Tag: talwar

  • ತಡರಾತ್ರಿ ತಲ್ವಾರ್ ಝಳಪಿಸುತ್ತ ವ್ಹೀಲಿಂಗ್ ಮಾಡಿದ್ದ ಪುಂಡರ ಮೇಲೆ ರೌಡಿಶೀಟ್

    ತಡರಾತ್ರಿ ತಲ್ವಾರ್ ಝಳಪಿಸುತ್ತ ವ್ಹೀಲಿಂಗ್ ಮಾಡಿದ್ದ ಪುಂಡರ ಮೇಲೆ ರೌಡಿಶೀಟ್

    * 14 ವ್ಹೀಲಿಂಗ್ ಪುಂಡರಿಗೆ ಖಾಕಿಯಿಂದ ಡ್ರಿಲ್

    ಬೆಂಗಳೂರು: ನಡುರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಾ ತಲ್ವಾರ್ ಝಳಪಿಸಿದ್ದ ಪುಂಡರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

    ಡಿಜೆ ಹಳ್ಳಿಯಿಂದ ಹೊಸಕೋಟೆವರೆಗೆ ವ್ಹೀಲಿಂಗ್ ಮಾಡ್ತಾ ಆಟೋಟೋಪ ಮೆರೆದಿದ್ದ 14 ಪುಂಡರ ಮೇಲೆ ರೌಡಿಶೀಟ್ ಓಪನ್ ಮಾಡಲಾಗಿದೆ.

    ಷಬೇ-ಎ-ಬಾರತ್ ಧಾರ್ಮಿಕ ಹಬ್ಬದ ದಿನ ಕೆಲ ಪುಂಡರು ಡಿಜೆ ಹಳ್ಳಿಯಿಂದ ಹೊಸಕೋಟೆ ವರೆಗೆ ಹೋಗಿ, ಮತ್ತೆ ವಾಪಸ್ ಡಿಜೆ ಹಳ್ಳಿವರೆಗೆ ಮಾರಕಾಸ್ತ್ರ ಹಿಡಿದು ಪುಂಡಾಟಿಕೆ ಮೆರೆದಿದ್ದಾರೆ.

    ಎಲ್ಲಾ 14 ಮಂದಿ ಆರೋಪಿಗಳಿಗೆ ಸರಿಯಾಗಿಯೇ ಬುದ್ದಿ ಕಲಿಸಿರುವ ಖಾಕಿ ಎಲ್ಲರ ಮೇಲೆ ರೌಡಿಶೀಟ್ ತೆರೆಯಲಾಗಿದೆ. ಏಳು ಬೈಕ್‌ಗಳಲ್ಲಿ ಮಾರಕಾಸ್ತ್ರ ಹಿಡಿದು ವ್ಹೀಲಿಂಗ್ ಮಾಡುತ್ತಾ ಪುಂಡಾಟ ಮೆರೆದಿದ್ದ ನಯೀಮ್ ಪಾಷಾ, ಅರಫತ್, ಸಾಹೀಲ್, ಅದ್ನಾನ್, ನಂಜಾಮ್ಮದ್, ಆಸೀಫ್, ಸಮೀರ್, ಜುಬೇರ್, ರಿಹಾನ್, ಹುಸೇನ್, ಜುನೇದ್, ಅಯಾನ್, ಆಫ್ತಾಪ್ ಸೇರಿದಂತೆ 14 ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ.

    ಎಫ್‌ಐಆರ್ ದಾಖಲಾಗುತ್ತಿದ್ದಂತೆ 14 ಮಂದಿ ಪುಂಡರ ಗ್ಯಾಂಗ್ ಬಂಧಿಸಿದ್ದ ಖಾಕಿ ಎಲ್ಲರ ವಿರುದ್ಧವೂ ರೌಡಿಶೀಟ್ ತೆರೆದಿದ್ದಾರೆ. ಮಾರಕಾಸ್ತ್ರ ಹಿಡಿದು ರಸ್ತೆಯಲ್ಲಿ ಪುಂಡಾಟಿಕೆ ಮೆರೆದ ಹಿನ್ನೆಲೆ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟ್ ಓಪನ್ ಮಾಡಲಾಗಿದೆ. ಬೈಕ್‌ಗಳಲ್ಲಿ ವ್ಹೀಲಿಂಗ್ ಮಾಡುತ್ತಾ ಸ್ಟಂಟ್ ಮಾಡಿ ಬೆಂಗಳೂರು ಕಾನೂನು ಸುವ್ಯವಸ್ಥೆ ಬಗ್ಗೆ ಸವಾಲೆಸೆದಿದ್ದರು. ಆರೋಪಿಗಳ ಪೂರ್ವಪರ ಕಲೆ ಹಾಕಿ ರೌಡಿಶೀಟ್ ಓಪನ್ ಮಾಡಲಾಗಿದೆ. ಅಲ್ಲದೇ, ಆರೋಪಿಗಳ ಪೋಷಕರನ್ನ ಕರೆಸಿ ವಾರ್ನಿಂಗ್ ನೀಡಿ ಮುಚ್ಚಳಿಕೆ ಬರೆಸಿ ಕಳಿಸಲಾಗಿದೆ.

