Tag: Tamil Film

  • Breaking: ತಲೈವಾ, ಶಿವಣ್ಣನ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ – ʻಜೈಲರ್‌ʼ ಸಿನಿಮಾ ರಿಲೀಸ್‌ ಡೇಟ್‌ ಫಿಕ್ಸ್‌

    Breaking: ತಲೈವಾ, ಶಿವಣ್ಣನ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ – ʻಜೈಲರ್‌ʼ ಸಿನಿಮಾ ರಿಲೀಸ್‌ ಡೇಟ್‌ ಫಿಕ್ಸ್‌

    ಸೂಪರ್‌ ಸ್ಟಾರ್‌ ರಜನಿಕಾಂತ್‌ (Rajanikanth) ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಕಾಲಿವುಡ್‌ನ (Kollywood) ಬಹುನಿರೀಕ್ಷಿತ `ಜೈಲರ್’ (Jailer) ಸಿನಿಮಾ ಬಿಡುಗಡೆಗೆ ಕೊನೆಗೂ ದಿನಾಂಕ ಫಿಕ್ಸ್‌ ಆಗಿದೆ.

    ದಕ್ಷಿಣ ಭಾರತದ ಸ್ಟಾರ್‌ ನಟರು ನಟಿಸಿರುವ ಈ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್‌ ಕಟ್‌ ಹೇಳಿದ್ದಾರೆ. ಜೈಲರ್‌ ಸಿನಿಮಾ ಮುಂದಿನ ಆಗಸ್ಟ್ 10 ರಂದು ತೆರೆಗೆ ಬರಲಿದೆ. ಈ ಕುರಿತು ಚಿತ್ರತಂಡ 48 ಸೆಕೆಂಡುಗಳ ಟೀಸರ್ ವೀಡಿಯೋವನ್ನ ಹಂಚಿಕೊಳ್ಳೂವ ಜೊತೆಗೆ ಸಿನಿಮಾ ಬಿಡುಗಡೆಯ ದಿನಾಂಕವನ್ನ ಘೋಷಣೆ ಮಾಡಿದೆ. ಇದನ್ನೂ ಓದಿ: ‘ಫೈಟರ್’ ಚಿತ್ರದಲ್ಲಿ ನಟಿಸಲು ಹೃತಿಕ್- ದೀಪಿಕಾ ಪಡುಕೋಣೆ ಪಡೆದ ಸಂಭಾವನೆ ಎಷ್ಟು?

    ರಜನಿಕಾಂತ್, ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌ (Shivarajkumar), ಮೋಹನ್ ಲಾಲ್, ತಮನ್ನಾ ಭಾಟಿಯಾ ಇನ್ನೂ ಅನೇಕ ತಾರೆಯರು ಟೀಸರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳು ಚಿತ್ರದಲ್ಲಿ ಶಿವರಾಜ್‌ ಕುಮಾರ್‌ ನಟಿಸುತ್ತಿರುವುದು ಅಭಿಮಾನಿಗಳಿಗೆ ಹಬ್ಬವಾಗಿದೆ. ಇದನ್ನೂ ಓದಿ: ಮೊದಲ ಬಾರಿಗೆ ಬೇಬಿ ಬಂಪ್ ಫೋಟೋ ರಿವೀಲ್ ಮಾಡಿದ ನಟಿ ಇಲಿಯಾನಾ

    ಅಲ್ಲದೇ ಶಿವಣ್ಣ ಮೊದಲ ಬಾರಿಗೆ ತಮಿಳು ಸಿನಿಮಾದಲ್ಲಿ (Tamil Cinema) ನಟಿಸುತ್ತಿದ್ದು, ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಹು ತಾರಾಗಣ ಹೊಂದಿರುವ ಈ ಸಿನಿಮಾ ಪೋಸ್ಟರ್‌ ಮೂಲಕವೇ ನಿರೀಕ್ಷೆ ಹುಟ್ಟಿಸಿತ್ತು. ಇದೀಗ ಚಿತ್ರದ ಬಿಡುಗಡೆ ದಿನಾಂಕ ಘೋಷಿಸುವ ಚಿತ್ರತದಂದ ಟೀಸರ್‌ ಇನ್ನಷ್ಟು ಕುತೂಹಲ ಹೆಚ್ಚಿಸಿದೆ. ತಲೈವಾ ನಟನೆಯ 169ನೇ ಸಿನಿಮಾ ಆಗಿರುವ ಕಾರಣ, ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.

