Tag: Tamil actor

  • ನಾನು ಯಾವಾಗಲೂ ಶಕ್ತಿಧಾಮದ ಸ್ವಯಂ ಸೇವಕ: ವಿಶಾಲ್‌

    ನಾನು ಯಾವಾಗಲೂ ಶಕ್ತಿಧಾಮದ ಸ್ವಯಂ ಸೇವಕ: ವಿಶಾಲ್‌

    ಮೈಸೂರು: ನಾನು ಯಾವಾಗಲೂ ಶಕ್ತಿಧಾಮದ ಸ್ವಯಂ ಸೇವಕನಾಗಿರುತ್ತೇನೆ. ಅದಕ್ಕೆ ರಾಜ್ ಕುಟುಂಬದವರು ಅನುಮತಿ ನೀಡಿ ತಮಿಳು ನಟ(Actor) ವಿಶಾಲ್‌(Vishal) ಮನವಿ ಮಾಡಿದರು.

    ಶಕ್ತಿಧಾಮ(Shaktidhama) ಭೇಟಿ ಬಳಿಕ ಮಾತನಾಡಿದ ಅವರು, ಶಕ್ತಿಧಾಮ ನನಗೆ ದೇವಸ್ಥಾನದ ಅನುಭವ ನೀಡಿತ್ತು. ದೇವಸ್ಥಾನಕ್ಕೆ ಹೋದರೆ ಒಂದು ದೇವರ ದರ್ಶನ ಪಡೆಯಬಹುದು. ಇಲ್ಲಿ ಒಂದೊಂದು ಮಕ್ಕಳಲ್ಲೂ ಒಂದೊಂದು ದೇವರನ್ನು ನೋಡಿದೆ. ಮಕ್ಕಳು ತುಂಬಾ ಲವ ಲವಿಕೆಯಿಂದ ಇದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.

    ಪುನೀತ್ ರಾಜ್ ಕುಮಾರ್ ಹಾಗೂ ಗೀತಮ್ಮ ಅವರದ್ದು ಅತ್ಯುತ್ತಮವಾದ ಕೆಲಸವಾಗಿದೆ. ಈ ಬಗ್ಗೆ ಶಿವಕುಮಾರ್ ಜೊತೆ ಮಾತನಾಡಿದ್ದೇನೆ. ರಾಜ್ ಕುಟುಂಬದ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಮಕ್ಕಳ ಜೊತೆ ನಾನು ಮಾತನಾಡಿದೆ. ಮಕ್ಕಳು ಡ್ಯಾನ್ಸ್ ಮಾಡಿದರು, ಆಟವಾಡಿದ್ರು ತುಂಬಾ ಉತ್ಸಾಹದಿಂದ ಇದ್ದಾರೆ. ಇಲ್ಲಿರುವ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಈ ಹಿಂದೆ ಪುನೀತ್‌ ರಾಜ್‌ಕುಮಾರ್‌ ಅವರ ಅಕಾಲಿಕ ನಿಧನದ ಸಂದರ್ಭದಲ್ಲಿ ಮಾತನಾಡಿದ್ದ ವಿಶಾಲ್‌, ಪುನೀತ್ ರಾಜ್​​ಕುಮಾರ್(Puneet Rajkumar) ಓದಿಸುತ್ತಿದ್ದ ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊರುವೆ. 1800 ಮಕ್ಕಳ ಜವಾಬ್ದಾರಿ ನನ್ನದು ಎಂದು ಘೋಷಣೆ ಮಾಡಿದ್ದರು. ಇದನ್ನೂ ಓದಿ: ಕಾರು ಆಕ್ಸಿಡೆಂಟ್ ಮೂಲಕ ಅನಿರುದ್ಧಗೆ ಗುಡ್ ಬೈ ಹೇಳಿದ ಜೊತೆ ಜೊತೆಯಲಿ ಟೀಮ್

    Live Tv
    [brid partner=56869869 player=32851 video=960834 autoplay=true]

