Tag: Tamil movie

  • ತಮಿಳು ಚಿತ್ರರಂಗದಲ್ಲಿ ಮಿಂಚಿದ ಕನ್ನಡತಿ ಸಂಹಿತಾ ವಿನ್ಯಾ

    ತಮಿಳು ಚಿತ್ರರಂಗದಲ್ಲಿ ಮಿಂಚಿದ ಕನ್ನಡತಿ ಸಂಹಿತಾ ವಿನ್ಯಾ

    ನ್ನಡ ಅಲ್ಲದೇ ಪಕ್ಕದ ತಮಿಳು, ತೆಲುಗು ಚಿತ್ರರಂಗದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ನಟಿ ಎಂದರೆ ಸಂಹಿತಾ ವಿನ್ಯಾ. 75ಕ್ಕೂ ಹೆಚ್ಚು ರಾಷ್ಟ್ರೀಯ, ಅಂತಾರಾಷ್ಟ್ರೀಯ ಫ್ಯಾಷನ್ ಷೋಗಳಲ್ಲಿ ಭಾಗವಹಿಸಿ, ಸೂಪರ್ ಮಾಡೆಲ್ ಎನಿಸಿಕೊಂಡಿರುವ ಸಂಹಿತಾ ವಿನ್ಯಾ ಇದೀಗ ತಮಿಳಲ್ಲಿ ಜೀವಾ ಸಹೋದರ ಜತಿನ್ ರಮೇಶ್ ಜತೆಗೂ ನಟಿಸುತ್ತಿದ್ದಾರೆ.

    ಇದಲ್ಲದೇ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿರುವ ತಮಿಳಿನ ಹಿಡನ್ ಕ್ಯಾಮೆರಾ ಚಿತ್ರದಲ್ಲಿ ಸಂಹಿತಾ ನಾಯಕಿಯಾಗಿ ನಟಿಸುತ್ತಿದ್ದು, ಆ ಚಿತ್ರದ ಕೆಲಸ ಕೇರಳದಲ್ಲಿ ನಡೆಯುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಸಾಕಷ್ಟು ಚಿತ್ರಗಳಲ್ಲಿ ನಟಿಸುತ್ತ ಬಂದಿರುವ ಸಂಹಿತಾ ಅಭಿನಯದ ‘ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು’ ಚಿತ್ರ ಬಿಡುಗಡೆಯಾದಾಗ ಅಭಿಮಾನಿಗಳು ಕಟೌಟ್ ನಿಲ್ಲಿಸುವ ಮೂಲಕ ಹೊಸ ಟ್ರೆಂಡ್ ಸೃಷ್ಟಿಸಿದ್ದರು.

    ಸಂಹಿತಾ ವಿನ್ಯಾ ಅಭಿನಯದ ಅಭಿನಯದ ಮಿಕ್ಸಿಂಗ್ ಪ್ರೀತಿ,’ಮೆಜೆಸ್ಟಿಕ್ -2′, ಆಯುಧ, ಜಿಎಸ್‌ಟಿ. ಸ್ವಾಭಿಮಾನಿ, ಯಾಕೋ ಬೇಜಾರು, ವಿದೂಷಕ ಮುಂತಾದ ಚಿತ್ರಗಳು ರಿಲೀಸ್‌ಗೆ ರೆಡಿ ಇವೆ. ಮತ್ತೊಂದು ತಮಿಳು ಚಿತ್ರ ಮಿಕ್ಸಿಂಗ್ ಕಾದಲ್ ಬಿಡುಗಡೆಗೆ ರೆಡಿಯಿದೆ.

    ಅಮೃತಘಳಿಗೆ, ಲಂಗೋಟಿ ಮ್ಯಾನ್ ಅಲ್ಲದೇ ತೆಲುಗಿನ ಯು ಆರ್ ಮೈ ಹೀರೋ ಚಿತ್ರದಲ್ಲೂ ಸಂಹಿತಾ ವಿನ್ಯಾ ನಾಯಕಿಯಾಗಿ ನಟಿಸಿದ್ದಾರೆ. ಹಾಲು ತುಪ್ಪ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಸಂಹಿತಾ ವಿನ್ಯಾ, ಅಮೃತ ಘಳಿಗೆ, ವಿಷ್ಣು ಸರ್ಕಲ್, ನಸಾಬ್, ಮಿಕ್ಸಿಂಗ್ ಪ್ರೀತಿ, ಸ್ವಾಭಿಮಾನಿ ಅಲ್ಲದೇ ತೆಲುಗು, ತಮಿಳು ಸೇರಿದಂತೆ 18ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇದೀಗ ಪಕ್ಕದ ತಮಿಳು, ತೆಲುಗು ಚಿತ್ರರಂಗದಲ್ಲೂ ಸಹ ಸಖತ್ ಮಿಂಚುತ್ತಿದ್ದಾರೆ. ಅಚ್ಚಕನ್ನಡದ ಪ್ರತಿಭೆಯಾದ ಸಂಹಿತಾ ವಿನ್ಯಾ, ಇದೀಗ ಸೌತ್ ಫಿಲಂ ಇಂಡಸ್ಟ್ರಿಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.