  • ತಮಿಳು ನಟ ವಿಕ್ರಮ್‌ಗೆ ಹೃದಯಾಘಾತ

    ತಮಿಳು ನಟ ವಿಕ್ರಮ್‌ಗೆ ಹೃದಯಾಘಾತ

    ಕಾಲಿವುಡ್‌ನ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ್ದ ಸ್ಟಾರ್ ನಟ ವಿಕ್ರಮ್‌ಗೆ ಇಂದು ಹೃದಯಾಘಾತವಾಗಿದೆ. ಚಿಕಿತ್ಸೆಗಾಗಿ ಚೆನ್ನೈ ಕಾವೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    `ಎನ್ ಕಾದಲ್ ಕಣ್ಮಣಿ’ ಚಿತ್ರದ ಮೂಲಕ ಕಾಲಿವುಡ್‌ಗೆ ಪರಿಚಿತರಾದ ನಟ ವಿಕ್ರಮ್ ನಂತರ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ್ದರು. ಇದೀಗ ನಟ ವಿಕ್ರಮ್‌ಗೆ ಹೃದಯಾಘಾತವಾಗಿದ್ದು, ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ನಟನಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.

    ಸದ್ಯ ವಿಕ್ರಮ್ ನಟನೆಯ ಮುಂಬರುವ ಚಿತ್ರಗಳು `ಕೋಬ್ರಾ’ ಮತ್ತು `ಪೊನ್ನಿಯನ್ ಸೆಲ್ವನ್’ ಈ ಎರಡು ಪ್ರಾಜೆಕ್ಟ್‌ನಲ್ಲಿ ಸಕ್ರಿಯರಾಗಿದ್ದಾರೆ. ಇಂದು ಸಂಜೆ ʻಪೊನ್ನಿಯನ್ ಸೆಲ್ವನ್ʼ ಚಿತ್ರದ ಟ್ರೈಲರ್ ಲಾಂಚ್ ಕೂಡ ಆಯೋಜಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಪೂಜಾ ಹೆಗ್ಡೆ ಅವಕಾಶ ಕಿತ್ತುಕೊಂಡ ರಶ್ಮಿಕಾ ಮಂದಣ್ಣ

    ಪೂಜಾ ಹೆಗ್ಡೆ ಅವಕಾಶ ಕಿತ್ತುಕೊಂಡ ರಶ್ಮಿಕಾ ಮಂದಣ್ಣ

    ಮಿಳಿನಲ್ಲಿ ನಂಬರ್ ಒನ್ ನಟಿ ಸ್ಥಾನಕ್ಕೆ ಇಬ್ಬರು ನಾಯಕಿಯರ ಪೈಪೋಟಿ ನಡೆದಿದೆ. ಇಬ್ಬರೂ ಕನ್ನಡದ ಮೂಲದವರು ಎನ್ನುವುದು ವಿಶೇಷ. ಕಳೆದ ವರ್ಷ ಈ ಇಬ್ಬರೂ ನಟಿಯರ ಸಿನಿಮಾಗಳು ಸಮಗತಿಯಲ್ಲಿ ಸಾಗಿದ್ದವು. ತಲಾ ಐದೈದು ಸಿನಿಮಾಗಳನ್ನು ಕೊಟ್ಟ ಹೆಗ್ಗಳಿಕೆಗೆ ಇವರು ಪಾತ್ರರಾದರು. ಒಂದೇ ಸಮಯದಲ್ಲೇ ಇಬ್ಬರೂ ಸಂಭಾವನೆಯನ್ನೂ ಹೆಚ್ಚಿಸಿಕೊಂಡರು. ಬಾಲಿವುಡ್ ಗೂ ಹೋಗಿ ಬಂದರು. ಹೀಗಾಗಿ ಇಬ್ಬರ ಮಧ್ಯ ಭಾರೀ ಪೈಪೋಟಿ ಎದುರಾಗಿದೆ. ಇದನ್ನೂ ಓದಿ : ಚಕ್ಡಾ ಎಕ್ಸ್ ಪ್ರೆಸ್ ಸಿನಿಮಾಗಾಗಿ ಅನುಷ್ಕಾ ಬೌಲಿಂಗ್ ಪ್ರಾಕ್ಟಿಸ್

