Tag: talwar

  • ಸಂಸದ, ಶಾಸಕ ತಲ್ವಾರ್ ಹಿಡಿದ ಫೋಟೋ ಫೇಸ್‍ಬುಕ್‍ಗೆ ಅಪ್ಲೋಡ್..!

    ಸಂಸದ, ಶಾಸಕ ತಲ್ವಾರ್ ಹಿಡಿದ ಫೋಟೋ ಫೇಸ್‍ಬುಕ್‍ಗೆ ಅಪ್ಲೋಡ್..!

    – ನೀತಿ ಸಂಹಿತೆ ಉಲ್ಲಂಘಿಸಿದ ಬಿಜೆಪಿ ಕಾರ್ಯಕರ್ತರು

    ಧಾರವಾಡ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಇದ್ದಾಗಲೇ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಹಾಗೂ ಶಾಸಕ ಅರವಿಂದ್ ಬೆಲ್ಲದ ಅವರು ತಲ್ವಾರ್ ಹಿಡಿದ ಫೋಟೋವನ್ನು ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ನೀತಿ ಸಂಹಿತೆ ನಿಯಮವನ್ನು ಉಲ್ಲಂಘಿಸಿದ್ದಾರೆ.

    ಪ್ರಹ್ಲಾದ್ ಜೋಶಿ ಮತ್ತು ಅರವಿಂದ ಬೆಲ್ಲದ ಕೈಯಲ್ಲಿ ತಲ್ವಾರ್ ಹಿಡಿದ ಫೋಟೋವನ್ನು ಬಿಜೆಪಿ ಪಕ್ಷದ ಕಾರ್ಯಕರ್ತರೊಬ್ಬರು ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಯಾವುದೇ ಆಯುಧ ಪ್ರದರ್ಶಿಸಬಾರದು. ಆಯುಧ ಹಿಡಿದ ಫೋಟೋ ಕೂಡ ಸಾರ್ವಜನಿಕವಾಗಿ ಹಂಚಿಕೊಳ್ಳೋದು ಕೂಡ ತಪ್ಪು. ಆದ್ರೆ ಬಿಜೆಪಿ ಕಾರ್ಯಕರ್ತ, ಜೋಶಿ ಹಾಗೂ ಬೆಲ್ಲದ ತಲ್ವಾರ್ ಹಿಡಿದ ಫೋಟೋ ಹಾಕಿ ಮತ್ತೊಮ್ಮೆ ನಾವೇ ಗೆಲ್ಲೋದು ಎಂದು ಪೋಸ್ಟ್ ಮಾಡಿದ್ದಾರೆ.

    ಶಕ್ತಿ ಧಾರವಾಡ ಬಿಜೆಪಿ ಯುವಮೋರ್ಚಾ ಕಾರ್ಯಕರ್ತ, ಎರಡು ದಿನಗಳ ಹಿಂದೆ ಧಾರವಾಡದ ಅಶೋಕ ಹೊಟೇಲ್‍ಗೆ ಬಂದಾಗ ಜನಪ್ರತಿನಿಧಿಗಳು ತಲ್ವಾರ್ ಹಿಡಿದು ಫೋಟೋಗೆ ಪೋಸ್ ಕೊಟ್ಟಿದ್ದರು. ಅದೇ ಫೋಟೋವನ್ನು ನೀತಿ ಸಂಹಿತೆ ಜಾರಿಯಾದ ಬಳಿಕ ಕಾರ್ಯಕರ್ತ ಪೋಸ್ಟ್ ಮಾಡಿ ಚುನಾವಣಾ ಆಯೋಗದ ನಿಯಮವನ್ನು ಉಲ್ಲಂಘಿಸಿದ್ದಾರೆ.

    https://www.facebook.com/shakti.hiremath/posts/2113167555464960

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಲ್ವಾರ್​ನಿಂದ ಕೇಕ್ ಕತ್ತರಿಸಿ ಸಂಭ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತೆ..!

    ತಲ್ವಾರ್​ನಿಂದ ಕೇಕ್ ಕತ್ತರಿಸಿ ಸಂಭ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತೆ..!

    ಚಿಕ್ಕೋಡಿ(ಬೆಳಗಾವಿ): ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರು ತಲ್ವಾರಿನಿಂದ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿ ಇದೀಗ ವಿವಾದಕ್ಕೀಡಾಗಿದ್ದಾರೆ..

