Tag: Tamil Cinema

  • ತಲಾ ಅಜಿತ್ ಎದೆಯ ಮೇಲೆ ಟ್ಯಾಟೂ; ಏನ್ ಅರ್ಥ ಗೊತ್ತಾ?

    ತಲಾ ಅಜಿತ್ ಎದೆಯ ಮೇಲೆ ಟ್ಯಾಟೂ; ಏನ್ ಅರ್ಥ ಗೊತ್ತಾ?

    ತಾನಾಯ್ತು ತನ್ನ ಸಿನಿಮಾ ಹಾಗೂ ಕುಟುಂಬ ಜೊತೆಗೆ ಕಾರ್‌ ರೇಸ್. ಇದಿಷ್ಟೇ ತಮಿಳು ನಟ ಅಜಿತ್ (Ajith Kumar) ಜೀವನ. ಹೆಚ್ಚಾಗಿ ಹೊರ ಜಗತ್ತಿನಲ್ಲಿ ಕಾಣಿಸ್ಕೊಳ್ಳುವುದೇ ಅಪರೂಪ. ಪ್ರಚಾರ, ಮಾಧ್ಯಮ, ಸೋಶಿಯಲ್ ಮೀಡಿಯಾ ಎಂಗೇಜಿಂಗ್, ಇದೆಲ್ಲದರಿಂದ ದೂರ ಇರ್ತಾರೆ ಅಜಿತ್. ಇದೀಗ ಅಜಿತ್ ಬಗೆಗಿನ ಹೊಸ ವಿಷಯವೊಂದು ಬಯಲಾಗಿದೆ. ಅಜಿತ್ ಎದೆಯ ಮೇಲೆ ದೊಡ್ಡದೊಂದು ಅರ್ಥಗರ್ಭಿತ ಟ್ಯಾಟೂ ಇದೆ. ಅದು ಫ್ಯಾನ್ಸಿ ಬದಲು ಆಧ್ಯಾತ್ಮಿಕತೆಯನ್ನು ಬಿಂಬಿಸುತ್ತೆ.

    ಇತ್ತೀಚೆಗಷ್ಟೇ ಅಜಿತ್ ಕೇರಳದ ಪಲಕ್ಕಾಡ್ ದೇವಸ್ಥಾನವೊಂದಕ್ಕೆ ಭೇಟಿ ಕೊಟ್ಟು ಅಲ್ಲಿ ಪೂಜೆ ಸಲ್ಲಿಸಿದ್ದರು. ಪತ್ನಿ ಶಾಲಿನಿ ಅಜಿತ್ ಕುಮಾರ್ ಪೋಸ್ಟ್ ಮಾಡಿರುವ ಫೋಟೋಗಳಿಂದ ಅಜಿತ್ ಆಧ್ಮಾತ್ಮಿಕ ಪ್ರವಾಸದ ಜೊತೆ ಟ್ಯಾಟೂ ಕೂಡ ದರ್ಶನವಾಗಿದೆ. ಇದನ್ನೂ ಓದಿ: ಸಲ್ಮಾನ್‌ ಖಾನ್‌ ಈಗ ಉಗ್ರ: ಪಾಕ್‌ ಘೋಷಣೆ

    ಅಜಿತ್‌ ಎದೆಯ ಮೇಲೆ ಶಕ್ತಿ ಸ್ವರೂಪಿಣಿ ದೇವಿಯ ದೊಡ್ಡ ಟ್ಯಾಟೂ ಇದೆ. ಅದು ಪಲಕ್ಕಾಡ್‌ನ ಪೆರುವೆಂಬ ಎಂಬ ಸ್ಥಳದಲ್ಲಿರುವ ಊಟುಕೂಲಂಗಾರ ಭಗವತಿ ಶಕ್ತಿ ದೇವತೆಯ ಟ್ಯಾಟೂ ಎನ್ನುವುದೇ ವಿಶೇಷ. ಈ ದೇವಿಯೇ ಅಜಿತ್ ಕುಟುಂಬದ ಕುಲದೇವತೆ ಎನ್ನಲಾಗುತ್ತಿದೆ. ಹೀಗಾಗಿ, ಬಹಳ ವರ್ಷಗಳ ಹಿಂದೆ ಅಜಿತ್ ಹಾಕಿಸಿಕೊಂಡಿರುವ ಟ್ಯಾಟೂ ಇದೀಗ ರಿವೀಲ್ ಆಗಿದೆ. ಹೀಗೆ ಅಜಿತ್ ಬಗೆಗೆ ಇನ್ನೆಷ್ಟು ಮುಚ್ಚಿಟ್ಟ ಸತ್ಯಗಳಿವೆಯೋ ಎನ್ನುತ್ತಾ ಫ್ಯಾನ್ಸ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

  • ಅಜಿತ್ ಸಿನಿ ಪಯಣಕ್ಕೆ 33 ವರ್ಷ: ಫ್ಯಾನ್ಸ್ ಸಂಭ್ರಮ

    ಅಜಿತ್ ಸಿನಿ ಪಯಣಕ್ಕೆ 33 ವರ್ಷ: ಫ್ಯಾನ್ಸ್ ಸಂಭ್ರಮ

    ಕಾಲಿವುಡ್‌ನ ನಟ ತಲಾ ಅಜಿತ್ (Ajit Kumar) ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 33 ವರ್ಷಗಳು ತುಂಬಿವೆ. ಈ 33 ವರ್ಷಗಳ ಸುದೀರ್ಘ ಪಯಣದಲ್ಲಿ ಅಜಿತ್‌ಕುಮಾರ್ 63 ಸಿನಿಮಾಗಳನ್ನ ಮಾಡಿದ್ದಾರೆ. ಅವರ ಮುಂಬರುವ ಸಿನಿಮಾ 64ನೇ ಸಿನಿಮಾಗೆ ಸದ್ದಿಲ್ಲದೇ ತಯಾರಿ ಕೂಡಾ ನಡೆಯುತ್ತಿದೆ. 1993ರಲ್ಲಿ ತೆರೆಕಂಡ ಅಮರಾವತಿ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಸ್ಪುರದ್ರೂಪಿ ನಾಯಕನಟನಾಗಿ ಎಂಟ್ರಿಕೊಟ್ಟಿದ್ದಾರೆ ನಟ ಅಜಿತ್.