  • ಕಮಲ್ ಹಾಸನ್ ನಿರ್ಮಾಣದ ಸಿನಿಮಾದಲ್ಲಿ ನಟಿ ಜಾನ್ವಿ

    ಕಮಲ್ ಹಾಸನ್ ನಿರ್ಮಾಣದ ಸಿನಿಮಾದಲ್ಲಿ ನಟಿ ಜಾನ್ವಿ

    ಗಾಗಲೇ ಬಹುಭಾಷಾ ನಟಿಯಾಗಿ ಶ್ರೀದೇವಿ ಕಪೂರ್ (Sridevi Kapoor) ಪುತ್ರಿ  ಜಾನ್ವಿ ಕಪೂರ್ (Janhavi Kapoor)  ಎರಡು ತೆಲುಗು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಜ್ಯೂನಿಯರ್ ಎನ್.ಟಿ.ಆರ್ ನಟನೆಯ ದೇವರ ಚಿತ್ರದಲ್ಲಿ ಅವರು ನಟಿಸುತ್ತಿದ್ದು,  ಅಖಿಲ್ ಅಕ್ಕಿನೇನಿ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈ ನಡುವೆ ತಮಿಳು ಚಿತ್ರೋದ್ಯಮಕ್ಕೂ ಜಾನ್ವಿ ಹಾರಿದ್ದು, ಈ ಸಿನಿಮಾವನ್ನು ಕಮಲ್ ಹಾಸನ್ (Kamal Haasan) ನಿರ್ಮಾಣ ಮಾಡುತ್ತಿದ್ದಾರೆ.

    ಮಿಲಿ, ಗುಡ್ ಲಕ್ ಜರಿ ಸಿನಿಮಾಗಳ ಮೂಲಕ ಬಾಲಿವುಡ್‌ನಲ್ಲಿ (Bollywood) ಮೋಡಿ ಮಾಡಿರುವ ಹಾಟ್ ಬ್ಯೂಟಿ ಜಾನ್ವಿ ಕಪೂರ್ ತೆಲುಗಿನತ್ತ ಮುಖ ಮಾಡಿದಾಗ ಹುಬ್ಬೇರಿಸಿದವರೇ ಹೆಚ್ಚು. ಶ್ರೀದೇವಿ ಅವರು ಹೇಗೆ ಒಂದೊಂದೇ ಯಶಸ್ಸಿನ ಮೆಟ್ಟಿಲನ್ನು ಏರಿದ್ದರೋ ಅದೇ ರೀತಿ ಸೌತ್ ಸಿನಿಮಾ ಸ್ಕ್ರಿಪ್ಟ್‌ಗಳಿಗೆ ಜಾನ್ವಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವುದು ಥೇಟ್ ಅಮ್ಮನ ನಡೆಯನ್ನೇ ಅನುಸರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಜ್ಯೂನಿಯರ್ ಎನ್‌ಟಿಆರ್ (Jr.ntr) ಜೊತೆಗಿನ ದೇವರ ಸಿನಿಮಾ ರಿಲೀಸ್ ಆಗುವ ಮುನ್ನವೇ ಮತ್ತೊಂದು ಬಂಪರ್ ಆಫರ್‌ ಅನ್ನ ನಟಿ ತಮ್ಮದಾಗಿಸಿಕೊಂಡಿದ್ದಾರೆ. ಜಾನ್ವಿ ಇದೀಗ ಮತ್ತೊಬ್ಬ ತೆಲುಗಿನ ನಟನ ಜೊತೆ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೊಸ ಬಗೆಯ ಕಥೆಯಲ್ಲಿ ಜಾನ್ವಿ ಕಮಾಲ್‌ ಮಾಡಲಿದ್ದಾರೆ. ಇದನ್ನೂ ಓದಿ:‘ಟೋಬಿ’ ಶೆಟ್ಟರ ಕೆನ್ನೆಗೆ ಮುತ್ತಿಟ್ಟ ಚೈತ್ರಾ- ರಾಜ್ ಬಿ ಶೆಟ್ಟಿ ಸ್ಪಷನೆ

