Tag: tamil nadu

  • 25 ರಿಂದ 35 ಲಕ್ಷಕ್ಕೆ ಸರ್ಕಾರಿ ಹುದ್ದೆ ಮಾರಾಟ: ತನಿಖೆ ನಡೆಸಲು ತ.ನಾಡು ಪೊಲೀಸರಿಗೆ ಇಡಿ ಪತ್ರ

    25 ರಿಂದ 35 ಲಕ್ಷಕ್ಕೆ ಸರ್ಕಾರಿ ಹುದ್ದೆ ಮಾರಾಟ: ತನಿಖೆ ನಡೆಸಲು ತ.ನಾಡು ಪೊಲೀಸರಿಗೆ ಇಡಿ ಪತ್ರ

    ಚೆನ್ನೈ: ತಮಿಳುನಾಡು ಪುರಸಭೆ ಆಡಳಿತ ಮತ್ತು ನೀರು ಸರಬರಾಜು ಇಲಾಖೆಯಲ್ಲಿ ಸರ್ಕಾರಿ ಹುದ್ದೆಗಳಿಗೆ ಲಂಚ ಪಡೆಯಲಾಗಿದೆ ಎಂದು ಜಾರಿ ನಿರ್ದೇಶನಾಲಯ ಗಂಭೀರ ಆರೋಪ ಮಾಡಿದೆ.

    ರಿಯಲ್ ಎಸ್ಟೇಟ್ ಸಂಸ್ಥೆ ಟಿವಿಹೆಚ್ ಮತ್ತು ಡಿಎಂಕೆ ಸಚಿವ ಕೆ.ಎನ್.ನೆಹರು ಅವರ ಸಂಬಂಧಿ ಒಳಗೊಂಡ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ದಾಳಿಯ ಸಂದರ್ಭದಲ್ಲಿ ಈ ಹಗರಣ ಬೆಳಕಿಗೆ ಬಂದಿದೆ ಎಂದು ತಮಿಳುನಾಡು ಪೊಲೀಸರಿಗೆ ಇಡಿ ತಿಳಿಸಿದೆ. ಇದನ್ನೂ ಓದಿ: ರಫೇಲ್‌ನಲ್ಲಿ ಹಾರಾಟ ನಡೆಸಿ ದಾಖಲೆ ಬರೆದ ರಾಷ್ಟ್ರಪತಿ ದ್ರೌಪದಿ ಮುರ್ಮು

    ಸಹಾಯಕ ಎಂಜಿನಿಯರ್‌ಗಳು, ಜೂನಿಯರ್ ಎಂಜಿನಿಯರ್‌ಗಳು ಮತ್ತು ಪಟ್ಟಣ ಯೋಜನಾ ಅಧಿಕಾರಿಗಳಂತಹ ಹುದ್ದೆಗಳನ್ನು ಪಡೆಯಲು ಅಭ್ಯರ್ಥಿಗಳು 25 ಲಕ್ಷದಿಂದ 35 ಲಕ್ಷ ರೂ.ಗಳವರೆಗೆ ಲಂಚವನ್ನು ನೀಡಿದ್ದಾರೆ ಎಂದು ತಮಿಳುನಾಡು ಪೊಲೀಸ್ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ ಇಡಿ ಆರೋಪಿಸಿದೆ. ಆ.6 ರಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಅಭ್ಯರ್ಥಿಗಳಿಗೆ ನೇಮಕಾತಿ ಆದೇಶಗಳನ್ನು ಹಸ್ತಾಂತರಿಸಿದ್ದಾರೆ.

    2024–2025 ಮತ್ತು 2025–2026 ವರ್ಷಗಳ ನೇಮಕಾತಿ ಪ್ರಕ್ರಿಯೆಯನ್ನು ಜಾಣ್ಮೆಯಿಂದ ನಿರ್ವಹಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಕೆಲವು ವ್ಯಕ್ತಿಗಳಿಗೆ ಪರೀಕ್ಷಾ ಮಾಹಿತಿ ಮೊದಲೇ ಲಭ್ಯವಿತ್ತು. ಲಂಚದ ಹಣವನ್ನು ನಗದು ರೂಪದಲ್ಲಿ ಸಂಗ್ರಹಿಸಿ ಹವಾಲಾ ಮಾರ್ಗಗಳ ಮೂಲಕ ರವಾನಿಸಲಾಗಿದೆ ಎಂದು ಆರೋಪಿಸಿದೆ. ಇದನ್ನೂ ಓದಿ: ಕೆನಡಾದಲ್ಲಿ ಉದ್ಯಮಿ ಹತ್ಯೆ, ಗಾಯಕನ ಮನೆಗೆ ಬೆಂಕಿಯಿಟ್ಟ ಬಿಷ್ಣೋಯ್‌ ಗ್ಯಾಂಗ್‌

    ಲಂಚ ನೀಡಿದ ಸುಮಾರು 150 ಅಭ್ಯರ್ಥಿಗಳನ್ನು ನೇಮಕ ಮಾಡಲಾಗಿದೆ. ಪೊಲೀಸರಿಗೆ ಬರೆದ ಪತ್ರದಲ್ಲಿ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾದ ಹಲವಾರು ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ಇಡಿ ಹೆಸರಿಸಿದೆ.

    ರಾಜ್ಯ ಪೊಲೀಸರು ಎಫ್‌ಐಆರ್ ದಾಖಲಿಸಿದ ನಂತರವೇ ಇಡಿ ತನಿಖೆ ಆರಂಭಿಸಬೇಕಾಗುತ್ತದೆ. ಹೀಗಾಗಿ, ಹಗರಣದ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸುವಂತೆ ತಮಿಳುನಾಡು ಪೊಲೀಸರಿಗೆ ಇಡಿ ಒತ್ತಾಯಿಸಿದೆ.

  • ತಮಿಳುನಾಡಿನಲ್ಲಿ ಶೀಘ್ರವೇ SIR- ಮದ್ರಾಸ್ ಹೈಕೋರ್ಟ್‌ಗೆ ಚುನಾವಣಾ ಆಯೋಗ ಮಾಹಿತಿ

    ತಮಿಳುನಾಡಿನಲ್ಲಿ ಶೀಘ್ರವೇ SIR- ಮದ್ರಾಸ್ ಹೈಕೋರ್ಟ್‌ಗೆ ಚುನಾವಣಾ ಆಯೋಗ ಮಾಹಿತಿ

    ಚೆನ್ನೈ: ಮುಂಬರುವ ವಿಧಾನಸಭಾ ಚುನಾವಣೆ ಸಿದ್ಧತೆಯಾಗಿ ತಮಿಳುನಾಡಿನಲ್ಲಿ (Tamil Nadu) ಶೀಘ್ರದಲ್ಲೇ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸಲಾಗುವುದು ಎಂದು ಚುನಾವಣಾ ಆಯೋಗ (Election Commission of India) ಮದ್ರಾಸ್ ಹೈಕೋರ್ಟ್‌ಗೆ (Madras High Court) ತಿಳಿಸಿದೆ. ಪರಿಷ್ಕರಣೆ ಪ್ರಕ್ರಿಯೆಯು ಮುಂದಿನ ವಾರ ಪ್ರಾರಂಭವಾಗುವ ಸಾಧ್ಯತೆ ಇದೆ.