  • ನಿರ್ಮಾಪಕ ರವೀಂದರ್‌ ಕೈ ಹಿಡಿದ ನಟಿ, ಖ್ಯಾತ ನಿರೂಪಕಿ ಮಹಾಲಕ್ಷ್ಮೀ

    ನಿರ್ಮಾಪಕ ರವೀಂದರ್‌ ಕೈ ಹಿಡಿದ ನಟಿ, ಖ್ಯಾತ ನಿರೂಪಕಿ ಮಹಾಲಕ್ಷ್ಮೀ

    ಮಿಳು ಚಿತ್ರರಂಗದಲ್ಲಿ ನಟಿ, ನಿರೂಪಕಿಯಾಗಿ ಗಮನ ಸೆಳೆದಿದ್ದ ಮಹಾಲಕ್ಷ್ಮೀ ಮತ್ತು ಖ್ಯಾತ ನಿರ್ಮಾಪಕ ರವೀಂದರ್‌ ಚಂದ್ರಶೇಖರನ್‌ ಇಬ್ಬರೂ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ತಿರುಪತಿ ಸನ್ನಿಧಿಯಲ್ಲಿ ಇಬ್ಬರ ವಿವಾಹ ಮಹೋತ್ಸವ ಜರುಗಿದ್ದು, ಮದುವೆ ಚಿತ್ರಗಳು ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡ್ತಿವೆ. ಆದರೆ ಇವರಿಬ್ಬರಿಗೂ ಇದು 2ನೇ ಮದುವೆ ಎಂಬುದು ವಿಶೇಷ. ಇದನ್ನೂ ಓದಿ: ‘ಜೊತೆ ಜೊತೆಯಲಿ’ ಧಾರಾವಾಹಿ: ಆರ್ಯವರ್ಧನ್ ಅಲ್ಲ, ಅವನ ಸಹೋದರನ ಪಾತ್ರದಲ್ಲಿ ಹರೀಶ್ ರಾಜ್

    ನಿರೂಪಕಿಯಾಗಿ ಮಾತ್ರವಲ್ಲದೆ, ನಟಿಯಾಗಿಯೂ ಗಮನ ಸೆಳೆದಿದ್ದ ಮಹಾಲಕ್ಷ್ಮೀ, ರವೀಂದರ್‌ ಚಂದ್ರಶೇಖರ್ ನಿರ್ಮಿಸಿದ್ದ ‘ವಿಡಿಯುಮ್‌ ವಾರೈ ಕಾಥಿರು’ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾದಲ್ಲಿ ವಿದಾರ್ಥ್‌ ಮತ್ತು ವಿಕ್ರಾಂತ್ ಮುಖ್ಯಭೂಮಿಕೆಯಲ್ಲಿದ್ದರು. ಧಾರಾವಾಹಿ ಕ್ಷೇತ್ರದಲ್ಲೂ ಮಹಾಲಕ್ಷ್ಮೀ ಹೆಸರು ಮಾಡಿದ್ದಾರೆ. ವಾಣಿ ರಾಣಿ, ಆಫೀಸ್‌, ಚೆಲ್ಲಮೇ, ಉಥಿರಿಪೂಕ್ಕಳ್, ಒರು ಕೈ ಒಸೈ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ಮಹಾಲಕ್ಷ್ಮೀ ನಟಿಸಿದ್ದಾರೆ. ಪ್ರಸ್ತುತ ಅವರು ನಟಿಸಿರುವ ಮಹಾರಸಿ ಎಂಬ ಧಾರಾವಾಹಿ ಪ್ರಸಾರವಾಗುತ್ತಿದೆ. ಇದನ್ನೂ ಓದಿ: ‘ಲೈಗರ್’ ಸಿನಿಮಾದಲ್ಲಿ ನಟಿಸಲು 25 ಕೋಟಿ ಸಂಭಾವನೆ ಪಡೆದರೂ, ಸಿನಿಮಾನೇ ಮರೆತಿದ್ದರಾ ಮೈಕ್ ಟೈಸನ್

    ರವೀಂದರ್‌ ಚಂದ್ರಶೇಖರನ್‌ ಅವರು ಕೂಡ `ನಟ್ಪುನ ಎನ್ನಡು ಥೆರಿಯುಮ’, ‘ಮುರುಂಗೈಕೈ ಚಿಪ್ಸ್’, ‘ವಿಡಿಯುಮ್‌ ವಾರೈ ಕಾಥಿರು’ ಮುಂತಾದ ಸಿನಿಮಾಗಳನ್ನು ತಮ್ಮ ಲಿಬ್ರಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.