    `ಅಮರಾವತಿ’ ಸಿನಿಮಾಗಿಂತಲೂ ಮೊದಲೇ ಬಾಲ ಕಲಾವಿದರಾಗಿ `ಎನ್ ವೀಡು ಎನ್ ಕನವರ್’ ಸಿನಿಮಾದಲ್ಲಿ ನಟಿಸಿದ್ದ ಅಜಿತ್ ಕುಮಾರ್ ಶಾಲಾ ವಿದ್ಯಾರ್ಥಿ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ಅದಾದ ಮೂರುವರ್ಷಗಳ ಬಳಿಕ `ಅಮರಾವತಿ’ ಸಿನಿಮಾ ಮೂಲಕ ಪಾದಾರ್ಪಣೆ ಮಾಡಿ, ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ನೀಡಿದವರು. ನಾಯಕ ನಟರಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಅಜಿತ್ ಅವರಿಗೆ 33ನೇ ವರ್ಷದ ಸಂಭ್ರಮ. ಈ ಕ್ಷಣವನ್ನ ಅವರ ಅಭಿಮಾನಿಗಳು ಹ್ಯಾಶ್‌ಟ್ಯಾಗ್ ಬಳಸಿ `#33 ಇಯರ್ಸ್‌ ಆಫ್ ಅಜಿತಿಸಂ’ ಅಂತಾ ಸಂಭ್ರಮ ಪಡುತ್ತಿದ್ದಾರೆ. ಇದನ್ನೂ ಓದಿ: ಶ್ರೀದೇವಿಗೆ ಪ್ರಪೋಸ್ ಮಾಡಬೇಕಿದ್ದ ರಜನಿಕಾಂತ್ – ತಡೆದಿದ್ದು ಯಾವ ಪವರ್?

    ಇದೇ ವರ್ಷ ತೆರೆಕಂಡ `ಗುಡ್ ಬ್ಯಾಡ್ ಅಗ್ಲಿ’ ಸಿನಿಮಾದ ನಿರ್ದೇಶಕ ಅಧಿಕ್ ರವಿಚಂದ್ರನ್ ಜೊತೆ ಮತ್ತೆ ಸಿನಿಮಾ ಮಾಡಲು ಎಲ್ಲಾ ತಯಾರಿ ನಡೆಯುತ್ತಿದೆ. ಈ ಸಿನಿಮಾಗೆ ಇನ್ನೂ ಶೀರ್ಷಿಕೆ ಇಟ್ಟಿಲ್ಲ. ಎಕೆ64 ಅನ್ನೋ ವರ್ಕಿಂಗ್ ಟೈಟಲ್‌ನಲ್ಲಿ ಅಜಿತ್ ಮುಂದಿನ ಸಿನಿಮಾ ಅನೌನ್ಸ್ ಮಾಡಲಾಗಿದೆ. ಅಜಿತ್ ಇತ್ತೀಚೆಗೆ ಸಿನಿಮಾಗಿಂತ ಕಾರ್ ರೇಸ್‌ನಲ್ಲೇ ಜಾಸ್ತಿ ಸಮಯ ಕಳೆಯುತ್ತಿದ್ದಾರೆ. ಕಾರ್ ರೇಸ್ ಜೊತೆಗೆ ಸಿನಿಮಾಗೂ ಟೈಮ್ ಕೊಡಲಿದ್ದಾರೆ ಅಜಿತ್.

  • ತಲಾ ಅಜಿತ್ ನ್ಯೂ ಲುಕ್ ವೈರಲ್ – ಬಾಲ್ಡ್ ಲುಕ್ ಯಾಕೆ ಗೊತ್ತಾ..?

    ತಲಾ ಅಜಿತ್ ನ್ಯೂ ಲುಕ್ ವೈರಲ್ – ಬಾಲ್ಡ್ ಲುಕ್ ಯಾಕೆ ಗೊತ್ತಾ..?

    ಕಾಲಿವುಡ್‌ನ ನಟ ಅಜಿತ್‌ಕುಮಾರ್ (Ajit Kumar) ಒಂದು ಕಡೆ ಸಿನಿಮಾ, ಮತ್ತೊಂದು ಕಡೆ ಕಾರ್ ರೇಸಿಂಗ್‌ನಲ್ಲಿ ತೊಡಗಿಕೊಂಡಿದ್ದಾರೆ. ಇದೇ ವರ್ಷ ಅಜಿತ್‌ಕುಮಾರ್ ನಟನೆಯ ಎರಡು ಸಿನಿಮಾಗಳು ತೆರೆಕಂಡಿವೆ. ವಿದಾಮುಯರ್ಚಿ ಹಾಗೂ ಗುಡ್ ಬ್ಯಾಡ್ ಅಗ್ಲಿ ಸಿನಿಮಾಗಳು ತೆರೆಕಂಡು ಅಷ್ಟಕ್ಕಷ್ಟೇ ಪ್ರತಿಕ್ರಿಯೆ ಪಡೆದುಕೊಂಡಿವೆ. ಇದರ ಮಧ್ಯೆ ಈ ವರ್ಷ ಪದ್ಮಶ್ರೀ ಗರಿಯನ್ನ ಮುಡಿಗೇರಿಸಿಕೊಂಡಿದ್ದಾರೆ.

    ತಲಾ ಅಜಿತ್ ಅಂತಲೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ಸಹಜ ಹಾಗೂ ಮನೋಜ್ಞ ಅಭಿನಯದಿಂದಲೇ ಅಪಾರ ಅಭಿಮಾನಿ ಬಳಗ ಹೊಂದಿರುವ ನಟ ಅಜಿತ್‌ಕುಮಾರ್. ಇದೇ ವರ್ಷವೇ ಎರಡು ಕಾರ್ ರೇಸ್‌ನಲ್ಲಿ ಭಾಗಿಯಾಗಿ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದ್ದರು. ಈ ಮೂಲಕ ಕೇವಲ ಸಿನಿಮಾ ಅಭಿಮಾನಿಗಳು ಮಾತ್ರವಲ್ಲದೇ ಸ್ಪರ್ಧಾ ಜಗತ್ತಿನಲ್ಲೂ ಅಜಿತ್‌ಗೆ ಅಭಿಮಾನಿ ಬಳಗವಿದೆ. ಇದನ್ನೂ ಓದಿ: ವಿಜಯ್ ಜೊತೆ ಲವ್ ವದಂತಿಗೆ ತ್ರಿಷಾ ಕೆಂಡ – ಹೊಲಸು ಮನಸ್ಥಿತಿಯ ಜನ ಎಂದ ನಟಿ

    ಇದೀಗ ಅಜಿತ್ ತಮ್ಮ ವಿಶೇಷ ನೋಟದಿಂದ ಭಾರೀ ಸುದ್ದಿಯಾಗ್ತಿದ್ದಾರೆ. ಹೌದು, ಇತ್ತೀಚೆಗೆ ತಮ್ಮ ಹೊಸ ಲುಕ್ ಕಂಡು ಫ್ಯಾನ್ಸ್ ಕೊಂಚ ಗೊಂದಲಕ್ಕೀಡಾಗಿದ್ದಾರೆ. ಒಂದು ಕಡೆ ಅಜಿತ್ ನಟನೆಯ ಎಕೆ64 ಸಿನಿಮಾಗೆ ತಯಾರಿ ನಡೆಯುತ್ತಿದೆ. ಮತ್ತೊಂದೆಡೆ ಕಾರ್ ರೇಸ್‌ಗೂ ತಯಾರಿ ನಡೆಸಿದ್ದಾರೆ. ಈ ವೇಳೆ ಶಾರ್ಟ್ ಹೇರ್‌ಸ್ಟೈಲ್ ಇರುವ ಫೋಟೋ ವೈರಲ್ ಆಗಿದೆ.

