Tag: Tamarind tree

  • ಧರೆಗುರುಳಿದ್ದ 2,000 ವರ್ಷದ ಹುಣಸೆ ಮರ – ಚಿಕಿತ್ಸೆ ಬಳಿಕ ಮರುಜೀವ

    ಧರೆಗುರುಳಿದ್ದ 2,000 ವರ್ಷದ ಹುಣಸೆ ಮರ – ಚಿಕಿತ್ಸೆ ಬಳಿಕ ಮರುಜೀವ

    ಹಾವೇರಿ: ಅನಾರೋಗ್ಯಕ್ಕೆ ತುತ್ತಾದರೆ ಮನುಷ್ಯ, ಪ್ರಾಣಿಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಬಹುದು. ಆದರೆ ನೆಲಕ್ಕುರುಳಿದ 2,000 ವರ್ಷ ಹಳೆಯ ಮರಕ್ಕೆ (Tree) ಚಿಕಿತ್ಸೆ ನೀಡಿ ಮತ್ತೆ ಮೊದಲಿದ್ದ ಜಾಗದಲ್ಲಿ ಈಗ ನೆಡಲಾಗಿರುವ ಅಪರೂಪದ ಘಟನೆ ನಡೆದಿದೆ.

    ಬರೋಬ್ಬರಿ 2,000 ವರ್ಷದ ಹುಣಸೆ ಮರ (Tamarind Tree) ಧರೆಗುರುಳಿ, 4 ತಿಂಗಳ ನಂತರ ಮತ್ತೆ ಚಿಗುರಿದೆ. ಇದು ಹಾವೇರಿ (Haveri) ಜಿಲ್ಲೆಯ ಸವಣೂರು (Savanuru) ಪಟ್ಟಣದ ಕಲ್ಮಠದ (Kalmata) ಆವರಣದಲ್ಲಿ ಕಂಡುಬರೋ ದೊಡ್ಡಹುಣಸೆ. ಈ ಮರ 2,000 ವರ್ಷದಷ್ಟು ಹಳೆಯದು. ಇಲ್ಲೇ ಇರುವ ಅತ್ಯಂತ ಹಳೆಯ 3 ಮರಗಳ ಪೈಕಿ ಈ ಮರ ಜುಲೈ 7 ರಂದು ಮಳೆ-ಗಾಳಿ ಹಾಗೂ ಫಂಗಸ್ ಕಾಣಿಸಿಕೊಂಡ ಹಿನ್ನೆಲೆ ಬೇರು ಸಮೇತ ನೆಲಕ್ಕುರುಳಿತ್ತು.

    ಘೋರಕನಾಥ ತಪಸ್ವಿಗಳು ಈ 3 ಮರಗಳನ್ನು ನೆಟ್ಟಿದ್ದರು ಎಂದು ಹೇಳಲಾಗುತ್ತದೆ. 18 ಮೀ. ಎತ್ತರ, 12 ಮೀ. ಅಗಲವಾಗಿದ್ದ ಈ ಮರ ಬೀಳುತ್ತಿದ್ದಂತೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದರು. ಸತತ 1 ವಾರ ಕಾರ್ಯಾಚರಣೆ ನಡೆಸಿ ದೊಡ್ಡಹುಣಸೆ ಮರವನ್ನು ಮರುಸ್ಥಾಪನೆ ಮಾಡಲಾಗಿತ್ತು. ಈಗ 4 ತಿಂಗಳ ನಂತರ ಮರಕ್ಕೆ ಮರುಜನ್ಮ ಸಿಕ್ಕಿದೆ. ದೊಡ್ಡಹುಣಸೆ ಮರವು ಮೊದಲಿನಂತೆ ಚಿಗುರೊಡೆಯುತ್ತಿದೆ. ಸಣ್ಣದಾಗಿ ರಂಬೆ, ಕೊಂಬೆಗಳು ಚಿಗುರುತ್ತಿವೆ. ಇದರಿಂದ ಕಲ್ಮಠ ಶ್ರೀಗಳಾದ ಚನ್ನಬಸವ ಸ್ವಾಮೀಜಿ ಖಷಿಯಾಗಿದ್ದಾರೆ. ಇದನ್ನೂ ಓದಿ: ಕಳಚಿ ಬಿದ್ದ ರೇಡಿಯೋ ಕಾಲರ್ – ತೆರಿಗೆ ಹಣ ಪೋಲಾಗುತ್ತಿದೆಂದು ಸ್ಥಳೀಯರ ಆಕ್ರೋಶ