    ಹೊಸ ಸಿನಿಮಾಗೆ ನಾಗಾರ್ಜುನ ಪುತ್ರ ಅಖಿಲ್ ಅಕ್ಕಿನೇನಿಗೆ (Akhil Akkineni)  ನಾಯಕಿಯಾಗಿ ಜಾನ್ವಿ ಕಪೂರ್ ಸೆಲೆಕ್ಟ್ ಆಗಿದ್ದಾರೆ. ಯುವ ನಿರ್ದೇಶಕ ಅನಿಲ್ ಕುಮಾರ್ (Anil Kumar) ನಿರ್ದೇಶನದಲ್ಲಿ ಅಖಿಲ್- ಜಾನ್ವಿ ಆಕ್ಟ್ ಮಾಡಲಿದ್ದಾರೆ. ಅನಿಲ್ ಈ ಹಿಂದೆ ಪ್ರಭಾಸ್ ನಟನೆಯ ‘ಸಾಹೋ’ (Saho) ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ.

     

    ಮೊದಲ ಬಾರಿಗೆ ಜಾನ್ವಿ- ಅಖಿಲ್‌ ತೆರೆಯ ಮೇಲೆ ಒಂದಾಗುತ್ತಿದ್ದು, ಈ ಫ್ರೆಶ್‌ ಫೇರ್‌ ಅದೆಷ್ಟರ ಮಟ್ಟಿಗೆ ಮೋಡಿ ಮಾಡಲಿದೆ ಎಂಬುದನ್ನ ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?

    ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?

    ವಾರ ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಜೂ.3 ರಂದು ತೆರೆ ಕಾಣುತ್ತಿರುವ ಈ ಸಿನಿಮಾವನ್ನು ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈ ನಡುವೆ ನಿನ್ನೆಯಷ್ಟೇ ಚಿತ್ರಕ್ಕೆ ಸೆನ್ಸಾರ್ ಆಗಿದೆ. ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಈ ಸರ್ಟಿಫಿಕೇಟ್ ಸಿಗಲು ಕಮಲ್ ಹಾಸನ್ ಅಂಡ್ ಟೀಮ್ ಮಾಡಿದ ಸಾಹಸ ಅಷ್ಟಿಷ್ಟಲ್ಲ. ಇದನ್ನೂ ಓದಿ : ಪ್ರಭುದೇವ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾಗೆ ಸಂದೇಶ್ ನಾಗರಾಜ್ ನಿರ್ಮಾಪಕ

    ವಿಕ್ರಮ್ ಸಿನಿಮಾದಲ್ಲಿ ಹಿಂಸೆಯಲ್ಲಿ ವೈಭವೀಕರಿಸಲಾಗಿದೆ ಎನ್ನುವ ಮಾಹಿತಿ ಇದೆ. ಹಲವು ದೃಶ್ಯಗಳಲ್ಲಿ ತುಂಬಾ ಹಿಂಸೆಯನ್ನು ತೋರಿಸಿದ್ದಾರಂತೆ. ಹಾಗಾಗಿ 13 ಕಡೆ ಸಿನಿಮಾಗೆ ಕತ್ತರಿ ಹಾಕಲು ಸೆನ್ಸಾರ್ ಮಂಡಳಿ ಸೂಚಿಸಿತ್ತು ಎನ್ನಲಾಗುತ್ತಿದೆ. ಸೆನ್ಸಾರ್ ಮಂಡಳಿಯು ಸೂಚಿಸಿದ ಎಲ್ಲ ಸಲಹೆಗಳನ್ನು ಚಿತ್ರತಂಡ ಸ್ವೀಕರಿಸಿದ ನಂತರವೇ ಯು/ಎ ಪ್ರಮಾಣ ಪತ್ರವನ್ನು ನೀಡಲಾಗಿದೆ. ಇದನ್ನೂ ಓದಿ : ಅಕ್ಟೋಬರ್ 3ಕ್ಕೆ ಅಭಿಷೇಕ್ ಅಂಬರೀಶ್ ಹೊಸ ಸಿನಿಮಾಗೆ ಮುಹೂರ್ತ