    ಅಂದುಕೊಂಡಂತೆ ಆಗಿದ್ದರೆ ತಮಿಳಿನ ಖ್ಯಾತ ನಟ ದಳಪತಿ ವಿಜಯ್ ಅವರ ಇನ್ನೂ ಹೆಸರಿಡದ ಚಿತ್ರಕ್ಕೆ  (‘ದಳಪತಿ 66’) ಪೂಜಾ ಹೆಗ್ಡೆ ನಾಯಕಿ ಎನ್ನಲಾಗಿತ್ತು. ಈ ಮಧ್ಯೆ ಕಿಯಾರಾ ಹೆಸರು ಕೇಳಿ ಬಂದಿತ್ತು. ಪೂಜಾ ಅಥವಾ ಕಿಯಾರಾ ಅವರೇ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಾರೆ ಎಂದು ತಮಿಳು ಚಿತ್ರರಂಗ ಹೇಳಿತ್ತು. ಆದರೆ, ಇದೀಗ ಚಿತ್ರಣವೇ ಬದಲಾಗಿದೆ. ಈ ಇಬ್ಬರೂ ನಾಯಕಿಯರು ಅವಕಾಶವಂಚಿತರಾಗಿ ಅವರ ಸ್ಥಾನಕ್ಕೆ ರಶ್ಮಿಕಾ ಮಂದಣ್ಣ ಬಂದಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಉಪೇಂದ್ರ ಸಿನಿಮಾದ ಹೊಸ ಪೋಸ್ಟರ್ ವಿಶ್ಲೇಷಣೆ: ಏನೇನೆಲ್ಲ ಇದೆ, ತಲೆ ಕೆಟ್ಟು ಹೋಗತ್ತೆ!

    ಈವರೆಗೂ ತಮಿಳಿನ ಸ್ಟಾರ್ ಗಳ ಜತೆಯೇ ಹೆಚ್ಚಾಗಿ ನಟಿಸಿರುವ ರಶ್ಮಿಕಾ, ಈವರೆಗೂ ದಳಪತಿ ವಿಜಯ್ ಅವರ ಜತೆ ನಟಿಸಿರಲಿಲ್ಲ. ಇದೇ ಮೊದಲ ಬಾರಿಗೆ ಈ ಜೋಡಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ. ತಮಿಳಿನ ಖ್ಯಾತ ನಿರ್ದೇಶಕ ವಂಶಿ ಪೈಡಿಪಲ್ಲಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ನಾಯಕಿಯ ಆಯ್ಕೆಯನ್ನು ಇನ್ನಷ್ಟ ಅಧಿಕೃತಗೊಳಿಸಬೇಕಿದೆ. ಇದನ್ನೂ ಓದಿ : ಯಾಕೆ ಆ ವಿಡಿಯೋ ಹಾಕಿದ್ರು ಮೀರಾ ಜಾಸ್ಮಿನ್? ಅಭಿಮಾನಿ ಅಳಲೇನು ಕೇಳಿ

    ಈಗಷ್ಟೇ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿರುವ ರಶ್ಮಿಕಾ, ಇದೀಗ ತಮ್ಮದೇ ಆದ ಯೂ ಟ್ಯೂಬ್ ಚಾನೆಲ್ ವೊಂದನ್ನು ಶುರು ಮಾಡಿದ್ದಾರೆ. ಮೊದಲ ದಿನವೇ ತಮ್ಮ ‘ಎಕ್ಸ್’ಗಳ ಬಗ್ಗೆ ಏನೂ ಕೇಳಬೇಡಿ ಎಂದು ವಾರ್ನ್ ಕೂಡ ಮಾಡಿದ್ದಾರೆ.