  • ಕಲಬುರಗಿಯಲ್ಲಿ ತಲ್ವಾರ್ ಪಾಲಿಟಿಕ್ಸ್ ಜೋರು – ಪ್ರಿಯಾಂಕ್ ಖರ್ಗೆ ತಲ್ವಾರ್ ಹಿಡಿದ ಫೋಟೊ ರಿಲೀಸ್

    ಕಲಬುರಗಿಯಲ್ಲಿ ತಲ್ವಾರ್ ಪಾಲಿಟಿಕ್ಸ್ ಜೋರು – ಪ್ರಿಯಾಂಕ್ ಖರ್ಗೆ ತಲ್ವಾರ್ ಹಿಡಿದ ಫೋಟೊ ರಿಲೀಸ್

    – ಕಾಂಗ್ರೆಸ್ ಸಚಿವರಿಗೆ ಬಿಜೆಪಿ ಮಾಜಿ ಶಾಸಕ ತಿರುಗೇಟು

    ಕಲಬುರಗಿ: ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತಲ್ವಾರ್ (Talwar Fight) ಪಾಲಿಟಿಕ್ಸ್ ಜೋರಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಲ್ವಾರ್ ಹಿಡಿದಿರುವ ಫೋಟೊ ಹಂಚಿಕೊಂಡು ಬಿಜೆಪಿ ಮಾಜಿ ಶಾಸಕ ಟಾಂಗ್ ಕೊಟ್ಟಿದ್ದಾರೆ.

    ನಿನ್ನೆ ಬಿಜೆಪಿ ಕಲಬುರಗಿಯ ಸೇಡಂ ಮಾಜಿ ಶಾಸಕರ ಸಹೋದರ ಕಾರ್ಯಕರ್ತನ ಹುಟ್ಟುಹಬ್ಬದಲ್ಲಿ ತಲ್ವಾರ್ ಪ್ರದರ್ಶನ ಬಗ್ಗೆ ಸಚಿವ್ ಪ್ರಿಯಾಂಕ್ ಖರ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದೀಗ ಇದಕ್ಕೆ ಕೌಂಟರ್ ಎಂಬಂತೆ ಸೇಡಂ ಮಾಜಿ ಶಾಸಕ ರಾಜಕುಮಾರ್ ತೇಲ್ಕೂರ್, ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಶಾಸಕ ಡಾ.ಅಜಯ್ ಸಿಂಗ್ ತಲ್ವಾರ್ ಹಿಡಿದ ಫೋಟೊ ಬಿಡುಗಡೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ದೇಶದಲ್ಲೇ 3ನೇ ಶ್ರೀಮಂತ ಸಿಎಂ – ನಂಬರ್‌ ಒನ್‌ ಯಾರು?

    ‘ಹೇಳುವುದು ಆಚಾರ, ತಿನ್ನುವುದು ಬದನೆಕಾಯಿ. ಇವರು ಏನು ಮಾಡಿದ್ರು ನಡೆಯುತ್ತೆ. ಬೇರೆಯವರು ಮಾಡಿದ್ರೆ ಮಾತ್ರ ಸಂವಿಧಾನ, ಕಾನೂನು ಬೊಗಳೆ ಬಿಡೋದು’ ಅಂತಾ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಾಮಾಜಿಕ ಜಾಲಾತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದ ಪ್ರಿಯಾಂಕ್ ಖರ್ಗೆ ಅವರು, ಬಿಜೆಪಿಯ ಮಾಜಿ ಶಾಸಕ ರಾಜ್‌ಕುಮಾರ್ ಪಾಟೀಲ್ ತೇಲ್ಕೂರ್ ಅವರ ಸಹೋದರ ಜಿ.ಬಿ.ಪಾಟೀಲ್ ತಲ್ವಾರ್‌ನಿಂದ ಕೇಕ್ ಕತ್ತರಿಸಿ ವಿಜೃಂಭಣೆ ನಡೆಸಿದ್ದಾರೆ. ಇದು ‘ಕಲಬುರಗಿ ರಿಪಬ್ಲಿಕ್’ ಮಾಡುವ ಪ್ರಯತ್ನವೇ? ಬಿಜೆಪಿಗರ ಪ್ರಕಾರ ಇದು ಗೂಂಡಾಗಿರಿಯ ವ್ಯಾಪ್ತಿಗೆ ಬರುವುದಿಲ್ಲವೇ? ಕಲಬುರಗಿ ರಿಪಬ್ಲಿಕ್ ಎನ್ನುತ್ತಿದ್ದ ಬೆಂಗಳೂರಿನ ಬಿಜೆಪಿ ನಾಯಕರು ತಮ್ಮದೇ ಪಕ್ಷದವರ ಈ ಕುಕೃತ್ಯಕ್ಕೆ ಯಾವ ಸಮಜಾಯಿಷಿ ನೀಡುತ್ತಾರೆ? ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿತ್ರವನ್ನು ಕಾಲಿನ ಸಮದಲ್ಲಿಟ್ಟು ಅಂಬೇಡ್ಕರ್ ವಿರೋಧಿ ಅಮಿತ್ ಶಾ ಅವರನ್ನು ಮೆಚ್ಚಿಸುವ ಪ್ರಯತ್ನವೇ? ಇದನ್ನೂ ಓದಿ: ಪಿಎಂ ಮೋದಿ ಪ್ರಧಾನ ಕಾರ್ಯದರ್ಶಿಯ ಅಳಿಯ, ಮಗಳ ಸೋಗಿನಲ್ಲಿ ವಂಚನೆ – ಓಡಿಶಾ ದಂಪತಿ ಅರೆಸ್ಟ್