    ಈ ಘಟನೆ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗ್ರಾಮ ಇಸ್ಲಾಂಪುರದಲ್ಲಿ ನಡೆದಿದೆ. ಅಮೀರಾ ದೇಸಾಯಿ ತಲ್ವಾರ್ ನಿಂದ ಕೇಕ್ ಕತ್ತರಿಸಿದ ಕಾಂಗ್ರೆಸ್ ಕಾರ್ಯಕರ್ತೆ.

    ಅಮೀರಾ ಹುಟ್ಟುಹಬ್ಬವಿದ್ದ ಕಾರಣ ಶುಕ್ರವಾರ ರಾತ್ರಿ ತಲ್ವಾರ್ ಮುಖಾಂತರ ಕೇಕ್ ಕಟ್ ಮಾಡಿ ತಮ್ಮ ಕಾರ್ಯಕರ್ತರೊಂದಿಗೆ ಬರ್ತ್ ಡೇ ಆಚರಣೆ ಮಾಡಿದ್ದಾರೆ. ಇದೀಗ ಕಾರ್ಯಕರ್ತೆಯ ಹುಟ್ಟುಹಬ್ಬ ಆಚರಣೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಯಮಕನಮರಡಿ ಫೋಲೀಸ್ ಠಾಣಾ ವ್ಯಾಪ್ಯಿಯಲ್ಲಿ ಈ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಲ್ವಾರ್‌ನಿಂದ ಕೇಕ್ ಕಟ್ ಮಾಡಿ ಯುವಕನ ಪುಂಡಾಟ

    ತಲ್ವಾರ್‌ನಿಂದ ಕೇಕ್ ಕಟ್ ಮಾಡಿ ಯುವಕನ ಪುಂಡಾಟ

    ವಿಜಯಪುರ: ಭೀಮಾ ತೀರದಲ್ಲಿ ಯುವಕ ತಲ್ವಾರ್‌ನಿಂದ ಕೇಕ್ ಕಟ್ ಮಾಡಿ ಪುಂಡಾಟಿಕೆ ಮೆರೆದಿದ್ದಾನೆ.

    ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಕಾತ್ರಾಳ ಗ್ರಾಮದ ಯುವಕ ಮಹೇಶ್ ಸಾರವಾಡ ತಲ್ವಾರ್‌ನಿಂದ ಕೇಕ್ ಕಟ್ ಮಾಡಿದ್ದಾನೆ. ಕಳೆದ ಎರಡು ದಿನದ ಹಿಂದೆ ಮಹೇಶ್ ಸಾರವಾಡ ಹುಟ್ಟುಹಬ್ಬ ಇತ್ತು. ಹುಟ್ಟುಹಬ್ಬಕ್ಕೆ ಚಾಕುವಿನಿಂದ ಕೇಕ್ ಕಟ್ ಮಾಡುವ ಬದಲು ತಲ್ವಾರ್‍ನಿಂದ ಕಟ್ ಮಾಡುವ ಮೂಲಕ ಆಚರಿಸಿಕೊಂಡಿದ್ದಾನೆ.

    ಮಹೇಶ್ ತಲ್ವಾರ್‌ನಿಂದ ಕೇಕ್ ಕಟ್ ಮಾಡಿದ್ದಲ್ಲದೆ ಆ ಫೋಟೋಗಳನ್ನು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹರಿಬಿಟ್ಟಿದ್ದಾನೆ. ಈ ಮೂಲಕ ತನ್ನ ಪ್ರಭಾವ ತೋರಿಸಿದರೂ ಕಣ್ಣಿದ್ದು ಪೊಲಿಸ್ ಇಲಾಖೆ ಕುರುಡಾಗಿದೆ.

    ಸದ್ಯ ಮಹೇಶ್ ತಲ್ವಾರ್‌ನಿಂದ ಕೇಕ್ ಕಟ್ ಮಾಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹೇಶ್‍ನ ಈ ವರ್ತನೆಯಿಂದ ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ. ಹೀಗಾಗಿ ಈ ಕೂಡಲೇ ಮಹೇಶ್ ಸಾರವಾಡನನ್ನು ಬಂಧಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಲ್ವಾರ್​ನಿಂದ ಕೇಕ್ ಕತ್ತರಿಸಿದ ಬಿಜೆಪಿ ಮುಖಂಡ ಅರೆಸ್ಟ್

    ತಲ್ವಾರ್​ನಿಂದ ಕೇಕ್ ಕತ್ತರಿಸಿದ ಬಿಜೆಪಿ ಮುಖಂಡ ಅರೆಸ್ಟ್

    ಬೆಳಗಾವಿ: ತಲ್ವಾರ್​ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದಕ್ಕೆ ಬೆಳಗಾವಿಯ ಬಿಜೆಪಿ ಮುಖಂಡ ನಿಖಿಲ್ ಮುರ್ಕುಟೆಯನ್ನು ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.