    ಇದಲ್ಲದೆ, ಚುನಾವಣೆ ಎದುರಿಸುತ್ತಿರುವ ಇತರ ಹಲವಾರು ರಾಜ್ಯಗಳು ಸಹ ಬಿಹಾರದ ಮಾದರಿಯಲ್ಲಿ ಇದೇ ರೀತಿಯ ವ್ಯಾಯಾಮಗಳನ್ನು ಕೈಗೊಳ್ಳಲಿದ್ದೇವೆ ಎಂದು ಚುನಾವಣಾ ಆಯೋಗ ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಜಿ.ಅರುಳ್ ಮುರುಗನ್ ಅವರ ಪೀಠದ ಮುಂದೆ ತಿಳಿಸಿದೆ. ಇದನ್ನೂ ಓದಿ: ಸಿಎಂ ಅವ್ರೇ ನಿಮ್ಮ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ, ಪ್ರತಿ ಇಲಾಖೆಯೂ ರೇಡ್‌ ಕಾರ್ಡ್‌ ಫಿಕ್ಸ್‌ ಮಾಡಿದೆ: ಮೋಹನ್ ದಾಸ್ ಪೈ

    ಎಐಎಡಿಎಂಕೆ ಮಾಜಿ ಶಾಸಕ ಬಿ. ಸತ್ಯನಾರಾಯಣನ್ ಅವರು ಟಿ.ನಗರ ವಿಧಾನಸಭಾ ಕ್ಷೇತ್ರದ 229 ಮತಗಟ್ಟೆಗಳಲ್ಲಿ ಸಂಪೂರ್ಣ ಮತ್ತು ಪಾರದರ್ಶಕ ಮರು ಪರಿಶೀಲನೆ ನಡೆಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ್ದರು. ಚೆನ್ನೈನ ಟಿ ನಗರ ಕ್ಷೇತ್ರದ ಅಧಿಕಾರಿಗಳು ಆಡಳಿತಾರೂಢ ಡಿಎಂಕೆಗೆ ಲಾಭ ಮಾಡಿಕೊಡಲು ಉದ್ದೇಶಪೂರ್ವಕವಾಗಿ ಸುಮಾರು 13,000 ಎಐಎಡಿಎಂಕೆ ಬೆಂಬಲಿಗರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿದ್ದಾರೆ ಎಂದು ಆರೋಪಿಸಿದ್ದರು. ಈ ಅರ್ಜಿಯ ವಿಚಾರಣೆ ವೇಳೆ ಆಯೋಗ ಹೈಕೋರ್ಟ್‌ಗೆ ಈ ಮಾಹಿತಿ ನೀಡಿದೆ. ಇದನ್ನೂ ಓದಿ: FATF ಹೊಸ ಪಟ್ಟಿ ಬಿಡುಗಡೆ – ಉತ್ತರ ಕೊರಿಯಾ, ಇರಾನ್, ಮ್ಯಾನ್ಮಾರ್ ಮತ್ತೆ ಕಪ್ಪುಪಟ್ಟಿಗೆ

  • ಸಗಣಿಯಲ್ಲಿ ಹೊಡೆದಾಟ; ದೀಪಾವಳಿಗೆ ತೆರೆ – ವಿಶಿಷ್ಟ ಆಚರಣೆ ಎಲ್ಲಿ?

    ಸಗಣಿಯಲ್ಲಿ ಹೊಡೆದಾಟ; ದೀಪಾವಳಿಗೆ ತೆರೆ – ವಿಶಿಷ್ಟ ಆಚರಣೆ ಎಲ್ಲಿ?

    ಭಿನ್ನ ಭಾಷೆ, ಸಂಸ್ಕೃತಿ, ಆಚರಣೆಗಳಿಗೆ ಹೆಸರಾದ ದೇಶ ಭಾರತ. ದೇಶದಲ್ಲಿ ಒಂದು ನೆಲೆಯಿಂದ ಮತ್ತೊಂದು ನೆಲೆಗೆ ವೈಶಿಷ್ಟ್ಯ, ವೈವಿಧ್ಯತೆಯಿರುತ್ತದೆ. ಹಬ್ಬಗಳ ವಿಚಾರದಲ್ಲೂ ಜನರು ತಮ್ಮದೇ ಆದ ಆಚರಣೆಗಳನ್ನು ರೂಢಿಸಿಕೊಂಡಿರುತ್ತಾರೆ. ಭಾರತದಂತಹ ನೆಲದಲ್ಲಿ ಪ್ರಕೃತಿಗೂ ಹಬ್ಬಗಳಿಗೂ ವಿಶೇಷ ನಂಟು. ಪ್ರಕೃತಿ ಋತುಗಳಿಗೆ ಅನುಗುಣವಾಗಿ ಹಬ್ಬಗಳ ಆಚರಣೆ ಇರುತ್ತದೆ. ಭಾರತದ ಪ್ರಮುಖ ಹಿಂದೂ ಹಬ್ಬಗಳಲ್ಲಿ ದೀಪಾವಳಿಯೂ ಒಂದು. ದೇಶ-ವಿದೇಶಗಳಲ್ಲಿ ಈ ಹಬ್ಬವನ್ನು ಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ತಮಿಳುನಾಡಿನಲ್ಲಿ (Tamil Nadu) ದೀಪಾವಳಿ (Deepavali) ಸಂಭ್ರಮದ ಮುಕ್ತಾಯವನ್ನು ಗುರುತಿಸಲು ಸಗಣಿ ಎಸೆಯುವ ಹಬ್ಬವಾಗಿ ಆಚರಿಸುತ್ತಾರೆ. ಈ ಹಬ್ಬ ತನ್ನದೇ ಆದ ಇತಿಹಾಸ, ಸ್ಥಳೀಯ ಆಚರಣೆಗಳ ಸೊಗಡನ್ನು ಹೊಂದಿದೆ.

    ಸಗಣಿ ಎಸೆಯುವ ಹಬ್ಬ
    ದೀಪಾವಳಿ ಮುಕ್ತಾಯವನ್ನು ಗುರುತಿಸಲು ಹಳ್ಳಿಯೊಂದರ ಸ್ಥಳೀಯ ಆಚರಣೆ ಇದು. ಗ್ರಾಮಸ್ಥರೆಲ್ಲ ಒಂದುಕಡೆ ಸೇರಿ ಸಂತೋಷದ ಕೂಟವನ್ನು ಏರ್ಪಡಿಸುತ್ತಾರೆ. ಅಲ್ಲಿ ಪರಸ್ಪರರು ಮುಷ್ಟಿ ತುಂಬ ಹಸುವಿನ ಸಗಣಿಯನ್ನು ಒಬ್ಬರ ಮೇಲೊಬ್ಬರು ಎಸೆಯುತ್ತಾರೆ. ಈ ವಿಶಿಷ್ಟ ಹಬ್ಬಕ್ಕೆ 300 ವರ್ಷಗಳ ಇತಿಹಾಸವಿದೆ. ಊರಿನವರು ದೀಪಾವಳಿಯ ನಂತರದ ನಾಲ್ಕನೇ ದಿನದಂದು ದನಗಳ ಸಗಣಿ ಎಸೆಯುವ ಹಬ್ಬವಾಗಿ ಇದನ್ನು ಆಚರಿಸುತ್ತಾರೆ.

    ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಸಂಭ್ರಮ
    ಸಗಣಿ ಎಸೆದಾಡುವ ಹಬ್ಬಕ್ಕೆ ‘ಗೋರೆಹಬ್ಬ’ ಎಂದು ಕರೆಯುತ್ತಾರೆ. ತಮಿಳುನಾಡಿನ ಈರೋಡ್ ಜಿಲ್ಲೆಯ ತಲವಾಡಿ (Thalavadi) ಗ್ರಾಮದಲ್ಲಿ ಈ ಹಬ್ಬ ಆಚರಿಸಲಾಗುತ್ತದೆ. ಈ ಗ್ರಾಮ ಕರ್ನಾಟಕ ಮತ್ತು ತಮಿಳುನಾಡು ಗಡಿ ಭಾಗದಲ್ಲಿದೆ. ಸ್ಥಳೀಯ ಹಬ್ಬವನ್ನು ಬೀರೇಶ್ವರರ್ ದೇವಾಲಯದಲ್ಲಿ ಆಚರಿಸುತ್ತಾರೆ. ತಲವಾಡಿಯಾದ್ಯಂತ ಗ್ರಾಮಸ್ಥರು ದನಗಳ ಸಗಣಿಯನ್ನು ಸಂಗ್ರಹಿಸುತ್ತಾರೆ. ಅದನ್ನು ಟ್ರ್ಯಾಕ್ಟರ್‌ಗಳಿಂದ ತಂದು ಗುಂಡಿಯೊAದರಲ್ಲಿ ಸುರಿಯುತ್ತಾರೆ. ಬೀರೇಶ್ವರರ್ ದೇವಾಲಯದ ಕೊಳದಲ್ಲಿ ಧಾರ್ಮಿಕ ಕಾರ್ಯಗಳ ನಂತರ ಗ್ರಾಮಸ್ಥರು ಈ ಗುಂಡಿಗೆ ಹಾರಿ ಪರಸ್ಪರರ ಮೇಲೆ ಸಗಣಿ ಎಸೆಯುತ್ತಾರೆ.

    ಈ ಹಬ್ಬ ಆಚರಣೆ ಏಕೆ?
    ಸಗಣಿ ಎಸೆಯುವ ಹಬ್ಬದ ಸುತ್ತ ಹಲವು ಆಚರಣೆ ಮತ್ತು ನಂಬಿಕೆಗಳಿವೆ. ಇದು ಕೃಷಿ ಸಮೃದ್ಧಿಯನ್ನು ತರುತ್ತದೆ ಎಂದು ಜನರು ನಂಬಿದ್ದಾರೆ. ಸಗಣಿ ಸಂಗ್ರಹಿಸುವ ಗುಂಡಿಯಲ್ಲಿ ಒಮ್ಮೆ ಶಿವಲಿಂಗ ಇತ್ತು ಎಂದು ನಂಬಲಾಗಿದೆ. ಸಗಣಿ ಎಸೆಯುವ ಹಬ್ಬದಲ್ಲಿ ಪಾಲ್ಗೊಂಡರೆ, ಯಾವುದೇ ಕಾಯಿಲೆಯಿದ್ದರೂ ಬೇಗ ಗುಣವಾಗುತ್ತದೆ ಎನ್ನುತ್ತಾರೆ ಇಲ್ಲಿಯ ಜನರು. ಸಗಣಿ ಸಂಗ್ರಹಿಸುವ ಜಾಗ ಶತಮಾನಗಳಿಂದ ಗೊಬ್ಬರವಾಗಿ ಕಾರ್ಯನಿರ್ವಹಿಸುತ್ತಿದೆ.

    ದೇಶದ ನಾನಾ ಭಾಗಗಳಿಂದ ಬರುತ್ತಾರೆ ಜನ
    ಪ್ರತಿ ವರ್ಷ ಈ ಆಚರಣೆಯನ್ನು ವೀಕ್ಷಿಸಲು ಭಾರತದ ವಿವಿಧ ಭಾಗಗಳಿಂದ ಜನರು ಈ ಗ್ರಾಮಕ್ಕೆ ಬರುತ್ತಾರೆ. ಸಗಣಿ ಎಸೆಯುವುದನ್ನು ನೋಡುವುದರಿಂದಲೂ ಆರೋಗ್ಯ ಪ್ರಯೋಜನಗಳಿವೆ ಎಂದು ಹೇಳಲಾಗುತ್ತದೆ. ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲೂ ‘ಗೋರೆಹಬ್ಬ ಹಬ್ಬ’ವನ್ನು ಆಚರಿಸಲಾಗಿತ್ತು. ಸ್ಥಳೀಯ ಅಧಿಕಾರಿಗಳು ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದರು. ಜನರು ಕೂಡ ಉತ್ಸಾಹದಿಂದ ಪಾಲ್ಗೊಂಡಿದ್ದರು.

    ಗ್ರಾಮೀಣ ಭಾರತದಲ್ಲಿ ಹಸುವಿನ ಸಗಣಿ ಹಲವಾರು ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಇದನ್ನು ಪರ್ಯಾಯ ಇಂಧನವಾಗಿ ಜನರು ಬಳಕೆ ಮಾಡುತ್ತಾರೆ. ಹಬ್ಬ ಆಚರಣೆ ಬಳಿಕ ನೆರೆಯ ಹಳ್ಳಿಗಳಲ್ಲಿ ಕೃಷಿ ಪ್ರಯೋಜನಗಳಿಗೆ ಸಗಣಿಯನ್ನು ಜನ ತೆಗೆದುಕೊಳ್ಳುತ್ತಾರೆ. ಬೆಳೆಗಳಿಗೆ ಗೊಬ್ಬರವಾಗಿ ಬಳಸುತ್ತಾರೆ. ಈ ಪದ್ಧತಿಯು ವರ್ಷಪೂರ್ತಿ ಅವರ ಕೃಷಿ ಇಳುವರಿಯನ್ನು ಉತ್ಕೃಷ್ಟಗೊಳಿಸುತ್ತದೆ ಎಂದು ಜನರು ನಂಬಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡಿನ ಗಡಿಯಲ್ಲಿರುವ ಗುಮಟಪುರ ಗ್ರಾಮದಲ್ಲೂ ಇದೇ ರೀತಿಯ ಸಂಪ್ರದಾಯವನ್ನು ಆಚರಿಸಲಾಗುತ್ತದೆ.