    ಡಾ. ಅಂಬೇಡ್ಕರ್ ಅವರ ಫೋಟೋ ಕಾಲ ಕೆಳಗಿಟ್ಟುಕೊಂಡು ತಲ್ವಾರ್ ಹಿಡಿದು ಕೇಕೆ ಹಾಕುತ್ತಿರುವ ಬಿಜೆಪಿಗರು ಗೂಂಡಾಗಿರಿ ಪ್ರದರ್ಶಿಸಿರುವುದಲ್ಲದೆ ಬಾಬಾ ಸಾಹೇಬರ ಘನತೆಗೆ ಚ್ಯುತಿ ತಂದಿದ್ದಾರೆ. ಈ ಕೃತ್ಯಕ್ಕೆ ಬಿಜೆಪಿಯವರು ಸಮರ್ಥನೆ ಮಾಡಿಕೊಳ್ಳುತ್ತಾರಾ ಅಥವಾ ಇಂತಹ ಘೋರ ಅಪರಾಧ ಮಾಡಿದವರ ವಿರುದ್ಧ ಕ್ರಮ ಜರುಗಿಸುತ್ತಾರಾ? ಇದಕ್ಕಾಗಿ ಒಂದು ಸತ್ಯ ಶೋಧನ ಸಮಿತಿ ರಚಿಸಿಕೊಂಡು, ನಕಲಿ ಅಂಬೇಡ್ಕರ್ ವಾದಿಗಳಾದ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕರ ಜೊತೆಗೆ ಯಾವಾಗ ಕಲಬುರ್ಗಿಗೆ ಬರುತ್ತೀರಿ ಬಿ.ವೈ.ವಿಜಯೇಂದ್ರ ಅವರೇ ಎಂದು ಟೀಕಿಸಿದ್ದರು.

  • ಸೆನ್ಸಾರ್ ಪಾಸ್: ಧರ್ಮ ಕೈಯಲ್ಲಿ ತಲ್ವಾರ್, ರೌಡಿ ಕಲ್ಕಿಯಾದ ಜೆಕೆ

    ಸೆನ್ಸಾರ್ ಪಾಸ್: ಧರ್ಮ ಕೈಯಲ್ಲಿ ತಲ್ವಾರ್, ರೌಡಿ ಕಲ್ಕಿಯಾದ ಜೆಕೆ

    ರ್ಮ ಕೀರ್ತಿರಾಜ್ (Dharma Keerthiraj) ಹಾಗೂ ಅದಿತಿ ಅಭಿನಯದ ‘ತಲ್ವಾರ್’ (Talwar) ಚಿತ್ರ ವೀಕ್ಷಿಸಿದ ಸೆನ್ಸಾರ್ (Censor) ಮಂಡಳಿಯು ಯಾವುದೇ ಕಟ್ಸ್ ಮತ್ತು ಮ್ಯೂಟ್ಸ್ ಇಲ್ಲದೆ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ. ಇದೊಂದು ವಿಭಿನ್ನ ರೌಡಿಸಂ ಕಥಾಹಂದರ ಹೊಂದಿರುವ ಸಿನಿಮಾಗಿದ್ದು,  ಈ ಚಿತ್ರದಲ್ಲಿ  ಕ್ಯಾಟ್ ಬರೀಸ್ ಎಂದೇ ಕರೆಸಿಕೊಳ್ಳುವ   ಧರ್ಮ ಕೀರ್ತಿರಾಜ್ ಖಳನಟನ  ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಧರ್ಮ ಕೀರ್ತಿರಾಜ್ ಅವರಿಗೂ ಈ ಸಿನಿಮಾ ಹೊಸ ಇಮೇಜ್ ಸಿಗುತ್ತದೆ ಎಂಬ ಭರವಸೆ ಇದೆ.

    ಕಥೆ, ಚಿತ್ರಕಥೆ  ಸಂಭಾಷಣೆ ಬರೆದು ರಾಘವ ಮುರಳಿ (Raghava Murali) ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ಮುಮ್ತಾಜ್ ಚಿತ್ರ ನಿರ್ದೇಶಿಸಿದ್ದ ರಾಘವ ಮುರಳಿ ಮತ್ತು ಧರ್ಮ ಕೀರ್ತಿರಾಜ್ ಕಾಂಬಿನೆಷನ್ ನ ಎರಡನೇ ಸಿನಿಮಾ ಇದು. ಈ ಚಿತ್ರದಲ್ಲಿ ಮಜಾಭಾರತ ಖ್ಯಾತಿಯ ಮಿನಿ ದರ್ಶನ್ ಎಂದೇ ಕರೆಸಿಕೊಳ್ಳುವ ಅವಿನಾಶ್ ಕೂಡ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಪಡೆಯುತ್ತಿರುವ ಅವಿನಾಶ್, ಮುಖ್ಯ ಪಾತ್ರ ನಿರ್ವಹಿಸಿದ್ದಾರೆ.

    ಈ ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ ವಿಶೇಷ ಪಾತ್ರದಲ್ಲಿ ಜಯರಾಮ್ ಕಾರ್ತಿಕ್ (Jayaram Karthik) (JK) ಕಲ್ಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರು ಮಂಗಳೂರಿನ ರೌಡಿ ಕಲ್ಕಿ ಎಂಬ ಪಾತ್ರ ನಿರ್ವಹಿಸುತ್ತಿರುವುದು ವಿಶೇಷತೆಗಳಲ್ಲೊಂದು.

