Tag: Tamanna Bhatia

  • ಬಾಲಯ್ಯ ಸಿನಿಮಾದಲ್ಲಿ ಸೊಂಟ ಬಳುಕಿಸಲು 5 ಕೋಟಿ ಕೇಳಿದ್ರಾ? ತಮನ್ನಾ ಸ್ಪಷ್ಟನೆ

    ಬಾಲಯ್ಯ ಸಿನಿಮಾದಲ್ಲಿ ಸೊಂಟ ಬಳುಕಿಸಲು 5 ಕೋಟಿ ಕೇಳಿದ್ರಾ? ತಮನ್ನಾ ಸ್ಪಷ್ಟನೆ

    ಸೌತ್ ಬ್ಯೂಟಿ ತಮನ್ನಾ ಭಾಟಿಯಾ (Tamanna Bhatia) ಅವರು ಸದಾ ವಿಜಯ್ ವರ್ಮಾ (Vijay Varma) ಜೊತೆಗಿನ ಡೇಟಿಂಗ್ ವಿಷ್ಯವಾಗಿ ಸುದ್ದಿಯಲ್ಲಿರುತ್ತಿದ್ದರು. ಇದೀಗ ತಮ್ಮ ಸಿನಿಮಾ ಸಂಭಾವನೆ ವಿಚಾರವಾಗಿ ಗಾಸಿಪ್ ಹಬ್ಬಿದ್ದಕ್ಕೆ ತಮನ್ನಾ ಗರಂ ಆಗಿದ್ದಾರೆ. ಬಾಲಯ್ಯ (Balayya) ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲು 5 ಕೋಟಿ ರೂ. ಡಿಮ್ಯಾಂಡ್ ಮಾಡಿದ್ದರು ಎನ್ನಲಾದ ಸುದ್ದಿಗೆ ನಟಿ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಭಾವಿಪತಿಗೆ ಸಿಹಿಮುತ್ತು ಕೊಟ್ಟು, ನಿಶ್ಚಿತಾರ್ಥದ ಸುದ್ದಿ ಹಂಚಿಕೊಂಡ ಅನುರಾಗ್‌ ಕಶ್ಯಪ್‌ ಪುತ್ರಿ

    ಬಹುಭಾಷಾ ನಟಿಯಾಗಿ ಸದ್ದು ಮಾಡ್ತಿರುವ ತಮನ್ನಾ ಭಾಟಿಯಾ ಅವರು ‘ಕೆಜಿಎಫ್’ (KGF) ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಾಯಕಿಯಾಗಿಯೂ ಗೆದ್ದಿದ್ದಾರೆ. ಇತ್ತೀಚೆಗೆ ನಂದಮೂರಿ ಬಾಲಯ್ಯ ಅವರ 108ನೇ ಚಿತ್ರಕ್ಕೆ 5 ಕೋಟಿ ರೂ ಸಂಭಾವನೆ ಡಿಮ್ಯಾಂಡ್ ಮಾಡಿದ್ರು ಎಂಬ ಸುದ್ದಿಗೆ ನಟಿ ತಮನ್ನಾ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಗಾಸಿಪ್‌ಗೆಲ್ಲಾ ಬ್ರೇಕ್ ಹಾಕಿದ್ದಾರೆ.

    ಬಾಲಯ್ಯ ನಟನೆಯ 108ನೇ ಸಿನಿಮಾಗೆ ಅನಿಲ್ ರವಿಪುಡಿ ನಿರ್ದೇಶಕ. ಈ ಸಿನಿಮಾದಲ್ಲಿನ ಒಂದು ಐಟಂ ಸಾಂಗ್‌ನಲ್ಲಿ ಕುಣಿಯುವಂತೆ ತಮನ್ನಾಗೆ ಆಫರ್ ನೀಡಲಾಗಿದೆ ಎಂದು ಗಾಳಿ ಸುದ್ದಿ ಹಬ್ಬಿತ್ತು. ಅಷ್ಟೇ ಅಲ್ಲದೇ, ಆ ಹಾಡಿನಲ್ಲಿ ಡ್ಯಾನ್ಸ್ ಮಾಡಲು ತಮನ್ನಾ ಅವರು ಬರೋಬ್ಬರಿ 5 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದಾರೆ ಎಂದು ಕೂಡ ಗಾಸಿಪ್ ಮಂದಿ ಮಾತನಾಡಿಕೊಂಡಿದ್ದರು. ಅದು ತಮನ್ನಾ ಗಮನಕ್ಕೂ ಬಂದಿದ್ದು, ಸ್ಪಷ್ಟನೆ ನೀಡಿದ್ದಾರೆ.

    ನಿರ್ದೇಶಕ ಅನಿಲ್ ರವಿಪುಡಿ ಅವರ ಜೊತೆ ಕೆಲಸ ಮಾಡುವುದನ್ನು ನಾನು ಯಾವಾಗಲೂ ಎಂಜಾಯ್ ಮಾಡಿದ್ದೇನೆ. ಅದೇ ರೀತಿ ನಂದಮೂರಿ ಬಾಲಕೃಷ್ಣ ಅವರ ಬಗ್ಗೆಯೂ ನನಗೆ ಸಾಕಷ್ಟು ಗೌರವ ಇದೆ. ಆದರೆ ಅವರ ಸಿನಿಮಾದಲ್ಲಿನ ಹಾಡಿನಲ್ಲಿ ನಾನು ಇರುವುದಾಗಿ ಗಾಸಿಪ್ ಹಬ್ಬಿರುವುದು ನನಗೆ ಬೇಸರ ಮೂಡಿಸಿದೆ. ಆಧಾರ ಇಲ್ಲದ ಆರೋಪ ಮಾಡುವುದಕ್ಕೂ ಮುನ್ನ ನೀವು ಸ್ವಲ್ಪ ರಿಸರ್ಚ್ ಮಾಡಿಕೊಳ್ಳಿ ಎಂದು ನಟಿ ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ.

