Tag: Talwar Raas

  • ಖಡ್ಗ ಹಿಡಿದು ಸ್ಮೃತಿ  ಇರಾನಿ ಡ್ಯಾನ್ಸ್ – ವಿಡಿಯೋ

    ಖಡ್ಗ ಹಿಡಿದು ಸ್ಮೃತಿ ಇರಾನಿ ಡ್ಯಾನ್ಸ್ – ವಿಡಿಯೋ

    ಗಾಂಧಿನಗರ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಗುಜರಾತಿನ ಭಾವನನಗರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಖಡ್ಗ ಹಿಡಿದು ಡ್ಯಾನ್ಸ್ ಮಾಡಿದ್ದಾರೆ.

    ಶುಕ್ರವಾರ ಆಯೋಜನೆ ಮಾಡಿದ್ದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಸ್ಮೃತಿ ಇರಾನಿ ಅವರು, ಮಕ್ಕಳ ಜೊತೆ ಗುಜರಾತಿನ ಸಂಪ್ರಾದಾಯಿಕ ನೃತ್ಯ ಪ್ರಕಾರವಾದ ತಲ್ವಾರ್ ರಾಸ್‍ನ್ನು ಎರಡು ಕೈಯಲ್ಲಿ ಖಡ್ಗವನ್ನು ಹಿಡಿದುಕೊಂಡು ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ತಲ್ವಾರ್ ರಾಸ್ ಕುಣಿತವು ಸಾಂಪ್ರದಾಯಿಕ ಜಾನಪದ ನೃತ್ಯವಾಗಿದ್ದು, ಇದು ಗುಜರಾತ್ ಮತ್ತು ರಾಜಸ್ಥಾನಗಳಲ್ಲಿ ಜನಪ್ರಿಯವಾಗಿದೆ. ಶ್ರೀ ಸ್ವಾಮಿನಾರಾಯಣ ಗುರುಕುಲ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಕೇಂದ್ರ ಜವಳಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಭಾಗವಹಿಸಿ ಮಕ್ಕಳ ಜೊತೆ ಖಡ್ಗ ಹಿಡಿದು ಡ್ಯಾನ್ಸ್ ಮಾಡಿದ್ದಾರೆ.