  • ತಮಿಳಿಗೆ ಹೊರಟ ಬಸಣ್ಣಿ ಖ್ಯಾತಿಯ ತಾನ್ಯ ಹೋಪ್ : ಪ್ರಶಾಂತ್ ರಾಜ್ ಚಿತ್ರಕ್ಕೆ ತಾನ್ಯ ನಾಯಕಿ

    ತಮಿಳಿಗೆ ಹೊರಟ ಬಸಣ್ಣಿ ಖ್ಯಾತಿಯ ತಾನ್ಯ ಹೋಪ್ : ಪ್ರಶಾಂತ್ ರಾಜ್ ಚಿತ್ರಕ್ಕೆ ತಾನ್ಯ ನಾಯಕಿ

    ತೆಲುಗು ಸಿನಿಮಾ ರಂಗದ ಮೂಲಕ ಸಿನಿಮಾ ರಂಗ ಪ್ರವೇಶ ಮಾಡಿದ್ದ ತಾನ್ಯ ಹೋಪ್, ಯಜಮಾನ ಚಿತ್ರದಿಂದ ಕನ್ನಡಿಗರ ಮನೆಮಾತಾದರು. ಅದರಲ್ಲೂ ‘ಬಸಣ್ಣಿ ಬಾ’ ಹಾಡು ಅವರನ್ನು ಮತ್ತೊಂದು ಮಟ್ಟಕ್ಕೆ ಕರೆದುಕೊಂಡು ಹೋಯಿತು. ಆನಂತರ ತಾನ್ಯ ಸಿನಿಮಾ ರಂಗದಲ್ಲಿ ಬ್ಯುಸಿಯಾದರು. ಈಗ ಬ್ಯಾಕ್ ಟು ಬ್ಯಾಕ್ ತಮಿಳು ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಕುಲಸಾಮಿ ಸಿನಿಮಾದ ನಂತರ ಇದೀಗ ಕನ್ನಡದ ಚಿತ್ರ ನಿರ್ದೇಶಕ ಪ್ರಶಾಂತ್ ರಾಜ್ ನಿರ್ದೇಶನದ ಹೊಸ ತಮಿಳು ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದೇ ತಿಂಗಳ ಕೊನೆ ವಾರದಿಂದ ಶೂಟಿಂಗ್ ನಲ್ಲೂ ಪಾಲ್ಗೊಳ್ಳುತ್ತಿದ್ದಾರೆ. ಇದನ್ನೂ ಓದಿ : ಸೋಲೊ ಟ್ರಿಪ್ ನಲ್ಲಿ ಪ್ಯಾರ್ಗೆ ಹುಡುಗಿ ಪಾರುಲ್ ಯಾದವ್

    ಸಿನಿಮಾ ತಮಿಳದ್ದಾದರೂ, ಬಹುತೇಕ ಕನ್ನಡದ ತಂತ್ರಜ್ಞರು ಮತ್ತು ಕಲಾವಿದರು ಈ ಸಿನಿಮಾದಲ್ಲಿ ಇರಲಿದ್ದಾರೆ ಎಂದು ಈ ಹಿಂದೆ ಪ್ರಶಾಂತ್ ರಾಜ್ ಹೇಳಿದ್ದರು. ಕನ್ನಡದ ಹುಡುಗಿಯನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡುವೆ ಎಂದೂ ತಿಳಿಸಿದ್ದರು. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಕನ್ನಡದ ನಟಿಯನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ : ಸದ್ಯ ಡೇಟಿಂಗ್, ಮುಂದೆ ಮದ್ವೆ, ಹೃತಿಕ್ –ಸಬಾ ಜೋಡಿ ಪ್ರೇಮ್ ಕಹಾನಿ