  • ವಿಜಯ್‌ ವರ್ಮಾ ಜೊತೆ KGF ನಟಿ ತಮನ್ನಾ ಡಿನ್ನರ್‌ ಡೇಟ್‌

    ವಿಜಯ್‌ ವರ್ಮಾ ಜೊತೆ KGF ನಟಿ ತಮನ್ನಾ ಡಿನ್ನರ್‌ ಡೇಟ್‌

    ಬಾಲಿವುಡ್‌ನಲ್ಲಿ (Bollywood) ಸದ್ಯ ಸದ್ದು ಮಾಡ್ತಿರುವ ಜೋಡಿ ಅಂದರೆ ವಿಜಯ್ ವರ್ಮಾ- ತಮನ್ನಾ ಭಾಟಿಯಾ. ಇಬ್ಬರ ಬಗ್ಗೆ ಸಾಕಷ್ಟು ಸಮಯದಿಂದ ಲವ್ವಿ ಡವ್ವಿ ಕಥೆ ಕೇಳಿ ಬರುತ್ತಿದೆ. ವಿಜಯ್- ತಮನ್ನಾ ಇಬ್ಬರೂ ಇದರ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಇದೀಗ ಮತ್ತೆ ಈ ಜೋಡಿ ಸುದ್ದಿಯಲ್ಲಿದ್ದಾರೆ.

    ಅಥಿಯಾ ಶೆಟ್ಟಿ- ಕೆ.ಎಲ್ ರಾಹುಲ್, ಸಿದ್-ಕಿಯಾರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬೆನ್ನಲ್ಲೇ ವಿಜಯ್ ವರ್ಮಾ- ತಮನ್ನಾ ಭಾಟಿಯಾ (Tamanna Bhatia) ಮದುವೆ (Wedding) ಬಗ್ಗೆ ಗುಡ್ ನ್ಯೂಸ್ ಕೊಡುತ್ತಾರಾ ಎಂಬ ಗುಸು ಗುಸು ಬಿಟೌನ್‌ನಲ್ಲಿ ಶುರುವಾಗಿದೆ. ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಎಂದು ಹೇಳುತ್ತಿದ್ದ ಈ ಜೋಡಿಯ ಡೇಟಿಂಗ್ ಜೋರಾಗಿದೆ.

     

    View this post on Instagram

     

    A post shared by Manav Manglani (@manav.manglani)

    ಇದೀಗ ವಿಜಯ್- ತಮನ್ನಾ ಡಿನ್ನರ್‌ಗೆ ಹಾಜರಾಗುವ ಮೂಲಕ ತಮ್ಮ ಡೇಟಿಂಗ್ ವದಂತಿಗೆ ಮತ್ತಷ್ಟು ಪುಷ್ಠಿ ನೀಡುತ್ತಿದ್ದಾರೆ. ಇಬ್ಬರೂ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಕಾರಿನಲ್ಲಿ ಬಂದ ತಮನ್ನಾ ಮತ್ತು ವಿಜಯ್ ವರ್ಮಾ (Vijay Varma)  ಇಬ್ಬರೂ ಪಾಪರಾಜಿಗಳ ಮುಂದೆ ಕಾಣಿಸಿಕೊಂಡಿದ್ದಾರೆ. ಬಳಿಕ ಇಬ್ಬರೂ ನಗು ಬೀರುತ್ತಾ ಒಟ್ಟಿಗೆ ಕಾರಿನಲ್ಲಿ ಹೊರಟರು. ವಿಜಯ್ ವರ್ಮಾ ಕಾರು ಚಲಾಯಿಸುತ್ತಿದ್ದರೆ ತಮನ್ನಾ ಪಕ್ಕದಲ್ಲಿ ಕುಳಿತಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಸದ್ದು ಮಾಡ್ತಿದೆ.

  • IPL ಉದ್ಘಾಟನಾ ಕಾರ್ಯಕ್ರಮದಲ್ಲಿ ಸೊಂಟ ಬಳುಕಿಸಿದ ರಶ್ಮಿಕಾ ಮಂದಣ್ಣ-ತಮನ್ನಾ

    IPL ಉದ್ಘಾಟನಾ ಕಾರ್ಯಕ್ರಮದಲ್ಲಿ ಸೊಂಟ ಬಳುಕಿಸಿದ ರಶ್ಮಿಕಾ ಮಂದಣ್ಣ-ತಮನ್ನಾ

    ಮಾ.31ರಿಂದ ಪ್ರತಿಷ್ಠಿತ 16ನೇ ಐಪಿಎಲ್ (Ipl 2023) ಆವೃತ್ತಿಗೆ ಚಾಲನೆ ಸಿಕ್ಕಿದೆ. ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ನಟಿಯರಾದ `ಪುಷ್ಪ’ ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna), ತಮನ್ನಾ ಭಾಟಿಯಾ (Tamanna Bhatia) ಸೊಂಟ ಬಳುಕಿಸಿದ್ದಾರೆ. ಅಭಿಮಾನಿಗಳನ್ನ ರಂಜಿಸಿದ್ದಾರೆ.

    ಗುಜರಾತ್ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಸಂಜೆ 7.30ಕ್ಕೆ ಮೊದಲ ಪಂದ್ಯ ಆರಂಭವಾಗಿದೆ. ಇದಕ್ಕೂ ಮುನ್ನ ಸಂಜೆ 6 ಗಂಟೆಗೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಖ್ಯಾತ ನಟಿಯರಾದ ಮಿಲ್ಕಿ ಬ್ಯೂಟಿ ತಮನ್ನಾ- ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸೊಂಟ ಬಳುಕಿಸಿದ್ದಾರೆ.

    ಸಾಮಿ ಸಾಮಿ, ಶ್ರೀವಲ್ಲಿ, ನಾಟು ನಾಟು ಹಾಡಿಗೆ ರಶ್ಮಿಕಾ ಮಂದಣ್ಣ ಐಪಿಎಲ್ ವೇದಿಕೆಯಲ್ಲಿ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ತಮಿಳಿನ ಟಮ್ ಟಮ್ ಹಾಡಿಗೆ ತಮನ್ನಾ ಕುಣಿದು ಕುಪ್ಪಳಿಸಿದ್ದಾರೆ. ಬಾಲಿವುಡ್‌ ಗಾಯಕ ಕೂಡ ಅರ್ಜಿತ್‌ ಸಿಂಗ್‌ ಕೂಡ ಸೂಪರ್‌ ಹಿಟ್‌ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

  • ವಿಜಯ್ ವರ್ಮಾ ಜೊತೆಗಿನ ಡೇಟಿಂಗ್ ಸುದ್ದಿಗೆ ತಮನ್ನಾ ಸ್ಪಷ್ಟನೆ

    ವಿಜಯ್ ವರ್ಮಾ ಜೊತೆಗಿನ ಡೇಟಿಂಗ್ ಸುದ್ದಿಗೆ ತಮನ್ನಾ ಸ್ಪಷ್ಟನೆ

    ಸೌತ್ ಮತ್ತು ಬಾಲಿವುಡ್‌ನಲ್ಲಿ (Bollywood) ಸದ್ಯ ಸೌಂಡ್ ಮಾಡ್ತಿರುವ ವಿಚಾರ ಅಂದರೆ ತಮನ್ನಾ ಭಾಟಿಯಾ (Tamanna Bhatia) ಮತ್ತು ವಿಜಯ್ ವರ್ಮಾ (Vijay Varma)  ಡೇಟಿಂಗ್ ವದಂತಿ. ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಈ ವಿಚಾರಕ್ಕೆ ಇದೀಗ ನಟಿ ತಮನ್ನಾ ಸಂದರ್ಶನವೊಂದರಲ್ಲಿ ಮೌನ ಮುರಿದಿದ್ದಾರೆ. ಇದನ್ನೂ ಓದಿ: `ಜೊತೆ ಜೊತೆಯಲಿ’ ಖ್ಯಾತಿಯ ಶಿಲ್ಪಾ ಅಯ್ಯರ್ ಮದುವೆ ಆಲ್ಬಂ

    ಮಿಲ್ಕಿ ಬ್ಯೂಟಿ ತಮನ್ನಾ ಈಗೀಗ ಸಿನಿಮಾಗಿಂತ ಬಾಲಿವುಡ್ ನಟ ವಿಜಯ್ ವರ್ಮಾ ಜೊತೆಗಿನ ಲವ್ವಿ- ಡವ್ವಿ ವಿಷ್ಯವಾಗಿಯೇ ಸಖತ್ ಸುದ್ದಿಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟಿಯ ಲಿಪ್ ಲಾಕ್ ವೀಡಿಯೋ ವೈರಲ್ ಆದ ಮೇಲೆ ಇದೀಗ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ.

    ತಮನ್ನಾ ಅವರು ವಿಜಯ್‌ ವರ್ಮಾ ಜೊತೆಗಿನ ಡೇಟಿಂಗ್ ವಿಚಾರವನ್ನು ತಳ್ಳಿ ಹಾಕಿದ್ದಾರೆ. ನಾವಿಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿದ್ದೇವೆ. ಇಂಥ ವದಂತಿಗಳು ಎಲ್ಲಾ ಕಡೆ ಹರಿದಾಡುತ್ತಲೇ ಇರುತ್ತದೆ. ಇಂಥ ವದಂತಿಗಳ ಬಗ್ಗೆ ಪ್ರತಿಕ್ರಿಯೆ ನೀಡುವುದು ಮತ್ತು ಸ್ಪಷ್ಟೀಕರಣ ಕೊಡುವ ಅನಿವಾರ್ಯತೆ ಇಲ್ಲ. ಅದರ ಬಗ್ಗೆ ನಾನು ಹೆಚ್ಚು ಏನು ಹೇಳಲ್ಲ ಎಂದು ಹೇಳಿದ್ದಾರೆ.

    ತಮನ್ನಾ ಮತ್ತು ವಿಜಯ್ ವರ್ಮಾ ಇಬ್ಬರೂ ʻಲಸ್ಟ್ ಸ್ಟೋರಿ -2′ ಸಿನಿಮಾ ಸೆಟ್‌ನಲ್ಲಿ ಮೊದಲು ಭೇಟಿಯಾಗಿದರು. ಅಲ್ಲಿಂದ ಪ್ರಾರಂಭವಾದ ಇವರ ಸ್ನೇಹ ಬಳಿಕ ಪ್ರೀತಿಯಾಗಿ ಬದಲಾಗಿದೆ ಎನ್ನಲಾಗುತ್ತಿದೆ. ಇಬ್ಬರೂ ಕದ್ದು ಮುಚ್ಚಿ ಪ್ರೀತಿ ಮಾಡುತ್ತಿದ್ದರು. ಆದರೆ ಹೊಸ ವರ್ಷಾಚರಣೆ ವೇಳೆ ಇಬ್ಬರೂ ತಬ್ಬಿಕೊಂಡು, ಕಿಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಇಬ್ಬರ ಪ್ರೀತಿ ಬಹಿರಂಗವಾಗಿದೆ.

  • ಬಾಲಯ್ಯ ಜೊತೆ ಸೊಂಟ ಬಳುಕಿಸಲು ಮಿಲ್ಕಿ ಬ್ಯೂಟಿಗೆ ಭರ್ಜರಿ ಸಂಭಾವನೆ

    ಬಾಲಯ್ಯ ಜೊತೆ ಸೊಂಟ ಬಳುಕಿಸಲು ಮಿಲ್ಕಿ ಬ್ಯೂಟಿಗೆ ಭರ್ಜರಿ ಸಂಭಾವನೆ

    ಸೌತ್ ಬ್ಯೂಟಿ ತಮನ್ನಾ ಭಾಟಿಯಾ(Tamanna Bhatia) ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ನಂದಮೂರಿ ಬಾಲಕೃಷ್ಣ (Nandamuri Balakrishna) ಜೊತೆ ಸೊಂಟ ಬಳುಕಿಸಲು ದುಬಾರಿ ಸಂಭಾವನೆಯನ್ನೇ (Remuneration) ಮಿಲ್ಕಿ ಬ್ಯೂಟಿ ಡಿಮ್ಯಾಂಡ್ ಮಾಡಿದ್ದಾರೆ.

    ಮಿಲ್ಕಿ ಬ್ಯೂಟಿ ತಮನ್ನಾ ಅವರು 17ನೇ ವಯಸ್ಸಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. ಇದೀಗ ತಮ್ಮ ಚಾರ್ಮ್ ಕಳೆದುಕೊಳ್ಳದೇ ಬಹುಭಾಷೆಗಳಲ್ಲಿ ನಟಿ ಮಿಂಚ್ತಿದ್ದಾರೆ. ಸ್ಟಾರ್ ನಟರಿಗೆ ನಾಯಕಿಯಾಗಿ ಮಿಂಚ್ತಿರುವ ತಮನ್ನಾಗೆ ಬಾಲಯ್ಯ (Actor Balayya) ಸಿನಿಮಾದಲ್ಲಿ ಐಟಂ ಡ್ಯಾನ್ಸ್‌ಗೆ ಹೆಜ್ಜೆ ಹಾಕಲು ಅವಕಾಶ ಸಿಕ್ಕಿದೆ. ಹೀಗಿರುವಾಗ ತಮ್ಮ ಸಂಭಾವನೆಯಲ್ಲಿ ಎಲ್ಲೂ ಕಾಂಪ್ರಮೈಸ್ ಆಗದೇ ದುಬಾರಿ ಸಂಭಾವನೆಯನ್ನೇ ನಟಿ ಬೇಡಿಕೆಯಿಟ್ಟಿದ್ದಾರೆ.

    ಬಾಲಯ್ಯ-ಅನಿಲ್‌ ನಿರ್ದೇಶನದ ಹೊಸ ಸಿನಿಮಾದಲ್ಲಿ ತಮನ್ನಾಗೆ ಡ್ಯಾನ್ಸ್ ಮಾಡಲು ಬುಲಾವ್ ಬಂದಿದೆ. ನಟಿ ಕೂಡ ಸೊಂಟ ಬಳುಕಿಸಲು ಓಕೆ ಎಂದಿದ್ದಾರೆ. ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲು ತಮನ್ನಾ 50 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ. ಚಿತ್ರತಂಡ ಕೂಡ ಈ ವಿಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ಇದನ್ನೂ ಓದಿ: ಪ್ರಾಣಿ ರಕ್ಷಣೆಗೆ ನಟಿ ಸಂಯುಕ್ತಾ ಅಂಬುಲೆನ್ಸ್‌ ಹೆಲ್ಪ್‌ಲೈನ್‌ಗೆ ಚಾಲನೆ

    ನಾಯಕಿಯಾಗಿ ಡಿಮ್ಯಾಂಡ್‌ನಲ್ಲಿರುವ ನಟಿ ಈಗಾಗಲೇ ಸಾಕಷ್ಟು ಚಿತ್ರದಲ್ಲಿನ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕೋ, ಗಣಿ, ಜಾಗ್ವಾರ್, ಜೈ ಲವಕುಶ, ಕೆಜಿಎಫ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಹೆಜ್ಜೆ ಹಾಕಿ ಮಿಂಚಿದ್ದಾರೆ. ಸದ್ಯ ಬಾಲಯ್ಯ ಜೊತೆ ತಮನ್ನಾ ಐಟಂ ಡ್ಯಾನ್ಸ್ ನ್ಯೂಸ್ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿಶೇಷ ಫೋಟೋ ಶೇರ್‌ ಮಾಡಿ ತಮನ್ನಾ ಜೊತೆಗಿನ ಪ್ರೀತಿ ಅಧಿಕೃತಗೊಳಿಸಿದ ವಿಜಯ್ ವರ್ಮಾ

    ವಿಶೇಷ ಫೋಟೋ ಶೇರ್‌ ಮಾಡಿ ತಮನ್ನಾ ಜೊತೆಗಿನ ಪ್ರೀತಿ ಅಧಿಕೃತಗೊಳಿಸಿದ ವಿಜಯ್ ವರ್ಮಾ

    ಬಾಲಿವುಡ್ (Bollywood) ಮತ್ತು ಸೌತ್ ಸಿನಿ ಅಂಗಳದಲ್ಲಿ ಸದ್ಯ ಸದ್ದು ಮಾಡ್ತಿರುವ ವಿಚಾರ ಅಂದರೆ ವಿಜಯ್ ವರ್ಮಾ (Vijay Varma) ಮತ್ತು ನಟಿ ತಮನ್ನಾ ಭಾಟಿಯಾ (Tamanna Bhatia) ಡೇಟಿಂಗ್ ಸುದ್ದಿ. ಈ ಬೆನ್ನಲ್ಲೇ ಇದೀಗ ಪ್ರೇಮಿಗಳ ದಿನದಂದು ವಿಶೇಷವಾಗಿ ವಿಶ್ ಮಾಡುವ ಮೂಲಕ ತನ್ನ ಪ್ರೇಮಿಯ ಜೊತೆಗಿನ ಫೋಟೋವನ್ನ ವಿಜಯ್ ವರ್ಮಾ ಶೇರ್ ಮಾಡಿದ್ದಾರೆ.

    ಸಾಕಷ್ಟು ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದ ವಿಜಯ್- ತಮನ್ನಾ ಅವರು ಇತ್ತೀಚಿಗೆ ಗೋವಾದಲ್ಲಿ (Goa) ಲಿಪ್‌ಲಾಕ್ ವೀಡಿಯೋ ವೈರಲ್ ಆಗುವ ಮೂಲಕ ಡೇಟಿಂಗ್ ಸುದ್ದಿಗೆ ಸ್ಪಷ್ಟನೆ ಸಿಕ್ಕಿತ್ತು. ಆದರೂ ಈ ಬಗ್ಗೆ ಎಲ್ಲಿಯೂ ಈ ಜೋಡಿ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ವಿಜಯ್ ಕಾಲಿನ ಫೋಟೋವನ್ನು ಶೇರ್ ಮಾಡಿ ಹಾರ್ಟ್ ಇಮೋಜಿ ಇರಿಸಿದ್ದಾರೆ. ಯಾರು ಎಂದು ವಿಜಯ್ ವರ್ಮಾ ರಿವೀಲ್ ಮಾಡಿಲ್ಲ.

    ಆದರೆ ವಿಜಯ್ ವರ್ಮಾ ಫೋಟೋ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು ಯಾರೆಂದು ಗುರುತು ಹಿಡಿದಿದ್ದಾರೆ. ವಿಜಯ್ ವರ್ಮಾ ಶೇರ್ ಮಾಡಿರುವ ಕಾಲಿನ ಫೋಟೋ ತಮನ್ನಾ ಅವರದ್ದೇ ಎಂದು ಹೇಳುತ್ತಿದ್ದಾರೆ. ತಮನ್ನಾ ಧರಿಸಿದ್ದ ಶೋ ಮತ್ತು ಜರ್ಕಿನ್ ಫೋಟೋಗಳನ್ನು ಶೇರ್ ಮಾಡಿ ಇದು ಪಕ್ಕಾ ತಮನ್ನಾ ಅವರ ಕಾಲು ಎನ್ನುತ್ತಿದ್ದಾರೆ. ಈ ಮೂಲಕ ವಿಜಯ್ ವರ್ಮಾ ಪ್ರೀತಿ ವಿಚಾರವನ್ನು ಬಹಿರಂಗ ಪಡಿಸಿದ್ರಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಇದನ್ನೂ ಓದಿ: ಪ್ರೇಮಿಗಳ ದಿನದಂದು ಪತ್ನಿಗೆ ರೊಮ್ಯಾಂಟಿಕ್ ಆಗಿ ನಿರ್ಮಾಪಕ ರವೀಂದ್ರ ವಿಶ್

     

    View this post on Instagram

     

    A post shared by Vijay Varma (@itsvijayvarma)

    ಸೌತ್ ನಟಿ ತಮನ್ನಾ ಮತ್ತು ವಿಜಯ್ ವರ್ಮಾ ಇಬ್ಬರೂ, `ಲಸ್ಟ್ ಸ್ಟೋರಿ -2′ (Lust Story -2) ಸಿನಿಮಾ ಚಿತ್ರೀಕರಣದಲ್ಲಿ ಮೊದಲು ಭೇಟಿಯಾಗಿದರು. ಅಲ್ಲಿಂದ ಪ್ರಾರಂಭವಾದ ಇವರ ಸ್ನೇಹ ಬಳಿಕ ಪ್ರೀತಿಯಾಗಿ ಬದಲಾಗಿದೆ. ಇಬ್ಬರೂ ಕದ್ದು ಮುಚ್ಚಿ ಪ್ರೀತಿ ಮಾಡುತ್ತಿದ್ದರು. ಆದರೆ ಹೊಸ ವರ್ಷಾಚರಣೆ ವೇಳೆ ಇಬ್ಬರೂ ತಬ್ಬಿಕೊಂಡು, ಕಿಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಇಬ್ಬರ ಪ್ರೀತಿ ಬಹಿರಂಗವಾಗಿದೆ. ಇನ್ನೂ ಸದ್ಯದಲ್ಲೇ ಈ ಜೋಡಿ ಕೂಡ ಮದುವೆಯ ಬಗ್ಗೆ ಗುಡ್ ನ್ಯೂಸ್ ಕೊಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • `ಸಾಕ್ಷಾತ್ಕಾರ’ ನಟಿ ಜಮುನಾ ಬಯೋಪಿಕ್‌ನಲ್ಲಿ ತಮನ್ನಾ ಭಾಟಿಯಾ

    `ಸಾಕ್ಷಾತ್ಕಾರ’ ನಟಿ ಜಮುನಾ ಬಯೋಪಿಕ್‌ನಲ್ಲಿ ತಮನ್ನಾ ಭಾಟಿಯಾ

    ಕ್ಷಿಣ ಭಾರತ ಚಿತ್ರರಂಗ ನಟಿ ಜಮುನಾ (Actress Jamuna) ಅವರ ಅಗಲಿಕೆ ಚಿತ್ರರಂಗಕ್ಕೆ ಶಾಕ್ ನೀಡಿದೆ. ಈ ಬೆನ್ನಲ್ಲೇ ಹೊಸದೊಂದು ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಜಮುನಾ ಅವರ ಜೀವನ ಚರಿತ್ರೆಯನ್ನ (Biopic) ಸಿನಿಮಾ ಮಾಡಲು ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ. ಜಮುನಾ ಅವರ ಪಾತ್ರವನ್ನ ಮಿಲ್ಕಿ ಬ್ಯೂಟಿ ತಮನ್ನಾ ನಟಿಸುವ ಕುರಿತು ಚರ್ಚೆಯಾಗುತ್ತಿದೆ. ಇದನ್ನೂ ಓದಿ: ಮಗುವಾದ ಬಳಿಕ ಮಾಲಿವುಡ್‌ನತ್ತ ಪ್ರಣಿತಾ ಸುಭಾಷ್

    ಚಿತ್ರರಂಗದಲ್ಲಿ ತಮ್ಮದೇ ಶೈಲಿಯಲ್ಲಿ ನಟಿ ಜಮುನಾ ಅವರು ಗುರುತಿಸಿಕೊಂಡಿದ್ದಾರೆ. ಬಹುಭಾಷೆಗಳಲ್ಲಿ 180ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡದಲ್ಲಿ ವರನಟ ರಾಜ್‌ಕುಮಾರ್ (Rajakumar) ಜೊತೆ 2 ಸಿನಿಮಾಗಳಲ್ಲಿ ನಟಿ ಜಮುನಾ ನಟಿಸಿರೋದು ವಿಶೇಷ. ಪುಟ್ಟಣ್ಣ ಕಣಗಾಲ್ ನಿರ್ದೇಶನದ `ಸಾಕ್ಷಾತ್ಕಾರ’ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.

    ಸೌತ್ ಸಿನಿರಂಗದಲ್ಲಿ ಬಯೋಪಿಕ್ ಹಾವಳಿ ಜೋರಾಗಿರುವ ಬೆನ್ನಲ್ಲೇ ಜಮುನಾ ಅವರ ಜೀವನ ಚರಿತ್ರೆ ವಿಷ್ಯ ಸದ್ದು ಮಾಡ್ತಿದೆ. ಸಿಲ್ಕ್ ಸ್ಮಿತಾ, ಜಯಲಲಿತಾ, ಬಯೋಪಿಕ್ ತೆರೆಗೆ ಮೇಲೆ ಮೋಡಿ ಮಾಡಿತ್ತು. ಈಗ ಖ್ಯಾತ ನಟಿ ಜಮುನಾ ಸಿನಿಮಾ ತೆರೆಗೆ ಬರೋದ್ದಕ್ಕೆ ರೆಡಿಯಾಗುತ್ತಿದೆ ಎನ್ನಲಾಗುತ್ತಿದೆ.

    ಜಮುನಾ ಅವರ ಪಾತ್ರಕ್ಕೆ ತಮನ್ನಾ ಭಾಟಿಯಾ (Tamanna Bhatia) ಅವರು ಸೆಲೆಕ್ಟ್ ಆಗಿದ್ದಾರಂತೆ. ನಟಿಯ ಬಯೋಪಿಕ್‌ನಲ್ಲಿ ತಮನ್ನಾ ನಟಿಸುವ ಬಗ್ಗೆ ಕಾಲಿವುಡ್ ಅಂಗಳದಲ್ಲಿ ಸಖತ್ ಚರ್ಚೆ ನಡೆಯುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಯಾಕೆ ವಿಜಯ್ ಮರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದೀರಾ: ತಮನ್ನಾಗೆ ನೆಟ್ಟಿಗರಿಂದ ಕ್ಲಾಸ್

    ಯಾಕೆ ವಿಜಯ್ ಮರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದೀರಾ: ತಮನ್ನಾಗೆ ನೆಟ್ಟಿಗರಿಂದ ಕ್ಲಾಸ್

    ಬಾಲಿವುಡ್(Bollywood) ಮತ್ತು ಸೌತ್ ಸಿನಿಮಾರಂಗದಲ್ಲಿ ಸದ್ಯ ಸದ್ದು ಮಾಡ್ತಿರುವ ವಿಚಾರ ಅಂದರೆ ವಿಜಯ್ ವರ್ಮಾ (Vijay Varma) ಮತ್ತು ತಮನ್ನಾ ಭಾಟಿಯಾ (Tamannaah Bhatia) ಡೇಟಿಂಗ್ ಸುದ್ದಿ. ಇಬ್ಬರ ಲಿಪ್‌ಲಾಕ್ ವೀಡಿಯೋ ವೈರಲ್ ಆದ ಬೆನ್ನಲ್ಲೇ ಗೋವಾದಲ್ಲಿ ಕ್ಲಿಕ್ಕಿಸಿಕೊಂಡಿದ್ದ ಫೋಟೋ, ವೀಡಿಯೋವನ್ನ ತಮನ್ನಾ ಶೇರ್ ಮಾಡಿದ್ದಾರೆ.

    ನಟಿ ತಮನ್ನಾ ಅವರು ಹೊಸ ವರ್ಷ ಆಚರಣೆಗೆ ಗೋವಾಗೆ ತೆರಳಿದ್ದರು. ಅವರ ಜತೆ ಬಾಲಿವುಡ್ ನಟ ವಿಜಯ್ ವರ್ಮಾ (Actor Vijay Varma) ಕೂಡ ಇದ್ದರು. ಇಬ್ಬರೂ ಸೇರಿ ಹೊಸ ವರ್ಷ ಸ್ಪೆಷಲ್ ಆಗಿ ಆಚರಿಸಿಕೊಂಡಿದ್ದಾರೆ. ಇಬ್ಬರೂ ಕಿಸ್ ಮಾಡಿಕೊಳ್ಳುತ್ತಿರುವ ವಿಡಿಯೋ ಮೂಲಕ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಖಚಿತವಾಗಿತ್ತು. ಇದನ್ನೂ ಓದಿ: ಅದ್ದೂರಿಯಾಗಿ ನಡೆಯಲಿದೆ ಕೆ.ಎಲ್ ರಾಹುಲ್- ಅಥಿಯಾ ಶೆಟ್ಟಿ ಮದುವೆ

     

    View this post on Instagram

     

    A post shared by Tamannaah Bhatia (@tamannaahspeaks)

    ಬೀಚ್‌ನಲ್ಲಿ ಇರುವ ಫೋಟೋ, ಹೋಟೆಲ್‌ನಲ್ಲಿ ಊಟ ಮಾಡುತ್ತಿರುವ ಫೋಟೋಗಳನ್ನು ತಮನ್ನಾ ಅವರು ಹಂಚಿಕೊಂಡಿದ್ದಾರೆ. ಈ ಫೋಟೋ ನೋಡುತ್ತಿದ್ದಂತೆ ಫ್ಯಾನ್ಸ್ ವಿಜಯ್ ವರ್ಮಾ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಈ ಫೋಟೋಗಳನ್ನು ಕ್ಲಿಕ್ಕಿಸಿದ್ದು ವಿಜಯ್ ವರ್ಮಾ ಅಲ್ಲವೇ? ಅವರಿಗೆ ಕ್ರೆಡಿಟ್ ಕೊಡಿ ಎಂದು ಕೆಲವರು ಬರೆದುಕೊಂಡಿದ್ದಾರೆ. ತಮನ್ನಾ ಫೋಟೋ ಕೆಳಗೆ ಅಭಿಮಾನಿಗಳು ಅನೇಕ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

    ನೀವು ಯಾಕೆ ವಿಜಯ್ ವರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೋರ್ವ ಅಭಿಮಾನಿ, ನಿಮಗೆ ವಿಜಯ್ ವರ್ಮಾ ಸೂಟ್ ಆಗಲ್ಲ ಎಂದು ಹೇಳಿದ್ದಾರೆ. ಇನ್ನೂ ಕೆಲವರು ತುಂಬಾ ಕೆಟ್ಟ ಸೆಲೆಕ್ಷನ್ ತಮನ್ನಾ, ಅವರ ಜೊತೆ ಹೇಗೆ ಲಿಪ್‌ಲಾಕ್ ಮಾಡಿದ್ರಿ ಎಂದು ಕೇಳುತ್ತಿದ್ದಾರೆ.

    ಒಟ್ನಲ್ಲಿ ತಮನ್ನಾ, ಗೋವಾದ ಫೋಟೋ ಶೇರ್ ಮಾಡುತ್ತಿದ್ದಂತೆ ಪ್ರಶ್ನೆಗಳ ಸುರಿಮಳೆಯನ್ನೇ ಅಭಿಮಾನಿಗಳು ನಟಿಯ ಮುಂದೆ ಇಟ್ಟಿದ್ದಾರೆ. ಆದರೂ ಈ ಬಗ್ಗೆ ತಮನ್ನಾ ಯಾವುದೇ ಪ್ರತಿಕ್ರಿಯೆ ನೀಡದೇ ಸೈಲೆಂಟ್ ಆಗಿದ್ದಾರೆ. ಸದ್ಯ ತಮನ್ನಾ ಈ ವರ್ಷ ತಮ್ಮ ಮದುವೆಯ ಗುಡ್ ನ್ಯೂಸ್ ಕೊಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮದುವೆ: ಬಾಳಸಂಗಾತಿಯನ್ನ ಪರಿಚಯಿಸಿದ ನಟಿ

    ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮದುವೆ: ಬಾಳಸಂಗಾತಿಯನ್ನ ಪರಿಚಯಿಸಿದ ನಟಿ

    ಟಾಲಿವುಡ್‌ನ(Tollywood) ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ(Tamanna Bhatiya) ಹಸೆಮಣೆ ಏರಲು ಸಜ್ಜಾಗಿದ್ದಾರೆ. ತಾವು ಮದುವೆಯಾಗುತ್ತಿರುವ(Wedding) ಬ್ಯುಸಿನೆಸ್‌ಮ್ಯಾನ್ ಎಂಬುದನ್ನ ಕೂಡ ಸಾಮಾಜಿಕ ಜಾಲತಾಣದಲ್ಲಿ ರಿವೀಲ್ ಮಾಡಿದ್ದಾರೆ.

    ಬಹುಭಾಷಾ ನಟಿ ತಮನ್ನಾ ಸದ್ಯ ತಮ್ಮ ಮದುವೆಯ ವಿಷ್ಯವಾಗಿ ಸುದ್ದಿಯಲ್ಲಿದ್ದಾರೆ. ಸದ್ಯದಲ್ಲೇ ನಟಿ ಹಸಮಣೆ ಏರಲಿದ್ದಾರೆ ಎಂದವರಿಗೆ ತಮನ್ನಾ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಮದುವೆ ವಿಷ್ಯ ಏಲ್ಲೆಡೆ ಹಬ್ಬುತ್ತಿದ್ದಂತೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗೆ ತಮನ್ನಾ ಸೀರೆ ವೀಡಿಯೋ ಶೇರ್ ಮಾಡಿದ್ದರು. ಈ ವಿಡಿಯೋ ನೋಡಿ ನೆಟ್ಟಿಗರು ತಮನ್ನಾ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡಲು ಶುರುವಾಗಿತ್ತು.

     

    View this post on Instagram

     

    A post shared by Viral Bhayani (@viralbhayani)

    ತಮ್ಮ ವೀಡಿಯೋ ಮೂಲಕ ನಟಿ ಸ್ಪಷ್ಟನೆ ಕೊಟ್ಟಿದ್ದಾರೆ. ಒಮ್ಮೆ ಸೀರೆಯುಟ್ಟು ಪೋಸ್ ಕೊಟ್ಟ ತಮನ್ನಾ ಸಡನ್ ಆಗಿ ಬಾಗಿಲು ಮುಚ್ಚಿ, ಗಂಡು ಹುಡುಗನ ವೇಷದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ನಟಿಯ ಕಾಸ್ಟೂಮ್ ಬದಲಾವಣೆ ಮಾಡುವ ಮೂಲಕ ಎಲ್ಲಾ ವದಂತಿಗೂ ಬ್ರೇಕ್ ಹಾಕಿದ್ದಾರೆ. ಗಂಡು ಹುಡುಗನ ವೇಷ ಧರಿಸಿ, ಇವರೇ ಉದ್ಯಮಿ ಎಂದು ಹೇಳುವ ಮೂಲಕ ತಮ್ಮದೇ ರೀತಿಯಲ್ಲಿ ತಮನ್ನಾ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:`ಕಾಂತಾರ’ ಮುಂದೆ ಬೆದರಿದ ಬಾಲಿವುಡ್: ಥಿಯೇಟರ್‌ಗೆ `ಗುಡ್ ಬೈ’ ಹೇಳಿದ ರಶ್ಮಿಕಾ ಚಿತ್ರ

    ಸೀರಿಯಸ್ ಅಗಿ ಹೇಳಿ ಯಾಕೆ ಈ ರೀತಿ ಮಾಡುತ್ತೀರಾ ಎಂದು ವೈರಲ್ ವಿಡಿಯೋಗೆ ತಮನ್ನಾ ಪ್ರಶ್ನೆ ಮಾಡಿದ್ದಾರೆ. ಹಸಿರು ಬಣ್ಣದ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದು ತಮನ್ನಾನೇ. ಹೌದು ಸೀರೆ ಬದಲಾಯಿಸಿ ಹುಡುಗನಂತೆ ವೇಷ ಧರಿಸಿದ ತಮನ್ನಾ, ವೀಡಿಯೋ ಮೂಲಕ ಮದುವೆಯ ಸುದ್ದಿ ಕೇವಲ ಗಾಳಿ ಮಾತುಗಳು. ಪ್ರತಿಯೊಬ್ಬರು ನನ್ನ ಜೀವನ ಕಥೆಯನ್ನು ಬರೆಯುತ್ತಿದ್ದಾರೆ ನನ್ನ ಬಿಟ್ಟು ಎಂದು ತಮನ್ನಾ ಬರೆದುಕೊಳ್ಳುವ ಮೂಲಕ ಸ್ಪಷನೆ ಕೊಟ್ಟಿದ್ದಾರೆ.

    ನನ್ನ ವೃತ್ತಿ ಜೀವನ ಚೆನ್ನಾಗಿದೆ ಮಾಡಲು ತುಂಬಾ ಕೆಲಸ ಇದೆ. ನನ್ನ ವೃತ್ತಿ ಜೀವನದತ್ತ ಗಮನ ಹರಿಸುತ್ತೇನೆ ಎಂದು ಹೇಳಿ, ಮದುವೆ ಬಗ್ಗೆ ಸದ್ಯ ಯಾವುದೇ ಯೋಚನೆ ಇಲ್ಲಾ ಎಂಬುದನ್ನ ಸ್ಪಷ್ಟಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಿಲ್ಕಿ ಬ್ಯೂಟಿಗೆ ಬಿಕಿನಿನೂ ಒಪ್ಪತ್ತೆ ಅಂದ್ರು ಫ್ಯಾನ್ಸ್ : ಖುಷ್ ಅಂದ ತಮನ್ನಾ