    ಇಬ್ಬರೂ ಸಹ ತಮ್ಮ ವಿವಾಹಮಹೋತ್ಸವದ ಫೋಟೋಗಳನ್ನ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ಮಹಾಲಕ್ಷ್ಮೀ ಅವರು, ‘ನಿಮ್ಮನ್ನು ನನ್ನ ಬದುಕಿನಲ್ಲಿ ಪಡೆಯಲು ನಾನು ತುಂಬ ಅದೃಷ್ಟ ಮಾಡಿದ್ದೇನೆ. ಬೆಚ್ಚನೆಯ ಪ್ರೀತಿಯಿಂದ ನೀವು ನನ್ನ ಬದುಕನ್ನು ಪರಿಪೂರ್ಣಗೊಳಿಸಿದ್ದೀರಿ. ಲವ್ ಯೂ ಅಮ್ಮು..’ ಎಂದು ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇಸ್ಲಾಂಗೆ ಮತಾಂತರ ಆದ್ರಾ ಸ್ಟಾರ್ ನಟ ವಿಶಾಲ್: ಏನಿದು ಇನ್ಶ್ಯಾ ಅಲ್ಲಾಹ್?

    ಇಸ್ಲಾಂಗೆ ಮತಾಂತರ ಆದ್ರಾ ಸ್ಟಾರ್ ನಟ ವಿಶಾಲ್: ಏನಿದು ಇನ್ಶ್ಯಾ ಅಲ್ಲಾಹ್?

    ಮಿಳಿನ ಖ್ಯಾತ ನಟ ವಿಶಾಲ್ ದೇವರ ಬಗ್ಗೆ ಅಪಾರ ನಂಬಿಕೆವುಳ್ಳವರು. ಅವರು ಯಾವ ಜಾತಿಯರು ಎಂದು ಈವರೆಗೂ ಅಭಿಮಾನಿಗಳು ಕೇಳದೇ ಆರಾಧಿಸುತ್ತಾ ಬಂದಿದ್ದಾರೆ. ಸದ್ಯ ವಿಶಾಲ್ ಮಾಡಿರುವ ಒಂದು ಟ್ವಿಟ್ ನಿಂದಾಗಿ ವಿಶಾಲ್ ಯಾವ ಧರ್ಮದವರು ಎಂದು ಹುಡುಕುತ್ತಿದ್ದಾರೆ ನೆಟ್ಟಿಗರು. ಇದನ್ನೂ ಓದಿ : ತಾಳಿಕಟ್ಟಿ ಹೆಂಡತಿಯನ್ನು ಎತ್ತಿಕೊಂಡ ರಣಬೀರ್ ಕಪೂರ್

    ವಿಶಾಲ್ ಅವರ ಸಹೋದರಿ ಐಶು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿಯನ್ನು ಅಭಿಮಾನಿಗಳ ಜತೆ ಹಂಚಿಕೊಂಡಿರುವ ಅವರು, ‘ನಾನು ಮತ್ತೆ ಅಂಕಲ್ ಆಗಿರುವೆ. ಮತ್ತೊಮ್ಮೆ ಅಂಕಲ್ ಆಗಿರುವುದು ಸಂಭ್ರಮ ತಂದಿದೆ. ನನ್ನ ಸಹೋದರಿ ಐಶು ಅವರು ರಾಜಕುಮಾರಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ಮತ್ತು ಸಹೋದರಿಗೂ ಶುಭ ಹಾರೈಸಿ. ಇಬ್ಬರಿಗೂ ಇನ್ಶ್ಯಾ ಅಲ್ಲಾಹ್ ನ ಆಶೀರ್ವಾದವಿರಲಿ’ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ‘ಇನ್ಶ್ಯಾ ಅಲ್ಲಾಹ್’ ಎಂಬ ಪದವೇ ಇದೀಗ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ‘BOSS’ ಪಟ್ಟ ಅಲಂಕರಿಸಿದ ಯಶ್ : ಟ್ವಿಟರ್ ಟ್ರೆಂಡಿಂಗ್ ನಲ್ಲಿ #YASHBOSS