    ಈ ಚಿತ್ರ ಟಚ್ ಸ್ಟೋನ್ ಪಿಕ್ಚರ್ ಬ್ಯಾನರ್ ನಲ್ಲಿ ನಿರ್ಮಾಣವಾಗಿದ್ದು, ಸುರ್ನಳ್ಳಿ ಜಯರಾಮ್ ಅರ್ಪಿಸಿದ್ದಾರೆ. ಈ ಚಿತ್ರಕ್ಕೆ ಸುರೇಶ್ ಬೈರಸಂದ್ರ ಬಂಡವಾಳ ಹಾಕಿದ್ದಾರೆ, ಶ್ರೀನಗರ ಕಿಟ್ಟಿ ಅಭಿನಯದ ಬಹುಪರಾಕ್ ಚಿತ್ರಕ್ಕೆ  ಸಹ ನಿರ್ಮಾಪಕರಗಿದ್ದ ಇವರು ಈ ಚಿತ್ರವನ್ನು ತಮ್ಮ ಸ್ವಂತ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ. ಇವರು ಅನುಭವ ಇರುವ ಛಾಯಾಗ್ರಾಹಕರು ಆಗಿರುವುದರಿಂದ ಈ ಚಿತ್ರಕ್ಕೆ ತಾವೇ ಕ್ಯಾಮರಮಾನ್ ಆಗಿ ತಮ್ಮ ಕೈ ಚಳಕ ತೋರಿಸಿರುವುದು ಮತ್ತೊಂದು ವಿಶೇಷ.

    ಕೆ.ಬಿ. ಪ್ರವೀಣ್ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಈ ಚಿತ್ರದ ಹಾಡುಗಳ ಹಕ್ಕುಗಳನ್ನು ಈಗಾಗಲೇ ಸರಿಗಮ ಆಡಿಯೋ ಕಂಪನಿ ದೊಡ್ಡ ಮೊತ್ತಕ್ಕೆ ಖರೀದಿಸಿದೆ. ಈ ಚಿತ್ರದಲ್ಲಿ 5 ಭರ್ಜರಿ ಸಾಹಸ ದೃಶ್ಯಗಳಿವೆ.  ವಿನೋದ್, ಡ್ಯಾನಿ ಮತ್ತು ಕುಂಫು ಚಂದ್ರು ಅವರುಗಳು ಸಾಹಸ ನಿರ್ದೇಶನ ಮಾಡಿದ್ದಾರೆ.

    ಈ ಚಿತ್ರದ ಇನ್ನೊಂದು ವಿಶೇಷತೆ ಏನೆಂದರೆ, ‘ರೋಜ್ ಹಿಡಿದು ಲವ್ ಮಾಡಿದ್ರೆ ಪ್ರೀತಿಸಿದ ಇಬ್ಬರು ನೋವು ಪಡ್ತಾರೆ, ಆದರೆ ಲಾಂಗ್ ಇಡ್ಕೊಂಡು ಜೀವನ ಮಾಡಿದ್ರೆ ಆ ಲಾಂಗ್ ನಿಂದ ಅದೆಷ್ಟು ಫ್ಯಾಮಿಲಿ ಹಾಳಾಗ್ತವೆ ಎಂಬ ಸಂದೇಶವನ್ನು ಈ ಚಿತ್ರ ದಲ್ಲಿ ಹೇಳಲಾಗಿದೆ. ಇದು ರಕ್ತ ಹರಿಸುವ ರೌಡಿಸಂ ಚಿತ್ರವಾಗಿದ್ದರೂ, ಅಲ್ಲಲ್ಲಿ, ಎಮೋಷನ್ ಟಚ್ ಇದೆ ಎಂಬುದು ಚಿತ್ರ ತಂಡದ ಮಾತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇನ್ಮುಂದೆ ಪ್ರತಿಯೊಬ್ಬ ಹಿಂದೂ ತನ್ನ ಮನೆಯಲ್ಲಿ ತಲ್ವಾರ್ ಇಡ್ಬೇಕು- ಮುತಾಲಿಕ್ ಪ್ರಚೋದನಕಾರಿ ಹೇಳಿಕೆ

    ಇನ್ಮುಂದೆ ಪ್ರತಿಯೊಬ್ಬ ಹಿಂದೂ ತನ್ನ ಮನೆಯಲ್ಲಿ ತಲ್ವಾರ್ ಇಡ್ಬೇಕು- ಮುತಾಲಿಕ್ ಪ್ರಚೋದನಕಾರಿ ಹೇಳಿಕೆ

    ಕಲಬುರಗಿ: ಇನ್ಮುಂದೆ ಪ್ರತಿಯೊಬ್ಬ ಹಿಂದೂ (Hindu) ತನ್ನ ಮನೆಯಲ್ಲಿ ತಲ್ವಾರ್ ಇಡಬೇಕು. ಮನೆಯಲ್ಲಿ ಎಲ್ಲರಿಗೂ ಕಾಣೋ ರೀತಿಯಲ್ಲಿ ತಲ್ವಾರ್ (Talwar) ಇಡಬೇಕು ಎಂದು ಶ್ರೀರಾಮಸೇನೆ (SriRamsena) ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

    ಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣದಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದೂಗಳು ಮನೆ ಮನೆಯಲ್ಲಿ ತಲ್ವಾರ್ ಇಡಬೇಕು. ಮನೆಯಲ್ಲಿ ಕಾಣೋ ರೀತಿಯಲ್ಲಿ ಇಡಬೇಕು. ಮೊದಲು ನಾವೆಲ್ಲಾ ಆಯುಧಗಳ ಪೂಜೆ ಮಾಡ್ತಿದ್ದೀವಿ, ಪುಸ್ತಕ, ಪೆನ್ನು, ವಾಹನಗಳ ಪೂಜೆ ಮಾಡ್ತಿದ್ದೇವೆ. ಆದ್ರೆ ಇನ್ಮುಂದೆ ತಲ್ವಾರ್, ಚಾಕು, ಕೊಡಲಿ ಇಟ್ಟು ಪೂಜೆ ಮಾಡ್ಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಒಂಟಿ ಮನೆ ಕಳ್ಳತನ ಮಾಡಲು ಹೋಗಿದ್ದ ಗ್ಯಾಂಗ್‌ಗೆ ಶಾಕ್ – ಸಿನಿಮೀಯ ರೀತಿಯಲ್ಲಿ ರೋಚಕವಾಗಿ ಸೆರೆ

    ಪೊಲೀಸರು (Police) ಠಾಣೆಯಲ್ಲಿ ಬಂದೂಕಿಗೆ ಪೂಜೆ ಮಾಡ್ತಾರೆ ಹೊರತು ಎಫ್‌ಐಆರ್‌ಗೆ (FIR) ಪೂಜೆ ಮಾಡಲ್ಲ. ಮನೆಯಲ್ಲಿ ಒಂದು ತಲ್ವಾರ್ ಇಡೋದು ಅಪರಾಧವಲ್ಲ. ಪೊಲೀಸರು ಬಂದು ಕೇಸ್ ಹಾಕ್ತೀವಿ ಅಂತಾ ಹೆದರಿಸಿದ್ರೆ, ಮೊದಲು ಶಸ್ತ್ರ ಹಿಡಿದು ನಿಂತಿರೋ ಕಾಳಿ, ದುರ್ಗೆ, ಹನುಮಂತ, ರಾಮನ ಮೇಲೆ ಕೇಸ್ ಹಾಕಿ ಅಂತಾ ಹೇಳಿ ಎಂದಿದ್ದಾರೆ. ಇದನ್ನೂ ಓದಿ: ಒಂಟಿ ಮನೆ ಕಳ್ಳತನ ಮಾಡಲು ಹೋಗಿದ್ದ ಗ್ಯಾಂಗ್‌ಗೆ ಶಾಕ್ – ಸಿನಿಮೀಯ ರೀತಿಯಲ್ಲಿ ರೋಚಕವಾಗಿ ಸೆರೆ

    ತಲ್ವಾರ್ ಇಟ್ಟರೆ ಯಾರು ನಮ್ಮ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕೋದಿಲ್ಲ. ಹಾಗೆಂದು ತಲ್ವಾರ್ ಇಡೋದು ಯಾರನ್ನಾದರೂ ಹೊಡೆಯೋಕೆ ಮಾತ್ರವಲ್ಲ, ಧರ್ಮದ ರಕ್ಷಣೆ ಹಾಗೂ ದೇಶ ರಕ್ಷಣೆಗಾಗಿ ತಲ್ವಾರ್ ಇಡಬೇಕು ಎಂದು ಕರೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತಲ್ವಾರ್‌ನಲ್ಲಿ ಕೇಕ್ ಕಟ್ – ಮೂವರ ಬಂಧನ

    ತಲ್ವಾರ್‌ನಲ್ಲಿ ಕೇಕ್ ಕಟ್ – ಮೂವರ ಬಂಧನ

    ಉಡುಪಿ: ಹುಟ್ಟುಹಬ್ಬಕ್ಕೆ ತಲ್ವಾರ್‌ನಲ್ಲಿ ಕೇಕ್ ಕಟ್ ಮಾಡಿದ ಹಿನ್ನೆಲೆ ಮೂವರು ಆರೋಪಿಗಳನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ.

    ತಲವಾರಿನಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಹಿನ್ನೆಲೆ ಏಳು ಮಂದಿ ಯುವಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಹಿನ್ನೆಲೆ  ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳನ್ನು ಜೀತೇಂದ್ರ ಶೆಟ್ಟಿ, ಗಣೇಶ್ ಪೂಜಾರಿ ಮತ್ತು ಶರತ್ ಶೆಟ್ಟಿ ಎಂದು ಗುರುತಿಸಲಾಗಿದೆ. ಆದರೆ ತಲವಾರ್ ಹಿಡಿದ ನಿರಂಜನ್ ಶೆಟ್ಟಿಗಾರ್ ಪರಾರಿಯಾಗಿದ್ದಾನೆ. ಪ್ರಸ್ತುತ ಪೊಲೀಸರು ತನುಜ್, ಸೂರಜ್ ಹಾಗೂ ಅನಿಶ್ ಬಂಧನಕ್ಕೆ ಬಲೆಬೀಸಿದ್ದಾರೆ. ಇದನ್ನೂ ಓದಿ: ದೇವಸ್ಥಾನದಲ್ಲಿ ಮದುವೆಯಾಗಲು ಬಿಡಲ್ಲ – ಗುಜರಾತ್ ಯುವತಿ ವಿರುದ್ಧ ಸಿಡಿದ ಬಿಜೆಪಿ ನಾಯಕಿ 

    ಕಳೆದ ಮೇ ತಿಂಗಳ 30 ರಂದು ಪಡುಬಿದ್ರಿಯ ಜೀತೇಂದ್ರ ಶೆಟ್ಟಿ ಮನೆಯಲ್ಲಿ ಬರ್ತಡೇ ಆಚರಿಸಲಾಗಿತ್ತು. ಈ ವೀಡಿಯೋ ತುಣುಕನ್ನು ಯುವಕರೇ ಸೋಶಿಯಲ್ ಮೀಡಿಯಾದಲ್ಲಿ ಹರಿಯ ಬಿಟ್ಟಿದ್ದರು. ವೀಡಿಯೋ ವೈರಲ್ ಆಗುತ್ತಿದ್ದಂತೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಉಡುಪಿ ಎಸ್‍ಪಿ ವಿಷ್ಣುವರ್ಧನ್ ಅವರಿಗೆ ಉನ್ನತ ಅಧಿಕಾರಿಗಳು ಸೂಚಿಸಿದ್ದರು.

  • ಶ್ವಾನವನ್ನು ವಾಕಿಂಗ್ ಕರೆದುಕೊಂಡು ಹೋಗೋವಾಗ ತಲ್ವಾರ್ ಹಿಡ್ಕೊಂಡು ಹೋದ ಯುವಕ!

