Tag: Tambula Prashne

  • ಸೌಹಾರ್ದತೆಯಲ್ಲಿರೋ ಸಮಾಜವನ್ನು ಎಸ್‌ಡಿಪಿಐ ಒಡೆಯುತ್ತಿದೆ: ಚಕ್ರವರ್ತಿ ಸೂಲಿಬೆಲೆ

    ಸೌಹಾರ್ದತೆಯಲ್ಲಿರೋ ಸಮಾಜವನ್ನು ಎಸ್‌ಡಿಪಿಐ ಒಡೆಯುತ್ತಿದೆ: ಚಕ್ರವರ್ತಿ ಸೂಲಿಬೆಲೆ

    ಬೆಂಗಳೂರು: ಎಸ್‌ಡಿಪಿಐನವರಿಗೆ ಬೆಂಕಿ ಹಚ್ಚುವುದು ಒಂದೇ ಕೆಲಸ. ಅವರು ಸೌಹಾರ್ದತೆಯಲ್ಲಿರುವ ಸಮಾಜವನ್ನು ಒಡೆಯುತ್ತಿದ್ದಾರೆ ಎಂದು ಬರಹಗಾರ ಹಾಗೂ ಚಿಂತಕ ಚಕ್ರವರ್ತಿ ಸೂಲಿಬೆಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಎಸ್‌ಡಿಪಿಐ ಅಧ್ಯಕ್ಷ ಮಜೀದ್ ಪ್ರಚೋದನಕಾರಿ ಭಾಷಣದ ಬಗ್ಗೆ ಪ್ರತಿಕ್ರಿಯಿಸಿದ ಸೂಲಿಬೆಲೆ, ಎಸ್‌ಡಿಪಿಐನಿಂದ ಹೊಸದೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಅವರು ಸಮಾಜದಲ್ಲಿ ಬೆಂಕಿ ಹಚ್ಚಲು ಕಾಯುತ್ತಿದ್ದಾರೆ. ಹಿಂದೂಗಳು ಬಲಶಾಲಿಗಳು. ಅದಕ್ಕಾಗಿ ಅವರು ಹೆದರಿ ಈ ರೀತಿಯಾಗಿ ಹೇಳುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.

    ಮಳಲಿ ಮಸೀದಿ ವಿಚಾರಕ್ಕೆ ಬಂದರೆ, ಈಗಾಗಲೇ ತಾಂಬೂಲ ಪ್ರಶ್ನೆ ಆಗಿದೆ. ಮುಂದೆ ಅದು ಅಷ್ಟ ಮಂಗಲ ಪ್ರಶ್ನೆಗೆ ಹೋಗಬಹುದು. ಬಳಿಕ ಅದು ಕೋರ್ಟ್ಗೂ ಹೋಗಬಹುದು. ಮಸೀದಿ ಬಗ್ಗೆ ಅನುಮಾನ ಇದ್ದರೆ, ಕೋರ್ಟ್ ತೀರ್ಮಾನ ಕೈಗೊಳ್ಳಲಿದೆ ಎಂದರು.

    ನಮ್ಮ ದೇವಸ್ಥಾನ ಮರಳಿ ಪಡೆಯೋಕೆ ಈ ರೀತಿ ಹೋರಾಟ ನಡೆಯುತ್ತದೆ. ಮುಸ್ಲಿಂ ಸಮಾಜ ದೌರ್ಜನ್ಯದಿಂದ ಕೂಡಿದ್ದಾಗ ನಮ್ಮ ಸಮಾಜ ವೀಕ್ ಆಗಿತ್ತು. ಈಗ ನಮ್ಮ ಸಮಾಜ ಬಲಿಷ್ಠವಾಗಿದೆ. ಮುಂದೆ ಇಂತಹ ವಿಚಾರ ಹಲವು ಬರಲಿದೆ. ಈಗ ನೀವು ಹೆದರಿ, ಒಂದು ಹಿಡಿ ಮಣ್ಣು ಕೊಡುವುದಿಲ್ಲ ಯಾರಪ್ಪನದ್ದು ಎಂದು ಮಾತನಾಡುತ್ತೀರಿ. ಈ ರೀತಿ ಉದ್ರೇಕದಿಂದ ಮಾತನಾಡುವುದು ಸರಿಯಲ್ಲ ಎಂದರು. ಇದನ್ನೂ ಓದಿ: ತಾಂಬೂಲ ಪ್ರಶ್ನೆ ಅಂತಾ ಬರೋರನ್ನು ಒದ್ದು ಒಳಗೆ ಹಾಕ್ಬೇಕು: ಅಬ್ದುಲ್ ವಾಜೀದ್ ವಿವಾದಾತ್ಮಕ ಹೇಳಿಕೆ