    ಮಿಲ್ಕಿ ಬ್ಯೂಟಿಗೆ ಬಿಕಿನಿನೂ ಒಪ್ಪತ್ತೆ ಅಂದ್ರು ಫ್ಯಾನ್ಸ್ : ಖುಷ್ ಅಂದ ತಮನ್ನಾ

    ಬೇಸಿಗೆ ಬಂದತೆಂದರೆ ಬಹುತೇಕ ನಟ ನಟಿಯರು ಮಾಲ್ಡೀವ್ಸ್ ಎನ್ನುವ ಭೂಮಿ ಮೇಲಿನ ಸ್ವರ್ಗಕ್ಕೆ ಹಾರುತ್ತಾರೆ. ಈ ಸ್ವರ್ಗಕ್ಕೆ ಕರೆಯಿಸಿಕೊಳ್ಳುವುದಕ್ಕಾಗಿಯೇ ಮಾಲ್ಡೀವ್ಸ್ ನ ಅನೇಕ ಏಜನ್ಸಿಗಳು ಸಿಲಿಬ್ರಿಟಿಗಳಿಗೆ ಗಾಳ ಹಾಕುತ್ತವೆ. ಒಂದಷ್ಟು ನಿಬಂಧನೆಗಳೊಂದಿಗೆ ಒಪ್ಪಂದವಾದರೆ, ವಾಲ್ಡೀವ್ಸ್ ನ ಸ್ವರ್ಗಗದಲ್ಲಿ ಕೆಲ ದಿನಗಳ ಕಾಲ ಉಚಿತವಾಗಿ ಕಳೆಯಬೇಕು.

    ಒಪ್ಪಂದಗಳೇನು ಭಾರೀ ಕಠಿಣವಾದವುಗಳು ಅಲ್ಲ, ನಟಿಯರು ಕಡ್ಡಾಯವಾಗಿ ಬಿಕಿನಿ ಧರಿಸಬೇಕು ಮತ್ತು ಆ ವಿಡಿಯೋ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಬೇಕು. ತಾವು ಯಾವ ಸ್ಥಳದಲ್ಲಿ ಇದ್ದೇವೆ ಎನ್ನುವುದು ಸ್ಪಷ್ಟವಾಗಿ ನಮೂದಿಸಿರಬೇಕು. ಇದು ಪ್ರವಾಸಿ ಸ್ಥಳಗಳನ್ನು ಆಕರ್ಷಿಸಲು ಮಾಲ್ಡೀವ್ಸ್ ಮಾಡಿಕೊಂಡಿರುವ ವಿಶೇಷ ಪ್ಯಾಕೇಜ್. ಇದನ್ನೂ ಓದಿ : ತೂಫಾನಿಗೆ ಸೋಷಿಯಲ್ ಮೀಡಿಯಾ ಗಡಗಡ: ಪೂಜೆಗೆ ಬಂದ ಯಶ್ ಅಭಿಮಾನಿಗಳು

     

     

    View this post on Instagram

     

    A post shared by Tamannaahspeaks (@tamannaahspe)

    ಅಂತಹದ್ದೇ ಭೂಮಿ ಮೇಲಿನ ಸ್ವರ್ಗದಲ್ಲಿ ಆನಂದವಾಗಿ ಬಿಕಿನಿ ತೊಟ್ಟು ಕ್ಯಾಮೆರಾಗೆ ಫೋಸ್ ಕೊಟ್ಟಿದ್ದಾರೆ ಮಿಲ್ಕಿ ಬ್ಯೂಟಿ ತಮನ್ನಾ. ಬೀಚ್ ಬಳಿ ಬಿಕಿನಿ ತೊಟ್ಟು ಕ್ಯಾಮೆರಾಗೆ ಪೋಸ್‍ ಕೊಟ್ಟಿದ್ದಾರೆ. ಅಲ್ಲದೇ ಕ್ಯಾಟ್ ವಾಕ್ ಎನ್ನುವಂತೆ ಮೆಲ್ಲನೆ ಕೆಲವು ಹೆಜ್ಜೆಗಳನ್ನು ಇಟ್ಟು ಪಡ್ಡೆಗಳ ಕಣ್ಣಿಗೆ ಹಬ್ಬವಾಗಿದ್ದಾರೆ. ಇದನ್ನೂ ಓದಿ : ಅಮೆರಿಕಾದಲ್ಲಿ ಅಪ್ಪು ಬರ್ತಡೇ, ಪುನೀತ್ ರಾಜ್ ಕುಮಾರ್ ಮಗಳೇ ಅತಿಥಿ

    ಈ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಮಿಲ್ಕಿ ಅಭಿಮಾನಿಗಳು ಫಿದಾ ಆಗಿದ್ದಾರೆ. ನಿಮಗೆ ಬಿಕಿನಿ ಒಪ್ಪುತ್ತದೆ, ಮೊದಲಿನಗಿಂತಲೂ ಸಖತ್ತಾಗಿ ಕಾಣಿಸುತ್ತಿರಿ ಎಂದು ಕಾಮೆಂಡ್ ಮಾಡಿದ್ದಾರೆ. ಇದನ್ನೂ ಓದಿ : ಕನ್ನಡದ ‘ದಸರಾ’ ವರ್ಸಸ್ ತೆಲುಗಿನ ‘ದಸರಾ’: ಯಾರಿಗೆ ಸಿಗತ್ತೆ ದಸರಾ ಟೈಟಲ್?

    ಈಗಷ್ಟೇ ಬಾಲಿವುಡ್ ನ ಸಿನಿಮಾದ ಶೂಟಿಂಗ್ ಮುಗಿಸಿಕೊಂಡು ರಜೆ ಕಳೆಯಲು ಮಾಲ್ಡೀವ್ಸ್ಗೆ ಹಾರಿರುವ ತಮ್ಮನ್ನಾ ಕೆಲ ದಿನಗಳ ಕಾಲ ಫ್ರೆಂಡ್ಸ್ ಜತೆ ಅಲ್ಲಿಯೇ ತಂಗಲಿದ್ದಾರೆ. ನಂತರ ಮತ್ತೆ ಶೂಟಿಂಗ್ ನಲ್ಲಿ ಅವರು ಪಾಲ್ಗೊಳ್ಳಲಿದ್ದಾರಂತೆ.