    ಈ ಹೇರ್‌ಸ್ಟೈಲ್ ನೋಡಿ ಜಾಲತಾಣದಲ್ಲಿ ಫ್ಯಾನ್ಸ್ ಕಮೆಂಟ್ ಮೇಲೆ ಕಮೆಂಟ್ ಮಾಡ್ತಿದ್ದಾರೆ. ಕಂಪ್ಲೀಟ್ ರೇಸ್‌ನಲ್ಲೇ ತೊಡಗಿಕೊಳ್ತಾರಾ ನಮ್ಮ ಹೀರೋ ಎಂದು ಕೆಲವರು ಎಂದರೆ.. ಮತ್ತೆ ಕೆಲವರು ಇಲ್ಲ ಇದು ಅವ್ರ ಮುಂದಿನ ಸಿನಿಮಾದ ಹೇರ್‌ಸ್ಟೈಲ್ ಎಂದು ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಹಂಸಲೇಖ, ರವಿಚಂದ್ರನ್ `ಯಾ’ ಸಾಹಿತ್ಯದ ಹಿಟ್ ಸೀಕ್ರೆಟ್..!

  • ಜಯಂ ರವಿ ಜೊತೆ ಬೋಲ್ಡ್ ಆಗಿ ಕಾಣಿಸ್ಕೊಂಡ ವದಂತಿ ಗೆಳತಿ ಕೆನೀಶಾ

    ಜಯಂ ರವಿ ಜೊತೆ ಬೋಲ್ಡ್ ಆಗಿ ಕಾಣಿಸ್ಕೊಂಡ ವದಂತಿ ಗೆಳತಿ ಕೆನೀಶಾ

    ಮಿಳು ನಟ ಜಯಂ ರವಿ (Jayam Ravi) ಅಲಿಯಾಸ್ ರವಿಮೋಹನ್ ವಿಚ್ಛೇದನ ಘೋಷಿಸಿದ ಬಳಿಕ ಗಾಯಕಿ ಕೆನೀಶಾ (Kenishaa) ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗೇ ಇಬ್ಬರ ನಡುವಿನ ವದಂತಿ ಹೆಚ್ಚಾಗುತ್ತಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಜಯಂ ರವಿ ಕೆನೀಶಾ ಆಲ್ಬಂ ಸಕ್ಸಸ್ ಪಾರ್ಟಿ ಕೊಟ್ಟಿದ್ದಾರೆ. ಕೆನೀಶಾ ಫ್ರಾನ್ಸಿಸ್ ಜೊತೆ ಜಯಂ ರವಿ ಬಿಂದಾಸ್ ಆಗಿರುವ ಫೋಟೋ ವೈರಲ್ ಆಗಿದೆ.

    ಕೆನೀಶಾ ಹಾಡಿರುವ (ಅಂಡ್ರುಂ ಇಡ್ರುಂ) ನಯಾ ಆಲ್ಬಂ ರಿಲೀಸ್ ಆಗಿದೆ. ವೀಡಿಯೋ ಕೊನೆಯಲ್ಲಿ ಜಯಂ ರವಿ ಎಂಟ್ರಿ ಇಬ್ಬರ ನಡುವಿಗೆ ಗಾಸಿಪ್‌ಗೆ ತುಪ್ಪ ಸುರಿದಂತಿತ್ತು. ಮ್ಯೂಸಿಕ್ ಆಲ್ಬಂ ರಿಲೀಸ್ ಬೆನ್ನಲ್ಲೇ ಈಗ ಚೆನೈನಲ್ಲಿ ಕೆನೀಶಾ, ಆಕೆಯ ಮ್ಯೂಸಿಕ್ ಟೀಮ್ ಹಾಗೂ ರವಿಮೋಹನ್ ಪಾರ್ಟಿ ಮಾಡಿದ್ದಾರೆ. ಪಾರ್ಟಿಯ ಫೋಟೋಗಳು ವೈರಲ್ ಆಗಿದೆ. ಕೆನೀಶಾ ಹಾಗೂ ಜಯಂ ರವಿ ಪರಸ್ಪರ ಭಾರೀ ಆಪ್ತತೆಯಿಂದ ಪಬ್‌ನಲ್ಲಿ ಸಕ್ಸಸ್ ಪಾರ್ಟಿ ಮಾಡಿದ್ದಾರೆ. ಇದನ್ನೂ ಓದಿ: ಇದೇ ವಾರ ಮುಗಿಯಲಿದೆ ದರ್ಶನ್ ಡೆವಿಲ್ ಶೂಟಿಂಗ್ !

    ರವಿ ಜೀವನದಲ್ಲಿ ಕೆನೀಶಾ ಪ್ರವೇಶ ಆಗಿದ್ದಕ್ಕೆ ಏಕಪಕ್ಷೀಯವಾಗಿ ರವಿ ತಮಗೆ ವಿಚ್ಛೇದನ ಘೋಷಿಸಿದ್ದಾರೆ ಎಂದು ರವಿ ಪತ್ನಿ ಆರತಿ ಆರೋಪ ಮಾಡಿದ್ದರು. ಬಳಿಕ ನಾಲ್ಕು ಗೋಡೆ ಮಧ್ಯೆ ನಡೆಯುತ್ತಿದ್ದ ಜಗಳ ಬೀದಿಗೆ ಬಂದಿತ್ತು. ಇಂದಿಗೂ ಪತ್ನಿ ಆರತಿ ಜೊತೆ ನಟ ರವಿಯ ವಿಚ್ಛೇದನವಾಗಿಲ್ಲ. ಅದಾಗಲೇ ರವಿ ಬಹಿರಂಗವಾಗಿ ಕೆನೀಶಾ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ.