    ಶ್ವಾನವನ್ನು ವಾಕಿಂಗ್ ಕರೆದುಕೊಂಡು ಹೋಗೋವಾಗ ತಲ್ವಾರ್ ಹಿಡ್ಕೊಂಡು ಹೋದ ಯುವಕ!

    ಬೆಂಗಳೂರು: ಶ್ವಾನವನ್ನು ವಾಕಿಂಗ್ ಕರೆದುಕೊಂಡು ಹೋಗುವಾಗ ಯುವಕನೊಬ್ಬ ತಲ್ವಾರ್ ಹಿಡಿದುಕೊಂಡು ಹೋದ ಘಟನೆ ಬೆಳಕಿಗೆ ಬಂದಿದೆ.

    ಬೆಂಗಳೂರಿನ ಚಂದಾಪುರದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ರಸ್ತೆಯಲ್ಲಿ ಬೀದಿನಾಯಿಗಳು ಅಟ್ಯಾಕ್ ಮಾಡುವ ಭಯದಿಂದ ಯುವಕ ತಲ್ವಾರ್ ಹಿಡಿದುಕೊಂಡು ಹೋಗಿದ್ದಾನೆ ಎಂಬುದಾಗಿ ತಿಳಿದುಬಂದಿದೆ.

    ಯುವಕ ಬೀದಿನಾಯಿಗಳ ಮೇಲೆ ತಲ್ವಾರ್ ನಿಂದ ಹಾನಿ ಮಾಡಿಲ್ಲ. ಆದರೂ ನಾಯಿಗಳನ್ನು ಹೊಡೆಯೋಕೆ ಈ ರೀತಿ ತಲ್ವಾರ್ ಹಿಡಿದುಕೊಂಡು ಹೋಗೋದು ಸರಿಯಲ್ಲ ಅಂತಾ ಪ್ರಾಣಿಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮತ್ತೆ ಗಲಭೆಕೋರರ ಪರ ನಿಂತ ಜಮೀರ್- ಕಲ್ಲು ಹೊಡೆದವರ ಕುಟುಂಬಕ್ಕೆ 5 ಸಾವಿರ, ಫುಡ್‍ಕಿಟ್

  • ತಲ್ವಾರ್‌ನಿಂದ ಕೇಕ್ ಕತ್ತರಿಸಿ ಮಾಜಿ ಸಚಿವರ ಆಪ್ತನ ದರ್ಬಾರ್

    ತಲ್ವಾರ್‌ನಿಂದ ಕೇಕ್ ಕತ್ತರಿಸಿ ಮಾಜಿ ಸಚಿವರ ಆಪ್ತನ ದರ್ಬಾರ್

    ಬೆಂಗಳೂರು: ಮುಸಲ್ಮಾನರ ಪವಿತ್ರ ಈದ್ ಮಿಲಾದ್ ಹಬ್ಬದ ದಿನ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತನೊಬ್ಬ ಸಾರ್ವಜನಿಕ ಸ್ಥಳದಲ್ಲಿ ತಲ್ವಾರ್ ಮೂಲಕ ಕೇಕ್ ಕತ್ತರಿಸಿ ದರ್ಪ ಮೆರೆದಿದ್ದಾನೆ.

    ಭಾನುವಾರ ಮುಸ್ಲಿಮರ ಪವಿತ್ರ ಈದ್ ಮಿಲಾದ್ ಹಬ್ಬವಿತ್ತು, ಜೊತೆಗೆ ಟಿಪ್ಪು ಜಯಂತಿಯನ್ನು ಕೂಡ ಮುಸಲ್ಮಾನರು ಅದ್ಧೂರಿ ಮೆರವಣಿಗೆ ಮೂಲಕ ಆಚರಿಸಿದರು. ಹಾಗೆಯೇ ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯಬಾರದು ಎಂದು ನಗರದಾದ್ಯಂತ ಬಿಗಿ ಪೋಲಿಸ್ ಬಂದೋಬಸ್ತ್ ಒದಗಿಸಲಾಗಿತ್ತು. ಆದರೆ ಈ ನಡುವೆ ಜಮೀರ್ ಅವರ ಆಪ್ತ ವಾಸಿಂ ಬೆಂಬಲಿಗರೊಂದಿಗೆ ಸೇರಿ ತಲ್ವಾರ್‌ನಿಂದ ಕೇಕ್ ಕತ್ತರಿಸಿದ್ದಾನೆ. ಇದನ್ನೂ ಓದಿ:ತಲ್ವಾರ್ ಹಿಡಿದು ಕೇಕ್ ಕಟ್ ಮಾಡಿ ಮೆರೆದವನನ್ನ ಜೈಲಿಗಟ್ಟಿದ್ರು

    ಗೋರಿ ಪಾಳ್ಯದ ಮುಖ್ಯರಸ್ತೆಯಲ್ಲಿ ವಾಸೀಂ ತಲ್ವಾರ್‌ನಿಂದ ಕೇಕ್ ಕತ್ತರಿಸಿದ್ದಲ್ಲದೇ ತನ್ನ ಶೌರ್ಯ ಜನರಿಗೆಲ್ಲ ತಿಳಿಯಲಿ ಎಂದು ತನ್ನ ವಾಟ್ಸಾಪ್ ಸ್ಟೇಟಸ್‍ಗೆ ಫೋಟೋ ಹಾಕಿಕೊಂಡು ಬಿಲ್ಡಪ್ ಕೊಟ್ಟಿದ್ದಾನೆ. ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರವನ್ನ ಬಳಸೋದು ಕಾನೂನು ರೀತಿಯಲ್ಲಿ ಅಪರಾಧ. ಇಷ್ಟೆಲ್ಲಾ ಆದರೂ ಪೊಲೀಸರು ಮಾತ್ರ ಆತನ ವಿರುದ್ಧ ಯಾವ ಕ್ರಮ ಕೈಗೊಂಡಿಲ್ಲ.

