Tag: Tamannah Bhatia

  • ಕೆಟ್ಟ ಸಿನಿಮಾ ಬಗ್ಗೆ ಬಾಯ್ಬಿಟ್ಟ ತಮನ್ನಾ ನೇರ ಮಾತಿಗೆ ವಿಜಯ್ ಫ್ಯಾನ್ಸ್ ಕಿಡಿ

    ಕೆಟ್ಟ ಸಿನಿಮಾ ಬಗ್ಗೆ ಬಾಯ್ಬಿಟ್ಟ ತಮನ್ನಾ ನೇರ ಮಾತಿಗೆ ವಿಜಯ್ ಫ್ಯಾನ್ಸ್ ಕಿಡಿ

    ಸಾಮಾನ್ಯವಾಗಿ ನಟ- ನಟಿಯರು ತಮ್ಮ ಸಿನಿಮಾಗಳ ಗೆಲುವಿನ ಬಗ್ಗೆ ಮಾತನಾಡುತ್ತಾರೆ. ಆದರೆ ಸಿನಿಮಾ ಸೋಲಿನ ಬಗ್ಗೆ ತುಟಿಬಿಚ್ಚಲು ಹಿಂದುಮುಂದು ನೋಡುತ್ತಾರೆ. ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವಂತೆ ತಾವು ನಟಿಸಿದ ಸಿನಿಮಾಗಳೆಲ್ಲಾ ನಮಗೆ ಇಷ್ಟ ಅಂತಲೇ ಹೇಳುತ್ತಾರೆ. ಆದರೆ ಕೆಲವೊಮ್ಮೆ ಮಾತ್ರ ಬಹಳ ದಿನಗಳ ನಂತರ ತಾವು ನಟಿಸಿದ ಕೆಟ್ಟ ಸಿನಿಮಾಗಳ ಪಟ್ಟಿ ಬಿಚ್ಚಿಡುತ್ತಾರೆ. ಇದೀಗ ತಮನ್ನಾ, ತಾವು ನಟಿಸಿದ ಕೆಟ್ಟ ಸಿನಿಮಾ ಇದು ಬೆರಳು ಮಾಡಿ ತೋರಿಸಿದ್ದಾರೆ. ಮಿಲ್ಕಿ ಬ್ಯೂಟಿ ಬಿಟ್ಟ ಬಾಣಕ್ಕೆ ವಿಜಯ್ ದಳಪತಿ (Thalapathy Vijay)  ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ತಮನ್ನಾ (Tamannah Bhatia) ಮತ್ತೆ ಲೈಮ್‌ಲೈಟ್‌ಗೆ ಮರಳಿದ್ದಾರೆ. ಕಾರಣ ರಜನಿಕಾಂತ್ (Rajanikanth) ಜೊತೆಗಿನ ಜೈಲರ್ (Jailer) ಸಿನಿಮಾ. ಕಾವಾಲಾ ಸಾಂಗ್ ಭರ್ಜರಿ ಹಿಟ್ ಆಗಿದೆ. ಸಿನಿಮಾ ಕೂಡ ರಿಲೀಸ್‌ಗೆ ಸಿದ್ಧವಿದೆ. ಈ ಹೊತ್ತಲ್ಲೇ ತಮ್ಮಿಡೀ ಚಿತ್ರಜೀವನದ ಕೆಟ್ಟ ಸಿನಿಮಾ ಯಾವುದು ಅನ್ನೋ ಸುದ್ದಿ ಬಿಚ್ಚಿಟ್ಟು ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಏನಿದೆ ತಮನ್ನಾ ಬಿಚ್ಚಿಟ್ಟ ಕಥೆಯಲ್ಲಿ ಇಲ್ಲಿದೆ ಮಾಹಿತಿ. ಇದನ್ನೂ ಓದಿ:ಕಪ್ಪು ಬಿಳಿ ಬಣ್ಣದ ಬಿಕಿನಿ ಧರಿಸಿ ವಿಚಿತ್ರ ಕ್ಯಾಪ್ಷನ್ ಕೊಟ್ಟ ದೀಪಿಕಾ