    ನಟ ಜಯಂ ರವಿ ಪತ್ನಿ ಆರತಿ ಜೊತೆ 15 ವರ್ಷಗಳ ಸಂಸಾರ ನಡೆಸಿ ಇತ್ತೀಚೆಗಷ್ಟೇ ಡಿವೋರ್ಸ್ ಘೋಷಣೆ ಮಾಡಿದ್ದರು. ರವಿಗೆ ಕೆನೀಶಾ ಜೊತೆ ಸಂಬಂಧ ಇರೋದಕ್ಕೆ ಡಿವೋರ್ಸ್‌ಗೆ ಒತ್ತಾಯಿಸುತ್ತಿದ್ದಾರೆ ಅನ್ನೋದಾಗಿ ಆರತಿ ಹೇಳಿದ್ದರು. ಇದೀಗ ಆರತಿ ಆರೋಪದಂತೆ ರವಿ ಕೆನೀಶಾ ಸ್ನೇಹದ ಬಾರ್ಡರ್ ಮೀರಿ ಆಪ್ತರಾಗಿರುವಂತಿದೆ. ಖ್ಯಾತ ನಟನಾಗಿರುವ ರವಿ ಕೆನೀಶಾಗಾಗಿ ಮ್ಯೂಸಿಕ್ ಆಲ್ಬಂನಲ್ಲಿ ಕಾಣಿಸ್ಕೊಂಡಿದ್ದೂ ಕೂಡ ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಆದರೆ ಕೆನೀಶಾ ಜೊತೆಗೆ ಯಾವುದೇ ಸಂಬಂಧವನ್ನೂ ರವಿ ಇದುವರೆಗೂ ಘೋಷಿಸಿಲ್ಲ. ಇದನ್ನೂ ಓದಿ: ವಿಜಯ್ ದಳಪತಿ ಹುಟ್ಟುಹಬ್ಬದ ದಿನವೇ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್

  • ವಿಜಯ್ ದಳಪತಿ ಹುಟ್ಟುಹಬ್ಬದ ದಿನವೇ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್

    ವಿಜಯ್ ದಳಪತಿ ಹುಟ್ಟುಹಬ್ಬದ ದಿನವೇ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್

    ಕಾಲಿವುಡ್‌ನ ನಟ ವಿಜಯ್ ದಳಪತಿಗೆ (Vijay Thalapathy) ಇಂದು (ಜೂನ್-22) ಹುಟ್ಟುಹಬ್ಬದ ಸಂಭ್ರಮ. 51ನೇ ವಸಂತಕ್ಕೆ ಕಾಲಿಟ್ಟಿರುವ ನಟ ವಿಜಯ್ ದಳಪತಿ ತಮ್ಮ ಕೊನೆಯ ಸಿನಿಮಾ ʻಜನ ನಾಯಗನ್ʼ ಫಸ್ಟ್ ಲುಕ್ ಟೀಸರ್ (Jana Nayagan Teaser) ರಿಲೀಸ್ ಆಗಿದೆ. ವಿಜಯ್ ದಳಪತಿ ಖಾಕಿ ತೊಟ್ಟು ಕೊಡುವ ಎಂಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

    ವಿಜಯ್ ದಳಪತಿ ಜನ ನಾಯಗನ್ ಸಿನಿಮಾ ಮೂಲಕ ತಮ್ಮ ಸಿನಿಮಾ ಕೆರಿಯರ್‌ಗೆ ಬ್ರೇಕ್ ತೆಗೆದುಕೊಳ್ತಿದ್ದಾರೆ. ನಂತರ ರಾಜಕೀಯದಲ್ಲೇ ತಮ್ಮನ್ನ ತೊಡಗಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ. 2026ರ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ತಮಿಳಗ ವೆಟ್ರಿ ಕಳಗಂ ಪಾರ್ಟಿ ಮೂಲಕ ಜನಸೇವೆಗೆ ಇಳಿಯಲು ಸಕಲ ಸಿದ್ಧತೆಯ ಜೊತೆಗೆ ಕೊನೆಯ ಸಿನಿಮಾ ಮೇಲೂ ಗಮನಹರಿಸಿದ್ದಾರೆ.

    ಜನ ನಾಯಗನ್ ಸಿನಿಮಾಗೆ ಎಚ್.ವಿನೋದ್ ನಿರ್ದೇಶನ ಮಾಡಿದ್ದಾರೆ. ವಿಜಯ್ ದಳಪತಿಗೆ ನಾಯಕಿಯಾಗಿ ಪೂಜಾ ಹೆಗ್ಡೆ ತೆರೆಹಂಚಿಕೊಂಡಿದ್ದಾರೆ. ಅನಿರುದ್ಧ್ ಮ್ಯೂಸಿಕಲ್ ಮ್ಯಾಜಿಕ್ ಈ ಚಿತ್ರಕ್ಕಿರಲಿದೆ. ಬಾಬಿ ಡಿಯೋಲ್, ಗೌತಮ್ ವಾಸುದೇವ್ ಮೆನನ್, ಮಮಿತಾ ಬೈಜು, ಪ್ರಕಾಶ್ ರಾಜ್ ಮುಂತಾದವ್ರು ಚಿತ್ರದ ತಾರಾಗಣದಲ್ಲಿದ್ದಾರೆ.

    ವಿಜಯ್ ದಳಪತಿ ನಟನೆಯ 69ನೇ ಸಿನಿಮಾ ಇದಾಗಿದ್ದು, ಜನ ನಾಯಗನ್ ಸಿನಿಮಾ 2026ರ ಜನವರಿ 09 ರಂದು ತೆರೆಗೆ ಬರಲಿದೆ. ಬರುವ ವರ್ಷ ಸಂಕ್ರಾಂತಿ ವಿಜಯ್ ಅಭಿಮಾನಿಗಳಿಗೆ ಡಬಲ್ ಧಮಾಕಾ ಸೃಷ್ಟಿಸಲಿದೆ. ಕೆವಿಎನ್ ನಿರ್ಮಾಣ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡಿದೆ. ಒಟ್ಟಿನಲ್ಲಿ ತಮ್ಮ ಹುಟ್ಟುಹಬ್ಬದ ದಿನ ಅಭಿಮಾನಿಗಳ ಸಂಭ್ರಮ ದುಪ್ಪಟ್ಟು ಮಾಡಿದ್ದಾರೆ ವಿಜಯ್.

  • ನಟ ಸೂರ್ಯ ಜೊತೆಗೆ ಬಿಗ್‌ ಬಜೆಟ್‌ ಸಿನಿಮಾಗೆ ಕಮಲ್‌ ಪ್ಲ್ಯಾನ್‌

    ನಟ ಸೂರ್ಯ ಜೊತೆಗೆ ಬಿಗ್‌ ಬಜೆಟ್‌ ಸಿನಿಮಾಗೆ ಕಮಲ್‌ ಪ್ಲ್ಯಾನ್‌

    ನಾಯಕನಲ್ಲದೇ ನಿರ್ಮಾಪಕನಾಗಿಯೂ ಕೆಲಸ ಮಾಡ್ತಿರೋ ಕಮಲ್‌ ಹಾಸನ್‌ (Kamal Haasan) ಈಗ ನಟ ರಾಕ್ಷಸ ಸೂರ್ಯ (Surya) ಜೊತೆಗೆ ಬಿಗ್‌ ಬಜೆಟ್‌ ಸಿನಿಮಾವೊಂದಕ್ಕೆ ಪ್ಲ್ಯಾನ್‌ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ಯೆಸ್‌… ಕಳೆದ ವರ್ಷ ಕಮಲ್‌ ತಮ್ಮ ರಾಜ್‌ಕಮಲ್ ಫಿಲ್ಮ್ ಇಂಟರ್‌ನ್ಯಾಷನಲ್ ಬ್ಯಾನರ್ ಅಡಿ ʻಅಮರನ್‌ʼ (Amaran) ಚಿತ್ರ ನಿರ್ಮಿಸಿದ್ದರು. ಶಿವಕಾರ್ತಿಕೇಯನ್‌, ಸಾಯಿ ಪಲ್ಲವಿ ನಟನೆಯ ಹಾಗೂ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಈ ಚಿತ್ರ ಸಕ್ಸಸ್‌ ಕಂಡಿತ್ತು. ಆ ಬಳಿಕ ಇದೇ ಬ್ಯಾನರ್‌ ಅಡಿಯಲ್ಲಿ ಮದ್ರಾಸ್ ಟಾಕೀಸ್ ನಿರ್ಮಿಸಿದ ಥಗ್‌ ಲೈಫ್‌ ಸಿನಿಮಾ ಇತ್ತೀಚೆಗಷ್ಟೇ ತೆರೆ ಕಂಡಿತ್ತು. ಆದ್ರೆ ಕರ್ನಾಟಕದಲ್ಲಿ ಈ ಚಿತ್ರಕ್ಕೆ ನಿಷೇಧ ಹೇರಿರೋದ್ರಿಂದ ಈ ಚಿತ್ರದ ಗಳಿಕೆಯೂ ಕುಸಿದಿದೆ. ಈ ಬೆನ್ನಲ್ಲೇ ಕಮಲ್‌ ಪ್ರಸಿದ್ಧ ಸ್ಟಂಟ್‌ ಮಾಸ್ಟರ್‌ ಅನ್ಬರಿವು ಚಿತ್ರದಲ್ಲಿ ನಾಯಕ ನಟನಾಗಿ ನಟಿಸಲು ತಯಾರಿ ನಡೆಸುತ್ತಿದ್ದಾರೆ. ಇದರ ನಡುವೆಯೇ ಮತ್ತೊಂದು ಬಿಗ್‌ ಬಜೆಟ್‌ ಸಿನಿಮಾ ನಿರ್ಮಾಣಕ್ಕೆ ಪ್ಲ್ಯಾನ್‌ ಮಾಡಿಕೊಂಡಿದ್ದಾರೆ ಅನ್ನೋದು ಗೊತ್ತಾಗಿದೆ. ಇದನ್ನೂ ಓದಿ: ಕಮಲ್‌ ಹಾಸನ್‌ಗೆ ಮತ್ತೆ ಶಾಕ್‌ – ತುರ್ತು ವಿಚಾರಣೆ ನಡೆಸಲ್ಲ ಎಂದ ಸುಪ್ರೀಂ ಕೋರ್ಟ್‌

    ಸದ್ಯ ಚಿತ್ರಕ್ಕೆ ಇನ್ನೂ ಟೈಟಲ್‌ ಫಿಕ್ಸ್‌ ಆಗಿಲ್ಲ, ಆದ್ರೆ ಯು. ಅರುಣ್‌ಕುಮಾರ್‌ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಅರುಣ್‌ ಕುಮಾರ್‌ ಈಗಾಗಲೇ ನಿರ್ದೇಶಿಸಿರುವ ಸಿದ್ಧಾರ್ಥ್‌ ಅಭಿನಯದ ʻಚಿತ್ತʼ, ವಿಕ್ರಮ್‌ ನಟನೆಯ ʻವೀರ ಧೀರ ಸೂರನ್‌ʼ ಚಿತ್ರಗಳು ಬ್ಲಾಕ್‌ ಬಸ್ಟರ್‌ ಹಿಟ್‌ ಆಗಿವೆ. ಇದೀಗ ಕಮಲ್‌ ನಿರ್ಮಾಣ ಸಂಸ್ಥೆಯ ಚಿತ್ರಕ್ಕೆ ಆಕ್ಷನ್‌ ಕಟ್ ಹೇಳಲು ಸಜ್ಜಾಗುತ್ತಿದ್ದಾರೆ. ಈ ಚಿತ್ರಕ್ಕೆ ನಟ ಸೂರ್ಯ ನಾಯಕನಾಗಿ ನಟಿಸಲಿದ್ದು, ಬಿಗ್‌ ಬಜೆಟ್‌ ಸಿನಿಮಾ ಇದಾಗಿರಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಬಾಲಯ್ಯ ಜನ್ಮದಿನಕ್ಕೆ `ಅಖಂಡ-2′ ಟೀಸರ್ ರಿಲೀಸ್ – ಮಾಸ್ ಅವತಾರದಲ್ಲಿ ಅಬ್ಬರಿಸಿದ ನಂದಮೂರಿ ಬಾಲಕೃಷ್ಣ

    2022ರಲ್ಲಿ ತೆರೆಕಂಡ ʻವಿಕ್ರಮ್‌ʼ ಸಿನಿಮಾ ಭಾರೀ ಹಿಟ್‌ ಆಗಿದ್ದು, ಇದರ ಭಾಗ-2 ಪ್ರಕ್ರಿಯೆ ನಡೆಯುತ್ತಿದೆ. ಈ ಸಿನಿಮಾದಲ್ಲಿ ಕಮಲ್‌ ನಾಯಕನಾಗಿ ನಟಿಸಿದ್ದು, ಸೂರ್ಯ ವಿಲನ್‌ ಆಗಿ ಕಾಣಿಸಿಕೊಂಡಿದ್ದರು. ಅಲ್ಲದೇ ಭಾಗ-2ನಲ್ಲಿ ಸೂರ್ಯ ಅವರ ಪಾತ್ರದ ಬಗ್ಗೆ ಭಾರೀ ಕುತೂಹಲ ಕೆರಳಿಸಿದೆ. ಇದನ್ನೂ ಓದಿ: ಹೊಸ ಚಿತ್ರ ಘೋಷಿಸಿದ ರವಿ ಮೋಹನ್ – `ಬ್ರೋಕೋಡ್’ ಮೂಲಕ ನಿರ್ಮಾಣ ರಂಗಕ್ಕಿಳಿದ ತಮಿಳು ನಟ

  • ನಿರ್ಮಾಪಕರಿಗೆ ಕತೆ ಹೇಳಿ ವಾಪಸ್ ಆಗುತ್ತಿದ್ದಾಗ ಹೃದಯಾಘಾತ – ತಮಿಳು ನಿರ್ದೇಶಕ ವಿಕ್ರಂ ಸುಗುಮಾರನ್ ನಿಧನ

    ನಿರ್ಮಾಪಕರಿಗೆ ಕತೆ ಹೇಳಿ ವಾಪಸ್ ಆಗುತ್ತಿದ್ದಾಗ ಹೃದಯಾಘಾತ – ತಮಿಳು ನಿರ್ದೇಶಕ ವಿಕ್ರಂ ಸುಗುಮಾರನ್ ನಿಧನ

    – ಬಸ್‍ನಲ್ಲಿ ಪ್ರಯಾಣಿಸುತ್ತಿದ್ದಾಗ ಕಾಣಿಸಿದ ಎದೆನೋವು

    ಚೆನ್ನೈ: ತಮಿಳು  (Tamil Cinema) ನಿರ್ದೇಶಕ ವಿಕ್ರಂ ಸುಗುಮಾರನ್ (47) (Vikram Sugumaran) ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ.

    ನಿರ್ಮಾಪಕರೊಬ್ಬರಿಗೆ ಹೊಸ ಚಿತ್ರದ ಕತೆ ಹೇಳಿ ಮಧುರೈನಿಂದ ಚೆನ್ನೈಗೆ ಬಸ್‌ನಲ್ಲಿ ಹೊರಟಿದ್ದಾಗ, ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ, ಅವರು ಬದುಕುಳಿಯಲಿಲ್ಲ ಎಂದು ಮೂಲಗಳು ತಿಳಿಸಿವೆ.

    ವಿಕ್ರಂ ಸುಗುಮಾರನ್ ಚೊಚ್ಚಲ ಚಿತ್ರ ‘ಮಧ ಯಾನೈ ಕೂಟ್ಟಂ’ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿತ್ರವಾಗಿದೆ. ಇದನ್ನೂ ಓದಿ: ಸೀರಿಯಲ್ ನಟಿ ವೈಷ್ಣವಿ ಗೌಡ ಮದುವೆ ಶಾಸ್ತ್ರಗಳು ಆರಂಭ‌

    ವಿಕ್ರಮ್ ಸುಗುಮಾರನ್ 1999 ಮತ್ತು 2000ರ ನಡುವೆ ನಿರ್ದೇಶಕ ಬಾಲು ಮಹೇಂದ್ರ ಅವರ ಸಹಾಯಕರಾಗಿ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ‘ಮಧ ಯಾನೈ ಕೂಟ್ಟಂ’ ಚಿತ್ರದ ಮೂಲಕ ಮೆಚ್ಚುಗೆ ಪಡೆದಿದ್ದರು. ಅವರು ‘ಥೇರಮ್ ಪೋರಮ್’ ಎಂಬ ಹೊಸ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

    ವಿಕ್ರಮ್ ಸುಗುಮಾರನ್ ಅವರ ಅಂತ್ಯಕ್ರಿಯೆ ಚೆನ್ನೈನಲ್ಲಿ ನಡೆದಿದೆ. ಇವರ ಸಾವಿಗೆ ತಮಿಳು ಚಿತ್ರದ ನಟ, ನಟಿಯರು ಹಾಗೂ ಆಪ್ತವಲಯ ಕಂಬನಿ ಮಿಡಿದಿದೆ. ಇದನ್ನೂ ಓದಿ: ʻಥಗ್‌ ಲೈಫ್‌ʼ ಸಿನಿಮಾಗೆ ಬ್ಯಾನ್‌ ಬಿಸಿ – ಹೈಕೋರ್ಟ್ ಮೆಟ್ಟಿಲೇರಿದ ಕಮಲ್ ಹಾಸನ್

  • ಕ್ಷಮೆ ಕೇಳದಿದ್ದರೆ ಕರ್ನಾಟಕದಲ್ಲಿ ಕಮಲ್ ಹಾಸನ್ ಚಿತ್ರಗಳನ್ನ ನಿರ್ಬಂಧಿಸಿ: ಶಿವರಾಜ್ ತಂಗಡಗಿ ಪತ್ರ

    ಕ್ಷಮೆ ಕೇಳದಿದ್ದರೆ ಕರ್ನಾಟಕದಲ್ಲಿ ಕಮಲ್ ಹಾಸನ್ ಚಿತ್ರಗಳನ್ನ ನಿರ್ಬಂಧಿಸಿ: ಶಿವರಾಜ್ ತಂಗಡಗಿ ಪತ್ರ

    ಬೆಂಗಳೂರು: ನಟ ಕಮಲ್ ಹಾಸನ್ (Kamal Haasan) ಅವರು ಕನ್ನಡಿಗರ ಕ್ಷಮೆಯಾಚಿಸದಿದ್ದಲ್ಲಿ ಅವರು ನಟಿಸುವ ಚಲನಚಿತ್ರಗಳಿಗೆ ಕರ್ನಾಟಕದಲ್ಲಿ ನಿರ್ಬಂಧ ವಿಧಿಸಬೇಕು ಅಂತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್‌ ತಂಗಡಗಿ (Shivaraj Tangadagi) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.

    ಸಚಿವರ ಪತ್ರದಲ್ಲಿ ಏನಿದೆ?
    ತಮಿಳು ಚಿತ್ರರಂಗದ ನಟ ಕಮಲ್ ಹಾಸನ್ ಅವರು ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಕನ್ನಡ ಭಾಷೆಯ (Kannada Language) ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರು ಕನ್ನಡ ಭಾಷೆಯ ಕುರಿತಾಗಿ ಮಾತನಾಡಿರುವುದು ಕನ್ನಡಿಗರಿಗೆ ಹಾಗೂ ನನಗೆ ತೀವ್ರ ನೋವಾಗಿದೆ. ಮತ್ತು ಕನ್ನಡಿಗರ ಭಾವನೆಗಳಿಗೆ ಧಕ್ಕೆಯುಂಟಾಗಿದೆ.

