Tag: Tamil language

  • ತಮಿಳು ಭಾಷೆಯನ್ನು ಕೇಂದ್ರದ ಅಧಿಕೃತ ಭಾಷೆಯಾಗಿ ಘೋಷಿಸಿ: ಸ್ಟಾಲಿನ್

    ತಮಿಳು ಭಾಷೆಯನ್ನು ಕೇಂದ್ರದ ಅಧಿಕೃತ ಭಾಷೆಯಾಗಿ ಘೋಷಿಸಿ: ಸ್ಟಾಲಿನ್

    ಚೆನ್ನೈ: ದೇಶದಲ್ಲಿ ಹಿಂದಿ ಮತ್ತು ಭಾಷಾ ವೈವಿಧ್ಯತೆಯ ಚರ್ಚೆಯ ನಡುವೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಗುರುವಾರ ಕೇಂದ್ರ ಸರ್ಕಾರಿ ಕಚೇರಿಗಳು ಮತ್ತು ಮದ್ರಾಸ್ ಹೈಕೋರ್ಟ್‍ನಲ್ಲಿ ತಮಿಳು ಭಾಷೆಯನ್ನು ಅಧಿಕೃತ ಭಾಷೆಯಾಗಿ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.

    ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಮತ್ತು ಯೋಜನೆಗಳ ಶಂಕುಸ್ಥಾಪನೆ ಕಾಮಗಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಚೆನ್ನೈಗೆ ಮೋದಿ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಟಾಲಿನ್ ಅವರು, ಡಿಎಂಕೆ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಮಿಳುನಾಡಿನಲ್ಲಿ ಮೋದಿ ಅವರು ಭಾಗವಹಿಸುತ್ತಿರುವ ಮೊದಲ ಸರ್ಕಾರಿ ಕಾರ್ಯಕ್ರಮ ಇದಾಗಿದೆ. ಅದಕ್ಕೆ ನಾನು ಪ್ರಧಾನಿಯವರಿಗೆ ಸ್ವಾಗತ ಮತ್ತು ಕೃತಜ್ಞತೆಯನ್ನು ಅರ್ಪಿಸುತ್ತಿದ್ದೇನೆ ಎಂದು ತಮಿಳಿನಲ್ಲಿ ಮಾತನ್ನು ಪ್ರಾರಂಭಿಸಿದರು. ಇದನ್ನೂ ಓದಿ: ನಮ್ಮ ಇಂಡಸ್ಟ್ರಿ ಏನು, ನಮ್ಮ ಗೌರವ ಏನು ಎಲ್ಲರಿಗೂ ಗೊತ್ತು: ತೆಲಗು ನಿರ್ದೇಶಕನಿಗೆ ಶಿವಣ್ಣ ತಿರುಗೇಟು 

    ಹಿಂದಿಯಂತೆ ತಮಿಳನ್ನು ಅಧಿಕೃತ ಭಾಷೆಯಾಗಿ ಮತ್ತು ಮದ್ರಾಸ್ ಹೈಕೋರ್ಟ್‍ನಲ್ಲಿ ಅಧಿಕೃತ ಭಾಷೆಯನ್ನಾಗಿ ಮಾಡಿ ಎಂದು ಆಗ್ರಹಿಸಿದರು. ತಮಿಳುನಾಡಿನ ಬೆಳವಣಿಗೆಯು ಕೇವಲ ಆರ್ಥಿಕ ಮಾನದಂಡಗಳ ಮೇಲೆ ಮಾತ್ರವಲ್ಲದೆ ಅಂತರ್ಗತ ಬೆಳವಣಿಗೆಯ ‘ದ್ರಾವಿಡ ಮಾದರಿ’ಯನ್ನು ಆಧರಿಸಿದೆ ಎಂದು ತಿಳಿಸಿದರು.

    ತಮಿಳುನಾಡಿನ ಬೆಳವಣಿಗೆಗೆ ಮೂಲಸೌಕರ್ಯ ಯೋಜನೆಗಳು ಪ್ರಮುಖವಾಗಿವೆ. ರಾಜ್ಯವು ಈಗಾಗಲೇ ಹಲವಾರು ಕ್ಷೇತ್ರಗಳಲ್ಲಿ ಬೆಳವಣೆಯಾಗಿದೆ. ತಮಿಳುನಾಡಿನ ಬೆಳವಣಿಗೆಯ ಪಥವು ಅನನ್ಯವಾಗಿದೆ ಏಕೆಂದರೆ ಇದು ಆರ್ಥಿಕ ಬೆಳವಣಿಗೆಗೆ ಮಾತ್ರವಲ್ಲ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯಿಂದ ನಡೆಸಲ್ಪಡುವ ಬೆಳವಣಿಗೆಯಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ತೃತೀಯ ರಂಗ ರಚನೆಗೆ ದೇವೇಗೌಡರ ಜೊತೆ ಚಂದ್ರಶೇಖರ್ ರಾವ್ ಚರ್ಚೆ