    ಈಗಾಗಲೇ ವಿಕ್ರಮ್ ಸಿನಿಮಾದ ಬಗ್ಗೆ ಕಮಲ್ ಹಾಸನ್ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ವಿಜಯ್ ಸೇತುಪತಿ ಸೇರಿದಂತೆ ಪ್ರತಿಭಾವಂತ ಕಲಾವಿದರ ದಂಡೇ ಸಿನಿಮಾದಲ್ಲಿದೆ. ಅಲ್ಲದೇ, ರಜನಿಕಾಂತ್ ಸೇರಿದಂತೆ ಹಲವು ಕಲಾವಿದರನ್ನು ಸಿನಿಮಾ ವೀಕ್ಷಣೆಗೆ ಕಮಲ್ ಆಹ್ವಾನಿಸಿದ್ದಾರೆ. ಹಾಗಾಗಿ ಸಹಜವಾಗಿಯೇ ಚಿತ್ರದ ಬಗ್ಗೆ ಕುತೂಹಲ ಮೂಡಿದೆ.  ಇದನ್ನೂ ಓದಿ : ‘ಮಾ ಇಷ್ಟಂ’ ಸಿನಿಮಾಗೆ ತಡೆಯಾಜ್ಞೆ ತಂದವರ ವಿರುದ್ಧವೇ ನಕಲಿ ಸಹಿ ದೂರು ನೀಡಿದ ವರ್ಮಾ

    ಫಹಾದ್ ಫಾಸಿಲ್, ಕಮಲ್ ಹಾಸನ್ ಮತ್ತು ವಿಜಯ್ ಸೇತುಪತಿ ಮೂವರು ಕಾಂಬಿನೇಷನ್ ನ ಮೊದಲ ಚಿತ್ರ ಇದಾಗಿದ್ದು, ಮೂವರು ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಸ್ವತಃ ಕಮಲ್ ಹಾಸನ್ ಅವರೇ ಈ ಚಿತ್ರದ ನಿರ್ಮಾಪಕರು ಕೂಡ ಆಗಿದ್ದಾರೆ.

  • ತಮಿಳು ಚಿತ್ರ ತಂಡದ ಯಡವಟ್ಟು – ಮೇಲುಕೋಟೆ ತಂಗಿ ಕೊಳದ ನೀರು ಕಲುಷಿತ

    ತಮಿಳು ಚಿತ್ರ ತಂಡದ ಯಡವಟ್ಟು – ಮೇಲುಕೋಟೆ ತಂಗಿ ಕೊಳದ ನೀರು ಕಲುಷಿತ

    ಮಂಡ್ಯ: ಐತಿಹಾಸಿಕ, ಪುರಾಣ ಪ್ರಸಿದ್ಧ ಮೇಲುಕೋಟೆಯಲ್ಲಿರುವ ತಂಗಿಯ ಕೊಳದ ನೀರು ಇದೀಗ ತಮಿಳು ಸಿನಿಮಾ ತಂಡ ಮಾಡಿರುವ ಒಂದು ಯಡವಟ್ಟಿನಿಂದ ಕಲುಷಿತಗೊಂಡಿದೆ. ಪವಿತ್ರ ಹಾಗೂ ಶುದ್ಧತೆಗೆ ಹೆಸರುವಾಸಿಯಾಗಿದ್ದ ತಂಗಿ ಕೊಳದ ನೀರು ಕಲುಷಿತಗೊಳ್ಳಲು ತಮಿಳು ಸಿನಿಮಾ ತಂಡ ಕೊಳದ ನೀರಿಗೆ ಬಣ್ಣ ಹಾಗೂ ಹೂ ಹಾಕಿರುವುದೇ ಕಾರಣವಾಗಿದೆ.

    ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಮೇಲುಕೋಟೆ ಹಲವು ಐತಿಹಾಸಿಕ ಕತೆಗಳಿಗೆ ಪ್ರಸಿದ್ಧಿ ಪಡೆದಿದೆ. ಇಲ್ಲಿರುವ ಅಕ್ಕ-ತಂಗಿಯ ಕೊಳಗಳಿಗೂ ಇತಿಹಾಸ ಇದೆ. ಇಲ್ಲಿನ ಅಕ್ಕನ ಕೊಳದ ನೀರು ಗಡುಸಾಗಿರುವ ಕಾರಣ ಕುಡಿಯಲು ಯೋಗ್ಯವಲ್ಲ. ಹೀಗಾಗಿ ಈ ನೀರನ್ನು ಯಾರು ಉಪಯೋಗಿಸುವುದಿಲ್ಲ. ಅಕ್ಕನ ಕೊಳದ ಪಕ್ಕದಲ್ಲಿರುವ ತಂಗಿ ಕೊಳದ ನೀರು ಪಾವಿತ್ರತೆ ಹಾಗೂ ಶುದ್ಧೀಕರಣಕ್ಕೆ ಹೆಸರುವಾಸಿ ಪಡೆದುಕೊಂಡಿದೆ. ಹೀಗಾಗಿ ತಂಗಿ ಕೊಳದ ನೀರನ್ನು ಚೆಲುವನಾರಾಯಣಸ್ವಾಮಿಯ ಅಭಿಷೇಕಕ್ಕೆ, ಭಕ್ತರಿಗೆ ತೀರ್ಥ ನೀಡಲು ಬಳಸಲಾಗುತ್ತದೆ. ಅಲ್ಲದೇ ಈ ನೀರನ್ನು ಜನರು ಕುಡಿಯಲು ಸಹ ಬಳಸುತ್ತಾರೆ. ಇದನ್ನೂ ಓದಿ: ಮುಂದಿನ 2 ವರ್ಷದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬೆಲೆ ಪೆಟ್ರೋಲ್‌ ವಾಹನದಷ್ಟೇ ಆಗಲಿದೆ: ಗಡ್ಕರಿ