    ಕಮಲ್ ಹಾಸನ್ ಅವರು ಓರ್ವ ಹಿರಿಯ ನಟರಾಗಿ ಕನ್ನಡ ಭಾಷೆಯ ಹಲವು ಚಿತ್ರಗಳಲ್ಲಿ ನಟಿಸಿ ಕನ್ನಡ ಭಾಷೆಯ ಬಗೆ, ತಿಳಿದವರಾಗಿದ್ದು, ಈ ರೀತಿ ಮಾತನಾಡಿರುವುದು ಅವರಿಗೆ ಶೋಭೆ ತರುವಂತದ್ದಲ್ಲ. ಕನ್ನಡದ ನೆಲ, ಜಲ ಹಾಗೂ ಭಾಷೆ ವಿಚಾರದಲ್ಲಿ ಯಾರೇ, ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಅವರಿಂದ ಇಂತಹ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ. ಆದ್ದರಿಂದ ಕಮಲ್ ಹಾಸನ್ ಅವರು ಕೂಡಲೇ ಕನ್ನಡಿಗರ ಕ್ಷಮೆಯಾಚಿಸಬೇಕು.

    ಕಮಲ್ ಹಾಸನ್ ಅವರು ರಾಜ್ಯದ ಜನರು/ ಕನ್ನಡಿಗರ ಕ್ಷಮೆಯಾಚಿಸದಿದ್ದಲ್ಲಿ ಅವರು ನಟಿಸಿರುವ ಚಲನ ಚಿತ್ರಗಳಿಗೆ ಕರ್ನಾಟಕದಲ್ಲಿ ಕೂಡಲೇ ನಿರ್ಬಂಧ ವಿಧಿಸಬೇಕೆಂದು ಈ ಮೂಲಕ ತಿಳಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

  • 47ನೇ ವಯಸ್ಸಲ್ಲಿ ಖ್ಯಾತ ನಟಿಯನ್ನು ಮದುವೆಯಾಗಲಿದ್ದಾರೆ ನಟ ವಿಶಾಲ್‌ – ಯಾರು ಗೊತ್ತಾ ಆ ಬೆಡಗಿ?

    47ನೇ ವಯಸ್ಸಲ್ಲಿ ಖ್ಯಾತ ನಟಿಯನ್ನು ಮದುವೆಯಾಗಲಿದ್ದಾರೆ ನಟ ವಿಶಾಲ್‌ – ಯಾರು ಗೊತ್ತಾ ಆ ಬೆಡಗಿ?

    ಮಿಳು ನಟ ವಿಶಾಲ್ (Vishal) ಖ್ಯಾತ ನಟಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಅವರು ಮದುವೆಯಾಗಲಿರುವ ನಟಿ ಸಾಯಿ ಧನ್ಶಿಕಾ ( Sai Dhanshika) ಎಂಬ ವದಂತಿ ಇದೆ. ನಟ ವಿಶಾಲ್ ಮತ್ತು ನಟಿ ಸಾಯಿ ಧನ್ಶಿಕಾ ಕಳೆದ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಸ್ನೇಹದಿಂದ ಆರಂಭವಾದ ಅವರ ನಂಟು ಪ್ರೀತಿಯಾಗಿ ಬದಲಾಗಿತ್ತು ಎಂದು ವರದಿಯಾಗಿದೆ.

    ನಡಿಗರ್ ಸಂಘದ (ತಮಿಳು ಚಲನಚಿತ್ರ ನಟರ ಸಂಘ) ಭಾಗವಾಗಿರುವ ವಿಶಾಲ್, 9 ವರ್ಷಗಳ ಹಿಂದೆ ನಿಧಿ ಸಂಗ್ರಹಿಸಿ ನಡಿಗರ್ ಸಂಘದ ಕಟ್ಟಡ ನಿರ್ಮಾಣ ಪೂರ್ಣ ಆದ್ಮೇಲೆ ಮದುವೆ ಆಗೋದಾಗಿ ಘೋಷಿಸಿದ್ದರು. ಕೆಲವು ದಿನಗಳ ಹಿಂದೆ ಸಂದರ್ಶನದಲ್ಲಿ, ನಡಿಗರ್ ಸಂಘದ ಕಟ್ಟಡವು ಈಗ ಪೂರ್ಣಗೊಳ್ಳುತ್ತಿದೆ. ನಿಮ್ಮ ಮದುವೆಯ ಕತೆ ಏನು? ಎಂಬ ಪ್ರಶ್ನೆ ಕೇಳಲಾಗಿತ್ತು.

    ಈ ಪ್ರಶ್ನೆಗೆ ವಿಶಾಲ್, ಹೌದು, ನನ್ನ ಸಂಗಾತಿಯನ್ನು ನಾನು ಹುಡುಕಿಕೊಂಡಿದ್ದೇನೆ. ಮದುವೆಯ ಬಗ್ಗೆ ಮಾತುಕತೆ ನಡೆಸಿದ್ದೇವೆ. ವಧುವಿನ ವಿವರಗಳು ಮತ್ತು ವಿವಾಹದ ದಿನಾಂಕದ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುತ್ತೇನೆ ಎಂದಿದ್ದರು.

    ವಿಶಾಲ್ ಶೀಘ್ರದಲ್ಲೇ ಮದುವೆ ಸುದ್ದಿ ಘೋಷಿಸುವುದಾಗಿ ಹೇಳಿದ್ದರಿಂದ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಸಾಯಿ ಧನ್ಶಿಕಾ ಅಥವಾ ವಿಶಾಲ್‌ರಿಂದ ಅವರಿಬ್ಬರ ವಿವಾಹದ ಯಾವುದೇ ಅಧಿಕೃತ ಸುದ್ದಿ ಇನ್ನೂ ಬಂದಿಲ್ಲ. ದನ್ಶಿಕಾ ತಮಿಳಿನ ಕಬಾಲಿ, ಪೆರಣ್ಮಯಿ, ಅರಾವಣ, ಮತ್ತು ಪರದೇಸಿ ಚಿತ್ರಗಳಲ್ಲಿ ನಟಿಸಿದ್ದಾರೆ.