    ಒಂದೇ ಒಂದು ಸ್ಟೆಪ್ ಭರ್ಜರಿ ಒಂದು ತಿಂಗಳಿಂದ ಟ್ರೆಂಡ್ ಸೃಷ್ಟಿ ಮಾಡಿದೆ. ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಕಾವಾಲಾ (Kaavala Song) ಹಾಡಿಗೆ ತಮನ್ನಾ ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ಸ್ಟೆಪ್‌ಗೆ ಫಿದಾ ಆದವರೆಷ್ಟೋ ಮಂದಿಯಿದ್ದಾರೆ. ಅಲ್ಲಿಂದ ತಮನ್ನಾ ಚಾರ್ಮ್ ಮತ್ತೆ ಚಾಲ್ತಿಗೆ ಬಂದಿದೆ. ಸಿನಿ ಕರಿಯರ್ ಆರಂಭದಲ್ಲಿ ತಮನ್ನಾಗೆ ಅದೆಷ್ಟು ಸ್ಟಾರ್‌ಡಂ ಇತ್ತೋ ಅದು ಮತ್ತೆ ಮರಳಿದೆ. ಈ ಹೊತ್ತಲ್ಲೇ ತಮಿಳಿನ ವಿಜಯ್ ಫ್ಯಾನ್ಸ್ ಕಣ್ಣು ಕೆಂಪು ಮಾಡಿಕೊಳ್ಳುವಂಥಹ ಮಾತನಾಡಿದ್ದಾರೆ.

    ‘ಜೈಲರ್’ ಸಿನಿಮಾ ರಿಲೀಸ್ ಹೊತ್ತಲ್ಲಿ ಮಾಧ್ಯಮಕ್ಕೆ ಸಂದರ್ಶನ ನೀಡೋದ್ರಲ್ಲಿ ಬ್ಯುಸಿಯಾಗಿದ್ದಾರೆ ತಮನ್ನಾ. ಈ ಹೊತ್ತಲ್ಲಿ ತಮನ್ನಾಗೆ ಕೆರಿಯರ್‌ನಲ್ಲಿ ಕೆಟ್ಟ ಸಿನಿಮಾ ಯಾವುದು ಅನ್ನೋ ಪ್ರಶ್ನೆ ಎದುರಾಗಿದೆ. ಇದೇ ಪ್ರಶ್ನೆಗೆ ತಮನ್ನಾ ಉತ್ತರ ದಳಪತಿ ವಿಜಯ್ ಫ್ಯಾನ್ಸ್ ಗರಂ ಆಗುವಂತೆ ಮಾಡಿದೆ. ಕಾರಣ ತಮನ್ನಾ ಕೆರಿಯರ್‌ನ ಕೆಟ್ಟ ಸಿನಿಮಾ 2010ರ ‘ಸುರ’ (Sura Film) ಎಂಬುದನ್ನ ನೇರವಾಗಿ ಹೇಳಿದ್ದಾರೆ. ಯಾಕಂದ್ರೆ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು. ಒಟ್ನಲ್ಲಿ ಬೋಲ್ಡ್ ಮಾತಿನಿಂದಾಗಿ ತಮನ್ನಾ, ವಿಜಯ್ ಫ್ಯಾನ್ಸ್ ಮುಂದೆ ನಿಷ್ಠುರವಾಗಿದ್ದಾರೆ. ಮುಂದೆ ಒಟ್ಟಿಗೆ ಸಿನಿಮಾ ಮಾಡೋ ಸಂದರ್ಭ ಬಂದಾಗ ಪರಿಸ್ಥಿತಿ ಮಿತಿಮೀರಲೂಬಹುದು ಅಂತಿದ್ದಾರೆ ಸಿನಿಪಂಡಿತರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮದುವೆ ಒತ್ತಡದ ಬಗ್ಗೆ ಮಾತಾಡಿದ ವಿಜಯ್‌ ವರ್ಮಾ ಮಾತಿಗೆ ಅಚ್ಚರಿಗೊಂಡ ಫ್ಯಾನ್ಸ್