    ನಿಖಿಲ್ ಮುರ್ಕುಟೆ ಬೆಳಗಾವಿ ಮಹಾನಗರ ಬಿಜೆಪಿ ಯುವ ಮೋರ್ಚಾ ಘಟಕದ ಅಧ್ಯಕ್ಷನಾಗಿದ್ದಾನೆ. ಫೆ.1 ರಂದು ಬೆಳಗಾವಿಯ ಗಾಂಧಿನಗರದಲ್ಲಿ ಬರ್ತ್ ಡೇ ಪಾರ್ಟಿ ನಡೆದಿತ್ತು. ನಿಖಿಲ್ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ಹಾಗೂ ಮಾಜಿ ಶಾಸಕ ಸಂಜಯ್ ಪಾಟೀಲ್ ಆಗಮಿಸಿದ್ದರು.

    ಬೆಳಗಾವಿ ಮಾಳಮಾರುತಿ ಪೊಲೀಸರು ತಡರಾತ್ರಿ ಕಾರ್ಯಚರಣೆ ನಡೆಸಿ ನಿಖಿಲ್ ಮುರ್ಕುಟೆನನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.

    ಹುಬ್ಬಳ್ಳಿ, ವಿಜಯಪುರ ನಂತರ ಬೆಳಗಾವಿಯಲ್ಲೂ ಈ ಪ್ರಕರಣ ಮುಂದುವರಿದಿದೆ. ಇಲ್ಲಿಯವರೆಗೂ ಪುಡಿ ರೌಡಿಗಳು ತಲ್ವಾರ್ ನಿಂದ ಕೇಕ್ ಕಟ್ ಮಾಡುತ್ತಿದ್ದರು. ಆದರೆ ಈಗ ಬಿಜೆಪಿ ಪಕ್ಷದ ಮುಖಂಡ ತಲ್ವಾರ್ ನಿಂದ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಲ್ವಾರ್ ಹಿಡಿದು ಕೇಕ್ ಕಟ್ ಮಾಡಿ ಮೆರೆದವನನ್ನ ಜೈಲಿಗಟ್ಟಿದ್ರು

    ತಲ್ವಾರ್ ಹಿಡಿದು ಕೇಕ್ ಕಟ್ ಮಾಡಿ ಮೆರೆದವನನ್ನ ಜೈಲಿಗಟ್ಟಿದ್ರು

    ಕಲಬುರಗಿ: ತಲ್ವಾರ್ ನಿಂದ ಕೇಕ್ ಕತ್ತರಿಸುವ ಮೂಲಕ ಜನ್ಮದಿನ ಆಚರಿಸಿಕೊಂಡ ಯುವಕನನ್ನು ಪೊಲೀಸರು ಜೈಲಿಗಟ್ಟಿ ಕಂಬಿ ಎಣಿಸುವಂತೆ ಮಾಡಿದ್ದಾರೆ.

    ಜಿಲ್ಲೆಯ ಕಮಲಾಪುರ ಪಟ್ಟಣದ ನಿವಾಸಿ ಸೈಯದ್ ಇಮ್ರಾನ್ ನಾಗೂರೆ ತಲ್ವಾರ್ ನಿಂದ ಕೇಕ್ ಕತ್ತರಿಸುವ ಮೂಲಕ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾನೆ. ಜನವರಿ 1ರಂದು ಸೈಯದ್‍ನ ಹುಟ್ಟುಹಬ್ಬವಿತ್ತು. ಆದ್ದರಿಂದ ಸ್ನೇಹಿತರ ಜೊತೆ ಸೇರಿ ತಲ್ವಾರ್ ನಿಂದ ಕೇಕ್ ಕತ್ತರಿಸಿ ಖುಷಿಪಟ್ಟಿದ್ದಾನೆ. ಅಲ್ಲದೆ ಕಾರ್ಯಕ್ರಮಕ್ಕೆ ಬಂದವರ ಕೈಯಲ್ಲಿ ಕೂಡ ಶಸ್ತ್ರಾಸ್ತ್ರ ಕೊಟ್ಟು ಪುಂಡತನ ಮೆರೆದಿದ್ದಾನೆ. ಇದನ್ನೂ ಓದಿ: ತಲ್ವಾರ್‌ನಿಂದ ಕೇಕ್ ಕತ್ತರಿಸಿ ಜೆಡಿಎಸ್ ಮುಖಂಡನ ಹುಟ್ಟುಹಬ್ಬ ಆಚರಣೆ

    ಇತ್ತೀಚೆಗೆ ಈ ರೀತಿಯ ವಿಕೃತವಾಗಿ ಮಾರಕಾಸ್ತ್ರಗಳನ್ನು ಬಳಸಿ ಹುಟ್ಟುಹಬ್ಬಗಳನ್ನು ಆಚರಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೆ ಇವರು ನಡುರಸ್ತೆಯಲ್ಲಿಯೇ ಮಾರಕಾಸ್ತ್ರಗಳನ್ನು ಪ್ರದರ್ಶಿಸಿ ರೌಡಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ತಿಳಿಯುತಿದ್ದಂತೆ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

    ಈ ಘಟನೆ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ತಾನು ಮಾಡಿದ ಪುಂಡತನಕ್ಕೆ ಜೈಲು ಕಂಬಿ ಎಣಿಸುತ್ತಾ ಕುಳಿತಿದ್ದಾನೆ.

    ಈ ಹಿಂದೆ ಕೂಡ ಹಲವು ಮಂದಿ ಹೀಗೆ ತಲ್ವಾರ್ ನಿಂದ ಕೇಕ್ ಕತ್ತರಿಸಿ ವಿಕೃತವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಹೀಗೆ ಮಾಡುವುದರಿಂದ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ. ಮಾರಕಾಸ್ತ್ರಗಳನ್ನು ಪ್ರದರ್ಶಿಸಿ ರೌಡಿ ಚಟುವಟಿಕೆಗಳನ್ನು ಪ್ರೇರೇಪಿಸುತ್ತಿದ್ದಾರೆ. ಇದು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದನ್ನು ನೋಡಿ ಮುಂದಿನ ಯುವಪೀಳಿಗೆ ಕೂಡ ಇದನ್ನೇ ಪಾಲಿಸುತ್ತದೆ ಎಂದು ಆರೋಪಿಗಳ ಮೇಲೆ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಲ್ವಾರ್‌ನಿಂದ ಕೇಕ್ ಕತ್ತರಿಸಿ ಜೆಡಿಎಸ್ ಮುಖಂಡನ ಹುಟ್ಟುಹಬ್ಬ ಆಚರಣೆ

    ತಲ್ವಾರ್‌ನಿಂದ ಕೇಕ್ ಕತ್ತರಿಸಿ ಜೆಡಿಎಸ್ ಮುಖಂಡನ ಹುಟ್ಟುಹಬ್ಬ ಆಚರಣೆ

    ಕೊಪ್ಪಳ: ಜೆಡಿಎಸ್ ಮುಖಂಡರೊಬ್ಬರು ತಮ್ಮ ಹುಟ್ಟುಹಬ್ಬವನ್ನು ತಲ್ವಾರ್‌ನಿಂದ ಕೇಕ್ ಕತ್ತರಿಸಿ ಆಚರಿಸುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಜೆಡಿಎಸ್ ಮುಖಂಡ ಮೆಹಮೂದ್ ಹುಸೇನ್ ಬಲ್ಲೆ ತಲ್ವಾರ್‌ನಿಂದ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಕೊಪ್ಪಳದಲ್ಲಿ ಮಂಗಳವಾರ ಹುಟ್ಟುಹಬ್ಬ ಆಚರಿಕೊಂಡ ಹುಸೇನ್ ಅವರು ಸ್ನೇಹಿತರ ಜೊತೆಗೂಡಿ ತಲ್ವಾರ್‌ನಿಂದ ಕೇಕ್ ಕತ್ತರಿಸಿ ಖುಷಿಪಟ್ಟ ವಿಡಿಯೋವನ್ನು ತಮ್ಮ ಫೇಸ್‍ಬುಕ್ ಖಾತೆಯಿಂದಲೇ ಪೋಸ್ಟ್ ಮಾಡಿದ್ದಾರೆ.

    ರಾಜಕೀಯಕ್ಕೆ ಸೇರುವ ಮೊದಲು ಹುಸೇನ್ ರೌಡಿ ಶೀಟರ್ ಸಹ ಆಗಿದ್ದರು. ಈಗ ರೌಡಿಸಂ ಬಿಟ್ಟು ರಾಜಕೀಯಕ್ಕೆ ಸೇರಿ ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಆದರೆ ತಮ್ಮ ಸ್ಥಾನದ ಬೆಲೆ ಮರೆತು ವಿಕೃತವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿರೋದಕ್ಕೆ ಸಾರ್ವಜನಿಕರು ಟೀಕೆ ವ್ಯಕ್ತಪಡಿಸಿದ್ದಾರೆ. ಮಾರಕಾಸ್ತ್ರಗಳನ್ನು ಬಳಸುವುದು ತಪ್ಪು. ಅದರಲ್ಲೂ ತಲ್ವಾರ್‌ನಿಂದ ಕೇಕ್ ಕಟ್ ಮಾಡ್ತಿರೋದನ್ನು ಫೇಸ್‍ಬುಕ್ ನಲ್ಲಿ ಹಾಕಿಕೊಂಡು ರೌಡಿ ಚಟುವಟಿಕೆಗೆ ಪ್ರೇರೇಪಿಸುತ್ತಿದ್ದಾರೆ ಎಂಬ ಆರೋಪ ಅವರ ವಿರುದ್ಧ ಕೇಳಿಬರುತ್ತಿದೆ.

    ಈ ಹಿಂದೆ ಕೂಡ ಹಲವು ಮಂದಿ ಹೀಗೆ ತಲ್ವಾರ್‌ನಿಂದ ಕೇಕ್ ಕತ್ತರಿಸಿ ವಿಕೃತವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಹೀಗೆ ಮಾಡುವುದರಿಂದ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ. ಮಾರಕಾಸ್ತ್ರಗಳನ್ನು ಪ್ರದರ್ಶಿಸಿ ರೌಡಿ ಚಟುವಟಿಕೆಗಳನ್ನು ಪ್ರೇರೇಪಿಸುತ್ತಿದ್ದಾರೆ ಎಂದು ಆರೋಪಿಗಳ ಮೇಲೆ ಪೊಲೀಸರು ಕ್ರಮ ತೆಗೆದುಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಲ್ವಾರ್ ನಿಂದ ಕೊಚ್ಚಿ ವ್ಯಕ್ತಿಯ ಕಗ್ಗೊಲೆ

    ತಲ್ವಾರ್ ನಿಂದ ಕೊಚ್ಚಿ ವ್ಯಕ್ತಿಯ ಕಗ್ಗೊಲೆ

    ಹುಬ್ಬಳ್ಳಿ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳು ತಲ್ವಾರ್ ನಿಂದ ಕೊಚ್ಚಿ ಕೊಲೆಗೈದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಈ ಘಟನೆ ಹುಬ್ಬಳ್ಳಿಯ ತಾಬಿಬ್ ಲ್ಯಾಂಡ್ ಬಳಿ ನಡೆದಿದೆ. ಇಮ್ತೀಯಾಜ್ ಕಣವಿ (35) ಅಲಿಯಾಸ್ ಕಾಡತೂಸ್ ಕೊಲೆಯಾದ ವ್ಯಕ್ತಿ. ಇವರನ್ನು ದಾವೂದ್ ನಾದಫ್ ಹಾಗೂ ಸಹಚರರು ಬರ್ಬರವಾಗಿ ಕೊಲೆಗೈದಿದ್ದಾರೆ.

    ಮೃತ ವ್ಯಕ್ತಿ ಹಾಗೂ ದಾವೂದ್ ಹುಬ್ಬಳ್ಳಿಯ ಮಂಟೂರ್ ರಸ್ತೆಯ ಮೌಲಾಲಿ ಜೊಪಡಿ ನಿವಾಸಿಗಳಾಗಿದ್ದಾರೆ. ಊಟಕ್ಕೆಂದು ಹೊರಗಡೆ ಬಂದಾಗ ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರ ನಡುವೆ ಜಗಳವಾಗಿದೆ. ಈ ಜಗಳ ತಾರಕಕ್ಕೇರಿ ದಾವೂದ್ ಸಹಚರರು ಇಮ್ತಿಯಾಜ್ ಯವರನ್ನು ಕೊಲೆಗೈದಿದ್ದಾರೆ.

    ಸ್ಥಳಕ್ಕೆ ಶಹರ ಠಾಣೆಯ ಪೊಲೀಸರು ಭೇಟಿ ನೀಡಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಈ ಸಂಬಂಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಲ್ವಾರ್  ನಿಂದ ಕೇಕ್ ಕತ್ತರಿಸಿದವ ಅರೆಸ್ಟ್

    ತಲ್ವಾರ್ ನಿಂದ ಕೇಕ್ ಕತ್ತರಿಸಿದವ ಅರೆಸ್ಟ್

    ಹುಬ್ಬಳ್ಳಿ: ತಲ್ವಾರ್ ನಿಂದ ಕೇಕ್ ಕತ್ತರಿಸಿಕೊಂಡು ಹುಟ್ಟು ಹಬ್ಬ ಆಚರಿಸಿಕೊಂಡ ಶಂಭು ಬಿಜವಾಡ ಎಂಬಾತನನ್ನು ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿ ಸೆಟ್ಲಮೆಂಟ್ ನಿವಾಸಿಯಾಗಿದ್ದು, ಇತ್ತೀಚಿಗೆ ಈತ ಹುಟ್ಟುಹಬ್ಬ ಆಚರಿಸಿಕೊಂಡಿದ್ದನು. ಆಗ ತಲ್ವಾರ್ ನಿಂದ ಕೇಕ್ ಕತ್ತರಿಸಿದ್ದನು. ರೌಡಿ ಚಟುವಟಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಈತನನ್ನು ಬಂಧಿಸಲಾಗಿದೆ.

    ಇತ್ತೀಚೆಗೆ ಗಣೇಶಪೇಟಿಯಲ್ಲಿ ಇರ್ಷಾದ್ ಎಂಬಾತ ಸಹ ತನ್ನ ಹುಟ್ಟುಹಬ್ಬ ಆಚರಣೆ ವೇಳೆ ತಲ್ವಾರ್ ನಿಂದ ಕೇಕ್ ಕತ್ತರಿಸಿಕೊಂಡು ಆಚರಿಸಿಕೊಂಡಿದ್ದನು. ಇದನ್ನೂ ಓದಿ: ತಲ್ವಾರ್ ನಿಂದ ಕೇಕ್ ಕತ್ತರಿಸಿ ವಿಚಿತ್ರವಾಗಿ ಹುಟ್ಟುಹಬ್ಬ ಆಚರಿಸಿದ! – ವಿಡಿಯೋ ವೈರಲ್

    ತಲ್ವಾರ್ ನಿಂದ ಸ್ನೇಹಿತರಿಗೆ ಕೇಕ್ ತಿನ್ನಿಸಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಪದೇ ಪದೇ ನಗರದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಡುತ್ತಿದೆ. ಹುಟ್ಟು ಹಬ್ಬದ ಹೆಸರಿನಲ್ಲಿ ಮಾರಕಾಸ್ತ್ರಗಳ ಪ್ರದರ್ಶನ ಹಾಗೂ ವಿಕೃತಿ ಮೆರೆಯುವದು ಹೆಚ್ಚಾಗುತ್ತಿದೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಿಂದ ಕಟ್ಟುನಿಟ್ಟಿನ ಕ್ರಮವಿಲ್ಲ ಎಂದು ಸಾರ್ವಜನಿಕರು ದೂರಿದ್ದರು.

    ಸಾರ್ವಜನಿಕರ ದೂರಿನಿಂದ ಎಚ್ಚೆತ್ತುಕೊಂಡ ಪೊಲೀಸರು ಆತನನ್ನು ಬಂಧಿಸಿ ವಿಕೃತಿ ಮೆರೆಯುವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

  • ತನ್ನ ಮೇಕೆ ಬಳಿ ಹೋಗಿದ್ದ ವಿದ್ಯಾರ್ಥಿಯ ಕೈ ಕತ್ತರಿಸಿದ ಮಾಲೀಕ

    ತನ್ನ ಮೇಕೆ ಬಳಿ ಹೋಗಿದ್ದ ವಿದ್ಯಾರ್ಥಿಯ ಕೈ ಕತ್ತರಿಸಿದ ಮಾಲೀಕ

    ಬೀದರ್: ಕುಡಿದ ಅಮಲಿನಲ್ಲಿ ವಿದ್ಯಾರ್ಥಿಯೊಬ್ಬನ ಮೇಲೆ ತಲ್ವಾರ್ ನಿಂದ ಹಲ್ಲೆ ನಡೆಸಿದ ಘಟನೆ ಬೀದರ್ ತಾಲೂಕಿನ ಕಾಡವಾದ ಗ್ರಾಮದಲ್ಲಿ ನಡೆದಿದೆ.

    9ನೇ ತರಗತಿಯ ಅನಿಲ್ ಕುಮಾರ್ ಹಲ್ಲೆಗೊಳಗಾದ ವಿದ್ಯಾರ್ಥಿ. ಸಾಬಣ್ಣ ಹಲ್ಲೆ ನಡೆಸಿದ ಆರೋಪಿಯಾಗಿದ್ದಾನೆ. ಸಾಬಣ್ಣನ ಮೇಕೆ ಮನೆಗೆ ಅನಿಲ್ ಕುಮಾರ್ ಹೋಗಿದ್ದರಿಂದ ಕೋಪಗೊಂಡ ಸಾಬಣ್ಣ ಕುಡಿದ ಅಮಲಿನಲ್ಲಿ ಅನಿಲ್ ಮೇಲೆ ತಲ್ವಾರ್ ನಿಂದ ಹಲ್ಲೆ ಮಾಡಿದ್ದಾನೆ.

    ಹಲ್ಲೆಗೊಳಗಾದ ಅನಿಲ್ ಕುಮಾರ್‍ನ ಕೈ ಬಹುತೇಕ ತುಂಡಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಯ ಆವರಣದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಬಗದಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತಲ್ವಾರ್ ಹಿಡಿದು ಬೀದಿಯಲ್ಲಿ ಪುಂಡಾಟ – ಯುವಕ ಅರೆಸ್ಟ್

    ತಲ್ವಾರ್ ಹಿಡಿದು ಬೀದಿಯಲ್ಲಿ ಪುಂಡಾಟ – ಯುವಕ ಅರೆಸ್ಟ್

    ಧಾರವಾಡ: ಹಳೇ ಹುಬ್ಬಳ್ಳಿಯ ಆನಂದ್ ನಗರದಲ್ಲಿ ನಡುಬೀದಿಯಲ್ಲಿ ತಲ್ವಾರ್ ಹಿಡಿದು ಭೀತಿ ಹುಟ್ಟಿಸಿದ್ದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

    ಭಾನುವಾರ ರಾತ್ರಿ ಸುಮಾರು 8.30ರ ಕ್ಕೆ ನಗರದಲ್ಲಿ ತಲ್ವಾರ್ ಹಿಡಿದು ತಿರುಗಾಡಿ ಪುಂಡಾಟ ಮಾಡಿದ್ದ. ಪಲ್ಸರ್ ಬೈಕಿನಲ್ಲಿ ಬಂದಿದ್ದ ಇಬ್ಬರು ಯುವಕರು ಕೈಯಲ್ಲಿ ತಲ್ವಾರ್ ಹಿಡಿದುಕೊಂಡು ತಿರುಗಾಡಿದ್ದರು. ಪ್ರಕರಣ ಸಂಬಂಧ ಇಂದು ಪಬ್ಲಿಕ್ ಟಿವಿ ವರದಿಯನ್ನು ಬಿತ್ತರಿಸಿತ್ತು. ವರದಿ ಪ್ರಸಾರದ ಬಳಿಕ ಹಳೇ ಹುಬ್ಬಳ್ಳಿ ಪೊಲೀಸರು ಮಹಮ್ಮದ್ ಗೌಸ್ ಎಂಬ ಯುವಕನನ್ನು ಬಂಧಿಸಿದ್ದಾರೆ.

    ಕುಡಿದ ಅಮಲಿನಲ್ಲಿ ಮಹಮ್ಮದ್ ಗೌಸ್ ತಲ್ವಾರ್ ಶೋ ಕೊಟ್ಟಿದ್ದ ಎಂದು ತಿಳಿದುಬಂದಿದೆ. ರಾತ್ರಿ ತಲ್ವಾರ್ ಹಿಡಿದುಕೊಂಡು ತಿರುಗಾಡಿದ ಬಳಿಕ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ಪೊಲೀಸರು ಗೌಸ್ ನನ್ನು ವಿಚಾರಣೆ ಮಾಡುತ್ತಿದ್ದಾರೆ.