್ತಿ ಪಿ.ಡಿ ಆದಿಕೇಶವಲು ಅವರ ಪೀಠವು ಅರ್ಜಿ ವಿಚಾರಣೆ ನಡೆಸಿತು. ಆಲ್ ಇಂಡಿಯಾ ಗೇಮಿಂಗ್ ಫೆಡರೇಶನ್ ಪರವಾಗಿ ಹಾಜರಿದ್ದ ಹಿರಿಯ ವಕೀಲರಾದ ಮುಕುಲ್ ರೋಹಟಗಿ ಮತ್ತು ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಲು ಆರಂಭಿಸಿದರು. ಇದನ್ನೂ ಓದಿ: ಹಂತ ಹಂತವಾಗಿ ಮೀಸಲಾತಿ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ – 25,000 ರೂ. ದಂಡ ವಿಧಿಸಿದ ಸುಪ್ರೀಂ ಕೋರ್ಟ್

    ಇದಕ್ಕೆ ಪ್ರತಿಕ್ರಿಯೆ ನೀಡಿದ ಪೀಠ, ಮಧ್ಯಂತರ ತಡೆಗೆ ಮಾಡುವ ವಾದ ಮತ್ತು ಅಂತಿಮ ವಿಚಾರಣೆಗೆ ಮಾಡುವ ವಾದ ಒಂದೇಯಾಗಿರುತ್ತದೆ. ಈ ಹಿನ್ನಲೆ ಮಧ್ಯಂತರ ತಡೆ ಬದಲು ನಾವು ಅಂತಿಮ ವಾದಕ್ಕೆ ಪ್ರಕರಣವನ್ನು ಪೋಸ್ಟ್ ಮಾಡುತ್ತಿದ್ದೇವೆ. ಜುಲೈ 13 ರಂದು ಅಂತಿಮ ವಾದವನ್ನು ಆಲಿಸುವುದಾಗಿ ಕೋರ್ಟ್ ಹೇಳಿತು.

    ರಮ್ಮಿ ಮತ್ತು ಪೋಕರ್‌ನಂತಹ ಆಟಗಳು ಕೌಶಲ್ಯದ ಆಟಗಳಲ್ಲ ಮತ್ತು ಅವಕಾಶದ ಆಟಗಳಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದ್ದರೂ, ಅರ್ಜಿದಾರ ಕಂಪನಿಗಳು ಬಲವಂತದ ಕ್ರಿಮಿನಲ್ ಕ್ರಮದ ಬೆದರಿಕೆಯನ್ನು ಎದುರಿಸುತ್ತಿವೆ ಎಂದು ಇದೇ ವೇಳೆ ಹಿರಿಯ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಇದನ್ನೂ ಓದಿ: ಕರ್ನಾಟಕ, ಮಹಾರಾಷ್ಟ್ರದಂತೆ ಬಿಜೆಪಿ ವಿರೋಧ ಪಕ್ಷಗಳ ಸರ್ಕಾರ ಉರುಳಿಸುತ್ತಿದೆ: ಕಪಿಲ್‌ ಸಿಬಲ್‌ ಆರೋಪ

    ತಮಿಳುನಾಡು ಸರ್ಕಾರವು ಆನ್‌ಲೈನ್ ಗೇಮಿಂಗ್‌ ವ್ಯಸನವು “ಕುಟುಂಬಗಳನ್ನು ನಾಶಪಡಿಸುತ್ತಿದೆ” ಎಂದು ಅಭಿಪ್ರಾಯಪಟ್ಟಿದೆ. ರಾಜ್ಯದ ನಾಗರಿಕರನ್ನು ರಕ್ಷಿಸಲು “ತಮಿಳುನಾಡು ಆನ್‌ಲೈನ್ ಜೂಜಿನ ನಿಷೇಧ ಮತ್ತು ಆನ್‌ಲೈನ್ ಗೇಮ್ಸ್ ಆಕ್ಟ್, 2022 ರ ನಿಯಂತ್ರಣ” ಕಾಯಿದೆಯನ್ನು ಜಾರಿ ಮಾಡಲಾಗಿದೆ ಎಂದು ತಿಳಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]