  • 10 ಲಕ್ಷ ಒರಿಜಿನಲ್ ನೋಟ್ ಕೊಟ್ರೆ 30 ಲಕ್ಷ ಕೋಟಾ ಆಫರ್‌; ತಿರುನಲ್ವೇಲಿ ಗ್ಯಾಂಗ್‌ ಅಂದರ್‌

    10 ಲಕ್ಷ ಒರಿಜಿನಲ್ ನೋಟ್ ಕೊಟ್ರೆ 30 ಲಕ್ಷ ಕೋಟಾ ಆಫರ್‌; ತಿರುನಲ್ವೇಲಿ ಗ್ಯಾಂಗ್‌ ಅಂದರ್‌

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋಟಾ ನೋಟಿನ ಗ್ಯಾಂಗ್ ಆಕ್ಟೀವ್ ಆಗಿದೆ. 10 ಲಕ್ಷ ರೂ. ಒರಿಜಿನಲ್ ನೋಟ್ ಕೊಟ್ಟರೆ 30 ಲಕ್ಷ ರೂ. ಕೋಟಾ ನೋಟಿನ (Fake Currency) ಆಫರ್ ನೀಡಿ ಜನರಿಗೆ ವಂಚಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ಜಯನಗರದ 4ನೇ ಬ್ಲಾಕ್‌ನಲ್ಲಿ ಹಣದ ಸಮೇತ ನಿಂತಿದ್ದ ತಮಿಳುನಾಡಿನ ತಿರುನೆಲ್ವೇಳಿಯ ಗ್ಯಾಂಗ್ (Tirunelveli Gang) ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರೋಪಿಗಳು 10 ಲಕ್ಷ ಅಸಲಿ ನೋಟಿಗೆ ಒರಿಜಿನಲ್ ರೀತಿಯೇ ಕಾಣುವ 3 ಪಟ್ಟು ಹಣ ನೀಡುತ್ತೇವೆ ಅಂತಾ ಜನರನ್ನು ನಂಬಿಸುತ್ತಿದ್ರು. ತಮಿಳುನಾಡಿನಲ್ಲಿ ಸಕ್ರಿಯವಾಗಿದ್ದ ಈ ಗ್ಯಾಂಗ್ ಇತ್ತೀಚಿಗೆ ಬೆಂಗಳೂರಲ್ಲಿ ಆ್ಯಕ್ಟೀವ್ ಆಗಿತ್ತು. ಜಯನಗರ 4th ಬ್ಲಾಕ್‌ನಲ್ಲಿ ಹಣದ ಸಮೇತ ನಿಂತಿದ್ದ ಗ್ಯಾಂಗ್ ಬಗ್ಗೆ ಖಚಿತ ಮಾಹಿತಿ ಪಡೆದ ಜಯನಗರ ಪೊಲೀಸ್ರು ರೆಡ್ ಹ್ಯಾಂಡ್ ಆಗಿ ಮೂವರು ಆರೋಪಿಗಳನ್ನು ಲಾಕ್ ಮಾಡಿದ್ದಾರೆ. ಇದನ್ನೂ ಓದಿ: ಇನ್ಫೋಸಿಸ್ ನಾರಾಯಣ ಮೂರ್ತಿ, ಸುಧಾ ಮೂರ್ತಿ ಮಾಹಿತಿ ಬಹಿರಂಗಪಡಿಸಿದ್ದಕ್ಕೆ ಸರ್ಕಾರದ ವಿರುದ್ಧ ಜೆಡಿಎಸ್ ಕಿಡಿ

    ಪೊಲೀಸರ ದಾಳಿ ವೇಳೆ ವಂಚಕರು ನೋಟಿನ ಬಂಡಲ್ ಮೇಲ್ಭಾಗ ಮತ್ತು ಕೆಳ ಭಾಗದಲ್ಲಿ ಒರಿಜಿನಲ್ ನೋಟುಗಳನ್ನಿಟ್ಟು ಮಧ್ಯಭಾಗದಲ್ಲಿ ಬಿಳಿ ಹಾಳೆ ಜೋಡಿಸಿ ವಂಚನೆ ಮಾಡ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ಸದ್ಯ ಮೂವರನ್ನ ಬಂಧಿಸಿ ಇನ್ನುಳಿದ ಆರೋಪಿಗಳಿಗಾಗಿ ಜಯನಗರ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಖತರ್ನಾಕ್ ಗ್ಯಾಂಗ್ ಹಲವರಿಗೆ ಇದೇ ರೀತಿ ವಂಚನೆ ಮಾಡಿರೋದು ಬೆಳಕಿಗೆ ಬಂದಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ‌.

    ಬಂಧಿತರಿಂದ 15 ಸಾವಿರ ರೂ ಅಸಲಿ ನೋಟ್ ಸಮೇತ ಕಾರು, ಸೂಟ್ ಕೇಸ್ ವಶಕ್ಕೆ ಪಡೆಯಲಾಗಿದೆ‌. ಮತ್ತೊಂದು ಕಡೇ ಅಸಲಿ‌ ನೋಟು ಕೊಟ್ಟು ನಕಲಿ ನೋಟು ಪಡೆಯಲು ಮುಂದಾದವರ ಮೇಲೂ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ‌. ಇದನ್ನೂ ಓದಿ: ಮಂಡ್ಯ | ದಲಿತ ಸಮುದಾಯದಿಂದಲೇ ದಲಿತರಿಗೆ ಬಹಿಷ್ಕಾರ ಆರೋಪ; ಗ್ರಾಮದ 7 ಕುಟುಂಬಕ್ಕೆ ಶಿಕ್ಷೆ

  • ಪ್ರೇಯಸಿ ಕೊಲೆಗೈದ ಪಾಗಲ್‌ ಪ್ರೇಮಿಗಾಗಿ ಹುಡುಕಾಟ; ತಮಿಳುನಾಡಿಗೆ ಎಸ್ಕೇಪ್‌ ಆಗಿರೋ ಶಂಕೆ

    ಪ್ರೇಯಸಿ ಕೊಲೆಗೈದ ಪಾಗಲ್‌ ಪ್ರೇಮಿಗಾಗಿ ಹುಡುಕಾಟ; ತಮಿಳುನಾಡಿಗೆ ಎಸ್ಕೇಪ್‌ ಆಗಿರೋ ಶಂಕೆ

    ಬೆಂಗಳೂರು: ಪ್ರೇಯಸಿಯನ್ನ‌ ಭೀಕರವಾಗಿ ಹತ್ಯೆ (Lover Killed) ಮಾಡಿ ತಲೆಮರಿಸಿಕೊಂಡಿರೋ ಹಂತಕನಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

    ಯುವತಿ ಪ್ರೀತಿ‌ ನಿರಾಕಿಸಿದ್ದಕ್ಕೆ ಆರೋಪಿ ವಿಘ್ನೇಶ್ ಶ್ರೀರಾಂಪುರ ರೈಲ್ವೇ ನಿಲ್ದಾಣದ ಬಳಿ ಹತ್ಯೆ ಮಾಡಿ ತಾನು ಬಳಸುತ್ತಿದ್ದ ಮೊಬೈಲ್ ಎಸೆದು ಎಸ್ಕೇಪ್ ಆಗಿದ್ದಾನೆ. ನೆನ್ನೆ ಮಧ್ಯಾಹ್ನ ನಡೆದ ಕೊಲೆ ಪ್ರಕರಣದ ಬಗ್ಗೆ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ (Srirampura Police Station) ಮೊಕದ್ದಮೆ ಸಂಖ್ಯೆ 144/2025, ಕಲಂ 103 ಕ್ಲಾಸ್-1 ಬಿಎನ್‌ಎಸ್‌ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    ತನಿಖೆ (Investigation) ಕೈಗೊಂಡಿರುವ ಪೊಲೀಸರು ಆರೋಪಿಗಾಗಿ ತೀವ್ರ ಶೋಧ ಆರಂಭಿಸಿದ್ದಾರೆ. ಇತ್ತ ಮೃತಳ ಶವವು ವಿಕ್ಟೋರಿಯಾ ಆಸ್ಪತ್ರೆಯಲ್ಲಿದೆ. ಇಂದು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸಂಬಂಧಿಕರಿಗೆ ಹಸ್ತಾಂತರಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

    ತಮಿಳುನಾಡಿಗೆ ಎಸ್ಕೇಪ್‌ ಆಗಿದ್ದಾನಾ ಹಂತಕ?
    ಇನ್ನೂ ತಲೆ ಮರೆಸಿಕೊಂಡಿರುವ ಆರೋಪಿ ಪತ್ತೆಗೆ ಪ್ರತ್ಯೇಕ ಎರಡು ತಂಡಗಳನ್ನ ರಚನೆ ಮಾಡಿ ಹುಡುಕಾಟ ನಡೆಸಲಾಗುತ್ತಿದೆ. ಆರೋಪಿ ತಮಿಳುನಾಡಿಗೆ ಹೋಗಿ ತಲೆಮರಿಸಿಕೊಂಡಿರೋ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಈ ಹಿನ್ನೆಲೆ ತಮಿಳುನಾಡಿಗೂ ಒಂದು ತಂಡ ತೆರಳಿದ್ದು, ಶೋಧ ನಡೆಸುತ್ತಿದೆ.