    ಮದುವೆ ಒತ್ತಡದ ಬಗ್ಗೆ ಮಾತಾಡಿದ ವಿಜಯ್‌ ವರ್ಮಾ ಮಾತಿಗೆ ಅಚ್ಚರಿಗೊಂಡ ಫ್ಯಾನ್ಸ್

    ಬಾಲಿವುಡ್‌ನ ಸದ್ಯದ ಲೇಟೆಸ್ಟ್ ಜೋಡಿ ಅಂದರೆ ವಿಜಯ್ ವರ್ಮಾ- ತಮನ್ನಾ ಭಾಟಿಯಾ (Tamannah Bhatia) ಇಬ್ಬರ ಲವ್ವಿ-ಡವ್ವಿ ಸದ್ಯ ಬಿಟೌನ್ ಅಡ್ಡಾದಲ್ಲಿ ಸೌಂಡ್ ಮಾಡುತ್ತಿದೆ. ಅಭಿಮಾನಿಗಳು, ಮದುವೆ ಯಾವಾಗ ಅಂತಾ ಕೇಳುತ್ತಾ ಇದ್ರೆ, ಇತ್ತ ಮನೆ ಕಡೆಯಿಂದಲೂ ಇಬ್ಬರ ಮದುವೆಗೆ ಒತ್ತಡ ಜಾಸ್ತಿಯಾಗುತ್ತಿದೆಯಂತೆ.

    ‘ಲಸ್ಟ್ ಸ್ಟೋರಿಸ್ 2’ (Lust Stories 2) ಚಿತ್ರೀಕರಣದಲ್ಲಿ ಸಂದರ್ಭದಲ್ಲಿ ವಿಜಯ್-ತಮನ್ನಾಗೆ ಪ್ಯಾರ್ ಶುರುವಾಗಿದೆ. ಕಳೆದ 2 ವರ್ಷದಿಂದ ಇಬ್ಬರು ಡೇಟ್ ಮಾಡ್ತಿದ್ದಾರೆ. ಇಬ್ಬರ ಲವ್ ಕಥೆ ಜಗತ್ತಿಗೆ ಗೊತ್ತಾಗಿದೆ. ಇಬ್ಬರೂ ಲವ್ ಮಾಡುತ್ತಿರುವ ವಿಚಾರ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ:ತೆಲುಗು ಬಿಗ್ ಬಾಸ್ ಮನೆಗೆ ಕನ್ನಡದ ನಟಿ ಐಶ್ವರ್ಯಾ

    ಇತ್ತೀಚಿಗೆ ಸಂದರ್ಶನವೊಂದರಲ್ಲಿ ವಿಜಯ್ ವರ್ಮಾ ಅವರನ್ನು ಮದುವೆಯಾಗುವಂತೆ ಅವರ ಕುಟುಂಬ ಸದಸ್ಯರು ಒತ್ತಡ ಹೇರುತ್ತಾರೆಯೇ ಎಂದು ಕೇಳಲಾಗಿತ್ತು. ಈ ಪ್ರಶ್ನೆಗೆ ವಿಜಯ್ ಹೀಗೊಂದು ಉತ್ತರ ನೀಡಿದ್ದು, ಇದನ್ನು ಕೇಳಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ನಾನು ಮಾರ್ವಾಡಿ ಕುಟುಂಬದವ.. ನಮ್ಮ ಸಮುದಾಯದಲ್ಲಿ, ಗಂಡು ಮಕ್ಕಳ ಮದುವೆಯ ವಯಸ್ಸು 16  ವರ್ಷ. ಹಾಗಾಗಿ ನನ್ನೊಂದಿಗೆ ಎಲ್ಲವೂ ಬಹಳ ಹಿಂದೆಯೇ ಪ್ರಾರಂಭವಾಗಿತ್ತು. ನಾನು ಮದುವೆಯ ವಯಸ್ಸನ್ನು ಮೀರಿತ್ತು. ಬಳಿಕ ನಾನು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟೆ.