    ಅಲ್ಲಾಹ್ ದೇವರ ಆಶೀರ್ವಾದ ಕೋರಿರುವ ವಿಶಾಲ್ ಹಾಗಾದರೆ, ಇಸ್ಲಾಂಗೆ ಮತಾಂತರ ಆಗಿದ್ದಾರಾ ಎಂದು ನೆಟ್ಟಿಗರು ಹಲವು ರೀತಿಯಲ್ಲಿ ಪ್ರಶ್ನೆ ಮಾಡಿದ್ದಾರೆ. ಅಷ್ಟಕ್ಕೂ ಇಂಥದ್ದೊಂದು ಪದವನ್ನು ಅವರು ಹಾಕಿರುವುದಾದರೂ ಏತಕ್ಕೆ ಎನ್ನುವ ಚರ್ಚೆ ಕೂಡ ತಮಿಳು ನಾಡಿನಲ್ಲಿ ನಡೆದಿದೆ. ಅದಕ್ಕೆ ವಿಶಾಲ್ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ಕೊಡಲು ಹೋಗಿಲ್ಲ.

    ಸಮಾಜಮುಖಿ ಕಾರ್ಯಗಳಿಂದಾಗಿ ವಿಶಾಲ್ ಎಲ್ಲರ ಪ್ರೀತಿಯ ನಟರಾಗಿ ಉಳಿದುಕೊಂಡಿದ್ದಾರೆ. ಕನ್ನಡದ ಹೆಮ್ಮೆಯ ನಟ ಪುನೀತ್ ರಾಜ್ ಕುಮಾರ್ ನಿಧನರಾದಾಗ, ಅಪ್ಪು ನೋಡಿಕೊಳ್ಳುತ್ತಿದ್ದ ಅಷ್ಟೂ ಮಕ್ಕಳನ್ನು ದತ್ತು ಪಡೆದುಕೊಂಡು ಓದಿಸುತ್ತೇನೆ ಎಂದು ಹೇಳಿದ್ದರು. ಈ ನಡೆ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು. ಅಲ್ಲದೇ, ಪುನೀತ್ ಅವರ ಹೆಸರಿನಲ್ಲಿ ಅವರು ಗಿಡಗಳನ್ನು ನೆಟ್ಟು, ಪುನೀತ್ ಅಭಿಮಾನಿಗಳು ಪ್ರೀತಿಗೂ ವಿಶಾಲ್ ಪಾತ್ರರಾಗಿದ್ದರು. ಇದನ್ನೂ ಓದಿ:ಬೀಸ್ಟ್ ಸಿನಿಮಾಕ್ಕೆ ಸೆಡ್ಡು ಹೊಡೆದ ಕೆಜಿಎಫ್-2 – ಕೇರಳ, ತಮಿಳುನಾಡಿನಲ್ಲೂ ರಾಕಿಭಾಯ್ ಹವಾ

    ಸದ್ಯ ವಿಶಾಲ್ ಅವರು ಲಾಠಿ ಎಂಬ ಹೆಸರಿನಲ್ಲಿ ಸಿನಿಮಾ ಮಾಡಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಸುನೈನಾ ಅವರು ವಿಶಾಲ್ ಗೆ ನಾಯಕಿಯಾಗಿ ನಟಿಸಿದ್ದಾರೆ. ರಮಣ ಮತ್ತು ನಂದು ಈ ಸಿನಿಮಾವನ್ನು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.