    ಹಕಾರಿ ಫೆಡರಲಿಸಂಗೆ ಒತ್ತು ನೀಡಿದ ಸ್ಟಾಲಿನ್ ಅವರು, ತಮಿಳುನಾಡು ಯೋಜನೆಗಳಿಗೆ ಕೇಂದ್ರ ಸರ್ಕಾರ ಧನಸಹಾಯವನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

  • ತಮಿಳುನಾಡಲ್ಲಿ ಸರ್ಕಾರಿ ನೌಕರಿಗೆ ತಮಿಳು ಕಡ್ಡಾಯ

    ತಮಿಳುನಾಡಲ್ಲಿ ಸರ್ಕಾರಿ ನೌಕರಿಗೆ ತಮಿಳು ಕಡ್ಡಾಯ

    – ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಮಿಳು ಭಾಷೆಯ ಪ್ರಶ್ನೆಪತ್ರಿಕೆ

    ಚೆನ್ನೈ: ಸರ್ಕಾರಿ ನೌಕರಿಗೆ ಸೇರಬೇಕೆಂದರೆ ಇನ್ನುಮುಂದೆ ತಮಿಳು ಭಾಷಾ ವಿಷಯದ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.

    ರಾಜ್ಯದ ಸರ್ಕಾರಿ ನೌಕರರಿಗೆ ತಮಿಳು ಜ್ಞಾನ ಇರಬೇಕು, ಜನರಿಗೆ ಮಾತೃಭಾಷೆಯಲ್ಲಿ ಸರ್ಕಾರಿ ಸೇವೆಗಳು ದೊರಕಬೇಕು ಮತ್ತು ತಮಿಳು ಭಾಷಿಕರಿಗೇ ಸ್ಥಳೀಯ ಉದ್ಯೋಗಗಳು ಸಿಗಬೇಕು ಎಂಬ ಉದ್ದೇಶದೊಂದಿಗೆ ತಮಿಳುನಾಡು ಸರ್ಕಾರ ಎಲ್ಲ ಸರ್ಕಾರಿ ನೌಕರರಿಗೆ ತಮಿಳು ಭಾಷೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

    ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ರಾಜ್ಯ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಿಗೆ ನೇಮಕಾತಿ ಮಾಡಿಕೊಳ್ಳಲು ತಮಿಳುನಾಡು ಲೋಕಸೇವಾ ಆಯೋಗ (ಟಿಎನ್‍ಪಿಎಸ್‍ಸಿ) ನಡೆಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ 10 ನೇ ತರಗತಿಯ ತಮಿಲೂ ಪರೀಕ್ಷೆಗಳಲ್ಲಿ ಇನ್ನುಮುಂದೆ ಪ್ರಶ್ನೆಪತ್ರಿಕೆ ಇರುತ್ತದೆ. ಅದರಲ್ಲಿ ಕನಿಷ್ಟ 40 ಅಂಕಗಳನ್ನು ಪಡೆದು ಉತ್ತೀರ್ಣರಾದರೆ ಮಾತ್ರ ಅಭ್ಯರ್ಥಿಯು ಟಿಎನ್‍ಪಿಎಸ್‍ಸಿ ಪರೀಕ್ಷೆಯಲ್ಲಿ ಬರೆದ ಇನ್ನಿತರ ವಿಷಯಗಳ ಉತ್ತರ ಪತ್ರಿಕೆಗಳನ್ನು ಮೌಲ್ಯ ಮಾಪನ ಮಾಡಲಾಗುತ್ತದೆ . ಈ ನಿಯಮ ತಕ್ಷಣ ದಿಂದಲೇ ಜಾರಿಗೆ ಬರಲಿದೆ. ಡಿ.1ರಂದು ಹೊರಡಿಸಿರುವ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.ಇದನ್ನೂ ಓದಿ: ಲಸಿಕೆ ಪ್ರಮಾಣ ಪತ್ರ ಎಡವಟ್ಟು – ವ್ಯಾಕ್ಸಿನ್ ಪಡೆಯಲು ಬಂದಾತನಿಗೆ ಶಾಕ್