    ಮರದ ಬುಡದಲ್ಲಿ ಬೇರುಗಳಲ್ಲಿ ಫಂಗಸ್ ಆಗಿ ಸಂಪೂರ್ಣವಾಗಿ ಕೊಳೆತ ಪರಿಣಾಮ ಮರ ಬಿದ್ದಿತ್ತು. ಮರದ ಬುಡದಲ್ಲಿ ಕೊಳೆತ ಭಾಗವನ್ನು ಸ್ವಚ್ಛ ಮಾಡಿ, ರಾಸಾಯನಿಕಗಳನ್ನು ಸಿಂಪಡಣೆ ಮಾಡಲಾಗಿತ್ತು. ಭೂಮಿಯಲ್ಲಿ ತೋಡಿರುವ ಗುಂಡಿಯಲ್ಲಿಯೂ ರಾಸಾಯನಿಕಗಳನ್ನು ಹಾಕಲಾಗಿದೆ. ಮರದ ಟೊಂಗೆಗಳನ್ನು ಕತ್ತರಿಸಿ, ಸಗಣಿಯನ್ನು ಸಿಂಪಡಣೆ ಮಾಡಿ ಟ್ರೀಟ್‌ಮೆಂಟ್ ಮಾಡಲಾಗಿತ್ತು. ಇದೆಲ್ಲದರ ಬಳಿಕ ಬೃಹತ್ ಗಾತ್ರದ ಕ್ರೇನ್ ಹಾಗೂ ಜೆಸಿಬಿಗಳನ್ನು ಬಳಸಿಕೊಂಡು ಮರವನ್ನು ಅದೇ ಸ್ಥಳದಲ್ಲಿ ನೆಡಲಾಗಿತ್ತು. 2,000 ವರ್ಷ ಐತಿಹಾಸಿಕ ಹಿನ್ನೆಲೆಯುಳ್ಳ ಮರವನ್ನು ಮರುಸ್ಥಾಪನೆ ಮಾಡಲಾಗಿತ್ತು. ಈಗ ದೊಡ್ಡಹುಣಸೆ ಮರ ಚಿಗುರಿಕೊಂಡಿದೆ. ಈ ಮರವನ್ನು ನೋಡಲು ಸುತ್ತಮುತ್ತಲಿನ ಪ್ರವಾಸಿಗರು ಸ್ಥಳಕ್ಕೆ ಆಗಮಿಸುತ್ತಿದ್ದಾರೆ.

    ಒಟ್ಟಿನಲ್ಲಿ ಮಠದ ಶ್ರೀಗಳು, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡದ ಸತತ ಪರಿಶ್ರಮದಿಂದ 2,000 ವರ್ಷದ ಮರಕ್ಕೆ ಮರುಜೀವ ಸಿಕ್ಕಿದೆ. ಪುನಃಜನ್ಮ ಕಂಡ ದೊಡ್ಡಹುಣಸೆ ಮರವನ್ನು ನೋಡಲು ನೂರಾರು ಜನರು ಆಗಮಿಸುತ್ತಿದ್ದಾರೆ. ಇದನ್ನೂ ಓದಿ: ಡಿಸೆಂಬರ್ 4ರಿಂದ ಚಳಿಗಾಲದ ಸಂಸತ್ ಅಧಿವೇಶನ ಆರಂಭ

  • ಹುಣಸೆ ಮರದಲ್ಲಿ ಗಣೇಶನ ಮೂರ್ತಿ- ಭಕ್ತರಲ್ಲಿ ಅಚ್ಚರಿ!