    ನಾನು ಈ ಪ್ರಶ್ನೆಗಳ ಬಗ್ಗೆ ಎಂದಿಗೂ ಯೋಚಿಸಲಿಲ್ಲ ಮತ್ತು ನನ್ನ ವೃತ್ತಿಜೀವನದ ಬಗ್ಗೆ ಮಾತ್ರ ಗಮನಹರಿಸಿದೆ. ಆದರೆ ಈಗಲೂ ನನ್ನ ತಾಯಿ ನನ್ನ ಮದುವೆಗೆ ಒತ್ತಾಯಿಸುತ್ತಾರೆ. ಅವರು ಇನ್ನೂ ಪ್ರತಿ ಫೋನ್ ಕರೆಯಲ್ಲಿ ಮದುವೆಯ ಬಗ್ಗೆ ಕೇಳುತ್ತಾರೆ, ಆದರೆ ನಾನು ಅದಕ್ಕೆ ಉತ್ತರ ಕೊಡದೇ ತಪ್ಪಿಸಿಕೊಳ್ಳುತ್ತಿದ್ದೇನೆ. ನಾನು ನನ್ನ ಜೀವನದಲ್ಲಿನ್ನೂ ಬೆಳೆಯುತ್ತಿದ್ದೇನೆ, ಸದ್ಯ ನಾನು ನನ್ನ ಕೆರಿಯರ್ ಕಡೆ ಗಮನ ಕೊಡುತ್ತೇನೆ ಎಂದು ವಿಜಯ್ ವರ್ಮಾ ಹೇಳಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೊದಲ ಡೇಟ್‌ನಲ್ಲಿ ಸೆಕ್ಸ್ ಮಾಡಿದ್ರಾ? ಎಂಬ ಪ್ರಶ್ನೆಗೆ ಬೋಲ್ಡ್ ಆಗಿ ಉತ್ತರಿಸಿದ ವಿಜಯ್- ತಮನ್ನಾ

    ಮೊದಲ ಡೇಟ್‌ನಲ್ಲಿ ಸೆಕ್ಸ್ ಮಾಡಿದ್ರಾ? ಎಂಬ ಪ್ರಶ್ನೆಗೆ ಬೋಲ್ಡ್ ಆಗಿ ಉತ್ತರಿಸಿದ ವಿಜಯ್- ತಮನ್ನಾ

    ಸಿನಿಮಾರಂಗ ಅಂದಮೇಲೆ ಲವ್, ಮದುವೆ, ಬ್ರೇಕಪ್, ಡಿವೋರ್ಸ್, ಸೆಕ್ಸ್ ಎಲ್ಲವೂ ಕಾಮನ್ ಆಗಿ ಬಿಟ್ಟಿದೆ. ಇಂದು ಒಟ್ಟಿಗೆ ಇದ್ದ ಜೋಡಿ, ನಾಳೆ ಕೂಡ ಒಟ್ಟಿಗೆ ಇರುತ್ತಾರೆ ಎಂದು ಹೇಳೋದ್ದಕ್ಕೆ ಸಾಧ್ಯವಿಲ್ಲ. ಬಾಲಿವುಡ್‌ನಲ್ಲಿ ಪೀಕ್‌ನಲ್ಲಿರುವ ಸ್ಟಾರ್ ಜೋಡಿ ಅಂದರೆ ತಮನ್ನಾ ಭಾಟಿಯಾ- ವಿಜಯ್ ವರ್ಮಾ (Vijay Varma) ಅವರಾಗಿದ್ದು, ‘ಲಸ್ಟ್ ಸ್ಟೋರಿಸ್ 2’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸಂದರ್ಶನದಲ್ಲಿ ಮೊದಲ ಭೇಟಿ, ಲವ್, ಸೆಕ್ಸ್ ಎಲ್ಲದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

    ‘ಲಸ್ಟ್ ಸ್ಟೋರಿಸ್ 2’ ಸಿನಿಮಾ ಸೆಟ್‌ನಲ್ಲಿ ವಿಜಯ್ ವರ್ಮಾ- ತಮನ್ನಾ ಭಾಟಿಯಾಗೆ (Tamannah Bhatia) ಪ್ರೇಮಾಂಕುರವಾಯಿತು. ಇಷ್ಟು ದಿನಗಳ ಕಾಲ ನಮ್ಮ ನಡುವೆ ಏನಿಲ್ಲ ಎಂದು ಹೇಳುತ್ತಿದ್ದ ಈ ಜೋಡಿ ಈಗ ತಮ್ಮ ಪ್ರೀತಿಯನ್ನ ಅಧಿಕೃತಗೊಳಿಸಿದ್ದಾರೆ. ಇತ್ತೀಚಿಗೆ ತಮನ್ನಾ, ವಿಜಯ್ ನನ್ನ ಖುಷಿಯ ಖಜಾನೆ ಎಂದು ಹೇಳುವ ಮೂಲಕ ಲವ್ ಬಗ್ಗೆ ಮಾತನಾಡಿದ್ರು. ವಿಜಯ್ ವರ್ಮಾ ಕೂಡ ಪ್ರೀತಿಯಲ್ಲಿ ಇರೋದಾಗಿ ತಿಳಿಸಿದ್ರು. ಈಗ ಇದೇ ‘ಲಸ್ಟ್ ಸ್ಟೋರಿಸ್ 2’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ವಿಜಯ್- ತಮನ್ನಾ ಜೋಡಿ ಭಾಗವಹಿಸುತ್ತಿದ್ದಾರೆ. ಇದನ್ನೂ ಓದಿ:ಮಲಯಾಳಂ ಖ್ಯಾತ ನಟ ಮೋಹನ್ ಲಾಲ್ ಜೊತೆ ಕನ್ನಡಿಗ ಡ್ಯಾನಿಶ್ ನಟನೆ