    ಇದೇ ನಿಯಮ ರಾಜ್ಯ ಶಿಕ್ಷಕರ ನೇಮಕಾತಿ ಪರೀಕ್ಷೆ, ವೈದ್ಯಕೀಯ ನೇಮಕಾತಿ ಪರೀಕ್ಷೆ, ಯೂನಿಫಾರ್ಮ್ಡ್ ರಿಕ್ರೂಟ್‍ಮೆಂಟ್ ಬೋರ್ಡ್, ತಮಿಳುನಾಡು ಅರಣ್ಯ ಸೇವೆ ಮುಂತಾದ ಎಲ್ಲಾ ರಾಜ್ಯದ ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಳು ಅನ್ವಯಿಸಲಿದ್ದು, ಶಿಘ್ರದಲ್ಲೇ ಆಯಾ ಮಂಡಳಿಗಳು ಆದೇಶ ಹೊರಡಿಸಲಿವೆ ಎಂದು ಸರ್ಕಾರ ಹೇಳಿದೆ. ಇದನ್ನೂ ಓದಿ: ಜಿಂಬಾಬ್ವೆಯಿಂದ ಗುಜರಾತ್‌ಗೆ ವಾಪಸ್ಸಾಗಿದ್ದ ವ್ಯಕ್ತಿಯಲ್ಲಿ ಓಮಿಕ್ರಾನ್‌ ಪತ್ತೆ- ಭಾರತದಲ್ಲಿ 3ಕ್ಕೇರಿದ ಸಂಖ್ಯೆ

  • ಸಿಎಎ ಬಗ್ಗೆ ಮಾತನಾಡಿದ್ರೆ ಹುಷಾರ್: ಸಚಿವ ಈಶ್ವರಪ್ಪಗೆ ಜೀವ ಬೆದರಿಕೆ ಕರೆ

    ಸಿಎಎ ಬಗ್ಗೆ ಮಾತನಾಡಿದ್ರೆ ಹುಷಾರ್: ಸಚಿವ ಈಶ್ವರಪ್ಪಗೆ ಜೀವ ಬೆದರಿಕೆ ಕರೆ

    ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ವ್ಯಕ್ತಿಯೊಬ್ಬ ಫೋನ್ ಮಾಡಿ ತಮಿಳು ಭಾಷೆಯಲ್ಲಿ ಮಾತನಾಡಿ ಜೀವ ಬೆದರಿಕೆ ಹಾಕಿದ್ದಾನೆ.

    ಸಂವಿಧಾನದ ವಿಧಿ 370, ಪೌರತ್ವ ತಿದ್ದುಪಡೆ ಕಾಯ್ದೆ ಬಗ್ಗೆ ಮತ್ತು ಮುಸ್ಲಿಮರ ವಿರುದ್ಧ ಮಾತನಾಡಿದರೆ ಸರಿ ಇರುವುದಿಲ್ಲ ಎಂದು ಅಪರಿಚಿತ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದಾನೆ. ಕರೆ ಬಂದಿರುವ ಬಗ್ಗೆ ಕೆ.ಎಸ್ ಈಶ್ವರಪ್ಪ ಅವರು ಶಿವಮೊಗ್ಗ ಎಸ್‍ಪಿಗೆ ಮಾಹಿತಿ ನೀಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ಸಚಿವರಿಗೆ ಶುಕ್ರವಾರ ಮಧ್ಯಾಹ್ನ ವ್ಯಕ್ತಿಯೊಬ್ಬ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಪರಿಶೀಲನೆ ನಡೆಸಿ, ತನಿಖೆ ಆರಂಭಿಸುತ್ತೇವೆ ಎಂದು ಶಿವಮೊಗ್ಗ ಎಸ್‍ಪಿ ಕೆ.ಎಂ.ಶಾಂತರಾಜು ಅವರು ಸಚಿವರಿಗೆ ಭರವಸೆ ನೀಡಿದ್ದಾರೆ. ಈ ಸಂಬಂಧ ಕೆ.ಎಸ್.ಈಶ್ವರಪ್ಪ ಅವರು ಎಸ್‍ಪಿ ಅವರಿಗೆ ಶನಿವಾರ ಅಥವಾ ಭಾನುವಾರ ಲಿಖಿತ ದೂರು ನೀಡುವ ಸಾಧ್ಯತೆ ಇದೆ ಎಂದು ಸಚಿವರ ಆಪ್ತರೊಬ್ಬರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಈ ಹಿಂದೆಯೂ ದುಬೈ ಮೂಲದ ವ್ಯಕ್ತಿಯಿಂದ ಕೆ.ಎಸ್.ಈಶ್ವರಪ್ಪ ಅವರಿಗೆ ಜೀವ ಬೆದರಿಕೆ ಕರೆ ಬಂದಿತ್ತು. ಆ ಸಂದರ್ಭದಲ್ಲೂ ಸಚಿವರು ಎಸ್‍ಪಿ ಅವರಿಗೆ ದೂರು ನೀಡಿದ್ದರು.