  • ಹಿಂದಿ ಸಿನಿಮಾ, ಹಾಡುಗಳನ್ನು ನಿಷೇಧಿಸುವ ಮಸೂದೆಗೆ ವಿರೋಧ- ಯೂಟರ್ನ್‌ ಹೊಡೆದ ತಮಿಳುನಾಡು ಸರ್ಕಾರ

    ಹಿಂದಿ ಸಿನಿಮಾ, ಹಾಡುಗಳನ್ನು ನಿಷೇಧಿಸುವ ಮಸೂದೆಗೆ ವಿರೋಧ- ಯೂಟರ್ನ್‌ ಹೊಡೆದ ತಮಿಳುನಾಡು ಸರ್ಕಾರ

    ಚೆನ್ನೈ: ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಹಿಂದಿ ಹೇರಿಕೆಯನ್ನು (Hindi Impostion) ನಿಷೇಧಿಸುವ ಮಸೂದೆಯನ್ನು ಮಂಡನೆ ಮಾಡದೇ ಇರಲು ತಮಿಳುನಾಡು (Tamil Nadu) ಸರ್ಕಾರ ನಿರ್ಧರಿಸಿದೆ.

    ರಾಜ್ಯದ್ಯಂತ ಹಿಂದಿ ಹೋರ್ಡಿಂಗ್‌ಗಳು, ಬೋರ್ಡ್‌ಗಳು, ಚಲನಚಿತ್ರಗಳು ಮತ್ತು ಹಾಡುಗಳನ್ನು ನಿಷೇಧಿಸುವ ಮಸೂದೆ ಮಂಡಿಸಲು ತಮಿಳುನಾಡು ಸರ್ಕಾರ ಮುಂದಾಗಿತ್ತು.

    ಈ ಪ್ರಸ್ತಾವಿತ ಮಸೂದೆ ಸಂವಿಧಾನ ವ್ಯಾಪ್ತಿಯ ಒಳಗಡೆ ಇರಲಿದೆ. ಮಸೂದೆಯ ಬಗ್ಗೆ ಮಂಗಳವಾರ ರಾತ್ರಿ ಕಾನೂನು ತಜ್ಞರೊಂದಿಗೆ ತುರ್ತು ಸಭೆ ನಡೆಸಲಾಗಿತ್ತು ಎಂದು ಸರ್ಕಾರ ಮೂಲಗಳು ಮಾಧ್ಯಮಗಳಿಗೆ ತಿಳಿಸಿದ್ದವು.

    ಮಸೂದೆಯ ಕುರಿತು ಪ್ರತಿಕ್ರಿಯಿಸಿದ ಹಿರಿಯ ಡಿಎಂಕೆ ನಾಯಕ ಟಿಕೆಎಸ್ ಇಳಂಗೋವನ್, ನಾವು ಸಂವಿಧಾನಕ್ಕೆ ವಿರುದ್ಧವಾಗಿ ಏನನ್ನೂ ಮಾಡುವುದಿಲ್ಲ. ನಾವು ಅದನ್ನು ಪಾಲಿಸುತ್ತೇವೆ. ಹಿಂದಿ ಹೇರಿಕೆಯನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ:  ಕರ್ನಾಟಕದಲ್ಲಿ ಮೂಲಸೌಕರ್ಯ ಕೆಟ್ಟದಾಗಿದೆ, ಪವರ್‌ ಕಟ್‌ ಸಮಸ್ಯೆಯಿದೆ: ಆಂಧ್ರ ಐಟಿ ಸಚಿವ

    ತಮಿಳುನಾಡು ಬಿಜೆಪಿಯೂ (BJP) ಸರ್ಕಾರದ ನಿರ್ಧಾರಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದೆ.ಬಿಜೆಪಿಯ ವಿನೋಜ್ ಸೆಲ್ವಂ ಸರ್ಕಾರದ ಕ್ರಮವನ್ನು ಇದೊಂದು ಮೂರ್ಖತನ ಮತ್ತು ಅಸಂಬದ್ಧ ನಿರ್ಧಾರ. ಭಾಷೆಯನ್ನು ರಾಜಕೀಯ ಸಾಧನವಾಗಿ ಬಳಸಬಾರದು ಎಂದಿದ್ದಾರೆ.  ಇದನ್ನೂ ಓದಿ:  ಬೆಂಗಳೂರು | ಆರೋಗ್ಯ ಸಮಸ್ಯೆ ಮುಚ್ಚಿಟ್ಟು ಮದುವೆಯಾದ ಪತ್ನಿಗೆ ಇಂಜೆಕ್ಷನ್‌ ಕೊಟ್ಟು ಕೊಂದ ಕಿಲ್ಲರ್‌ ಡಾಕ್ಟರ್‌

    ತಿರುಪರಾನುಕುಂದ್ರಂ, ಕರೂರ್ ಸಿಬಿಐ ತನಿಖೆ ಮತ್ತು ಆರ್ಮ್‌ಸ್ಟ್ರಾಂಗ್ ವಿಷಯಗಳು ಸೇರಿದಂತೆ ಇತ್ತೀಚಿನ ನ್ಯಾಯಾಲಯದ ಪ್ರಕರಣಗಳಲ್ಲಿ ಆಡಳಿತಾರೂಢ ಡಿಎಂಕೆಗೆ ಹಿನ್ನಡೆಯಾಗಿದೆ. ವಿವಾದಾತ್ಮಕ ಫಾಕ್ಸ್‌ಕಾನ್ ಹೂಡಿಕೆ ವಿಷಯದಿಂದ ಗಮನವನ್ನು ಬೇರೆಡೆ ಸೆಳೆಯಲು ಸರ್ಕಾರ ಈ ವಿಚಾರವನ್ನು ಮುನ್ನೆಲೆಗೆ ತಂದಿದೆ ಪ್ರತಿಪಕ್ಷಗಳು ದೂರಿವೆ. ಇದನ್ನೂ ಓದಿ:  ತಮಿಳುನಾಡಿನಲ್ಲಿ ಹಿಂದಿ ಹೋರ್ಡಿಂಗ್ಸ್‌, ಸಿನಿಮಾ, ಹಾಡುಗಳ ನಿಷೇಧ?

    ಈ ವರ್ಷದ ಮಾರ್ಚ್‌ನಲ್ಲಿ ಎಂಕೆ ಸ್ಟಾಲಿನ್ ಸರ್ಕಾರವು 2025–26 ರ ರಾಜ್ಯ ಬಜೆಟ್ ಲೋಗೋದಲ್ಲಿ ರಾಷ್ಟ್ರೀಯ ರೂಪಾಯಿ ಚಿಹ್ನೆಅನ್ನು ತಮಿಳು ಅಕ್ಷರ ರೂ.ನೊಂದಿಗೆ ಬದಲಾಯಿಸಿತ್ತು. ಈ ಬದಲಾವಣೆಯನ್ನು ಬಿಜೆಪಿ ನಾಯಕರು ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟೀಕಿಸಿದ್ದರು. ಆದರೂ ಡಿಎಂಕೆ ತಮಿಳು ಭಾಷೆಯನ್ನು ಉತ್ತೇಜಿಸಿಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡಿತ್ತು.

  • ತಮಿಳುನಾಡಿನಲ್ಲಿ ಹಿಂದಿ ಹೋರ್ಡಿಂಗ್ಸ್‌, ಸಿನಿಮಾ, ಹಾಡುಗಳ ನಿಷೇಧ?