    ‘ಲಸ್ಟ್ ಸ್ಟೋರಿಸ್ 2’ (Lust Stories 2) ಚಿತ್ರದಲ್ಲಿ ವಿಜಯ್- ತಮನ್ನಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಕಿಸ್ಸಿಂಗ್ ಸೀನ್‌ಗಳ ಝಲಕ್ ಕೂಡ ಇದ್ದು, ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ. ಹಾಗಾಗಿ ಸಂದರ್ಶನಗಳಲ್ಲೂ ಬೋಲ್ಡ್ ಪ್ರಶ್ನೆಗಳನ್ನ ಎದುರಿಸುತ್ತಿದ್ದಾರೆ. ತಮನ್ನಾ, ವಿಜಯ್ ವರ್ಮಾ, ನಿರ್ದೇಶಕ ಸುಜಯ್ ಘೋಶ್ ಸಂದರ್ಶನದಲ್ಲಿ ಭಾಗಿ ಆಗಿದ್ದರು. ಸಂದರ್ಶನದ ಚೌಕಟ್ಟು ಮೀರಿದ ಪ್ರಶ್ನೆಗಳನ್ನು ಕೇಳಲಾಗಿದೆ. ಮೊದಲ ಡೇಟ್ ಹೇಗಿತ್ತು, ಅದರಲ್ಲಿ ಸೆಕ್ಸ್ ಇತ್ತಾ.? ಎಂದು ಪ್ರಶ್ನೆ ಮಾಡಲಾಯಿತು. ತಮನ್ನಾ ಬೋರಿಂಗ್ ಡೇಟ್ ಎಂದು ಉತ್ತರ ನೀಡಿದರು. ಇದಕ್ಕೆ ವಿಜಯ್ ವರ್ಮಾ ಉತ್ತರಿಸಿದ್ದು, ಮೊದಲ ಡೇಟ್‌ನಲ್ಲಿ ಯಾವುದೇ ಕಾಮ ಇರಲಿಲ್ಲ ಎಂದಿದ್ದಾರೆ. ಸುಜಯ್ ಕೂಡ ಇದಕ್ಕೆ ಉತ್ತರಿಸಿದ್ದಾರೆ. ನಾನು ಮಧ್ಯಮ ವರ್ಗದಲ್ಲಿ ಹುಟ್ಟಿದ ವ್ಯಕ್ತಿ. ನಾವು ಎಲ್ಲದಕ್ಕೂ ಹೋರಾಡಬೇಕು. ನಮಗೆ ಯಾವುದೂ ಸುಲಭವಾಗಿ ಲಭ್ಯವಾಗುವುದಿಲ್ಲ ಎಂದು ನಕ್ಕಿದ್ದಾರೆ.

    ತಮನ್ನಾ- ವಿಜಯ್ ವರ್ಮಾ ‘ಲಸ್ಟ್ ಸ್ಟೋರಿಸ್ 2’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಗುರುವಾರ ಜೂನ್ 29ಕ್ಕೆ ಈ ಸಿನಿಮಾ ರಿಲೀಸ್ ಆಗಿದೆ. ಒಂದು ಸಿನಿಮಾದಲ್ಲಿ ನಾಲ್ಕು ಕಥೆಗಳಿವೆ. ಒಟಿಟಿ ಮೂಲಕ ಇದು ರಿಲೀಸ್ ಆಗಿದೆ. ತೆರೆಯ ಮೇಲೆ ವಿಜಯ್- ತಮನ್ನಾ ಜೋಡಿಯನ್ನ ಅಭಿಮಾನಿಗಳು ಮೆಚ್ಚಿಕೊಳ್ಳುತ್ತಾರಾ ಕಾದು ನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಣ್ಣದ ಉಡುಗೆಯಲ್ಲಿ ಮಿರಿಮಿರಿ ಮಿಂಚಿದ ರಶ್ಮಿಕಾ, ತಮನ್ನಾ – ಇಲ್ಲಿದೆ ಕಣ್ಮನ ಸೆಳೆಯುವ Photos

    ಬಣ್ಣದ ಉಡುಗೆಯಲ್ಲಿ ಮಿರಿಮಿರಿ ಮಿಂಚಿದ ರಶ್ಮಿಕಾ, ತಮನ್ನಾ – ಇಲ್ಲಿದೆ ಕಣ್ಮನ ಸೆಳೆಯುವ Photos

    ಪ್ರತಿಷ್ಠಿತ ಐಪಿಎಲ್ (IPL 2023) ಟೂರ್ನಿಯ 16ನೇ ಆವೃತ್ತಿಯು ಅದ್ಧೂರಿಯಾಗಿ ಆರಂಭಗೊಂಡಿತು. ಶುಕ್ರವಾರ ಪಂದ್ಯ ಆರಂಭಕ್ಕೂ ಮುನ್ನ ನಡೆದ ಸಮಾರಂಭದಲ್ಲಿ ಖ್ಯಾತ ನಟಿಯರಾದ ರಶ್ಮಿಕಾ ಮಂದಣ್ಣ (Rashmika Mandanna), ತಮನ್ನಾ ಭಾಟಿಯಾ (Tamannah Bhatia) ಸೊಂಟ ಬಳುಕಿಸಿ ಅಭಿಮಾನಿಗಳನ್ನ ರಂಜಿಸಿದರು.

    ಗುಜರಾತ್ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಹಣಾಹಣಿ ನಡೆಯಿತು. ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ರೋಚಕ ಜಯ ಸಾಧಿಸಿತು. ಪಂದ್ಯ ಆರಂಭಕ್ಕೂ ಮುನ್ನ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಖ್ಯಾತ ನಟಿಯರಾದ ಮಿಲ್ಕಿ ಬ್ಯೂಟಿ ತಮನ್ನಾ- ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸೊಂಟ ಬಳುಕಿಸಿದರು. ಇದನ್ನೂ ಓದಿ: IPL 2023: ಈ ಬಾರಿ ಹೊಸ ರೂಲ್ಸ್‌ಗಳೇನು ಗೊತ್ತಾ? – ಫ್ಯಾನ್ಸ್‌ ತಿಳಿಯಲೇಬೇಕಾದ ಸಂಗತಿಗಳಿವು

    ಬಣ್ಣದ ಉಡುಗೆಯಲ್ಲಿ ಮಿರಿಮಿರಿ ಮಿಂಚಿದ ರಶ್ಮಿಕಾ, ತಮನ್ನಾ ಭರ್ಜರಿ ಡಾನ್ಸ್ ಮಾಡಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ತಮನ್ನಾ ತಮಿಳು ಗೀತೆಗಳಿಗೆ ಹೆಜ್ಜೆ ಹಾಕಿದರೆ, ರಶ್ಮಿಕಾ ಮಂದಣ್ಣ ಪುಷ್ಪಾ ಚಿತ್ರದ `ಸಾಮಿ ಸಾಮಿ’ ಹಾಗೂ ಆಸ್ಕರ್ ಪ್ರಶಸ್ತಿ ಪಡೆದ ಆರ್‌ಆರ್‌ಆರ್ ಚಿತ್ರದ `ನಾಟು ನಾಟು’ ಹಾಡಿಗೆ ಸ್ಪೆಪ್ ಹಾಕಿ ಗಮನ ಸೆಳೆದರು. ಈ ಅದ್ಧೂರಿ ಸಮಾರಂಭದಲ್ಲಿ ಹೆಜ್ಜೆಹಾಕಿದ ಕಣ್ಮನ ಸೆಳೆಯುವ ಚಿತ್ರಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ…. ಇದನ್ನೂ ಓದಿ: IPL ಉದ್ಘಾಟನಾ ಸಮಾರಂಭದಲ್ಲಿ ಸೊಂಟ ಬಳುಕಿಸಲಿದ್ದಾರೆ ರಶ್ಮಿಕಾ ಮಂದಣ್ಣ, ಮಿಲ್ಕಿ ಬ್ಯೂಟಿ ತಮನ್ನಾ

