Tag: tamil actress

  • ಹನಿಮೂನ್‌ಗೆ ಫಿಕ್ಸ್‌ ಮಾಡೋದನ್ನೂ ಕಾಯ್ತಿದ್ದೀನಿ – ಮದ್ವೆ ವದಂತಿಗೆ ತೆರೆ ಎಳೆದ ನಟಿ ತ್ರಿಶಾ

    ಹನಿಮೂನ್‌ಗೆ ಫಿಕ್ಸ್‌ ಮಾಡೋದನ್ನೂ ಕಾಯ್ತಿದ್ದೀನಿ – ಮದ್ವೆ ವದಂತಿಗೆ ತೆರೆ ಎಳೆದ ನಟಿ ತ್ರಿಶಾ

    – 42ನೇ ವಯಸ್ಸಿನಲ್ಲಿ ಮದ್ವೆಯಾಗ್ತಿದ್ದಾರಾ ಖ್ಯಾತ ನಟಿ

    ಮದ್ವೆ ವಿಚಾರಕ್ಕೆ ಬಹುಭಾಷಾ ನಟಿ ತ್ರಿಶಾ (Trisha Krishnan) ಸುದ್ದಿಯಲ್ಲಿದ್ದಾರೆ. ತಮಿಳು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ನಟಿಯಾಗಿರುವ ತ್ರಿಷಾ ಇಳಯದಳಪತಿ ವಿಜಯ್, ಸೂರ್ಯ, ವಿಕ್ರಮ್, ಪ್ರಭಾಸ್, ಚಿರಂಜೀವಿ, ಅಜಿತ್, ಸಿಂಬು ಸೇರಿದಂತೆ ಸ್ಟಾರ್ ನಟರ ಜೊತೆ ಅಭಿನಯಿಸಿದ್ದಾರೆ. ಕನ್ನಡದಲ್ಲೂ ದಿ. ನಟ ಪುನೀತ್ ರಾಜ್‌ಕುಮಾರ್ ಅಭಿನಯದ ʻಪವರ್‌ʼ ಸಿನಿಮಾದಲ್ಲಿ ನಾಯಕಿ ಕನ್ನಡಿಗರ ಮನ ಗೆದ್ದಿದ್ದರು.

    ಸೋಷಿಯಲ್‌ ಮೀಡಿಯಾದಲ್ಲಿ (Social Media) ನಟಿ 42ನೇ ವಯಸ್ಸಿನಲ್ಲಿ ಮದ್ವೆಯಾಗ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿತ್ತು. ಚಂಡೀಗಢ ಮೂಲದ ಉದ್ಯಮಿಯೊಂದಿಗೆ ನಟಿ ಹಸೆಮಣೆ ಏರುತ್ತಿದ್ದಂತೆ ಎಂಬ ವದಂತಿ ಹಬ್ಬಿತ್ತು. ಇದಕ್ಕೆ ಇನ್‌ಸ್ಟಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳುವ ಮೂಲಕ ನಟಿ ವದಂತಿಗಳಿಗೆ (Marriage Rumours) ತೆರೆ ಎಳೆದಿದ್ದಾರೆ.

    ʻಜನ ನನಗಾಗಿ ನನ್ನ ಲೈಫ್‌ ಪ್ಲ್ಯಾನ್‌ ಮಾಡಿದಾಗ ನನಗೆ ತುಂಬಾ ಇಷ್ಟ. ಅವ್ರು ನನ್ನ ಹನಿಮೂನ್‌ ಸಹ‌ ನಿಗದಿಮಾಡೋದನ್ನೂ ಕಾಯ್ತಿದ್ದೀನಿʼ ಅಂತ ಬರೆದುಕೊಂಡಿದ್ದಾರೆ. ಜೊತೆಗೆ ಬೇಸರದ ಎಮೋಜಿಯನ್ನು ಹಾಕಿದ್ದಾರೆ.

    ನಟಿ ತ್ರಿಶಾ ಆಗಾಗ್ಗೆ ಮದ್ವೆ ವಿಚಾರಕ್ಕೆ ಸುದ್ದಿ ಆಗುತ್ತಲೇ ಇದ್ದಾರೆ. ಈ ಹಿಂದೆ ನಟ ಸಿಂಬು ಹಾಗೂ ಬಲ್ಲಾಳ ದೇವ ಖ್ಯಾತಿಯ ರಾಣಾ ದಗ್ಗುಬಾಟಿ ಜೊತೆ ಡೇಟಿಂಗ್‌ ಮಾಡ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. 2015 ರಲ್ಲಿ ಉದ್ಯಮಿ ವರುಣ್ ಮಣಿಯನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದು ಸಹ ಶೀಘ್ರದಲ್ಲೇ ರದ್ದಾಯಿತು. ಮದ್ವೆ ಬಳಿಕವೂ ಸಿನಿಮಾದಲ್ಲಿ ನಟಿಸುವ ಬಗ್ಗೆ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಹಾಗಾಗಿ ನಿಶ್ಚಿತಾರ್ಥದ ಬಳಿಕ ಸಂಬಂಧವನ್ನ ರದ್ದುಗೊಳಿಸಲಾಯ್ತು. ಆದ್ರೆ ಈವರೆಗೆ ನಟಿಯ ಕುಟುಂಬಸ್ಥರು ಮದ್ವೆ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ.