    ತಮಿಳುನಾಡಿನಲ್ಲಿ ಹಿಂದಿ ಹೋರ್ಡಿಂಗ್ಸ್‌, ಸಿನಿಮಾ, ಹಾಡುಗಳ ನಿಷೇಧ?

    – ಹೊಸ ಕಾಯ್ದೆ ತರಲು ತಮಿಳುನಾಡು ಸರ್ಕಾರ ಪ್ಲ್ಯಾನ್‌; ಹಿಂದಿ ಹೇರಿಕೆ ವಿರುದ್ಧ ಮಹತ್ವದ ಹೆಜ್ಜೆ

    ಚೆನ್ನೈ: ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯನ್ನು ನಿರಂತರವಾಗಿ ವಿರೋಧಿಸುತ್ತಿರುವ ಎಂ.ಕೆ ಸ್ಟಾಲಿನ್‌ (MK Stalin) ನೇತೃತ್ವದ ತಮಿಳುನಾಡು ಸರ್ಕಾರ ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ರಾಜ್ಯದಲ್ಲಿ ಹಿಂದಿ ಹೇರಿಕೆಯನ್ನು ಸಂಪೂರ್ಣವಾಗಿ ತಡೆಯುವ ಸಲುವಾಗಿ ವಿಧಾನಸಭೆಯಲ್ಲಿಂದು ಹೊಸ ಮಸೂದೆ (Bill) ಮಂಡನೆಗೆ ತಯಾರಿ ನಡೆಸಿದೆ.

    ಹೌದು. ತಮಿಳುನಾಡಿನಾದ್ಯಂತ ಹಿಂದಿ ಹೋರ್ಡಿಂಗ್ಸ್‌ (Hindi hoardings), ಬೋರ್ಡ್‌ಗಳು (ಬ್ಯಾನರ್‌ ಮಾದರಿಯವು), ಚಲನಚಿತ್ರಗಳು ಮತ್ತು ಹಾಡುಗಳನ್ನ ನಿಷೇಧಿಸುವ ಹೊಸ ಮಸೂದೆ ಮಂಡನೆಗೆ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದೆ. ಮಂಗಳವಾರ ರಾತ್ರಿ ಕೂಡ ಮಸೂದೆ ಕುರಿತು ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಲಾಗಿದೆ. ಈ ವೇಳೆ ಅಧಿಕಾರಿಗಳು ಈ ಕ್ರಮವು ಸಂವಿಧಾನಕ್ಕೆ ಅನುಗುಣವಾಗಿದೆ ಎಂದು ಹೇಳಿರುವುದಾಗಿ ಎಂದು ವರದಿಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಬಜೆಟ್ ಪ್ರತಿಯಲ್ಲಿ ರೂಪಾಯಿ ಚಿಹ್ನೆ ‘₹’ ಕೈಬಿಟ್ಟ ತಮಿಳುನಾಡು

    ಮಸೂದೆಯ ಕುರಿತು ಡಿಎಂಕೆ ಹಿರಿಯ ನಾಯಕ ಟಿಕೆಎಸ್ ಇಳಂಗೋವನ್ (TKS Elangovan) ಪ್ರತಿಕ್ರಿಯಿಸಿದ್ದು, ನಾವು ಸಂವಿಧಾನಕ್ಕೆ ವಿರುದ್ಧವಾಗಿ ಏನನ್ನೂ ಮಾಡುದಿಲ್ಲ. ಸಂವಿಧಾನದ ಆಶಯವನ್ನು ಪಾಲಿಸುತ್ತೇವೆ, ಆದ್ರೆ ಹಿಂದಿ ಹೇರಿಕೆಯನ್ನು ವಿರೋಧಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಹಾರ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ – ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್

    ಆದಾಗ್ಯೂ ಬಿಜೆಪಿ (BJP) ತಮಿಳುನಾಡು ಸರ್ಕಾರದ ಈ ನಿರ್ಧಾರವನ್ನ ತೀವ್ರವಾಗಿ ವಿರೋಧಿಸಿದೆ. ಬಿಜೆಪಿಯ ವಿನೋಜ್ ಸೆಲ್ವಂ ಪ್ರತಿಕ್ರಿತಿಸಿ, ಇದು ಮೂರ್ಖತನ ಮತ್ತು ಅಸಂಬದ್ಧ ನಿರ್ಧಾರ. ಭಾಷೆಯನ್ನ ರಾಜಕೀಯ ಸಾಧನವಾಗಿ ಬಳಸಬಾರದು ಎಂದು ಕಿಡಿ ಕಾರಿದರು.

    ಈ ವರ್ಷದ ಮಾರ್ಚ್‌ನಲ್ಲೂ ಕೂಡ ಎಂ.ಕೆ ಸ್ಟಾಲಿನ್‌ ನೇತೃತ್ವದ ಸರ್ಕಾರ 2025-26ರ ರಾಜ್ಯ ಬಜೆಟ್‌‌ನಲ್ಲಿ ರೂಪಾಯಿಯ ಅಧಿಕೃತ ಚಿಹ್ನೆ ‘₹’ ಕೈ ಬಿಟ್ಟು ಬದಲಿಗೆ ‘ರುಬಾಯಿ’ (ತಮಿಳಿನಲ್ಲಿ ರೂಪಾಯಿ) ಯಿಂದ ‘ರು’ ಅನ್ನು ಆಯ್ಕೆ ಮಾಡಿಕೊಂಡಿತ್ತು. ಇದನ್ನೂ ಓದಿ: 

  • ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸಾವು ಕೇಸ್ – ಸ್ರೇಸನ್ ಲೈಸೆನ್ಸ್ ರದ್ದು, ಕಂಪನಿ ಬಂದ್

    ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸಾವು ಕೇಸ್ – ಸ್ರೇಸನ್ ಲೈಸೆನ್ಸ್ ರದ್ದು, ಕಂಪನಿ ಬಂದ್

    ಚೆನ್ನೈ: ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್ ಕೆಮ್ಮಿನ ಸಿರಪ್ (Cough Syrup) ತಯಾರಕ ಕಂಪನಿ ಸ್ರೇಸನ್ ಫಾರ್ಮಾಸ್ಯುಟಿಕಲ್‌ನ (Sresan Pharmaceutical) ಉತ್ಪಾದನಾ ಪರವಾನಗಿಯನ್ನು ತಮಿಳುನಾಡು ಔಷಧ ನಿಯಂತ್ರಣ ಇಲಾಖೆ ಸೋಮವಾರ ರದ್ದುಗೊಳಿಸಿದೆ.

    ಅಲ್ಲದೇ ಕಂಪನಿಯನ್ನು ಮುಚ್ಚುವಂತೆ ಆದೇಶ ನೀಡಿದೆ. ಈ ಔಷಧದಲ್ಲಿ ವಿಷಕಾರಿ ದ್ರಾವಣವಾದ ಡೈಎಥಿಲೀನ್ ಗ್ಲೈಕೋಲ್ (DEG) 48.6% ಇರುವುದು ಪತ್ತೆಯಾಗಿದೆ. ಈ ಔಷಧವು ಮಧ್ಯಪ್ರದೇಶದಲ್ಲಿ ಮಕ್ಕಳ ಸಾವಿಗೆ ಕಾರಣವಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸಾವು ಕೇಸ್ – ಚೆನ್ನೈನ 7 ಸ್ಥಳಗಳ ಮೇಲೆ ಇಡಿ ದಾಳಿ

    ವಿಷಕಾರಿ ದ್ರಾವಣವಾದ ಡೈಎಥಿಲೀನ್ ಗ್ಲೈಕೋಲ್‌ವಿರುವ ಸ್ರೇಸನ್ ಕಂಪನಿಯನ್ನು ಅಧಿಕೃತವಾಗಿ ಮುಚ್ಚಲಾಗಿದೆ ಎಂದು ತಮಿಳುನಾಡು ಆರೋಗ್ಯ ಇಲಾಖೆ ತಿಳಿಸಿದೆ. ಅಲ್ಲದೇ ತಮಿಳುನಾಡಿನ ಎಲ್ಲಾ ಔಷಧ ಉತ್ಪಾದನಾ ಘಟಕಗಳಲ್ಲಿ ಸಮಗ್ರ ತಪಾಸಣೆಗೆ ಇಲಾಖೆ ಆದೇಶಿಸಿದೆ.

    ಏನಿದು ಪ್ರಕರಣ?
    ಮಧ್ಯಪ್ರದೇಶ, ರಾಜಸ್ಥಾನದಲ್ಲಿ ವಿಷಕಾರಿ ದ್ರಾವಣವಾದ ಡೈಎಥಿಲಿನ್ ಗ್ಲೈಕಾಲ್ ಮತ್ತು ಎಥಿಲಿನ್ ಗ್ಲೈಕಾಲ್ ಇರುವ ಸಿರಪ್ ಸೇವಿಸಿದ 20 ಮಕ್ಕಳು ಮೂತ್ರಪಿಂಡ ಸೋಂಕಿನಿಂದ ಮೃತಪಟ್ಟಿದ್ದರು. ಕೆಲ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ದರು.

    ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ತಯಾರಿಸುವ ಸ್ರೇಸನ್ ಫಾರ್ಮಾ ಮಾಲೀಕ ರಂಗನಾಥನ್‌ನನ್ನು ಮಧ್ಯಪ್ರದೇಶ ಪೊಲೀಸರು ಚೆನ್ನೈನಲ್ಲಿ ಬಂಧಿಸಿದ್ದರು. ಅಲ್ಲದೇ ಈ ಪ್ರಕರಣವನ್ನು ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

    ಅಲ್ಲದೇ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಚೆನ್ನೈನಲ್ಲಿ ಸ್ರೇಸನ್ ಫಾರ್ಮಾ ಮತ್ತು ತಮಿಳುನಾಡು ಔಷಧ ನಿಯಂತ್ರಣ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಂಬಂಧಿಸಿದ 7 ಸ್ಥಳಗಳ ಮೇಲೆ ದಾಳಿ ಮಾಡಿತ್ತು.

  • ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ: ಸಿಎಂ

    ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ: ಸಿಎಂ

    ಬಾಗಲಕೋಟೆ: ಆರ್‌ಎಸ್‌ಎಸ್‌ (RSS) ವಿರುದ್ಧ ತಮಿಳುನಾಡಿನಲ್ಲಿ (Tamil Nadu) ಯಾವ ರೀತಿ ಕ್ರಮ ಕೈಗೊಂಡಿದ್ದಾರೋ ಆ ರೀತಿ ಕ್ರಮವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.

    ಬಂಡಿಗಣಿಯಲ್ಲಿ ಮಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರಿ ಜಾಗದಲ್ಲಿ ಆರ್‌ಎಸ್‌ಎಸ್‌ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಪ್ರಿಯಾಂಕ್‌ ಖರ್ಗೆ ಪತ್ರ ಬರೆದಿದ್ದಾರೆ. ಪರಿಶೀಲಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದೇನೆ ಎಂದರು. ಇದನ್ನೂ ಓದಿ:  ಮಲ್ಲಿಕಾರ್ಜುನ ಖರ್ಗೆಯವರೇ ನಿಮ್ಮ ಮಕ್ಕಳಿಗೆ ಸರಿಯಾಗಿ ಪಾಠ ಹೇಳಿಕೊಡಿ: ಗೋವಿಂದ ಕಾರಜೋಳ

     

    ಇಂದು ರಾತ್ರಿ ನಡೆಯಲಿರುವ ಡಿನ್ನರ್ ಪಾರ್ಟಿಗೂ ಸಂಪುಟ ಪುನಾರಚನೆಗೂ ಯಾವುದೇ ಸಂಬಂಧವಿಲ್ಲ. ನಾನು ಆಗಾಗ ಊಟ ನೀಡುತ್ತಿರುತ್ತೇನೆ. ಊಟದಲ್ಲಿ ಏನೂ ಸ್ಪೆಷಲ್ ಇಲ್ಲ. ಮಾಧ್ಯಮದವರಿಗೆ ಮತ್ತು ಬಿಜೆಪಿಯವರಿಗೆ ಮಾತ್ರ ವಿಶೇಷ ಎಂದು ತಿಳಿಸಿದರು. ಇದನ್ನೂ ಓದಿ:  ಸರ್ಕಾರಿ ಸ್ಥಳಗಳು, ಮುಜರಾಯಿ ದೇವಸ್ಥಾನಗಳಲ್ಲಿ ಆರ್‌ಎಸ್‌ಎಸ್‌ ಎಲ್ಲಾ ಚಟುವಟಿಕೆ ಬ್ಯಾನ್‌?

    ದೇವೇಗೌಡರ ಆರೋಗ್ಯ ಚೆನ್ನಾಗಿದೆ, ಚೇತರಿಕೆ ಆಗುತ್ತಿದೆ. ವೈದ್ಯ ಸತ್ಯನಾರಾಯಣ ಅವರ ಜೊತೆ ಮಾತನಾಡಿದ್ದೇನೆ. ಎರಡ್ಮೂರು ದಿನಗಳಲ್ಲಿ ಚೇತರಿಕೆ ಆಗುತ್ತಾರೆ ಎಂದಿದ್ದಾರೆ ಎಂದು ನುಡಿದರು.

  • ಕೆಮ್ಮಿನ ಸಿರಪ್ ಸೇವಿಸಿ 20ಕ್ಕೂ ಹೆಚ್ಚು ಮಕ್ಕಳ ಸಾವು – ಫಾರ್ಮಾ ಕಂಪನಿ ಮಾಲೀಕ ಅರೆಸ್ಟ್

    ಕೆಮ್ಮಿನ ಸಿರಪ್ ಸೇವಿಸಿ 20ಕ್ಕೂ ಹೆಚ್ಚು ಮಕ್ಕಳ ಸಾವು – ಫಾರ್ಮಾ ಕಂಪನಿ ಮಾಲೀಕ ಅರೆಸ್ಟ್

    ಚೆನ್ನೈ: ಮಧ್ಯಪ್ರದೇಶದಲ್ಲಿ (Madhya Pradesh) ಕೆಮ್ಮಿನ ಸಿರಪ್ (Cough Syrup)ಸೇವಿಸಿ ಮಕ್ಕಳು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿರಪ್ ತಯಾರಿಕ ಕಂಪನಿಯ ಮಾಲೀಕನನ್ನು ಪೊಲೀಸರು ಚೆನ್ನೈನಲ್ಲಿ (Chennai) ಬಂಧಿಸಿದ್ದಾರೆ.