     

     

     

     

     

     

  • IPL ಉದ್ಘಾಟನಾ ಸಮಾರಂಭದಲ್ಲಿ ಸೊಂಟ ಬಳುಕಿಸಲಿದ್ದಾರೆ ರಶ್ಮಿಕಾ ಮಂದಣ್ಣ, ಮಿಲ್ಕಿ ಬ್ಯೂಟಿ ತಮನ್ನಾ

    IPL ಉದ್ಘಾಟನಾ ಸಮಾರಂಭದಲ್ಲಿ ಸೊಂಟ ಬಳುಕಿಸಲಿದ್ದಾರೆ ರಶ್ಮಿಕಾ ಮಂದಣ್ಣ, ಮಿಲ್ಕಿ ಬ್ಯೂಟಿ ತಮನ್ನಾ

    ಮುಂಬೈ: ಮಾ.31 ರಿಂದ ಪ್ರತಿಷ್ಠಿತ 16ನೇ ಐಪಿಎಲ್ (IPL 2023) ಆವೃತ್ತಿ ಆರಂಭಗೊಳ್ಳುತ್ತಿದೆ. ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ನಟಿಯರು ಸೊಂಟ ಬಳುಕಿಸಲಿದ್ದು, ಅಭಿಮಾನಿಗಳನ್ನ ರಂಜಿಸಲಿದ್ದಾರೆ.

    ಗುಜರಾತ್ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಸಂಜೆ 7.30ಕ್ಕೆ ಮೊದಲ ಪಂದ್ಯ ಆರಂಭವಾಗಲಿದೆ. ಇದಕ್ಕೂ ಮುನ್ನ ಸಂಜೆ 6 ಗಂಟೆಗೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಖ್ಯಾತ ನಟಿಯರಾದ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸೊಂಟ ಬಳುಕಿಸಲಿದ್ದಾರೆ. ಇದನ್ನೂ ಓದಿ: ಕ್ರಿಕೆಟ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌; ಮಾ.31 ರಿಂದ IPL ಧಮಾಕ – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

    ಇತ್ತೀಚೆಗೆ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಬಾಲಿವುಡ್ ತಾರೆಯರಾದ ಕಿಯಾರಾ ಅಡ್ವಾಣಿ ಹಾಗೂ ಕೃತಿ ಸನೋನ್ ಭರ್ಜರಿ ಡಾನ್ಸ್ ಮಾಡಿ ಗಮನ ಸೆಳೆದಿದ್ದರು. ಇದೀಗ 16ನೇ ಐಪಿಎಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ತಮನ್ನಾ ಹಾಗೂ ರಶ್ಮಿಕಾ ಭರ್ಜರಿ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಇದರೊಂದಿಗೆ ಸ್ಟಾರ್ ಸಿಂಗರ್ ಅರ್ಜಿತ್ ಸಿಂಗ್ ಸಹ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ನಂತರ ಪಂದ್ಯ ಆರಂಭವಾಗಲಿದೆ ಎಂದು ಐಪಿಎಲ್ ಸಮಿತಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: IPL-2023 – ಗಾಯದಿಂದಾಗಿ ಪಂದ್ಯಗಳಿಂದ ಹೊರಗುಳಿಯಲಿರುವ ಐದು ಆಟಗಾರರು

    ಮಾರ್ಚ್‌ 31 ರಿಂದ ಮೇ 21ರ ವರೆಗೆ ಲೀಗ್‌ ಹಂತದಲ್ಲಿ 18 ಡಬಲ್ ಹೆಡರ್ ಸೇರಿ ಒಟ್ಟು 70 ಲೀಗ್‌ ಪಂದ್ಯಗಳು ನಡೆಯಲಿವೆ. ಕೊನೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ನಾಲ್ಕು ತಂಡಗಳು ಪ್ಲೇ ಆಫ್‌ ಪ್ರವೇಶಿಸಲಿವೆ. ಮೇ 23-26ರ ವರೆಗೆ ಪ್ಲೇ-ಆಫ್‌ ಪಂದ್ಯಗಳು ನಡೆಯಲಿದ್ದು, ಮೇ 28ರಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್‌ ಪಂದ್ಯ ನಡೆಯಲಿದೆ.