  • ತಲ್ವಾರ್ ಹಿಡಿದು ಗ್ರಾ.ಪಂ ಸದಸ್ಯನ ತಮ್ಮನಿಂದ ಬೆದರಿಕೆ

    ತಲ್ವಾರ್ ಹಿಡಿದು ಗ್ರಾ.ಪಂ ಸದಸ್ಯನ ತಮ್ಮನಿಂದ ಬೆದರಿಕೆ

    ಕೋಲಾರ: ಗುತ್ತಿಗೆ ವಿಚಾರದಲ್ಲಿ ಗಲಾಟೆಯಾದ ಕಾರಣಕ್ಕೆ ತಲ್ವಾರ್ ಹಿಡಿದು ಯುವಕನೊಬ್ಬ ಗ್ರಾಮದಲ್ಲಿ ಓಡಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

    ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಸಕ್ಕನಹಳ್ಳಿ ಗ್ರಾಮದಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಗ್ರಾಮ ಪಂಚಾಯ್ತಿ ಸದಸ್ಯನೊಬ್ಬನ ತಮ್ಮ ತಲ್ವಾರ್ ಹಿಡಿದು ಗ್ರಾಮಸ್ಥರಿಗೆ ಬೆದರಿಕೆ ಹಾಕಿದ್ದಾನೆ. ಸಕ್ಕನಹಳ್ಳಿ ಗ್ರಾಮದ ಸಂತೋಷ್ ರೆಡ್ಡಿ ಲಾಂಗ್ ಹಿಡಿದು ಓಡಾಡಿ ಕೊಲೆ ಬೆದರಿಕೆ ಹಾಕಿದ್ದಾನೆ.

    ಸಂತೋಷ್ ರೆಡ್ಡಿ, ಕುಪೇಂದ್ರ ಎಂಬವರೊಂದಿಗೆ ಕಾಮಗಾರಿ ಟೆಂಡರ್ ವಿಚಾರವಾಗಿ ಜಗಳವಾಡಿ ಗಲಾಟೆ ಮಾಡಿಕೊಂಡಿದ್ದಾನೆ. ಲಾಂಗ್ ಹಿಡಿದು ಗ್ರಾಮದ ರಸ್ತೆಯಲ್ಲಿ ಓಡಾಡಿ ಬೆದರಿಕೆ ಹಾಕಿರುವ ವಿಡಿಯೋ ರೆಕಾರ್ಡ್ ಮಾಡಿರುವ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.

    ಬಂಗಾರಪೇಟೆಯ ಮಾಗೊಂದಿ ಪಂಚಾಯ್ತಿ ಸದಸ್ಯ ಸೋಮಶೇಖರ ರೆಡ್ಡಿ ಅವರ ಸಹೋದರ ಸಂತೋಷ್ ರೆಡ್ಡಿ ತಲ್ವಾರ್ ಹಿಡಿದು ಗ್ರಾಮದಲ್ಲಿ ಓಡಾಡಿದ್ದು, ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ತಲ್ವಾರ್ ಹಿಡಿದು ಕೇಕ್ ಕತ್ತರಿಸಿದ ಬಿಜೆಪಿ ಮುಖಂಡ

    ತಲ್ವಾರ್ ಹಿಡಿದು ಕೇಕ್ ಕತ್ತರಿಸಿದ ಬಿಜೆಪಿ ಮುಖಂಡ

    ಕಲಬುರಗಿ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಪಕ್ಷದ ಕೆಲವರು ಬಾಲ ಬಿಚ್ಚಲು ಆರಂಭಿಸಿದ್ದು, ಬಿಜೆಪಿ ಮುಖಂಡ ಹಾಗೂ ಶ್ರೀರಾಮ ಸೇನೆಯ ತಾಲೂಕು ಅಧ್ಯಕ್ಷ ತನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ತಲ್ವಾರಿನಿಂದ ಕೇಕ್ ಕತ್ತರಿಸಿ ವಿವಾದ ಸೃಷ್ಟಿಸಿದ್ದಾರೆ.

    ಈ ಘಟನೆ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ನಡೆದಿದ್ದು, ಎರಡು ದಿನ ಹಿಂದೆ ಬಿಜೆಪಿ ಮುಖಂಡ ಶರಣು ಕೋಳಕುರ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವೇಳೆ ಕಾರ್ಯಕರ್ತರ ಜೊತೆ ತಲ್ವಾರಿನಿಂದ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.

    ಹುಟ್ಟುಹಬ್ಬಕ್ಕೆ ಆಗಮಿಸಿದ ಕಾರ್ಯಕರ್ತರು ಸಹ ತಲ್ವಾರ್ ಹಿಡಿದು ಫೋಟೋಗೇ ಪೋಸ್ ಕೊಟ್ಟಿದ್ದು, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

    ಈ ಹಿಂದೆ ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರು ತಲ್ವಾರಿನಿಂದ ಕೇಕ್ ಕತ್ತರಿಸಿ ವಿವಾದ ಸೃಷ್ಟಿಸಿದ್ದರು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗ್ರಾಮ ಇಸ್ಲಾಂಪುರದ ಅಮೀರಾ ದೇಸಾಯಿ ಎಂಬುವರು ತಲ್ವಾರ್ ನಿಂದ ಕೇಕ್ ಕತ್ತರಿಸಿ ಸುದ್ದಿಯಾಗಿದ್ದರು. ಈ ಕುರಿತು ಯಮಕನಮರಡಿ ಫೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

  • ಯುವಕನ ಮೇಲೆ ದುಷ್ಕರ್ಮಿಗಳಿಂದ ತಲ್ವಾರ್ ದಾಳಿ

    ಯುವಕನ ಮೇಲೆ ದುಷ್ಕರ್ಮಿಗಳಿಂದ ತಲ್ವಾರ್ ದಾಳಿ

    ಉಡುಪಿ: ಯುವಕನ ಮೇಲೆ ನಾಲ್ವರು ದುಷ್ಕರ್ಮಿಗಳು ತಲ್ವಾರ್ ನಿಂದ ದಾಳಿ ಮಾಡಿದ ಘಟನೆ ಉಡುಪಿಯ ಮಲ್ಪೆ ಬಂದರಿನಲ್ಲಿ ನಡೆದಿದೆ.

    ರಿಯಾಝ್ (34) ದಾಳಿಗೊಳಗಾದ ಯುವಕ. ರಿಯಾಝ್ ಫರಂಗಿಪೇಟೆಯ ಹಂಝಾ ಎಂಬವರ ಮಗನಾಗಿದ್ದು, ಮೀನು ವ್ಯಾಪಾರ ಹಾಗೂ ಫರಂಗಿಪೇಟೆಯ ಗ್ರಾಮ ಪಂಚಾಯ್ತಿ ಸದಸ್ಯನಾಗಿದ್ದಾನೆ. ಇಂದು ಬೆಳಗ್ಗೆ ನಾಲ್ವರು ದುಷ್ಕರ್ಮಿಗಳು ರಿಯಾಝ್ ಮೇಲೆ ತಲ್ವಾರ್ ನಿಂದ ದಾಳಿ ನಡೆಸಿದ್ದಾರೆ.

    ರಿಯಾಝ್ ಮೀನು ಖರೀದಿಸಿ ಮಾರಾಟ ಮಾಡಲು ಇಂದು ಮುಂಜಾನೆ 4:30ರ ವೇಳೆಗೆ ಇತರ ಮೂವರೊಂದಿಗೆ ಎಂದಿನಂತೆ ತನ್ನ ಪಿಕಪ್ ವಾಹನದಲ್ಲಿ ಮಲ್ಪೆ ಮೀನುಗಾರಿಕಾ ಬಂದರಿಗೆ ಮಲ್ಪೆ ಫಿಶಿಂಗ್ ಪೋರ್ಟ್‍ಗೆ ಆಗಮಿಸಿದ್ದರು. ಬಂದರಿನೊಳಗೆ ತಮ್ಮ ವಾಹನ ನಿಲ್ಲಿಸಿ, ಇತರ ಮೂವರು ಚಹಾ ಕುಡಿಯಲು ಇಳಿದು ಹೋಗಿದ್ದರು. ಆದರೆ ರಿಯಾಝ್ ಅದೇ ಪಿಕಪ್ ವಾಹನದಲ್ಲಿ ನಿದ್ರೆಗೆ ಜಾರಿದ್ದರು.

    ಇದೇ ಸಮಯದಲ್ಲಿ ಅವರ ವಾಹನವನ್ನು ಹಿಂಬಾಲಿಸಿಕೊಂಡು ಬಿಳಿ ಬಣ್ಣದ ಕಾರಿನಲ್ಲಿ ಬಂದಿದ್ದ ನಾಲ್ವರು ರಿಯಾಝ್ ಮೇಲೆ ತಲ್ವಾರ್ ದಾಳಿ ನಡೆಸಿದ್ದಾರೆ. ಈ ಸಮಯದಲ್ಲಿ ಇವರ ಕಿರುಚಾಟದ ಶಬ್ಧ ಕೇಳಿ ಇತರರು ಸಹಾಯಕ್ಕೆ ಧಾವಿಸಿದಾಗ, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ದಾಳಿಕೋರರು ಬಟ್ಟೆಯಿಂದ ತಮ್ಮ ಮುಖ ಮುಚ್ಚಿಕೊಂಡಿದ್ದರಿಂದ ಗುರುತು ಹಿಡಿಯಲಾಗಿರಲಿಲ್ಲ.

    ದಾಳಿಗೊಳಗಾದ ರಿಯಾಜ್ ರವರ ಕೈ ತೂಳು, ಕಾಲಿನ ಬೆರಳು, ತಲೆಯ ಹಿಂಭಾಗಕ್ಕೆ ಗಾಯವಾಗಿರುವುದಲ್ಲದೆ, ಕಿರು ಬೆರಳು ತುಂಡಾಗಿ ಬಿದ್ದಿದೆ. ತುಂಡಾದ ಬೆರಳನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಮರು ಜೋಡಣೆಯ ಕಾರ್ಯ ನಡೆಯುತ್ತಿದೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿರುವ ರಿಯಾಝ್ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಳಿಯ ರಭಸಕ್ಕೆ ವಾಹನದ ಒಳಗೆಲ್ಲಾ ರಕ್ತ ಚಿಮ್ಮಿದೆ.

    ಈ ಬಗ್ಗೆ ಮಲ್ಪೆ ಪೊಲೀಸರು ಪ್ರಕರಣ ದಾಖಲಿಕೊಂಡಿದ್ದಾರೆ. ದಾಳಿಕೋರರ ಪತ್ತೆಗಾಗಿ ಮಲ್ಪೆ ಮೀನುಗಾರಿಕಾ ಬಂದರು ಪ್ರದೇಶದಲ್ಲಿನ ಸಿಸಿಟಿವಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.