    ತಾಂಬೂಲ ಪ್ರಶ್ನೆ ಎಂದು ಬರುವವರನ್ನು ಒದ್ದು ಒಳಗೆ ಹಾಕಬೇಕು ಎಂಬ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಸೂಲಿಬೆಲೆ, ನಾವು ಮೌಲ್ವಿಗಳನ್ನು ಒದ್ದು ಒಳಗೆ ಹಾಕಬೇಕು ಎಂದಿದ್ದರೆ ಏನಾಗುತ್ತಿತ್ತೋ ಅದೇ ಆಗುತ್ತದೆ ಎಂದು ಎಚ್ಚರಿಕೆ ನೀಡಿ, ತಮ್ಮನ್ನು ತಾವು ಮೊದಲು ತಿದ್ದಿಕೊಳ್ಳುವ ಅಗತ್ಯ ಇದೆ ಎಂದು ಹೇಳಿದರು. ಇದನ್ನೂ ಓದಿ: ತರಗತಿ, ಗ್ರಂಥಾಲಯಕ್ಕೂ ಹಿಜಬ್ ಧರಿಸಿ ಬರುವಂತಿಲ್ಲ- ವಿವಾದದ ಬಳಿಕ ಮಂಗಳೂರು ವಿವಿ ಖಡಕ್ ಆದೇಶ

    ಆರ್ಯರು ಹೊರಗಿನಿಂದ ಬಂದವರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸೂಲಿಬೆಲೆ, ಸಿದ್ದರಾಮಯ್ಯನವರ ಹೇಳಿಕೆ ವಿಚಾರ ನಾನು ಗಮನಿಸಿದ್ದೆನೆ. ಹಳೇ ಹೇಳಿಕೆ ಅಳಿಸಲು ಸಿದ್ದರಾಮಯ್ಯ ಈ ಹೇಳಿಕೆ ನೀಡಿದ್ದಾರೆ. ಆರ್ಯರು ಹೊರಗಡೆಯಿಂದ ಬಂದವರು ಎಂದು ಅವರು ಹೇಳಿದ್ದಾರೆ ಎಂದರು.

    Siddaramaiah

    ಪಠ್ಯ ಪುಸ್ತಕ ಪರಿಷ್ಕರಣೆ ಆಗಬೇಕೋ ಬೇಡವೋ ಎಂಬ ವ್ಯಾಪಕ ಚರ್ಚೆ ನಡೆಯುತ್ತಿದೆ. ಪಠ್ಯ ಪುಸ್ತಕ ಏಕೆ ಪರಿಷ್ಕರಣೆ ಆಗಬೇಕು ಎಂಬುದಕ್ಕೆ ಸಿದ್ದರಾಮಯ್ಯನವರೇ ಉದಾಹರಣೆ. ಆರ್ಯ ಆಕ್ರಮಣಕಾರಿ ಕುರಿತಂತೆ ಒಂದು ಚಿಂತನೆಯನ್ನು ಪಠ್ಯ ಪುಸ್ತಕ ಮಾಡಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನವರನ್ನು ಕೂರಿಸಿ ಪಾಠ ಬೋಧಿಸಲಿ. ಕಾಂಗ್ರೆಸ್‌ನವರು ಏಕೆ ಯಾವಾಗಲೂ ಆ್ಯಂಟಿ ಇಂಡಿಯನ್ ಆಗಿರುತ್ತಾರೋ ಗೊತ್ತಿಲ್ಲ ಎಂದು ಟೀಕಿಸಿದರು.

  • ತಾಂಬೂಲ ಪ್ರಶ್ನೆಯನ್ನು ಅವರು ಮನೆಯಲ್ಲಿ ಇಟ್ಟುಕೊಳ್ಳಲಿ – ಭವಿಷ್ಯ ಹೇಳೋರನ್ನು ಬಂಧಿಸಿ: ಡಿಕೆಶಿ

    ತಾಂಬೂಲ ಪ್ರಶ್ನೆಯನ್ನು ಅವರು ಮನೆಯಲ್ಲಿ ಇಟ್ಟುಕೊಳ್ಳಲಿ – ಭವಿಷ್ಯ ಹೇಳೋರನ್ನು ಬಂಧಿಸಿ: ಡಿಕೆಶಿ

    ಬೆಂಗಳೂರು: ಮಂಗಳೂರಿನಲ್ಲಿ ತಾಂಬೂಲ ಪ್ರಶ್ನೆ ಇಡಲಾಗಿದೆ. ಇದೊಂದು ಭಾವನಾತ್ಮಕ ವಿಚಾರ ಅದನ್ನು ಬಿಜೆಪಿ ನಾಯಕರು ಅವರ ಮನೆಯಲ್ಲಿ ಇಟ್ಟುಕೊಳ್ಳಲಿ. ಈ ಬಗ್ಗೆ ಸರ್ಕಾರ ಮಧ್ಯಪ್ರವೇಶ ಮಾಡ್ಬೇಕು ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್  ಆಗ್ರಹಿಸಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರಿಗೆ ಏನೇನ್ ನಂಬಿಕೆ ಇದೆಯೋ? ಏನ್ ಬೇಕಾದ್ರೂ ಮಾಡಿಕೊಳ್ಳಲಿ. ನಾವು ಮಧ್ಯಪ್ರವೇಶ ಮಾಡಲ್ಲ. ಬಿಜೆಪಿ ನಾಯಕರು ರಾಜ್ಯವನ್ನು ಸಾಯಿಸ್ತಿದ್ದಾರೆ. ಅವರ ಸ್ವಂತಕ್ಕೆ, ಮನೆಗೆ ಏನ್ ಬೇಕಾದ್ರೂ ಮಾಡಲಿ. ಆದರೆ ಇಲ್ಲಿ ಸರ್ಕಾರ ಇದೆ, ಅಲ್ಪಸಂಖ್ಯಾತ ಇಲಾಖೆ ಇದೆ, ಮುಜರಾಯಿ ಇಲಾಖೆಯೂ ಇದೆ, ಕ್ಯಾಬಿನೆಟ್ ಇದೆ, ಸರ್ಕಾರಿ ಅಧಿಕಾರಿಗಳು ಇದ್ದಾರೆ. ಆದ್ರೆ ಖಾಸಗಿಯಾಗಿ ಹೀಗೆ ಮಾಡಬಾರದು. ಅವರ ವಿರುದ್ಧ ಕೇಸ್ ಹಾಕಬೇಕು. ಜಿಲ್ಲಾಧಿಕಾರಿ ಮತ್ತು ಎಸ್‍ಪಿ ಮಧ್ಯಪ್ರವೇಶ ಮಾಡ್ಬೇಕು ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಸಾವಿರಾರು ದೇವಸ್ಥಾನಗಳನ್ನು ಒಡೆದು ಮಸೀದಿ ಕಟ್ಟಿರುವುದು ವಾಸ್ತವ – ಟಿಪ್ಪು ಸುಲ್ತಾನ್ ನಿಜ ಬಣ್ಣ ಬಯಲಾಗುತ್ತಿದೆ: ಸಿ.ಟಿ ರವಿ

    ನನಗೂ ಈ ಬಗ್ಗೆ ಕಾಲ್ ಬಂದಿತ್ತು. ನಮ್ ಪಾರ್ಟಿಗೂ ಅದಕ್ಕೂ ಸಂಬಂಧ ಇಲ್ಲ, ಮರ್ಯಾದೆಯಾಗಿ ಸುಮ್ಮನೆ ಇರಿ ಅಂದೆ. ಭವಿಷ್ಯ ಕೇಳೋರು, ಶಕುನ ಕೇಳೋರಿಗೆ ನಾವು ಅಡ್ಡಿ ಮಾಡಲ್ಲ. ಅವರು ಏನ್ ಬೇಕಾದ್ರೂ ಮಾಡಿಕೊಳ್ಳಲಿ, ಆದ್ರೆ ಮಂಗಳೂರಿನ ವಿಚಾರವಾಗಿ ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಆ ಭವಿಷ್ಯದ ಹೇಳಿಕೆ ಹೊರಗೆ ಬರಬಾರದು, ಇದರಿಂದ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕೆಟ್ಟರೆ ಆ ಭವಿಷ್ಯ ಹೇಳೋರನ್ನು ಬಂಧಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮಳಲಿಯಲ್ಲಿರುವುದು ದರ್ಗಾವಲ್ಲ, ಶಿವ ಸಾನಿಧ್ಯ- ತಾಂಬೂಲ ಪ್ರಶ್ನೆ ಸುಳಿವು