    ಸಿರಪ್ ಕುಡಿದು ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ 20ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ ಬಳಿಕ ಕೋಲ್ಡ್ರಿಫ್ ಸಿರಪ್ ಅನ್ನು ನಿಷೇಧಿಸಲಾಯಿತು. ಈ ಬೆನ್ನಲ್ಲೇ ಸಿರಪ್ ತಯಾರಿಸುತ್ತಿದ್ದ ಸ್ರೆಸನ್ ಫಾರ್ಮಾ (Sresan Pharma) ಕಂಪನಿಯ ಮಾಲೀಕ ರಂಗನಾಥನ್ ಮೂರು ದಿನಗಳಿಂದ ತಲೆಮರೆಸಿಕೊಂಡಿದ್ದ. ಈತನ ಬಗ್ಗೆ ಮಾಹಿತಿ ನೀಡಿದವರಿಗೆ 20,000 ರೂ. ಬಹುಮಾನವನ್ನೂ ಘೋಷಿಸಲಾಗಿತ್ತು. ಇದನ್ನೂ ಓದಿ: ಹರ್ ಮಂದಿರ್ ಶಾಲೆಯಲ್ಲಿ ಅಗ್ನಿ ಅವಘಡ – ವಿದ್ಯಾರ್ಥಿ ಸಜೀವ ದಹನ

    ಅಂತಿಮವಾಗಿ ಬುಧವಾರ ತಡರಾತ್ರಿ ಚೆನ್ನೈನಲ್ಲಿ ರಂಗನಾಥನ್‌ನನ್ನು ಬಂಧಿಸಲಾಗಿದೆ. ಸಿರಪ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಷಕಾರಿ ಕೈಗಾರಿಕಾ ರಾಸಾಯನಿಕ ಡೈಥಿಲೀನ್ ಗ್ಲೈಕೋಲ್ ಇರುವುದು ಪತ್ತೆಯಾದ ಬಳಿಕ ಮಾಲೀಕನನ್ನು ಅರೆಸ್ಟ್ ಮಾಡಲಾಗಿದೆ. ಸದ್ಯ ರಂಗನಾಥನ್‌ನನ್ನು ಚೆನ್ನೈನಿಂದ ಛಿಂದ್ವಾರಕ್ಕೆ ಪೊಲೀಸರು ಕರೆ ತರುತ್ತಿದ್ದು, ನಂತರ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ಡಿಕೆಶಿ ವೈಲ್ಡ್‌ ಕಾರ್ಡ್‌ಎಂಟ್ರಿ – ಬಿಗ್‌ಬಾಸ್‌ ಮನೆ ಓಪನ್‌ | ರಾತ್ರಿ ಏನೇನಾಯ್ತು? ಇಲ್ಲಿದೆ ಇನ್‌ಸೈಡ್‌ ಸ್ಟೋರಿ

    ಈ ಹಿಂದೆ ಸ್ರೆಸನ್ ಫಾರ್ಮಾ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಮಧ್ಯಪ್ರದೇಶವಲ್ಲದೆ ರಾಜಸ್ಥಾನದಲ್ಲೂ ಈ ಸಿರಪ್ ಸೇವಿಸಿದ ನಂತರ ಮಕ್ಕಳು ಸಾವನ್ನಪ್ಪಿರುವ ವರದಿಗಳಿವೆ. ಕೋಲ್ಡ್ರಿಫ್ ಹೆಸರಿನ ಈ ಸಿರಪ್ ಸೇವಿಸಿದ ಮಕ್ಕಳಲ್ಲಿ ಕಿಡ್ನಿ ಸೋಂಕು ಕಾಣಿಸಿಕೊಂಡು, ಹೆಚ್ಚಿನ ಸಂಖ್ಯೆಯ ಮಕ್ಕಳು ಸಾವನ್ನಪ್ಪಿದ್ದರು. ಇದನ್ನೂ ಓದಿ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬ ದೇವಿ ಜಾತ್ರಾ ಮಹೋತ್ಸವ ಆರಂಭಕ್ಕೆ ಕ್ಷಣಗಣನೆ

    ತಪಾಸಣೆ ವೇಳೆ, ಫಾರ್ಮಾದ ಕಾರ್ಖಾನೆಯಲ್ಲಿ ಯಾವುದೇ ದಾಖಲೆಗಳಿಲ್ಲದ ಡಿಇಜಿ ಕಂಟೇನರ್‌ಗಳು ಪತ್ತೆಯಾಗಿದ್ದವು. ನಿಯಮಗಳ ಪ್ರಕಾರ ಕೇವಲ ಶೇ.0.1ರಷ್ಟು ಮಾತ್ರ ಡಿಇಜಿ ಬಳಸಲು ಅನುಮತಿ ಇದ್ದರೂ, ಈ ಕಂಪನಿಯು ಶೇ.46-48ರಷ್ಟು ಈ ವಿಷಕಾರಿ ರಾಸಾಯನಿಕವನ್ನು ಕೋಲ್ಡ್ರಿಫ್ ಕೆಮ್ಮಿನ ಸಿರಪ್‌ನಲ್ಲಿ ಬಳಸುತ್ತಿತ್ತು ಎಂಬ ಆಘಾತಕಾರಿ ಮಾಹಿತಿಯು ತನಿಖೆಯು ಬಹಿರಂಗವಾಗಿದೆ. ಇದನ್ನೂ ಓದಿ: ಬಿಗ್‌ ಬಾಸ್‌ ಓಪನ್‌ ಬೆನ್ನಲ್ಲೇ ಮುಂಜಾನೆ ಮನೆ ಪ್ರವೇಶಿಸಿದ ಸ್ಪರ್ಧಿಗಳು

    ಇಷ್ಟಲ್ಲದೆ, ಕಂಪನಿಯು ಉತ್ತಮ ಉತ್ಪಾದನಾ ಪದ್ಧತಿಗಳ (ಜಿಎಂಪಿ) ಪ್ರಮಾಣಪತ್ರವನ್ನು ಸಹ ಹೊಂದಿರಲಿಲ್ಲ. ಆದರೂ, ಜೆನೆರಿಕ್ ಔಷಧಿಗಳನ್ನು ತಯಾರಿಸಿ ಮಾರಾಟವನ್ನು ಮಾಡುತ್ತಿತ್ತು. ತಮಿಳುನಾಡಿನ ಕಾಂಚೀಪುರಂನ ಕಾರ್ಖಾನೆಯಲ್ಲಿ ಈ ಲೋಪಗಳು ಪತ್ತೆಯಾದ ನಂತರ, ರಾಜ್ಯ ಔಷಧಿ ನಿಯಂತ್ರಣ ಪ್ರಾಧಿಕಾರವು ತಕ್ಷಣವೇ ಉತ್ಪಾದನೆಯನ್ನು ನಿಲ್ಲಿಸುವಂತೆ ಆದೇಶಿಸಿ, ಎಲ್ಲಾ ದಾಸ್ತಾನುಗಳನ್ನು ವಶಕ್ಕೆ ಪಡೆದಿತ್ತು. ಕಂಪನಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ, ಪರವಾನಗಿಯನ್ನು ಅಮಾನತುಗೊಳಿಸಿತ್ತು. ಈ ಘಟನೆಯ ನಂತರ, ಕನಿಷ್ಠ ಒಂಬತ್ತು ರಾಜ್ಯಗಳು ಈ ಸಿರಪ್ ಅನ್ನು ನಿಷೇಧಿಸಿವೆ. ಇದನ್ನೂ ಓದಿ:ಕಲಬುರಗಿ | ಪ್ರವಾಹ ಪೀಡಿತ ಪ್ರದೇಶಗಳಿಗೆ ಜೆಡಿಎಸ್ ನಿಯೋಗ ಭೇಟಿ