    ಹಿಂದೆ ವಿಶಾಲ್, ವರಲಕ್ಷ್ಮಿ ಶರತ್‌ಕುಮಾರ್ ಅವರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿ ಹಬ್ಬಿತ್ತು. ನಂತರ, ಅವರು ನಟಿ ಅನಿಶಾ ಅಲ್ಲಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು, ಆದರೆ ಕೆಲವು ಕಾರಣಗಳಿಂದ ಅವರು ತಮ್ಮ ಮದುವೆಯನ್ನು ರದ್ದುಗೊಳಿಸಿಕೊಂಡಿದ್ದರು.

  • ಸದಾ ಬಿಕಿನಿಯಲ್ಲಿ ಕಾಣಿಸಿಕೊಳ್ತಿದ್ದ ದಿವ್ಯ ಭಾರತಿ ಸ್ಯಾರಿಯಲ್ಲಿ ಹಾಟ್‌ ಆಗಿ ಕಾಣಿಸಿಕೊಂಡಿದ್ದು ಹೀಗೆ!

    ಸದಾ ಬಿಕಿನಿಯಲ್ಲಿ ಕಾಣಿಸಿಕೊಳ್ತಿದ್ದ ದಿವ್ಯ ಭಾರತಿ ಸ್ಯಾರಿಯಲ್ಲಿ ಹಾಟ್‌ ಆಗಿ ಕಾಣಿಸಿಕೊಂಡಿದ್ದು ಹೀಗೆ!

    ದಾ ಇನ್ಸ್ಟಾದಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದ ತಮಿಳು ನಟಿ ದಿವ್ಯಾ ಭಾರತಿ (Actress Divya Bharathi), ಈ ಬಾರಿ ಸ್ಟೈಲೀಶ್‌ ಆಗಿ ಸೀರೆ ಉಟ್ಟು ಫೋಟೋಶೂಟ್‌ ಮಾಡಿಸಿದ್ದಾರೆ. ಇನ್ಸ್ಟಾದಲ್ಲಿ ರೆಡ್‌ ಸೀರೆಯಲ್ಲಿ ಮಿಂಚುತ್ತಿರುವ ಫೋಟೋಗಳು ಸೌಂದರ್ಯ ಪ್ರಿಯರ ಕಣ್ಣನ್ನು ಕುಕ್ಕುತ್ತಿವೆ.

    ‘ಬ್ಯಾಚುಲರ್’ ಚಿತ್ರದ ಮೂಲಕ ನಟಿ ದಿವ್ಯ ಭಾರತಿ ಯುವಜನರ ಹೃದಯ ಕದ್ದಿದ್ದರು. ಇತ್ತೀಚೆಗೆ ಬಿಡುಗಡೆಯಾದ ಅವರ ‘ಕಿಂಗ್‌ಸ್ಟನ್’ ಚಿತ್ರದ ಮೇಲೆ ತುಂಬಾ ನಿರೀಕ್ಷೆ ಇಟ್ಟಿದ್ದರು. ಆದರೆ ಅದು ಅಷ್ಟು ಯಶಸ್ವಿಯಾಗಿರಲಿಲ್ಲ. ಇದನ್ನೂ ಓದಿ: ಅಭಿಮಾನಿ ಕಡೆ ಗನ್ ಇಟ್ಟ ದಳಪತಿ ವಿಜಯ್ ಬಾಡಿಗಾರ್ಡ್!

    ತಮಿಳಿನಲ್ಲಿ ಸರಿಯಾದ ಅವಕಾಶಗಳು ಸಿಗದೆ ಪರದಾಡುತ್ತಿರುವ ದಿವ್ಯ ಈಗ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಗ್ಲಾಮರ್ ಆಗಿ ಆಧುನಿಕ ಶೈಲಿಯ ಸೀರೆಯಲ್ಲಿ ಪೋಸ್ ನೀಡಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣಗಳಿಗೆ ಕಿಚ್ಚು ಹಚ್ಚಿದ್ದಾರೆ. ಈ ಕಿಚ್ಚಿನಿಂದಲೇ ಮೂವತ್ತು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳ ಕಣ್ಣನ್ನು ತಂಪು ಮಾಡಿದ್ದಾರೆ.

    ಕೆಂಪು ಬಣ್ಣದ ಮಾಡರ್ನ್ ಸೀರೆಯಲ್ಲಿ ವಿವಿಧ ಭಂಗಿಗಳಲ್ಲಿ ದಿವ್ಯ ಪೋಸ್ ನೀಡಿದ್ದಾರೆ. ಈ ರೀತಿಯ ಆಧುನಿಕ ಶೈಲಿ ಸೀರೆ ಪಾರ್ಟಿಗಳು ಮತ್ತು ಮದುವೆಗಳಂತಹ ಸಮಾರಂಭದಲ್ಲಿ ಎಲ್ಲರ ಕಣ್ಣು ನಿಮ್ಮ ಮೇಲೆ ಬೀಳುವಂತೆ ಮಾಡುತ್ತವೆ! ಸದ್ಯ ದಿವ್ಯಾ ಅವರ ಮನಮೋಹಕ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ.

    2021ರಲ್ಲಿ ‘ಬ್ಯಾಚುಲರ್’ ಸಿನಿಮಾದಲ್ಲಿ ಜಿ.ವಿ ಪ್ರಕಾಶ್ ಮತ್ತು ದಿವ್ಯಾ ಭಾರತಿ ಒಟ್ಟಿಗೆ ಕೆಲಸ ಮಾಡಿದ್ದರು. ಅಂದಿನಿಂದ ಇಬ್ಬರ ನಡುವೆ ಲವ್ವಿ ಡವ್ವಿ ಇದೆ ಎಂದೇ ಸುದ್ದಿ ಹಬ್ಬಿತ್ತು. ಈ ಗಾಸಿಪ್‌ನ್ನು ಇಬ್ಬರೂ ತಿರಸ್ಕರಿಸಿದ್ದರು. ಇನ್ನೂ ದಿವ್ಯಾ, ಮದುವೆಯಾದವರೊಂದಿಗೆ ನಾನೇಕೆ ಸುತ್ತಲಿ ಎಂದು ಹೇಳಿಕೊಂಡಿದ್ದರು. ಇದನ್ನೂ ಓದಿ: ವೇದಿಕೆಯಲ್ಲಿ ಸಮಂತಾ ಕಣ್ಣೀರಿಟ್ಟಿದ್ಯಾಕೆ?- ಪ್ರಚಾರದ ಗಿಮಿಕ್ ಎಂದವರಿಗೆ ನಟಿ ಸ್ಪಷ್ಟನೆ