    “ನಾನು ಈವರೆಗೂ ಏನು ಹೇಳಿದ್ದೇನೋ ಹಾಗೆಯೇ ನಡೆದುಕೊಂಡಿದ್ದೇನೆ. ತಮಿಳು ಸಿನಿಮಾ ಮಾಡುತ್ತಿದ್ದರೂ, ಕನ್ನಡದ ನಾಯಕಿಯೇ ನನ್ನ ಸಿನಿಮಾದಲ್ಲಿ ಇರಲಿದ್ದಾರೆ ಎಂದಿದ್ದೆ. ಮಾತಿನಂತೆ ನಡೆದುಕೊಂಡಿದ್ದೇನೆ. ತಾನ್ಯ ಒಂದೊಳ್ಳೆ ಮಹತ್ವದ ಪಾತ್ರವನ್ನೇ ನಿರ್ವಹಿಸಲಿದ್ದಾರೆ. ನಗಿಸುತ್ತಲೇ ಹೊಸ ವಿಷಯವನ್ನು ಹೇಳುವ ಪ್ರಯತ್ನ ಈ ಸಿನಿಮಾದಲ್ಲಿ ಆಗಲಿದೆ” ಎನ್ನುತ್ತಾರೆ ಪ್ರಶಾಂತ್ ರಾಜ್. ಇದನ್ನೂ ಓದಿ : ಪಂಜಾಬ್ ನಿಯೋಜಿತ ಸಿಎಂ ಭಗವಂತ್ ಮಾನ್ ನಟ ಹಾಗೂ ಕಾಮಿಡಿ ಕಲಾವಿದ

    ಪ್ರಶಾಂತ್ ರಾಜ್ ನಿರ್ದೇಶನದ ಬಹುತೇಕ ಸಿನಿಮಾಗಳಲ್ಲಿ ನಾಯಕನಷ್ಟೇ ನಾಯಕಿಗೂ ಮಹತ್ವ ಇರುತ್ತದೆ. ಹಾಗಾಗಿಯೇ ಇವರ ಚಿತ್ರದ ನಟನೆಗಾಗಿ ರಾಧಿಕಾ ಪಂಡಿತ್ ಸೇರಿದಂತೆ ಹಲವು ನಟಿಯರು ಅತ್ಯುತಮ ನಟಿ ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದಾರೆ. ತಾನ್ಯಗೂ ಅಂಥದ್ದೇ ಮಹತ್ವದ ಪಾತ್ರವನ್ನು ನೀಡಿದ್ದಾರಂತೆ. ಇದನ್ನೂ ಓದಿ : ಕಿಕ್ ಏರಿಸಲು ಹೊರಟಿದ್ದ ಸಮಂತಾಗೆ ‘ನೋ ನೋ’ ಅಂದ ಟ್ರೋಲಿಗರು

    ಅಂದಹಾಗೆ ತಮಿಳಿನ ನಟ ಸಂತಾನಂ ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಕನ್ನಡದ ಹಾಸ್ಯನಟ ಸಾಧು ಕೋಕಿಲಾ ಸೇರಿದಂತೆ ಅನುಭವಿ ತಾರಾ ಬಳಗವೇ ಸಿನಿಮಾದಲ್ಲಿ ಇರಲಿದೆ.