    ಇದೀಗ ಕಳೆದ ಒಂದು ತಿಂಗಳ ಹಿಂದೆ ತಮಿಳು ಚಿತ್ರ ತಂಡವೊಂದು ಚಿತ್ರೀಕರಣದ ವೇಳೆ ತಂಗಿ ಕೊಳಕ್ಕೆ ಬಣ್ಣ ಹಾಗೂ ಹೂವನ್ನು ಹಾಕಿದ ಕಾರಣ ತಂಗಿ ಕೊಳದ ನೀರು ಸಂಪೂರ್ಣವಾಗಿ ಕಲುಷಿತಗೊಂಡಿದೆ. ಶುದ್ಧವಾಗಿದ್ದ ನೀರು ಇದೀಗ ಕಂದು ಬಣ್ಣಕ್ಕೆ ತಿರುಗಿದೆ. ಹೀಗಾಗಿ ಭಕ್ತರಿಗೆ ತೀರ್ಥದ ರೂಪದಲ್ಲಿ ನೀಡುತ್ತಿದ್ದ ಈ ನೀರನ್ನು ಈಗ ಕೊಡುತ್ತಿಲ್ಲ. ಸಿನಿಮಾ ತಂಡ ಮಾಡಿರುವ ಯಡವಟ್ಟಿನಿಂದ ತಂಗಿ ಕೊಳದ ನೀರಿನ ಪಾವಿತ್ರತೆ ಹಾಗೂ ಶುದ್ಧತೆ ಹಾಳಾಗಿದೆ. ಇದರಿಂದ ಇಲ್ಲಿನ ಜನರ ಹಾಗೂ ಭಕ್ತರ ನಂಬಿಕೆಗೆ ಪೆಟ್ಟುಬಿದ್ದಂತೆ ಆಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಇಲ್ಲಿ ತಮಿಳು ಸಿನಿಮಾಗೆ ಅವಕಾಶ ನೀಡಿಲ್ಲ. ಮಳೆಯ ನೀರಿನಿಂದ ಹೀಗೆ ಆಗಿದೆ ಎಂದು ಸಬೂಬು ನೀಡುತ್ತಾರೆ. ಮಳೆಯ ನೀರು ಆಗಿದ್ದ ಇಷ್ಟೋತ್ತಿಗೆ ತಿಳಿಗೊಳ್ಳುತ್ತಿತ್ತು. ಇಲ್ಲಿ ಚಿತ್ರೀಕರಣವಾಗಿರುವುದು ಸತ್ಯ, ಅವರು ಆ ವೇಳೆ ಬಣ್ಣ ಹಾಗೂ ಹೂವನ್ನು ನೀರಿಗೆ ಹಾಕಿದ್ದರು ಹೀಗಾಗಿ ನೀರು ಹೀಗೆ ಆಗಿದೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಇದನ್ನೂ ಓದಿ: ಅನ್ನ ಸಂತರ್ಪಣೆ ವೇಳೆ ಪುನೀತ್ ನೆನೆದು ಕಣ್ಣೀರಿಟ್ಟ ಅಶ್ವಿನಿ

    ತಮಿಳು ಚಿತ್ರತಂಡ ಮಾಡಿರುವ ಯಡವಟ್ಟಿನಿಂದ ತಂಗಿ ಕೊಳದ ನೀರು ಕಲುಷಿತಗೊಂಡಿರುವುದು ವಿಪರ್ಯಾಸದ ಸಂಗತಿ. ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ತಂಗಿ ಕೊಳದ ಪವಿತ್ರತೆಯನ್ನು ಕಾಪಡಬೇಕಿದೆ.