  • ಶಿವಮೊಗ್ಗ ಜೈಲಿನಿಂದ ಕೈಬೀಸಿದ ನಟ ವಿಜಯ್

    ಶಿವಮೊಗ್ಗ ಜೈಲಿನಿಂದ ಕೈಬೀಸಿದ ನಟ ವಿಜಯ್

    ಶಿವಮೊಗ್ಗ: ತಮಿಳಿನ ಖ್ಯಾತ ನಟ ಇಳಯ ದಳಪತಿ ವಿಜಯ್ ಕಳೆದ ಒಂದು ವಾರದಿಂದ ಸಿನಿಮಾ ಚಿತ್ರೀಕರಣಕ್ಕಾಗಿ ಶಿವಮೊಗ್ಗ ಜೈಲಿನಲ್ಲಿದ್ದಾರೆ. ಶಿವಮೊಗ್ಗದ ಹಳೆ ಜೈಲಿನಲ್ಲಿ ದಳಪತಿ 64 ಚಿತ್ರ ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ಸಿನಿಮಾ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಇಡೀ ಚಿತ್ರತಂಡ ಶಿವಮೊಗ್ಗ ಜೈಲಿನಲ್ಲಿ ಬೀಡುಬಿಟ್ಟಿದೆ.

    ಕಳೆದ ಒಂದು ವಾರದಿಂದ ಶಿವಮೊಗ್ಗ ಜೈಲಿನಲ್ಲಿ ಇರುವ ವಿಜಯ್ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಶಿವಮೊಗ್ಗದ ಜೈಲು ಆವರಣದಲ್ಲಿ ಚಿತ್ರೀಕರಣ ನಡೆಯುತ್ತಿದ್ದರೆ, ಇತ್ತ ಗೇಟ್ ಮುಂದೆ ಅಭಿಮಾನಿಗಳು ವಿಜಯ್ ನೋಡಲೆಂದು ಕಾಯುತ್ತ ನಿಂತಿರುತ್ತಾರೆ. ನಟ ವಿಜಯ್ ತಂಗಿರುವ ಹೋಟೆಲ್ ಮುಂಭಾಗದಲ್ಲಿ ಅಭಿಮಾನಿಗಳು ಜಮಾಯಿಸುತ್ತಿದ್ದಾರೆ. ಚಿತ್ರೀಕರಣ ಮುಗಿಸಿ ವಿಜಯ್ ತಂಗಿರುವ ಹೋಟೆಲ್‍ಗೆ ಹೋಗುವಾಗ ಮತ್ತು ಚಿತ್ರೀಕರಣಕ್ಕೆಂದು ಜೈಲಿಗೆ ಆಗಮಿಸುವಾಗ ಅಭಿಮಾನಿಗಳು ಅವರ ಕಾರನ್ನು ಸುತ್ತುವರಿದು, ವಿಜಯ್ ಪರ ಜೈಕಾರ ಕೂಗುತ್ತಿದ್ದಾರೆ.

    ಕಳೆದ ಒಂದು ವಾರದಿಂದ ವಿಜಯ್ ನೋಡಲು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ದಳಪತಿ ಕೊನೆಗೂ ದರ್ಶನ ನೀಡಿದ್ದಾರೆ. ವಿಜಯ್ ನೋಡಲೆಂದು ಬಂದಿದ್ದ ಅಭಿಮಾನಿಗಳು ಹೋಟೆಲ್ ಮುಂಭಾಗ ನೆರೆದಿದ್ದರು. ಹೋಟೆಲ್‍ಗೆ ಆಗಮಿಸುವಾಗ ಕಾರಿನಿಂದ ಇಳಿದು ಹೊರ ಬಂದ ವಿಜಯ್ ಅಭಿಮಾನಿಗಳತ್ತ ಕೈ ಬೀಸಿ ದರ್ಶನ ನೀಡುವ ಮೂಲಕ ಸಂತೋಷಪಡಿಸಿದ್ದಾರೆ. ಒಂದು ತಿಂಗಳ ಕಾಲ ದಳಪತಿ ’64’ ಸಿನಿಮಾ ಶಿವಮೊಗ್ಗದಲ್ಲಿ ಚಿತ್ರೀಕರಣ ನಡೆಯಲಿದೆ.