    ಹುಣಸೆ ಮರದಲ್ಲಿ ಗಣೇಶನ ಮೂರ್ತಿ- ಭಕ್ತರಲ್ಲಿ ಅಚ್ಚರಿ!

    ಬೆಂಗಳೂರು: ನಗರದ ಹೊರವಲಯ ನೆಲಮಂಗಲ ತಾಲೂಕಿನ ವೆಂಕಟಪ್ಪನಪಾಳ್ಯದ ಜಮೀನಿನಲ್ಲಿರುವ ಹುಣಸೆಮರದಲ್ಲಿ ಗಣೇಶನ ಮೂರ್ತಿ ಕಂಡುಬಂದಿದ್ದು, ಭಕ್ತರಲ್ಲಿ ಅಚ್ಚರಿ ಮೂಡಿಸಿದೆ.

    ಇಂದು ದೇಶದ್ಯಾಂತ ಸಡಗರ ಸಂಭ್ರಮದಿಂದ ವಿಘ್ನ ನಿವಾರಕ ಗಣೇಶನ ಹಬ್ಬವನ್ನ ಆಚರಿಸುತ್ತಾರೆ. ಗಣಪನಿಗೆ ವಿವಿಧ ರೀತಿಯ ಕಲ್ಪನೆ ವಿವಿಧ ಭಂಗಿಯ ಆಕೃತಿಯನ್ನು ಕಾಣುತ್ತೇವೆ. ಹಾಗೆಯೇ ನಗರದ ಹೊರವಲಯದಲ್ಲಿ ಸುಮಾರು 80 ವರ್ಷದ ಈ ಹುಣಸೆಮರದಲ್ಲಿ ಕಳೆದ ಹದಿನೈದು ವರ್ಷಗಳ ಹಿಂದೆ ಗಣೇಶನ ಆಕಾರದಂತೆ ಪ್ರಾರಂಭವಾಗಿ ಇದೀಗ ಸುಂದರ ಮೂರ್ತಿ ರೂಪ ಪಡೆದಿದೆ.

    ಇದನ್ನು ಕಂಡ ಸುತ್ತ ಮುತ್ತಲಿನ ಗ್ರಾಮಸ್ಥರು ಇಲ್ಲಿಗೆ ಬಂದು ಪೂಜೆ ಪುನಸ್ಕಾರಗಳನ್ನು ಸಲ್ಲಿಸುತ್ತಾರೆ. ಈ ಹುಣಸೆ ಗಣೇಶ ನಾನಾ ಪವಾಡಗಳಿಗೆ ಸಾಕ್ಷಿಯಾಗಿದ್ದು, ನಂಬಿದ ಭಕ್ತರಿಗೆ ಒಳಿತು ನೀಡುವ ಅಗಾಧವಾದ ನಂಬಿಕೆ ಇಲ್ಲಿಯದ್ದಾಗಿದೆ.

    ಇದೇ ಜಮೀನಿನಲ್ಲಿ ಇರುವ ಬೋರ್‌ವೆಲ್‌ನಲ್ಲಿ ನೀರು ದೊರೆತಿರಲಿಲ್ಲವಂತೆ. ಈ ಗಣೇಶನ ಮೂರ್ತಿ ಮೂಡಿದ ನಂತರ ನಮಗೆ ಬೋರ್‌ವೆಲ್‌ನಲ್ಲಿ ನೀರು ದೊರಕಿ ಈ ತೋಟವು ಸುಂದರವಾಗಿ ರೈತನಿಗೆ ನೆರವಾಗಿದೆ. ಹೀಗಾಗಿ ನಾನಾ ಪವಾಡಗಳಿಗೆ ಈ ಗಣೇಶ ಸಾಕ್ಷಿಯಾಗಿದ್ದು, ಇಂದು ಗಣೇಶನ ಹಬ್ಬದ ದಿವಸ ವಿಶೇಷ ಪೂಜೆಯನ್ನು ಭಕ್ತರು ಸಲ್ಲಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv