Tag: Tamannaah

  • ರಾಧೆಯಾದ ಮಿಲ್ಕಿಬ್ಯೂಟಿ ತಮನ್ನಾ

    ರಾಧೆಯಾದ ಮಿಲ್ಕಿಬ್ಯೂಟಿ ತಮನ್ನಾ

    ಶ್ರೀಕೃಷ್ಣ ಜನ್ಮಾಷ್ಟಮಿ ಬಂದ್ರೆ ಸಾಕು ಸಾಮಾನ್ಯವಾಗಿ ಮಕ್ಕಳಿಗೆ ರಾಧಾ ಕೃಷ್ಣರ ವೇಶ ಹಾಕಿ ತಂದೆತಾಯಿ ಖುಷಿ ಪಡ್ತಾರೆ. ಆದರಿಲ್ಲಿ ಜನ್ಮಾಷ್ಟಮಿ ವಿಶೇಷವಾಗಿ ಖ್ಯಾತ ನಟಿ ತಮನ್ನಾ ಭಾಟಿಯಾ ರಾಧೆಯ ಲುಕ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ರಾಧೆಯ ಲುಕ್‌ನಲ್ಲಿ ಅತ್ಯಂತ ಸುಂದರವಾಗಿ ಕಾಣಿಸ್ಕೊಂಡಿದ್ದಾರೆ ಈ ಗ್ಲಾಮರಸ್ ನಟಿ. ಇನ್ನು ಕೃಷ್ಣನ ವೇಶಧಾರಿಯೂ ರಾಧೆಯ ಜೊತೆಯಲ್ಲಿ ನಿಂತಿರೋದ್ರಿಂದ ಫೋಟೋಶೂಟ್ ಅಂದ ಹೆಚ್ಚಾಗಿದೆ. ಫೋಟೋಶೂಟ್ ವಿಶೇಷ ಏನೆಂದರೆ, ಬೃಂದಾನವನದಲ್ಲಿ ರಾಧಾ ಕೃಷ್ಣರ ಪ್ರೀತಿಯ ಪರಾಕಾಷ್ಟೆ ನೋಡಬಹುದು. ಗೋಪಿಕಾಸ್ತ್ರಿಯರ ಅಂದಚೆಂದವಂತೂ ಕಣ್ಣಿಗೆ ಹಬ್ಬ.

    ಅಂದಹಾಗೆ ತಮನ್ನಾ ಹೀಗೆ ಫೋಟೋಶೂಟ್ ಮಾಡಿಸಿದ್ದು ವಿಶೇಷವಾದ್ರೂ ಇನ್ನೊಂದು ವಿಶೇಷ ಸಂಗತಿ ಹಂಚಿಕೊಂಡಿದ್ದಾರೆ ಮಿಲ್ಕೀಬ್ಯೂಟಿ. ಈ ಫೋಟೋಶೂಟ್ ಹಾಗೂ ಅದರ ಜಾಗೃತಿ ಬಗ್ಗೆ ಬರವಣಿಗೆಯ ಮೂಲಕ ಮಾಹಿತಿ ಕೊಟ್ಟ ರೀತಿ ಗಮನಾರ್ಹವಾಗಿದೆ. ಯಾಕಂದ್ರೆ ತಮನ್ನಾ ಹೇಳ್ತಾರೆ `ತಮ್ಮ 18 ವರ್ಷಗಳ ವೃತ್ತಿಯಲ್ಲಿ ಇದುವೇ ತಮಗೆ ಅತ್ಯಂತ ಖುಷಿ ಕೊಟ್ಟ ಅಭಿಯಾನ’ ಎಂದು. ಹಾಗಾದ್ರೆ ಅಂಥದ್ದೇನು ವಿಶೇಷ ಅಡಗಿದೆ ಈ ಫೋಟೋಶೂಟ್‌ನಲ್ಲಿ ಅನ್ನೋದಾದ್ರೆ ರಾಧೆಯ ಪಾತ್ರಧಾರಿಯಾಗಿ ಕಾಣಿಸ್ಕೊಂಡಿದ್ದೇ ವಿಶೇಷ ಅನ್ನೋದಕ್ಕೆ ಪದಗಳಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ ಈ ನಟಿ.

    ರಾಧೆಯನ್ನು ಸಾಕಾರಗೊಳಿಸುವಾಗ ತಮನ್ನಾ ಅಂತೀದ್ರಿಯ ಸಂಪರ್ಕವನ್ನು ಅನುಭವಿಸಿದಂತೆ ಭಾಸವಾದರಂತೆ. ಇದರ ಹಿಂದೆ ಒಂದು ದೈವಿಕ ಶಕ್ತಿ ಇದ್ದಂತೆ ಕಂಡುಕೊಂಡರಂತೆ, ಹೀಗಾಗಿ ಈ ಅಭಿಯಾನದ ದೃಶ್ಯದಲ್ಲಿ ದೈವತ್ವವು ಸ್ಪಷ್ಟವಾಗಿದೆ ಎನ್ನುತ್ತಾರೆ ತಮನ್ನಾ.

    ತಮನ್ನಾ ಇದುವರೆಗೂ ಯಾವುದೇ ದೇವತೆಯ ಪಾತ್ರದಲ್ಲಿ ಅಭಿನಯಿಸಿಲ್ಲ. ಇದೀಗ ರಾಧೆಯ ಪಾತ್ರವಾಗಿ ಜೀವಿಸಿ ಅತೀಂದ್ರಿಯ ಶಕ್ತಿಯ ಪ್ರಭಾವಕ್ಕೆ ಒಳಗಾದವರಂತೆ ಬರೆದುಕೊಂಡಿದ್ದಾರೆ. ಫೋಟೋಗಳಲ್ಲೂ ತಮನ್ನಾರ ಸ್ನಿಗ್ಧ ಸೌಂದರ್ಯ ಕಾಣುತ್ತೆ. ಶಕ್ತಿ ಸ್ವರೂಪಿಣಿ ಅತಿಸೌಂದರ್ಯವತಿ ರಾಧೆಯ ಅಂದ ಚೆಂದವನ್ನ ಪ್ರತಿರೂಪಿಸುವ ಪ್ರಯತ್ನ ಮಾಡಿದ್ದಾರೆ ತಮನ್ನಾ. ಹೀಗಾಗಿ ತಮ್ಮ 18 ವರ್ಷದ ಕರಿಯರ್‌ನಲ್ಲಿ ಇದುವೇ ಉತ್ತಮ ಚಿತ್ರೀಕರಣ ಎಂದಿದ್ದಾರೆ ತಮನ್ನಾ.

    ಅಂದಹಾಗೆ ತಮನ್ನಾಗೆ ಅವರನ್ನ ಗ್ಲಾಮರ್ ಅವತಾರದಲ್ಲಿ ತೋರಿಸುವ ಪಾತ್ರಗಳೇ ಹೆಚ್ಚಾಗಿ ಬರ್ತವೆ. ಆದರೀಗ ಇಂಥಹ ಗ್ಲಾಮರ್ ಗೊಂಬೆಗೆ ರಾಧಾಮಾತೆಯ ವೇಶ ಹಾಕಿಸಲಾಗಿದ್ದು ಆಕೆಯ ಫ್ಯಾನ್ಸ್ ಕೂಡ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಬಾಯ್ ಫ್ರೆಂಡ್ ಜೊತೆ ‘ಲಂಡನ್’ನಲ್ಲಿ ಕಾಣಿಸಿಕೊಂಡ ತಮನ್ನಾ

    ಬಾಯ್ ಫ್ರೆಂಡ್ ಜೊತೆ ‘ಲಂಡನ್’ನಲ್ಲಿ ಕಾಣಿಸಿಕೊಂಡ ತಮನ್ನಾ

    ಮಿಲ್ಕಿ ಬ್ಯೂಟಿ ತಮನ್ನಾ ಲಂಡನ್ ಗೆ ಹಾರಿದ್ದಾರೆ. ಹೊಸ ವರ್ಷವನ್ನು ಬರಮಾಡಿಕೊಳ್ಳಲು ಅವರು ಬಾಯ್ ಫ್ರೆಂಡ್ ಜೊತೆ ವಿಮಾನ ಏರಿದ್ದಾರೆ. ಲಂಡನ್ (London) ನಲ್ಲಿ ಸುತ್ತಾಡುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಜೊತೆಗೆ ಇತ್ತೀಚಿನ ದಿನಗಳಲ್ಲಿ ಈ ಜೋಡಿಯ ಸುತ್ತಾಟವೂ ಹೆಚ್ಚಾಗಿದೆ. ತಮನ್ನಾ (Tamannaah) ಮತ್ತು ಬಾಲಿವುಡ್ ನಟ ವಿಜಯ್ ವರ್ಮಾ (Vijay Varma) ಲವ್ವಿಡವ್ವಿ ವಿಚಾರ ಗುಟ್ಟಿನ ಸಂಗತಿಯೇನೂ ಅಲ್ಲ. ಇಬ್ಬರೂ ಒಟ್ಟೊಟ್ಟಿಗೆ ಪ್ರವಾಸ ಮಾಡುತ್ತಿದ್ದಾರೆ, ಹಲವಾರು ಪ್ರಾಜೆಕ್ಟ್ ಗಳಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಇದೀಗ ಈ ಜೋಡಿ ಹೊಸ ಜೀವನಕ್ಕೆ ಕಾಲಿಡಲು ನಿರ್ಧರಿಸಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. 2024 ಫೆಬ್ರವರಿಯಲ್ಲಿ ಅವರು ಮದುವೆ (Marriage) ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಮದುವೆ ವಿಚಾರವನ್ನು ಈ ಜೋಡಿ ಅಧಿಕೃತವಾಗಿ ಹೇಳದೇ ಇದ್ದರೂ, ಮಾಧ್ಯಮಗಳ ಜೊತೆ ಮಾತನಾಡಿರುವ ವಿಜಯ್ ವರ್ಮಾ, ‘ನನಗೆ ತಮನ್ನಾ ಮೇಲೆ ಮತ್ತಷ್ಟು ಪ್ರೀತಿಯಾಗಿದೆ (Love). ಹೆಚ್ಚೆಚ್ಚು ಪ್ರೀತಿ  ಮೂಡುತ್ತಿದೆ’ ಎಂದು ಹೇಳುವ ಮೂಲಕ ತಮ್ಮಿಬ್ಬರ ನಡುವಿನ ಡೇಟಿಂಗ್ ಅನ್ನು ಖಚಿತ ಪಡಿಸಿದ್ದಾರೆ.

    ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ವರ್ಮಾ ಜೊತೆ ತಮನ್ನಾ ಲಿಪ್ ಲಾಕ್ ಮಾಡಿಕೊಂಡ ವೀಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ವಿಜಯ್‌ ವರ್ಮಾ ಜೊತೆಗಿನ ಡೇಟಿಂಗ್ (Dating) ವಿಚಾರವನ್ನು ತಳ್ಳಿ ಹಾಕಿದ್ದರು ತಮನ್ನಾ. ನಾವಿಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿದ್ದೇವೆ. ಇಂಥ ವದಂತಿಗಳು ಎಲ್ಲಾ ಕಡೆ ಹರಿದಾಡುತ್ತಲೇ ಇರುತ್ತದೆ. ಇಂಥ ವದಂತಿಗಳ ಬಗ್ಗೆ ಪ್ರತಿಕ್ರಿಯೆ ನೀಡುವುದು ಮತ್ತು ಸ್ಪಷ್ಟೀಕರಣ ಕೊಡುವ ಅನಿವಾರ್ಯತೆ ಇಲ್ಲ. ಅದರ ಬಗ್ಗೆ ನಾನು ಹೆಚ್ಚು ಏನು ಹೇಳಲ್ಲ ಎಂದಿದ್ದರು.

    ಆದರೆ, ನಂತರದ ದಿನಗಳಲ್ಲಿ ಡೇಟಿಂಗ್ ಕುರಿತು ಭಿನ್ನ ಪ್ರತಿಕ್ರಿಯೆ ನೀಡಿದ್ದರು ತಮನ್ನಾ. ವಿಜಯ್ ವರ್ಮಾ ಜೊತೆ ತಾವು ಲವ್ ಮಾಡುತ್ತಿರುವ ವಿಚಾರವನ್ನು ಒಪ್ಪಿಕೊಂಡಿದ್ದರು. ತಮನ್ನಾ ಮತ್ತು ವಿಜಯ್ ವರ್ಮಾ ಇಬ್ಬರೂ ʻಲಸ್ಟ್ ಸ್ಟೋರಿ -2′ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾ ಸೆಟ್‌ನಲ್ಲಿ ಮೊದಲು ಭೇಟಿಯಾಗಿದ್ದರು. ಅಲ್ಲಿಂದ ಪ್ರಾರಂಭವಾದ ಇವರ ಸ್ನೇಹ ಬಳಿಕ ಪ್ರೀತಿಯಾಗಿದೆ ಎಂದು ಹೇಳಿದ್ದರು. ಅದರ ಮುಂದುವರೆದ ಭಾಗವಾಗಿ ಹೊಸ ವರ್ಷಾಚರಣೆ ವೇಳೆ ಇಬ್ಬರೂ ತಬ್ಬಿಕೊಂಡು, ಕಿಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಪ್ರೇಮಿಗಳ ದಿನದಂದು ತಮನ್ನಾಗೆ ವಿಜಯ್ ವರ್ಮಾ ವಿಶೇಷವಾಗಿ ವಿಶ್ ಮಾಡಿದ್ದರು. ತನ್ನ ಪ್ರೇಮಿಯ ಜೊತೆಗಿನ ಫೋಟೋವನ್ನು ವಿಜಯ್ ವರ್ಮಾ ಶೇರ್ ಮಾಡಿದ್ದರು.  ವಿಜಯ್ ಅವರು ಕಾಲೊಂದರ ಫೋಟೋವನ್ನು ಶೇರ್ ಮಾಡಿ ಹಾರ್ಟ್ ಇಮೋಜಿ ಇರಿಸಿದ್ದರು. ಅದು ತಮನ್ನಾ ಕಾಲು ಎಂದು ಹೇಳಲಾಗಿತ್ತು. ತಮನ್ನಾ ಧರಿಸಿದ್ದ ಶೋ ಮತ್ತು ಜರ್ಕಿನ್ ಫೋಟೋಗಳನ್ನು ಶೇರ್ ಮಾಡಿ ಇದು ಪಕ್ಕಾ ತಮನ್ನಾ ಅವರ ಕಾಲು ಎಂದಿದ್ದರು.

    ವಿಜಯ್ ವರ್ಮಾ ತಮ್ಮ ಪ್ರೀತಿಯ ವಿಷಯದಲ್ಲಿ ಸ್ಪಷ್ಟವಾಗಿದ್ದರೂ, ತಮನ್ನಾ ಮಾತ್ರ ಅದನ್ನು ಹೇಳಿಕೊಳ್ಳಲು ತಯಾರು ಇರಲಿಲ್ಲ. ಯಾರೇ ಕೇಳಿದರೂ ಅದನ್ನು ಗಾಸಿಪ್ ಎಂದು ತೇಲಿಸಿ ಬಿಡುತ್ತಿದ್ದರು. ನಂತರ ವಿಜಯ್ ಜೊತೆಗಿನ ಪ್ರೀತಿಯನ್ನು ಒಪ್ಪಿಕೊಂಡಿದ್ದರು. ಒಂದು ಸಲ ಒಪ್ಪಿಕೊಂಡು ಮತ್ತೊಂದು ಸಲ ಗಾಸಿಪ್ ಎಂದು ಹೇಳುತ್ತಾ ಡೇಟಿಂಗ್ ವಿಚಾರದಲ್ಲಿ ಇಬ್ಬರೂ ಸದಾ ಸುದ್ದಿಯಲ್ಲಿರುತ್ತಾರೆ ಈ ಸ್ಟಾರ್ ಜೋಡಿ.

  • ಪ್ರೇಮಿಗಳ ದಿನದಂದು ನಟಿ ತಮನ್ನಾ ಮದುವೆ

    ಪ್ರೇಮಿಗಳ ದಿನದಂದು ನಟಿ ತಮನ್ನಾ ಮದುವೆ

    ಕ್ಷಿಣದ ಖ್ಯಾತ ನಟಿ ತಮನ್ನಾ (Tamannaah) ಮತ್ತು ಬಾಲಿವುಡ್ ನಟ ವಿಜಯ್ ವರ್ಮಾ (Vijay Varma) ಲವ್ವಿಡವ್ವಿ ವಿಚಾರ ಗುಟ್ಟಿನ ಸಂಗತಿಯೇನೂ ಅಲ್ಲ. ಇಬ್ಬರೂ ಒಟ್ಟೊಟ್ಟಿಗೆ ಪ್ರವಾಸ ಮಾಡುತ್ತಿದ್ದಾರೆ, ಹಲವಾರು ಪ್ರಾಜೆಕ್ಟ್ ಗಳಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಇದೀಗ ಈ ಜೋಡಿ ಹೊಸ ಜೀವನಕ್ಕೆ ಕಾಲಿಡಲು ನಿರ್ಧರಿಸಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. 2024 ಫೆಬ್ರವರಿಯಲ್ಲಿ ಅವರು ಮದುವೆ (Marriage) ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಮದುವೆ ವಿಚಾರವನ್ನು ಈ ಜೋಡಿ ಅಧಿಕೃತವಾಗಿ ಹೇಳದೇ ಇದ್ದರೂ, ಮಾಧ್ಯಮಗಳ ಜೊತೆ ಮಾತನಾಡಿರುವ ವಿಜಯ್ ವರ್ಮಾ, ‘ನನಗೆ ತಮನ್ನಾ ಮೇಲೆ ಮತ್ತಷ್ಟು ಪ್ರೀತಿಯಾಗಿದೆ (Love). ಹೆಚ್ಚೆಚ್ಚು ಪ್ರೀತಿ  ಮೂಡುತ್ತಿದೆ’ ಎಂದು ಹೇಳುವ ಮೂಲಕ ತಮ್ಮಿಬ್ಬರ ನಡುವಿನ ಡೇಟಿಂಗ್ ಅನ್ನು ಖಚಿತ ಪಡಿಸಿದ್ದಾರೆ.

    ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ವರ್ಮಾ ಜೊತೆ ತಮನ್ನಾ ಲಿಪ್ ಲಾಕ್ ಮಾಡಿಕೊಂಡ ವೀಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ವಿಜಯ್‌ ವರ್ಮಾ ಜೊತೆಗಿನ ಡೇಟಿಂಗ್ (Dating) ವಿಚಾರವನ್ನು ತಳ್ಳಿ ಹಾಕಿದ್ದರು ತಮನ್ನಾ. ನಾವಿಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿದ್ದೇವೆ. ಇಂಥ ವದಂತಿಗಳು ಎಲ್ಲಾ ಕಡೆ ಹರಿದಾಡುತ್ತಲೇ ಇರುತ್ತದೆ. ಇಂಥ ವದಂತಿಗಳ ಬಗ್ಗೆ ಪ್ರತಿಕ್ರಿಯೆ ನೀಡುವುದು ಮತ್ತು ಸ್ಪಷ್ಟೀಕರಣ ಕೊಡುವ ಅನಿವಾರ್ಯತೆ ಇಲ್ಲ. ಅದರ ಬಗ್ಗೆ ನಾನು ಹೆಚ್ಚು ಏನು ಹೇಳಲ್ಲ ಎಂದಿದ್ದರು.

    ಆದರೆ, ನಂತರದ ದಿನಗಳಲ್ಲಿ ಡೇಟಿಂಗ್ ಕುರಿತು ಭಿನ್ನ ಪ್ರತಿಕ್ರಿಯೆ ನೀಡಿದ್ದರು ತಮನ್ನಾ. ವಿಜಯ್ ವರ್ಮಾ ಜೊತೆ ತಾವು ಲವ್ ಮಾಡುತ್ತಿರುವ ವಿಚಾರವನ್ನು ಒಪ್ಪಿಕೊಂಡಿದ್ದರು. ತಮನ್ನಾ ಮತ್ತು ವಿಜಯ್ ವರ್ಮಾ ಇಬ್ಬರೂ ʻಲಸ್ಟ್ ಸ್ಟೋರಿ -2′ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾ ಸೆಟ್‌ನಲ್ಲಿ ಮೊದಲು ಭೇಟಿಯಾಗಿದ್ದರು. ಅಲ್ಲಿಂದ ಪ್ರಾರಂಭವಾದ ಇವರ ಸ್ನೇಹ ಬಳಿಕ ಪ್ರೀತಿಯಾಗಿದೆ ಎಂದು ಹೇಳಿದ್ದರು. ಅದರ ಮುಂದುವರೆದ ಭಾಗವಾಗಿ ಹೊಸ ವರ್ಷಾಚರಣೆ ವೇಳೆ ಇಬ್ಬರೂ ತಬ್ಬಿಕೊಂಡು, ಕಿಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಪ್ರೇಮಿಗಳ ದಿನದಂದು ತಮನ್ನಾಗೆ ವಿಜಯ್ ವರ್ಮಾ ವಿಶೇಷವಾಗಿ ವಿಶ್ ಮಾಡಿದ್ದರು. ತನ್ನ ಪ್ರೇಮಿಯ ಜೊತೆಗಿನ ಫೋಟೋವನ್ನು ವಿಜಯ್ ವರ್ಮಾ ಶೇರ್ ಮಾಡಿದ್ದರು.  ವಿಜಯ್ ಅವರು ಕಾಲೊಂದರ ಫೋಟೋವನ್ನು ಶೇರ್ ಮಾಡಿ ಹಾರ್ಟ್ ಇಮೋಜಿ ಇರಿಸಿದ್ದರು. ಅದು ತಮನ್ನಾ ಕಾಲು ಎಂದು ಹೇಳಲಾಗಿತ್ತು. ತಮನ್ನಾ ಧರಿಸಿದ್ದ ಶೋ ಮತ್ತು ಜರ್ಕಿನ್ ಫೋಟೋಗಳನ್ನು ಶೇರ್ ಮಾಡಿ ಇದು ಪಕ್ಕಾ ತಮನ್ನಾ ಅವರ ಕಾಲು ಎಂದಿದ್ದರು.

    ವಿಜಯ್ ವರ್ಮಾ ತಮ್ಮ ಪ್ರೀತಿಯ ವಿಷಯದಲ್ಲಿ ಸ್ಪಷ್ಟವಾಗಿದ್ದರೂ, ತಮನ್ನಾ ಮಾತ್ರ ಅದನ್ನು ಹೇಳಿಕೊಳ್ಳಲು ತಯಾರು ಇರಲಿಲ್ಲ. ಯಾರೇ ಕೇಳಿದರೂ ಅದನ್ನು ಗಾಸಿಪ್ ಎಂದು ತೇಲಿಸಿ ಬಿಡುತ್ತಿದ್ದರು. ನಂತರ ವಿಜಯ್ ಜೊತೆಗಿನ ಪ್ರೀತಿಯನ್ನು ಒಪ್ಪಿಕೊಂಡಿದ್ದರು. ಒಂದು ಸಲ ಒಪ್ಪಿಕೊಂಡು ಮತ್ತೊಂದು ಸಲ ಗಾಸಿಪ್ ಎಂದು ಹೇಳುತ್ತಾ ಡೇಟಿಂಗ್ ವಿಚಾರದಲ್ಲಿ ಇಬ್ಬರೂ ಸದಾ ಸುದ್ದಿಯಲ್ಲಿರುತ್ತಾರೆ ಈ ಸ್ಟಾರ್ ಜೋಡಿ.

  • ಕಾವಾಲಯ್ಯ ಅತ್ಯಂತ ಕೊಳಕು ಡಾನ್ಸ್: ಹೆಸರಾಂತ ನಟ ಕಿಡಿಕಿಡಿ

    ಕಾವಾಲಯ್ಯ ಅತ್ಯಂತ ಕೊಳಕು ಡಾನ್ಸ್: ಹೆಸರಾಂತ ನಟ ಕಿಡಿಕಿಡಿ

    ಜೈಲರ್ ಸಿನಿಮಾದ ‘ಕಾ ಕಾವಾಲಯ್ಯ’ (Kavalaiah) ಗೀತೆ ಸೂಪರ್ ಹಿಟ್ ಆಗಿತ್ತು. ತಮನ್ನಾ (Tamannaah) ಈ ಹಾಡಿಗೆ ಮಾದಕ ರೀತಿಯಲ್ಲಿ ಡಾನ್ಸ್ ಮಾಡಿದ್ದರು. ಸಖತ್ ಹಾಟ್ ಹಾಟ್ ಆಗಿಯೇ ಕಂಡಿದ್ದರು. ಹಾಡು ವೈರಲ್ ಆಗುತ್ತಿದ್ದಂತೆಯೇ ಅನೇಕರು ಈ ಹಾಡಿಗೆ ರೀಲ್ಸ್ ಮಾಡಿದ್ದರು. ಈ ಹಾಡಿನ ಬಗ್ಗೆ ತಮಿಳಿನ ಹೆಸರಾಂತ ಹಿರಿಯ ನಟ ಮನ್ಸೂರ್ ಅಲಿ ಖಾನ್ (Mansoor Ali Khan) ಟೀಕಿಸಿದ್ದಾರೆ. ಇದು ಅತ್ಯಂತ ಕೆಟ್ಟ ಡಾನ್ಸ್ ಎಂದು ಹೇಳಿದ್ದಾರೆ.

    ಮನ್ಸೂರ್ ಆಡಿದ ಈ ಮಾತು ವಿವಾದಕ್ಕೆ ಕಾರಣವಾಗಿದೆ. ತಮನ್ನಾ ಈ ಹಾಡಿನ ಅರ್ಥವನ್ನು ತಮ್ಮ ನೃತ್ಯದ ಮೂಲಕ ಹಾಳು ಮಾಡಿದ್ದಾರೆ ಎನ್ನುವ ಖಾನ್ ಅವರ ಮಾತು ವೈರಲ್ ಆಗಿದೆ. ಕೆಲವರು ಖಾನ್ ಪರವಾಗಿ ಕಾಮೆಂಟ್ ಮಾಡುತ್ತಿದ್ದರೆ, ಇನ್ನೂ ಕೆಲವರು ಖಾನ್ ವಿರೋಧಿಸಿಯೂ ತಮ್ಮ ಅಭಿಪ್ರಾಯವನ್ನು ದಾಖಲಿಸುತ್ತಿದ್ದಾರೆ.

    ಜೈಲರ್ ಭರ್ಜರಿ ಸಕ್ಸಸ್

    ಜೈಲರ್ ಸಿನಿಮಾ ಭರ್ಜರಿ ಗೆಲುವು (Success) ಸಾಧಿಸಿದೆ. ಬಾಕ್ಸ್ ಆಫೀಸಿನಲ್ಲಿ ಭಾರೀ ಕಲೆಕ್ಷನ್ ಮಾಡಿದೆ. ಹೀಗಾಗಿ ನಿರ್ಮಾಪಕ ಕಲಾನಿಧಿ ಮಾರನ್, ಭರ್ಜರಿ ಉಡುಗೊರೆಗಳನ್ನು ಚಿತ್ರತಂಡಕ್ಕೆ ನೀಡುತ್ತಿದ್ದಾರೆ. ಚಿತ್ರದ ನಾಯಕ, ನಿರ್ದೇಶಕ, ಸಂಗೀತ ನಿರ್ದೇಶಕರಿಗೆ ಈಗಾಗಲೇ ಕಾರುಗಳ ಉಡುಗೊರೆ (Gift) ನೀಡಿರುವ ನಿರ್ಮಾಪಕರು, ಇದೀಗ ಚಿತ್ರತಂಡದಲ್ಲಿ ಕೆಲಸ ಮಾಡಿದ ಮುನ್ನೂರಕ್ಕೂ ಹೆಚ್ಚು ಜನರಿಗೆ ಬಂಗಾರದ ಉಡುಗೊರೆ ನೀಡಿದೆ. ಸಕ್ಸಸ್ ಪಾರ್ಟಿಯಲ್ಲಿ ಚಿನ್ನವನ್ನು ಗಿಫ್ಟ್ ಆಗಿ ನೀಡಿದ್ದಾರೆ.

    ಈ ಹಿಂದೆ ನಿರ್ಮಾಪಕ ಕಲಾನಿಧಿ ಮಾರನ್ (Kalanidhi Maran), ನಟ ರಜನಿಕಾಂತ್ (Rajinikanth) ಅವರಿಗೆ ದುಬಾರಿ ಉಡುಗೊರೆಯನ್ನೇ ನೀಡಿದ್ದರು. ಈ ಸಿನಿಮಾಗಾಗಿ ರಜನಿ 250 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದ್ದು, ಮೊದಲ ಕಂತಾಗಿ 150 ಕೋಟಿ ರೂಪಾಯಿ ಸಂದಾಯವಾಗಿತ್ತು. ಎರಡನೇ ಕಂತು ನೂರು ಕೋಟಿ ರೂಪಾಯಿ ಮತ್ತು ಬಿಎಂಡಬ್ಲೂ ಎಕ್ಸ್ 7 ದುಬಾರಿ ಕಾರನ್ನು (Car) ಉಡುಗೊರೆಯಾಗಿ ನೀಡಲಾಗಿದೆ. ಈ ಕಾರಿನ ಬೆಲೆ  1.50 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.

    ಜೈಲರ್ (Jailer) ಸಿನಿಮಾ ಈಗಲೂ ಬಾಕ್ಸ್ ಆಫೀಸಿನಲ್ಲಿ ಈಗಲೂ ಸದ್ದು ಮಾಡುತ್ತಿದೆ. ಹಲವು ವರ್ಷಗಳ ನಂತರ ರಜನಿ ಇಂಥದ್ದೊಂದು ಗೆಲುವನ್ನು (Success) ತಮ್ಮದಾಗಿಸಿಕೊಂಡಿದ್ದಾರೆ. ಹಾಗಾಗಿ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಸಂಭ್ರಮ ತಂದಿದೆ. ಈ ಖುಷಿಯನ್ನು ಅವರು ಚಿತ್ರತಂಡದ ಜೊತೆಗೆ ಹಂಚಿಕೊಂಡಿದ್ದರು. ಜೈಲರ್ ಸಿನಿಮಾದ ಚಿತ್ರತಂಡದ ಜೊತೆಗೆ ಕೇಕ್ ಕತ್ತರಿಸಿ ಸಂಭ್ರಮಸಿರುವ ರಜನಿಕಾಂತ್, ಸಿನಿಮಾಗಾಗಿ ದುಡಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದರು. ಅಲ್ಲದೇ ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಈ ಸಂದರ್ಭದಲ್ಲಿ ಅವರು ಹೇಳಿದ್ದರು. ಸ್ವತಃ ತಾವೇ ಎಲ್ಲರಿಗೂ ಕೇಕ್ (Cake)ತಿನ್ನಿಸಿದ್ದರು.

    ರಜನಿಕಾಂತ್ ಮೇನಿಯಾ ನಿಲ್ಲುತ್ತಿಲ್ಲ. ಒಂದಲ್ಲ ಎರಡಲ್ಲ. ಭರ್ತಿ ಹದಿನಾರು ದಿನಗಳು ಮುಗಿದಿದೆ. ಆದರೂ ಜನರು ಚಿತ್ರಮಂದಿರಕ್ಕೆ ನುಗ್ಗುತ್ತಿದ್ದಾರೆ. ನೋಡಿದವರೇ ಮತ್ತೆ ಮತ್ತೆ ನೋಡುತ್ತಿದ್ದಾರೆ. ರಜನಿ ಯುಗ ಮುಗಿಯಿತು ಎಂದವರಿಗೆ ಕಪಾಳಕ್ಕೆ ಬಾರಿಸುವಂಥ ಉತ್ತರ ಕೊಟ್ಟಿದೆ ಜೈಲರ್. ವಿಶ್ವದಾದ್ಯಂತ ಇಲ್ಲಿವರೆಗೆ 600 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ.

    ಮೊದಲ ದಿನ ಒಟ್ಟು 500 ಪ್ರದರ್ಶನ ಕಂಡಿತ್ತು ಜೈಲರ್. ಮೊದಲ ವಾರದ ನಂತರ ಪ್ರದರ್ಶನ ಸಂಖ್ಯೆ ಕಮ್ಮಿ ಆಗಬಹುದು. ಹೀಗಂತ ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಐದು ನೂರರಲ್ಲಿ ಒಂದೇ ಒಂದು ಪ್ರದರ್ಶನ ಕಮ್ಮಿಯಾಗಿಲ್ಲ. ಜನರು ಸಿನಿಮಾ ನೋಡುವುದನ್ನು ನಿಲ್ಲಿಸುತ್ತಿಲ್ಲ. ರಜನಿ ಅಷ್ಟೊಂದು ಮೋಡಿ ಮಾಡಿದ್ದಾರೆ. ಏನಾದರಾಗಲಿ  ಹಳೇ ರಜನಿಕಾಂತ್ ಮತ್ತೆ ಸಿಕ್ಕಿದ್ದಾರೆ. ಫ್ಯಾನ್ಸ್ ಕೇಕೆ ಹಾಕುತ್ತಿದ್ದಾರೆ. ನಿರ್ದೇಶಕ ನೆಲ್ಸನ್ ನಿರ್ದೇಶನಕ್ಕೆ ಭೇಷ್ ಎಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಳಿವಯಸ್ಸಿನವರ ಜೊತೆ ತಮನ್ನಾ ನಟನೆ: ಟ್ರೋಲ್ ಮಾಡಿದವರ ವಿರುದ್ಧ ನಟಿ ಗರಂ

    ಇಳಿವಯಸ್ಸಿನವರ ಜೊತೆ ತಮನ್ನಾ ನಟನೆ: ಟ್ರೋಲ್ ಮಾಡಿದವರ ವಿರುದ್ಧ ನಟಿ ಗರಂ

    ಕ್ಷಿಣದ ಖ್ಯಾತ ತಾರೆ ತಮನ್ನಾ (Tamannaah) ನಟನೆಯ ವೆಬ್ ಸರಣಿ ಮತ್ತು ಕಾವಾಲಾ ಹಾಡು ಫೇಮಸ್ ಆಗುತ್ತಿದ್ದಂತೆಯೇ ಅವರನ್ನು ಸಾಕಷ್ಟು ರೀತಿಯಲ್ಲಿ ನೆಗೆಟಿವ್ ಟ್ರೋಲ್ (Troll)ಮಾಡಲಾಗುತ್ತಿದೆ. ಅದರಲ್ಲಿ ತಮಗಿಂತ ಎರಡು ಪಟ್ಟು ವಯಸ್ಸಿನ ನಟರ ಜೊತೆ ತಮನ್ನಾ ತೆರೆ ಹಂಚಿಕೊಳ್ಳುತ್ತಿದ್ದಾರೆ ಎಂದು ಆಡಿಕೊಳ್ಳಲಾಗುತ್ತಿದೆ. ಇಳಿವಯಸ್ಸಿನವರ ಜೊತೆ ಪಾತ್ರ ಮಾಡಲು ತಮನ್ನಾ ಒಪ್ಪಿಕೊಳ್ಳುವುದಕ್ಕೆ ಕಾರಣವೇನು? ಎಂದು ಕೇಳಲಾಗುತ್ತಿದೆ. ಅದಕ್ಕೆ ತಮನ್ನಾ ತಮ್ಮದೇ ಆದ ರೀತಿಯಲ್ಲಿ ಉತ್ತರ ಕೊಟ್ಟಿದ್ದಾರೆ.

    ಮಾಧ್ಯಮವೊಂದರ ಜೊತೆ ಮಾತನಾಡಿದ ತಮನ್ನಾ, ‘ಸಿನಿಮಾದಲ್ಲಿ ವಯಸ್ಸಿನ ಅಂತರದ ಪಾತ್ರಗಳೇ ಇರಬಾರದಾ? ನಾನು ಪಾತ್ರ ಮಾಡುತ್ತಿದ್ದೇನೆ, ಅವರ ಜೊತೆ ಸಂಸಾರವಲ್ಲ’ ಎಂದು ಖಡಕ್ಕಾಗಿಯೇ ಉತ್ತರಿಸಿದ್ದಾರೆ. ಅಲ್ಲದೇ, ಹಾಲಿವುಡ್ ನಟ ಟಾಮ್ ಕ್ರೂಸ್ ಅವರನ್ನು ನೆನಪಿಸಿಕೊಂಡಿದ್ದಾರೆ. ಅವರು ಈ ವಯಸ್ಸಿನಲ್ಲೂ ಅದ್ಭುತ ಸ್ಟಂಟ್ ಮಾಡುತ್ತಾರೆ. ಅವರ ಹಾಗೆ ಆ ವಯಸ್ಸಿನಲ್ಲಿ ನಾನೂ ಮಾಡಬೇಕು’ ಎಂದಿದ್ದಾರೆ. ಇದನ್ನೂ ಓದಿ:ನಂದಿನಿ ಜಾಹೀರಾತಿಗೆ ಯಾವುದೇ ಸಂಭಾವನೆ ಪಡೆಯಲ್ಲ: ನಟ ಶಿವರಾಜ್ ಕುಮಾರ್

    ಲಸ್ಟ್ ಸ್ಟೋರಿಸ್ 2, ಜೀ ಕರ್ದಾ ಪ್ರಾಜೆಕ್ಟ್‌ನಲ್ಲಿ ನಟಿ ತಮನ್ನಾ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಸಂಚಲನ ಮೂಡಿಸಿದ್ದರು. ತಮನ್ನಾ ಹಸಿ ಬಿಸಿ ದೃಶ್ಯಕ್ಕೆ ಕೆಲವರು ವಿರೋಧಿಸಿದ್ರೆ, ಇನ್ನೂ ಕೆಲವರು ಮೆಚ್ಚುಗೆ ಸೂಚಿಸಿದ್ದರು. ಇತ್ತೀಚಿಗೆ ರಜನಿಕಾಂತ್ (Rajanikanth) ನಟನೆಯ ‘ಜೈಲರ್’ ಸಿನಿಮಾದಲ್ಲಿ ತಮನ್ನಾ ಸಾಥ್ ನೀಡಿದ್ದರು. ಚಿತ್ರದ ಕಾವಾಲಾ ಹಾಡಿಗೆ ಅದ್ಭುತವಾಗಿ ಹೆಜ್ಜೆಗೆ ಹಾಕಿದ್ದರು. ಅವರ ಎಕ್ಸ್ಪ್ರೇಷನ್‌ಗೆ ಪಡ್ಡೆಹುಡುಗರು ಕಳೆದು ಹೋಗಿದ್ದರು.‌

    ಅಷ್ಟರ ಮಟ್ಟಿಗೆ ತಮನ್ನಾ ‘ಕಾವಾಲಾ’ (Kaavala) ಸಾಂಗ್ ಎಲ್ಲೆಲ್ಲೂ ವೈರಲ್ ಆಗುತ್ತಿದೆ. ಚಿಕ್ಕವರಿಂದ ದೊಡ್ಡವರ ತನಕ ಈ ಸಾಂಗ್‌ಗೆ ರೀಲ್ಸ್ ಮಾಡ್ತಿದ್ದಾರೆ. ಸದ್ಯ ಜೈಲರ್ (Jailer) ಸಿನಿಮಾದ ಕಾವಾಲಾ ರಿಲೀಸ್ ಈವೆಂಟ್‌ಗೆ ತಮನ್ನಾ ಭಾಗಿಯಾಗಿದ್ದಾರೆ. ಅದಕ್ಕಾಗಿ ಸಖತ್ ಹಾಟ್ & ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಕಾವಾಲಿ’ ಹಾಡಿಗೆ ಮಸ್ತ್ ಸ್ಟೆಪ್ ಹಾಕಿದ ರಮ್ಯಾಕೃಷ್ಣ

    ‘ಕಾವಾಲಿ’ ಹಾಡಿಗೆ ಮಸ್ತ್ ಸ್ಟೆಪ್ ಹಾಕಿದ ರಮ್ಯಾಕೃಷ್ಣ

    ಕ್ಷಿಣದ ಹೆಸರಾಂತ ನಟಿ ರಮ್ಯಾಕೃಷ್ಣ (Ramya Krishna) ‘ಕಾವಾಲಿ’ (Kaavaali) ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಆ ವಿಡಿಯೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ನಟಿಯ ನೃತ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮಧ್ಯವಯಸ್ಸಿನಲ್ಲೂ ರಮ್ಯಾ ಮಾದಕ ರೀತಿಯಲ್ಲಿ ಹೆಜ್ಜೆ ಹಾಕಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

    ಭಾರತೀಯ ಸಿನಿಮಾ ರಂಗದಲ್ಲಿ ಮತ್ತೊಂದು ಹಾಡು ನೋಡುಗರಿಗೆ  ಹುಚ್ಚೆಬ್ಬಿಸಿದೆ. ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಕನ್ನಡದ ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಕಾಂಬಿನೇಷನ್ ನ  ‘ಜೈಲರ್’ ಸಿನಿಮಾದ ಕಾವಾಲಿ ಸಾಂಗ್ ಬಿಡುಗಡೆಯಾಗಿದ್ದು, ಆ ಹಾಡಿಗೆ ಲಕ್ಷಾಂತರ ಜನರು ಹುಕ್ ಸ್ಟೆಪ್ (Hook Step) ಹಾಕಿದ್ದಾರೆ. ಭಾರತದಾದ್ಯಂತ ಈ ಹಾಡಿಗೆ ಕುಣಿದು, ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾಗೆ ಅಪ್ ಲೋಡ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಸಮಂತಾ, ರಶ್ಮಿಕಾ ಈಗ ಶ್ರೀಲೀಲಾ ಭವಿಷ್ಯ ನುಡಿದ ಖ್ಯಾತ ಸೆಲೆಬ್ರಿಟಿ ಜ್ಯೋತಿಷಿ

    ಬೋಲ್ಡ್ ಪಾತ್ರಗಳ ಮೂಲಕ ಸಾಕಷ್ಟು ಸುದ್ದಿಯಲ್ಲಿರುವ ನಟಿ ತಮನ್ನಾ ಜೈಲರ್ (Jailer) ಸಿನಿಮಾದಲ್ಲೂ ಅದನ್ನು ಮುಂದುವರೆಸಿದ್ದಾರೆ. ಜೈಲರ್ ಸಿನಿಮಾದ  ಕಾವಾಲ ಹಾಡಿನಲ್ಲಿ ನಟಿ ಮೈಚಳಿ ಬಿಟ್ಟು ಕುಣಿದಿದ್ದಾರೆ. ತಮನ್ನಾ (Tamannaah) ಮೈಮಾಟಕ್ಕೆ ಅಭಿಮಾನಿಗಳು ಸುಸ್ತಾಗಿದ್ದಾರೆ.

    ರಜನಿಕಾಂತ್ (Rajinikanth) ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ ನ ಸಿನಿಮಾ ಇದಾಗಿದ್ದು, ಇನ್ನೇನು ಬಿಡುಗಡೆಗೂ ಸಿದ್ಧವಾಗಿದೆ. ಮೊನ್ನೆಯಷ್ಟೇ ಹಾಡು ಬಿಡುಗಡೆಯ ಸಮಾರಂಭಲ್ಲಿ ಶಿವರಾಜ್ ಕುಮಾರ್ ಭಾಗಿಯಾಗಿದ್ದರು. ಸಿನಿಮಾದ ಪ್ರಚಾರಕ್ಕೂ ಮುನ್ನ, ಸಿನಿಮಾದ ಮೊದಲ ಹಾಡನ್ನು (Song) ಚಿತ್ರತಂಡ ರಿಲೀಸ್ ಮಾಡಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಹಾಡನ್ನು ಅಭಿಮಾನಿಗಳು ಸವಿದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಜೈಲರ್’ಗೆ ಸೆನ್ಸಾರ್ ಕಟ್, ರಜನಿ-ಶಿವಣ್ಣ ಸೀನ್‌ಗೆ ಬಿತ್ತಾ ಕತ್ತರಿ?

    ‘ಜೈಲರ್’ಗೆ ಸೆನ್ಸಾರ್ ಕಟ್, ರಜನಿ-ಶಿವಣ್ಣ ಸೀನ್‌ಗೆ ಬಿತ್ತಾ ಕತ್ತರಿ?

    ಜನಿಕಾಂತ್ ನಟನೆಯ ‘ಜೈಲರ್’ (Jailer) ಸಿನಿಮಾದಲ್ಲಿ ಬಹುಭಾಷಾ ಕಲಾವಿದರ ದಂಡೇ ಇದೆ. ಇದೇ ಆಗಸ್ಟ್ 10ಕ್ಕೆ ತೆರೆಗೆ ಬರೋದಕ್ಕೆ ಸಜ್ಜಾಗಿದೆ. ಹೀಗಿರುವಾಗ ‘ಜೈಲರ್’ ತಂಡಕ್ಕೆ ಸೆನ್ಸಾರ್ ಶಾಕ್ ಕೊಟ್ಟಿದೆ. ರಜನಿ- ಶಿವಣ್ಣ ಸೀನ್‌ಗೆ ಕತ್ತರಿ ಬಿದ್ದಿದೆ ಎಂದು ಹೇಳಲಾಗುತ್ತಿದೆ.

    ತಲೈವಾ ನಟನೆಯ ‘ಜೈಲರ್’ ಸಿನಿಮಾ ತೆರೆಗೆ ಬರುವ ಮುನ್ನವೇ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟು ಹಾಕಿದೆ. ಸಿನಿಮಾದ ಫಸ್ಟ್ ಲುಕ್, ಕಾವಾಲಾ (Kaavala) ಸಾಂಗ್ ಸೇರಿದಂತೆ ಜೈಲರ್ ಝಲಕ್ ಫ್ಯಾನ್ಸ್‌ಗೆ ಕಿಕ್ ಕೊಟ್ಟಿದೆ. ಇದೆಲ್ಲದರ ನಡುವೆ ಜೈಲರ್ ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದೆ.

    ಆ್ಯಕ್ಷನ್ ಎಂಟರ್‌ಟೈನರ್ ‘ಜೈಲರ್’ ಚಿತ್ರಕ್ಕೆ ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಚಿತ್ರದಲ್ಲಿ ಹಿಂಸಾತ್ಮಕ ದೃಶ್ಯಗಳು ಹೆಚ್ಚಿದ್ದು ಅದನ್ನು ಕಮ್ಮಿ ಮಾಡುವಂತೆ ಸೆನ್ಸಾರ್ ಮಂಡಳಿ ಚಿತ್ರತಂಡಕ್ಕೆ ಸೂಚಿಸಿದೆಯಂತೆ. ಒಟ್ಟು 11 ಕಟ್ ಚಿತ್ರದಲ್ಲಿ ಮೋಹನ್ ಲಾಲ್ (Mohanlal) ಮ್ಯಾಥೂ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಒಂದು ಮಲಯಾಳಂ ಪದವನ್ನು ಮ್ಯೂಟ್ ಮಾಡಲು ಸೆನ್ಸಾರ್ ಮಂಡಳಿ ಸೂಚಿಸಿದೆಯಂತೆ. ಇದನ್ನೂ ಓದಿ:ರಜನಿ ‘ಜೈಲರ್’ ಜೊತೆ ಜಗ್ಗೇಶ್ ‘ತೋತಾಪುರಿ 2’ ಸಿನಿಮಾ

    ‘ಜೈಲರ್’ ಚಿತ್ರದಲ್ಲಿ ಮುತ್ತುವೇಲ್ ಪಾಂಡಿಯನ್ ಆಗಿ ರಜನಿಕಾಂತ್(Rajanikanth), ನರಸಿಂಹ ಆಗಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ಮುತ್ತುವೇಲ್, ನರಸಿಂಹ ಹಾಗೂ ಮ್ಯಾಥ್ಯೂ ಮೂವರು ಸಿಗರೇಟ್ ಸೇದುವ ಸನ್ನಿವೇಶವೊಂದಿದೆಯಂತೆ. ಆ ದೃಶ್ಯದ ಕ್ಲೋಸ್‌ಅಪ್ ಶಾಟ್ಸ್ ಕತ್ತರಿಸುವಂತೆ ಸೆನ್ಸಾರ್ ಮಂಡಳಿ ಸೂಚಿಸಿದೆ ಎಂದು ಹೇಳಲಾಗುತ್ತಿದೆ. ಮ್ಯಾಥ್ಯೂ, ವ್ಯಕ್ತಿಯೊಬ್ಬನನ್ನು ಕೊಲ್ಲುವುದು ಸೇರಿದಂತೆ ಹಲವು ಸಣ್ಣ ದೃಶ್ಯಗಳಿಗೆ ಕತ್ತರಿ ಬಿದ್ದಿದೆಯಂತೆ.

    ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾದಲ್ಲಿ ರಜನಿಕಾಂತ್, ಶಿವಣ್ಣ(Shivarajkumar), ಮೋಹನ್‌ಲಾಲ್, ತಮನ್ನಾ, ರಮ್ಯಾ ಕೃಷ್ಣ, ಜಾಕಿ ಶ್ರಾಫ್, ಯೋಗಿ ಬಾಬು ನಟಿಸಿದ್ದಾರೆ. ‘ಜೈಲರ್’ ಸಿನಿಮಾ ಬರೋಬ್ಬರಿ 2 ಗಂಟೆ 49 ನಿಮಿಷ ಕಾಲಾವಧಿಯಲ್ಲಿ ಮೂಡಿ ಬಂದಿದೆ. ಕನ್ನಡದ ಜೊತೆ ಮೂರು ಭಾಷೆಗಳಲ್ಲಿ ಜೈಲರ್ ಸಿನಿಮಾ ರಿಲೀಸ್ ಆಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಂಜು ವೆಡ್ಸ್ ಗೀತಾ2 ಸಿನಿಮಾದಲ್ಲಿ ದಕ್ಷಿಣದ ಖ್ಯಾತ ತಾರೆ ತಮನ್ನಾ

    ಸಂಜು ವೆಡ್ಸ್ ಗೀತಾ2 ಸಿನಿಮಾದಲ್ಲಿ ದಕ್ಷಿಣದ ಖ್ಯಾತ ತಾರೆ ತಮನ್ನಾ

    ಮಿಲ್ಕಿ ಬ್ಯೂಟಿ ತಮನ್ನಾ ಮತ್ತೆ ಕನ್ನಡ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ನಾಗಶೇಖರ್ ನಿರ್ದೇಶನದಲ್ಲಿ ಮೂಡಿ ಬರಲಿರುವ ‘ಸಂಜು ವೆಡ್ಸ್ ಗೀತಾ 2’ ಚಿತ್ರದಲ್ಲಿ ತಮನ್ನಾ (Tamannaah) ಹಾಡೊಂದಕ್ಕೆ ಸೊಂಟ ಬಳುಕಿಸಲಿದ್ದಾರಂತೆ. ಅದೊಂದು ಸ್ಪೆಷಲ್ ಹಾಡು ಆಗಿರುವುದರಿಂದ ತಮನ್ನಾ ಅವರನ್ನು ಕೇಳಿದ್ದಾರಂತೆ ನಿರ್ದೇಶಕರು. ತಮನ್ನಾ ಮತ್ತು ನಾಗಶೇಖರ್ ಇಬ್ಬರ ನಡುವೆ ಮಾತುಕತೆ ಆಗಿದೆ ಎಂದು ಹೇಳಲಾಗುತ್ತಿದೆ.

    ರಮ್ಯಾ ಬದಲು ರಚಿತಾ ನಾಯಕಿ

    ಶ್ರೀನಗರ ಕಿಟ್ಟಿ (Srinagar Kitty) ಮುಖ್ಯಭೂಮಿಕೆಯಲ್ಲಿ ಮೂಡಿ ಬರಲಿರುವ ಸಂಜು ವೆಡ್ಸ್ ಗೀತಾ 2 (Sanju Weds Geetha 2) ಸಿನಿಮಾದಲ್ಲಿ ಅಚ್ಚರಿಯ ತಾರಾಬಳಗ ಇರಲಿದೆ ಎಂದು ಈ ಹಿಂದೆ ನಿರ್ದೇಶಕ ನಾಗಶೇಖರ್ (Nagashekhar) ತಿಳಿಸಿದ್ದರು. ಈ ಸಿನಿಮಾದಲ್ಲಿ ಕಿಟ್ಟಿ ನಾಯಕನಾದರೆ, ನಾಯಕಿಯ ಆಯ್ಕೆ ನಡೆಯಬೇಕಿದೆ. ಈಗಾಗಲೇ ರಚಿತಾ ರಾಮ್ (Rachita Ram) ಅವರ ಜೊತೆ ಒಂದು ಸುತ್ತಿನ ಮಾತುಕತೆ ನಡೆದಿರುವುದರಿಂದ, ಬಹುತೇಕ ಅವರೇ ಖಚಿತ ಎಂದು ಹೇಳಲಾಗುತ್ತಿತ್ತು. ಇದೀಗ ಚಿತ್ರತಂಡವೇ ಪೋಸ್ಟರ್ ವೊಂದನ್ನು ರಿಲೀಸ್ ಮಾಡಿ ರಚಿತಾ ರಾಮ್ ಅವರನ್ನು ಖಚಿತ ಪಡಿಸಿದೆ.

    ಇನ್ನೂ ಅಚ್ಚರಿಯ ಸಂಗತಿ ಅಂದರೆ, ಈ ಸಿನಿಮಾದಲ್ಲಿ ದಕ್ಷಿಣದ ಖ್ಯಾತ ತಾರೆಗಳಾದ ಪ್ರಕಾಶ್ ರೈ (Prakash Rai) ಮತ್ತು ರಮ್ಯಾಕೃಷ್ಣ (Ramya Krishna) ಕೂಡ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಯಾರು, ಯಾವ ಪಾತ್ರಗಳನ್ನು ಮಾಡಲಿದ್ದಾರೆ ಎಂದು ನಾಗಶೇಖರ್ ಹೇಳದೇ ಇದ್ದರೂ, ಇಬ್ಬರೂ ನಟಿಸುವುದು ಪಕ್ಕಾ ಎಂದಿದ್ದಾರೆ. ಈಗಾಗಲೇ ಹಾಡುಗಳಿಗೆ ಸಂಗೀತ ಸಂಯೋಜನೆಯ ಕೆಲಸ ಪ್ರಾರಂಭವಾಗಿದೆ.  ಇದನ್ನೂ ಓದಿ:ಮಗಳ ವಯಸ್ಸಿನ ನಟಿ ಜೊತೆ ಅನಿಲ್ ಕಪೂರ್ ಲಿಪ್‌ಲಾಕ್- ನೆಟ್ಟಿಗರಿಂದ ಛೀಮಾರಿ

    ಈ ಸಿನಿಮಾದ ಕುರಿತು ಹತ್ತಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ ನಿರ್ದೇಶಕ ನಾಗಶೇಖರ್. ಸಂಜು ವೆಡ್ಸ್ ಗೀತಾ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ನಾಯಕನಾದರೆ, ರಮ್ಯಾ ನಾಯಕಿ. ಆದರೆ, ಸಂಜು ವೆಡ್ಸ್ ಗೀತಾ 2 ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಮುಂದುವರೆದರೆ, ರಮ್ಯಾ ನಾಯಕಿಯಾಗಿ ನಟಿಸುತ್ತಿಲ್ಲ. ಅದರ ಬದಲು ರಚಿತಾ ರಾಮ್ ಅವರಿಗೆ ಮಣೆ ಹಾಕಿದ್ದಾರೆ ನಾಗಶೇಖರ್.

    ಮೊದಲ ಭಾಗದ ಕಥೆಯನ್ನು ರಾಜ್ಯದ ಒಬ್ಬ ಪೊಲೀಸ್ ಅಧಿಕಾರಿ ಹೇಳಿದ್ದರು. ಅವರು ತನಿಖೆ ಮಾಡಿದ್ದ ಕೇಸ್ ಅನ್ನು ಆಧರಿಸಿದ ಸಿನಿಮಾ ಅದಾಗಿತ್ತು. ಪಾರ್ಟ್ 2 ಸಿನಿಮಾಗೆ ಕಥೆ ಹೇಳಿದ್ದು ಕನ್ನಡದ ಒಬ್ಬ ಸೂಪರ್ ಸ್ಟಾರ್ ಅಂತೆ. ಈ ಕುರಿತು ನಾಗಶೇಖರ್ ಮಾತನಾಡಿದ್ದಾರೆ. ಆದರೆ, ಆ ಸ್ಟಾರ್ ಯಾರು ಎನ್ನುವ ಕುತೂಹಲವನ್ನು ಅವರು ಬಿಟ್ಟುಕೊಟ್ಟಿಲ್ಲ. ಸ್ಟಾರ್ ನಟರೊಬ್ಬರು ಹೇಳಿದ ಕಥೆಯನ್ನೇ ಡೆವಲಪ್‌ ಮಾಡಿದ್ದೇನೆ ಎಂದಿದ್ದಾರೆ ನಾಗಶೇಖರ್.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಮನ್ನಾ-ರಜನಿ ಕುಣಿದ ‘ಕಾವಾಲಾ’ ಹಾಡಿನ ರಿಲೀಸ್ ಇವೆಂಟ್ ತಡೆದ ಮಳೆರಾಯ

    ತಮನ್ನಾ-ರಜನಿ ಕುಣಿದ ‘ಕಾವಾಲಾ’ ಹಾಡಿನ ರಿಲೀಸ್ ಇವೆಂಟ್ ತಡೆದ ಮಳೆರಾಯ

    ಜನಿಕಾಂತ್ (Rajinikanth) ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ ನ ‘ಜೈಲರ್’ ಸಿನಿಮಾದ ಕಾವಾಲಾ (Kawala) ಹಾಡು ಇಡೀ ದೇಶದ ಡಾನ್ಸ್ ಪ್ರೇಮಿಗಳೇ  ಕುಣಿಸಿದೆ. ತಮಿಳಿನಲ್ಲಿ ರಿಲೀಸ್ ಆಗಿದ್ದ ಈ ಹಾಡನ್ನು ಇದೀಗ ತೆಲುಗು ಭಾಷೆಯಲ್ಲೂ ತಯಾರು ಮಾಡಲಾಗಿತ್ತು. ಆ ಹಾಡಿನ ಬಿಡುಗಡೆ  (Song Release) ಇಂದು ಹೈದರಾಬಾದ್ ನಲ್ಲಿ ನಡೆಯಲಿತ್ತು.

    ಈ ಹಾಡಿನ ಬಿಡುಗಡೆಗಾಗಿ ತಮನ್ನಾ (Tamannaah) ಸೇರಿದಂತೆ ಚಿತ್ರತಂಡದ ಹಲವು ಸದಸ್ಯರು ಹೈದರಾಬಾದ್ ಗೆ ಆಗಮಿಸಿದ್ದರು. ರಜನಿಕಾಂತ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದ ಮಾಹಿತಿ ಕೂಡ ಸಿಕ್ಕಿತ್ತು. ಆದರೆ, ಈ ಕಾರ್ಯಕ್ರಮ ನಡೆಯದಂತೆ ವರುಣ ಅಬ್ಬರಿಸಿದ್ದಾನೆ. ಮಳೆಯ ಕಾರಣದಿಂದಾಗಿ ಇವೆಂಟ್ ಕ್ಯಾನ್ಸಲ್ ಆಗಿದೆ. ಈ ಮಾಹಿತಿಯನ್ನು ಸ್ವತಃ ಚಿತ್ರತಂಡವೇ ನೀಡಿದೆ.

    ಕಾವಾಲಾ ತೆಲುಗು ಹಾಡನ್ನು ಕೇಳಲು ನೀವೆಲ್ಲ ಉತ್ಸುಕರಾಗಿದ್ದೀರಿ ಎನ್ನುವುದನ್ನು ನಾವು ಬಲ್ಲೆವು. ಆದರೆ, ಮಳೆಯ ಕಾರಣದಿಂದಾಗಿ ಈ ಕಾರ್ಯಕ್ರಮವನ್ನು ರದ್ದುಗೊಳಿಸುವುದು ಅನಿವಾರ್ಯವಾಗಿದೆ. ಹಾಗಂತ ನಿಮಗೆ ನಿರಾಸೆ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ಕಂಡಿತಾ ಇವೆಂಟ್ ಮಾಡಿಯೇ ಸಾಂಗ್ ರಿಲೀಸ್ ಮಾಡುತ್ತೇವೆ ಎಂದಿದೆ ಸನ್ ಪಿಕ್ಚರ್ಸ್.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡೈಮಂಡ್ ರಿಂಗ್ ಅಲ್ಲ, ಬಾಟಲ್ ಓಪನರ್: ತಲೆ ಚೆಚ್ಚಿಕೊಂಡ ನಟಿ ತಮನ್ನಾ

    ಡೈಮಂಡ್ ರಿಂಗ್ ಅಲ್ಲ, ಬಾಟಲ್ ಓಪನರ್: ತಲೆ ಚೆಚ್ಚಿಕೊಂಡ ನಟಿ ತಮನ್ನಾ

    ಟಿ ತಮನ್ನಾ (Tamannaah) ಬಳಿ 2 ಕೋಟಿ ರೂಪಾಯಿ ಬೆಲೆ ಬಾಳುವ ವಜ್ರದ ಉಂಗುರವಿದೆ. ಅದನ್ನು ‘ಸೈರಾ ನರಸಿಂಹ ರೆಡ್ಡಿ’ (Saira Narasimha Reddy) ಸಿನಿಮಾದಲ್ಲಿನ ತಮನ್ನಾ ಆಕ್ಟಿಂಗ್ ನೋಡಿ ರಾಮ್ ಚರಣ್ (Ram Charan) ಪತ್ನಿ ಉಪಾಸನಾ (Upasana) ದುಬಾರಿ ಗಿಫ್ಟ್‌ವೊಂದನ್ನ ನೀಡಿದ್ದರು ಎಂದು ಸುದ್ದಿಯಾಗಿತ್ತು. ತಮನ್ನಾ ವಜ್ರದ ಉಂಗುರದಂತೆ ಕಾಣುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದು ವೈರಲ್ ಕೂಡ ಆಗಿತ್ತು.

    ದುಬಾರಿ ಬೆಲೆಯ ವಜ್ರದುಂಗುರ (Vajradugunru) ಎಂದು, ಅದನ್ನು ಉಪಾಸನಾ ನೀಡಿದ್ದಾರೆ ಎನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ ತಮನ್ನಾ, ‘ಇಂಥದ್ದೊಂದು ಸುದ್ದಿಯನ್ನು ಹಂಚಿಕೊಳ್ಳಲು ನನಗೆ ಬೇಸರವಾಗುತ್ತಿದೆ. ಅದು ವಜ್ರದ ಉಂಗುರ ಅಲ್ಲ, ಬದಲಾಗಿ ಅದು ಬಾಟಲ್ ಓಪನರ್ (Bottle Opener). ಈ ಹಿಂದೆ ಓಪನರ್ ಇಟ್ಟುಕೊಂಡು ಶೂಟ್ ಮಾಡಿದ್ದೆವು. ಅದರ ಬೆಲೆ ನೀವೇ ಹೇಳಿ’ ಎಂದಿದ್ದಾರೆ. ಇದನ್ನೂ ಓದಿ:ಟಿಪ್ಪು ಸುಲ್ತಾನ್ ಕುರಿತ ಸಿನಿಮಾಗೆ ಬಿತ್ತು ಬ್ರೇಕ್- ಅಸಲಿ ಕಾರಣ ಬಿಚ್ಚಿಟ್ಟ ನಿರ್ಮಾಪಕ

    ಏನಿದು ವಜ್ರದುಂಗರ ಸ್ಟೋರಿ?

    ಸಿನಿಮಾದ ಸಕ್ಸಸ್ ವಿಚಾರವಾಗಿಯೂ ಸಖತ್ ಸುದ್ದಿಯಾಗುತ್ತಿದ್ದಾರೆ. ಜೊತೆಗೆ ವಿಜಯ್ ವರ್ಮ ಜೊತೆಗಿನ ಡೇಟಿಂಗ್ ವಿಷ್ಯಕ್ಕೆ ತಮನ್ನಾ ಹೈಲೆಟ್ ಆಗಿದ್ದಾರೆ. ಇದರ ನಡುವೆ ಅಚ್ಚರಿ ವಿಚಾರವೊಂದು ಬಹಿರಂಗ ಆಗಿತ್ತು. ತಮನ್ನಾ ಭಾಟಿಯಾ ಬಳಿ 2 ಕೋಟಿ ರೂಪಾಯಿ ಬೆಲೆ ಬಾಳುವ ವಜ್ರದ ಉಂಗುರ ಇದೆ. ಸೋಶಿಯಲ್ ಮೀಡಿಯಾದಲ್ಲಿ ಇದರ ಫೋಟೋ ವೈರಲ್ ಆಗಿದೆ. ಈ ದುಬಾರಿ ವಸ್ತು ತಮನ್ನಾಗೆ ಸಿಕ್ಕಿದ್ದು ಉಡುಗೊರೆಯ ರೂಪದಲ್ಲಿ ಅದು ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೆಲಾ ಕಡೆಯಿಂದ. ಈ ಉಂಗುರವನ್ನು ತಮನ್ನಾಗೆ ಗಿಫ್ಟ್ ಆಗಿ ನೀಡಿದ್ದರು ಎಂದು ಹೇಳಲಾಗಿತ್ತು.

    ತಮನ್ನಾ ಅವರು ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಫ್ಯಾನ್ಸ್ ಮಾತ್ರವಲ್ಲದೇ ಸೆಲೆಬ್ರಿಟಿಗಳಿಗೂ ತಮನ್ನಾ ಎಂದರೆ ಇಷ್ಟ. ಉಪಾಸನಾ ಅವರ ಜೊತೆ ತಮನ್ನಾ ಉತ್ತಮ ಬಾಂಧವ್ಯ ಹೊಂದಿದ್ದಾರೆ. 2019ರಲ್ಲಿ ರಾಮ್ ಚರಣ್ ನಿರ್ಮಿಸಿದ್ದ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾದಲ್ಲಿ ತಮನ್ನಾ ನಟಿಸಿದ್ದರು. ಆ ಚಿತ್ರದಲ್ಲಿನ ಅವರ ಅಭಿನಯ ನೋಡಿ ಖುಷಿಯಾಗಿದ್ದ ಉಪಾಸನಾ ಅವರು ಈ ವಜ್ರದ ಉಂಗುರ ನೀಡಿದ್ದರು ಎಂದು ಹೇಳಲಾಗಿತ್ತು. ಆ ವಿಚಾರದ ಬಗ್ಗೆ ಫ್ಯಾನ್ಸ್ ವಲಯದಲ್ಲಿ ಚರ್ಚೆ ಶುರುವಾಗಿತ್ತು.