Tag: Tamarind Chitran’s

  • ಬೆಳಗಿನ ಬ್ರೇಕ್‌ಫಸ್ಟ್‌ಗೆ ಹುಣಸೆಹಣ್ಣಿನ ಚಿತ್ರಾನ್ನ ಮಾಡಿ

    ಬೆಳಗಿನ ಬ್ರೇಕ್‌ಫಸ್ಟ್‌ಗೆ ಹುಣಸೆಹಣ್ಣಿನ ಚಿತ್ರಾನ್ನ ಮಾಡಿ

    ಕ್ಷಿಣ ಭಾರತದ ಸಾಂಪ್ರದಾಯಿಕ ತಿಂಡಿಯಲ್ಲಿ ಚಿತ್ರಾನ್ನ ಒಂದಾಗಿದೆ. ಇದನ್ನು ಸಾಮಾನ್ಯವಾಗಿ ಕನ್ನಡದಲ್ಲಿ ಹುಳಿ ಅನ್ನ ಅಥವಾ ಹುಣಸೆ ಹುಳಿ ಚಿತ್ರಾನ್ನ ಎಂದೂ ಕರೆಯುತ್ತಾರೆ. ಬೇಗ ಮತ್ತು ರುಚಿಕರವಾಗಿ ಮಾಡುವ ತಿಂಡಿ ಎಂದರೇ ಚಿತ್ರಾನ್ನ. ಅದರಲ್ಲಿಯೂ ಹುಣಸೆ ಹಣ್ಣಿನಿಂದ ಮಾಡುವ ಚಿತ್ರಾನ್ನ ಎಂದರೇ ಎಲ್ಲರಿಗೂ ಇಷ್ಟ. ಈ ಚಿತ್ರಾನ್ನ ಮಾಡುವ ಸರಳ ವಿಧಾನ ಇದಾಗಿದೆ.

    ಬೇಕಾಗಿರುವ ವಿಧಾನ:
    * ಬೇಯಿಸಿದ ಅನ್ನ – 2 ಬಟ್ಟಲು
    * ಕತ್ತರಿಸಿದ ಈರುಳ್ಳಿ – 1 ದೊಡ್ಡ
    * ಕೆಂಪು ಮೆಣಸಿನಕಾಯಿಗಳು – 4
    * ಸಾಸಿವೆ ಬೀಜಗಳು – 1 ಟೀಸ್ಪೂನ್
    * ಕಡಲೆಕಾಳು ಮತ್ತು ಉದ್ದಿನ ಬೇಳೆ – 2 ಟೀಸ್ಪೂನ್
    * ಕಡಲೆಕಾಯಿ – 3 ಟೀಸ್ಪೂನ್
    * ನೀರಿನಲ್ಲಿ ನೆನೆಸಿಟ್ಟ ಹುಣಸೆಹಣ್ಣು – 1 ಬಟಲು

    Hunase Hannina Chitranna | Tamarind Rice – NMOT: Nam Mane Oota Tindi
    * ಬೆಲ್ಲ – 1 ಟೀಸ್ಪೂನ್
    * ಅರಿಶಿನ ಪುಡಿ – ಳಿ ಟೀಸ್ಪೂನ್
    * ಬಿಸೆಬೆಲೆ ಬಾತ್ ಪವರ್ – 4 ಟೀಸ್ಪೂನ್
    * ಕೊತ್ತಂಬರಿ ಸೊಪ್ಪು – 1/2 ಕಪ್
    * ಎಣ್ಣೆ – 2 ಟೀಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು
    * ಕರಿಬೇವಿನ ಎಲೆಗಳು ಸ್ವಲ್ಪ

    ಮಾಡುವ ವಿಧಾನ:
    * ಹುಣಸೆಹಣ್ಣಿನ ರಸವನ್ನು ಬಿಸಿ ನೀರಿನಲ್ಲಿ ನೆನೆಸಿ, ರಸವನ್ನು ಹೊರತೆಗೆಯಿರಿ
    * ಬಾಣಲಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಕಡಲೆಕಾಯಿಯನ್ನು ಸೇರಿಸಿ ಗೋಲ್ಡನ್ ಬ್ರೌನ್ ಬರುವವರೆಗೂ ಫ್ರೈ ಮಾಡಿ. ನಂತರ ಕರಿದ ಕಡಲೆಕಾಯಿಯನ್ನು ಎಣ್ಣೆಯಿಂದ ತೆಗೆದು ಬೇರೆ ಬಟಲಿಗೆ ಹಾಕಿ.
    * ಮತ್ತೆ ಬಿಸಿಯಿರುವ ಎಣ್ಣೆಗೆ ಸಾಸಿವೆ ಹಾಕಿ. ಅದಕ್ಕೆ ಕಡಲೆಕಾಳು ಮತ್ತು ಉದ್ದಿನ ಬೇಳೆಯನ್ನು ಸೇರಿಸಿ. ಇವೆರೆಡು ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.


    * ಕರಿಬೇವಿನ ಎಲೆಗಳು ಮತ್ತು ಒಣ ಕೆಂಪು ಮೆಣಸಿನಕಾಯಿಗಳನ್ನು ಸೇರಿಸಿ, 2 ನಿಮಿಷ ಕಾಲ ಹುರಿಯಿರಿ. ಅದಕ್ಕೆ ಕತ್ತರಿಸಿದ ಈರುಳ್ಳಿ ಸೇರಿಸಿ ಫ್ರೈ ಮಾಡಿ. ಹುಣಸೆಹಣ್ಣಿನ ರಸವನ್ನು ಸೇರಿಸಿ ಮತ್ತು ಅದನ್ನು ಕುದಿಸಿ.
    * ನಂತರ ಅದಕ್ಕೆ ಅರಿಶಿನ ಪವರ್, ಉಪ್ಪು, ಬೆಲ್ಲ ಮತ್ತು ಬಿಸಿಬೇಳೆ ಬಾತ್ ಪವರ್ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಎಣ್ಣೆ ಬೇರ್ಪಡುವವರೆಗೆ ಹುರಿಯಿರಿ.
    * ಹುಣಸೆ ಹುಳಿ ಚಿತ್ರಾನ್ನದ ಗೊಜ್ಜು ಬೆಂದ ನಂತರ ಅದಕ್ಕೆ ಅನ್ನವನ್ನು ಸೇರಿಸಿ ಸರಿಯಾಗಿ ಮಿಶ್ರಣ ಮಾಡಿ. ಅದರ ಮೇಲೆ ಕಡಲೆಕಾಯಿ ಮತ್ತು ಕೊತ್ತಂಬರಿ ಸೊಪ್ಪ ಹಾಕಿ ಅಲಂಕಾರಿ ಬಡಿಸಿ.