  • ರಜನಿಕಾಂತ್ ಖಳನಟನಿರುವಾಗಲೇ ಮೊದಲ ಫ್ಯಾನ್ಸ್ ಕ್ಲಬ್ ಮಾಡಿದ್ದ ಮುತ್ತುಮಣಿ ನಿಧನ

    ರಜನಿಕಾಂತ್ ಖಳನಟನಿರುವಾಗಲೇ ಮೊದಲ ಫ್ಯಾನ್ಸ್ ಕ್ಲಬ್ ಮಾಡಿದ್ದ ಮುತ್ತುಮಣಿ ನಿಧನ

    ಭಾರತೀಯ ಸಿನಿಮಾ ರಂಗದ ದಂತಕಥೆ, ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಪ್ಪಟ ಅಭಿಮಾನಿ ಹಾಗೂ ರಜನಿಕಾಂತ್ ಅವರಿಗಾಗಿ ಮೊದಲ ಫ್ಯಾನ್ಸ್ ಕ್ಲಬ್ ತಗೆದಿದ್ದ ಮದುರೈ ಮೂಲದ ಮುತ್ತುಮಣಿ ಇಂದು ನಿಧನರಾಗಿದ್ದಾರೆ. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಅವರ ‘ಮಿಷನ್ ಮಜ್ನು’ ಬರ್ತಿದ್ದಾನೆ, ದಾರಿ ಬಿಡಿ

    ರಜನಿಕಾಂತ್ ಅವರು ಇನ್ನೂ ಹೀರೋ ಆಗಿ ಲಾಂಚ್ ಆಗದೇ ಇರುವ ವೇಳೆಯಲ್ಲಿ ಅಂದರೆ, ಖಳನಟನಾಗಿ ತೆರೆಯ ಮೇಲೆ ಮಿಂಚುತ್ತಿರುವ ಹೊತ್ತಿನಲ್ಲಿಯೇ ಮುತ್ತುಮಣಿ 45 ವರ್ಷಗಳ ಹಿಂದೆ ರಜನಿಕಾಂತ್ ಅಭಿಮಾನಿ ಸಂಘ ಶುರು ಮಾಡಿದ್ದರು. ಇದನ್ನೂ ಓದಿ : ಆಟಿಸಂ ಸಮಸ್ಯೆ ಕುರಿತಾದ ಕನ್ನಡದ ಮೊದಲ ಸಿನಿಮಾ ‘ವರ್ಣಪಟಲ’

    ಮುತ್ತುಮಣಿ ಕಂಡರೆ ರಜನಿಗೆ ಎಲ್ಲಿಲ್ಲದ ಪ್ರೀತಿ. ಇವರು ಅನಾರೋಗ್ಯಕ್ಕೆ ತುತ್ತಾದಾಗ ಸ್ವತಃ ರಜನಿ ಅವರೇ ಸಹಾಯ ಮಾಡಿದ್ದರು. ಕರೆ ಮಾಡಿ ಆರೋಗ್ಯ ವಿಚಾರಿಸುತ್ತಿದ್ದರು. ಅಲ್ಲದೇ, ರಜನಿ ನಟನೆಯ ಅಂಬುಲ್ಲ ರಜನಿಕಾಂತ್ ಸಿನಿಮಾದಲ್ಲಿ ‘ಮುತ್ತುಮಣಿ ಚೌದರೆ ವಾ’ ಹಾಡಿನಲ್ಲಿ ವಿಶೇಷವಾಗಿ ಮುತ್ತಮಣಿಯನ್ನು ಸ್ಮರಿಸಿದ್ದರು. ಇದನ್ನೂ ಓದಿ : ಸ್ಸಾರಿ.. ಈ ಬಾರಿ ಹುಟ್ಟು ಹಬ್ಬ ಆಚರಿಸಲ್ಲ : ಜಗ್ಗೇಶ್

    ರಜನಿಕಾಂತ್ ಅಭಿಮಾನಿಗಳ ಸಂಘದ ಹುಟ್ಟಿಗೆ ಕಾರಣರಾಗಿದ್ದ ಮುತ್ತುಮಣಿ ನಿಧನಕ್ಕೆ ರಜನಿ ಫ್ಯಾನ್ಸ್ ಮತ್ತು ರಜನಿಕಾಂತ್ ಕಂಬನಿ ಮಿಡಿದ್ದಾರೆ.