    ಬಿಬಿಎಂಪಿ ಚುನಾವಣೆ ಕುರಿತಾಗಿ ಮಾತನಾಡಿ, ಮೀಸಲಾತಿ ಕೊಟ್ಟು ಬಿಬಿಎಂಪಿ ಚುನಾವಣೆ ಮಾಡಿ. ಇದು ಸರ್ಕಾರದ ಜವಾಬ್ದಾರಿ. ನಮ್ಮ ಜೊತೆ ಸಭೆ ಮಾಡಿದಾಗ ಸಾಮಾಜಿಕ ನ್ಯಾಯಕ್ಕೆ ಅವಕಾಶ ಕೊಟ್ಟು ಚುನಾವಣೆ ಮಾಡಿ ಎಂದು ಹೇಳಿದ್ದೇವೆ. ಕೋರ್ಟ್ ಮೀಸಲಾತಿ ಮಾಡದೇ ಚುನಾವಣೆ ಮಾಡಿ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮಯಕ್ಕೆ ಸರಿಯಾಗಿ ಮಾಡಬೇಕು. ಅಧಿಕಾರ ಹಂಚಿಕೆ ಆಗಬೇಕು. ನಾವು ಅಧಿಕಾರ ಹಂಚಿಕೆ ಮಾಡಬೇಕು ಅನ್ನೋರು ಈಗ ಕೋರ್ಟ್ ಹೇಳಿದೆ ಚುನಾವಣೆ ಮಾಡಿ ಎಂದರು. ಇದನ್ನೂ ಓದಿ: ಮೈಕ್ ವಾರ್ ಗಡುವು ಇಂದು ಅಂತ್ಯ- ಅವಧಿ ವಿಸ್ತರಣೆಗೆ ಮುಸ್ಲಿಂ ಮುಖಂಡರ ಆಗ್ರಹ

    ಪಠ್ಯ ಕ್ರಮದಲ್ಲಿ ಕೆಲ ಅಧ್ಯಾಯ ಕೈಬಿಡುವ ವಿಚಾರವಾಗಿ ಮಾತನಾಡಿ, ಬಿಜೆಪಿಯವರು ರಾಜಕೀಯ ಅಜೆಂಡಾ ತುರುತ್ತಿದ್ದಾರೆ. ಅವರ ಪಕ್ಷಕ್ಕೆ ಅನುಕೂಲ ಮಾಡಲು ಹೋಗ್ತಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಜಾರಿ ಆಗದ ರಾಷ್ಟ್ರೀಯ ಶಿಕ್ಷಣ ನೀತಿ ಇಲ್ಲಿ ಮಾಡಲು ಹೊರಟ್ರು. ಇತಿಹಾಸ ಯಾರು ಬದಲಿಸಲು ಸಾಧ್ಯವಿಲ್ಲ. ಅವರ ಪಕ್ಷ ಮತ್ತು ಸಂಘಟನೆ ವಿಚಾರ ಮಕ್ಕಳಿಗೆ ತುರುಕುವುದು ಬೇಡ. ಸ್ವಾತಂತ್ರ ತಂದವರ ರೀತಿಯಲ್ಲಿ ಬಿಂಬಿಸಲು ಹೊರಟಿದ್ದಾರೆ. ಇದು ಅಪರಾಧ, ತಪ್ಪು. ಜನರೇ ಇವರಿಗೆ ಬುದ್ಧಿ ಕಲಿಸುತ್ತಾರೆ ಎಂದು ಕಿಡಿಕಾರಿದ್ದಾರೆ.