  • ಬೆಡ್‍ನಲ್ಲೇ ಮಲ, ಮೂತ್ರ ವಿಸರ್ಜನೆ – ಆರೋಗ್ಯದ ಬಗ್ಗೆ ನಟಿ ಯಶಿಕಾ ಆನಂದ್ ಅಪ್ಡೇಟ್

    ಬೆಡ್‍ನಲ್ಲೇ ಮಲ, ಮೂತ್ರ ವಿಸರ್ಜನೆ – ಆರೋಗ್ಯದ ಬಗ್ಗೆ ನಟಿ ಯಶಿಕಾ ಆನಂದ್ ಅಪ್ಡೇಟ್

    ಚೆನ್ನೈ: ಇತ್ತೀಚೆಗಷ್ಟೇ ಕಾರು ಅಪಘಾತಕ್ಕೀಡಾಗಿ ಗೆಳತಿಯನ್ನು ಕಳೆದುಕೊಂಡು ಆಸ್ಪತ್ರೆಗೆ ದಾಖಲಾಗಿರುವ ತಮಿಳು ನಟಿ ಯಶಿಕಾ ಆನಂದ್ ತಮ್ಮ ಆರೋಗ್ಯದ ಬಗ್ಗೆ ಅಪ್ಡೇಟ್ ಕೊಟ್ಟಿದ್ದಾರೆ.

    ತಮ್ಮ ಆರೋಗ್ಯದ ಬಗ್ಗೆ ಇನ್ ಸ್ಟಾ ಖಾತೆಯಲ್ಲಿ ಪತ್ರ ಪೋಸ್ಟ್ ಮಾಡಿರುವ ನಟಿ, ನನಗೆ ಎದ್ದು ನಡೆಯಲು ಸಾಧ್ಯವಾಗುತ್ತಿಲ್ಲ. ಇನ್ನೂ ಸುಮಾರು 5 ತಿಂಗಳ ಕಾಲ ವಿಶ್ರಾಂತಿ ಪಡೆದುಕೊಳ್ಳುವ ಅನಿವಾರ್ಯತೆ ಇದೆ. ಮಲಗಿದ್ದಲ್ಲೇ ಮಲ-ಮೂತ್ರ ವಿರ್ಜನೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

    ಇನ್ ಸ್ಟಾ ಖಾತೆಯಲ್ಲಿ ಏನಿದೆ..?
    ನನ್ನ ಪೆಲ್ವಿಕ್ ಮೂಳೆಯಲ್ಲಿ ಅನೇಕ ಮುರಿತಗಳಾಗಿವೆ. ಹಾಗೆಯೇ ಬಲಗಾಲಿಗೂ ಗಂಭೀರ ಗಾಯಗಳಾಗಿವೆ. ಮುಂದಿನ 5 ತಿಂಗಳ ಕಾಲ ಎದ್ದೇಳಲು ಹಾಗೂ ನಡೆದಾಡಲು ಸಾಧ್ಯವಿಲ್ಲ. ಸದ್ಯ ಮಲಗಿದ್ದಲ್ಲೇ ಇದ್ದು, ಅಲ್ಲಿಯೇ ಮಲ-ಮೂತ್ರ ವಿಸರ್ಜನೆಯಾಗುತ್ತಿದೆ. ಬಲ, ಎಡ ಹೀಗೆ ಯಾವುದೇ ಭಾಗಕ್ಕೂ ತಿರುಗಲೂ ಆಗುತ್ತಿಲ್ಲ. ಹೀಗೆ ಹಲವು ದಿನಗಳಿಂದ ಒಂದೇ ರಿಯಾಗಿ ಮಲಗುತ್ತಿದ್ದೇನೆ. ಬೆನ್ನಿನ ಭಾಗಕ್ಕೂ ಗಂಭೀರ ಗಾಯಗಳಾಗಿವೆ. ನನ್ನ ಮುಖದ ಭಾಗಕ್ಕೆ ಯಾವುದೇ ರೀತಿಯ ಗಾಯಗಳಾಗದಿರುವುದೇ ನನ್ನ ಅದೃಷ್ಟ. ಆದರೆ ಇದು ನನಗೆ ಪುನರ್ಜನ್ಮವಾಗಿದೆ. ಇದನ್ನೂ ಓದಿ: ನಮ್ಮಲ್ಲಿ ಪರ, ವಿರೋಧಿ ಬಣಗಳಿಲ್ಲ, ಸಂಪುಟ ರಚನೆ ವೇಳೆ ಅಸಮಾಧಾನ ಸಹಜ- ನಳಿನ್

    ಘಟನೆಯ ಬಳಿಕ ಮಾನಸಿಕ ಹಾಗೂ ದೈಹಿಕವಾಗಿ ಗಾಯಗೊಂಡಿದ್ದೇನೆ. ದೇವರು ನನಗೆ ಶಿಕ್ಷೆ ನೀಡಿದ್ದಾನೆ. ಆದರೆ ಘಟನೆಯಲ್ಲಿ ನಾನು ಕಳೆದುಕೊಂಡಿರುವ ನೋವಿಗಿಂತ ಇದೇನೂ ದೊಡ್ಡದಲ್ಲ ಎಂದು ಯಶಿಕಾ ಬರೆದುಕೊಂಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿರುವ ಐಶಿಕಾ ಅವರಿಗೆ ಸರ್ಜರಿ ಯಶಸ್ವಿಯಾಗಿದ್ದು, ಆಗಸ್ಟ್ 3 ರಂದು ಐಸಿಯುವಿನಿಂದ ಜನರಲ್ ವಾರ್ಡ್‍ಗೆ ಸ್ಥಳಾಂತರ ಮಾಡಲಾಗಿದೆ. ಇದನ್ನೂ ಓದಿ: ದೇವರು, ರೈತರ ಹೆಸರಿನಲ್ಲಿ ಸಚಿವರ ಪ್ರಮಾಣವಚನ – ಗಮನ ಸೆಳೆದ ಅಂಶಗಳು

    ಜುಲೈ 24ರ ನಸುಕಿನ ಜಾವ ಚೆನ್ನೈನ ಈಸ್ಟ್ ಕೋಸ್ಟ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಐಶಿಕಾ ಗಂಭೀರವಾಗಿ ಗಾಯಗೊಂಡರೆ ಅವರ ಆಪ್ತ ಸ್ನೇಹಿತೆ ವೆಲ್ಲಿಚೆಟ್ಟಿ ಭವಾನಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಕಾರಿನಲ್ಲಿದ್ದ ಇನ್ನಿಬ್ಬರು ಸ್ನೇಹಿತರು ಸಣ್ಣಪುಟ್ಟ ಗಾಯಗೊಂಡು ಬಚಾವ್ ಆಗಿದ್ದರು.

  • ತಮಿಳು ನಟಿ ಪ್ರಿಯಾಂಕ ಆತ್ಮಹತ್ಯೆಗೆ ಶರಣು!

    ತಮಿಳು ನಟಿ ಪ್ರಿಯಾಂಕ ಆತ್ಮಹತ್ಯೆಗೆ ಶರಣು!

    ಚೆನ್ನೈ: ತಮಿಳಿನ ಫೇಮಸ್ ನಟಿ ಪ್ರಿಯಾಂಕ ರವರು ಬುಧವಾರ ಅವರ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಬುಧವಾರ ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿದ್ದು, ಮನೆಯ ಕೆಲಸದವಳು ಬಾಗಿಲು ಬಡಿದರೂ ತೆಗೆಯುವುದಿಲ್ಲ. ಹಾಗಾಗಿ ಕಿಟಕಿಯಲ್ಲಿ ನೋಡಿದಾಗ ನಟಿ ಪ್ರಿಯಾಂಕರವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡಿದೆ. ಕೂಡಲೇ ಕೆಲಸದವಳು ನೆರೆಹೊರೆಯವರಿಗೆ ತಿಳಿಸಿದಾಗ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಪ್ರಿಯಾಂಕರವರು ತಮಿಳು ಟಿವಿ ಯಲ್ಲಿ ಪ್ರಸಾರವಾಗುವ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದು, ಸದ್ಯಕ್ಕೆ ‘ವಂಶಂ’ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದರು. ಅದರಲ್ಲಿ ಬಾಹುಬಲಿ ಖ್ಯಾತಿಯ ನಟಿ ರಮ್ಯಾ ಕೃಷ್ಣನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಆತ್ಮಹತ್ಯೆ ಮಾಡಿಕೊಳ್ಳಲು ಸಾಂಸರಿಕ ಕಲಹ ಕಾರಣವೆಂದು ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಅವರು ಆತ್ಮಹತ್ಯೆಗೆ ಶರಣಾದ ವೇಳೆ ಪತಿ ಬಾಲಾ ಸ್ಥಳದಲ್ಲಿ ಇರಲಿಲ್ಲ. ಅವರಿಬ್ಬರಿಗೂ ಮೂರು ವರ್ಷಗಳ ಹಿಂದೆಯೇ ಮದುವೆಯಾಗಿದ್ದು, ಇಬ್ಬರ ನಡುವೆ ಆಗಾಗ ಕಲಹಗಳು ನಡೆಯುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

  • ಈ ಗ್ರಾಮದ ಜನರಿಗೆ ಶೌಚಾಲಯ ಕಟ್ಟಿಸಿ ಮಾದರಿಯಾದ ನಟಿ ತ್ರಿಶಾ!

    ಈ ಗ್ರಾಮದ ಜನರಿಗೆ ಶೌಚಾಲಯ ಕಟ್ಟಿಸಿ ಮಾದರಿಯಾದ ನಟಿ ತ್ರಿಶಾ!

    ಕಂಚಿಪುರಂ: ಗ್ರಾಮದ ಜನರಿಗೆ ಶೌಚಾಲಯ ಕಟ್ಟಿಸಿ ಕೊಡುವ ಮೂಲಕ ದಕ್ಷಿಣ ಭಾರತದ ಫೇಮಸ್ ನಟಿ ತ್ರಿಶಾ ಇತರ ನಟ-ನಟಿಯರಿಗೆ ಮಾದರಿಯಾಗಿದ್ದಾರೆ.

    ಕಂಚಿಪುರಂ ಜಿಲ್ಲೆಯ ನೆಮಾಲಿ ಗ್ರಾಮದ ಜನರು ಶೌಚಾಲಯವಿಲ್ಲದೇ ಪರದಾಡುತ್ತಿದ್ದರು. ಹೀಗಾಗಿ ಸ್ವಚ್ಛ ಭಾರತ ಅಭಿಯಾನದ ಮೂಲಕ ನಟಿ ಸ್ವತಃ ತಾವೇ ನಿಂತು ಶೌಚಾಲಯ ಕಟ್ಟಿಸಿಕೊಟ್ಟಿದ್ದಾರೆ. ಹೀಗಾಗಿ ಆ ಭಾಗದ ಗ್ರಾಮದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ನಟಿ ಶೌಚಾಲಯ ನಿರ್ಮಾಣ ಮಾಡಲೆಂದು ಇಟ್ಟಿಗೆಗಳನ್ನು ಜೋಡಿಸಿ ಅದರ ಮಧ್ಯೆ ಸಿಮೆಂಟ್ ಹಾಕುತ್ತಿರೋ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ತಮಿಳು ನಟಿ ತ್ರಿಶಾ ಅವರು ನವೆಂಬರ್ ತಿಂಗಳಿನಿಂದ ಯುನಿಸೆಫ್ (ಯುನೈಟೆಡ್ ನೇಷನ್ಸ್ ಚಿಲ್ಡ್ರನ್ಸ್ ಫಂಡ್) ಜೊತೆ ಸೇರಿಕೊಂಡು ಈ ಕೆಲಸಗಳನ್ನು ಮಾಡುತ್ತಿದ್ದಾರೆ. ಅಲ್ಲದೇ ಅವರು ರಕ್ತಹೀನತೆ, ಬಾಲ್ಯ ವಿವಾಹ, ಬಾಲಕಾರ್ಮಿಕ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಮುಂತಾದವುಗಳ ಕುರಿತು ತಮಿಳುನಾಡು ಮತ್ತು ಕೇರಳದಲ್ಲಿ ಜಾಗೃತಿ ಮೂಡಿಸುವ ಕೆಲಸಗಳನ್ನೂ ಕೂಡ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಚಿತ್ರರಂಗದ ಸ್ಟಾರ್ ಗಳು ಮತ್ತು ಸೆಲೆಬ್ರಿಟಿಗಳು ಇಂತಹ ಕೆಲಸಗಳನ್ನು ಮಾಡುತ್ತಿರುವುದು ತುಂಬಾ ಅಪರೂಪವಾಗಿದೆ. ಹೀಗಾಗಿ ತ್ರಿಶಾ ಅವರ ಈ ಪರಿಶ್ರಮಕ್ಕೆ ಜನ ಬೆಂಬಲ ಸೂಚಿಸಿದ್ದಾರೆ.